Tag: Jordan

  • ಡ್ರೋನ್‌ ದಾಳಿಗೆ ಅಮೆರಿಕದ ಮೂವರು ಸೈನಿಕರು ಬಲಿ – ತಕ್ಕ ಉತ್ತರ ಕೊಡುತ್ತೇವೆ: ಬೈಡನ್‌ ಎಚ್ಚರಿಕೆ

    ಡ್ರೋನ್‌ ದಾಳಿಗೆ ಅಮೆರಿಕದ ಮೂವರು ಸೈನಿಕರು ಬಲಿ – ತಕ್ಕ ಉತ್ತರ ಕೊಡುತ್ತೇವೆ: ಬೈಡನ್‌ ಎಚ್ಚರಿಕೆ

    – ಇರಾನ್‌ ಬೆಂಬಲಿತ ಉಗ್ರಗಾಮಿಗಳದ್ದೇ ಕೈವಾಡ – ಜೋ ಬೈಡನ್‌ ಕೆಂಡ

    ವಾಷಿಂಗ್ಟನ್‌: ಸಿರಿಯಾ ಗಡಿ (Syrian Border) ಸಮೀಪದಲ್ಲಿರುವ ಈಶಾನ್ಯ ಜೋರ್ಡಾನ್‌ನಲ್ಲಿ ಅಮೆರಿಕ ಸೇನೆಯ ಮೇಲೆ ಡ್ರೋನ್ ದಾಳಿ ನಡೆದಿದ್ದು, ಮೂರು ಸೈನಿಕರು (American Soldiers) ಸಾವನ್ನಪ್ಪಿದ್ದಾರೆ.

    ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, 12ಕ್ಕೂ ಹೆಚ್ಚು ಸೈನಿಕರು ಗಾಯಗೊಂಡಿದ್ದಾರೆ. ಇದರಿಂದ ಕೆಂಡಾಮಂಡಲವಾದ ಯುಎಸ್‌ ಅಧ್ಯಕ್ಷ ಜೋ ಬೈಡನ್‌ (Joe Biden) ಪ್ರತಿದಾಳಿಯ ಸುಳಿವು ಕೊಟ್ಟಿದ್ದಾರೆ. ಇದನ್ನೂ ಓದಿ: ಟೆಕ್ಕಿ ಯುವತಿಯನ್ನ ಗುಂಡಿಕ್ಕಿ ಹತ್ಯೆಗೈದ ಪ್ರಿಯತಮ – ಪೊಲೀಸರು ಪ್ರಕರಣ ಭೇದಿಸಿದ್ದು ಹೇಗೆ?

    ಇದು ಇರಾನ್‌ ಬೆಂಬಲಿತ ಉಗ್ರಗಾಮಿಗಳದ್ದೇ ಕೈವಾಡ ಆಗಿದೆ. ದಾಳಿಯಲ್ಲಿ ನಮ್ಮ ಮೂವರು ಸೈನಿಕರು ಮರಣ ಹೊಂದಿದ್ದಾರೆ. ಇದಕ್ಕೆ ತಕ್ಕ ಉತ್ತರ ಅಮೆರಿಕ ನೀಡಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಬೈಡನ್‌ ಹೇಳಿಕೆಗೆ ಇರಾನ್‌ ಬೆಂಬಲಿತ ರಾಷ್ಟ್ರಗಳ ಗುಂಪು ಆಕ್ಷೇಪ ವ್ಯಕ್ತಪಡಿಸಿದೆ. ಇದನ್ನೂ ಓದಿ: ಹನುಮಧ್ವಜ ಸಂಘರ್ಷ; ರಾಜ್ಯಾದ್ಯಂತ ಹೋರಾಟದ ಕಿಚ್ಚು – ಮಂಡ್ಯದಲ್ಲಿಂದು ಹೆಚ್‌ಡಿಕೆ, ರೆಡ್ಡಿ ಪಾದಯಾತ್ರೆ

