Tag: jote joteyali

  • ಅನಿರುದ್ಧ ಅವರನ್ನು ತುಳಿಯುವ ಪ್ರಯತ್ನ ಮಾಡಲಾಗುತ್ತಿದೆ: ಗರಂ ಆದ ಮಹಿಳಾ ಅಭಿಮಾನಿಗಳು

    ಅನಿರುದ್ಧ ಅವರನ್ನು ತುಳಿಯುವ ಪ್ರಯತ್ನ ಮಾಡಲಾಗುತ್ತಿದೆ: ಗರಂ ಆದ ಮಹಿಳಾ ಅಭಿಮಾನಿಗಳು

    ಜೊತೆ ಜೊತೆಯಲಿ ಧಾರಾವಾಹಿಯಿಂದ ಅನಿರುದ್ಧ ಅವರನ್ನು ಕೈ ಬಿಟ್ಟಿದ್ದನ್ನು ಅನಿರುದ್ಧ ಮಹಿಳಾ ಅಭಿಮಾನಿಗಳ ಸಂಘ ಖಂಡಿಸಿದೆ. ಮಂಗಳವಾರ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಮಾಧ್ಯಮಗೋಷ್ಠಿ ಆಯೋಜನೆ ಮಾಡಿದ್ದ ತಂಡದ ಸದಸ್ಯರು. ಬೇಕು ಅಂತಾನೇ ಅನಿರುದ್ಧ ಅವರನ್ನು ಧಾರಾವಾಹಿ ತಂಡ ಕೈ ಬಿಟ್ಟಿದೆ ಎಂದು ಆರೋಪಿಸಿದರು. ಅನಿರುದ್ಧ ಅವರ ಜನಪ್ರಿಯತೆಯನ್ನು ಸಹಿಸಿಕೊಳ್ಳುವುದಕ್ಕೆ ಆಗದೇ ಈ ರೀತಿ ಮಾಡಲಾಗುತ್ತಿದೆ ಎನ್ನುವ ಮಾತುಗಳನ್ನೂ ಆಡಿದರು.

    ಅನಿರುದ್ಧ ಮತ್ತು ಜೊತೆ ಜೊತೆಯಲಿ ನಿರ್ಮಾಪಕ ಆರೂರು ಜಗದೀಶ್ ಅವರ ಮಧ್ಯೆ ಮುಸುಕಿನ ಗುದ್ದಾಟ ಇರುವುದಂತೂ ನಿಜ. ಆರೂರು ಜಗದೀಶ್ ಅವರೇ ಮಾಧ್ಯಮಗಳ ಮುಂದೆ ಬಂದು ಹೇಳಿಕೊಂಡಂತೆ, ಹಲವಾರು ರೀತಿಯ ತೊಂದರೆಗಳನ್ನು ಅನಿರುದ್ಧ ಕೊಟ್ಟಿದ್ದಾರಂತೆ. ಆರೂರು ಜಗದೀಶ್ ಅವರ ಆರೋಪಕ್ಕೂ ಅನಿರುದ್ಧ ಉತ್ತರ ನೀಡಿದ್ದಾರೆ. ನಿರ್ಮಾಪಕರಿಗೆ ತೊಂದರೆ ಕೊಡುವಂತಹ ಯಾವುದೇ ಕೆಲಸ ಮಾಡಿಲ್ಲ. ಹಾಗಾಗಿ ಮಕ್ಕಳ ಮೇಲೆ ಆಣೆ ಪ್ರಮಾಣ ಮಾಡಿ ಎಂದು ಹೇಳಿದ್ದರು. ಇದನ್ನೂ ಓದಿ:ಬಿಗ್‌ ಬಾಸ್: ನಂದು ವಿರುದ್ಧ ಜಯಶ್ರೀ ಆರಾಧ್ಯ ಫುಲ್ ಗರಂ

    ಮಾಧ್ಯಮಗೋಷ್ಠಿ ನಂತರ ಅನಿರುದ್ಧ ಮತ್ತು ಆರೂರು ಜಗದೀಶ್ ಸುಮ್ಮನಾಗಿದ್ದರೂ, ಮಹಿಳಾ ಅಭಿಮಾನಿಗಳು ಮಾತ್ರ ಸುಮ್ಮನಾಗಿಲ್ಲ. ಮತ್ತೆ ಅನಿರುದ್ಧ ಅವರನ್ನೇ ಧಾರಾವಾಹಿಯಲ್ಲಿ ಮುಂದುವರೆಸಿ ಎಂದು ವಾಹಿನಿಗೆ ಕೇಳಿಕೊಂಡಿದ್ದಾರೆ. ಅನಿರುದ್ಧ ಅವರ ವಿರುದ್ಧ ನಡೆಯುತ್ತಿರುವ ಷಡ್ಯಂತ್ರವನ್ನು ವಾಹಿನಿಯು ಗಮನಿಸಬೇಕು ಎಂದು ಮಹಿಳಾ ಅಭಿಮಾನಿಗಳು ಮಧ್ಯಮ ಗೋಷ್ಠಿಯಲ್ಲಿ ಮನವಿ ಮಾಡಿದರು.

    Live Tv
    [brid partner=56869869 player=32851 video=960834 autoplay=true]

  • ‘ಜೊತೆ ಜೊತೆಯಲಿ’ ಆರ್ಯವರ್ಧನ್ ಪಾತ್ರವನ್ನು ಮಾಜಿ ಸಚಿವ ಸಿ.ಟಿ. ರವಿಗೆ ಕೊಡಿ: ನೆಟ್ಟಿಗರ ಆಗ್ರಹ

    ‘ಜೊತೆ ಜೊತೆಯಲಿ’ ಆರ್ಯವರ್ಧನ್ ಪಾತ್ರವನ್ನು ಮಾಜಿ ಸಚಿವ ಸಿ.ಟಿ. ರವಿಗೆ ಕೊಡಿ: ನೆಟ್ಟಿಗರ ಆಗ್ರಹ

    ಕನ್ನಡದ ಜನಪ್ರಿಯ ಧಾರಾವಾಹಿ ಜೊತೆ ಜೊತೆಯಲಿಯ ಆರ್ಯವರ್ಧನ್ ಪಾತ್ರಕ್ಕೆ ದಿನಕ್ಕೊಂದು ಹೆಸರು ಕೇಳಿ ಬರುತ್ತಿದೆ. ಸೀರಿಯಲ್ ನಿಂದ ಅನಿರುದ್ಧ ಹೊರಬಿದ್ದ ನಂತರ, ಆ ಪಾತ್ರವನ್ನು ಯಾರಿಂದ ಮಾಡಿಸಬೇಕು ಎನ್ನುವ ತಲೆಬಿಸಿ ನಿರ್ಮಾಪಕರಿಗೆ ಶುರುವಾಗಿದೆ. ಅನೂಪ್ ಭಂಡಾರಿ, ಸುನೀಲ್ ಪುರಾಣಿಕ್, ಹರೀಶ್ ರಾಜ್ ಹೀಗೆ ಅನೇಕ ಕಲಾವಿದರ ಹೆಸರು ಕೇಳಿ ಬರುತ್ತಿವೆ. ಈ ನಡುವೆ ಆರ್ಯವರ್ಧನ್ ಪಾತ್ರವನ್ನು ಮಾಜಿ ಸಚಿವ ಸಿ.ಟಿ.ರವಿ ಅವರಿಗೆ ಯಾಕೆ ಕೊಡಬಾರದು ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.

