Tag: Jolly Ride

  • ಬೆಂಗಳೂರಲ್ಲಿ ಪ್ರೇಮಿಗಳ ಜಾಲಿ ರೈಡ್ – ಬೈಕ್‌ ಪೆಟ್ರೋಲ್ ಟ್ಯಾಂಕ್ ಮೇಲೆ ಹುಡ್ಗಿ ಕೂರಿಸ್ಕೊಂಡು ರೊಮ್ಯಾನ್ಸ್;‌ ಅಸಲಿಯತ್ತೇನು?

    ಬೆಂಗಳೂರಲ್ಲಿ ಪ್ರೇಮಿಗಳ ಜಾಲಿ ರೈಡ್ – ಬೈಕ್‌ ಪೆಟ್ರೋಲ್ ಟ್ಯಾಂಕ್ ಮೇಲೆ ಹುಡ್ಗಿ ಕೂರಿಸ್ಕೊಂಡು ರೊಮ್ಯಾನ್ಸ್;‌ ಅಸಲಿಯತ್ತೇನು?

    ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ  ರೀಲ್ಸ್‌ (Social Media Reels) ಹಾಕುವ ಸಲುವಾಗಿ ಯುವಕರು ಬೈಕ್‌ ವ್ಹೀಲಿಂಗ್‌, ಸ್ಟಂಟ್‌ ಮಾಡುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಅದರಲ್ಲೂ ಸಿಲಿಕಾನ್‌ ಸಿಟಿಯಲ್ಲಿ ಕೇಳುವಂತೆಯೇ ಇಲ್ಲ. ಪೊಲೀಸರು (Bengaluru Traffic Police) ಆಗಾಗ್ಗೆ ಬಿಸಿ ಮುಟ್ಟಿಸುತ್ತಿದ್ದರೂ ಪುಂಡರು ಡೋಂಟ್‌ ಕೇರ್‌ ಅನ್ನುತ್ತಿದ್ದಾರೆ. ಇದನ್ನೂ ಓದಿ: ಸೊಂಟ ಕಾಣಿಸುವಂತೆ ಹಸಿರು ಸೀರೆಯುಟ್ಟು ಬಂದ ಉರ್ಫಿ – ಒಳಉಡುಪು ಎಲ್ಲಿ ಹೋಯ್ತು ಅಂದ ನೆಟ್ಟಿಗರು

    ಇದರಿಂದ ರಸ್ತೆಯಲ್ಲಿ ಹೋಗುವ ಇತರ ಸವಾರರಿಗೂ ಕಿರಿಕಿರಿ ಉಂಟಾಗುವುದನ್ನು ಕಾಣುತ್ತಿರುತ್ತೇವೆ. ಈ ನಡುವೆ ಪ್ರೇಮಿಗಳಿಬ್ಬರು ಜಾಲಿ ರೈಡ್ (Lovers Jolly Ride) ಮಾಡಿರುವ ಘಟನೆಯೊಂದು ಸಿಲಿಕಾನ್‌ ಸಿಟಿಯಲ್ಲಿ ನಡೆದಿದೆ. ಬೈಕ್‌ನ ಪೆಟ್ರೋಲ್ ಟ್ಯಾಂಕ್ ಮೇಲೆ ಯುವತಿಯನ್ನ ಕೂರಿಸಿಕೊಂಡು ಯುವಕನೊಬ್ಬ ಬೈಕ್‌ ಚಲಾಯಿಸಿದ್ದಾನೆ. ಸದ್ಯ ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಉಕ್ರೇನ್‌ಗೆ ಮೋದಿ ಭೇಟಿ – ಝೆಲೆನ್ಸ್ಕಿ ಜೊತೆ ಮಾತುಕತೆ; ಯುದ್ಧದಲ್ಲಿ ಮಡಿದ ಮಕ್ಕಳ ಸ್ಮಾರಕ ವೀಕ್ಷಿಸಿದ ಪ್ರಧಾನಿ!