    ಹಮಾಸ್​ನೊಂದಿಗೆ ಇಸ್ರೇಲ್​ನಲ್ಲಿ ಯುದ್ಧ ಪ್ರಾರಂಭವಾದ ಬಳಿಕ ಇದೇ ಮೊದಲ ಬಾರಿಗೆ ಮಧ್ಯಪ್ರಾಚ್ಯದಲ್ಲಿ ಯುಎಸ್​ ಮಿಲಿಟರಿ ಸಿಬ್ಬಂದಿಯನ್ನು ನೇರವಾಗಿ ಗುರಿಯಾಗಿಸಲಾಗಿದೆ. ಹಮಾಸ್ ವಕ್ತಾರ ಸಮಿ ಅಬು ಝಹ್ರಿ ಮಾತನಾಡಿ, ಈ ದಾಳಿಯು ಅಮೆರಿಕದ ಆಡಳಿತಕ್ಕೆ ನೀಡಿರುವ ಎಚ್ಚರಿಕೆಯ ಸಂದೇಶವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಶಾಲಾ ಬಸ್-ಟ್ರ್ಯಾಕ್ಟರ್‌ ನಡುವೆ ಭೀಕರ ಅಪಘಾತ – ನಾಲ್ವರು ವಿದ್ಯಾರ್ಥಿಗಳ ದುರ್ಮರಣ

  • ಜೋರ್ಡನ್ ಪ್ರವಾಸದಲ್ಲಿ ಕಾರುಣ್ಯ : ಮೃತಸಮುದ್ರ ದಂಡೆ ಮೇಲೆ ಬಿಂದಾಸ್ ಪೋಸ್

    ಜೋರ್ಡನ್ ಪ್ರವಾಸದಲ್ಲಿ ಕಾರುಣ್ಯ : ಮೃತಸಮುದ್ರ ದಂಡೆ ಮೇಲೆ ಬಿಂದಾಸ್ ಪೋಸ್

    ಕಾಲಿಗೆ ಚಕ್ರಕಟ್ಟಿಕೊಂಡು ಸದಾ ದೇಶಗಳನ್ನು ಸುತ್ತುವ (Travel) ನಟಿ ಕಾರುಣ್ಯ ರಾಮ್ (Karunya Ram), ಸದ್ಯ ಜೋರ್ಡನ್ (Jordan) ಪ್ರವಾಸದಲ್ಲಿದ್ದಾರೆ. ಸಹೋದರಿ ಜೊತೆ ಟೂರ್ ಮಾಡುತ್ತಿರುವ ಅವರು, ಅಲ್ಲಿನ ಸಂಗತಿಗಳನ್ನು ಅಭಿಮಾನಿಗಳಿಗೆ ತಿಳಿಸುತ್ತಲೇ ಇರುತ್ತಾರೆ. ಜೋರ್ಡನ್ ಮೃತಸಮುದ್ರ ದಂಡೆ ಮೇಲೆ ಬಿಂದಾಸ್ ಆಗಿ ಪೋಸ್ ಕೊಟ್ಟಿರುವ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ.

    ಜೋರ್ಡನ್ ಪ್ರವಾಸ ಮಾಡಬೇಕು ಎನ್ನುವುದು ಹಲವು ವರ್ಷಗಳ ಕನಸಾಗಿತ್ತಂತೆ. ಇದೀಗ ಆ ಕನಸನ್ನು ಕಾರುಣ್ಯ ಈಡೇರಿಸಿಕೊಂಡಿದ್ದಾರೆ. ಅಲ್ಲದೇ, ಜೋರ್ಡನ್ ಇತರ ಸ್ಥಳಗಳ ಬಗ್ಗೆ ಅಭಿಮಾನಿಗಳಿಗೆ ತಿಳಿಸುತ್ತಾರಂತೆ. ಜೋರ್ಡನ್ ಪ್ರವಾಸದ ಹಲವು ಫೋಟೋಗಳನ್ನು ಅವರು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಬಾಲಿವುಡ್ ನಂತರ ತಮಿಳಿನಲ್ಲೂ ಹವಾ ಸೃಷ್ಟಿಸಿದ ‘ಕಬ್ಜ’ ಸಿನಿಮಾ

    ಸಿನಿಮಾ, ರಿಯಾಲಿಟಿ ಶೋಗಳನ್ನು ಮಾಡುತ್ತಲೇ ಇರುವ ಕಾರುಣ್ಯ ರಾಮ್, ಕಾರ್ಯಕ್ರಮಗಳ ಮಧ್ಯ ಬಿಡುವು ತಗೆದುಕೊಂಡು ಪ್ರವಾಸ ಮಾಡುತ್ತಾರೆ. ಪ್ರವಾಸದಲ್ಲಿ ಸಹೋದರಿ ಇರಲೇಬೇಕು ಎನ್ನುವುದು ಅವರ ಕಡ್ಡಾಯಗಳಲ್ಲಿ ಒಂದು. ಹಾಗಾಗಿ ಸಹೋದರಿಯರಿಬ್ಬರೂ ಅನೇಕ ದೇಶಗಳನ್ನು ಸುತ್ತಿದ್ದಾರೆ.

