Tag: Joshimath Sinking

  • ಜೋಶಿಮಠ ಮುಳುಗಡೆ – ಪ್ರತಿ ಸಂತ್ರಸ್ತ ಕುಟುಂಬಕ್ಕೆ 1.5 ಲಕ್ಷ ಪರಿಹಾರ

    ಜೋಶಿಮಠ ಮುಳುಗಡೆ – ಪ್ರತಿ ಸಂತ್ರಸ್ತ ಕುಟುಂಬಕ್ಕೆ 1.5 ಲಕ್ಷ ಪರಿಹಾರ

    ಡೆಹ್ರಾಡೂನ್: ಭೂಮಿ ಕುಸಿತದಿಂದಾಗಿ ತತ್ತರಿಸುತ್ತಿರುವ ಉತ್ತರಾಖಂಡದ (Uttarakhand) ಜೋಶಿಮಠದಲ್ಲಿ (Joshimath) ಮನೆಗಳನ್ನು ಕಳೆದುಕೊಂಡಿರುವ ಸಂತ್ರಸ್ತ ಕುಟುಂಬಗಳಿಗೆ ಅಲ್ಲಿನ ಸರ್ಕಾರ ತಲಾ 1.5 ಲಕ್ಷ ರೂ. ಪರಿಹಾರ (compensation) ನೀಡುವುದಾಗಿ ಘೋಷಿಸಿದೆ.

    ಕಳೆದ ವರ್ಷ ಡಿಸೆಂಬರ್‌ನಲ್ಲಿ ಜೋಶಿಮಠದ ಕೆಲವೆಡೆ ಬಿರುಕುಗಳು ಒಂದೊಂದಾಗಿಯೇ ಕಾಣಿಸಿಕೊಳ್ಳಲು ಪ್ರಾರಂಭಿಸಿತ್ತು. ಕೆಲವು ದಿನಗಳಲ್ಲಿ ಇದರ ತೀವ್ರತೆ ಹೆಚ್ಚಾಗಿ, ದುರಂತವಾಗಿ ಮಾರ್ಪಟ್ಟಿತು. ನಗರ ಮುಳುಗಡೆಯಾಗುವ ಭೀತಿಯಲ್ಲಿ (Joshimath Sinking) ಅಲ್ಲಿನ ನಿವಾಸಿಗಳಿದ್ದು, ಅಪಾಯದ ಸ್ಥಿತಿಯಲ್ಲಿರುವ ಕಟ್ಟಡಗಳನ್ನು ನೆಲಸಮಗೊಳಿಸಲು ಸರ್ಕಾರ ಮುಂದಾಗಿದೆ.

    ಜೋಶಿಮಠದಲ್ಲಿನ ರಸ್ತೆ, ಮನೆಗಳು ಸೇರಿದಂತೆ ಅನೇಕ ಕಡೆ ಬಿರುಕುಗಳು ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದೆ. ಅಲ್ಲಿ ವಾಸಿಸಲು ಅಪಾಯಕಾರಿ ಎಂದು ಗುರುತಿಸಲಾಗಿರುವ 600ಕ್ಕೂ ಹೆಚ್ಚು ಕಟ್ಟಡಗಳನ್ನು ನೆಲಸಮಗೊಳಿಸಲು ಸರ್ಕಾರ ಮಂಗಳವಾರ ಮುಂದಾಗಿತ್ತು. ಆದರೆ ಸ್ಥಳಿಯರು ಈ ನಡೆಗೆ ವಿರೋಧ ವ್ಯಕ್ತಪಡಿಸಿದ್ದರಿಂದ ನೆಲಸಮ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ. ಇದನ್ನೂ ಓದಿ: ಜಾನ್ಸನ್‌ & ಜಾನ್ಸನ್‌ ಬೇಬಿ ಪೌಡರ್‌ ಉತ್ಪಾದನೆ, ಮಾರಾಟಕ್ಕೆ ಬಾಂಬೆ ಹೈಕೋರ್ಟ್‌ ಅನುಮತಿ

