Tag: journalist

  • ತಂದೆಯಂತೆ ಬದುಕಲು ಬಯಸಿದ್ದರು ಗೌರಿ ಲಂಕೇಶ್- ಇಲ್ಲಿದೆ ಅವರ ಸಂಪೂರ್ಣ ಚಿತ್ರಣ

    ತಂದೆಯಂತೆ ಬದುಕಲು ಬಯಸಿದ್ದರು ಗೌರಿ ಲಂಕೇಶ್- ಇಲ್ಲಿದೆ ಅವರ ಸಂಪೂರ್ಣ ಚಿತ್ರಣ

    ಬೆಂಗಳೂರು: ರಾಜ್ಯದ ಖ್ಯಾತ ಸಾಹಿತಿ ಮತ್ತು ಪತ್ರಕರ್ತ ಪಿ.ಲಂಕೇಶ್ ಅವರ ಮಗಳಾಗಿ ಬೆಳೆದ ಗೌರಿ ಲಂಕೇಶ್ ತಂದೆಯ ಆದರ್ಶದಲ್ಲಿ ಬದುಕನ್ನು ಕಟ್ಟಿಕೊಂಡು ಜೀವನ ನಡೆಸುತ್ತಿದ್ದರು. ತಮ್ಮ ವಿಶೇಷ ಬರವಣಿಗೆ, ಚಿಂತನೆಗಳಿಂದ ಹೆಚ್ಚು ಪ್ರಸಿದ್ಧಿ ಪಡೆದುಕೊಂಡ ಹಿರಿಯ ವಿಚಾರವಾದಿಯಾಗಿದ್ದರು.

    ಗೌರಿ ಅವರು 1962ರಲ್ಲಿ ಬೆಂಗಳೂರಿನಲ್ಲಿ ಪಿ.ಲಂಕೇಶ್ ಅವರ ಪುತ್ರಿಯಾಗಿ ಜನಿಸಿದರು. ಗೌರಿ ಅವರು ಓರ್ವ ಸಹೋದರ ಮತ್ತು ಸಹೋದರಿಯನ್ನು ಹೊಂದಿದ್ದಾರೆ. ಸಹೋದರ ಇಂದ್ರಿಜಿತ್ ಲಂಕೇಶ್ ನಿದೇಶಕರಾಗಿ ಸಿನಿಮಾ ರಂಗದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಅಂತೆಯೇ ಸಹೋದರಿ ಕವಿತಾ ಲಂಕೇಶ್ ಸಹ ಸಿನಿಮಾ ರಂಗದಲ್ಲಿ ನಿರ್ದೇಶಕರಾಗಿದ್ದಾರೆ.

    ಗೌರಿ ಲಂಕೇಶ್ 2005ರಲ್ಲಿ ತಮ್ಮದೇ ಟ್ಯಾಬ್ಲೈಡ್ ಪತ್ರಿಕೆಯನ್ನು ಆರಂಭಿಸಿದ್ದರು. ಇನ್ನೂ ಗೌರಿ ಅವರು ರಾಜ್ಯ ನಕ್ಸಲರ ಶರಣಾಗತಿ ಸಮಿತಿಯ ಸದಸ್ಯೆ, ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು. ತಂದೆ ಪಿ.ಲಂಕೇಶ್ ಆರಂಭಿಸಿದ್ದ ಪತ್ರಿಕೆಯನ್ನು ಸಹ ತಾವು ಮುನ್ನೆಡೆಸುತ್ತಿದ್ದರು.

     

  • ಗೌರಿ ಲಂಕೇಶ್ ಹತ್ಯೆ- ರವೀಂದ್ರ ಕಲಾಕ್ಷೇತ್ರದಲ್ಲಿಂದು ಅಂತಿಮ ದರ್ಶನ

    ಗೌರಿ ಲಂಕೇಶ್ ಹತ್ಯೆ- ರವೀಂದ್ರ ಕಲಾಕ್ಷೇತ್ರದಲ್ಲಿಂದು ಅಂತಿಮ ದರ್ಶನ

    ಬೆಂಗಳೂರು: ಮಂಗಳವಾರ ರಾತ್ರಿ ಹೋರಾಟಗಾರ್ತಿ, ಪತ್ರಕರ್ತೆ, ವಿಚಾರವಾದಿ ಗೌರಿ ಲಂಕೇಶ್ ಹತ್ಯೆ ನಡೆದಿದ್ದು, ಇಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ.

