Tag: josh film

  • Exclusive: ತನ್ನ ನಿರ್ದೇಶನದ ಸಿನಿಮಾ ಬೆನ್ನಲ್ಲೇ ಹೊಸ ಪ್ರಾಜೆಕ್ಟ್‌ಗೆ ರಾಕೇಶ್ ಅಡಿಗ ಗ್ರೀನ್ ಸಿಗ್ನಲ್

    Exclusive: ತನ್ನ ನಿರ್ದೇಶನದ ಸಿನಿಮಾ ಬೆನ್ನಲ್ಲೇ ಹೊಸ ಪ್ರಾಜೆಕ್ಟ್‌ಗೆ ರಾಕೇಶ್ ಅಡಿಗ ಗ್ರೀನ್ ಸಿಗ್ನಲ್

    ಬಿಗ್ ಬಾಸ್ ರನ್ನರ್ ಅಪ್ ರಾಕೇಶ್ ಅಡಿಗ (Rakesh Adiga) ಅವರು ತಮ್ಮ ಚಿತ್ರದ ಅಪ್‌ಡೇಟ್‌ ಮೂಲಕ ಫ್ಯಾನ್ಸ್‌ಗೆ ಸಿಹಿಸುದ್ದಿ ನೀಡಿದ್ದಾರೆ. ತಮ್ಮ ನಿರ್ದೇಶನದ ‘ಲೈಫ್ ಆಫ್ ಕಾಕ್ರೋಚ್’ ಸಿನಿಮಾ ಬೆನ್ನಲ್ಲೇ ಹೊಸ ಸಿನಿಮಾಗೆ ರಾಕೇಶ್ ಜೋಶ್ ಆಗಿ ರೆಡಿಯಾಗಿದ್ದಾರೆ. ಈ ಕುರಿತ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ ನೋಡಿ. ಇದನ್ನೂ ಓದಿ:ಮಗುವಾಗಿ ಒಂದೇ ತಿಂಗಳಿಗೆ ಹಸುಗೂಸನ್ನು ಶೂಟಿಂಗ್‌ಗೆ ಕರೆದೊಯ್ದ ನಟಿ ದಿವ್ಯಾ ಶ್ರೀಧರ್

    ರಾಕೇಶ್ ಅಡಿಗ ಅವರು ಬಿಗ್ ಬಾಸ್ ಶೋ (Bigg Boss Kannada) ನಂತರ ಹೊಸ ಬಗೆಯ ಕಥೆಗಳಿಗೆ ಪ್ರಾಮುಖ್ಯತೆ ಕೊಡುತ್ತಿದ್ದಾರೆ. ಬಿಗ್ ಬಾಸ್ ಶೋನಿಂದ ಅವರ ಜನಪ್ರಿಯತೆ ಜಾಸ್ತಿಯಾಗಿದೆ. ಹಾಗಾಗಿ ಸಿನಿಮಾಗಾಗಿ ತೆರೆಮರೆಯಲ್ಲಿ ಸಖತ್ ತಯಾರಿ ಮಾಡ್ತಿದ್ದಾರೆ. ಕೆಲ ದಿನಗಳ ತಮ್ಮ ನಿರ್ದೇಶನದ (Direction) ಸಿನಿಮಾವನ್ನ ರಾಕೇಶ್ ಅನೌನ್ಸ್ ಮಾಡಿದ್ದರು. ಈಗ ಮತ್ತೊಂದು ಚಿತ್ರಕ್ಕೆ ರಾಕೇಶ್ ಅಡಿಗ ಸಹಿ ಹಾಕಿದ್ದಾರೆ.

    ಇದುವರೆಗೂ ಎಂದೂ ಮಾಡಿರದ ಪಾತ್ರದಲ್ಲಿ ರಾಕೇಶ್ ಅಡಿಗ ಕಾಣಿಸಿಕೊಳ್ತಿದ್ದಾರೆ. ಜುಲೈನಿಂದ ಹೊಸ ಪ್ರಾಜೆಕ್ಟ್ಗೆ ಚಾಲನೆ ಸಿಗಲಿದೆ. ಸ್ಯಾಂಡಲ್ವುಡ್‌ನಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನ ಕೊಟ್ಟಿರುವ ಖ್ಯಾತ ನಿರ್ಮಾಪಕರೊಬ್ಬರ ಹೊಸ ಚಿತ್ರಕ್ಕೆ ರಾಕೇಶ್ ಅಡಿಗ ಓಕೆ ಎಂದಿದ್ದಾರೆ. ಸಿನಿಮಾದ ಟೈಟರ್ ಏನು.? ಯಾರ ಜೊತೆ ಸಿನಿಮಾ ಮಾಡುತ್ತಾರೆ, ಯಾವ ರೀತಿಯ ಸಿನಿಮಾ ಎಂಬುದಕ್ಕೆ ಜುಲೈನಲ್ಲಿ ಉತ್ತರ ಸಿಗಲಿದೆಯಂತೆ. ಪೋಸ್ಟರ್ ಮೂಲಕ ಅಧಿಕೃತ ಮಾಹಿತಿ ಸಿಗಲಿದೆಯಂತೆ. ಚಿತ್ರತಂಡವೇ ಖುದ್ದಾಗಿ ಅನೌನ್ಸ್ ಮಾಡಲಿದೆ ಎಂಬ ಮಾಹಿತಿ ಸಿಕ್ಕಿದೆ.