    ಸದ್ಯಕ್ಕೆ ನಗರದ ಮಲಾರಿ ಇನ್ ಹಾಗೂ ಮೌಂಟ್ ವ್ಯೂ ಹೆಸರಿನ 2 ಹೋಟೆಲ್‌ಗಳನ್ನು ಮಾತ್ರವೇ ನೆಲಸಮ ಮಾಡಲಾಗುತ್ತಿರುವುದಾಗಿ ವರದಿಯಾಗಿದೆ. ಸರ್ಕಾರ 1 ವಾರದೊಳಗೆ ಸ್ಥಳೀಯ ಮನೆಗಳ ಸಮೀಕ್ಷೆ ನಡೆಸಿ ಬಳಿಕ ನೆಲಸಮ ಕಾರ್ಯ ಮಾಡುವ ಬಗ್ಗೆ ತೀರ್ಮಾನ ಮಾಡಲಿದೆ ಎಂದು ವರದಿಯಾಗಿದೆ.

    ಜೋಶಿಮಠ ಮುಳುಗಡೆಯ ಹಿನ್ನೆಲೆ ಅಲ್ಲಿ ಸಾವಿರಾರು ನಿವಾಸಿಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಳಿಸಲಾಗುತ್ತಿದೆ. ಉತ್ತರಾಖಂಡ ಸರ್ಕಾರ ಸಂತ್ರಸ್ತ ಕುಟುಂಬಗಳಿಗೆ 1.5 ಲಕ್ಷ ರೂ. ಪರಿಹಾರ ಘೋಷಿಸಿದೆ. ಕೆಡವಲಾಗುತ್ತಿರುವ ಹೋಟೆಲ್‌ಗಳ ಆಸ್ತಿಯ ಬಗ್ಗೆ ಸಮೀಕ್ಷೆ ನಡೆಸಿ ಪರಿಹಾರವನ್ನು ಘೋಷಿಸಲಾಗುವುದು ಎಂದು ತಿಳಿಸಲಾಗಿದೆ. ಇದನ್ನೂ ಓದಿ: ಮೆಟ್ರೋ ದುರಂತ: ತನಿಖೆ ನಡೆಸಿ ವರದಿ ಸಲ್ಲಿಸಿಲು ಐಐಎಸ್‍ಸಿಗೆ ಮನವಿ – ಮತ್ತಷ್ಟು ಅಧಿಕಾರಿಗಳ ತಲೆದಂಡ ಸಾಧ್ಯತೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಜೋಶಿಮಠದ ಅಪಾಯಕಾರಿ ಕಟ್ಟಡ ನೆಲಸಮ ಕಾರ್ಯಾಚರಣೆ ಪ್ರಾರಂಭ – 600ಕ್ಕೂ ಹೆಚ್ಚು ಕಡೆ ಗುರುತು

    ಜೋಶಿಮಠದ ಅಪಾಯಕಾರಿ ಕಟ್ಟಡ ನೆಲಸಮ ಕಾರ್ಯಾಚರಣೆ ಪ್ರಾರಂಭ – 600ಕ್ಕೂ ಹೆಚ್ಚು ಕಡೆ ಗುರುತು

    ಡೆಹ್ರಾಡೂನ್: ಮುಳುಗಡೆಯಾಗುತ್ತಿರುವ ಪಟ್ಟಣ ಎಂದೇ ಕರೆಸಿಕೊಳ್ಳುತ್ತಿರುವ ಉತ್ತರಾಖಂಡದ (Uttarakhand) ಜೋಶಿಮಠದಲ್ಲಿ (Joshimath) ತೀವ್ರವಾಗಿ ಬಿರುಕುಬಿಟ್ಟಿರುವ ಹಾಗೂ ಅಪಾಯದ ಸ್ಥಿತಿಯಲ್ಲಿರುವ ಕಟ್ಟಡಗಳನ್ನು ನೆಲಸಮಗೊಳಿಸುವ (Demolition) ಕಾರ್ಯ ಮಂಗಳವಾರದಿಂದ ಪ್ರಾರಂಭವಾಗಿದೆ.