    ಹೌದು. ದೇವನಹಳ್ಳಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪ್ರೇಮಿಗಳಿಬ್ಬರ ಜಾಲಿರೈಡ್‌ ಅನ್ನು ಹಿಂದೆ ಕಾರಿನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಮೇಲ್ನೋಟಕ್ಕೆ ಪ್ರಾಂಕ್‌ ಮಾಡುವ ಉದ್ದೇಶದಿಂದ ಈ ವೀಡಿಯೋ ಚಿತ್ರೀಕರಿಸಿದ್ದಾರೆ ಎನ್ನಲಾಗ್ತಿದೆ. ಯುವಕನೇ ಯುವತಿಯ ರೀತಿ ಹೇರ್‌ಸ್ಟೈಲ್‌ ಮಾಡಿಕೊಂಡು ವೀಡಿಯೋ ಚಿತ್ರೀಕರಣ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ಇದನ್ನೂ ಓದಿ: ಬಿಜೆಪಿ ಏನೇ ಆರೋಪ ಮಾಡಲಿ ತಲೆ ಕೆಡಿಸಿಕೊಳ್ಳಬೇಡಿ: ಸಿಎಂಗೆ ಹೈಕಮಾಂಡ್ ಅಭಯ

  • ಹಲ್ಲೆಗೊಳಗಾದ ವಲಸೆ ಕಾರ್ಮಿಕ ಬಾಲಕನನ್ನು ಐಷಾರಾಮಿ ಕಾರಿನಲ್ಲಿ ಜಾಲಿ ರೈಡ್ ಮಾಡಿಸಿದ ಚಿನ್ನದಂಗಡಿ ಮಾಲೀಕ

    ಹಲ್ಲೆಗೊಳಗಾದ ವಲಸೆ ಕಾರ್ಮಿಕ ಬಾಲಕನನ್ನು ಐಷಾರಾಮಿ ಕಾರಿನಲ್ಲಿ ಜಾಲಿ ರೈಡ್ ಮಾಡಿಸಿದ ಚಿನ್ನದಂಗಡಿ ಮಾಲೀಕ

    ತಿರುವನಂತಪುರಂ: ಕಳೆದ ತಿಂಗಳು ಕೇರಳದ (Kerala) ಕಣ್ಣೂರಿನಲ್ಲಿ (Kannur) ವ್ಯಕ್ತಿಯೊಬ್ಬನಿಂದ ಹಲ್ಲೆಗೊಳಗಾದ 6 ವರ್ಷದ ಬಾಲಕ (Boy) ಮತ್ತು ಆತನ ಕುಟುಂಬವನ್ನು ಚಿನ್ನದಂಗಡಿಯ ಮಾಲೀಕನೊಬ್ಬ (Gold Shop Owner) ತನ್ನ ಐಷಾರಾಮಿ ಕಾರಿನಲ್ಲಿ (luxury car) ಜಾಲಿ ರೈಡ್ ಹಾಗೂ ಶಾಪಿಂಗ್‌ಗೆ ಕರೆದುಕೊಂಡು ಹೋಗಿದ್ದಾರೆ. ಈ ಮೂಲಕ ಚಿನ್ನದಂಗಡಿ ಮಾಲೀಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಕೊಟ್ಟಾಯಂ ಮೂಲದ ಜುವೆಲ್ಲರಿ ಗ್ರೂಪ್‌ನ ಆಚಾಯನ್ಸ್ ಗೋಲ್ಡ್‌ನ ಮಾಲೀಕ ಟೋನಿ ವರ್ಕಿಚನ್ ರಾಜಸ್ಥಾನ ಮೂಲದ ವಲಸೆ ಕಾರ್ಮಿಕ ಕುಟುಂಬದ 6 ವರ್ಷದ ಬಾಲಕ ಗಣೇಶ್‌ನನ್ನು ಆತನ ಕುಟುಂಬದ ಜೊತೆಗೆ ಕೋಝಿಕ್ಕೋಡ್‌ನಾದ್ಯಂತ ನಗರದಲ್ಲಿ ಜಾಲಿ ರೈಡ್ ಕರೆದುಕೊಂಡು ಹೋಗಿದ್ದಾರೆ. ಮಾತ್ರವಲ್ಲದೇ ಬಾಲಕನಿಗೆ ಬೇಕೆನಿಸಿದ್ದನ್ನೆಲ್ಲವನ್ನೂ ತೆಗೆಸಿ ಕೊಟ್ಟಿದ್ದಾರೆ.

