Tag: Jos Buttler

  • ಏಕದಿನ ಕ್ರಿಕೆಟ್‍ನಲ್ಲಿ ದಾಖಲೆಯ 498 ರನ್ ಸಿಡಿಸಿದ ಇಂಗ್ಲೆಂಡ್ – ಮೈದಾನದೆಲ್ಲೆಡೆ ಸಿಕ್ಸರ್, ಬೌಂಡರಿಗಳ ಅಬ್ಬರ

    ಏಕದಿನ ಕ್ರಿಕೆಟ್‍ನಲ್ಲಿ ದಾಖಲೆಯ 498 ರನ್ ಸಿಡಿಸಿದ ಇಂಗ್ಲೆಂಡ್ – ಮೈದಾನದೆಲ್ಲೆಡೆ ಸಿಕ್ಸರ್, ಬೌಂಡರಿಗಳ ಅಬ್ಬರ

    ಆಂಸ್ಟರ್‌ಡ್ಯಾಮ್‌: ನೆದರ್‌ಲ್ಯಾಂಡ್‌ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಸರಣಿಯಲ್ಲಿ ಇಂಗ್ಲೆಂಡ್ ತಂಡ ಏಕದಿನ ಕ್ರಿಕೆಟ್‍ನಲ್ಲಿ 498 ರನ್ ಬಾರಿಸಿ ವಿಶ್ವ ದಾಖಲೆ ಬರೆದಿದೆ.

    ಟಾಸ್ ಗೆದ್ದ ನೆದರ್‌ಲ್ಯಾಂಡ್‌ ತಂಡ ಪ್ರವಾಸಿ ಇಂಗ್ಲೆಂಡ್ ತಂಡವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿತು. ಇತ್ತ ಇಂಗ್ಲೆಂಡ್ ಬ್ಯಾಟ್ಸ್‌ಮ್ಯಾನ್‌ಗಳು ನೆದರ್‌ಲ್ಯಾಂಡ್‌ ತಂಡದ ಬೌಲರ್‌ಗಳ ಚೆಂಡನ್ನು ಮೈದಾನದ ಅಷ್ಟ ದಿಕ್ಕುಗಳಿಗೆ ಅಟ್ಟುತ್ತ 50 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 498 ರನ್‍ಗಳ ದಾಖಲೆಯ ಮೊತ್ತ ಪೇರಿಸಿತು. ಇದನ್ನೂ ಓದಿ: ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಕೆ.ಎಲ್.ರಾಹುಲ್‌ಗಿಲ್ಲ ಅವಕಾಶ?

    ಈ ಮೂಲಕ ಇಂಗ್ಲೆಂಡ್ ತಂಡ ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್ ಕಳೆದುಕೊಂಡು 481 ರನ್‍ಗಳನ್ನು ಸಿಡಿಸಿ ಬರೆದಿದ್ದ ದಾಖಲೆಯನ್ನು ಮುರಿದು ಮರು ದಾಖಲೆಯನ್ನು ಬರೆದಿದೆ. ಇದನ್ನೂ ಓದಿ: ಐರ್ಲೆಂಡ್ ವಿರುದ್ಧದ ಸರಣಿಗೆ ಟೀಂ ಇಂಡಿಯಾ ಪ್ರಕಟ – ಹಾರ್ದಿಕ್ ಪಾಂಡ್ಯ ನಾಯಕ, ತ್ರಿಪಾಠಿಗೆ ಕರೆ