    ಸಿ.ಟಿ. ರವಿ ಅವರು ಈವರೆಗೂ ಯಾವುದೇ ಧಾರಾವಾಹಿ, ಸಿನಿಮಾದಲ್ಲಿ ನಟಿಸದೇ ಇದ್ದರೂ, ಅವರ ಲುಕ್ ಆರ್ಯವರ್ಧನ್ ಪಾತ್ರಧಾರಿಯನ್ನು ಹೋಲುತ್ತದೆ. ಹಾಗಾಗಿ ಸಿ.ಟಿ. ರವಿ ಅವರಿಗೆ ಅವಕಾಶ ಕೊಡಿ ಎಂದು ಅನೇಕರು ಆಗ್ರಹಿಸಿದ್ದಾರೆ. ಇದೊಂದು ರೀತಿಯಲ್ಲಿ ತಮಾಷೆ ಅನಿಸಿದರೂ, ಆರ್ಯವರ್ಧನ್ ಪಾತ್ರವನ್ನು ಅನೇಕರು ಸಿ.ಟಿ ರವಿ ಅವರಲ್ಲಿ ಕಾಣುತ್ತಿದ್ದಾರೆ. ಅಲ್ಲದೇ, ಅನಿರುದ್ಧ ಅವರಂತೆ ಗೆಟಪ್ ಹೊಂದಿರುವ ರವಿ ಅವರ ಫೋಟೋವನ್ನು ಹಲವರು ಹಾಕಿದ್ದಾರೆ.  ಇದನ್ನೂ ಓದಿ:ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣನ ಹುಡುಕಿಕೊಂಡು ಬಂತು ಮತ್ತೊಂದು ಬಾಲಿವುಡ್ ಸಿನಿಮಾ

    ನಿರ್ಮಾಪಕರಿಗೂ ಮತ್ತು ಅನಿರುದ್ಧ ಅವರಿಗೆ ವೈಮನಸ್ಸಿನ ಹಿನ್ನೆಲೆಯಲ್ಲಿ ಧಾರಾವಾಹಿಯಿಂದ ಅನಿರುದ್ಧ ಅವರನ್ನು ಕೈ ಬಿಡಲಾಗಿದೆ. ಈ ನಡೆಯ ಬಗ್ಗೆಯೂ ಅನೇಕರು ಕಾಮೆಂಟ್ ಮಾಡಿದ್ದಾರೆ. ಪಾತ್ರಕ್ಕೆ ಜೀವ ತುಂಬಿರುವ ಅನಿರುದ್ಧ ಅವರಿಗೆ ಮತ್ತೆ ಯಾಕೆ ಅವಕಾಶ ನೀಡಬಾರದು ಎಂದು ಹಲವರು ಕೇಳಿದ್ದಾರೆ. ಎಲ್ಲ ವೈಮನಸ್ಸು ಮರೆತು ಮತ್ತೆ ಒಂದಾಗಲಿ ಎಂದೂ ಹಾರೈಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ಜೊತೆ ಜೊತೆಯಲಿ’ ಅನಿರುದ್ಧ ಪಾತ್ರಕ್ಕೆ ಹೆಸರಾಂತ ನಟ ಸುನೀಲ್ ಪುರಾಣಿಕ್ ಹೆಸರು

    ‘ಜೊತೆ ಜೊತೆಯಲಿ’ ಅನಿರುದ್ಧ ಪಾತ್ರಕ್ಕೆ ಹೆಸರಾಂತ ನಟ ಸುನೀಲ್ ಪುರಾಣಿಕ್ ಹೆಸರು

    ಜೊತೆ ಜೊತೆಯಲಿ ಧಾರಾವಾಹಿಯಿಂದ ಅನಿರುದ್ಧ ಅವರನ್ನು ಹೊರಗೆ ಕಳುಹಿಸಿದ ನಂತರ, ಅವರು ನಿರ್ವಹಿಸುತ್ತಿದ್ದ ಆರ್ಯವರ್ಧನ್ ಪಾತ್ರಕ್ಕೆ ಹಲವು ಬಗೆಯ ನಟರ ಹೆಸರು ಕೇಳಿ ಬರುತ್ತಿವೆ. ಈ ಹಿಂದೆ ನಿರ್ದೇಶಕ ಅನೂಪ್ ಭಂಡಾರಿ ಈ ಪಾತ್ರವನ್ನು ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಧಾರಾವಾಹಿ ತಂಡ ಅವರನ್ನು ಸಂಪರ್ಕಿಸಿತ್ತು. ಆದರೆ, ನಟಿಸಲು ಅನೂಪ್ ನಿರಾಕರಿಸಿದ್ದಾರೆ. ಈ ಕುರಿತು ಅನೂಪ್ ವಿವರಣೆಯನ್ನೂ ನೀಡಿದ್ದಾರೆ.

    ವಿಕ್ರಾಂತ್ ರೋಣ ಸಿನಿಮಾದ ನಂತರ ಮತ್ತೊಂದು ಚಿತ್ರವನ್ನು ಅನೂಪ್ ಕೈಗೆತ್ತಿಕೊಂಡಿದ್ದು, ಹಾಗಾಗಿ ಧಾರಾವಾಹಿಯಲ್ಲಿ ನಟಿಸಲಾರೆ ಎಂದು ಹೇಳಿದ್ದಾರೆ. ಇವರು ನಟಿಸಲು ನಿರಾಕರಿಸುತ್ತಿದ್ದಂತೆಯೇ ಧಾರಾವಾಹಿ ತಂಡ ಸುನೀಲ್ ಪುರಾಣಿಕ್ ಅವರನ್ನು ಆಯ್ಕೆ ಮಾಡಲು ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಧಾರಾವಾಹಿ ಮುಂದುವರೆದ ಕಥೆ ಮತ್ತು ಸುನೀಲ್ ಪುರಾಣಿಕ್ ಹೆಸರನ್ನು ವಾಹಿನಿಗೆ ಸೂಚಿಸಿದ್ದು, ವಾಹಿನಿಯು ಅಂತಿಮ ನಿರ್ಧಾರ ತಗೆದುಕೊಳ್ಳಬೇಕಿದೆ. ಇದನ್ನೂ ಓದಿ:ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣನ ಹುಡುಕಿಕೊಂಡು ಬಂತು ಮತ್ತೊಂದು ಬಾಲಿವುಡ್ ಸಿನಿಮಾ

