Tag: Judicial Inquiry

  • ನನ್ನ ವಿರುದ್ಧ ಸಂಚು: ನ್ಯಾಯಾಂಗ ತನಿಖೆಗೆ ಆಗ್ರಹಿಸಿದ ಸಿಟಿ ರವಿ

    ನನ್ನ ವಿರುದ್ಧ ಸಂಚು: ನ್ಯಾಯಾಂಗ ತನಿಖೆಗೆ ಆಗ್ರಹಿಸಿದ ಸಿಟಿ ರವಿ

    – ಪೊಲೀಸರಿಗೆ ನಿರಂತರ ಫೋನ್‌ ಬರುತ್ತಿತ್ತು
    – ಕರ್ತವ್ಯ ಲೋಪ ಎಸಗಿದ ಪೊಲೀಸರನ್ನು ಸಸ್ಪೆಂಡ್‌ ಮಾಡಿ

    ಬೆಂಗಳೂರು: ಪೊಲೀಸರಿಗೆ ಪದೇ ಪದೇ ಸೂಚನೆ ಬರುತ್ತಿತ್ತು. ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅಥವಾ ಡಿಕೆ ಶಿವಕುಮಾರ್‌ (DK Shivakumar) ಅಥವಾ ಯಾರು ನನ್ನ ವಿರುದ್ಧ ಸಂಚು ಮಾಡಿದ್ದಾರೆ ಎನ್ನುವುದರ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು (Judicial Inquiry) ಎಂದು ಸಿಟಿ ರವಿ ಆಗ್ರಹಿಸಿದ್ದಾರೆ.

    ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಾಕಿಟಾಕಿ ಮೂಲಕ ಸೂಚನೆ ಬಂದರೆ ಉಳಿದೆಲ್ಲವೂ ಫೋನ್‌ ಮೂಲಕ ಸೂಚನೆ ಬರುತ್ತಿತ್ತು. ಪೊಲೀಸರ ಬಳಿ ಎರಡು, ಮೂರು ಫೋನ್‌ಗಳಿದ್ದವು. ಹಿರಿಯ ಅಧಿಕಾರಿಗಳು ಅಥವಾ ಮಂತ್ರಿಯಿಂದ ನಿರಂತರ ಫೋನ್ ಬರುತ್ತಿತ್ತು ಎಂದು ಹೇಳಿದರು. ಇದನ್ನೂ ಓದಿ: ಆ ಬಣ ಈ ಬಣ ಎನ್ನದೇ ಒಗ್ಗಟ್ಟು ಪ್ರದರ್ಶಿಸಿದ ಬಿಜೆಪಿ ನಾಯಕರು

     

    ಪೊಲೀಸರ ವೈಯಕ್ತಿಕ, ಇಲಾಖೆ ಫೋನ್‌ಗಳ ಕಾಲ್ ರೆಕಾರ್ಡ್‌, ಜಿಪಿಎಸ್ ಟ್ರ‍್ಯಾಕ್ ಮಾಡಿ ತನಿಖೆ ಆಗಬೇಕು. ಪೊಲೀಸರು ಸರ್ ಸರ್ ಅಂತ ಮಾತನಾಡುತ್ತಿದ್ದರು. ಅವರ ಭಾವ ಭಂಗಿ ನೋಡಿದರೆ ಕರೆ ಮಾಡುತ್ತಿರುವ ವ್ಯಕ್ತಿ ಹಿರಿಯ ಅಧಿಕಾರಿ ಇದ್ದಿರಬಹುದು ಅಥವಾ ಮಂತ್ರಿಯೂ ಇರಬಹುದು. ನಾನು ಕ್ರಿಮಿನಲ್ ಅಲ್ಲ, ಯಾಕೆ ಹೀಗೆ ಮಾಡಿದ್ದಾರೆ ಎಂದು ಪ್ರಶ್ನಿಸಿದರು.  ಇದನ್ನೂ ಓದಿ: ಹತ್ಯೆ ಮಾಡಲೆಂದು ಕಬ್ಬಿನ ಗದ್ದೆಗೆ ಕರ್ಕೊಂಡು ಬಂದಿದ್ರು: ರಾತ್ರಿ ಏನೇನಾಯ್ತು ವಿವರಿಸಿದ ಸಿಟಿ ರವಿ

    ಸಿಟಿ ರವಿ ಬೇಡಿಕೆ ಏನು?
    ಪೊಲೀಸ್ ಅಧಿಕಾರಿಗಳ ಖಾಸಗಿ ಮತ್ತು ಕಚೇರಿ ಫೋನ್‌ಗಳ ಕಾಲ್ ರೆಕಾರ್ಡ್ ಜೊತೆ ಪೊಲೀಸರಿಗೆ ಪದೇ ಪದೇ ಯಾರಿಂದ ಸೂಚನೆ ಬರುತ್ತಿತ್ತು ಎನ್ನುವುದರ ಬಗ್ಗೆ ತನಿಖೆ ಆಗಬೇಕು.

    ನನ್ನ ಎಲ್ಲೆಲ್ಲಿ ಕರೆದುಕೊಂಡು ಹೋಗಿದ್ದಾರೆ ಅಂತ ಟವರ್ ಲೊಕೇಷನ್ ತನಿಖೆಯಾಗಬೇಕು. ಕರ್ತವ್ಯ ಲೋಪ ಎಸಗಿದ ಪೊಲೀಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಬೇಕು. ನನ್ನ ಮೇಲೆ ಹಲ್ಲೆ ಮಾಡಲೆತ್ನಿಸಿದ ಲಕ್ಷ್ಮಿ ಹೆಬ್ಬಾಳ್ಕರ್ ಪಿಎ ಮತ್ತಿತರರ ಬಂಧನ ಆಗಬೇಕು.

    ನನ್ನ ಫೋನ್ ಕದ್ದಾಲಿಕೆ ಮಾಡಲಾಗ್ತಿದೆ, ಇದರ ತನಿಖೆ ಆಗಬೇಕು. ಎಲ್ಲದರ ಬಗ್ಗೆ ನ್ಯಾಯಾಂಗ ತನಿಖೆಗೆ ಸರ್ಕಾರ ಆದೇಶಿಸಬೇಕು.

    ಈಗಲೂ ನನಗೆ ಜೀವ ಬೆದರಿಕೆ ಇದೆ. ಸರ್ಕಾರ ನನಗೆ ಸೂಕ್ತ ಭದ್ರತೆ ಕೊಡಬೇಕು. ಸದನದ ಒಳಗೆ ನನಗೆ ಬೆದರಿಕೆ ಹಾಕಿದ ಡಿಕೆ ಶಿವಕುಮಾರ್‌, ಚನ್ನರಾಜ್ ಹಟ್ಟಿಹೊಳಿ ಮತ್ತಿತರ ವಿಡಿಯೋ, ಆಡಿಯೋ ತನಿಖೆ ಆಗಲಿ.

    ನಾನು ಅಶ್ಲೀಲ ಪದ ಬಳಸಿದರೆ ಸಭಾಪತಿ ಯಾವುದೇ ಕ್ರಮ ಕೈಗೊಳ್ಳಲಿ. ನನ್ನ ಆಡಿಯೋವನ್ನು ಎಫ್‌ಎಸ್‌ಎಲ್‌ಗೆ ಕಳಿಸಿ ವರದಿ ಪಡೆಯಲಿ.