    https://twitter.com/NaveenG77168184/status/1537799779987558401

    ಇಂಗ್ಲೆಂಡ್‍ನ ಈ ಬೃಹತ್ ಮೊತ್ತಕ್ಕೆ ಕಾರಣವಾದವರು ಫಿಲ್ ಸಾಲ್ಟ್, ಡೇವಿಡ್ ಮಲನ್, ಜೋಸ್ ಬಟ್ಲರ್ ಮತ್ತು ಲಿಯಾಮ್ ಲಿವಿಂಗ್‍ಸ್ಟೋನ್ ಈ ನಾಲ್ವರು ಬ್ಯಾಟ್ಸ್‌ಮ್ಯಾನ್‌ಗಳು ನೆದರ್‌ಲ್ಯಾಂಡ್‌ ಬೌಲರ್‌ಗಳು ಕನಸಿನಲ್ಲೂ ನೆನಪಿಸಿಕೊಳ್ಳುವಂತೆ ಬ್ಯಾಟ್‍ಬೀಸಿದರು. ಅದರಲ್ಲೂ ಬಟ್ಲರ್ ಮತ್ತು ಲಿವಿಂಗ್‍ಸ್ಟೋನ್ ಸಿಡಿಸಿದ ಸಿಕ್ಸರ್‌ಗಳಂತೂ ಮೈದಾನದ ಹೊರಗಡೆ ಬೀಳತೊಡಗಿತು. ಫಿಲ್ ಸಾಲ್ಟ್ 122 ರನ್ (93 ಎಸೆತ, 14 ಬೌಂಡರಿ, 3 ಸಿಕ್ಸ್), ಡೇವಿಡ್ ಮಲನ್ 125 ರನ್ (109 ಎಸೆತ, 9 ಬೌಂಡರಿ, 3 ಸಿಕ್ಸ್) ಸಿಡಿಸಿ ಔಟ್ ಆದರೆ, ಬಟ್ಲರ್ ಅಜೇಯ 162 ರನ್ (70 ಎಸೆತ, 7 ಬೌಂಡರಿ, 14 ಸಿಕ್ಸ್) ಮತ್ತು ಲಿವಿಂಗ್‍ಸ್ಟೋನ್ 66 ರನ್ (22 ಎಸೆತ, 6 ಬೌಂಡರಿ, 6 ಸಿಕ್ಸ್) ಚಚ್ಚಿ ಅಬ್ಬರಿಸಿ ಬೊಬ್ಬಿರಿದರು.

    ಇಂಗ್ಲೆಂಡ್‌ ತಂಡದ ದಾಖಲೆಯ ರನ್‌ ಜೊತೆ ಬಟ್ಲರ್‌ ವೇಗದ ಶತಕ ಬಾರಿಸಿ ತಮ್ಮ ಭರ್ಜರಿ ಬ್ಯಾಟಿಂಗ್‌ ಫಾರ್ಮ್‌ ಮುಂದುವರಿಸಿದ್ದಾರೆ.

    Live Tv

  • ಕಿಚ್ಚ ಸುದೀಪ್‌ಗೆ ಬ್ಯಾಟ್ ಗಿಫ್ಟ್ ಕೊಟ್ಟ ಜೋಸ್ ಬಟ್ಲರ್

    ಕಿಚ್ಚ ಸುದೀಪ್‌ಗೆ ಬ್ಯಾಟ್ ಗಿಫ್ಟ್ ಕೊಟ್ಟ ಜೋಸ್ ಬಟ್ಲರ್

    ಮುಂಬೈ: ಇಂಗ್ಲೆಂಡ್ ತಂಡದ ಕ್ರಿಕೆಟಿಗ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಬ್ಯಾಟ್‌ವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ.

    2022ರ 15ನೇ ಆವೃತ್ತಿ ಐಪಿಎಲ್‌ನಲ್ಲಿ ತಾವು ಆಡಿದ್ದ ಬ್ಯಾಟ್ ಮೇಲೆ ಸಹಿ ಮಾಡಿ ಅದನ್ನು ಕಿಚ್ಚ ಸುದೀಪ್‌ಗೆ ಉಡುಗೊರೆಯಾಗಿ ನೀಡಿದ್ದಾರೆ. ಅಲ್ಲದೆ ಸುದೀಪ್ ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ಆಟವಾಡಿದ ಫೋಟೋವೊಂದನ್ನು ರಾಜಾಸ್ಥಾನ್ ರಾಯಲ್ಸ್ ತಂಡವು ಟ್ವೀಟ್‌ನಲ್ಲಿ ಹಂಚಿಕೊಂಡಿದೆ. ಇದನ್ನೂ ಓದಿ: ಮುಂಬೈಗೆ 725 ರನ್‍ಗಳ ದಾಖಲೆಯ ಜಯ – ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ 129 ವರ್ಷಗಳ ಬಳಿಕ ರೆಕಾರ್ಡ್ ಬ್ರೇಕ್

