Tag: Joko Widodo

  • G20ಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸ

    G20ಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸ

    ನವದೆಹಲಿ: ಇಂಡೋನೇಷ್ಯಾ (Indonesia) ಅಧ್ಯಕ್ಷ ಜೋಕೊ ವಿಡೋಡೊ (Joko Widodo) ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಸೆಪ್ಟೆಂಬರ್ 6 ಮತ್ತು 7 ರಂದು ಇಂಡೋನೇಷ್ಯಾದ ಜಕಾರ್ತಕ್ಕೆ ಭೇಟಿ ನೀಡಲಿದ್ದಾರೆ.

    ಅಲ್ಲಿ 20ನೇ ಆಸಿಯಾನ್-ಭಾರತ ಶೃಂಗಸಭೆ ಮತ್ತು 18ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಪ್ರಧಾನಿ ಭಾಗವಹಿಸಲಿದ್ದಾರೆ. ಭಾರತದ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 9 ಮತ್ತು 10 ರಂದು ನವದೆಹಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಗೆ (G20 Summit) ಮುನ್ನ ಪ್ರಧಾನಿ ಮೋದಿ ಅವರ ಇಂಡೋನೇಷ್ಯಾ ಭೇಟಿ ನೀಡುತ್ತಿದ್ದಾರೆ. ಇಂಡೋನೇಷ್ಯಾ ಜಿ20 ಭಾಗವಾಗಿದೆ ಮತ್ತು ಕಳೆದ ವರ್ಷ ಜಿ20 ಗುಂಪಿನ ಅಧ್ಯಕ್ಷ ಸ್ಥಾನವನ್ನು ಹೊಂದಿತ್ತು. ಇದನ್ನೂ ಓದಿ: ಜಿ20ಗೂ ಮುನ್ನ ಮೋದಿ – ಬೈಡೆನ್ ನಡುವೆ ದ್ವಿಪಕ್ಷೀಯ ಮಾತುಕತೆ

    ಪೂರ್ವ ಏಷ್ಯಾ ಶೃಂಗಸಭೆಯು ಆಸಿಯಾನ್ ದೇಶಗಳ ನಾಯಕರು ಮತ್ತು ಭಾರತ ಸೇರಿದಂತೆ ಅದರ ಎಂಟು ಸಂವಾದ ಪಾಲುದಾರರಿಗೆ ಪ್ರಾದೇಶಿಕ ಮತ್ತು ಜಾಗತಿಕ ಪ್ರಾಮುಖ್ಯತೆಯ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶವನ್ನು ಒದಗಿಸುತ್ತದೆ. ಇದನ್ನೂ ಓದಿ: Aditya L1 ಮಿಷನ್ ಯಶಸ್ವಿ: ಇಸ್ರೋ ಅಧ್ಯಕ್ಷ

    ಆಸಿಯಾನ್-ಭಾರತದ ಆರ್ಥಿಕ ಮಂತ್ರಿಗಳು ಇಂಡೋನೇಷ್ಯಾದಲ್ಲಿ ಈ ಹಿಂದೆ ಭೇಟಿಯಾಗಿದ್ದರು. 2009ರಲ್ಲಿ ಸಹಿ ಹಾಕಲಾದ ಆಸಿಯಾನ್-ಭಾರತದ ಸರಕುಗಳ ಒಪ್ಪಂದದ ಪರಿಶೀಲನೆ ಮಾಡಲಾಗಿತ್ತು. ಒಂದು ಜಂಟಿ ಸಮಿತಿಯು ನಿಯಮಿತವಾಗಿ ತ್ರೈಮಾಸಿಕ ಮಾತುಕತೆ ನಡೆಸಲು ಒಪ್ಪಿಕೊಂಡಿತು. ಇದನ್ನೂ ಓದಿ: Aditya L1 Launch: ಸೂರ್ಯ ಶಿಕಾರಿಗೆ ಹೊರಟ ಆದಿತ್ಯ

