Tag: Journalists

  • ಪತ್ರಕರ್ತರಿಗೆ ‘ಮಾಧ್ಯಮ ಸಂಜೀವಿನಿ’ ಯೋಜನೆ – 5 ಲಕ್ಷ ರೂ. ನಗದು ರಹಿತ ಚಿಕಿತ್ಸೆ

    ಪತ್ರಕರ್ತರಿಗೆ ‘ಮಾಧ್ಯಮ ಸಂಜೀವಿನಿ’ ಯೋಜನೆ – 5 ಲಕ್ಷ ರೂ. ನಗದು ರಹಿತ ಚಿಕಿತ್ಸೆ

    ಬೆಂಗಳೂರು: ಮಾನ್ಯತೆ ಹೊಂದಿರುವ ಪತ್ರಕರ್ತರು (Journalists) ಹಾಗೂ ಅವಲಂಬಿತ ಕುಟುಂಬ ಸದಸ್ಯರಿಗೆ 5 ಲಕ್ಷ ರೂ.ವರೆಗೆ ನಗದುರಹಿತ ಚಿಕಿತ್ಸೆಗಾಗಿ ‘ಮುಖ್ಯಮಂತ್ರಿಗಳ ಮಾಧ್ಯಮ ಸಂಜೀವಿನಿ’ (Madhyama Sanjeevini Yojana) ಯೋಜನೆ ಅನುಷ್ಠಾನ ಮಾಡುವುದಾಗಿ ಬಜೆಟ್‌ನಲ್ಲಿ (Karnataka Budget) ಘೋಷಿಸಲಾಗಿದೆ.

    ರಾಜ್ಯದ ಪತ್ರಕರ್ತರಿಗೆ ನೀಡಲಾಗುತ್ತಿದ್ದ ಮಾಸಾಶನವನ್ನು 12 ಸಾವಿರ ರೂ.ನಿಂದ 15ಸಾವಿರ ರೂ.ಗಳಿಗೆ ಹಾಗೂ ಕುಟುಂಬ ಮಾಸಾಶನ 7,500 ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ.

    ತುಮಕೂರಿನಲ್ಲಿ ನಡೆದ 39ನೇ ಪತ್ರಕರ್ತರ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಆರೋಗ್ಯ ಯೋಜನೆ ಘೋಷಿಸುವುದಾಗಿ ಭರವಸೆ ನೀಡಿದ್ದರು.

  • ಪತ್ರಕರ್ತರ 37ನೇ ರಾಜ್ಯ ಸಮ್ಮೇಳನಕ್ಕೆ ಡಾ.ವೀರೇಂದ್ರ ಹೆಗ್ಗಡೆಗೆ ಆಹ್ವಾನ

    ಪತ್ರಕರ್ತರ 37ನೇ ರಾಜ್ಯ ಸಮ್ಮೇಳನಕ್ಕೆ ಡಾ.ವೀರೇಂದ್ರ ಹೆಗ್ಗಡೆಗೆ ಆಹ್ವಾನ

    ಮಂಗಳೂರು: ವಿಜಯಪುರದಲ್ಲಿ ನಡೆಯಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ (Journalists) ಸಂಘದ 37ನೇ ರಾಜ್ಯ ಸಮ್ಮೇಳನಕ್ಕೆ ಧರ್ಮಸ್ಥಳದ ಧರ್ಮಧಿಕಾರಿ, ರಾಜ್ಯಸಭಾ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ (Dr. Virendra Heggade) ಅವರನ್ನು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರು ಆಹ್ವಾನಿಸಿದರು.

    ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ (Dharmasthala)  ಭೇಟಿ ನೀಡಿ ಡಾ.ಹೆಗ್ಗಡೆ ಅವರಿಗೆ ಆಮಂತ್ರಣ ನೀಡಲಾಯಿತು. ರಾಜ್ಯಸಭಾ ಸದಸ್ಯರಾಗಿರುವ ಅವರನ್ನ ಅಭಿನಂದಿಸಲಾಯಿತು. ಮಂಗಳೂರಿನಲ್ಲಿ ಪತ್ರಕರ್ತರ ಸಮ್ಮೇಳನ ಸಾನಿಧ್ಯ ವಹಿಸಿ ಅಚ್ಚುಕಟ್ಟಾಗಿ ನಡೆಸಿಕೊಟ್ಟ ಸಂದರ್ಭವನ್ನು ನೆನಪಿಸಿ ಅಭಿನಂದನೆಗಳನ್ನು ಸಲ್ಲಿಸಲಾಯಿತು. ಈ ಸಂದರ್ಭ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಕಾರ್ಯ ಚಟುವಟಿಕೆಗಳನ್ನು ಶ್ಲಾಘಿಸಿದ ಡಾ.ಹೆಗ್ಗಡೆ ಅವರು ಸಮ್ಮೇಳನ ಅರ್ಥಪೂರ್ಣವಾಗಿ ನೆರವೇರಲಿ ಎಂದು ಶುಭ ಹಾರೈಸಿದರು. ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಕನಪುರದ ಬಂಡೆ ಭಾಗವಾಗಿದೆ – ಶ್ರೀರಾಮುಲು ವ್ಯಂಗ್ಯ

    ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಉಪಾಧ್ಯಕ್ಷ ಭಾಸ್ಕರ್ ರೈ ಕಟ್ಟ, ಖಜಾಂಚಿ ಬಿ.ಎನ್.ಪುಷ್ಪರಾಜ್, ಕಾರ್ಯನಿರತ ಪತ್ರಕರ್ತರ ಸಂಘದ ರಾಷ್ಟ್ರೀಯ ಮಂಡಳಿ ಸದಸ್ಯ ಪಿ.ಬಿ.ಹರೀಶ್ ರೈ, ರಾಜ್ಯ ಸಮಿತಿ ಸದಸ್ಯ ಕಲ್ಯಾಣ್ ಕುಮಾರ್, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಚೈತ್ರೇಶ್ ಇಳಂತಿಲ ಉಪಸ್ಥಿತರಿದ್ದರು. ಇದನ್ನೂ ಓದಿ: ಸತತ ಎರಡನೇ ಬಾರಿ ಮುಖ್ಯಮಂತ್ರಿ ಗದ್ದುಗೆ ಏರಿದ ಭೂಪೇಂದ್ರ ಪಟೇಲ್

    Live Tv
    [brid partner=56869869 player=32851 video=960834 autoplay=true]

  • ಪತ್ರಕರ್ತರಿಗೆ ದೀಪಾವಳಿ ಗಿಫ್ಟ್ – ಕೊಟ್ಟಿರಬಹುದೇನೋ ಎಂದ ಆರಗ ಜ್ಞಾನೇಂದ್ರ

    ಪತ್ರಕರ್ತರಿಗೆ ದೀಪಾವಳಿ ಗಿಫ್ಟ್ – ಕೊಟ್ಟಿರಬಹುದೇನೋ ಎಂದ ಆರಗ ಜ್ಞಾನೇಂದ್ರ

    ಶಿವಮೊಗ್ಗ: ನನಗೆ ಗೊತ್ತಿರುವ ಹಾಗೆ ಸ್ವೀಟ್ಸ್, ಈ ಗಿಫ್ಟ್‌ಗಳನ್ನ (Diwali Gift) ಎಲ್ಲಾ ಸರ್ಕಾರದಲ್ಲೂ (Government) ಯಾವುದಾರೂ ಒಂದು ಸಂದರ್ಭದಲ್ಲಿ ಕೊಡ್ತಾರೆ. ಹಾಗೆ ಕೊಟ್ಟಿರಬಹುದೇನೋ ನನಗೆ ಏನೂ ಅರಿವಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಹೇಳಿದ್ದಾರೆ.

    ಸಿಎಂ ಕಚೇರಿಯಿಂದ ಪತ್ರಕರ್ತರಿಗೆ (Journalists) ಗಿಫ್ಟ್ ವಿಚಾರಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ಮಾತನಾಡಿದ ಸಚಿವರು, ಗಿಫ್ಟ್ ವಿಚಾರದ ಬಗ್ಗೆ ಮುಖ್ಯಮಂತ್ರಿಗಳು (Chief Minister) ಈಗಾಗಲೇ ಎಲ್ಲಾ ಹೇಳಿದ್ದಾರೆ, ನಾನೇನು ಪ್ರತಿಕ್ರಿಯೆ ನೀಡಲ್ಲ. ಅದರ ಬಗ್ಗೆ ನನಗೆ ಮಾಹಿತಿಯೂ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ನಾನು ಯಾರಿಗೂ ಹಣ ನೀಡುವಂತೆ ಸೂಚನೆ ಕೊಟ್ಟಿಲ್ಲ : ಬೊಮ್ಮಾಯಿ

    ನನಗೆ ಗೊತ್ತಿರುವ ಹಾಗೆ ಸ್ವೀಟ್ಸ್ (Sweets), ಅದು-ಇದು ಗಿಫ್ಟ್‌ಗಳನ್ನ ಎಲ್ಲಾ ಸರ್ಕಾರಗಳು ನೀಡಿವೆ. ಯಾವುದಾರೂ ಸಂದರ್ಭದಲ್ಲಿ ಕೊಡ್ತಾರೆ. ಹಾಗೇ ಕೊಟ್ಟಿರಬಹುದೇನೋ ನನಗೆ ಏನೂ ಅರಿವಿಲ್ಲ. ಹಣ ಕೊಟ್ಟಿರುವ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.

    ಇನ್ಸ್ಪೆಕ್ಟರ್ ನಂದೀಶ್ ಹೃದಯಾಘಾತ (Heart Attack) ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿ, ಸಿಪಿಐ (CPI) ಅನಾರೋಗ್ಯದಿಂದ ತೀರಿ ಹೋಗಿದ್ದಾರೆ. ನನಗೆ ಬಂದಿರೋ ಮಾಹಿತಿ ಪ್ರಕಾರ, ಅವರ ಆರೋಗ್ಯ ಸರಿ ಇರಲಿಲ್ಲ ಎಂದು ಜಾರಿಕೊಂಡಿದ್ದಾರೆ.