    ಸುನೀಲ್ ಪುರಾಣಿಕ್ ಒಳ್ಳೆಯ ನಟ. ಅದಲ್ಲೇ ಈ ಪಾತ್ರವನ್ನು ಅವರು ಸಮರ್ಥವಾಗಿ ನಿಭಾಯಿಸಬಲ್ಲರು. ಲುಕ್ ಕೂಡ ಅನಿರುದ್ಧ ರೀತಿಯಲ್ಲೇ ಕಾಣುತ್ತದೆ. ಈ ಕಾರಣದಿಂದಾಗಿ ಧಾರಾವಾಹಿಯ ನಿರ್ಮಾಪಕರು ಸುನೀಲ್ ಪುರಾಣಿಕ್ ಅವರ ಹೆಸರನ್ನೂ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೆರಡು ದಿನಗಳಲ್ಲಿ ನಟರು ಫಿಕ್ಸ್ ಆಗಲಿದ್ದಾರೆ ಎನ್ನುತ್ತಿದೆ ಧಾರಾವಾಹಿ ತಂಡ.

    Live Tv
    [brid partner=56869869 player=32851 video=960834 autoplay=true]

  • ಜೊತೆ ಜೊತೆಯಲಿ ಆರ್ಯವರ್ಧನ್ ಪಾತ್ರ ನಾನು ಮಾಡಲ್ಲ, ಆಫರ್ ಬಂದಿದ್ದು ನಿಜ: ಅನೂಪ್ ಭಂಡಾರಿ

    ಜೊತೆ ಜೊತೆಯಲಿ ಆರ್ಯವರ್ಧನ್ ಪಾತ್ರ ನಾನು ಮಾಡಲ್ಲ, ಆಫರ್ ಬಂದಿದ್ದು ನಿಜ: ಅನೂಪ್ ಭಂಡಾರಿ

    ಜೊತೆ ಜೊತೆಯಲಿ ಧಾರಾವಾಹಿಗೆ ಸಂಬಂಧಿಸಿದಂತೆ ದಿನಕ್ಕೊಂದು ಹೊಸ ಹೊಸ ಸುದ್ದಿಗಳು ಬರುತ್ತಿವೆ. ಈ ಧಾರಾವಾಹಿಯಿಂದ ಆರ್ಯವರ್ಧನ್ ಪಾತ್ರಧಾರಿ ಅನಿರುದ್ಧ ಅವರನ್ನು ಕೈ ಬಿಡುತ್ತಿದ್ದಂತೆಯೇ ಆ ಪಾತ್ರವನ್ನು ಯಾರು ಮಾಡಲಿದ್ದಾರೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿತ್ತು. ಸಡನ್ನಾಗಿ ಕನ್ನಡದ ಹೆಸರಾಂತ ನಿರ್ದೇಶಕ ಅನೂಪ್ ಭಂಡಾರಿ ಅವರ ಹೆಸರು ಕೇಳಿ ಬಂದಿತ್ತು. ಎಂದೂ ನಟನೆಯನ್ನೇ ಮಾಡದ ಅನೂಪ್ ಗೆ ಇಂಥದ್ದೊಂದು ಆಫರ್ ಹೋಗಿದ್ದು ನಿಜವಾ ಎನ್ನುವ ಅನುಮಾನ ಕೂಡ ಮೂಡಿತ್ತು.

    ವಿಕ್ರಾಂತ್ ರೋಣ ಸಿನಿಮಾ ಸಕ್ಸಸ್ ಬೆನ್ನಲ್ಲೇ ಮತ್ತೊಂದು ಚಿತ್ರಕ್ಕೆ ತಯಾರಿ ನಡೆಸಿದಿರುವ ಅನೂಪ್, ಈ ಪಾತ್ರವನ್ನು ಒಪ್ಪಿಕೊಂಡು ಮಾಡುತ್ತಾರೆ ಎನ್ನುವ ಚರ್ಚೆ ಕೂಡ ಶುರುವಾಗಿತ್ತು. ಅನೂಪ್ ಮುಖ, ಗಡ್ಡ, ಅವರ ಲುಕ್ ಥೇಟ್ ಅನಿರುದ್ಧ ರೀತಿಯಲ್ಲೇ ಕಾಣುವುದರಿಂದ ಧಾರಾವಾಹಿ ತಂಡವು ಅನೂಪ್ ಅವರನ್ನು ಸಂಪರ್ಕಿಸಬಹುದು ಎಂದೂ ಹೇಳಲಾಗಿತ್ತು. ಈಗ ಅದೆಲ್ಲವೂ ನಿಜವಾಗಿದೆ. ಧಾರಾವಾಹಿ ತಂಡ ತಮ್ಮನ್ನು ಸಂಪರ್ಕಿಸುವ ವಿಚಾರವನ್ನು ಅನೂಪ್ ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ:ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣನ ಹುಡುಕಿಕೊಂಡು ಬಂತು ಮತ್ತೊಂದು ಬಾಲಿವುಡ್ ಸಿನಿಮಾ

    ಜೊತೆ ಜೊತೆಯಲಿ ಧಾರಾವಾಹಿ ತಂಡ ನನ್ನನ್ನು ಸಂಪರ್ಕಿಸಿದ್ದು ನಿಜ. ಆದರೆ, ನಾನು ಆ ಆಫರ್ ಅನ್ನು ನಿರಾಕರಿಸಿದೆ. ಈಗಾಗಲೇ ಹೊಸ ಸಿನಿಮಾ ಮಾಡುವ ತಯಾರಿ ನಡೆಸಿದ್ದೇನೆ. ಇಂತಹ ವೇಳೆಯಲ್ಲಿ ನಾನು ಧಾರಾವಾಹಿ ಒಪ್ಪಿಕೊಂಡರೆ, ನನ್ನ ಚಿತ್ರಕ್ಕೆ ಹಿನ್ನೆಡೆ ಆಗುತ್ತದೆ. ಹಾಗಾಗಿ ನಾನು ಈ ಧಾರಾವಾಹಿಯಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದೇನೆ ಎನ್ನುತ್ತಾರೆ ಅನೂಪ್ ಭಂಡಾರಿ.

