Tag: JSW

  • 1990ರಲ್ಲಿ ಖರೀದಿಸಿದ 1 ಲಕ್ಷ ರೂ. JSW ಷೇರುಗಳ ಮೌಲ್ಯ ಈಗ 80 ಕೋಟಿ – ತಂದೆಯಿಂದ ಕೋಟ್ಯಧಿಪತಿಯಾದ ಪುತ್ರ

    1990ರಲ್ಲಿ ಖರೀದಿಸಿದ 1 ಲಕ್ಷ ರೂ. JSW ಷೇರುಗಳ ಮೌಲ್ಯ ಈಗ 80 ಕೋಟಿ – ತಂದೆಯಿಂದ ಕೋಟ್ಯಧಿಪತಿಯಾದ ಪುತ್ರ

    ನವದೆಹಲಿ: ಅದೃಷ್ಟ ಯಾವಾಗ ಬೇಕಾದರೂ ಸಿಗಬಹುದು ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಸಿಕ್ಕಿದೆ. 30 ವರ್ಷದ ಹಿಂದೆ ಜಿಂದಾಲ್‌ ಸ್ಟೀಲ್‌ (JSW) ಕಂಪನಿಯ ಷೇರು (Share) ದಿಢೀರ್‌ ಪತ್ತೆಯಾಗಿ ಪುತ್ರರೊಬ್ಬರು ಈಗ 80 ಕೋಟಿ ರೂ. ಆಸ್ತಿಯ ಮಾಲೀಕನಾಗಿ ಹೊರಹೊಮ್ಮಿದ್ದಾರೆ.

    1990 ರಲ್ಲಿ ವ್ಯಕ್ತಿಯೊಬ್ಬರು 1 ಲಕ್ಷ ರೂ. ಮೌಲ್ಯದ ಜಿಂದಾಲ್‌ ಕಂಪನಿಯ ಷೇರುಗಳನ್ನು ಖರೀದಿಸಿದ್ದರು. ಷೇರುಗಳ ದಾಖಲೆ ಪತ್ರ ದಿಢೀರ್‌ ಅಗಿ ಪುತ್ರನಿಗೆ ಸಿಕ್ಕಿದೆ. ಈಗ ಈ ಷೇರುಗಳ ಮೌಲ್ಯವನ್ನು ಲೆಕ್ಕ ಹಾಕಿದಾಗ 80 ಕೋಟಿ ರೂ. ಆಗುತ್ತದೆ. ಇದನ್ನೂ ಓದಿ: ಹೆಂಡತಿ ಮಾತು ಕೇಳಿ ನನ್ನ ಮಗ ಹನಿಮೂನ್‌ಗೆ 10 ಲಕ್ಷ ಮೌಲ್ಯ‌ದ ಆಭರಣ ಹಾಕ್ಕೊಂಡು ಹೋಗಿದ್ದ: ಸೊಸೆಯ ಪ್ಲ್ಯಾನ್‌ ಬಗ್ಗೆ ಬಿಚ್ಚಿಟ್ಟ ಅತ್ತೆ

    ತಂದೆಯ ಷೇರು ಪತ್ರದ ದಾಖಲೆಗಳನ್ನು ಪುತ್ರ ರೆಡಿಟ್‌ನಲ್ಲಿ ಹಂಚಿಕೊಂಡಿದ್ದು ಈಗ ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈಗ ಆ ರೆಡಿಟ್‌ ಬಳಕೆದಾರನಿಗೆ ಜನರು ಅಭಿನಂದನೆ ವ್ಯಕ್ತಪಡಿಸುತ್ತಿದ್ದಾರೆ. ಷೇರುಗಳನ್ನು ಮಾರಾಟ ಮಾಡದೇ ದೀರ್ಘಾವಧಿಯವರೆಗೆ ಇಟ್ಟುಕೊಂಡರೆ ಯಾರೂ ಕೂಡ ಕೊಟ್ಯಾಧಿಪತಿಗಳಾಗಬಹುದು ಎಂದು ಕಮೆಂಟ್‌ ಮಾಡುತ್ತಿದ್ದಾರೆ.