    ಕಳೆದ ತಿಂಗಳು ವಲಸೆ ಕಾರ್ಮಿಕ ಕುಟುಂಬದ ಬಾಲಕ ಕಣ್ಣೂರಿನಲ್ಲಿ ಕಾರೊಂದಕ್ಕೆ ಒರಗಿ ನಿಂತಿದ್ದಕ್ಕಾಗಿ ಕಾರ್‌ನ ಮಾಲೀಕ ಕೋಪಗೊಂಡು ಬಾಲಕನಿಗೆ ಕಾಲಿನಿಂದ ಒದ್ದಿದ್ದ. ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿ ಶಿಹಸಾದ್‌ನನ್ನು ಪೊಲೀಸರು ಬಂಧಿಸಿದ್ದರು. ಈ ಘಟನೆಯ ಬಳಿಕ ರಾಜ್ಯಾದ್ಯಂತ ವಲಸೆ ಕಾರ್ಮಿಕರ ಬಗ್ಗೆ ಹಲವರು ಅನುಕಂಪ ತೋರಿ ಅತಿಥಿ ಕೆಲಸಗಾರರು ಎಂದು ಸಂಬೋಧಿಸಿದರು. ಇದನ್ನೂ ಓದಿ: ಕಾಂತಾರ ಚಿತ್ರ ವೀಕ್ಷಿಸಲು ಥಿಯೇಟರ್‌ಗೆ ಬಂದ ಜೋಡಿ ಮೇಲೆ ಹಲ್ಲೆ

    ಈ ಘಟನೆ ನಡೆದ 1 ತಿಂಗಳ ಬಳಿಕ ಟೋನಿ ಅವರು ಹಲ್ಲೆಗೊಳಗಾದ ಬಾಲಕನನ್ನು ಗುರುತಿಸಿ, ಆತನಿಗೆ ಹಾಗೂ ಆತನ ಕುಟುಂಬದವರಿಗೆ ಜಾಲಿ ರೈಡ್ ಹಾಗೂ ಶಾಪಿಂಗ್ ಕರೆದುಕೊಂಡು ಹೋಗಲು ಮುಂದಾದರು. ಬಾಲಕನ ಕುಟುಂಬಕ್ಕೆ ಟೋನಿ 3 ತಿಂಗಳ ಕಾಲ ಆರ್ಥಿಕ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಶ್ರದ್ಧಾ ವಾಕರ್ ಹತ್ಯೆ ಕೇಸ್- ಪೀಸ್ ಪೀಸ್ ಪ್ರೇಮಿಗೆ ಜೈಲು ಅವಧಿ ವಿಸ್ತರಣೆ

    Live Tv
    [brid partner=56869869 player=32851 video=960834 autoplay=true]

  • ಬೆಳ್ಳಂ ಬೆಳಗ್ಗೆ ಜಾಲಿ ರೈಡ್ ಬಂದವರಿಗೆ ಶಾಕ್ – ಐಶಾರಾಮಿ ಬೈಕ್, ಕಾರು ವಶ

    ಬೆಳ್ಳಂ ಬೆಳಗ್ಗೆ ಜಾಲಿ ರೈಡ್ ಬಂದವರಿಗೆ ಶಾಕ್ – ಐಶಾರಾಮಿ ಬೈಕ್, ಕಾರು ವಶ

    ಬೆಂಗಳೂರು: ಬೆಳ್ಳಂ ಬೆಳಗ್ಗೆ ಜಾಲಿ ರೈಡ್ ಬಂದವರಿಗೆ ಪೊಲೀಸರು ಶಾಕ್ ನೀಡಿದ್ದಾರೆ.

    ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿ ಟೋಲ್ ಬಳಿ 40ಕ್ಕೂ ಹೆಚ್ಚು ಬೈಕ್ ಹಾಗೂ ಕಾರುಗಳ ವಶಕ್ಕೆ ಪಡೆಯಲಾಗಿದೆ. ಈ ಕಾರು ಹಾಗೂ ಬೈಕ್ ಸವಾರರು ತಮ್ಮ ವಾಹನವನ್ನು ಸೈಲೆನ್ಸರ್ ಮಾರ್ಪಾಡು ಮಾಡಿಕೊಂಡು ಮಂಗಳೂರು-ನೆಲಮಂಗಲ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಚಾಲನೆ ಮಾಡುತ್ತಿದ್ದರು.

    ಅತಿಯಾದ ಸೌಂಡ್ ಹಾಗೂ ವಾಯು ಮಾಲಿನ್ಯ ಹಿನ್ನೆಲೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಆರ್‌ಟಿಓ ಅಧಿಕಾರಿಗಳು ಕಾರ್ಯಚರಣೆ ನಡೆಸಿ ವಶಕ್ಕೆ ಪಡೆಯಲಾಗಿತ್ತು. ವಶಕ್ಕೆ ಪಡೆದ ಬೈಕ್ ಮತ್ತು ಕಾರುಗಳು ಉದ್ಯಮಿ ಮತ್ತು ರಾಜಕೀಯ ನಾಯಕರ ಮಕ್ಕಳಿಗೆ ಸೇರಿದ್ದು ಎಂಬ ಮಾಹಿತಿ ಲಭ್ಯವಾಗಿದೆ. ಮೇಲಾಧಿಕಾರಿಗಳ ಒತ್ತಡದಿಂದಾಗಿ ವಶಕ್ಕೆ ಪಡೆದ ವಾಹನಗಳನ್ನು ಬಿಡಲಾಗಿದೆ ಎನ್ನಲಾಗಿದೆ. ಇದನ್ನೂ ಓದಿ:ಕಾಣಿಕೆ ಹುಂಡಿ ಕದ್ದ ಕಳ್ಳರು – ಮುಖ್ಯ ರಸ್ತೆಯಲ್ಲಿರುವ ದೇವಾಲಯಕ್ಕಿಲ್ಲ ರಕ್ಷಣೆ

  • ಜಾಲಿ ರೈಡ್‍ಗಾಗಿ ಬೈಕ್ ಕಳ್ಳತನ ಮಾಡ್ತಿದ್ದ ಖದೀಮರ ಬಂಧನ

    ಜಾಲಿ ರೈಡ್‍ಗಾಗಿ ಬೈಕ್ ಕಳ್ಳತನ ಮಾಡ್ತಿದ್ದ ಖದೀಮರ ಬಂಧನ

    – 19 ಬೈಕ್ ಪೊಲೀಸ್ ವಶಕ್ಕೆ

    ಬೆಂಗಳೂರು: ಜಾಲಿ ರೈಡ್ ಹೋಗಲು ಬೈಕ್ ಕಳ್ಳತವನ್ನೇ ವೃತ್ತಿಯಾಗಿಸಿಕೊಂಡಿದ್ದ ಖದೀಮರನ್ನು ಡಿ.ಜಿ.ಹಳ್ಳಿ ಪೊಲೀಸರು ಬಂಧಿಸಿದ್ದಾರೆ.

    ಆರ್ಬಾಜ್ ಖಾನ್ (21), ಮೊಹಮ್ಮದ್ ಸೂಫಿಯಾನ್ (24) ಬಂಧಿತ ಆರೋಪಿಗಳು. ಡಿ.ಜಿ.ಹಳ್ಳಿ ನಿವಾಸಿಗಳಿದ್ದ ಆರೋಪಿಗಳು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾಕಷ್ಟು ಬೈಕ್ ಕಳ್ಳತನ ಮಾಡಿ ಪೊಲೀಸರಿಗೆ ತಲೆ ನೋವಾಗಿದ್ದರು. ಅಲ್ಲದೇ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚಿಗೆ ಸಾಕಷ್ಟು ಬೈಕ್‍ಗಳ ಕಳ್ಳ ಪ್ರಕರಣಗಳು ದಾಖಲಾಗಿತ್ತು.