    Live Tv
    [brid partner=56869869 player=32851 video=960834 autoplay=true]

  • ಆರ್ಯವರ್ಧನ್ ಪಾತ್ರಕ್ಕೆ ಅನಿರುದ್ಧ ಪಡೆದುಕೊಳ್ಳುತ್ತಿದ್ದ ಸಂಭಾವನೆ ಬಹಿರಂಗ

    ಆರ್ಯವರ್ಧನ್ ಪಾತ್ರಕ್ಕೆ ಅನಿರುದ್ಧ ಪಡೆದುಕೊಳ್ಳುತ್ತಿದ್ದ ಸಂಭಾವನೆ ಬಹಿರಂಗ

    ಟ ಅನಿರುದ್ಧ ಅವರು ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ನಟಿಸಲು ಪಡೆಯುತ್ತಿದ್ದ ಸಂಭಾವನೆ ಬಹಿರಂಗವಾಗಿದೆ. ಜೀ ವಾಹಿನಿಯಲ್ಲೇ ಇವರು ಅತೀ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ಕಲಾವಿದ ಎನ್ನುವ ಸುದ್ದಿಯೂ ಹೊರ ಬಿದ್ದಿದೆ. ಜೊತೆ ಜೊತೆಯಲಿ ಧಾರಾವಾಹಿ ಶುರುವಾದಾಗ ಒಂದು ಸಂಭಾವನೆ ಪಡೆಯುತ್ತಿದ್ದ ಅನಿರುದ್ಧ, ಕೋವಿಡ್ ವೇಳೆಯಲ್ಲಿ ಆ ಸಂಭಾವನೆಯನ್ನು ಹೆಚ್ಚಿಸಿಕೊಂಡರು ಎನ್ನುತ್ತವೆ ಆಪ್ತ ಮೂಲಗಳು.

    ಜೊತೆ ಜೊತೆಯಲಿ ಧಾರಾವಾಹಿ ಶುರುವಾಗುವಾಗ ನಿರ್ಮಾಪಕರ ಜೊತೆ ಒಪ್ಪಂದ ಮಾಡಿಕೊಂಡಿದ್ದು ದಿನಕ್ಕೆ 25 ಸಾವಿರ ರೂಪಾಯಿ ಸಂಭಾವನೆಯಂತೆ. ಕೋವಿಡ್ ವೇಳೆಯಲ್ಲಿ 38 ಸಾವಿರ ರೂಪಾಯಿ ಪಡೆಯುತ್ತಿದ್ದರು ಎಂದು ಹೇಳಲಾಗುತ್ತಿದೆ. ಈ ಪ್ರಮಾಣದ ಸಂಭಾವನೆಯನ್ನು ಪಡೆಯುತ್ತಿದ್ದ ಬೆರಳೆಣಿಕೆಯ ಕಲಾವಿದರಲ್ಲಿ ಇವರೂ ಒಬ್ಬರು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಬಾಲಿವುಡ್ ರಾಧೆ ಆಲಿಯಾ ಭಟ್ ಸಂಭಾವನೆ ಕೇಳಿದ್ರೆ ಶಾಕ್ ಆಗುತ್ತೀರಾ!

    ಅನಿರುದ್ಧ ಅವರ ಸಂಭಾವನೆ ವಿಚಾರದಲ್ಲಿ ನಿರ್ಮಾಣ ಸಂಸ್ಥೆಯಾಗಲಿ ಅಥವಾ ಅನಿರುದ್ಧ ಆಗಲಿ ಬಹಿರಂಗವಾಗಿ ಹೇಳಿಕೊಳ್ಳದೇ ಇದ್ದರೂ, ನಂಬಲರ್ಹ ಮೂಲಗಳ ಪ್ರಕಾರ ಸದ್ಯ 38 ಸಾವಿರ ರೂಪಾಯಿ ಸಂಭಾವನೆಯನ್ನು ಅವರು ಪಡೆದುಕೊಳ್ಳುತ್ತಿದ್ದರು ಎಂದು ಹೇಳಲಾಗುತ್ತಿದೆ. ಸಂಭಾವನೆಯ ವಿಚಾರದಲ್ಲೂ ನಿರ್ಮಾಪಕರಿಗೆ ಮತ್ತು ಅನಿರುದ್ಧ ಅವರಿಗೆ ಮನಸ್ತಾಪ ಆಗಿತ್ತು ಎನ್ನುವುದನ್ನು ಸ್ವತಃ ನಿರ್ಮಾಪಕರೇ ಒಪ್ಪಿಕೊಂಡಿದ್ದಾರೆ.

    `Live Tv
    [brid partner=56869869 player=32851 video=960834 autoplay=true]

  • ಜೊತೆ ಜೊತೆಯಲಿ ಸೀರಿಯಲ್ ಗಿಂತ ಮುಂಚೆನೇ ನಾನು ಹೀರೋ: ನಟ ಅನಿರುದ್ಧ

    ಜೊತೆ ಜೊತೆಯಲಿ ಸೀರಿಯಲ್ ಗಿಂತ ಮುಂಚೆನೇ ನಾನು ಹೀರೋ: ನಟ ಅನಿರುದ್ಧ

    ಟ ಅನಿರುದ್ಧ ವಿರುದ್ಧ ಜೊತೆ ಜೊತೆಯಲಿ ಧಾರಾವಾಹಿ ನಿರ್ಮಾಪಕ ಆರೂರು ಜಗದೀಶ್ ಮಾಡಿದ ಪ್ರತಿ ಆರೋಪಕ್ಕೆ ಅನಿರುದ್ಧ ಉತ್ತರ ಕೊಡುತ್ತಿದ್ದಾರೆ. ಜೊತೆ ಜೊತೆಯಲಿ ಧಾರಾವಾಹಿಯಿಂದ ಅವರಿಗೆ ದೊಡ್ಡಮಟ್ಟದಲ್ಲಿ ಹೆಸರು ಬಂತು, ಫ್ಯಾನ್ಸ್ ಹುಟ್ಟಿಕೊಂಡರು. ಹೆಸರು ಬರುತ್ತಿದ್ದಂತೆಯೇ ಕಿರಿಕಿರಿ ಮಾಡುವುದಕ್ಕೆ ಶುರು ಮಾಡಿದರು ಎಂದು ಆರೂರು ಜಗದೀಶ್ ಮಾಧ್ಯಮಗಳ ಜೊತೆ ನೋವನ್ನು ಹಂಚಿಕೊಂಡಿದ್ದರು.