    ಆಲ್ಬಂ ಸಾಂಗ್, ಜೋಶ್, ಯಾರೇ ಕೂಗಾಡಲಿ, ಮಂದಹಾಸ, ಮನಸಾಲಜಿ, ಅಲೆಮಾರಿ, ನಂದಗೋಕುಲ ಸೇರಿದಂತೆ ಹಲವು ಸಿನಿಮಾಗಳಲ್ಲಿ ರಾಕೇಶ್ ಅಡಿಗ ನಟಿಸಿದ್ದರು. ಆದರೆ ರಾಕೇಶ್ ಅಡಿಗ ಕೆರಿಯರ್‌ಗೆ ತಿರುವು ಕೊಟ್ಟಿದ್ದು ಬಿಗ್ ಬಾಸ್ ಶೋ. ಬಿಗ್ ಬಾಸ್ ಒಟಿಟಿ- ಟಿವಿ ಬಿಗ್ ಬಾಸ್ ಮೂಲಕ ಅಪಾರ ಅಭಿಮಾನಿಗಳ ಮನ ಗೆದ್ದರು. ಸೀಸನ್ 9ರ ಬಿಗ್ ಬಾಸ್‌ನಲ್ಲಿ ರಾಕೇಶ್ ಅಡಿಗ ರನ್ನರ್ ಅಪ್ ಪಟ್ಟ ಅಲಂಕರಿಸಿದ್ದರು.

    ರಾಕೇಶ್ ಅಡಿಗ ಅವರು ಇದೀಗ ‘ಲೈಫ್ ಆಫ್ ಕಾಕ್ರೋಚ್’ ಎಂಬ ಸಿನಿಮಾ ಮಾಡ್ತಿದ್ದಾರೆ. ಈ ಸಿನಿಮಾ ಮೂಲಕ 4 ವರ್ಷಗಳ ನಂತರ ಮತ್ತೆ ಸಿನಿಮಾಗೆ ಕಂಬ್ಯಾಕ್ ಆಗ್ತಿದ್ದಾರೆ. ನಟನೆಯ ಜೊತೆ ನಿರ್ದೇಶನದ ಜವಾಬ್ದಾರಿ ಕೂಡ ರಾಕೇಶ್ ಕೈಗೆತ್ತಿಕೊಂಡಿದ್ದಾರೆ. ‘ಲೈಪ್ ಆಫ್ ಕಾಕ್ರೋಚ್’ ಸಿನಿಮಾದ ಟೀಸರ್ ಈಗಾಗಲೇ ಸಿನಿಪ್ರೇಮಿಗಳ ಗಮನ ಸೆಳೆಯುತ್ತಿದೆ. ಇನ್ನೂ ಸಿನಿಮಾ ಜೊತೆಗೆ ಅಧ್ಯಾತ್ಮ, ವ್ಯಕ್ತಿತ್ವ ವಿಕಾಸನದ ಕುರಿತು ಯೂಟ್ಯೂಬ್ ಚಾನೆಲ್ ಮಾಡಲಿದ್ದಾರೆ. ಅದಕ್ಕಾಗಿ ಸೂಕ್ತ ತಯಾರಿ ಕೂಡ ತೆರೆಮರೆಯಲ್ಲಿ ನಡೆಯುತ್ತಿದೆ.

    ಶೃತಿ ರಿಪ್ಪನ್‌ಪೇಟೆ, ಪಬ್ಲಿಕ್‌ ಟಿವಿ ಡಿಜಿಟಲ್‌ 

  • ಬಿಗ್ ಬಾಸ್ ಆಯ್ತು, ಈಗೇನ್ ಮಾಡ್ತಿದ್ದಾರೆ ರಾಕೇಶ್ ಅಡಿಗ?