    ಇದಕ್ಕೆ ಉತ್ಸಾಹದಿಂದಲೇ ಪ್ರತಿಕ್ರಿಯೆ ನೀಡಿರುವ ಕಿಚ್ಚ ಸುದೀಪ್ ವಿಶೇಷ ವೀಡಿಯೋವೊಂದನ್ನು ಮಾಡಿದ್ದು, ಜೋಸ್ ಬಟ್ಲರ್‌ಗೆ ಧನ್ಯವಾದ ಹೇಳಿದ್ದಾರೆ. ಈ ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಸಂಭ್ರಮ ಹಂಚಿಕೊಂಡಿದ್ದಾರೆ. ಅದರೊಂದಿಗೆ ಬ್ಯಾಟ್ ಸಿಗಲು ಸಹಾಯ ಮಾಡಿದ ರಾಜಸ್ಥಾನ ರಾಯಲ್ಸ್ ತಂಡದ ಆಟಗಾರ ಕನ್ನಡಿಗ ಕೆ.ಸಿ.ಕಾರ್ಯಪ್ಪ ಹಾಗೂ ರಾಜಸ್ಥಾನ ರಾಯಲ್ಸ್ ತಂಡಕ್ಕೂ ಧನ್ಯವಾದ ಸಲ್ಲಿಸಿದ್ದಾರೆ.

    `ನಿಜಕ್ಕೂ ನನಗೆ ಬಹಳ ಅಚ್ಚರಿಯಾಯಿತು. ನಾನು ಇದನ್ನು ನಿರೀಕ್ಷೆ ಸಹ ಮಾಡಿರಲಿಲ್ಲ. ಮೊದಲಿಗೆ ನಾನು ರಾಜಸ್ಥಾನ ರಾಯಲ್ಸ್ ತಂಡಕ್ಕೆ ಧನ್ಯವಾದ ಹೇಳಲು ಇಷ್ಟಪಡುತ್ತೇನೆ. ಇದನ್ನು ಸಾಧ್ಯವಾಗಿಸಿದ ನನ್ನ ಸ್ನೇಹಿತ ಕೆಸಿ ಕಾರ್ಯಪ್ಪಗೂ ಥ್ಯಾಂಕ್ಸ್ ಹೇಳುತ್ತೇನೆ. ವಿಶೇಷವಾಗಿ ಜೋಸ್ ಬಟ್ಲರ್ ಸಲುವಾಗಿ ಈ ವೀಡಿಯೋ ಮಾಡಿದ್ದೇನೆ. ವೈಯಕ್ತಿಕವಾಗಿ ನೀವು ಸಹಿ ಮಾಡಿದಂಥ ಬ್ಯಾಟ್ ಅನ್ನು ನನಗೆ ನೀಡಿದ್ದಕ್ಕೆ ಬಹಳ ಧನ್ಯವಾದ. ಇದನ್ನು ನಾನು ಸ್ವೀಕರಿಸಿದ್ದೇನೆ. ನನಗೆ ಬಹಳ ಸಂತೋಷವಾಗಿದೆ ಎಂದು ಕೃತಜ್ಞತಾ ವೀಡಿಯೋವನ್ನು ಸುದೀಪ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಕೊಹ್ಲಿಯ ದಾಖಲೆಯ ರನ್ ಶಿಖರವನ್ನು ಪುಡಿಗಟ್ಟಿದ ಬಾಬರ್ ಅಜಾಮ್‌

    ಈ ಬಾರಿ ಐಪಿಎಲ್ ಸೀಜನ್‌ನಲ್ಲೂ ಜೋಸ್ ಬಟ್ಲರ್ ಭರ್ಜರಿ ಪ್ರದರ್ಶನ ನೀಡಿದ್ದಾರೆ ಎಂದಿರುವ ಸುದೀಪ್ ಖಂಡಿತವಾಗಿ ನಾನು ಇದನ್ನು ಜೋಪಾನವಾಗಿ ಕಾಯ್ದಿಟ್ಟುಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ.

