ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿದಂತೆ ಎಸ್‍ಐಟಿ ಶಂಕಿತ ಆರೋಪಿಯೊಬ್ಬನನ್ನು ವಶಪಡಿಸಿಕೊಂಡು ವಿಚಾರಣೆ ಮಾಡಲಾಗುತ್ತಿದೆ. ಆದರೆ ವಿಚಾರಣೆಯಲ್ಲಿ ಶಂಕಿತ ಆರೋಪಿ ಪದೇ ಪದೇ ತನ್ನ ಹೇಳಿಕೆಗಳನ್ನು ಬದಲಾಯಿಸುತ್ತಿದ್ದಾರೆ. ಹೀಗಾಗಿ ಆರೋಪಿಯ ಮಂಪರು ಪರೀಕ್ಷೆಗೆ ಕೋರ್ಟ್ ಆದೇಶಿಸಿದೆ.
ವಿಚಾರಣೆಯಲ್ಲಿ ಮತ್ತೊಂದು ಸ್ಫೋಟಕ ಸ್ಟೋರಿ ಹೊರಗೆ ಬರುತ್ತಿದ್ದು, ಸಾಹಿತಿ ಕೆ.ಎಸ್.ಭಗವಾನ್ ಬಚಾವಾಗಿದ್ದು ಹೇಗೆ ಎಂದು ಬಾಯಿ ಬಿಟ್ಟಿದ್ದಾನೆ ಎಂಬ ಮಾಹಿತಿಗಳು ಲಭ್ಯವಾಗಿವೆ. ಆದ್ರೆ ಭಗವಾನ್ ಕೊಲೆ ಮಾಡಲು ಸಾಧ್ಯವಾಗಿಲ್ಲ ಅಂತಾ ಹೇಳಿದ್ದಾನೆ ಎಂದು ತಿಳಿದು ಬಂದಿದೆ.

ಭಗವಾನ್ ಅವರನ್ನು ಕೊಲೆ ಮಾಡಲು ಶ್ರೀರಂಗಪಟ್ಟಣದ ಅನಿಲ್ ಎಂಬುವನ ಮನೆಯಲ್ಲಿ ಟ್ರೈನಿಂಗ್ ಆಗಿತ್ತು. ಆದರೆ ಟ್ರೈನಿಂಗ್ ಮುಗಿಸಿಕೊಂಡಿದ್ದ ಆರೋಪಿಗಳು ಬೇರೊಂದು ವೆಪನ್ ಕೇಳಿದ್ದರು. ಭಗವಾನ್ ಕೊಲೆ ಮಾಡೋದಕ್ಕೆ ಈ ರಿವಾಲ್ವರ್ ಸೂಕ್ತ ಅಲ್ಲ ಎಂದು ಹೇಳಿ ಬೇರೆ ರಿವಾಲ್ವರ್ ಗಳನ್ನು ತರೋದಕ್ಕೆ ಸೂಚನೆ ನೀಡಿದ್ದರು. ಸರಿಯಾದ ಸಮಯದಲ್ಲಿ ರಿವಾಲ್ವರ್ ಅನ್ನು ಒದಗಿಸೋದಕ್ಕೆ ಆಗದೆ ಭಗವಾನ್ ಬಚಾವ್ ಆಗಿ ಹೋದ್ದರು. ಇನ್ನೂ ಗೋವಾದಲ್ಲಿ ಹಂತಕನನ್ನು ಸೆಲೆಕ್ಟ್ ಮಾಡಲಾಗಿತ್ತು ಎನ್ನಲಾಗಿದೆ.