    ಬಿಗ್ ಬಾಸ್ ಆಯ್ತು, ಈಗೇನ್ ಮಾಡ್ತಿದ್ದಾರೆ ರಾಕೇಶ್ ಅಡಿಗ?

    ‘ಜೋಶ್’ (Josh) ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟ ನಟ ರಾಕೇಶ್ ಅಡಿಗ (Bigg Boss Kannada) ಅವರು ಬಿಗ್ ಬಾಸ್ ಮನೆಯಲ್ಲಿ ತಮ್ಮದೇ ಶೈಲಿಯಲ್ಲಿ ಮೋಡಿ ಮಾಡಿದ್ದರು. ಬಿಗ್ ಬಾಸ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು. ದೊಡ್ಮನೆಯ ಆಟದ ಬಳಿಕ ಇದೀಗ ಏನ್ಮಾಡ್ತಿದ್ದಾರೆ? ತಮ್ಮ ಮುಂದಿನ ಸಿನಿಮಾ ಯಾವುದು? ಎಂಬುದನ್ನ ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ರಾಕೇಶ್ ಅಡಿಗ ಹಂಚಿಕೊಂಡಿದ್ದಾರೆ.

    ಆಲ್ಬಂ ಸಾಂಗ್, ಜೋಶ್, ಯಾರೇ ಕೂಗಾಡಲಿ, ಮಂದಹಾಸ, ಮನಸಾಲಜಿ, ಅಲೆಮಾರಿ, ನಂದಗೋಕುಲ ಸೇರಿದಂತೆ ಹಲವು ಸಿನಿಮಾಗಳಲ್ಲಿ ರಾಕೇಶ್ ಅಡಿಗ ನಟಿಸಿದ್ದರು. ಆದರೆ ರಾಕೇಶ್ ಅಡಿಗ ಕೆರಿಯರ್‌ಗೆ ತಿರುವು ಕೊಟ್ಟಿದ್ದು ಬಿಗ್ ಬಾಸ್ ಶೋ. ಬಿಗ್ ಬಾಸ್ ಒಟಿಟಿ- ಟಿವಿ ಬಿಗ್ ಬಾಸ್ ಮೂಲಕ ಅಪಾರ ಅಭಿಮಾನಿಗಳ ಮನ ಗೆದ್ದರು. ಸೀಸನ್ 9ರ ಬಿಗ್ ಬಾಸ್‌ನಲ್ಲಿ ರಾಕೇಶ್ ಅಡಿಗ ರನ್ನರ್ ಅಪ್ ಪಟ್ಟ ಅಲಂಕರಿಸಿದ್ದರು. ಇದನ್ನೂ ಓದಿ:ಹಾಲಿವುಡ್ ‘ಸಿಟಾಡೆಲ್’ ಪ್ರೀಮಿಯರ್‌ನಲ್ಲಿ ಸಮಂತಾ

     

    View this post on Instagram

     

    A post shared by Rakesh Adiga (@rakesh_freespirit)

    ರಾಕೇಶ್ ಅಡಿಗ ಅವರು ಇದೀಗ ‘ಲೈಪ್ ಆಫ್ ಕಾಕ್ರೋಚ್’ (Life Of  Cockroach) ಎಂಬ ಸಿನಿಮಾ ಮಾಡ್ತಿದ್ದಾರೆ. ಈ ಸಿನಿಮಾ ಮೂಲಕ 4 ವರ್ಷಗಳ ನಂತರ ಮತ್ತೆ ಸಿನಿಮಾಗೆ ಕಂಬ್ಯಾಕ್ ಆಗ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಮೇ ತಿಂಗಳಲ್ಲಿ ಶುರುವಾಗಲಿದೆ. ಹೀರೋ ಆಗಿ ಮಾತ್ರವಲ್ಲ, ನಿರ್ದೇಶನದ ಜವಾಬ್ದಾರಿ ಕೂಡ ರಾಕೇಶ್ ಕೈಗೆತ್ತಿಕೊಂಡಿದ್ದಾರೆ. ಸದ್ಯ ‘ಲೈಪ್ ಆಫ್ ಕಾಕ್ರೋಚ್’ ಸಿನಿಮಾದ ಟೀಸರ್ ಸಿನಿಪ್ರೇಮಿಗಳ ಗಮನ ಸೆಳೆಯುತ್ತಿದೆ.

