Tag: Johny Johny yes pappa

  • ದುನಿಯಾ ವಿಜಿ ವರ್ಕೌಟ್ ಮಾಡೋದು ಹೇಗೆ ಗೊತ್ತಾ? ವಿಡಿಯೋ ನೋಡಿ

    ದುನಿಯಾ ವಿಜಿ ವರ್ಕೌಟ್ ಮಾಡೋದು ಹೇಗೆ ಗೊತ್ತಾ? ವಿಡಿಯೋ ನೋಡಿ

    ಬೆಂಗಳೂರು: ದುನಿಯಾ ವಿಜಯ್ ಈಗ ಸುದ್ದು ಗದ್ದಲವಿಲ್ಲದೇ ಜಿಮ್ ನಲ್ಲಿ ಬೆವರು ಹರಿಸುತ್ತಿದ್ದಾರೆ. ಜಂಗ್ಲಿ, ಶಂಕರ್ ಐಪಿಎಸ್, ತಾಕತ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ದುನಿಯಾ ವಿಜಿ ಸಿಕ್ಸ್ ಪ್ಯಾಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದರು. ಅಭಿಮಾನಿಗಳು ಮತ್ತೆ ವಿಜಯ್ ರನ್ನು ಸಿಕ್ಸ್ ಪ್ಯಾಕ್ ನಲ್ಲಿ ನೋಡುವುದಕ್ಕೆ ಕಾಯುತ್ತಿದ್ದಾರೆ.

    ದುನಿಯಾ ವಿಜಿ ಸದ್ಯ ಪ್ರೀತಂ ಗುಬ್ಬಿ ನಿರ್ದೇಶನದ `ಜಾನಿ ಜಾನಿ ಎಸ್ ಪಪ್ಪಾ’ ಸಿನಿಮಾದಲ್ಲಿ ಬ್ಯೂಸಿಯಾಗಲಿದ್ದಾರೆ. ಸಿನಿಮಾಗಾಗಿ ಸಖತ್ ವರ್ಕೌಟ್ ಮಾಡುತ್ತಿದ್ದಾರೆ. ವಿಜಿ ಬರೋಬ್ಬರಿ ಪ್ರತಿ ದಿನ ಆರು ಗಂಟೆಗಳ ಕಾಲ ಜಿಮ್‍ನಲ್ಲಿ ಬೆವರು ಹರಿಸುತ್ತಿದ್ದಾರೆ. ಕಳೆದ ಮೂರು ತಿಂಗಳಿನಿಂದ ದೇಹ ದಂಡನೆ ಮಾಡುತ್ತಿದ್ದಾರೆ.

    ವಿಜಯ್ ದೇಹದಂಡನೆ ವಿಚಾರದಲ್ಲೂ ಮೊದಲಿನಿಂದಲೂ ಶಿಸ್ತಿನ ಜೀವಿ. ಇದರ ನಡುವೆಯೂ ಇದೀಗ ಇನ್ನೊಂದಿಷ್ಟು ಕಸರತ್ತು ಮಾಡಿ ಬಾಡಿಗೆ ಶೇಪ್ ಕೊಡೋಕೆ ಮತ್ತೆ ಪದ್ದತಿ ಪ್ರಕಾರ ವರ್ಕೌಟ್ ಶುರುಮಾಡಿದ್ದಾರೆ. ಈ ಬಾರಿ ವಿಜಯ್ ಗೆ ದಾವಣಗೆರೆ ಮೂಲದ ಮಿಸ್ಟರ್ ಇಂಟರ್‍ನ್ಯಾಷನಲ್ ಖ್ಯಾತಿಯ ಮಂಜುನಾಥ್ ಕೋಚ್ ಆಗಿದ್ದಾರೆ.

    ಇಷ್ಟುದಿನ ವಿಜಿ ಸಿಕ್ಸ್ ಪ್ಯಾಕ್‍ಗೆ ಫಿದಾ ಆಗಿದ್ದ ಅಭಿಮಾನಿಗಳು ಮತ್ತೆ `ಜಾನಿ ಜಾನಿ ಎಸ್ ಪಪ್ಪಾ’ ಸಿನಿಮಾದಲ್ಲಿ ಕಣ್ತುಂಬಿಕೊಳ್ಳಬಹುದು. ಇದೊಂದು ಯುತ್‍ಫಲ್ ಸಿನಿಮಾ ಆಗಿದ್ದು ಇಂಟ್ರೊಡಕ್ಷನ್ ಸಾಂಗ್ ಗಾಗಿ ವಿಜಯ್ ಇಂತಹ ಕಸರತ್ತು ಮಾಡುತ್ತಿದ್ದಾರೆ. ಸಿನಿಮಾದಲ್ಲಿ ವಿಜಯ್ ಲುಕ್ ನೊಡೋಕೆ ಸ್ವಲ್ಪ ದಿನ ಕಾಯಬೇಕಾಗುತ್ತದೆ.