    ಈ ಮಾತಿಗೆ ಉತ್ತರ ನೀಡಿರುವ ಅನಿರುದ್ಧ, ನಾನು ರಂಗಭೂಮಿಯಿಂದ ಬಂದವನು. ಯಾವತ್ತೂ ಹೆಸರಿನ ಹಿಂದೆ ಹೋದವನು ಅಲ್ಲ. ಜೊತೆ ಜೊತೆಯಲಿ ಧಾರಾವಾಹಿಗಿಂತ ಮುಂಚೆಯೇ ನಾನು ಹೀರೋ ಆದವನು. ಆಗಲೂ ಫ್ಯಾನ್ಸ್ ಇದ್ದರು. ಏಕಾಏಕಿ ಫೇಮಸ್ ಆದವನೂ ಅಲ್ಲ. ಹಂತಹಂತವಾಗಿ ಬೆಳೆಯುತ್ತಾ ಬಂದಿದ್ದೇನೆ. ಯಾವತ್ತೂ ನಾನು ಯಾರಿಗೂ ಕಿರಿಕಿರಿ ಮಾಡಿಲ್ಲ. ಆರೂರು ಜಗದೀಶ್ ಅವರು ಸಲ್ಲದ ಆರೋಪ ಮಾಡುತ್ತಿದ್ದಾರೆ ಎನ್ನುತ್ತಾರೆ. ಇದನ್ನೂ ಓದಿ:ಬಾಲಿವುಡ್ ರಾಧೆ ಆಲಿಯಾ ಭಟ್ ಸಂಭಾವನೆ ಕೇಳಿದ್ರೆ ಶಾಕ್ ಆಗುತ್ತೀರಾ!

    ಜೊತೆ ಜೊತೆಯಲಿ ಧಾರಾವಾಹಿ ಅನಿರುದ್ಧ ಅವರ ವೃತ್ತಿ ಜೀವನಕ್ಕೆ ದೊಡ್ಡ ಬ್ರೇಕ್ ನೀಡಿದ್ದು ಸತ್ಯ. ಫ್ಯಾನ್ಸ್ ಕೂಡ ಹೆಚ್ಚಾಗಿರುವುದು ನಿಜ. ಆದರೂ, ಅನಿರುದ್ಧ ಅವರೇ ಧಾರಾವಾಹಿಯಲ್ಲಿ ಇರಬೇಕಿತ್ತು ಎನ್ನುವುದು ಅಭಿಮಾನಿಗಳ ಆಸೆಯ. ಆದರೆ, ಎಲ್ಲವೂ ಕೈ ಮೀರಿ ಹೋಗಿದೆ. ಅನಿರುದ್ಧ ಅವರನ್ನು ಕೈಬಿಟ್ಟು ಬೇರೆ ಕಲಾವಿದನ ಆಯ್ಕೆ ನಡೆಯುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ‘ಜೊತೆ ಜೊತೆಯಲಿ’ ರಾದ್ಧಾಂತ ಅನಿರುದ್ಧ ಜೊತೆ ನಟಿಸ್ತಿದ್ದ ಮೇಘಾ ಶೆಟ್ಟಿ ಮೌನ

    ‘ಜೊತೆ ಜೊತೆಯಲಿ’ ರಾದ್ಧಾಂತ ಅನಿರುದ್ಧ ಜೊತೆ ನಟಿಸ್ತಿದ್ದ ಮೇಘಾ ಶೆಟ್ಟಿ ಮೌನ

    ಜೊತೆ ಜೊತೆಯಲಿ ಧಾರಾವಾಹಿಯಿಂದ ಅನಿರುದ್ಧ ಕೈ ಬಿಟ್ಟ ನಂತರ, ಇದೇ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿರುವ ಮೇಘಾ ಶೆಟ್ಟಿ ಪ್ರತಿಕ್ರಿಯೆ ಏನು ಎನ್ನುವುದು ಎಲ್ಲರ ಕುತೂಹಲಕ್ಕೂ ಕಾರಣವಾಗಿದೆ. ಅನಿರುದ್ಧ ಈ ಧಾರಾವಾಹಿಯ ನಾಯಕನಾದರೆ, ಮೇಘಾ ಶೆಟ್ಟಿ ನಾಯಕಿ. ಅಲ್ಲದೇ, ಈ ಹಿಂದೆ ಮೇಘಾ ಶೆಟ್ಟಿ ಅವರನ್ನೂ ಧಾರಾವಾಹಿಯಿಂದ ಕೈ ಬಿಡುವ ವಿಚಾರದಲ್ಲಿ ಮಧ್ಯಸ್ತಿಕೆ ವಹಿಸಿ, ಅವರನ್ನು ಮತ್ತೆ ಧಾರಾವಾಹಿಯಲ್ಲಿ ಇರುವಂತೆ ಮಾಡಿದ್ದು ಅನಿರುದ್ಧ. ಹಾಗಾಗಿ ಮೇಘಾ ಶೆಟ್ಟಿ ಪ್ರತಿಕ್ರಿಯೆ ಮಹತ್ವ ಪಡೆದುಕೊಂಡಿದೆ.

    ಆದರೆ, ಮೇಘಾ ಶೆಟ್ಟಿ ಎರಡು ದಿನಗಳಿಂದ ನಾನು ಸುದ್ದಿಯನ್ನೇ ಗಮನಿಸಿಲ್ಲ ಎಂದು ಹೇಳುವ ಮೂಲಕ ಜಾರಿಕೊಂಡಿದ್ದಾರೆ. ಸ್ವಲ್ಪ ದಿನದಲ್ಲಿ ಎಲ್ಲವೂ ಸರಿ ಹೋಗಲಿದೆ ಎನ್ನುವ ಆಶಾ ಭಾವನೆಯನ್ನೂ ಅವರು ವ್ಯಕ್ತ ಪಡಿಸಿದ್ದಾರೆ. ಉಳಿದಂತೆ ಅವರು ಮೌನಕ್ಕೆ ಜಾರಿದ್ದಾರೆ. ಜೊತೆ ಜೊತೆಯಲಿ ಧಾರಾವಾಹಿಯ ಅನು ಸಿರಿಮನೆ ಪಾತ್ರದ ಮೂಲಕ ಮೇಘಾ ಶೆಟ್ಟಿ ಫೇಮಸ್ ಆಗಿದ್ದಾರೆ. ಈ ಧಾರಾವಾಹಿಯೇ ಅವರಿಗೆ ಹಲವು ಸಿನಿಮಾಗಳಿಗೆ ಅವಕಾಶ ತಂದುಕೊಟ್ಟಿದೆ. ಇದನ್ನೂ ಓದಿ: ನಾಲ್ಕು ಗೋಡೆ ಮ‌ಧ್ಯೆ ಜಗಳವಾಡಿರೋದು, ಬೀದಿಗೆ ತರಬಾರದು: ಅನಿರುದ್ಧ್