    ಇನ್ನೂ ಸಿನಿಮಾ ಜೊತೆಗೆ ಅಧ್ಯಾತ್ಮ, ವ್ಯಕ್ತಿತ್ವ ವಿಕಾಸನದ ಕುರಿತು ಯೂಟ್ಯೂಬ್ ಚಾನೆಲ್ ಮಾಡಲಿದ್ದಾರೆ. ಅದಕ್ಕಾಗಿ ಸೂಕ್ತ ತಯಾರಿ ಕೂಡ ತೆರೆಮರೆಯಲ್ಲಿ ನಡೆಯುತ್ತಿದೆ. ಸದ್ಯದಲ್ಲಿ ಈ ಬಗ್ಗೆ ನಟ ರಾಕೇಶ್ ಅಪ್‌ಡೇಟ್ ಹಂಚಿಕೊಳ್ಳಲಿದ್ದಾರೆ.

  • ಮೊದಲ ಮಗುವಿನ ನಿರೀಕ್ಷೆಯಲ್ಲಿ ‌ʻಜೋಶ್ʼ ನಟಿ ಸ್ನೇಹಾ ಆಚಾರ್ಯ

    ಮೊದಲ ಮಗುವಿನ ನಿರೀಕ್ಷೆಯಲ್ಲಿ ‌ʻಜೋಶ್ʼ ನಟಿ ಸ್ನೇಹಾ ಆಚಾರ್ಯ

    ಜೋ‌ಶ್, ಆಕೆ, ಸಂತು ಸ್ಟೇಟ್ ಫಾರ್ವರ್ಡ್, ಕೃಷ್ಣಲೀಲಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಸ್ನೇಹಾ ಆಚಾರ್ಯ (Sneha Acharya) ಸದ್ಯ ತಮ್ಮ ಬೇಬಿ ಬಂಪ್ (Baby Bump) ಫೋಟೋ ಹಂಚಿಕೊಳ್ಳುವ ಮೂಲಕ ಸುದ್ದಿಯಲ್ಲಿದ್ದಾರೆ. ಇದನ್ನೂ ಓದಿ: ರಿಷಬ್ ಶೆಟ್ಟಿ ಮಗಳ ಬರ್ತ್‌ಡೇ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್ ತಾರೆಯರು

     

    View this post on Instagram

     

    A post shared by Sneha Acharya (@acharyasneh_official)

    `ಬಿಗ್ ಬಾಸ್’ (Bigg Boss Kannaad) ಖ್ಯಾತಿಯ ಸ್ನೇಹಾ ಅವರು 2018ರಲ್ಲಿ ವಿದೇಶಿ ಮೂಲದ ರಾಯನ್ (Rayan) ಅವರನ್ನು ಮದುವೆಯಾಗಿದ್ದರು. ಇದೀಗ ವಿದೇಶದಲ್ಲಿಯೇ ಸೆಟಲ್ ಆಗಿರುವ ನಟಿ ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರುತ್ತಾರೆ. ತಾವು ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸಿಹಿಸುದ್ದಿಯನ್ನು ಬೇಬಿಬಂಪ್ ಫೋಟೋಶೂಟ್ ಹಂಚಿಕೊಳ್ಳುವ ಮೂಲಕ ನಟಿ ತಿಳಿಸಿದ್ದಾರೆ.

     

    View this post on Instagram

     

    A post shared by Sneha Acharya (@acharyasneh_official)

    ಸ್ನೇಹಾ ಆಚಾರ್ಯ ಬೇಬಿ ಬಂಪ್ ಫೋಟೋ ಶೇರ್ ಮಾಡ್ತಿದ್ದಂತೆ ನಟಿ ಕವಿತಾ ಗೌಡ, ರ‍್ಯಾಪಿಡ್ ರಶ್ಮಿ ಸೇರಿದಂತೆ ಹಲವರು ಶುಭಹಾರೈಸಿದ್ದಾರೆ. ಅಭಿಮಾನಿಗಳು ಕೂಡ ನಟಿಗೆ ವಿಶ್ ಮಾಡಿದ್ದಾರೆ.