    1983 ರಲ್ಲಿ ಜಿಂದಾಲ್‌ ಸ್ಟೀಲ್‌ ಕಂಪನಿ ಆರಂಭಗೊಂಡಿದ್ದು 1990 ರ ವೇಳೆಗೆ 1 ಷೇರಿನ ಮೌಲ್ಯ 20 ರೂ.ಗಿಂತಲೂ ಕಡಿಮೆ ಇತ್ತು. ಈಗ ಒಂದು ಷೇರಿನ ಮೌಲ್ಯ 1,006 ರೂ.ಗೆ ಏರಿಕೆಯಾಗಿದ್ದು 2.37ಲಕ್ಷ ಕೋಟಿ ರೂ. ಕಂಪನಿಯಾಗಿ ಹೊರಹೊಮ್ಮಿದೆ.

  • JSW ಗ್ರೂಪ್‍ನ ಅಧ್ಯಕ್ಷನ ಮೇಲೆ ಅತ್ಯಾಚಾರ ಆರೋಪ- ಸಜ್ಜನ್  ಜಿಂದಾಲ್ ಹೇಳಿದ್ದೇನು..?

    JSW ಗ್ರೂಪ್‍ನ ಅಧ್ಯಕ್ಷನ ಮೇಲೆ ಅತ್ಯಾಚಾರ ಆರೋಪ- ಸಜ್ಜನ್ ಜಿಂದಾಲ್ ಹೇಳಿದ್ದೇನು..?

    ಮುಂಬೈ: ಜೆಎಸ್‌ಡಬ್ಲ್ಯೂ ಗ್ರೂಪ್‌ನ ಅಧ್ಯಕ್ಷ (JSW Group MD) ಮತ್ತು ವ್ಯವಸ್ಥಾಪಕ ನಿರ್ದೇಶಕ ಸಜ್ಜನ್ ಜಿಂದಾಲ್ (Sajjan Jindal) ತಮ್ಮ ಮೇಲಿನ ಅತ್ಯಾಚಾರದ ಆರೋಪವನ್ನು ನಿರಾಕರಿಸಿದ್ದಾರೆ.

    ತಮ್ಮ ಆರೋಪದ ಸಂಬಂಧ ಪ್ರಕಟಣೆ ಹೊರಡಿಸಿರುವ ಜಿಂದಾಲ್‌, ತಮ್ಮ ತಮ್ಮ ಮೇಲಿನ ಆರೋಪಗಳು ಸುಳ್ಳು ಮತ್ತು ಆಧಾರರಹಿತವಾಗಿದೆ. ತನಿಖೆಗೆ ಸಂಪೂರ್ಣ ಸಹಕೃ ನೀಡಲು ಬದ್ಧನಾಗಿದ್ದೇನೆ. ಸದ್ಯ ತನಿಖೆ ಪ್ರಗತಿಯಲ್ಲಿರುವುದರಿಂದ ಈ ಹಂತದಲ್ಲಿ ಹೆಚ್ಚಿನ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ಕುಟುಂಬದ ಖಾಸಗಿತನವನ್ನು ಗೌರವಿಸಲು ನಾವು ವಿನಂತಿಸುತ್ತೇವೆ ಎಂದಿದ್ದಾರೆ.

    ಮಹಿಳೆಯ ದೂರಿನಲ್ಲೆ ಏನಿದೆ..?: 2022ರ ಜನವರಿ 24ರಂದು ಜಿಂದಾಲ್‌ನ ಬಿಕೆಸಿ ಆವರಣದಲ್ಲಿರುವ ಪೆಂಟ್‌ಹೌಸ್‌ನಲ್ಲಿ ಅತ್ಯಾಚಾರ ಘಟನೆ ನಡೆದಿದೆ ಎಂದು ಆರೋಪಿಸಿ 30 ವರ್ಷದ ಮುಂಬೈ ಮೂಲದ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ವೀರ್ ಸಾವರ್ಕರ್ ಎಂದರೆ ಆನೆ, ನಾಯಿ ನರಿ ಮಾತಿಗೆಲ್ಲ ಅದು ತಲೆಕೆಡಿಸಿಕೊಳ್ಳಲ್ಲ: ಕಾಂತೇಶ್