    ಉತ್ತರಾಖಂಡದ ಜೋಶಿಮಠದಲ್ಲಿ ಎಲ್ಲೆಡೆ ಭೂಕುಸಿತಗಳು ಉಂಟಾಗುತ್ತಿದ್ದು, ಕಟ್ಟಡಗಳು ಬಿರುಕು ಬಿಡುತ್ತಿವೆ. ರಸ್ತೆಗಳಲ್ಲಿಯೂ ತೀವ್ರ ಸ್ವರೂಪದ ಬಿರುಕುಗಳು ಕಾಣಿಸಿಕೊಳ್ಳುತ್ತಿವೆ. ಕ್ಷಣ ಕ್ಷಣಕ್ಕೂ ಅಲ್ಲಿನ ಜನರು ನಗರ ಮುಳುಗಡೆಯ (Joshimath Sinking) ಭೀತಿಯಲ್ಲಿ ದಿನದೂಡುತ್ತಿದ್ದಾರೆ.

    ಈಗಾಗಲೇ ನಗರದ ಸುಮಾರು 670 ಮನೆಗಳು ಬಿರುಕುಬಿಟ್ಟಿದ್ದು, ಅವುಗಳಲ್ಲಿ ಹೆಚ್ಚಿನವುಗಳನ್ನು ನೆಲಸಮಗೊಳಿಸಲು ನಿರ್ಧರಿಸಲಾಗಿದೆ. ನೆಲಸಮಗೊಳಿಸುವಂತಹ ಕಟ್ಟಡಗಳಿಗೆ ಈಗಾಗಲೇ ಕೆಂಪು ಬಣ್ಣದ ಗುರುತುಗಳನ್ನು ಮಾಡಲಾಗಿದೆ.

    ನಗರದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ನಿವಾಸಿಗಳನ್ನು ತಾತ್ಕಾಲಿಕ ಆಶ್ರಯಗಳಿಗೆ ಕಳುಹಿಸಲಾಗುತ್ತಿದೆ. ಈಗಾಗಲೇ 678 ಕಟ್ಟಡಗಳನ್ನು ಅಸುರಕ್ಷಿತ ಎಂದು ಗುರುತಿಸಲಾಗಿದ್ದು, ಅವುಗಳನ್ನು ತೆರವುಗೊಳಿಸಲು ಪ್ರಾರಂಭಿಸಲಾಗಿದೆ. 81 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಅಗತ್ಯವಿರುವಂತಹ ಕೆಲವು ಪ್ರದೇಶಗಳನ್ನು ಸೀಲ್ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮೆಟ್ರೋ ಪಿಲ್ಲರ್ ಕುಸಿತ – ಮೃತ ಕುಟುಂಬಕ್ಕೆ 20 ಲಕ್ಷ ಪರಿಹಾರ : BMRC

    ಜೋಶಿಮಠವನ್ನು ಈಗಾಗಲೇ ವಿಪತ್ತು ಪೀಡಿತ ವಲಯವೆಂದು ಘೋಷಿಸಲಾಗಿದೆ. ಜೋಶಿಮಠ ಮತ್ತು ಸಮೀಪದ ಪ್ರದೇಶಗಳಲ್ಲಿ ನಿರ್ಮಾಣ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಜೋಶಿಮಠದ ಶೇ.30 ರಷ್ಟು ಹಾನಿಯಾಗಿದೆ ಎಂದು ವರದಿಯಾಗಿದೆ. ತಜ್ಞರ ಸಮಿತಿಯಿಂದ ವರದಿಯನ್ನು ಸಂಗ್ರಹಿಸಲಾಗುತ್ತಿದೆ. ಅದನ್ನು ಪ್ರಧಾನ ಮಂತ್ರಿ ಕಚೇರಿಗೆ ಸಲ್ಲಿಸಲಾಗುವುದು ಎಂದು ಅಕಾರಿಯೊಬ್ಬರು ತಿಳಿಸಿದ್ದಾರೆ.