    15ನೇ ಆವೃತ್ತಿ ಐಪಿಎಲ್‌ನಲ್ಲಿ ಜೋಸ್ ಬಟ್ಲರ್ ಏಕಾಂಗಿ ಹೋರಾಟದ ಮೂಲಕ ರಾಜಾಸ್ಥಾನ್ ರಾಯಲ್ಸ್ ತಂಡವನ್ನು ಫೈನಲ್ ಪಂದ್ಯದ ವೆರೆಗೆ ಮುನ್ನಡೆಸಿದ್ದರು. ಒಟ್ಟು 15 ಪಂದ್ಯಗಳಲ್ಲಿ 718 ರನ್‌ಗಳನ್ನು ಗಳಿಸುವ ಮೂಲಕ ಆರೆಂಜ್ ಕ್ಯಾಪ್ ಗಳಿಸಿಕೊಂಡರು.

  • ಜೋಸ್ ಬಟ್ಲರ್‌ಗೆ ಮಿಸ್ ಆಯಿತು ವಿಶೇಷ ಸಾಧನೆ

    ಜೋಸ್ ಬಟ್ಲರ್‌ಗೆ ಮಿಸ್ ಆಯಿತು ವಿಶೇಷ ಸಾಧನೆ

    ಮುಂಬೈ: 15ನೇ ಆವೃತ್ತಿ ಐಪಿಎಲ್ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಆದರೆ ಫೈನಲ್ ಪಂದ್ಯ ಸೋತ ರಾಜಸ್ಥಾನ ರಾಯಲ್ಸ್ ತಂಡದ ಆಟಗಾರ ಜೋಸ್ ಬಟ್ಲರ್ ವಿಶೇಷ ಸಾಧನೆಯೊಂದರಿಂದ ವಂಚಿರಾಗಿದ್ದಾರೆ.

    ಜೋಸ್ ಬಟ್ಲರ್ 15ನೇ ಆವೃತ್ತಿ ಐಪಿಎಲ್‍ನಲ್ಲಿ ಪ್ರಚಂಡ ಫಾರ್ಮ್‍ನಲ್ಲಿದ್ದರು. ಆಡಿದ 17 ಪಂದ್ಯಗಳಲ್ಲಿ 4 ಶತಕ 4 ಅರ್ಧಶತಕ ಸಿಡಿಸಿ ಬರೋಬ್ಬರಿ 863 ರನ್ ಚಚ್ಚಿ ಈ ಬಾರಿ ರಾಜಸ್ಥಾನ ತಂಡ ಫೈನಲ್‍ಗೆ ಎಂಟ್ರಿ ಕೊಡಲು ಮಹತ್ವದ ಪಾತ್ರ ವಹಿಸಿದ್ದರು. ಆದರೆ ಅವರಿಗೆ ಫೈನಲ್‍ನಲ್ಲಿ ಒಂದು ಮಹತ್ವದ ಸಾಧನೆಯೊಂದು ಜೆಸ್ಟ್ ಮಿಸ್ ಆಗಿದೆ. ಇದನ್ನೂ ಓದಿ: ಆಡಿದ್ದು ಡೆಲ್ಲಿ ಪರ – ಫೈನಲ್‍ನಲ್ಲಿ ಆ ಒಂದು ಕಾರಣಕ್ಕಾಗಿ ರಾಜಸ್ಥಾನ ತಂಡಕ್ಕೆ ಚಿಯರ್ ಅಪ್ ಮಾಡಿದ್ರು ಚೇತನ್ ಸಕಾರಿಯಾ