    ಇನ್ನೂ `ಪೊಲೀಸ್ (Polic) ಹುದ್ದೆಗೆ 70-80 ಲಕ್ಷಕೊಟ್ಟು ಬರಬೇಕಿದೆ’ ಎನ್ನುವ ಎಂಟಿಬಿ ನಾಗರಾಜ್ ಆಡಿಯೋ ಹೇಳಿಕೆ ಬಗ್ಗೆ ಅವರೇ ಹೇಳಬೇಕು. ಲಂಚ ಕೊಟ್ಟಿರೋ ಬಗ್ಗೆ ನಿರ್ದಿಷ್ಟವಾಗಿ ಯಾರಾದರೂ ದೂರು ಕೊಟ್ಟರೆ ಪೊಲೀಸರಿಂದ ತನಿಖೆ ಮಾಡಿಸಬಹುದು ಎಂದು ಹಾರಿಕೆ ಉತ್ತರ ನೀಡಿದರು. ಇದನ್ನೂ ಓದಿ: ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು ಕಿಡ್ನ್ಯಾಪ್ ನಾಟಕವಾಡಿದ 12ರ ಬಾಲಕ

    ಶಿವಮೊಗ್ಗದಲ್ಲಿನ ಗಲಾಟೆ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವರು, ಇಲ್ಲಿನ ಕೆಲವು ಶಕ್ತಿಗಳಿಗೆ ಕಾನೂನು ಅಂದ್ರೆ ಭಯ ಇಲ್ಲದಂತಾಗಿದೆ. ಅವರನ್ನು ಕಾನೂನು ವ್ಯಾಪ್ತಿಗೆ ತಂದು ಧಮನ ಮಾಡುವ ಎಲ್ಲ ಪ್ರಯತ್ನಗಳು ನಡೆಯುತ್ತಿವೆ. ಹಿಂದೆ ಶಿವಮೊಗ್ಗ ರೌಡಿಗಳ ಟ್ರೈನಿಂಗ್‌ ಸೆಂಟರ್ ಆಗಿತ್ತು. ಈಗ ಕಡಿಮೆ ಆಗಿದೆ ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪತ್ರಕರ್ತರಿಗೆ ಉಚಿತ ಲ್ಯಾಪ್‌ಟಾಪ್ ಕೊಡುಗೆ

    ಪತ್ರಕರ್ತರಿಗೆ ಉಚಿತ ಲ್ಯಾಪ್‌ಟಾಪ್ ಕೊಡುಗೆ

    ಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿ ಮತ್ತು ವಾರ್ತಾ ಇಲಾಖೆ ಸಹಯೋಗದಲ್ಲಿ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ ಅಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪತ್ರಕರ್ತರಿಗೆ ಉಚಿತ ಲ್ಯಾಪ್‌ಟಾಪ್ ವಿತರಣೆ ಮಾಡಲಾಯಿತು.

    ಇಲ್ಲಿನ ಪತ್ರಕರ್ತರ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ಅನ್ನೋದೊಂದು ಶಕ್ತಿ: ಬಸವರಾಜ್ ರಾಯರೆಡ್ಡಿ

    Laptop

    ಬಳಿಕ ಮಾತನಾಡಿದ ಅವರು, ಸಮಾಜ ಮತ್ತು ರಾಜಕೀಯ ವ್ಯವಸ್ಥೆಯಲ್ಲಿ ಲೋಪವಾದಾಗ ಅದನ್ನು ಎತ್ತಿ ಹಿಡಿದು ಸರಿಪಡಿಸುವ ಕೆಲಸ ಮಾಧ್ಯಮದವರು ಮಾಡಿದ್ದಾರೆ. ಮಾಧ್ಯಮದವರಿಗೆ ಇತಂಹ ಕಾರ್ಯಕ್ರಮಗಳನ್ನು ನೀಡುವುದರಿಂದ ಅವರು ತಮ್ಮ ಕೆಲಸದಲ್ಲಿ ಮತ್ತಷ್ಟು ಶಕ್ತರಾಗುತ್ತಾರೆ. ಲ್ಯಾಪ್‌ಟಾಪ್ ಪಡೆದ ಪತ್ರಕರ್ತರು ಅದನ್ನು ಉತ್ತಮವಾಗಿ ಬಳಸಿಕೊಳ್ಳಬೇಕು. ಪ.ಜಾತಿ, ಪಂಗಡದವರಿಗೆ ಎಲ್ಲ ರೀತಿಯ ಸವಲತ್ತುಗಳು ಸಿಗಬೇಕು ಎಂಬ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳು ಅತ್ಯವಶ್ಯ ಎಂದು ಹೇಳಿದರು.

    ಇದೇ ವೇಳೆ ರಾಜ್ಯದ ವಿವಿಧ ಜಿಲ್ಲೆಗಳ ಪ.ಜಾತಿ ಮತ್ತು ಪ.ಪಂಗಡ 25 ಪತ್ರಕರ್ತರಿಗೆ ಸಚಿವರು ಲ್ಯಾಪ್‌ಟಾಪ್ ವಿತರಣೆ ಮಾಡಿದರು. ಇದನ್ನೂ ಓದಿ: ಯುಗಾದಿ ವೇಳೆ ಹಲಾಲ್ ಮಾಂಸ ಬಹಿಷ್ಕರಿಸಿ – ಹಿಂದೂ ಜನಜಾಗೃತಿ ಸಮಿತಿ ಕರೆ 

    LAptop

    ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ, ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್, ವಾರ್ತಾ ಮತ್ತು ಸಾರ್ವಜನಿಕ ಇಲಾಖೆ ಆಯುಕ್ತ ಡಾ.ಪಿ.ಎಸ್ ಹರ್ಷ, ಅಕಾಡೆಮಿ ಕಾರ್ಯದರ್ಶಿ ರೂಪಾ, ಸದಸ್ಯರಾದ ಶಿವಾನಂದ ತಗಡೂರು, ಬದ್ರುದ್ದೀನ್, ಕೆ.ಎಂಶಿವರಾಜ್, ಶಿವಕುಮಾರ ಬೆಳ್ಳಿತಟ್ಟೆ, ಲಕ್ಷ್ಮೀನಾರಾಯಣ, ದೇವೇಂದ್ರ ಕಪನೂರು, ನಾಗಾರ್ಜುನ್, ಜಗನ್ನಾಥ ಶೆಟ್ಟಿ, ಗೋಪಾಲ ಯಡಗೆರೆ, ಕಂಕಂ ಮೂರ್ತಿ ಸೇರಿದಂತೆ ಹಲವು ಹಿರಿಯ ಪತ್ರಕರ್ತರು ಉಪಸ್ಥಿತರಿದ್ದರು.