    ಮರಣೋತ್ತರ ಪರೀಕ್ಷೆಯ ಬಳಿಕ ಅಂದರೆ 10 ಗಂಟೆಯ ನಂತರ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇನ್ನೂ ಸಿಸಿಟಿವಿಯಲ್ಲಿ ಗೌರಿ ಅವರ ಹತ್ಯೆಯ ಸಂಪೂರ್ಣ ಚಿತ್ರಣ ಸೆರೆಯಾಗಿದ್ದು, ಆರೋಪಿಗಳ ಚಹರೆ ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

    ಮಂಗಳವಾರ ರಾತ್ರಿ ಗಾಂಧಿ ಬಜಾರ್ ಕಚೇರಿಯಿಂದ ಫಾಲೋ ಮಾಡಿದ ಆಗಂತುಕರು ಗೌರಿ ಅವರು ಮನೆಯ ಒಳಗಡೆ ಹೋಗುವಾಗ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಗುಂಡಿನ ದಾಳಿಗೊಳಗಾದ ಗೌರಿ ಲಂಕೇಶ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

    https://www.youtube.com/watch?v=E5KklglYg8o

  • ಹಿರಿಯ ಪತ್ರಕರ್ತ ಗರುಡನಗರಿ ನಾಗರಾಜ್ ಇನ್ನಿಲ್ಲ

    ಹಿರಿಯ ಪತ್ರಕರ್ತ ಗರುಡನಗರಿ ನಾಗರಾಜ್ ಇನ್ನಿಲ್ಲ

    ಬೆಂಗಳೂರು: ಭಾನುವಾರ ಬೆಳಗ್ಗೆ ಹಿರಿಯ ಪತ್ರಕರ್ತ ಗರುಡನಗರಿ ನಾಗರಾಜ್ (84) ಅವರು ನಗರದ ಸೇವಾಕ್ಷೇತ್ರ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

    ರಾಜ್ಯ ಪ್ರಶಸ್ತಿ ವಿಜೇತ ನಾಗರಾಜ್ ಅವರು ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿರುವ ನಾಗರಾಜ್ ಅವರು 20 ಸಾವಿರಕ್ಕೂ ಹೆಚ್ಚು ಹಳ್ಳಿಗಳಿಗೆ ಭೇಟಿ ನೀಡಿದ ದೇಶದ ಮೊದಲ ಪತ್ರಕರ್ತ ಎಂಬ ಬಿರುದಿಗೆ ಭಾಜನರಾಗಿದ್ದರು.

    ನಾಗರಾಜ್ ಅವರು ಹಾಸನ ಜಿಲ್ಲೆಯವರಾಗಿದ್ದು, ಬೆಂಗಳೂರಿನ ಜೆಪಿ ನಗರದಲ್ಲಿ ವಾಸವಾಗಿದ್ದರು. ಇನ್ನು ತಮ್ಮ ವೃತ್ತಿ ಬದುಕಿನಲ್ಲಿ ಹಲವು ಕನ್ನಡ ಪತ್ರಿಕೆಗಳಿಗೆ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು. ಇಂದು ಜೆಪಿ ನಗರದಲ್ಲಿಯ ನಿವಾಸದಲ್ಲಿ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಿಡಲಾಗುವುದು.

  • ಹಾವೇರಿಯ ಹಿರಿಯ ಪತ್ರಕರ್ತ ಅಂಗೂರವರಿಗೆ ಪ್ರಗತಿ ಎನ್‍ಜಿಓದಿಂದ ಸನ್ಮಾನ

    ಹಾವೇರಿಯ ಹಿರಿಯ ಪತ್ರಕರ್ತ ಅಂಗೂರವರಿಗೆ ಪ್ರಗತಿ ಎನ್‍ಜಿಓದಿಂದ ಸನ್ಮಾನ

    ಹಾವೇರಿ: ನಗರದ ಪ್ರಗತಿ ಮೈನಾರಟಿ ವೆಲ್‍ಫೇರ್ ಎಜುಕೇಶನ್ & ರೂರಲ್ ಡೆವಲಪ್‍ಮೆಂಟ್ ಸೊಸೈಟಿ ವತಿಯಿಂದ ಇತ್ತಿಚಿಗೆ ಕರ್ನಾಟಕ ಮಾಧ್ಯಮ ಅಕಾಡಮಿಯಿಂದ ಪ್ರಶಸ್ತಿ ಪುರಸ್ಕೃತರಾದ ಹಾವೇರಿಯ ಕೌರವ ಪತ್ರಿಕೆಯ ಹಿರಿಯ ಪತ್ರಕರ್ತ ಮಾಲತೇಶ ಅಂಗೂರ ಇವರಿಗೆ ಹೊಸಮಠದ ಬಸವಲಿಂಗ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಸನ್ಮಾನ ಮಾಡಲಾಯಿತು.