    ಈ ಹಿಂದೆ 2014ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಐಪಿಎಲ್ ಚಾಂಪಿಯನ್ ಆದಾಗ ರಾಬಿನ್ ಉತ್ತಪ್ಪ 660 ರನ್ ಸಿಡಿಸಿ ಆರಂಜ್ ಕ್ಯಾಪ್ ಪಡೆದಿದ್ದರು. ಜೊತೆಗೆ ಅವರ ತಂಡ ಚಾಂಪಿಯನ್ ಆಗಿತ್ತು. ಆ ಬಳಿಕ 2021ರ ಐಪಿಎಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ಋತುರಾಜ್ ಗಾಯಕ್ವಾಡ್ 635 ರನ್ ಹೊಡೆದು ಆರೆಂಜ್ ಕ್ಯಾಪ್ ತನ್ನದಾಗಿಸಿಕೊಂಡಿದ್ದರು, ಈ ವೇಳೆ ಚೆನ್ನೈ ತಂಡ ಚಾಂಪಿಯನ್ ಆಗಿತ್ತು. ಈ ಬಾರಿ ಜೋಸ್ ಬಟ್ಲರ್ 863 ರನ್ ಬಾರಿಸಿ ಆರೆಂಜ್ ಕ್ಯಾಪ್ ಪಡೆದಿದ್ದಾರೆ. ಆದರೆ ಅವರ ತಂಡ ಮಾತ್ರ ಫೈನಲ್‍ನಲ್ಲಿ ಸೋತು ರನ್ನರ್‌ಅಪ್‌ ಸ್ಥಾನಕ್ಕೆ ತೃಪಿ ಪಡೆದಿದೆ. ಇದನ್ನೂ ಓದಿ: ಗುಜರಾತ್‌ಗೆ ಐಪಿಎಲ್‌ ಟ್ರೋಫಿ – ಯಾವ ಆಟಗಾರರಿಗೆ ಏನು ಪ್ರಶಸ್ತಿ?

    ಈ ಮೂಲಕ ಬಟ್ಲರ್ ರಾಬಿನ್ ಉತ್ತಪ್ಪ ಮತ್ತು ಗಾಯಕ್ವಾಡ್ ಅವರ ರೀತಿಯ ವಿಶೇಷ ಸಾಧನೆಯಿಂದ ಬಟ್ಲರ್ ವಂಚಿರಾಗಿದ್ದಾರೆ. ಆದರೆ ಈ ಬಾರಿ ಬಟ್ಲರ್ ಬ್ಯಾಟಿಂಗ್ ಬಿರುಗಾಳಿ ಎಬ್ಬಿಸಿ ಕ್ರಿಕೆಟ್ ಪ್ರೇಮಿಗಳ ಮನಗೆದ್ದಿದ್ದಾರೆ.

  • ಒಂದೇ ಐಪಿಎಲ್‌ನಲ್ಲಿ 4 ಶತಕ ಸಿಡಿಸಿದ ಬಟ್ಲರ್- ಕೊಹ್ಲಿ ದಾಖಲೆಗೆ ಸಮ

    ಒಂದೇ ಐಪಿಎಲ್‌ನಲ್ಲಿ 4 ಶತಕ ಸಿಡಿಸಿದ ಬಟ್ಲರ್- ಕೊಹ್ಲಿ ದಾಖಲೆಗೆ ಸಮ

    ಅಹಮದಾಬಾದ್: ಫೈನಲ್‍ಗೆ ಲಗ್ಗೆ ಇಡಲು ಗಲ್ಲಲೇಬೇಕಾದ ಪಂದ್ಯದಲ್ಲಿ ರಾಜಸ್ಥಾನ ಪರ ಜೋಸ್ ಬಟ್ಲರ್ ಬ್ಯಾಟಿಂಗ್ ಜೋಶ್‍ಗೆ ಆರ್‌ಸಿಬಿ ಕಂಗೆಟ್ಟು ಮನೆ ದಾರಿ ಹಿಡಿದಿದೆ.ಈ ಮೂಲಕ ಬಟ್ಲರ್ 2006ರಲ್ಲಿ ಕೊಹ್ಲಿ ಮಾಡಿದ್ದ ದಾಖಲೆಗೆ ಸಮನಾಗಿದ್ದಾರೆ.