     

  • ರಷ್ಯಾ-ಉಕ್ರೇನ್ ಯುದ್ಧ: ಕನಿಷ್ಟ 12 ಮಂದಿ ಪತ್ರಕರ್ತರ ಹತ್ಯೆ

    ರಷ್ಯಾ-ಉಕ್ರೇನ್ ಯುದ್ಧ: ಕನಿಷ್ಟ 12 ಮಂದಿ ಪತ್ರಕರ್ತರ ಹತ್ಯೆ

    ಕೀವ್: ಫೆಬ್ರವರಿ 24 ರಂದು ಉಕ್ರೇನ್‍ನಲ್ಲಿ ರಷ್ಯಾ ನಡೆಸಿದ ಭೀಕರ ಮಿಲಿಟರಿ ದಾಳಿ ಪ್ರಾರಂಭವಾದಾಗಿನಿಂದ 12 ಪತ್ರಕರ್ತರು ಮತ್ತು ಮಾಧ್ಯಮ ವೃತ್ತಿಪರರು ಉಕ್ರೇನ್‍ನಲ್ಲಿ ಕೊಲ್ಲಲ್ಪಟ್ಟಿದ್ದಾರೆ ಎಂದು ಉಕ್ರೇನ್‍ನ ಪ್ರಾಸಿಕ್ಯೂಟರ್ ಜನರಲ್ ಐರಿನಾ ವೆನೆಡಿಕ್ಟೋವಾ ಹೇಳಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಯುದ್ಧದಿಂದಾಗಿ ಹಾನಿಗೊಳಗಾದ ರಾಷ್ಟ್ರದ ದುರಾವಸ್ಥೆಯ ಪೋಸ್ಟ್‍ವೊಂದನ್ನು ಹಂಚಿಕೊಂಡ ಅವರು, ಯುದ್ಧದ ಸಮಯದಲ್ಲಿ ಕನಿಷ್ಟ 12 ಮಂದಿ ಪತ್ರಕರ್ತರು ಬಲಿಪಶುಗಳಾಗಿದ್ದಾರೆ. ಇದರೊಂದಿಗೆ ಯುದ್ಧದ ತಿವ್ರತೆಯಿಂದಾಗಿ ಗಂಭೀರ ಗಾಯಗಳನ್ನು ಅನುಭವಿಸುತ್ತಿರುವ ಇತರ 10 ಪತ್ರಕರ್ತರು ಕೂಡಾ ಇದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ದಿಗ್ವಿಜಯ್ ಸಿಂಗ್ ಸಹಿತ 6 ಮಂದಿಗೆ 1 ವರ್ಷ ಜೈಲು ಶಿಕ್ಷೆ

    ಪ್ರಾಸಿಕ್ಯೂಟರ್ ಜನರಲ್ ಪ್ರಕಾರ, ರಷ್ಯಾದ ಮಿಲಿಟರಿಯು ಒಟ್ಟು 56 ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ್ದು, ಅದರಲ್ಲಿ 15 ಅನ್ಯ ದೇಶದ ಪತ್ರಕರ್ತರಿದ್ದಾರೆ. 15 ರಲ್ಲಿ, ನಾಲ್ವರು ಯುಕೆಯಿಂದ ಬಂದವರು. ಜೆಕ್ ರಿಪಬ್ಲಿಕ್, ಡೆನ್ಮಾರ್ಕ್, ಯುಎಸ್, ಯುನೈಟೆಡ್ ಅರಬ್ ಎಮಿರೇಟ್ಸ್‍ನಿಂದ ತಲಾ ಎರಡು, ಮತ್ತು ಸ್ವಿಟ್ಜಲೆರ್ಂಡ್‍ನ ಒಬ್ಬರು ಎಂದು ವರದಿ ನೀಡಿದ್ದಾರೆ.

    ಉಕ್ರೇನ್‍ನಲ್ಲಿ ನಡೆದ ಇತ್ತೀಚಿನ ಘಟನೆಯೊಂದರಲ್ಲಿ, ಉಕ್ರೇನ್‍ನ ಇಬ್ಬರು ಪ್ರಜೆಗಳು ಮತ್ತು ಟರ್ಕಿಶ್ ಟಿಆರ್‍ಟಿ ವಲ್ರ್ಡ್ ಟಿವಿ ಚಾನೆಲ್‍ಗಳ ಕ್ಯಾಮರಾ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಕಾರು ಶುಕ್ರವಾರ ಯುದ್ಧ ರಹಿತ ನಗರವಾದ ಚೆರ್ನಿಹಿವ್‍ನಿಂದ ಚಿತ್ರೀಕರಣವನ್ನು ಸ್ಥಳಾಂತರಿಸುವ ಸಮಯದಲ್ಲಿ ಗುಂಡಿನ ದಾಳಿಗೆ ಒಳಗಾಯಿತು. ಈ ವೇಳೆ ವರದಿಗಾರ ಆಂಡ್ರಿ ತ್ಸಾಪ್ಲಿಯೆಂಕೊ ದಾಳಿಗೆ ಒಳಗಾಗಿದ್ದು, ಅದೃಷ್ಟವಶಾತ್ ಚಿಕ್ಕ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