    ಬೈಕ್ ಕಳ್ಳತನ ಪ್ರಕರಣಗಳ ಬಗ್ಗೆ ತಲೆಕೆಡಿಸಿಕೊಂಡ ಪೊಲೀಸರು ಖದೀಮರ ಜಾಡು ಹಿಡಿದು ಬಲೆಗೆ ಬಿಳಿಸಲು ರಾತ್ರಿ ಗಸ್ತು ಹೆಚ್ಚು ಆರಂಭಿಸಿದ್ದರು. ರಾತ್ರಿ ವೇಳೆಯೇ ಹೆಚ್ಚು ಬೈಕ್ ಕಳ್ಳತನ ಪ್ರಕರಣಗಳು ನಡೆಯುತ್ತಿತ್ತು. ಆರೋಪಿಗಳಿಬ್ಬರು ರಾತ್ರಿ ವೇಳೆ ಬೈಕ್ ಹ್ಯಾಂಡಲ್ ಲಾಕ್ ಮುರಿದು ಕಳ್ಳತನ ಮಾಡುತ್ತಿದ್ದರು. ಆದ್ದರಿಂದ ರಾತ್ರಿ ವೇಳೆಯೇ ಹೆಚ್ಚಿನ ಭದ್ರತೆ ಹಾಕಿ ನಿಗಾ ವಹಿಸಿದ್ದರು.

    ಕಳೆದ ತಿಂಗಳ ಕೊನೆಯ ವಾರದಲ್ಲಿ ನಡೆದಿದ್ದ ಬೈಕ್ ಕಳ್ಳತನ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿತ್ತು. ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಹೆಚ್ಚಿನ ತನಿಖೆ ನಡೆಸಿದ ವೇಳೆ ಆರೋಪಿಗಳಿಬ್ಬರು ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ ಬಳಿಕ ಹಲವು ಪ್ರಕರಣಗಳು ಬೆಳಕಿಗೆ ಬಂದಿದೆ. ಈ ಮಾಹಿತಿಯನ್ನು ಆಧರಿಸಿ ಆರೋಪಿಗಳು ಇದುವರೆಗೂ ಕಳ್ಳತನ ಮಾಡಿದ್ದ ಬೈಕ್‍ಗಳನ್ನು ಪತ್ತೆ ಮಾಡುವ ಕಾರ್ಯ ಮಾಡಿದ್ದಾರೆ.

    ವಿಚಾರಣೆ ವೇಳೆ ಆರೋಪಿಗಳು ಕಳ್ಳತನ ಮಾಡಲು ಕಾರಣವೇನು ಎಂಬುವದನ್ನು ಪ್ರಶ್ನೆ ಮಾಡಿದ್ದು, ಜಾಲಿ ರೈಡ್ ಮಾಡಲು ಬೈಕ್‍ಗಳನ್ನು ಕಳ್ಳತನ ಮಾಡುತ್ತಿದ್ದಾಗಿ ಬಂಧಿತರು ತಿಳಿಸಿದ್ದಾರೆ. ಸದ್ಯ ಆರೋಪಿಗಳಿಂದ 19 ವಿವಿಧ ಕಂಪನಿಯ ಬೈಕ್‍ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಹೆಚ್ಚಿನ ತನಿಖೆ ನಡೆಸಿದ್ದಾರೆ. ಅಲ್ಲದೇ ಡಿ.ಜಿ.ಹಳ್ಳಿ ಪೊಲೀಸ್ ಠಾಣೆ ಹೊರತು ಪಡಿಸಿ ಬೇರೆ ಬೇರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿಗಳ ಮೇಲೆ ಕಳ್ಳತನ ಪ್ರಕರಗಣಲು ದಾಖಲಾಗಿರುವ ಕುರಿತು ಮಾಹಿತಿ ಪಡೆದುಕೊಳ್ಳಲಾಗುತ್ತಿದೆ.