    ಮಾಲತೇಶ ಅಂಗೂರವರು ಪತ್ರಿಕಾ ರಂಗದಲ್ಲಿ ಕಳೆದ 20 ವರ್ಷಗಳಿಂದ ಅಪಾರ ಸೇವೆ ಮಾಡಿದ್ದರಿಂದ ಕರ್ನಾಟಕ ಮಾಧ್ಯಮ ಅಕಾಡಮಿಯಿಂದ ಪ್ರಶಸ್ತಿ ಬಂದಿದೆ. ಈ ವಿಚಾರ ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಅಂಗೂರವರ ಪತ್ರಿಕಾ ಸೇವೆ ಸದಾ ಸಮಾಜದ ಅಂಕುಡೊಂಕು ತಿದ್ದುವುದರ ಮೂಲಕ ಜಾಗೃತಿ ನೀಡುತ್ತಾ ಸಮಾನತೆಗಾಗಿ ತಮ್ಮ ಹರಿತವಾದ ಲೇಖನಿಯಿಂದ ತಪ್ಪಿತಸ್ಥರನ್ನು ಎಚ್ಚರಿಸುತ್ತಾ ಅವರನ್ನು ತಿದ್ದುತ್ತಾ ಬಂದಿದ್ದಾರೆ. ಅವರಿಗಾಗಿ ನಮ್ಮ ಸಹಕಾರ ಸದಾ ಇರುತ್ತದೆ ಎಂದು ಸಂಸ್ಥೆಯ ಶಾಬಾಷಖಾನ ಅಧ್ಯಕ್ಷರಾದ ಕುಲಕರ್ಣಿ ಹೇಳಿದರು.

    ಈ ಸಂದರ್ಭದಲ್ಲಿ ಕನ್ನಡಪರ ಹೋರಾಟಗಾರ ಶಾಹೀದ ದೇವಿಹೋಸೂರ, ಯುವ ಮುಖಂಡರಾದ ದಾದಾಪೀರ ಚೂಡಿಗಾರ, ಶ್ರೀನಿವಾಸ ಮುಗದೂರ ಜಯ ಕರ್ನಾಟಕ ಸಂಘಟನೆಯ ಜಂಟಿ ಕಾರ್ಯದರ್ಶಿ ಕರೀಮ ಅತ್ತಾರ, ಸುಭಾಸ ಬಡಿಗೇರ, ನವೀದ್ ಅಮ್ಮಿನಬಾವಿ ಇನ್ನು ಅನೇಕ ಗಣ್ಯರು ಉಪಸ್ಥಿತರಿದ್ದರು.

  • ಅಪಘಾತದಲ್ಲಿ ಮೃತಪಟ್ಟ ಪೇಪರ್ ಮಾರೋ ಹುಡ್ಗನ ಕುಟುಂಬಕ್ಕೆ ಪತ್ರಕರ್ತರ ವಾಟ್ಸಪ್  ಗ್ರೂಪ್ ಆಸರೆ

    ಅಪಘಾತದಲ್ಲಿ ಮೃತಪಟ್ಟ ಪೇಪರ್ ಮಾರೋ ಹುಡ್ಗನ ಕುಟುಂಬಕ್ಕೆ ಪತ್ರಕರ್ತರ ವಾಟ್ಸಪ್ ಗ್ರೂಪ್ ಆಸರೆ

    ರಾಯಚೂರು: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಬರೀ ಚರ್ಚೆ, ಕಾಲೆಳೆಯೋದೆ ಹೆಚ್ಚಾಗುತ್ತಿದೆ. ಆದ್ರೆ ಇದಕ್ಕೆ ವಿರುದ್ಧವಾಗಿ `ಕರ್ನಾಟಕ ಪತ್ರಿಕಾ ಬಳಗ’ ಹೆಸರಿನ ವಾಟ್ಸಪ್   ಗ್ರೂಪ್ ಸಾಮಾಜಿಕ ಕಳಕಳಿಯನ್ನ ಮೆರೆದಿದೆ. ಗ್ರೂಪ್ ಗೆ ಬಂದ ಒಂದು ಮೆಸೇಜ್ ಗೆ ಸ್ಪಂದಿಸಿದ ಸದಸ್ಯರು ಕಷ್ಟದಲ್ಲಿನ ಕುಟುಂಬವೊಂದಕ್ಕೆ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ.