    ಸಂತ್ರಸ್ತರ ರಕ್ಷಣೆ ಹಾಗೂ ಜೋಶಿಮಠವನ್ನು ಉಳಿಸುವ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮನವಿ ಮಾಡಿಕೊಂಡಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೇಂದ್ರ ಸರ್ಕಾರದಿಂದ ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದು ಈಗಾಗಲೇ ಘೋಷಿಸಿದ್ದಾರೆ. ಇದನ್ನೂ ಓದಿ: ಪೆರುವಿನಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ – ಭದ್ರತಾ ಪಡೆ ಗುಂಡೇಟಿಗೆ 12 ಬಲಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಜೋಶಿಮಠ ಮುಳುಗುವ ಆತಂಕ – ಪರಿಸ್ಥಿತಿ ಅವಲೋಕಿಸಲು ತಜ್ಞರ ತಂಡಕ್ಕೆ ಸೂಚನೆ

    ಜೋಶಿಮಠ ಮುಳುಗುವ ಆತಂಕ – ಪರಿಸ್ಥಿತಿ ಅವಲೋಕಿಸಲು ತಜ್ಞರ ತಂಡಕ್ಕೆ ಸೂಚನೆ

    ಡೆಹ್ರಾಡೂನ್: ಜೋಶಿಮಠದ (Joshimath) ನಿವಾಸಿಗಳು ತಮ್ಮ ಮನೆಗಳು, ರಸ್ತೆಗಳಲ್ಲಿ ಉಂಟಾಗಿರುವ ದೊಡ್ಡ ಬಿರುಕುಗಳಿಂದ ಅತೀವ ಅತಂಕಕ್ಕೀಡಾಗಿದ್ದಾರೆ. 500ಕ್ಕೂ ಹೆಚ್ಚು ಮನೆಗಳು ಬಿರುಕು ಬಿಟ್ಟಿರುವ ಹಿನ್ನೆಲೆಯಲ್ಲಿ ಜನರು ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ.

    ಈ ಕುರಿತು ಕೇಂದ್ರ ಗೃಹ ಸಚಿವಾಲಯದ ಉನ್ನತ ಅಧಿಕಾರಿಗಳು ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (NDMA) ಸದಸ್ಯರು ಉತ್ತರಾಖಂಡದ (Uttarakhand) ಜೋಶಿಮಠಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಲಿದ್ದಾರೆ. ಚಮೋಲಿ ಜಿಲ್ಲೆಯಲ್ಲಿರುವ ಜೋಶಿಮಠ ಉಳಿಸುವ ಎಲ್ಲ ಕ್ರಮ ಕೈಗೊಳ್ಳಲಿದ್ದಾರೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ (PMO) ಹೇಳಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಸ್ಪರ್ಧೆ ಘೋಷಣೆ ಮಾಡಿದ್ರೆ ರಾಜಕೀಯ ಎದುರಾಳಿಗಳಿಗೆ ಸಂಕಷ್ಟನಾ..?

    ಭಾನುವಾರ ಪ್ರಧಾನಮಂತ್ರಿ ಕಾರ್ಯಾಲಯದಲ್ಲಿ ನಡೆದ ಪರಿಶೀಲನಾ ಸಭೆಯ ನಂತರ ಗೃಹ ಸಚಿವಾಲಯದ ಗಡಿ ನಿರ್ವಹಣಾ ಕಾರ್ಯದರ್ಶಿ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸದಸ್ಯರು ಉತ್ತರಾಖಂಡಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಅವಲೋಕಿಸಲು ನಿಧರ್ರಿಸಲಾಯಿತು. ಪ್ರಧಾನಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಪಿ.ಕೆ ಮಿಶ್ರಾ, ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಅವರು ನಡೆಸಿದ ಸಭೆಯಲ್ಲಿದ್ದರು. ಇದನ್ನೂ ಓದಿ:  ಬಂಗಾಳದಲ್ಲಿ ವಂದೇ ಭಾರತ್ ರೈಲಿಗೆ ಕಲ್ಲು ಎಸೆದಿಲ್ಲ: NFR ಸ್ಪಷ್ಟನೆ