    ಇತ್ತೀಚೆಗಷ್ಟೇ ಕಾರುಣ್ಯ ರಾಮ್ ನಟನೆ ಪೆಟ್ರೋಮ್ಯಾಕ್ಸ್ ಸಿನಿಮಾ ರಿಲೀಸ್ ಆಗಿದೆ. ಸತೀಶ್ ನೀನಾಸಂ ನಾಯಕನಾಗಿ ನಟಿಸಿರುವ ಈ ಸಿನಿಮಾದಲ್ಲಿ ಕಾರುಣ್ಯ ಹೊಸ ಬಗೆಯ ಪಾತ್ರ ಮಾಡಿದ್ದರು. ನಾಟಿ ನಾಟಿ ಡೈಲ್ ಕೂಡ ಹೊಡೆದಿದ್ದರು. ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರಿಂದ ಅದೊಂದು ಸವಾಲಿನ ಪಾತ್ರ ಕೂಡ ಆಗಿತ್ತು.

  • ಸಂಸತ್ತಿನಲ್ಲೇ ಪರಸ್ಪರ ಹೊಡೆದಾಡಿಕೊಂಡ ಸಂಸದರು

    ಸಂಸತ್ತಿನಲ್ಲೇ ಪರಸ್ಪರ ಹೊಡೆದಾಡಿಕೊಂಡ ಸಂಸದರು

    ಅಮ್ಮಾನ್: ಸಂಸತ್‍ನಲ್ಲಿ ಜನರ ಸಮಸ್ಯೆಗಳನ್ನು ಪ್ರತಿಧ್ವನಿಸಬೇಕಾದ, ಜನತೆಗೆ ಮಾದರಿಯಾಗಬೇಕಾದ ಪ್ರತಿನಿಧಿಗಳೇ ಸಂಸತ್ತಿನಲ್ಲಿ ಒಬ್ಬರಿಗೊಬ್ಬರು ಹೊಡೆದಾಡಿಕೊಂಡು ಉದ್ವಿಗ್ನ ವಾತಾವರಣ ಸೃಷ್ಟಿಸಿದ ಘಟನೆ ಜೋರ್ಡಾನ್ ನಲ್ಲಿ ನಡೆದಿದೆ.

    ಜೋರ್ಡಾನ್‍ನಲ್ಲಿ ಸಂಸತ್‍ನ ಅಧಿವೇಶನದಲ್ಲಿ ನಿನ್ನೆ ಸಂವಿಧಾನದ ಪ್ರಸ್ತಾವಿತ ತಿದ್ದುಪಡಿಗಳ ಬಗ್ಗೆ ಚರ್ಚೆ ಇತ್ತು. ಅನಗತ್ಯ ಟೀಕೆಗಳ ಬಗ್ಗೆ ಕ್ಷಮೆಯಾಚಿಸುವಂತೆ ಕೇಳಲಾಯಿತು. ಇದಕ್ಕೆ ಸದಸ್ಯರು ನಿರಾಕರಿಸಿದ್ದು, ಪ್ರತಿನಿಧಿಗಳ ನಡುವೆ ಮಾತಿಗೆ ಮಾತು ಬೆಳೆದು ಗದ್ದಲ ಏರ್ಪಟ್ಟಿದೆ. ಈ ವೇಳೆ ಪ್ರತಿನಿಧಿಗಳು ಒಬ್ಬರಿಗೊಬ್ಬರು ಹೊಡೆದಾಡಿಕೊಂಡಿದ್ದಾರೆ. ಇದನ್ನೂ ಓದಿ: ಕರ್ನಾಟಕ ಬಂದ್‍ಗೆ ಎರಡೇ ದಿನ ಬಾಕಿ – ಹಲವು ವಲಯಗಳಿಂದ ಇನ್ನು ಸಿಕ್ಕಿಲ್ಲ ಪರಿಪೂರ್ಣ ಬೆಂಬಲ