    ರಷ್ಯಾದ ಪಡೆಗಳು ಯುದ್ಧದ ಕಾನೂನುಗಳನ್ನು ಮರೆತಿದ್ದು, ಈಗಾಗಲೇ ಶೆಲ್ ದಾಳಿ ನಡೆಸಿ ಅನೇಕ ಟಿವಿ ಟವರ್‍ಗಳು ಮತ್ತು ಟಿವಿ ಮತ್ತು ರೇಡಿಯೊ ಕಂಪನಿಗಳನ್ನು ಧ್ವಂಸ ಮಾಡಿದ್ದಾರೆ. ಇನ್ಸ್ಟಿಟ್ಯೂಟ್ ಆಫ್ ಮಾಸ್ ಮೀಡಿಯಾದ ಸಹಕಾರದೊಂದಿಗೆ ಪ್ರಾಸಿಕ್ಯೂಟರ್ ಕಚೇರಿಯು ಈಗಾಗಲೇ ಪತ್ರಕರ್ತರ ವಿರುದ್ಧದ ಅಪರಾಧಗಳನ್ನು ಮೇಲ್ವಿಚಾರಣೆ ಮಾಡುತ್ತಿದೆ ಎಂದು ವೆನೆಡಿಕ್ಟೋವಾ ಹೇಳಿದರು.

    ಅವರ ಮೇಲ್ವಿಚಾರಣೆಯ ಪ್ರಕಾರ, ರಷ್ಯಾದ ಪೂರ್ಣ ಪ್ರಮಾಣದ ಆಕ್ರಮಣದ ಆರಂಭದಿಂದಲೂ ಉಕ್ರೇನ್‍ನಲ್ಲಿ ಪತ್ರಕರ್ತರು ಮತ್ತು ಮಾಧ್ಯಮಗಳ ವಿರುದ್ಧ 148 ಕಾನೂನುಬಾಹಿರ ಕ್ರಮಗಳನ್ನು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ತರಬೇತಿ ನಿರತ ಐಆರ್‌ಬಿ ಪೊಲೀಸ್ ಹೃದಯಾಘಾತದಿಂದ ಸಾವು

    ಫೆಬ್ರವರಿ 24 ರಂದು ರಷ್ಯಾ ಉಕ್ರೇನಿಯನ್ ನೆಲದಲ್ಲಿ ‘ಮಿಲಿಟರಿ ಕಾರ್ಯಾಚರಣೆ’ ಪ್ರಾರಂಭಗೊಂಡಿದೆ. ಇಲ್ಲಿಯವರೆಗೆ, ವಿಶ್ವಸಂಸ್ಥೆಯ ವರದಿಯ ಪ್ರಕಾರ 6.5 ಮಿಲಿಯನ್‍ಗಿಂತಲೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ. ಹೆಚ್ಚುವರಿಯಾಗಿ, ಸಂಘರ್ಷ ಪ್ರಾರಂಭವಾದಾಗಿನಿಂದ ಉಕ್ರೇನ್‍ನಲ್ಲಿ ಕನಿಷ್ಠ 816 ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ ಎಂದು ವರದಿ ನೀಡಿದೆ.

  • ದ.ಕ.ಪತ್ರಕರ್ತರ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದ ನಟಿ ರಚಿತಾ ರಾಮ್

    ದ.ಕ.ಪತ್ರಕರ್ತರ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದ ನಟಿ ರಚಿತಾ ರಾಮ್

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಸ್ಯಾಂಡಲ್‍ವುಡ್ ನಟಿ ರಚಿತಾ ರಾಮ್ ಬಿಡುಗಡೆಗೊಳಿಸಿದ್ದಾರೆ.

    ಪತ್ರಕರ್ತರ ಸಂಘದ ವತಿಯಿಂದ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಡಿಸೆಂಬರ್ 28 ರಂದು ಪತ್ರಕರ್ತರ ಜಿಲ್ಲಾ ಸಮ್ಮೇಳನ ನಡೆಯಲಿದೆ. ಸಾಧನ ಸಂಭ್ರಮ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಕನ್ನಡ ಚಲನಚಿತ್ರ ನಟಿ ರಚಿತಾ ರಾಮ್  ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಬಿಡುಗಡೆಗೊಳಿಸಿ, ಸಮ್ಮೇಳನ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ಇದನ್ನೂ ಓದಿ: ರಾಯನ್ ರಾಜ್ ಸರ್ಜಾ ಕ್ರಿಸ್‍ಮಸ್ ಸಂಭ್ರಮ ಹೇಗಿತ್ತು ಗೊತ್ತಾ?

    ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್, ಉಪ ಪೊಲೀಸ್ ಆಯುಕ್ತರಾದ ಹರಿರಾಮ್ ಶಂಕರ್, ದಿನೇಶ್, ಅನಘ ರಿಫೈನರೀಸ್ ಆಡಳಿತ ನಿರ್ದೇಶಕ ಸಾಂಬಶಿವ ರಾವ್, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಭಾಸ್ಕರ್ ರೈ ಕಟ್ಟ ಉಪಸ್ಥಿತರಿದ್ದರು. ಇದನ್ನೂ ಓದಿ: ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ: ನಳಿನ್ ಕುಮಾರ್ ಕಟೀಲ್

  • ವಿಶ್ವದಲ್ಲಿ 488 ಪತ್ರಕರ್ತರಿಗೆ ಜೈಲು ವಾಸ- ಚೀನಾ ನಂ.1

    ವಿಶ್ವದಲ್ಲಿ 488 ಪತ್ರಕರ್ತರಿಗೆ ಜೈಲು ವಾಸ- ಚೀನಾ ನಂ.1

    ನವದೆಹಲಿ: ತಮ್ಮ ವರದಿಗಳ ಕಾರಣದಿಂದಾಗಿ ವಿಶ್ವದಲ್ಲಿ 488 ಪತ್ರಕರ್ತರು ಜೈಲು ವಾಸ ಅನುಭವಿಸುತ್ತಿದ್ದಾರೆ. ಅಲ್ಲದೇ 46 ಪತ್ರಕರ್ತರು ಹತ್ಯೆಯಾಗಿದ್ದಾರೆ ಎಂಬ ಆಘಾತಕಾರಿ ವಿಚಾರ ರಿಪೋರ್ಟರ್ಸ್ ವಿತೌಟ್ ಬಾರ್ಡರ್ಸ್ (ಆರ್‍ಎಸ್‍ಎಫ್) ಬಿಡುಗಡೆ ಮಾಡಿರುವ ವರದಿಯಿಂದ ಬೆಳಕಿಗೆ ಬಂದಿದೆ.

    jail

    ಅತಿ ಹೆಚ್ಚು ಪತ್ರಕರ್ತರನ್ನು ಜೈಲಿಗೆ ಹಾಕಿರುವ ಚೀನಾ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಚೀನಾ ದೇಶದಲ್ಲೇ 127 ಪತ್ರಕರ್ತರು ಸೆರೆವಾಸ ಅನುಭವಿಸುತ್ತಿದ್ದಾರೆ. ಇದನ್ನೂ ಓದಿ: ವುಹಾನ್‍ ಕೊರೊನಾದ ಭೀಕರತೆಯ ವರದಿ – ಗಟ್ಟಿಗಿತ್ತಿ ಪತ್ರಕರ್ತೆಗೆ 4 ವರ್ಷ ಜೈಲು ಶಿಕ್ಷೆ

    ಮೆಕ್ಸಿಕೊ ದೇಶದಲ್ಲಿ 7, ಅಫ್ಘಾನಿಸ್ತಾನದಲ್ಲಿ 6 ಪತ್ರಕರ್ತರು ಹತ್ಯೆಗೀಡಾಗಿದ್ದು, ಅಪಾಯಕಾರಿ ದೇಶಗಳು ಎಂದು ಕರೆಸಿಕೊಂಡಿವೆ. ತಲಾ ನಾಲ್ಕು ಪತ್ರಕರ್ತರು ಹತ್ಯೆಯಾಗಿರುವ ಯೆಮನ್, ಭಾರತ ದೇಶಗಳು ಸಹ ಇದೇ ಸಾಲಿನಲ್ಲಿವೆ.

    ಮ್ಯಾನ್ಮಾರ್, ಬೆಲಾರಸ್ ಮತ್ತು ಹಾಂಗ್‍ಕಾಂಗ್‍ನಲ್ಲಿ ಮಾಧ್ಯಮಗಳ ಮೇಲಿನ ದಬ್ಬಾಳಿಕೆ ಹೆಚ್ಚಿದ್ದು, ಬಂಧಿತ ಪತ್ರಕರ್ತರ ಸಂಖ್ಯೆಯು ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ. 20ರಷ್ಟು ಹೆಚ್ಚಾಗಿದೆ. ಹತ್ಯೆಗೀಡಾದ ಪತ್ರಕರ್ತರಲ್ಲಿ ಶೇ. 64ರಷ್ಟು ಮಂದಿ ಉದ್ದೇಶಿತ ಕಾರಣಗಳಿಗೆ ಟಾರ್ಗೆಟ್ ಆದವರಾಗಿದ್ದಾರೆ ಎಂಬ ವಿಚಾರವನ್ನು ವರದಿ ಬಹಿರಂಗಪಡಿಸಿದೆ. ಇದನ್ನೂ ಓದಿ: 2 ತಿಂಗಳ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡ ವುಹಾನ್ ಪತ್ರಕರ್ತ

  • ಮಂಗಳೂರು ಪ್ರೆಸ್‍ಕ್ಲಬ್ ಗೌರವ ಸನ್ಮಾನಕ್ಕೆ ಪತ್ರಕರ್ತರ ಆಯ್ಕೆ

    ಮಂಗಳೂರು ಪ್ರೆಸ್‍ಕ್ಲಬ್ ಗೌರವ ಸನ್ಮಾನಕ್ಕೆ ಪತ್ರಕರ್ತರ ಆಯ್ಕೆ

    ಮಂಗಳೂರು: ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಪ್ರತಿ ವರ್ಷ ಪ್ರೆಸ್ ಕ್ಲಬ್ ದಿನಾಚರಣೆ ಅಂಗವಾಗಿ ಹಿರಿಯ ಪತ್ರಕರ್ತರಿಗೆ ಮಂಗಳೂರು ಪ್ರೆಸ್ ಕ್ಲಬ್ ಗೌರವ ಸನ್ಮಾನ ನೆರವೇರಿಸಲಾಗುತ್ತಿದ್ದು, ಪತ್ರಕರ್ತರನ್ನು ಆಯ್ಕೆ ಮಾಡಲಾಗಿದೆ.

    ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪತ್ರಕರ್ತರ ಹಿರಿತನ, ಸೇವಾವಧಿಯನ್ನು ಪರಿಗಣಿಸಿ ಮಂಗಳೂರು ಪ್ರೆಸ್ ಕ್ಲಬ್ ಸಮಿತಿ ಗೌರವ ಸನ್ಮಾನಕ್ಕೆ ಪತ್ರಕರ್ತರನ್ನು ಆಯ್ಕೆ ಮಾಡಿದೆ.

    2021ನೇ ಸಾಲಿನಲ್ಲಿ ಹಿರಿಯ ಪತ್ರಕರ್ತರಾದ ಕೇಶವ ಕುಂದರ್, ಹಿಲರಿ ಕ್ರಾಸ್ತಾ(ಉದಯವಾಣಿ), ಕೆ.ಆನಂದ ಶೆಟ್ಟಿ, ಗುರುವಪ್ಪ.ಎನ್.ಟಿ.ಬಾಳೆಪುಣಿ (ಹೊಸ ದಿಗಂತ), ಯು.ಕೆ.ಕುಮಾರ್‍ನಾಥ್, ಸುಧಾಕರ ಎರ್ಮಾಳ್ (ವಿಜಯ ಕರ್ನಾಟಕ), ಜಗನ್ನಾಥ ಶೆಟ್ಟಿ ಬಾಳ (ಜಯಕಿರಣ), ಪಿ.ಬಿ.ಹರೀಶ್ ರೈ(ವಿಜಯವಾಣಿ), ಎಸ್.ಜಯರಾಮ್ (ಪಿಟಿಐ) ಅವರು ಗೌರವ ಸನ್ಮಾನಕ್ಕೆ
    ಆಯ್ಕೆಯಾಗಿದ್ದಾರೆ.

    ಮಾ.21ರಂದು ಬೆಳಗ್ಗೆ 11ಕ್ಕೆ ರಾಣಿ ಅಬ್ಬಕ್ಕ ಕ್ರೂಸ್‍ನಲ್ಲಿ ನಡೆಯಲಿರುವ ಪ್ರೆಸ್‍ಕ್ಲಬ್ ದಿನಾಚರಣೆಯಲ್ಲಿ ಡಾ.ಎಂ.ಮೋಹನ ಅಳ್ವ ಅವರು ಗೌರವ ಸನ್ಮಾನ ನೆರವೇರಿಸಲಿದ್ದಾರೆ ಎಂದು ಮಂಗಳೂರು ಪ್ರೆಸ್ ಕ್ಲಬ್‍ನ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಆರಿಫ್ ತಿಳಿಸಿದ್ದಾರೆ.

  • ರಾಜ್ಯದ ಎಲ್ಲ ಪ್ರೇಕ್ಷಣೀಯ ಸ್ಥಳಗಳಿಗೆ ಕಾಯಕಲ್ಪ: ಯೋಗೇಶ್ವರ್

    ರಾಜ್ಯದ ಎಲ್ಲ ಪ್ರೇಕ್ಷಣೀಯ ಸ್ಥಳಗಳಿಗೆ ಕಾಯಕಲ್ಪ: ಯೋಗೇಶ್ವರ್

    ಮಂಗಳೂರು: ರಾಜ್ಯದ ಎಲ್ಲ ಪ್ರೇಕ್ಷಣೀಯ ಸ್ಥಳಗಳಿಗೆ ಕಾಯಕಲ್ಪ ನೀಡುವ ಮೂಲಕ ಪ್ರವಾಸೋದ್ಯಮಕ್ಕೆ ಒತ್ತು ನೀಡಲಾಗುವುದು ಎಂದು ಸಚಿವ ಸಿ.ಪಿ.ಯೋಗೇಶ್ವರ್ ತಿಳಿಸಿದರು.

    ನಗರದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮಂಗಳೂರು ಪ್ರೆಸ್ ಕ್ಲಬ್ ಹಾಗೂ ಪತ್ರಿಕಾ ಭವನ ಟ್ರಸ್ಟ್ ಸಹಭಾಗಿತ್ವದಲ್ಲಿ ಆರಂಭಿಸಲಾಗಿರುವ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ ಚಾಲನೆ ನೀಡಿ ಮಾತನಾಡಿದರು.

    ಕೆರೆಕಟ್ಟೆ ತುಂಬಿಸುವ ನಿಟ್ಟಿನಲ್ಲಿ ಸಾಕಷ್ಟು ಕೆಲಸ ಕಾರ್ಯಗಳನ್ನು ಮಾಡಿದ್ದರಿಂದ ಸಣ್ಣ ನೀರಾವರಿ ಇಲಾಖೆಯ ಸಚಿವನಾಗುವ ನಿರೀಕ್ಷೆಯಲ್ಲಿದ್ದೆ. ಆದರೆ ಆಕಸ್ಮಿಕವಾಗಿ ಪ್ರವಾಸೋದ್ಯಮ ಇಲಾಖೆ ದೊರೆಕಿದ್ದು, ಅಭಿವೃದ್ಧಿಯ ದೃಷ್ಟಿಯಿಂದ ಬಹಳಷ್ಟು ಆಲೋಚನೆ ಮಾಡಿದ್ದೇನೆ. ಈಗಾಗಲೇ ಮೈಸೂರು ಹಾಗೂ ಮಂಗಳೂರಿಗೆ ತಲಾ ಎರಡು ಬಾರಿ ಭೇಟಿ ನೀಡಿರುವುದಾಗಿ ತಿಳಿಸಿದರು.