  • ವೀಕೆಂಡ್ ಟ್ರಿಪ್‍ಗೆ ಬಂದ ಮೂವರಲ್ಲಿ ಸ್ನೇಹಿತನನ್ನ ಒಬ್ಬಂಟಿ ಮಾಡಿ ಹೋದ್ರು

    ವೀಕೆಂಡ್ ಟ್ರಿಪ್‍ಗೆ ಬಂದ ಮೂವರಲ್ಲಿ ಸ್ನೇಹಿತನನ್ನ ಒಬ್ಬಂಟಿ ಮಾಡಿ ಹೋದ್ರು

    – ಜಾಲಿ ರೈಡ್ ಮೂಡ್‍ನಲ್ಲಿದ್ದ ಇಬ್ಬರು ಅಪಘಾತಕ್ಕೆ ಬಲಿ

    ಮಡಿಕೇರಿ: ಕೆಎಸ್ಆರ್‌ಟಿಸಿ ಬಸ್‍ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ವೀಕೆಂಡ್ ಟ್ರಿಪ್‍ಗೆ ಬಂದಿದ್ದ ಮೂವರಲ್ಲಿ ಇಬ್ಬರು ಸ್ನೇಹಿತರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಮಡಿಕೇರಿ ತಾಲೂಕಿನ ಕೊಯಿನಾಡು ಸಮೀಪದ ದೇವರ ಕೊಲ್ಲಿಯಲ್ಲಿ ನಡೆದಿದೆ.

    ರಾಜಸ್ಥಾನ ಮೂಲದ ಹರ್ನಾಬ್ (30) ಹಾಗೂ ಪಶ್ಚಿಮ ಬಂಗಾಳ ಮೂಲದ ನವೀನ್ (29) ಮೃತ ಸ್ನೇಹಿತರು. ಮೂವರು ಸ್ನೇಹಿತರು ವೀಕೆಂಡ್‍ನಲ್ಲಿ ಟ್ರಿಪ್‍ಗೆಂದು ಬಂದಿದ್ದರು. ಶುಕ್ರವಾರ ತುಮಕೂರಿನಿಂದ ಕೂಡಗಿಗೆ ಗೂಗಲ್ ಮ್ಯಾಪ್ ಹಾಕಿಕೊಂಡು ಪ್ರಯಾಣ ಬೆಳೆಸಿದ್ದರು.

    ಪ್ರವಾಸಕ್ಕೆಂದು ಬಂದಿದ್ದ ಮೂವರಲ್ಲಿ ಇಬ್ಬರು ಒಂದು ಬೈಕಿನಲ್ಲಿ ಮತ್ತೊಬ್ಬ ಸ್ನೇಹಿತ ಮತ್ತೊಂದು ಬೈಕಿನಲ್ಲಿ ಅವರನ್ನು ಪಾಲೋ ಮಾಡುತ್ತಿದ್ದನು. ಆದರೆ ಇಬ್ಬರು ಸ್ನೇಹಿತರಿದ್ದ ಬೈಕ್ ಮಡಿಕೇರಿ ಕಡೆಯಿಂದ ಸಿದ್ದಾಪುರ-ಮಂಗಳೂರು ಕಡೆಗೆ ಬರುತ್ತಿದ್ದ ಬಸ್‍ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ಕೊಯಿನಾಡು ಸಮೀಪದ ದೇವರ ಕೊಲ್ಲಿನಲ್ಲಿ ತಿರುವಿನಲ್ಲಿ ವೇಗವಾಗಿ ಬಂದ ಬಸ್ ರಸ್ತೆ ಪಕ್ಕದಲ್ಲೇ ಬಿದ್ದಿದ್ದ ಮರವನ್ನು ತಪ್ಪಿಸಲು ಬಲಕ್ಕೆ ಬಂದಿದೆ. ಹೀಗಾಗಿ ಈ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಈ ಬಗ್ಗೆ ಅರಣ್ಯ ಮತ್ತು ಲೋಕೋಪಯೋಗಿ ಇಲಾಖೆಗಳ ತನಿಖೆ ನಂತರ ತಪ್ಪು ಯಾರದ್ದು ಎಂದು ಗೊತ್ತಾಗಬೇಕಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಜಾಲಿ ರೈಡ್ ಕರೆದುಕೊಂಡು ಹೋಗಿ ಪತ್ನಿಯನ್ನೇ ಕೊಂದ