    ಹೊಡೆದಾಟದಲ್ಲಿ ಒಬ್ಬ ಜನಪ್ರತಿನಿಧಿ ನೆಲಕ್ಕೆ ಕುಸಿದು ಬಿದ್ದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

    ಸಂಸತ್‍ನಲ್ಲಿ ಜನಪ್ರತಿನಿಧಿಗಳ ಈ ರೀತಿಯ ನಡವಳಿಕೆಯು ಸ್ವೀಕಾರಾರ್ಹವಲ್ಲ. ಇದು ನಮ್ಮ ದೇಶದ ಪ್ರತಿಷ್ಠೆಗೆ ಧಕ್ಕೆ ತರುತ್ತದೆ ಎಂದು ಸಂಸತ್ತಿನ ಸದಸ್ಯ ಖಲೀಲ್ ಅತಿಯೆಹ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಭಾರತದ ಮಹಿಳಾ ಯುವ ಉದ್ಯಮಿ ಪಂಖೂರಿ ಶ್ರೀವಾಸ್ತವ ಹೃದಯ ಸ್ತಂಭನದಿಂದ ನಿಧನ

  • 76ರ ಹರೆಯದಲ್ಲಿ ಪೈಲಟ್ ಆಗುವ ಕನಸು ನನಸು

    76ರ ಹರೆಯದಲ್ಲಿ ಪೈಲಟ್ ಆಗುವ ಕನಸು ನನಸು

    ಅಮ್ಮಾನ್: ಛಲ ಇದ್ದರೆ ಏನನ್ನು ಬೇಕಾದರೂ ಗೆಲ್ಲಬಹುದು ಎಂಬುದಕ್ಕೆ 76 ವರ್ಷದ ವೃದ್ಧ ತನ್ನ ಪೈಲಟ್ ಆಗುವ ಕನಸನ್ನು ನೆರವೇರಿಸಿಕೊಂಡಿರುವುದೇ ಉದಾಹರಣೆಯಾಗಿದೆ. ಈ ಘಟನೆ ಜೋರ್ಡಾನ್ ನಲ್ಲಿ ನಡೆದಿದೆ.

    ಜೋರ್ಡಾನ್ ನಿವಾಸಿ ಮುಹಮ್ಮದ್ ಮಲ್ಹಾಸ್ ಪೈಲಟ್ ಆಗುವ ಕನಸು ಕಂಡಿದ್ದರು. ಏನೇ ಬಂದರೂ ಛಲ ಬಿಡದ ಅವರು ತಮ್ಮ 76 ವರ್ಷ ವಯಸ್ಸಿನಲ್ಲಿ ನೆರವೇರಿಸಿಕೊಂಡಿದ್ದಾರೆ. ಆದರೆ ಈ ವಿಮಾನ ಆಕಾಶದ ಮೇಲೆ ಹಾರಾಡುವುದಿಲ್ಲ ಬದಲಿಗೆ ಕುಳಿತುಕೊಂಡು ವಿಮಾನದಲ್ಲಿ ಇರುವಂತೆ ಫೀಲ್ ಮಾಡಬಹುದು. ವಿಮಾನದ ರೀತಿಯಲ್ಲಿಯೇ ಕಾಕ್‍ಪಿಟ್ ಅನ್ನು ಮಲ್ಹಾಸ್ ತಮ್ಮ ನೆಲಮಾಳಿಗೆಯಲ್ಲಿ ನಿರ್ಮಿಸಿ ಆ ಮೂಲಕ ಮೋಡಗಳ ಮೇಲೆ ಮೇಲೇರುವ ಕನಸ್ಸನ್ನು ನೆರವೇರಿಸಿಕೊಂಡಿದ್ದಾರೆ. ಇದನ್ನೂ ಓದಿ: ಅನೈತಿಕ ಸಂಬಂಧ ಶಂಕೆ – ಪತ್ನಿಯ ಕತ್ತು ಸೀಳಿ ಕೊಂದ ಪತಿ

