Tag: jothe jotheyali serial

  • ಮತ್ತೆ ಕಿರುತೆರೆಗೆ ಬಂದ ಮೇಘಾ ಶೆಟ್ಟಿ

    ಮತ್ತೆ ಕಿರುತೆರೆಗೆ ಬಂದ ಮೇಘಾ ಶೆಟ್ಟಿ

    ‘ಜೊತೆ ಜೊತೆಯಲಿ’ (Jothe Jotheyali) ಸೀರಿಯಲ್ ಮೂಲಕ ಎಂಟ್ರಿ ಕೊಟ್ಟಿದ್ದ ಮೇಘಾ ಶೆಟ್ಟಿ (Megha Shetty) ಕನ್ನಡ ಮತ್ತು ತಮಿಳಿನಲ್ಲಿ ಬ್ಯುಸಿಯಾಗಿದ್ದಾರೆ. ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ:ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟ ಬ್ಯಾಂಕ್ ಜನಾರ್ಧನ್ ವಿಧಿವಶ

    ಸದಾ ಹೊಸ ಬಗೆಯ ಪಾತ್ರದ ಮೂಲಕ ಬರೋ ನಟಿ ಮೇಘಾ ಶೆಟ್ಟಿ ಈಗ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ‘ಮುದ್ದು ಸೊಸೆ’ (Muddu Sose Serial) ಸೀರಿಯಲ್ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಅವರು ದರ್ಶನ ನೀಡುತ್ತಿದ್ದಾರೆ. ಇದನ್ನೂ ಓದಿ:ಚಂದನ್ ಶೆಟ್ಟಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ‘ಸೀತಾ ವಲ್ಲಭ’ ನಟಿ

    ಇಂದಿನಿಂದ ‘ಮುದ್ದು ಸೊಸೆ’ ಸೀರಿಯಲ್ ಪ್ರಸಾರವಾಗುತ್ತಿದೆ. ‘ಬಿಗ್ ಬಾಸ್’ ಖ್ಯಾತಿಯ ತ್ರಿವಿಕ್ರಮ್ (Trivikram) ಮತ್ತು ಪ್ರತಿಮಾ (Prathima Thakur) ಇದರಲ್ಲಿ ಅತಿಥಿ ಪಾತ್ರವನ್ನು ಮೇಘಾ ಶೆಟ್ಟಿ ನಿಭಾಯಿಸಿದ್ದಾರೆ. ಈ ಸೀರಿಯಲ್ ಅನ್ನು ಅವರೇ ಪ್ರಸ್ತುತಪಡಿಸುತ್ತಿದ್ದಾರೆ. ಈ ಸೀರಿಯಲ್ ನಿರ್ಮಾಣಕ್ಕೆ ಅವರು ಕೂಡ ಸಾಥ್ ನೀಡಿರೋದು ವಿಶೇಷ.

    ಸದ್ಯ ಇವರ ಕೈಯಲ್ಲಿ ‘ಆಫ್ಟರ್ ಆಪರೇಷನ್ ಲಂಡನ್ ಕೆಫೆ’, ‘ಚೀತಾ’ ಹಾಗೂ ‘ಗ್ರಾಮಾಯಣ’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತಮಿಳಿನ ಸಿನಿಮಾವೊಂದರಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ಈ ಸಿನಿಮಾಗಳು ಅವರಿಗೆ ಯಶಸ್ಸು ತಂದುಕೊಡುತ್ತಾ? ಎಂದು ಅವರ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

  • ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ `ಜೊತೆ ಜೊತೆಯಲಿ’ ಶಿಲ್ಪಾ ಅಯ್ಯರ್

    ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ `ಜೊತೆ ಜೊತೆಯಲಿ’ ಶಿಲ್ಪಾ ಅಯ್ಯರ್

    ಕಿರುತೆರೆ ನಟಿ ಶಿಲ್ಪಾ ಅಯ್ಯರ್ (Actress Shilpa Iyer) ಅವರು ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. `ಜೊತೆ ಜೊತೆಯಲಿ’ (Jothe Jotheyali) ಖ್ಯಾತಿಯ ನಟಿ ಶಿಲ್ಪಾ ಅವರು ಎಂಗೇಜ್ ಆಗಿದ್ದು, ಇದೀಗ ದಾಂಪತ್ಯ (Wedding) ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ.

    ನಾಗಮಂಡಲ, ಕಸ್ತೂರಿ ನಿವಾಸ, ಜೊತೆ ಜೊತೆಯಲಿ, ಒಲಿವಿನ ನಿಲ್ದಾಣ ಸೀರಿಯಲ್ ಮೂಲಕ ಮೋಡಿ ಮಾಡಿರುವ ನಟಿ ಶಿಲ್ಪಾ ಅಯ್ಯರ್ ಅವರು ಇತ್ತೀಚಿಗೆ ಸಚಿನ್ ವಿಶ್ವನಾಥ್ (Sachin Vishwanath) ಜೊತೆ ಎಂಗೇಜ್ ಆಗಿದ್ದಾರೆ.

    ಕುಟುಂಬಸ್ಥರು ಸೂಚಿಸಿದ ವರನ ಜೊತೆ ಜನವರಿಯಲ್ಲಿ ಶಿಲ್ಪಾ ಅವರ ನಿಶ್ಚಿತಾರ್ಥ ನೆರವೇರಿದೆ. ಪ್ರೇಮಿಗಳ ದಿನ ಫೆ.14ರಂದು ತಮ್ಮ ಎಂಗೇಜ್‌ಮೆಂಟ್ ವೀಡಿಯೋ ಶೇರ್ ಮಾಡಿಕೊಳ್ಳುವ ಸಿಹಿಸುದ್ದಿ ನೀಡಿದ್ದಾರೆ. ಶಿಲ್ಪಾ- ಸಚಿನ್ ಅವರದ್ದು ಪಕ್ಕಾ ಅರೆಂಜ್ ಮ್ಯಾರೇಜ್ ಆಗಿದೆ.

    ಸಚಿನ್ ವಿಶ್ವನಾಥ್ ಅವರು ಲಾಯರ್ (Advocate) ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯದಲ್ಲೇ ಶಿಲ್ಪಾ ಅಯ್ಯರ್- ಸಚಿನ್ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಇನ್ನೂ ಶಿಲ್ಪಾ ಅವರ ಎಂಗೇಜ್‌ಮೆಂಟ್‌ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡ್ತಿದ್ದು, Classy Captures ಅವರ ಕ್ಯಾಮೆರಾ ಕಣ್ಣಲ್ಲಿ ಸುಂದರ ಫೋಟೋಗಳು ಸೆರೆಯಾಗಿದೆ. ಇದನ್ನೂ ಓದಿ: ಮಲಯಾಳಂ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾದ ರಾಜ್ ಬಿ ಶೆಟ್ಟಿ

    ಸುದ್ದಿ ನಿರೂಪಕಿಯಾಗಿ ಗುರುತಿಸಿಕೊಂಡಿದ್ದ ಶಿಲ್ಪಾ ಅವರು ಇದೀಗ ಕಿರುತೆರೆಯಲ್ಲಿ ನಟಿಯಾಗಿ ಛಾಪು ಮೂಡಿಸುತ್ತಿದ್ದಾರೆ. ಸೀರಿಯಲ್ ಮತ್ತು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಸ್ತುತ `ಒಲವಿನ ನಿಲ್ದಾಣ’ ಸೀರಿಯಲ್‌ನಲ್ಲಿ ಶಿಲ್ಪಾ ನಟಿಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k