    ಮಾಧ್ಯಮಗಳ ಜೊತೆ ಮಾತನಾಡಿರುವ ಅನಿರುದ್ಧ, ಧಾರಾವಾಹಿ ತಂಡ ಅನೇಕ ಕಲಾವಿದರು ತಮಗೆ ಕಾಲ್ ಮಾಡಿ ಬೆಂಬಲ ವ್ಯಕ್ತ ಪಡಿಸಿದ್ದಾರೆ ಎಂದು ಹೇಳಿದ್ದಾರೆ. ಮತ್ತೆ ಈ ಧಾರಾವಾಹಿಯಲ್ಲಿ ನಟಿಸಲು ನಾನು ಸಿದ್ಧ ಎಂದೂ ಹೇಳಿದ್ದಾರೆ. ಆದರೆ, ಮತ್ತೆ ಅವರನ್ನು ಧಾರಾವಾಹಿಗೆ ಕರೆತರುವುದಿಲ್ಲ ಎಂದು ನಿರ್ಮಾಪಕರು ಹೇಳಿದ್ದಾರೆ. ಹೀಗಾಗಿ ಅನಿರುದ್ಧ ನಟಿಸುತ್ತಿದ್ದ ಪಾತ್ರಕ್ಕೆ ಬೇರೆ ನಟರು ಬರುವುದು ಪಕ್ಕಾ ಆಗಿದೆ. ಮೇಘಾ ಶೆಟ್ಟಿ ಅವರೇ ತಮ್ಮ ಪಾತ್ರವನ್ನು ಮುಂದುವರೆಸಿಕೊಂಡು ಹೋಗಲಿದ್ದಾರೆ ಎನ್ನುವ ಮಾಹಿತಿಯೂ ಇದೆ.

    Live Tv
    [brid partner=56869869 player=32851 video=960834 autoplay=true]

  • ನಾಲ್ಕು ಗೋಡೆ ಮ‌ಧ್ಯೆ ಜಗಳವಾಡಿರೋದು, ಬೀದಿಗೆ ತರಬಾರದು: ಅನಿರುದ್ಧ್

    ನಾಲ್ಕು ಗೋಡೆ ಮ‌ಧ್ಯೆ ಜಗಳವಾಡಿರೋದು, ಬೀದಿಗೆ ತರಬಾರದು: ಅನಿರುದ್ಧ್

    ನ್ಮುಂದೆ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಟ ಅನಿರುದ್ಧ ಇರುವುದಿಲ್ಲವೆಂದು ಜೀ ಕನ್ನಡ ವಾಹಿನಿಯೂ ಸ್ಪಷ್ಟ ಪಡಿಸಿದ ಬೆನ್ನಲ್ಲೇ ನಟ ಅನಿರುದ್ಧ್  ಪ್ರತಿಕ್ರಿಯೆ ನೀಡಿದ್ದು, ನಾಲ್ಕು ಗೋಡೆ ಮಧ್ಯೆ ಜಗಳವಾಡಿರೋದು ಬೀದಿಗೆ ತರಬಾರದು ಎಂದು ಬೇಸರ ವ್ಯಕ್ತಪಡಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕೆಲಸ ಮಾಡ್ತಿರೋ ಯಾವುದೇ ಕ್ಷೇತ್ರವಾಗಿರಬಹುದು ಅಥವಾ ಜೊತೆ ಜೊತೆಯಲಿ ಸೀರಿಯಲ್ ಸೆಟ್‍ಲ್ಲಿ ಅಹಂಕಾರ ನೋಡಿದ್ದೀರಾ, ಸೆಟ್‍ನಲ್ಲಿ ಕೆಲಸಕ್ಕಾಗಿ ಜಗಳ ಮಾಡಿದ್ದೀನಿ. ಮನುಷ್ಯನಿಗೆ ಕೋಪ ಸಹಜ. ನಾನು ಸಾಮಾಜಿಕ ಕೆಲಸ ಮಾಡುತ್ತೇನೆ. ಕಸದ ಹತ್ತಿರ ನಿಂತು ವಿಡಿಯೋ ಮಾಡಿದ್ದೀನಿ. ದುರಂಹಕಾರ ಇದ್ದಿದ್ರೆ ಈ ರೀತಿ ಮಾಡ್ತಿದ್ನಾ ಎಂದು ಪ್ರಶ್ನಿಸಿದರು.

    ಟೀಮ್ ವರ್ಕ್ ಹಾಗೂ ಜನರ ಹಾರೈಕೆ ಸಿಕ್ಕಿರೋ ಯಶಸ್ಸಾಗಿದೆ. ಇದಕ್ಕಿಂತ ಹಿಂದೆ ಸಿನಿಮಾಗಳಿಗೂ ಯಶಸ್ಸು ಸಿಕ್ಕಿದೆ. ನನ್ನ ಅಭಿನಯಕ್ಕೆ ತುಂಬಾ ಜನ ಒಳ್ಳೆಯ ಮಾತು ಹೇಳಿದ್ದಾರೆ. ಅಭಿಮಾನಿಗಳು ಪ್ರೀತಿ ತೋರಿಸುತ್ತಿದ್ದಾರೆ. ಇದಕ್ಕಿಂತ ಯಶಸ್ಸು ಬೇಕಾ, 20 ದಾಖಲೆಗಳನ್ನ ಸೃಷ್ಟಿ ಮಾಡಿದ್ದೀನಿ. ಇದು ಯಶಸ್ಸಾಗಿದೆ. ಈ ರೀತಿ ಸಾಕಷ್ಟು ಯಶಸ್ಸು ಇದೆ. ಇಂತಹ ಯಶಸ್ಸು ಕೊಟ್ಟಿರೋದು ದೇವರು ಎಂದರು. ಇದನ್ನೂ ಓದಿ:  ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಟ ಅನಿರುದ್ಧ ಇರಲ್ಲ: ವಾಹಿನಿ ಸ್ಪಷ್ಟನೆ

    ನಾನು ಶ್ರದ್ಧೆಯಿಂದ ಕೆಲಸ ಮಾಡಿದ್ದೀನಿ. ಅಭಿಮಾನಿಗಳ ಪ್ರೀತಿ, ಕುಟುಂಬದರ ಹಾರೈಕೆ ಇದೆ. ನನಗೆ ಕೆಲಸ ಸಿಕ್ಕೇ ಸಿಗುತ್ತದೆ. ನನಗೆ ಇನ್‍ಸೆಕ್ಯೂರಿಟಿ ಬರಲು ಸಾಧ್ಯವೇ ಇಲ್ಲ. ಸಿನಿಮಾಗಳಲ್ಲಿ ಕೆಲ ವರ್ಷ ಕೆಲಸ ಇರಲಿಲ್ಲ. ಅಗಲೇ ಆರಾಮಾಗಿ ಇದ್ದೇ ಇವಾಗ ಕೆಲಸ ಸಿಗಲ್ವಾ ಎಂದು ಕೇಳಿದರು.