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಮಲ್ಹಾಸ್, ಪ್ರಾಚೀನ ಕಾಲದಿಂದಲೂ, ಮನುಷ್ಯ ಆಕಾಶದಲ್ಲಿ ಪಕ್ಷಿಗಳನ್ನು ನೋಡುತ್ತಿದ್ದಾನೆ. ಅವನು ಸಹ ಮುಕ್ತವಾಗಿ ಹಾರುವ ಕನಸು ಕಾಣುತ್ತಿದ್ದಾನೆ. ಹುಡುಗನಾಗಿದ್ದಾಗ, ಮನುಷ್ಯ ಗಾಳಿಪಟವನ್ನು ಹಾರಿಸಿ ಆನಂದಿಸುತ್ತಿದ್ದನು. ಕಾಗದದಿಂದ ಮಾಡಿದ ಎಷ್ಟೋ ವಸ್ತುಗಳು ಹೇಗೆ ಎತ್ತರಕ್ಕೆ ಏರುತ್ತದೆ ಎಂದು ಆಶ್ಚರ್ಯ ಪಡುತ್ತಾನೆ ಎಂದು ಬಾಲ್ಯದಲ್ಲಿ ಮನುಷ್ಯನಿಗೆ ಕಾಡುವ ಸಂಗತಿಗಳನ್ನು ಹೇಳಿದರು.

    ಆಗಿನಿಂದಲೂ ನನ್ನಲ್ಲಿ ಹಾರಾಟದ ಬಯಕೆ ಮತ್ತು ಪ್ರೀತಿ ಗೀಳಾಗಿಸಲು ಪ್ರಾರಂಭಿಸಿತು. ನನ್ನ ಮನಸ್ಸು ಯಾವಾಗಲೂ ಆಕಾಶದ ಮೇಲೆ ಹಾರಾಡಬೇಕು ಎಂದು ಹೇಳುತ್ತಿತ್ತು. ಬಾಲ್ಯದಿಂದಲೂ ನನಗೆ ಪೈಲಟ್ ಆಗ ಬೇಕು ಎಂದು ಕನಸು ಕಡೆ ಆದರೆ ಅದು ನೆರವೇರಲಿಲ್ಲ. ಆದರೆ ಈ ಮೂಲಕ ನೆರವೇರಿಸಿಕೊಂಡಿದ್ದೇನೆ ಎಂದು ತಿಳಿಸಿದರು. 

    ವೃತ್ತಿಜೀವದಲ್ಲಿ ವೈದ್ಯರಾಗದ್ದ ಮಲ್ಹಾಸ್ ಅವರು ನಿವೃತ್ತಿ ಹೊಂದಿದ ನಂತರ ತಮ್ಮ ಜೀವಿತಾವಧಿಯಲ್ಲಿ ಹೊಸ ಉತ್ಸಾಹವನ್ನು ತೆಗೆದುಕೊಂಡಿದ್ದಾರೆ. ಮಲ್ಹಾಸ್ ಅವರು ಪೈಲಟ್ ಆಗುವ ಕನಸನ್ನು ಕೈಬಿಡದೇ ಬೋಯಿಂಗ್ 737-800 ನ ಕಾಕ್‍ಪಿಟ್‍ನ ಪ್ರತಿರೂಪವಾದ ಫ್ಲೈಟ್ ಸಿಮ್ಯುಲೇಟರ್‍ನಲ್ಲಿ ಕುಳಿತು ಮೂರು ವರ್ಷಗಳ ಕಾಲ ಸ್ಕ್ಯ್ರಾಪ್ ಮತ್ತು ಸೆಕೆಂಡ್‍ಹ್ಯಾಂಡ್ ವಸ್ತುಗಳಿಂದ ಕಾಕ್‍ಪಿಟ್ ಅನ್ನು ನಿರ್ಮಿಸಿದ್ದಾರೆ.

    ಮಲ್ಹಾಸ್ ಅವರು ಈ ಎಲ್ಲ ಭಾಗಗಳನ್ನು ಸ್ಥಳೀಯ ಮಾರುಕಟ್ಟೆಗಳಲ್ಲಿ ಖರೀದಿಸಲಾಗಿದೆ. ಕಾಕ್‍ಪಿಟ್ ನಲ್ಲಿ ಅಳವಡಿಸಲಾದ ಕುರ್ಚಿಗಳು ಮೂಲತಃ ಬಸ್ಸಿನ ಭಾಗವಾಗಿದೆ. ಈ ಕಾಕ್‍ಪಿಟ್ ನಲ್ಲಿ ಪರದೆ ಮೇಲೆ ಮೋಡಗಳು ಮತ್ತು ಆಕಾಶ, ನದಿಗಳು, ಕಾಡುಗಳು ಮತ್ತು ಮರುಭೂಮಿಗಳ ಚಿತ್ರಗಳನ್ನು ತೋರಿಸುತ್ತವೆ. ಅದು ಅಲ್ಲದೇ ಹೊರಗಿನ ಹವಾಮಾನ ಹೇಗಿದೆ ಎಂಬುದನ್ನು ಕುಳಿತುಕೊಂಡೆ ಅವರು ಫೀಲ್ ಸಹ ಮಾಡಬಹುದು.

