Tag: JP Nagara

  • ಶಾಸಕರಿಗೆ ತಾಳ್ಮೆ ಇಲ್ಲ, ಕಾರ್ಯಕ್ರಮ ಹಾಳು ಮಾಡಲು ಬಂದಿದ್ದಾರೆ: ಮುನಿರತ್ನ ವಿರುದ್ಧ ಡಿಕೆಶಿ ಕಿಡಿ

    ಶಾಸಕರಿಗೆ ತಾಳ್ಮೆ ಇಲ್ಲ, ಕಾರ್ಯಕ್ರಮ ಹಾಳು ಮಾಡಲು ಬಂದಿದ್ದಾರೆ: ಮುನಿರತ್ನ ವಿರುದ್ಧ ಡಿಕೆಶಿ ಕಿಡಿ

    ಬೆಂಗಳೂರು: ಸ್ಥಳೀಯ ಶಾಸಕರಿಗೆ ತಾಳ್ಮೆ ಇಲ್ಲ. ಕಾರ್ಯಕ್ರಮ ಹಾಳು ಮಾಡಲೆಂದೇ ಆಗಮಿಸಿದ್ದರು. ಇಂತವರನ್ನು ಗೆಲ್ಲಿಸಿದ್ದು ನಿಮ್ಮ ತಪ್ಪು. ಮುಂದೆಯಾದರೂ ಸರಿಪಡಿಸಿಕೊಳ್ಳಿ ಎಂದು ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಮುನಿರತ್ನ (Munirathna) ಅವರಿಗೆ ಟಾಂಗ್‌ ನೀಡಿದ್ದಾರೆ.

    ಮತ್ತಿಕೆರೆಯ ಜೆಪಿ ಪಾರ್ಕ್‌ನಲ್ಲಿ (JP Park) ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇದೇನು ಸರ್ಕಾರದ ಶಿಲಾನ್ಯಾಸ ಮಾಡುವ ಕಾರ್ಯಕ್ರಮ ಅಲ್ಲ. ಇದು ಜನರ ಸಮಸ್ಯೆ ಆಲಿಸುವ ಕಾರ್ಯಕ್ರಮ. ಎಲ್ಲರಿಗೆ ಏನು ಗೌರವ ಕೊಡಬೇಕು ಅದು ಕೊಟ್ಟಿದ್ದೇವೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ:  ಡಿಕೆಶಿ ಕಾರ್ಯಕ್ರಮದಲ್ಲಿ ಭಾರೀ ಹೈಡ್ರಾಮಾ – ಆಹ್ವಾನ ನೀಡದ್ದಕ್ಕೆ ಮುನಿರತ್ನ ಆಕ್ರೋಶ

    ಆರ್‌ಎಸ್‌ಎಸ್‌ (RSS) ಸಂಸ್ಥೆಗೆ ಅಗೌರವ ತರುವ ಕೆಲಸ ಮುನಿರತ್ನ ಮಾಡಿದ್ದಾರೆ. ಆರ್‌ಎಸ್‌ಎಸ್‌ಗೆ ಒಂದು ಇತಿಹಾಸ ಇದೆ ಅವರೇನು ಮಾಡಬೇಕು ಮಾಡುತ್ತಿದ್ದಾರೆ. ಅವರ ಹೆಸರನ್ನು ಕೆಡಿಸುವ ಕೆಲಸ ಇಲ್ಲಿ ನಡೆಯುತ್ತಿದೆ. ಜಿಬಿಎ ಸಭೆಗೆ ಬಂದಿಲ್ಲ. ಅಲ್ಲಿ ಬಂದು ಸಮಸ್ಯೆ ಹೇಳಿಲ್ಲ. ಇಲ್ಲಿ ಬಂದು ಈ ರೀತಿ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.

    ಬೆಂಗಳೂರು ನಾಗರೀಕರ ಜೊತೆ ನಡೆಯಬೇಕು ಎಂದು ಎಲ್ಲರಿಗೂ ಆಹ್ವಾನ ಕೊಟ್ಟಿದ್ದೇನೆ. ಬೆಳಗ್ಗೆಯಿಂದ ಎರಡು ತಾಸು ನಡೆದು ಸಮಸ್ಯೆ ಕೇಳಿದ್ದೇನೆ. ಎಲ್ಲರ ಮಾಹಿತಿ, ಫೋನ್ ನಂಬರ್ ತಗೊಂಡಿದ್ದೇನೆ ಅವರ ಸಮಸ್ಯೆ ಬಗೆಹರಿಸುತ್ತೇನೆ. ಅವರನ್ನು ಸಂಪರ್ಕ ಮಾಡುವ ಕೆಲಸ ಮಾಡುತ್ತೇನೆ. ಉಳಿದ ಜನರು 1533ಗೆ ಕರೆ ಮಾಡಿ ನಿಮ್ಮ ಸಮಸ್ಯೆ ಹೇಳಬಹುದು ಎಂದರು. ಇದನ್ನೂ ಓದಿ:  ರೌಡಿಗಳನ್ನು ಕರೆಸಿ ಹಲ್ಲೆ, ಪೊಲೀಸರಿಂದ ನಾನು ಬದುಕಿದ್ದೇನೆ: ಡಿಕೆಶಿ ವಿರುದ್ಧ ಮುನಿರತ್ನ ಆಕ್ರೋಶ