    ಅವರು ನನ್ನ ಹತ್ತಿರ ಬಂದು ಚರ್ಚೆ ಮಾಡಬಹುದಿತ್ತು. ಅವರು ನೇರವಾಗಿ ನನ್ನ ಹತ್ತಿರ ಕೇಳಬಹುದಿತ್ತು. ಜೊತೆ ಜೊತೆಯಲಿ ತಂಡದ ಕಲಾವಿದರು ನನ್ನ ಜೊತೆ ಇದ್ದೇವೆ ಅಂತ ಹೇಳಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ‘ಜೊತೆ ಜೊತೆಯಲಿ’ ಶೂಟಿಂಗ್ ಗೆ ನಾನು ಹೋಗಲು ರೆಡಿ : ನಟ ಅನಿರುದ್ಧ

    ನಾನು ಕ್ಯಾರೆವನ್ ಕೇಳಕ್ಕೆ ಹುಚ್ಚನಾ, ಹೆಣ್ಣುಮಕ್ಕಳಿಗೋಸ್ಕರ ಕೇಳಿರೋದು. ನನ್ನ ಕೇಳದೆ ಎರಡು ವರ್ಷ ಯಾವ ಚಾನೆಲ್‍ನಲ್ಲೂ ಆ್ಯಕ್ಟ್ ಮಾಡಬಾರದು ಅಂತ ನಿರ್ಬಂಧ ಹಾಕಿದ್ದಾರೆ. ಓನ್ ಸೈಡ್ ಮಾಡ್ತಿದ್ದಾರೆ. ಭಾರತಿ ವಿಷ್ಣುವರ್ಧನ್ ಸಹ ಹೇಳಿದ್ರು, ವಿಷ್ಣುಗಾಗಿರೋದೆ ನಿನಗಾಗಿರೋದು. ಅವರದೇ ನೆನಪು ಬಂತು ಅಂದರು. ನಮ್ಮ ಕುಟುಂಬಕ್ಕೆ ಹೋರಾಟ ಹೊಸದಲ್ಲ ಎಂದು ಹೇಳಿದರು.

    Live Tv
    [brid partner=56869869 player=32851 video=960834 autoplay=true]

  • ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಟ ಅನಿರುದ್ಧ ಇರಲ್ಲ: ವಾಹಿನಿ ಸ್ಪಷ್ಟನೆ

    ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಟ ಅನಿರುದ್ಧ ಇರಲ್ಲ: ವಾಹಿನಿ ಸ್ಪಷ್ಟನೆ

    ನ್ಮುಂದೆ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಟ ಅನಿರುದ್ಧ ಇರುವುದಿಲ್ಲವೆಂದು ಜೀ ಕನ್ನಡ ವಾಹಿನಿಯೂ ಸ್ಪಷ್ಟ ಪಡಿಸಿದೆ. ಇಂದು ಸಂಜೆ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಧಾರಾವಾಹಿಯ ನಿರ್ಮಾಪಕ ಆರೂರು ಜಗದೀಶ್, ಸೀರಿಯಲ್ ನಿಂದ ಅನಿರುದ್ಧ ಅವರನ್ನು ಕೈ ಬಿಡುವ ವಿಚಾರವಾಗಿ ವಾಹಿನಿಯು ಕೂಡ ಒಪ್ಪಿಕೊಂಡಿದ್ದು, ಇನ್ಮುಂದೆ ನಮ್ಮ ಧಾರಾವಾಹಿಯಲ್ಲಿ ಅನಿರುದ್ದ ಅವರು ನಟಿಸುವುದಿಲ್ಲವೆಂದು ಸ್ಪಷ್ಟ ಪಡಿಸಿದರು.

    ಚಾನೆಲ್ ಮತ್ತು ಧಾರಾವಾಹಿ ತಂಡ ಒಪ್ಪಿದರೆ, ನಾನು ನಟಿಸಲು ಸಿದ್ಧವೆಂದು ಕೆಲ ಗಂಟೆಗಳ ಹಿಂದೆಯಷ್ಟೇ ಅನಿರುದ್ಧ ಮಾತನಾಡಿದ್ದರು. ಆದರೆ, ಈ ಮಾತಿಗೆ ವಾಹಿನಿಯಾಗಲಿ, ಧಾರಾವಾಹಿ ತಂಡವಾಗಲಿ ಮನ್ನಣೆ ನೀಡಿಲ್ಲ. ಧಾರಾವಾಹಿಯಿಂದ ಅವರನ್ನು ತಗೆದು ಹಾಕುವಂತಹ ಅಂತಿಮ ತೀರ್ಮಾನವನ್ನೇ ತಗೆದುಕೊಂಡಿದೆ. ಹಾಗಾಗಿ ಆರ್ಯವರ್ಧನ್ ಪಾತ್ರಧಾರಿ ಮುಂದಿನ ದಿನಗಳಲ್ಲಿ ಬದಲಾಗಲಿದ್ದಾರೆ. ಯಾವುದೇ ಕಾರಣಕ್ಕೂ ಈ ವಿಚಾರದಲ್ಲಿ ರಾಜಿ ಪಂಚಾಯಿತಿ ನಡೆಯುವುದಿಲ್ಲವೆಂದೂ ಆರೂರು ಜಗದೀಶ್ ಸ್ಪಷ್ಟಪಡಿಸಿದ್ದಾರೆ.

    ಇದರ ಜೊತೆಗೆ ಮತ್ತೆ ಅನಿರುದ್ಧ ವಿರುದ್ಧ ಹಲವು ಆರೋಪಗಳನ್ನು ಮಾಡಿರುವ ಜಗದೀಶ್, ‘ನಾನು ಆಸ್ಪತ್ರೆಯಲ್ಲಿ ದಾಖಲಾಗಿದ್ದಾಗ ಹೆಚ್ಚು ಹಣಕ್ಕೆ ಒತ್ತಡ ಮಾಡಿದ್ರು. ಮಹಾ ಸಂಗಮ ಎಪಿಸೋಡ್ ನಲ್ಲಿ ದೊಡ್ಡಮಟ್ಟದ ಗಲಾಟೆ ಮಾಡಿದ್ರು. ಪ್ರತಿ ಗಲಾಟೆ ಆದಾಗಲೂ ಚಾನಲ್ ಗೆ ನಾನು ಗಮನಕ್ಕೆ ತಂದಿದ್ದೇನೆ. ನನಗೆ ಸಾಕಾಗಿ ಇನ್ನು ನಾನು ಆರೋಗ್ಯ ಕೆಡಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕಾಗಿ ಅವರನ್ನು ಕೈಬಿಡುವ ನಿರ್ಧಾರ ಮಾಡಿರುವುದಾಗಿ ಹೇಳಿದರು.