    ದೂರಿನಲ್ಲಿ, ಮೊದಲ ಬಾರಿಗೆ ಸಜ್ಜನ್ ಜಿಂದಾಲ್ ಅವರನ್ನು 2021ರ ಅಕ್ಟೋಬರ್ 8 ರಂದು ದುಬೈನಲ್ಲಿ ಭೇಟಿಯಾದರು. ಆಸ್ತಿ ಸಂಬಂಧಿತ ಮಾತುಕತೆಗಳನ್ನು ಮುಂದುವರಿಸುವ ಸಲುವಾಗಿ ಫೋನ್ ನಂಬರ್ ವಿನಿಮಯ ಮಾಡಿಕೊಂಡಿದ್ದರು. ಬಳಿಕ ಮದುವೆಯಾಗುವುದಾಗಿಯೂ ನಂಬಿಸಿ ನನ್ನೊಂದಿಗೆ ಸ್ನೇಹ ಬೆಳೆಸಿದ್ದಾರೆ ಎಂದು ತಿಳಿಸಿದ್ದಾರೆ.

    ಸಜ್ಜನ್‌ ಜಿಂದಾಲ್‌ ಮೇಲೆ IPC 376 (ಅತ್ಯಾಚಾರ), IPC 354 (ಮಹಿಳೆಯರ ಮೇಲೆ ದೌರ್ಜನ್ಯ ಅಥವಾ ಕ್ರಿಮಿನಲ್ ಬಲದಿಂದ ಆಕೆಯ ಮೇಲೆ ಬಲಾತ್ಕಾರ ಮಾಡುವ ಉದ್ದೇಶ), ಮತ್ತು IPC 503 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.‌‌

  • ಫ್ಯಾನ್ ಬಿದ್ದು ಜೆಎಸ್‍ಡಬ್ಲ್ಯು ಕಾರ್ಮಿಕ ಸಾವು

    ಫ್ಯಾನ್ ಬಿದ್ದು ಜೆಎಸ್‍ಡಬ್ಲ್ಯು ಕಾರ್ಮಿಕ ಸಾವು

    ಬಳ್ಳಾರಿ: ಫ್ಯಾನ್ ಬಿದ್ದು ಕಾರ್ಮಿಕನೊಬ್ಬ ಸಾವನ್ನಪ್ಪಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

    ಮೃತ ದುರ್ದೈವಿ ಕಾರ್ಮಿಕನನ್ನು ಜಿತೇಂದ್ರ ಸಿಂಗ್ ಎಂದು ಗುರುತಿಸಲಾಗಿದೆ. ಬಳ್ಳಾರಿ ಜಿಲ್ಲೆಯ ತೋರಣಗಲ್ಲಿನ ವಿದ್ಯಾನಗರದ ಜೆಎಸ್ ಡಬ್ಲ್ಯು ಸ್ಟೀಲ್ಸ್‍ನ ಉತ್ಪಾದನಾ ಘಟಕವೊಂದರಲ್ಲಿ ಈ ದುರ್ಘಟನೆ ಸಂಭವಿಸಿದೆ.

    ಸ್ಟೀಲ್ ಉತ್ಪಾದಕ ಘಟಕವೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವಾಗ ಘಟಕದ ಫ್ಯಾನ್ ಹಠಾತ್ ಕೆಳಗಡೆ ಬಿದ್ದಿದೆ. ಆದ್ದರಿಂದ ಅಕ್ಕಪಕ್ಕದಲ್ಲಿದ್ದ ಕಬ್ಬಿಣದ ಸರಳುಗಳು ಆತನಿಗೆ ಚುಚ್ಚಿಕೊಂಡಿವೆ. ಕಳೆದ ಎರಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಗಂಭೀರ ಗಾಯಗೊಂಡಿದ್ದ ಆತನನ್ನ ಜಿಂದಾಲ್ ಸಂಜೀವಿನಿ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ಸಾವನ್ನಪ್ಪಿದ್ದಾನೆಂದು ತಿಳಿದುಬಂದಿದೆ.

    ಈ ಕುರಿತು ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.