    ಈ ಬಾರಿಯ ಕ್ವಾಲಿಫೈಯರ್ 2ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 7 ವಿಕೆಟ್‍ಗಳಿಂದ ಸೋಲಿಸಿದ ರಾಜಸ್ಥಾನ್ ರಾಯಲ್ಸ್ ಐಪಿಎಲ್ ಫೈನಲ್‍ಗೆ ಪ್ರವೇಶಿಸಿದೆ. ಈ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಬಟ್ಲರ್ ಕೊಹ್ಲಿ ದಾಖಲೆಗೆ ಸರಿಸಮರಾಗಿದ್ದಾರೆ. ಈ ಬಾರಿಯ ಐಪಿಎಲ್‍ನಲ್ಲಿ ಜೋಸ್ ಬಟ್ಲರ್ 4ನೇ ಬಾರಿ ಶತಕವನ್ನು ಸಿಡಿಸುವ ಮೂಲಕ 2006ರಲ್ಲಿ ಈ ಸಾಧನೆ ಮಾಡಿದ್ದ ವಿರಾಟ್ ಕೊಹ್ಲಿಯ ದಾಖಲೆಯನ್ನು ಸರಿಗಟ್ಟುವ ಎಲ್ಲಾ ಲಕ್ಷಣಗಳು ಇವೆ.

    ನಿನ್ನೆ ನಡೆದ ಪಂದ್ಯದಲ್ಲಿ ಬಟ್ಲರ್ ಕೇವಲ 59 ಎಸೆತಗಳಲ್ಲಿ ಭರ್ಜರಿ ಶತಕವನ್ನು ಸಿಡಿಸಿ ಜಯಕ್ಕೆ ಕಾರಣರಾಗಿದ್ದರು. ಪ್ರಸಿದ್ಧ್ ಕೃಷ್ಣ ಮತ್ತು ಓಬೇದ್ ಮೆಕಾಯ್ ಅವರ ಬೌಲಿಂಗ್‍ಗೆ ಭರ್ಜರಿ ಪ್ರದರ್ಶನ ತೋರಿದ ಬಟ್ಲರ್ 60 ಎಸೆತಗಳಿಗೆ 106(ಔಟಾಗದೆ) ರನ್ ಸಿಡಿಸಿದ್ದರು. ಈ ಬಾರಿಯ ಐಪಿಎಲ್‍ನಲ್ಲಿ ಬಟ್ಲರ್ ಈಗಾಗಲೇ 824 ರನ್ ಗಳಿಸಿದ್ದಾರೆ.

    ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಕ್ವಾಲಿಫೈಯರ್ 2ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಏಳು ವಿಕೆಟ್‍ಗಳ ಭರ್ಜರಿ ಜಯದೊಂದಿಗೆ ರಾಜಸ್ಥಾನ್ ರಾಯಲ್ಸ್ ಐಪಿಎಲ್ 2022 ರ ಫೈನಲ್‍ಗೆ ಪ್ರವೇಶಿಸಿದೆ. ಇದನ್ನೂ ಓದಿ: ಈ ಸಲ ಕಪ್ ನಮ್ದೇ ಮುಂದಿನ ವರ್ಷಕ್ಕೆ – ಆರ್‌ಸಿಬಿಗೆ ಹೀನಾಯ ಸೋಲು – ರಾಯಲ್ ಆಗಿ ಫೈನಲ್‍ಗೆ ಎಂಟ್ರಿಕೊಟ್ಟ ಆರ್‌ಆರ್