    2017 ಮಾರ್ಚ್ 20 ರಂದು ರಾಯಚೂರಿನ ಗೋಶಾಲಾ ರಸ್ತೆಯಲ್ಲಿ ಸೈಕಲ್ ಗೆ ಲಾರಿ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತ ಪಟ್ಟ ಮನೆ, ಮನೆಗೆ ಪತ್ರಿಕೆ ಹಾಕುವ ಬಡ ಹುಡುಗ ಉಪೇಂದ್ರನ ಕುಟುಂಬಕ್ಕೆ ವಾಟ್ಸಪ್   ಗ್ರೂಪ್ ನ ಸದಸ್ಯರೆಲ್ಲಾ ಸೇರಿ 41,001ರೂ. ಚೆಕ್ ನೀಡುವ ಮೂಲಕ ಸಹಾಯ ಮಾಡಿದ್ದಾರೆ.

    ಎಲ್ಲಾ ಗ್ರೂಪ್ ಗಳಂತೆ ಹುಟ್ಟಿಕೊಂಡ ಕರ್ನಾಟಕ ಪತ್ರಿಕಾ ಬಳಗ ಸಮಾಜಕ್ಕೆ ಒಳಿತು ಮಾಡುವ ಉದ್ದೇಶದೊಂದಿಗೆ ಮೊದಲ ಹೆಜ್ಜೆ ಇಟ್ಟಿದೆ. ಕರ್ನಾಟಕದ ವಿವಿಧ ಪತ್ರಿಕಾ ಹಾಗೂ ವಿದ್ಯುನ್ಮಾನ ಮಾಧ್ಯಮದಲ್ಲಿ ಕೆಲಸ ಮಾಡುವ ಜಾಹಿರಾತು, ಪ್ರಸರಣ, ವರದಿಗಾರಿಕೆ ಸೇರಿ ವಿವಿಧ ವಿಭಾಗಗಳ ವಿವಿಧ ಜಿಲ್ಲೆಯ 214 ಜನ ಈ ಗ್ರೂಪ್ ನ ಸದಸ್ಯರಾಗಿದ್ದಾರೆ.

    ಸಂಜೀವ್ ಕುಮಾರ್, ಮಹಾರುದ್ರಲಿಂಗ ಪಟ್ಟಣಶೆಟ್ಟಿ, ಮಂಜುನಾಥ್ ದ್ಯಾವನಗೌಡ್ರು, ಶಂಕರಲಿಂಗ ಮಾಳಗಿ ಅವರ ಆಸಕ್ತಿಯಿಂದ ಈ ಗ್ರೂಪ್ ಸಮಾಜ ಮುಖಿಯಾಗಿ ಮುಂದುವರೆಯಲು ನಿರ್ಧರಿಸಿದೆ. ಮುಂದಿನ ದಿನಗಳಲ್ಲಿ ಹುಬ್ಬಳಿ ವಿಭಾಗದಲ್ಲಿ ಈ ಗ್ರೂಪ್ ನ್ನ ನೋಂದಣಿ ಮಾಡಿಸುವ ಮೂಲಕ ಹೆಚ್ಚು ಜವಾಬ್ದಾರಿ ಹೊತ್ತುಕೊಳ್ಳಲು ಈ ಗೆಳೆಯರ ಗುಂಪು ಆಸಕ್ತಿ ಹೊಂದಿದೆ.

  • ಅಪಘಾತವೆಸಗಿದ ಡಿವೈಎಸ್‍ಪಿ ಪುತ್ರಿಯ ರಕ್ಷಣೆಗೆ ಯತ್ನ – ಪತ್ರಕರ್ತರ ಮೊಬೈಲ್ ಕಸಿಯಲು ಖಾಕಿ ದರ್ಪ