    ಸದ್ಯ ಸಂತ್ರಸ್ತರಿಗೆ ನೈತಿಕ ಬೆಂಬಲದ ಅಗತ್ಯವಿದೆ. ಆದ್ದರಿಂದ ವಿಭಿನ್ನ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿರುವ ತಜ್ಞರನ್ನು ಆಹ್ವಾನಿಸಿದ್ದೇವೆ. ಜ್ಯೋತಿಷಿಗಳಿಂದ ಧರ್ಮ ಶಾಸ್ತ್ರಿಗಳವರೆಗೂ ಜ್ಯೋತಿರ್ಮಠವನ್ನು ಸಂರಕ್ಷಿಸುವ ಆಚರಣೆಗಳ ಬಗ್ಗೆ ಅವರು ನಮಗೆ ತಿಳಿಸಿದ್ದಾರೆ ಎಂದು ಧಾರ್ಮಿಕ ಗುರು ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಹೇಳಿದ್ದಾರೆ.

    ಇದೇ ತಿಂಗಳ ಜನವರಿ 22-31ರ ವರೆಗೆ ನರಸಿಂಗ ದೇವಸ್ಥಾನದಲ್ಲಿ ವಿಶೇಷ ಯಾಗ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಅದನ್ನು ನಾವು ಮಾಡೇ ಮಾಡುತ್ತೇವೆ. ಹೊರತಾಗಿ ಪರಿಸ್ಥಿತಿಗೆ ಕಾರಣವೇನೆಂಬುದನ್ನು ತನಿಖೆ ಮಾಡಲು ತಜ್ಞರನ್ನು ಸಹ ಕರೆಸಬೇಕು. ಅಲ್ಲಿವರೆಗೆ ನಾವು ನೊಂದ ಜನರೊಂದಿಗೆ ನಿಲ್ಲುತ್ತೇವೆ ಎಂದು ಗುರು ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ತಿಳಿಸಿದ್ದಾರೆ.

    ನಾವು ಸಹ ಸುಪ್ರೀಂ ಕೋರ್ಟ್‌ (Supreme Court) ಮೊರೆ ಹೋಗಿದ್ದೇವೆ. ನಮ್ಮೊಂದಿಗೆ ನಮ್ಮ ಕಾನೂನು ತಂಡವಿದೆ. ಈ ವಿಷಯವನ್ನು ಸಿಜೆಐ ಮುಂದೆ ಮಂಡಿಸಿ ತುರ್ತು ವಿಚಾರಣೆಗೆ ಮನವಿ ಮಾಡಲಾಗುವುದು. ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಒತ್ತಾಯಿಸಲಾಗುವುದು ಎಂದು ಧಾರ್ಮಿಕ ಗುರು ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಹೇಳಿದ್ದಾರೆ.

    ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ, ಐಐಟಿ ರೂರ್ಕಿ, ವಾಡಿಯಾ ಇನ್‌ಸ್ಟಿಟ್ಯೂಟ್ ಆಫ್ ಹಿಮಾಲಯನ್ ಜಿಯಾಲಜಿ, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೈಡ್ರಾಲಜಿ ಮತ್ತು ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ತಜ್ಞರ ತಂಡಗಳು ಅಧ್ಯಯನ ಮಾಡುವಂತೆ ನಿರ್ದೇಶನ ನೀಡಲಾಗಿದೆ.