    ಪತ್ರಿಕಾಗೋಷ್ಠಿಯಲ್ಲಿ ಕಿರುತೆರೆ ನಿರ್ಮಾಪಕರ ಸಂಘದ ಅಧ್ಯಕ್ಷ ಭಾಸ್ಕರ್, ಹಿರಿಯ ನಟ ಸಿಹಿಕಹಿ ಚಂದ್ರು, ವಾಹಿನಿಯ ಪ್ರತಿನಿಧಿ ಸುಧೀಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಈ ಪ್ರಕರಣವು ಈ ರೀತಿಯಲ್ಲಿ ತೊಂದರೆ ಕೊಡುವವರಿಗೆ ಮಾದರಿಯಾಗಲಿ ಎಂದರು ಸಂಘದ ಅಧ್ಯಕ್ಷ ಭಾಸ್ಕರ್.

    Live Tv
    [brid partner=56869869 player=32851 video=960834 autoplay=true]

  • ‘ಜೊತೆ ಜೊತೆಯಲಿ’ ಶೂಟಿಂಗ್ ಗೆ ನಾನು ಹೋಗಲು ರೆಡಿ : ನಟ ಅನಿರುದ್ಧ

    ‘ಜೊತೆ ಜೊತೆಯಲಿ’ ಶೂಟಿಂಗ್ ಗೆ ನಾನು ಹೋಗಲು ರೆಡಿ : ನಟ ಅನಿರುದ್ಧ

    ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರಾವಾಹಿ, ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದೆ. ಅದರಲ್ಲೂ ನಟ ಅನಿರುದ್ಧ ಅವರ ವೃತ್ತಿ ಬದುಕಿಗೆ ದೊಡ್ಡದೊಂದು ಬ್ರೇಕ್ ನೀಡಿರುವ ಧಾರಾವಾಹಿ ಕೂಡ ಇದಾಗಿದೆ. ಈ ಧಾರಾವಾಹಿಯಲ್ಲಿ ಆರ್ಯವರ್ಧನ್ ಪಾತ್ರ ಮಾಡುತ್ತಿರುವ ಅನಿರುದ‍್ಧ ಮತ್ತು ನಿರ್ಮಾಪಕ ಆರೂರು ಜಗದೀಶ್ ಪರಸ್ಪರ ಆರೋಪಗಳನ್ನು ಮಾಡಿಕೊಂಡು ಮೂರು ದಿನಗಳಿಂದ ಸುದ್ದಿಯಲ್ಲಿದ್ದಾರೆ. ಇವರ ನಡುವಿನ ಜಗಳ ಇದೀಗ ತಾರಕಕ್ಕೇರಿದೆ.

    ಅನಿರುದ್ಧ ಅವರ ವರ್ತನೆಯಿಂದ ತಮಗೆ ನೋವಾಗಿದೆ ಮತ್ತು ಅಪಾರ ನಷ್ಟವಾಗಿದೆ ಎನ್ನುವ ಕಾರಣವನ್ನು ಕೊಟ್ಟು ಧಾರಾವಾಹಿಯಿಂದ ಅನಿರುದ್ಧ ಅವರನ್ನು ಹೊರಹಾಕಲಾಗಿದೆ. ಅಲ್ಲದೇ, ಕಿರುತೆರೆ ನಿರ್ಮಾಪಕರ ಸಂಘವು ಅನಿರುದ್ಧ ಅವರಿಗೆ ಧಾರಾವಾಹಿ ಮತ್ತು ರಿಯಾಲಿಟಿ ಶೋ ನಲ್ಲಿ ಅವಕಾಶ ನೀಡಬಾರದು ಎಂದು ವಾಹಿನಿಗಳ ಮುಖ್ಯಸ್ಥರಿಗೆ ಮನವಿ ಮಾಡಿಕೊಂಡಿದೆ. ಹೀಗಾಗಿ ಅನಿರುದ್ಧ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದನ್ನೂ ಓದಿ: ಕೊನೆಗೂ ಶಿವಣ್ಣ, ಅನುಶ್ರೀ ಭೇಟಿಯಾಗಿ ಆಸೆ ಈಡೇರಿಸಿಕೊಂಡ ಕಾಫಿನಾಡು ಚಂದು

    ತಮ್ಮನ್ನು ಕಿರುತೆರೆಯಿಂದ ಬ್ಯಾನ್ ಮಾಡಿದ್ದಾರೆ ಎನ್ನುವ ವಿಷಯ ತಿಳಿಯುತ್ತಿದ್ದಂತೆಯೇ ಮಾಧ್ಯಮಗಳ ಜೊತೆ ಮಾತನಾಡಿರುವ ಅನಿರುದ್ಧ, ನಿರ್ಮಾಪಕರು ಮಾಡಿರುವ ಆರೋಪಗಳಲ್ಲಿ ಹುರುಳಿಲ್ಲ. ಸಣ್ಣಪುಟ್ಟ ಮನಸ್ತಾಪಗಳು ಆಗಿದ್ದು ನಿಜ. ಅದನ್ನು ನಾವಾಗಿಯೇ ಸರಿ ಮಾಡಿಕೊಳ್ಳಬೇಕಿತ್ತು. ಇಷ್ಟು ದೊಡ್ಡದು ಮಾಡಬಾರದು. ನಾನು ಈಗಲೂ ಧಾರಾವಾಹಿಯ ಶೂಟಿಂಗ್‌ಗೆ ಹೋಗಲು ರೆಡಿ ಇದ್ದೇನೆ. ಅವರೊಂದಿಗೆ ಮಾತನಾಡಲೂ ತಯಾರಿದ್ದೇನೆ. ಆದರೆ, ನಿರ್ಮಾಪಕ ಜಗದೀಶ್ ಆಗಲಿ, ವಾಹಿನಿಯ ಮುಖ್ಯಸ್ಥರಾಗಲಿ ನನ್ನ ಕರೆಗೆ ಸ್ಪಂದಿಸುತ್ತಿಲ್ಲ ಎಂದು ಹೇಳಿದ್ದಾರೆ. ಮತ್ತೆ ತಾವು ನಟಿಸಲು ರೆಡಿ ಇರುವುದಾಗಿ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]