    ಗುತ್ತಿಗೆದಾರರ ಬಿಲ್ ಬಾಕಿ ಕ್ಲೀಯರ್‌ ಮಾಡಲು ಕಮಿಷನ್ ಕೇಳುತ್ತಿದ್ದಾರೆ ಎಂಬುದನ್ನು ಕೇಳಲ್ಪಟ್ಟೆ. ಜೆಪಿ ಪಾರ್ಕ್‌ನಲ್ಲೂ ಕೂಡ ಸಾಕಷ್ಟು ಕೆಲಸ ನಿಂತು ಹೋಗಿದೆ. ಶೌಚಾಲಯ, ಸ್ವಿಮ್ಮಿಂಗ್ ಪೂಲ್, ಟ್ರ‍್ಯಾಕ್ ಎಲ್ಲಾ ಸಮಸ್ಯೆ ಬಗೆಹರಿಯುತ್ತೆ. ಮಳೆ ನೀರು, ರಸ್ತೆ ಎಲ್ಲಾ ಸಮಸ್ಯೆಯನ್ನು ಬಗೆ ಹರಿಸುತ್ತೇನೆ. ಸಾರ್ವಜನಿಕರ ಧ್ವನಿ ಸರ್ಕಾರಕ್ಕೆ ಮುಟ್ಟಬೇಕು. ಅದಕ್ಕೆ ಸರ್ಕಾರ ಸ್ಪಂದಿಸಬೇಕು ಎಂದು ಹೇಳಿದರು.

  • ಆನೇಕಲ್ | ಅರೆಬೆಂದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ

    ಆನೇಕಲ್ | ಅರೆಬೆಂದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ

    ಆನೇಕಲ್: ಅರೆಬೆಂದ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಯುವಕನ ಶವ ಪತ್ತೆಯಾಗಿರುವ ಘಟನೆ ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಪೊಲೀಸ್ ಠಾಣೆ(Bannerghatta Police Station) ವ್ಯಾಪ್ತಿಯ ಶಿಲೀಂದ್ರ ದೊಡ್ಡಿ ಗ್ರಾಮದಲ್ಲಿ ನಡೆದಿದೆ.

    ಮೃತ ಯುವಕ ಬೆಂಗಳೂರಿನ ಜೆಪಿ ನಗರ(JP Nagara) ನಿವಾಸಿ ಮಧುಸೂದನ್(28) ಎಂದು ತಿಳಿದುಬಂದಿದೆ. ಇದನ್ನೂ ಓದಿ: ಫ್ಯಾನ್ಸ್‌ಗೆ ಗುಡ್ ನ್ಯೂಸ್- ಬರಲಿದೆ ವಿಜಯ್ ಸೇತುಪತಿ ನಟನೆಯ ‘ಮಹಾರಾಜ’ ಸೀಕ್ವೆಲ್

    ಮಧುಸೂದನ್ ಕ್ಯಾಬ್ ಡ್ರೈವರ್‌ ಆಗಿ ಕೆಲಸವನ್ನು ಮಾಡುತ್ತಿದ್ದರು. ಬುಧವಾರ ರಾತ್ರಿ ಸುಮಾರು 9 ಗಂಟೆಗೆ ಬೈಕ್‌ನಲ್ಲಿ ಮನೆಯಿಂದ ಹೊರಗೆ ಹೋಗಿದ್ದ ಮಧುಸೂದನ್ ವಾಪಾಸ್ ಮನೆಗೆ ಬಂದಿರಲಿಲ್ಲ. ಇಡೀ ರಾತ್ರಿ ಮನೆಯವರು ಮಧುಸೂದನ್‌ಗಾಗಿ ಹುಡುಕಾಟ ನಡೆಸಿದ್ದರು. ಇದನ್ನೂ ಓದಿ: ಪಾಕ್‌ ಮಿಸೈಲ್‌ಗಳಿಂದ ಭಾರತ ರಕ್ಷಿಸಿದ S-400 ‘ಸುದರ್ಶನ ಚಕ್ರ’- ಏನಿದರ ವಿಶೇಷತೆ?