    ವಿರಾಟ್ ಕೊಹ್ಲಿ ಹಾಗೂ ಡೇವಿಡ್ ವಾರ್ನರ್ ನಂತರ ಬಟ್ಲರ್ ಐಪಿಎಲ್‍ನ ಒಂದೇ ಋತುವಿನಲ್ಲಿ 800ರನ್ ಗಡಿ ದಾಟಿದ ಮೂರನೇ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ. ಕೊಹ್ಲಿ 2016ರ ಐಪಿಎಲ್‍ನಲ್ಲಿ ದಾಖಲೆಯ 973ರನ್ ಗಳಿಸಿದರು. ಸನ್‍ರೈಸರ್ಸ್ ಹೈದರಾಬಾದ್‍ಗೆ ತಮ್ಮ ಚೊಚ್ಚಲ ಪ್ರಶಸ್ತಿಯನ್ನು ಮುದ್ರೆಯೊತ್ತಲು ಸಹಾಯ ಮಾಡಲು ಡೇವಿಡ್ ವಾರ್ನರ್ ಅವರು 848 ರನ್‍ಗಳನ್ನು ದಾಖಲಿಸಿದ್ದರು. ಇದನ್ನೂ ಓದಿ: ಕೊಹ್ಲಿ ಬ್ಯಾಟ್‍ನಿಂದ ಶತಕ ನಿರೀಕ್ಷೆ – ಅಭಿಮಾನಿಗಳ ಎದೆಬಡಿತ ಹೆಚ್ಚಿಸಿದ RR Vs RCB Qualifier 2

  • ‘ಯಶಸ್ವಿ’ಯ ಯಶಸ್ಸಿಗೆ ವಿಶೇಷ ಉಡುಗೊರೆ ನೀಡಿದ ಬಟ್ಲರ್

    ‘ಯಶಸ್ವಿ’ಯ ಯಶಸ್ಸಿಗೆ ವಿಶೇಷ ಉಡುಗೊರೆ ನೀಡಿದ ಬಟ್ಲರ್

    ಡೆಲ್ಲಿ: 14ನೇ ಆವೃತ್ತಿಯ ಐಪಿಎಲ್ ಟೂರ್ನಿ ಮುಂದೂಡಿದ ಬೆನ್ನಲ್ಲೇ ತವರಿಗೆ ತೆರಳಲು ಸಜ್ಜಾದ ರಾಜಸ್ಥಾನ ರಾಯಲ್ಸ್ ತಂಡ ಆರಂಭಿಕ ಆಟಗಾರ ಜೋಸ್ ಬಟ್ಲರ್, ಭಾರತದ ಯುವ ಪ್ರತಿಭಾವಂತ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್‍ಗೆ ತಮ್ಮ ಬ್ಯಾಟ್‍ನ್ನು ಉಡುಗೊರೆಯಾಗಿ ನೀಡಿ ಶುಭ ಹಾರೈಸಿದ್ದಾರೆ.