    ಇಂಡೋನೇಷ್ಯಾ ಅಧ್ಯಕ್ಷ ವಿಡೋಡೊ ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಜಕರ್ತಾಗೆ ಭೇಟಿ ನೀಡುತ್ತಿದ್ದು, ಭೇಟಿಯ ಸಂದರ್ಭದಲ್ಲಿ, ಇಂಡೋನೇಷ್ಯಾ ಮತ್ತು ಭಾರತದ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಹೊಸ ಆಯಾಮಕ್ಕೆ ಕೊಂಡೊಯ್ಯಲು ಹೊಸ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯ ಮಾತುಕತೆ ನಡೆಯಲಿದೆ. ಇದನ್ನೂ ಓದಿ: 11% ಏರಿಕೆ, ಆಗಸ್ಟ್‌ನಲ್ಲಿ 1.59 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ – ಕರ್ನಾಟಕದ ಪಾಲು ಎಷ್ಟು?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಫುಟ್ಬಾಲ್ ತಂಡ ಸೋತಿದಕ್ಕೆ ಸ್ಟೇಡಿಯಂನಲ್ಲೇ ಗಲಭೆ – ಸಾವಿನ ಸಂಖ್ಯೆ 174ಕ್ಕೆ ಏರಿಕೆ, 180 ಮಂದಿಗೆ ಗಾಯ

    ಫುಟ್ಬಾಲ್ ತಂಡ ಸೋತಿದಕ್ಕೆ ಸ್ಟೇಡಿಯಂನಲ್ಲೇ ಗಲಭೆ – ಸಾವಿನ ಸಂಖ್ಯೆ 174ಕ್ಕೆ ಏರಿಕೆ, 180 ಮಂದಿಗೆ ಗಾಯ

    ಜಕಾರ್ತ: ಇಂಡೋನೇಷ್ಯಾದಲ್ಲಿ (Indonesia) ಶನಿವಾರ ರಾತ್ರಿ ನಡೆದ ಫುಟ್ಬಾಲ್ (Football) ಪಂದ್ಯವೊಂದರಲ್ಲಿ ಉಂಟಾದ ಗಲಭೆಯಿಂದಾಗಿ 127 ಇದ್ದ ಮೃತರ ಸಂಖ್ಯೆ 174ಕ್ಕೆ ಏರಿಕೆಯಾಗಿದೆ.

    ಇಂಡೋನೇಷ್ಯಾದ (Indonesia) ಪೂರ್ವ ಜಾವಾದ ಪ್ರಾಂತ್ಯದ ಮಲಾಂಗ್‌ನಲ್ಲಿರುವ ಕಂಜುರುಹಾನ್ ಕ್ರೀಡಾಂಗಣದಲ್ಲಿ ಫುಟ್ಬಾಲ್ ಪಂದ್ಯ ಆಯೋಜಿಸಲಾಗಿತ್ತು. ಈ ವೇಳೆ ತವರು ಮೈದಾನದಲ್ಲಿ ಅರೆಮಾ ಫುಟ್ಬಾಲ್ ಅಕಾಡೆಮಿ (Arema Football Academy) ಅನ್ನು ಪ್ರತಿಸ್ಪರ್ಧಿ ತಂಡ ಪರ್ಸೆಬಾಯಾ ಸೋಲಿಸಿತು. ಈ ಸೋಲು ಅಭಿಮಾನಿಗಳು ರೊಚ್ಚಿಗೇಳಲು ಕಾರಣವಾಯಿತು. ಅರೆಮಾ ಫುಟ್ಬಾಲ್ ಅಕಾಡೆಮಿ ತಂಡದ ಅಭಿಮಾನಿಗಳು ಗ್ರೌಂಡ್‌ಗೆ ಇಳಿದು ಗಲಭೆ ನಡೆಸಿದ್ದಾರೆ. ಇದನ್ನೂ ಓದಿ: ನೆಚ್ಚಿನ ಫುಟ್‌ಬಾಲ್‌ ತಂಡ ಸೋತಿದ್ದಕ್ಕೆ ಸ್ಟೇಡಿಯಂನಲ್ಲಿ ಅಭಿಮಾನಿಗಳ ಗಲಭೆ – ಮಕ್ಕಳು, ಪೊಲೀಸರು ಸೇರಿ 127 ಮಂದಿ ಸಾವು