    ಈ ಸಂದರ್ಭದಲ್ಲಿ ಸಚಿವ ಯೋಗೇಶ್ವರ್ ಹಾಗೂ ಮಾಜಿ ಸಚಿವ ಕೃಷ್ಣ.ಜೆ.ಪಾಲೆಮಾರ್ ವೈಯಕ್ತಿಕವಾಗಿ ತಲಾ 5 ಲಕ್ಷ ರೂ.ಗಳ ದೇಣಿಗೆಯನ್ನು ಘೋಷಿಸಿದರು. ಇದೇ ವೇಳೆ ಕಾರ್ಯಕ್ರಮದಲ್ಲಿ ಮಾಹಿತಿ ಪತ್ರವನ್ನು ಬಿಡುಗಡೆಗೊಳಿಸಲಾಯಿತು.

    ಮೇಯರ್ ಪ್ರೇಮಾನಂದ ಶೆಟ್ಟಿ, ಪತ್ರಕರ್ತರ ಬೇಡಿಕೆಗಳಿಗೆ ಸರ್ಕಾರದ ಸೂಚನೆ ನಿಯಮಗಳ ಮೇರೆಗೆ ಪಾಲಿಕೆ ವತಿಯಿಂದ ಸಹಕಾರ ನೀಡಲಾಗುವುದು ಎಂದರು.

    ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, ನಿರ್ದೇಶಕರಾದ ಕುಮಾರ್ ಪುಷ್ಕರ್ ಹಾಗೂ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಆನಂದ್ ಶೆಟ್ಟಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ್ ಶೆಟ್ಟಿ ಬಾಳ, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಹಿರಿಯ ಪತ್ರಕರ್ತ ಬಿ.ರವೀಂದ್ರ ಶೆಟ್ಟಿ ಉಪಸ್ಥಿರಿದ್ದರು.

  • ಕುಂದಾಪುರದ ನಕಲಿ ಪತ್ರಕರ್ತರಿಗೆ ಉಡುಪಿಯಲ್ಲಿ ಗೂಸಾ

    ಕುಂದಾಪುರದ ನಕಲಿ ಪತ್ರಕರ್ತರಿಗೆ ಉಡುಪಿಯಲ್ಲಿ ಗೂಸಾ

    ಉಡುಪಿ: ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ನಕಲಿ ಪತ್ರಕರ್ತರಿಗೆ ಉಡುಪಿಯಲ್ಲಿ ಹಿಗ್ಗಾಮುಗ್ಗಾ ಗೂಸಾ ಬಿದ್ದಿದೆ. ಉಡುಪಿ ಜಿಲ್ಲೆ ಮಲ್ಪೆ ಸಮೀಪದ ರೆಸಾರ್ಟ್ ಮಾಲೀಕರೊಬ್ಬರಿಗೆ ಕುಂದಾಪುರ ಮೂಲದ ತಂಡವೊಂದು ಕಿರುಕುಳ ನೀಡುತ್ತಿತ್ತು.

    ಹಣಕ್ಕಾಗಿ ಪೀಡಿಸುತ್ತಿದ್ದ ನಕಲಿ ಪತ್ರಕರ್ತರ ಗ್ಯಾಂಗ್ ಕಳೆದ ಒಂದು ತಿಂಗಳಿಂದ ಬ್ಲ್ಯಾಕ್‌ಮೇಲ್ ಮಾಡುತ್ತಿತ್ತು. ರೆಸಾರ್ಟ್ ಸಿಬ್ಬಂದಿ ನಕಲಿ ಪತ್ರಕರ್ತರನ್ನು ಉಡುಪಿಗೆ ಕರೆಸಿ ಹಣ ನೀಡುವುದಾಗಿ ಹೇಳಿ ಹಿಗ್ಗಾಮುಗ್ಗಾ ಕಜ್ಜಾಯ ಕೊಟ್ಟಿದ್ದಾರೆ. ಸುಮಾರು ಒಂದು ಕಿಲೋಮೀಟರ್ ದೂರ ಅಟ್ಟಾಡಿಸಿಕೊಂಡು ಹೋಗಿ ಚಳಿ ಬಿಡಿಸಿದ್ದಾರೆ.

    ಹಣ ಪಡೆಯಲು ಬಂದ ತಂಡಕ್ಕೆ ರೆಸಾರ್ಟ್‌ ಸಿಬ್ಬಂದಿಗಳು ಧರ್ಮದೇಟು ನೀಡಿದ ವೀಡಿಯೋ ಲಭ್ಯವಾಗಿದೆ. ಮಲ್ಪೆ ಪೊಲೀಸರು ಸ್ಥಳಕ್ಕೆ ಆಗಮಿಸಿದ ನಂತರ ಧರ್ಮದೇಟು ನಿಂತಿದೆ. ರೆಸಾರ್ಟ್ ಸಿಬ್ಬಂದಿ ಮಲ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.