    ಅಪಘಾತವೆಸಗಿದ ಡಿವೈಎಸ್‍ಪಿ ಪುತ್ರಿಯ ರಕ್ಷಣೆಗೆ ಯತ್ನ – ಪತ್ರಕರ್ತರ ಮೊಬೈಲ್ ಕಸಿಯಲು ಖಾಕಿ ದರ್ಪ

    ಬಳ್ಳಾರಿ: ಅಪಘಾತ ಮಾಡಿ ಪರಾರಿಯಾದ ಆರೋಪಿಯನ್ನು ಹಿಡಿಯೋದು ಪೊಲೀಸರ ಕರ್ತವ್ಯ. ಆದ್ರೆ ಅಪಘಾತ ಮಾಡಿದ ಪೊಲೀಸ್ ಅಧಿಕಾರಿಯ ಪುತ್ರಿಯನ್ನು ಪೊಲೀಸರೇ ಸ್ಥಳದಿಂದ ಕಳಿಸಿಕೊಟ್ಟು ರಕ್ಷಣೆ ಮಾಡಿದ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಅಷ್ಟೇ ಅಲ್ಲದೆ ಅಫಘಾತದಲ್ಲಿ ಗಾಯಗೊಂಡವನ ದೃಶ್ಯಗಳನ್ನು ಸೆರೆಹಿಡಿದ ಪತ್ರಕರ್ತರ ಮೊಬೈಲ್‍ಗಳನ್ನ ಕಸಿಯಲು ಪೊಲೀಸರು ಯತ್ನಿಸಿದ ಘಟನೆಯೂ ನಡೆದಿದೆ.

    ಬಳ್ಳಾರಿಯ ಕಾಸ್ಮೋಪಾಲಿಟಿನ್ ಕ್ಲಬ್ ಬಳಿ ಕಳೆದ ರಾತ್ರಿ ಡಿವೈಎಸ್‍ಪಿಯೊಬ್ಬರ ಪುತ್ರಿಯ ಕೆಎ34ಎಕ್ಸ್4601 ನೋಂದಣಿ ಸಂಖ್ಯೆ ಹೊಂದಿರುವ ಸ್ಕೂಟಿ ನಿಯಂತ್ರಣ ಕಳೆದುಕೊಂಡು ಬಾಷಾ ಎಂಬಾತನಿಗೆ ಡಿಕ್ಕಿ ಹೊಡೆದಿದೆ. ಈ ವಿಚಾರ ತಿಳಿದ ತಕ್ಷಣವೇ ಪತ್ರಕರ್ತರು ಸ್ಥಳಕ್ಕೆ ತೆರಳಿ ದೃಶ್ಯಗಳನ್ನು ಸೆರೆಹಿಡಿಯಲು ಮುಂದಾದ್ರು. ಈ ವೇಳೆ ಗಾಯಾಳುವನ್ನು ಪೊಲೀಸರು ತರಾತುರಿಯಲ್ಲಿ ಆಟೋದಲ್ಲಿ ಕರೆದೊಯ್ದರು. ಪತ್ರಕರ್ತರ ಮೊಬೈಲ್‍ಗಳನ್ನು ಕಸಿದು ಸೆರೆಯಾದ ದೃಶ್ಯಗಳನ್ನು ಡಿಲೀಟ್ ಮಾಡಲು ಯತ್ನಿಸಿದ್ರು. ಮಾತ್ರವಲ್ಲದೇ ಅವಾಚ್ಯ ಶಬ್ಧಗಳಲ್ಲಿ ನಿಂದಿಸಿದ್ರು.

    ಪೊಲೀಸರ ಈ ದೌರ್ಜನ್ಯವನ್ನು ಪ್ರತ್ಯಕ್ಷದರ್ಶಿಗಳು ಮೊಬೈಲ್‍ನಲ್ಲಿ ಸೆರೆಹಿಡಿಯುತ್ತಿದ್ದಂತೆ ಅವರನ್ನು ವಶಕ್ಕೆ ಪಡೆದ ಪೊಲೀಸರು ಮೊಬೈಲ್ ಕಸಿದು ದೃಶ್ಯಗಳನ್ನ ಬಲವಂತವಾಗಿ ಡಿಲೀಟ್ ಮಾಡಿದ್ರು. ಒಮ್ಮೆ ತಾನು ಜೀನ್ಸ್ ಕಾರ್ಖಾನೆಯ ಕಾರ್ಮಿಕ ಎನ್ನುವ ಗಾಯಾಳು ಮತ್ತೊಮ್ಮೆ ಡಿವೈಎಸ್‍ಪಿ ಮನೆಯಲ್ಲಿ ಕೆಲಸಕ್ಕಿರೋದಾಗಿ ಹೇಳ್ತಿದ್ದಾನೆ. ಇದೀಗ ಈತನ ಹೇಳಿಕೆಗಳು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.