    ಘಟನೆಯಲ್ಲಿ ಇಂದು ಬೆಳಿಗ್ಗೆ 9:30ರ ವರೆಗೆ 158 ಮಂದಿ ಮೃತಪಟ್ಟಿದ್ದರು. ಆದರೆ 10:30ರ ವೇಳೆಗೆ 174 ಮಂದಿ ಮೃತಪಟ್ಟಿದ್ದಾರೆ. 180ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮೃತರಲ್ಲಿ ಪೊಲೀಸರು (Police), ಸಾರ್ವಜನಿಕರು ಹಾಗೂ ಮಕ್ಕಳೂ ಇದ್ದಾರೆ.

    ಜನರನ್ನು ಚದುರಿಸಲು ಘಟನಾ ಸ್ಥಳದಲ್ಲಿ ಅಶ್ರುವಾಯು ಸಿಡಿಸಲಾಯಿತು. ಸಾಕರ್ ಮೈದಾನದಲ್ಲಿ ಗಲಭೆ ಸಹಜ ಸ್ಥಿತಿಗೆ ಬರುತ್ತಿದ್ದಂತೆ ಬೀದಿಗಳಲ್ಲಿ ಜನ ಚೆಲ್ಲಾಪಿಲ್ಲಿಯಾಗಿ ಓಡಿದರು. ಈ ವೇಳೆ ಕಾಲ್ತುಳಿತಕ್ಕೆ ಸಾಕಷ್ಟು ಮಂದಿ ಸಾವನ್ನಪ್ಪಿದರು. ಇಬ್ಬರು ಪೊಲೀಸರು ದುರ್ಮರಣಕ್ಕೀಡಾದರು. ಇದನ್ನೂ ಓದಿ:  ಸಾನ್ಯ – ರೂಪೇಶ್ ಶೆಟ್ಟಿ ಮಧ್ಯೆ ಬರಲು ಕಾವ್ಯಶ್ರೀಗೆ ಸಲಹೆ ಕೊಟ್ಟಿದ್ಯಾರು ಗೊತ್ತಾ?‌ ದೊಡ್ಮನೆಯಲ್ಲಿ ಬಿಗ್‌ ಟ್ವಿಸ್ಟ್

    ಇಂಡೋನೇಷ್ಯಾ ಅಧ್ಯಕ್ಷ ಜೊಕೊ ವಿಡೊಡೊ (Joko Widodo) ಘಟನೆ ಸಂಬಂಧ ತನಿಖೆಗೆ ಆದೇಶಿಸಿದ್ದಾರೆ. ಅಲ್ಲದೇ ಭದ್ರತಾ ಕ್ರಮಗಳು ಪೂರ್ಣಗೊಳ್ಳುವವರೆಗೂ ಇಲ್ಲಿ ನಡೆಯುವ ಎಲ್ಲಾ ಪಂದ್ಯಗಳನ್ನು ಅಮಾನತ್ತುಗೊಳಿಸುವಂತೆ ಫುಟ್ಬಾಲ್ ಫೆಡೆರೇಷನ್‌ಗೆ ನಿರ್ದೇಶನ ನೀಡಿದ್ದಾರೆ.

    ಅಲ್ಲದೇ ಈ ದುರಂತಕ್ಕೆ ನಾನು ತೀವ್ರವಾಗಿ ವಿಷಾದ ವ್ಯಕ್ತಪಡಿಸುತ್ತೇನೆ. ಇದೇ ನಮ್ಮ ದೇಶದಲ್ಲಿ ಕೊನೆಯ ದುರಂತವಾಗಬೇಕು ಎಂದು ಮನವಿ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]