    ಆದರೆ ಗುರುವಾರ ಬೆಳಗ್ಗೆ ಬನ್ನೇರುಘಟ್ಟ ಅರಣ್ಯ ವ್ಯಾಪ್ತಿಯ ಶಿಲೀಂದ್ರ ದೊಡ್ಡಿ ಸಮೀಪದ ನಿರ್ಜನ ಪ್ರದೇಶದಲ್ಲಿ ಮಧುಸೂದನ್ ಅವರ ಮೃತದೇಹವು ಅರೆಬರೆಯಾಗಿ ಸುಟ್ಟ ರೀತಿಯಲ್ಲಿ ಪತ್ತೆಯಾಗಿದೆ. ಇನ್ನು ಘಟನಾ ಸ್ಥಳದಲ್ಲಿ ಬೈಕ್ ಪತ್ತೆಯಾಗಿದ್ದು, ಬೈಕ್‌ನ ನಂಬರ್ ಆಧಾರದ ಮೇಲೆ ಮಧುಸೂದನ್ ಅವರ ಗುರುತು ಪತ್ತೆಯಾಗಿದೆ. ಇದನ್ನೂ ಓದಿ: ಆಪರೇಷನ್ ಸಿಂಧೂರ ಇಡೀ ದೇಶವೇ ಮೆಚ್ಚುವ ಕೆಲಸ: ನಿಖಿಲ್ ಕುಮಾರಸ್ವಾಮಿ

    ಘಟನಾ ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದ್ದು, ಇದು ಕೊಲೆ ಅಥವಾ ಆತ್ಮಹತ್ಯೆಯೋ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಚಿನ್ನಾಭರಣ ಕಳವು ಮಾಡಿರುವುದಾಗಿ ಮಗಳ ವಿರುದ್ಧವೇ ದೂರು ಕೊಟ್ಟ ತಾಯಿ

    ಚಿನ್ನಾಭರಣ ಕಳವು ಮಾಡಿರುವುದಾಗಿ ಮಗಳ ವಿರುದ್ಧವೇ ದೂರು ಕೊಟ್ಟ ತಾಯಿ

    ಬೆಂಗಳೂರು: ತಾಯಿ ಮನೆಯಲ್ಲಿಯೇ ಕೋಟ್ಯಂತರ ಮೌಲ್ಯದ ಚಿನ್ನಾಭರಣವನ್ನು ಮಗಳು ಕಳವು ಮಾಡಿರುವ ವಿಚಿತ್ರ ಘಟನೆಯೊಂದು ಜೆಪಿ ನಗರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಬೆಂಗಳೂರಿನ ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ತಾಯಿ ವಿಜಯಲಕ್ಷ್ಮಿ ನನ್ನ ಮಗಳು ತೇಜವಂತಿ ನಾಲ್ಕು ಕೋಟಿ ಮೌಲ್ಯದ ಏಳೂವರೆ ಕೆಜಿ ವಜ್ರ ಹಾಗೂ ಚಿನ್ನಾಭರಣ ವಂಚಿಸಿದ್ದಾಳೆ ಎಂದು ದೂರು ನೀಡಿದ್ದಾರೆ. ಈ ಹಿನ್ನೆಲೆ ತೇಜವಂತಿ ಮೇಲೆ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ. ಇದನ್ನೂ ಓದಿ: ಸಿಎಂ ರಾಜೀನಾಮೆ ನೀಡ್ಬೇಕು, ಕಂಗನಾ ಪದ್ಮಶ್ರೀ ವಾಪಸ್ ಪಡೀಬೇಕು: ಎಸ್.ಮನೋಹರ್

    ಕೆಲ ದಿನಗಳ ಹಿಂದೆ ವಿಜಯಲಕ್ಷ್ಮಿ ಅವರು ಆಪರೇಶನ್ ಗೆ ಒಳಗಾಗಿದ್ದು, ಈ ವೇಳೆ ಮನೆಗೆ ಬಂದ ತೇಜವಂತಿ ತಾಯಿಗೆ ತಿಳಿಯದಂತೆ ಚಿನ್ನಾಭರಣ ತೆಗೆದುಕೊಂಡು ಹೋಗಿದ್ದಾಳೆ. ನಂತರ ಚಿನ್ನಾಭರಣವನ್ನು ಲಾಕರ್ ನಲ್ಲಿ ಇಟ್ಟಿರುವುದಾಗಿ ನಂಬಿಸಿದ್ದಾಳೆ. ಆದರೆ ಈಗ ತೇಜವಂತಿ ಚಿನ್ನಾಭರಣಗಳ ಜೊತೆಗೆ ನಾಪತ್ತೆಯಾಗಿದ್ದು, ಈ ಸಂಬಂಧ ಜೆಪಿ ನಗರ ಪೊಲೀಸ್ ಠಾಣೆಗೆ ವಿಜಯಲಕ್ಷ್ಮಿ ದೂರು ನೀಡಿದ್ದಾರೆ.