    ಎನ್‌ಡಿಆರ್‌ಎಫ್‌ನ ಒಂದು ತಂಡ ಮತ್ತು ಎಸ್‌ಡಿಆರ್‌ಎಫ್‌ನ 4 ತಂಡಗಳು ಈಗಾಗಲೇ ಜೋಶಿಮಠಕ್ಕೆ ತಲುಪಿದ್ದು, ಸಂತ್ರಸ್ತ ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರೊಂದಿಗೆ ಮಾತನಾಡಿದ್ದಾರೆ. ಪುನರ್ವಸತಿ ಹಾಗೂ ಪರಿಹಾರ ಕಾರ್ಯಗಳಲ್ಲಿ ಎಲ್ಲಾ ರೀತಿಯ ನೆರವನ್ನು ನೀಡುವುದಾಗಿ ಘೋಷಣೆ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಜೋಶಿಮಠದಲ್ಲಿ ಬಿರುಕು ಬಿಟ್ಟ 500ಕ್ಕೂ ಹೆಚ್ಚು ಮನೆಗಳು – ನಗರ ಮುಳುಗುವ ಆತಂಕದಲ್ಲಿ ಜನರು

    ಜೋಶಿಮಠದಲ್ಲಿ ಬಿರುಕು ಬಿಟ್ಟ 500ಕ್ಕೂ ಹೆಚ್ಚು ಮನೆಗಳು – ನಗರ ಮುಳುಗುವ ಆತಂಕದಲ್ಲಿ ಜನರು

    ಡೆಹ್ರಾಡೂನ್: ಉತ್ತರಾಖಂಡದ (Uttarakhand) ಜೋಶಿಮಠದಲ್ಲಿ (Joshimath) ಇತ್ತೀಚಿನ ದಿನಗಳಲ್ಲಿ 561 ಮನೆಗಳು ಬಿರುಕು (Cracks) ಬಿಟ್ಟಿವೆ. ಕೆಲವು ರಸ್ತೆಗಳಲ್ಲಿಯೂ ಬಿರುಕು ಕಾಣಿಸಿಕೊಂಡಿವೆ. ಜೋಶಿಮಠ ಮುಳುಗುತ್ತಿದೆ (Joshimath Sinking) ಎಂಬ ಆತಂಕ ಇಲ್ಲಿನ ನಿವಾಸಿಗಳು ಹಾಗೂ ಸರ್ಕಾರವನ್ನು ಆತಂಕಕ್ಕೆ ದೂಡಿದೆ. ಬಿರುಕು ಬಿಟ್ಟಿರುವ ಹಿನ್ನೆಲೆಯಲ್ಲಿ ಜನರು ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ. ಭೂಕುಸಿತದಿಂದ (Landslide) ಮನೆ ಕುಸಿದು ಬೀಳುವ ಭೀತಿ ನಗರದ ನಿವಾಸಿಗಳನ್ನು ಕಾಡುತ್ತಿದೆ.

    ಉತ್ತರಾಖಂಡದಲ್ಲಿ ಆಗುತ್ತಿರುವ ಈ ಬದಲಾವಣೆ ಹಾಗೂ ಅದರಿಂದಾಗುತ್ತಿರುವ ಹಾನಿಯನ್ನು ನಿರ್ಣಯಿಸಲು ಉತ್ತರಾಖಂಡ ಭಾರತೀಯ ಜನತಾ ಪಕ್ಷ (ಬಿಜೆಪಿ) 14 ಸದಸ್ಯರ ಸಮಿತಿಯನ್ನು ರಚಿಸಿದೆ. ಜಿಲ್ಲೆಯಲ್ಲಿ ಭೂ ಕುಸಿತ ಮುಂದುವರಿದಿದ್ದು, ಮಾರ್ವಾಡಿಯ ಜೆಪಿ ಕಾಲೋನಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ 561 ಮನೆಗಳು ಬಿರುಕು ಬಿಟ್ಟಿವೆ. ಭೂಗರ್ಭದಿಂದ ನೀರು ಸೋರಿಕೆಯಾಗುತ್ತಿದೆ ಎಂದು ಚಮೋಲಿ ಜಿಲ್ಲಾ ವಿಪತ್ತು ನಿರ್ವಹಣಾ ಇಲಾಖೆ ತಿಳಿಸಿದೆ.