    ವಿದೇಶಿ ಮೂಲದ ರಾಯನ್ ಅವರ ಹೆಡ್ ಕಂಪೆನಿ ಅಮೆರಿಕದಲ್ಲಿದ್ದು, ಹೀಗಾಗಿ ಅವರು ವಿದೇಶದಲ್ಲಿ ಸೆಟಲ್ ಆಗಿದ್ದಾರೆ. ಬಾಲಿವುಡ್‌ನಲ್ಲಿ ನಟ ಶಾಹಿದ್ ಕಪೂರ್, ಗೋವಿಂದ ಅವರಿಗೆ ನೃತ್ಯ ನಿರ್ದೇಶನ ಮಾಡಿರುವ ಸ್ನೇಹಾ ಅವರು ಡಾನ್ಸ್, ಯೋಗಕ್ಕೆ ಸಂಬಂಧಪಟ್ಟಂತೆ ಸ್ವಂತ ಕಂಪನಿ ಸ್ಥಾಪಿಸುವ ಉದ್ದೇಶ ಹೊಂದಿದ್ದರು. ಕಲರ್ಸ್ ಕನ್ನಡದ `ತಕಧಿಮಿತ’ ರಿಯಾಲಿಟಿ ಶೋನಲ್ಲಿ ಸ್ನೇಹಾ ಭಾಗವಹಿಸಿ ಜಡ್ಜ್‌ಗಳಿಂದ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. `ಜೋಶ್’ ಸಿನಿಮಾದಲ್ಲಿ ನಟಿಸಿದ್ದ ಸ್ನೇಹಾಗೆ ಬಾಲಿವುಡ್‌ನಲ್ಲಿ ಒಳ್ಳೆಯ ಪ್ರಶಂಸೆ ಸಿಕ್ಕಿತ್ತು.

  • ಬೇಬಿ ಬಂಪ್ ಫೋಟೋಶೂಟ್‌ನಲ್ಲಿ ಮಿಂಚಿದ `ಜೋಶ್’ ನಟಿ ಪೂರ್ಣ

    ಬೇಬಿ ಬಂಪ್ ಫೋಟೋಶೂಟ್‌ನಲ್ಲಿ ಮಿಂಚಿದ `ಜೋಶ್’ ನಟಿ ಪೂರ್ಣ

    `ಜೋಶ್’ (Josh Film) ಚಿತ್ರದಲ್ಲಿ ರಾಕೇಶ್ ಅಡಿಗಗೆ (Rakesh Adiga) ನಾಯಕಿಯಾಗುವ ಮೂಲಕ ಸ್ಯಾಂಡಲ್‌ವುಡ್‌ಗೆ (Sandalwood) ಲಗ್ಗೆಯಿಟ್ಟ ನಟಿ ಪೂರ್ಣ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಬೇಬಿ ಬಂಪ್ (Baby Bump) ಫೋಟೋಶೂಟ್‌ನಿಂದ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ.

    ಬಹುಭಾಷಾ ನಟಿಯಾಗಿ ಗಮನ ಸೆಳೆಯುತ್ತಿರುವ ಪೂರ್ಣ (Actress Purnaa) ಅವರು ಉದ್ಯಮಿ ಶಾನಿದ್ (Shanid) ಜೊತೆ ಕಳೆದ ವರ್ಷ ಅಕ್ಟೋಬರ್ 22ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇತ್ತೀಚಿಗಷ್ಟೇ ನಟಿ ಪೂರ್ಣ ಅವರ ಬೇಬಿ ಶವರ್ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತ್ತು. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ `ಜೊತೆ ಜೊತೆಯಲಿ’ ಶಿಲ್ಪಾ ಅಯ್ಯರ್

    ಉದ್ಯಮಿ ಶಾನಿದ್ ಆಸಿಫ್ ಜೊತೆ ದಾಂಪತ್ಯ ಜೀವನವನ್ನ ಖುಷಿಯಾಗಿ ಕಳೆಯುತ್ತಿರುವ ನಟಿ ಮೊದಲ ಮಗುವಿನ ನಿರೀಕ್ಷೆಯ ಸಂಭ್ರಮದಲ್ಲಿದ್ದಾರೆ. ಸದ್ಯ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿ, ಕ್ಯಾಮೆರಾ ಕಣ್ಣಿಗೆ ಮುದ್ದಾಗಿ ಪೋಸ್ ನೀಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಇನ್ನೂ ನಟಿ ಪೂರ್ಣ ಅಲಿಯಾಸ್ ಶಮ್ನಾ ಕಾಸಿಮ್ ಅವರು ಕನ್ನಡದ ಜೋಶ್, ರಾಧನ ಗಂಡ, ರಮೇಶ್ ಅರವಿಂದ್ (Ramesh Aravind)  ಜೊತೆ `100′ ಚಿತ್ರಗಳಲ್ಲಿ ನಟಿಸಿದ್ದಾರೆ. ತೆಲುಗು, ತಮಿಳು, ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k