    ಜಾಲಿ ರೈಡ್ ಕರೆದುಕೊಂಡು ಹೋಗಿ ಪತ್ನಿಯನ್ನೇ ಕೊಂದ

    ಬೆಂಗಳೂರು: ಪತಿಯೊಬ್ಬ ತನ್ನ ಪತ್ನಿಯನ್ನು ಜಾಲಿ ರೈಡ್‍ಗೆ ಕರೆದುಕೊಂಡು ಹೋಗಿ ಕೊಲೆ ಮಾಡಿರುವ ಘಟನೆ ನವೆಂಬರ್ 16ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ತೇಜ್ ಸಿಂಗ್ ಅರೆಸ್ಟ್ ಆದ ಪತಿ. ಆರೋಪಿ ತೇಜ್ ಸಿಂಗ್ ಹಾಗೂ ಆತನ ಪತ್ನಿ ದೀಪಲ್ ಕಂವಾರ್ ಮೂಲತಃ ರಾಜಸ್ಥಾನದವರಾಗಿದ್ದು, ಹುಣಿಸೇಮಾರನಹಳ್ಳಿ ಬಳಿಯ ಜನತಾ ಕಾಲೋನಿಯಲ್ಲಿ ವಾಸವಿದ್ದರು. ಈ ದಂಪತಿ ಚಿಕ್ಕ ಚಿನ್ನದ ಮಳಿಗೆ ಹೊಂದಿದ್ದರು.

    ಇಬ್ಬರ ನಡುವೆ ಮನಸ್ಥಾಪವಿದ್ದ ಹಿನ್ನೆಲೆಯಲ್ಲಿ ಮನೆಯಲ್ಲಿ ದಿನ ನಿತ್ಯ ಜಗಳ ನಡೆಯುತ್ತಿತ್ತು. ಇದರಿಂದ ರೋಸಿ ಹೋಗಿದ್ದ ಪತಿ ತೇಜ್ ತನ್ನ ಪತ್ನಿ ದೀಪಲ್‍ಳನ್ನು ಕೊಲೆ ಮಾಡಲು ಸಂಚು ರೂಪಿಸಿದ್ದನು. ನ. 16ರಂದು ಸ್ನೇಹಿತನ ಹೆಸರಲ್ಲಿ ಕಾರು ಬುಕ್ ಮಾಡಿ ಪತ್ನಿ ಮತ್ತು ಸ್ನೇಹಿತರನ್ನು ಡಿನ್ನರ್ ಪಾರ್ಟಿಗೆ ಕರೆದುಕೊಂಡು ಹೋಗಿದ್ದನು. ಇದನ್ನೂ ಓದಿ: ಸೆಕ್ಸ್ ಫೋಟೋ ನೋಡಿ ಪತ್ನಿಯನ್ನು ಗುಂಡಿಕ್ಕಿ ಕೊಂದ

    ತೇಜ್ ಸಿಂಗ್ ಸ್ನೇಹಿತರ ಜೊತೆ ಪತ್ನಿಗೂ ಮದ್ಯಪಾನ ಮಾಡಿಸಿದ್ದಾನೆ ಎಂದು ಶಂಕಿಸಲಾಗಿದೆ. ಡಿನ್ನರ್ ನಂತರ ಸ್ನೇಹಿತರನ್ನು ವಾಪಸ್ ಮನೆಗೆ ಬಿಟ್ಟು, ಮಧ್ಯರಾತ್ರಿ ಪತ್ನಿಯನ್ನು ನಂದಿ ಬೆಟ್ಟದ ರಸ್ತೆಗೆ ಕರೆದುಕೊಂಡು ಹೋಗಿ ಕಾರಿನಿಂದ ಕೆಳಗೆ ತಳ್ಳಿದ್ದಾನೆ.