    ಎಲೆಕ್ಟ್ರಾನಿಕ್ ಎಂಜಿನಿಯರ್ ಸ್ನೇಹಿತರ ಸಹಾಯದಿಂದ ಈ ವಿಮಾನವನ್ನು ನಿರ್ಮಿಸಿದ್ದು, ಸುಮಾರು ಆರು ಸಾವಿರ ದಿನಾರ್‌ಗಳು(1,63,00,000 ರೂ.) ಗಳಲ್ಲಿ ನಿರ್ಮಿಸಲಾಗಿದೆ. ಈ ವಿಮಾನವನ್ನು ನಿರ್ಮಿಸಲು ಸುಮಾರು ಮೂರು ವರ್ಷಗಳ ಕಾಲ ತೆಗೆದುಕೊಳ್ಳಲಾಗಿದೆ. ಇದನ್ನೂ ಓದಿ:   ಸರ್ಕಾರಿ ಉದ್ಯೋಗ ಇಲ್ಲದೆ ಯುವಕರಲ್ಲಿ ಹತಾಶೆ: ವರುಣ್ ಗಾಂಧಿ

    ಮಲ್ಹಾಸ್ ಅವರ ಸ್ನೇಹಿತ ಅಹ್ಮದ್ ಫೇರ್ಸ್, 25 ಸ್ವಿಚ್‍ಗಳು ಮತ್ತು ಸೂಚಕಗಳನ್ನು ಸ್ಥಾಪಿಸಲು ಸಹಾಯ ಮಾಡಿದರು. ಈ ಮೂಲಕ ಅವರು ನಿಜವಾದ ವಿಮಾನದಲ್ಲಿ ಕುಳಿತುಕೊಂಡು ಹಾರುತ್ತಿರುವಂತೆ ಕಾಣುತ್ತದೆ. ಈ ಪ್ರಯತ್ನಕ್ಕೆ ಮಲ್ಹಾಸ್ ಅವರ ಹೆಂಡತಿ ಸಹ ಸಹಕರಿಸುತ್ತಿದ್ದರು.

    ಮಲ್ಹಾಸ್ ಅವರು 1969 ರಲ್ಲಿ ಲಂಡನ್ ವಿಶ್ವವಿದ್ಯಾಲಯದಲ್ಲಿ ಆಸ್ಪತ್ರೆ ನಿರ್ವಹಣೆಯಲ್ಲಿ ಪದವಿ ಪಡೆದರು. ಅವರ ಕುಟುಂಬವು ಸ್ಥಾಪಿಸಿದ ಅಮ್ಮಾನ್ ಆಸ್ಪತ್ರೆಯಲ್ಲಿ ಅವರ ತಂದೆಯೊಂದಿಗೆ ಕೆಲಸ ಮಾಡಲು ಹೋದರು. ಆದರೆ ಮಲ್ಹಾಸ್ ಅವರು ಮಾತ್ರ ತಮ್ಮ ಕನಸುಗಳನ್ನು ಮರೆಯಲು ಸಾಧ್ಯವಾಗಲೇ ಇಲ್ಲ. ಈ ಹಿನ್ನೆಲೆ ಅವರು ವಿಮಾನಯಾನ, ಏರ್‍ಕ್ರಾಫ್ಟ್ ಎಂಜಿನಿಯರಿಂಗ್ ಮತ್ತು ಹಾರಾಟವನ್ನು ಕಲಿಯಲು ಮಾರ್ಗದರ್ಶಿಗಳನ್ನು ಸಂಪರ್ಕಿಸಿ ತಮ್ಮ ಕನಸನ್ನು ನೆರವೇರಿಸಿಕೊಂಡಿದ್ದಾರೆ.