    13ನೇ ಆವೃತ್ತಿಯ ಐಪಿಎಲ್‍ನ ಆರಂಭಿಕ ಪಂದ್ಯಗಳಲ್ಲಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಬಟ್ಲರ್ ಮತ್ತು ಬೆನ್ ಸ್ಟೋಕ್ಸ್ ಆರಂಭಿಕ ಆಟಗಾರರಾಗಿ ಕಣಕ್ಕಿಳಿಯುತ್ತಿದ್ದರು. ಬಳಿಕ ಸ್ಟೋಕ್ಸ್ ಗಾಯಗೊಂಡು ಟೂರ್ನಿಯಿಂದ ಹೊರ ನಡೆದ ಬಳಿಕ ಬಟ್ಲರ್ ಜೊತೆ ಮನನ್ ವೋಹ್ರಾ ಆರಂಭಿಕರಾಗಿ ಆಡುತ್ತಿದ್ದರು. ಆದರೆ ವೋಹ್ರಾ ಸತತ ವೈಫಲ್ಯವನ್ನು ಕಂಡ ನಂತರ ಬಟ್ಲರ್ ಜೊತೆ ಯಶಸ್ವಿ ಜೈಸ್ವಾಲ್‍ನ್ನು ಓಪನಿಂಗ್ ಬ್ಯಾಟ್ಸ್ ಮ್ಯಾನ್ ಆಗಿ ಆಡಿಸಲಾಗಿತ್ತು. ಬಳಿಕ ಈ ಜೋಡಿ ರಾಜಸ್ಥಾನ ತಂಡಕ್ಕೆ ಉತ್ತಮ ಆರಂಭವನ್ನು ಒದಗಿಸಿತ್ತು. ಬಟ್ಲರ್, ಜೈಸ್ವಾಲ್ ಜೊತೆ ಮುಂಬೈ ಇಂಡಿಯನ್ಸ್ ವಿರುದ್ಧ ಆರಂಭಿಕರಾಗಿ ಕಣಕ್ಕಿಳಿದು ಭರ್ಜರಿ ಶತಕವನ್ನು ಕೂಡ ಸಿಡಿಸಿದ್ದರು. ಈ ವೇಳೆ ಜೈಸ್ವಾಲ್ ಅವರ ಆಟವನ್ನು ಗಮನಿಸಿರುವ ಬಟ್ಲರ್ ಯುವ ಆಟಗಾರನಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ತಾನು ಶತಕ ಬಾರಿಸಿದ ಬ್ಯಾಟ್‍ನ್ನು ಕೊಡುಗೆಯಾಗಿ ನೀಡಿದ್ದಾರೆ.

    ಬಟ್ಲರ್ ಬ್ಯಾಟ್‍ನಲ್ಲಿ ‘ಟೂ ವಿಶ್ ಯಶ್, ಎಂಜಾಯ್ ಯುವರ್ ಟಾಲೆಂಟ್. ಬೆಸ್ಟ್ ವಿಶಸ್ ಎಂದು ಬರೆದುಕೊಂಡು ಬ್ಯಾಟ್‍ನೊಂದಿಗೆ ಒಂದು ಸಂದೇಶವನ್ನು ಕೂಡ ಬರೆದು ಜೈಸ್ವಾಲ್ ಕೈಗೆ ನೀಡಿದ್ದಾರೆ. ಇದನ್ನು ಪಡೆದುಕೊಂಡ ಜೈಸ್ವಾಲ್ ತುಂಬಾ ಸಂತೋಷಗೊಂಡಿದ್ದಾರೆ. ಈ ಸುಂದರ ಕ್ಷಣವನ್ನು ರಾಜಸ್ಥಾನ ರಾಯಲ್ಸ್ ಫ್ರಾಂಚೈಸ್ ತನ್ನ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಮೂಲಕ ಹಂಚಿಕೊಂಡಿದೆ.

    ಯಶಸ್ವಿ ಬಡವರ್ಗದಿಂದ ಬಂದಂತಹ ಹುಡುಗ, ತನ್ನ ಪ್ರತಿಭೆಯ ಮೂಲಕ ಕ್ರಿಕೆಟ್‍ನಲ್ಲಿ ಹೊಸ ಭರವಸೆಯನ್ನು ಮೂಡಿಸಿರುವ ಈ ಆಟಗಾರನನ್ನು ಗುರುತಿಸಿರುವ ಬಟ್ಲರ್ ತಾನು ಐಪಿಎಲ್‍ನಲ್ಲಿ ಚೊಚ್ಚಲ ಶತಕ ಸಿಡಿಸಿದ ಬ್ಯಾಟ್‍ನ್ನು ಉಡುಗೊರೆಯಾಗಿ ನೀಡುವ ಮೂಲಕ ಯುವ ಆಟಗಾರನಿಗೆ ಸ್ಪೂರ್ತಿಯಾಗಿದ್ದರೆ.