    ಕೆಳಗೆ ಬಿದ್ದು ಓದ್ದಾಡ್ತಿದ್ದ ಪತ್ನಿ ಮೇಲೆ ತೇಜ್ ಸಿಂಗ್ ಕಾರು ಹತ್ತಿಸಿ ಕೊಲೆ ಮಾಡಿದ್ದಾನೆ. ಬಳಿಕ ಅಪರಿಚಿತ ವಾಹನದಿಂದ ಅಪಘಾತವಾಗಿದೆ ಎಂದು ದೂರು ನೀಡಿದ್ದನು. ದೂರು ದಾಖಲಿಸಿಕೊಂಡ ಪೊಲೀಸರು ಕಾರಿನ ಜಿಪಿಎಸ್ ಪರಿಶೀಲಿಸಿದಾಗ ಅಪಘಾತ ಸ್ಥಳದಲ್ಲಿ ಹಿಂದೆ ಮುಂದೆ ಚಲಿಸುವ ಮಾಹಿತಿ ದೊರೆಯಿತು.

    ಬಳಿಕ ಪೊಲೀಸರು ತೇಜ್ ಸಿಂಗ್‍ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಕೆಂಪೇಗೌಡ ವಿಮಾನ ನಿಲ್ದಾಣ ಪೊಲೀಸರು ಆರೋಪಿ ತೇಜ್ ಸಿಂಗ್‍ನನ್ನು ಬಂಧಿಸಿದ್ದಾರೆ.

  • ದುಬಾರಿ ಬೈಕಿನಲ್ಲಿ ಜಾಲಿ ರೈಡ್ ವೇಳೆ ಪಾದಚಾರಿಗೆ ಡಿಕ್ಕಿ – ಸವಾರ ಸೇರಿ ಇಬ್ಬರು ಸ್ಥಳದಲ್ಲೇ ಸಾವು

    ದುಬಾರಿ ಬೈಕಿನಲ್ಲಿ ಜಾಲಿ ರೈಡ್ ವೇಳೆ ಪಾದಚಾರಿಗೆ ಡಿಕ್ಕಿ – ಸವಾರ ಸೇರಿ ಇಬ್ಬರು ಸ್ಥಳದಲ್ಲೇ ಸಾವು

    ಬೆಂಗಳೂರು: ದುಬಾರಿ ಡಿಎಸ್‍ಎಕೆ ಬೆನೆಲ್ಲೆ ಬೈಕಿನಲ್ಲಿ ಜಾಲಿ ರೈಡ್ ಮಾಡಲು ಹೋಗಿ ರಸ್ತೆ ದಾಟುತ್ತಿದ್ದ ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಹಾಗೂ ಬೈಕ್ ಸವಾರ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ತಿರುಮಗೊಂಡನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ನಡೆದಿದೆ.

    ಮೃತ ಬೈಕ್ ಸವಾರನನ್ನು ಕೋರಮಂಗಲ ನಿವಾಸಿ ಹರ್ಷ(28) ಎಂದು ಗುರುತಿಸಲಾಗಿದ್ದು, ಪಾದಚಾರಿ ಬಿಹಾರ ಮೂಲದ ಮಹೇಶ್(24)ಎಂದು ಗುರುತಿಸಲಾಗಿದೆ. ವಾರಾಂತ್ಯವಾದ ಕಾರಣ ರಾಷ್ಟ್ರೀಯ ಹೆದ್ದಾರಿಯಲ್ಲಿ ಹರ್ಷ ಹಾಗೂ ಆತನ ಸ್ನೇಹಿತರು ದುಬಾರಿ ಬೈಕ್ ಗಳಲ್ಲಿ ಜಾಲಿ ರೈಡ್ ಹೋಗುತ್ತಿದ್ದರು. ವೇಗವಾಗಿ ಸಾಗುತ್ತಿದ್ದ ವೇಳೆ ತಿರುಮಗೊಂಡನಹಳ್ಳಿ ಬಳಿ ರಸ್ತೆ ದಾಟುತ್ತಿದ್ದ ಮಹೇಶ್ ಅವರಿಗೆ ಬೈಕ್ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸುಮಾರು 200 ಮೀಟರ್ ದೂರಕ್ಕೆ ಎಳೆದೊಯ್ದಿದ್ದು ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದಾರೆ.

    ಹರ್ಷ ರೈಡ್ ಮಾಡುತ್ತಿದ್ದ ಬೆನೆಲ್ಲಿ ಬೈಕಿಗೆ ಭಾರತದಲ್ಲಿ 5.5 ಲಕ್ಷ ರೂ. ಬೆಲೆಯಿದೆ ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.