    ಈ ಪರಿಣಾಮ ಜೆಪಿ ನಗರ ಠಾಣೆಯಲ್ಲಿ ಐಪಿಸಿ ಸೆಕ್ಷನ್ 420 ಅಡಿ ಎಫ್ ಐ ಆರ್ ದಾಖಲಿಸಿಕೊಳ್ಳಲಾಗಿದೆ.

  • ‘ನಿನ್ನ ಸೊಂಟ ಸೂಪರ್, ನನ್ನ ಜೊತೆ ಬರ್ತಿಯಾ’ ಎಂದು ರೇಗಿಸಿದ್ದ ಪೋಲಿಗಳ ಬಂಧನ

    ‘ನಿನ್ನ ಸೊಂಟ ಸೂಪರ್, ನನ್ನ ಜೊತೆ ಬರ್ತಿಯಾ’ ಎಂದು ರೇಗಿಸಿದ್ದ ಪೋಲಿಗಳ ಬಂಧನ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಕಾಮುಕರ ಅಟ್ಟಹಾಸ ಹೆಚ್ಚಾಗುತ್ತಲೇ ಇದೆ. ಇದಕ್ಕೆ ನಿದರ್ಶನವೆಂಬಂತೆ ಬುಧವಾರ ಯುವತಿಯರನ್ನು ನಿಂದಿಸಿ ಅಶ್ಲೀಲವಾಗಿ ಮಾತನಾಡಿ ತೊಂದರೆ ಕೊಡುತ್ತಿದ್ದ ಇಬ್ಬರು ಕಾಮುಕರನ್ನು ಪೊಲೀಸರು ಬಂಧಿಸಿದ್ದಾರೆ.

    ವಿಇಟಿ ಕಾಲೇಜು ಬಳಿ ಯುವತಿಯನ್ನು ಕಿಚಾಯಿಸಿದ ಕಾಮುಕ ಅರವಿಂದ್(20) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬುಧವಾರದಂದು ವಿಇಟಿ ಕಾಲೇಜು ಬಳಿ ನಡೆದುಕೊಂಡು ಹೋಗುತ್ತಿದ್ದ ಯುವತಿಯನ್ನು ಕಾಮುಕ ಅರವಿಂದ್ ‘ನಿನ್ನ ಸೊಂಟ ಸೂಪರ್. ನಿನ್ನ ಚೆನ್ನಾಗಿ ನೋಡ್ಕೊಳ್ತೀನಿ ನನ್ನ ಜೊತೆ ಬರ್ತಿಯಾ’ ಎಂದು ಕಿಚಾಯಿಸಿದ್ದ.

    ಬಳಿಕ ಯುವತಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಕಾಮುಕ ಅರವಿಂದ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಆದ್ರೆ ಯುವತಿ ದೂರು ನೀಡಲು ನಿರಾಕರಿಸಿದ್ದು, ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

    ಇದೇ ರೀತಿ ರಾಮನಗರ ಮೂಲದ ಅಭಿಷೇಕ್‍ ಗೌಡ(21) ಕೂಡ ಯುವತಿಯನ್ನ ಕಿಚಾಯಿಸಿ ಪೊಲೀಸರ ಅತಿಥಿಯಾಗಿದ್ದಾನೆ. ಬುಧವಾರ ಜೆಪಿ ನಗರ ಮೆಟ್ರೋ ಬಳಿ ಯುವತಿ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಅಲ್ಲೇ ಇದ್ದ ಅಭಿಷೇಕ್ ಯುವತಿಯನ್ನು ‘ಲೇ ನಿಂತ್ಕೋಳೆ, ನನ್ನ ಜೊತೆ ಬಾ’ ಎಂದು ಕಿಚಾಯಿಸಿದ್ದಾನೆ. ಯುವತಿ ಅಳುತ್ತಾ ಹೋಗುತ್ತಿರುವಾಗ ಗಸ್ತು ತಿರುಗುತ್ತಿದ್ದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪೊಲೀಸರು ಅಭಿಷೇಕ್‍ ಗೌಡ ನನ್ನು ಬಂಧಿಸಿದ್ದಾರೆ. ಅಭಿಷೇಕ್ ವೃತ್ತಿಯಲ್ಲಿ ಟೆಂಪೋ ಚಾಲಕನಾಗಿ ಕೆಲಸಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.