    ಸಿಂಘಧಾರ್, ಮಾರ್ವಾಡಿ, ಕೆಲವು ಸಾರ್ವಜನಿಕ ರಸ್ತೆಗಳು ಹಾಗೂ ಮುಖ್ಯ ರಸ್ತೆಗಳ ಬಿರುಕುಗಳನ್ನು ಸರಿಪಡಿಸಲಾಗುತ್ತಿದೆ. ಪ್ರತಿ ಗಂಟೆಗೊಮ್ಮೆ ಬಿರುಕುಗಳು ಹೆಚ್ಚಾಗುತ್ತಲೇ ಇವೆ. ಇದು ಆತಂಕಕ್ಕೆ ಕಾರಣವಾಗುತ್ತಿದೆ ಎಂದು ಜೋಶಿಮಠ ಪುರಸಭೆ ಅಧ್ಯಕ್ಷ ಶೈಲೇಂದ್ರ ಪನ್ವಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಮುಂದಿನ ತಿಂಗಳು ಪ್ರಧಾನಿ, ರಾಷ್ಟ್ರಪತಿಗಳಿಂದ ದಶಪಥ ರಸ್ತೆ ಲೋಕಾರ್ಪಣೆ

    ಬಿರುಕು ಯಾಕೆ?
    ಜೋಶಿಮಠದಲ್ಲಿ ತೀವ್ರವಾಗಿ ರಸ್ತೆ ಹಾಗೂ ಮನೆಗಳಲ್ಲಿ ಬಿರುಕು ಬಿಡುವುದಕ್ಕೆ ಕಾರಣ ಭೂಕುಸಿತ. ಭೂಮಿ ಅಡಿಯಲ್ಲಿರುವ ಬಂಡೆಯಿಂದ ಅಂತರ್ಜಲ ಈಗ ಹರಿದು ಬರುತ್ತಿದೆ. ಗಣಿಗಾರಿಕೆ ಇತ್ಯಾದಿ ಚಟುವಟಿಕೆಯಿಂದ ಅಡಿಯಿಂದ ಅಂತರ್ಜಲ ಅಥವಾ ಇಂಧನದಂತಹ ದ್ರವಗಳನ್ನು ಪಂಪ್ ಮಾಡುವುದರಿಂದ ಶಿಲೆಗಳು ಅದುರುತ್ತಿವೆ. ಇದರಿಂದಾಗಿ ಮಣ್ಣು ಸವೆಯುತ್ತಿದ್ದು ಭೂಮಿ ಬಿರುಕು ಬಿಡುತ್ತಿದೆ.

    ಈಗಾಗಲೇ ಜಿಲ್ಲೆಯ 500ಕ್ಕೂ ಹೆಚ್ಚು ಮನೆಗಳು ಹಾನಿಯಾಗಿದ್ದು, ಇದು ಸುಮಾರು 3,000 ಜನರ ಮೇಲೆ ಪರಿಣಾಮ ಬೀರಿದೆ. ಜಿಲ್ಲೆಯ ನಿವಾಸಿಗಳಿಗೆ ಎಲ್ಲಾ ರೀತಿಯ ಅಗತ್ಯಗಳನ್ನು ಪೂರೈಸಲು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಕಸ ಗುಡಿಸುವ ಮೂಲಕ ಕ್ಲೀನ್ ಚಿಕ್ಕಬಳ್ಳಾಪುರ ಅಭಿಯಾನಕ್ಕೆ ಸುಧಾಕರ್ ಚಾಲನೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k