Tag: Johnny Johnny Yes Pappa

  • ಜಾನಿ ಜಾನಿ ಯೆಸ್ ಅಪ್ಪಾ, ಅಮ್ಮ-ಮಗಳ ಜೊತೇಲಿ ಸಿನೆಮಾ ನೋಡ್ರಪ್ಪಾ!

    ಜಾನಿ ಜಾನಿ ಯೆಸ್ ಅಪ್ಪಾ, ಅಮ್ಮ-ಮಗಳ ಜೊತೇಲಿ ಸಿನೆಮಾ ನೋಡ್ರಪ್ಪಾ!

    ಬೆಂಗಳೂರು: ಹೌದು, ಮನೆಮಂದಿಗೆ ಇಷ್ಟವಾಗೋ ಸ್ಟೈಲ್ ನ ಸಿನೆಮಾ ಇದಾಗಿರುವುದರಿಂದ ಕುಟುಂಬ ಸಮೇತ ಕೂತು ನೋಡುವ ವಿಶೇಷ ಪ್ರದರ್ಶನವೊಂದನ್ನು ಸಿನೆಮಾ ವೀಕ್ಷಿಸಿದ ಅಭಿಮಾನಿ ಬಳಗವೊಂದು ಅರೇಂಜ್ ಮಾಡಿದೆ. ಮೆಸೇಜ್ ಓರಿಯಂಟೆಡ್ ಸಿನೆಮಾ ಇದಾಗಿರುವುದರಿಂದ ‘ನಮ್ ಕನ್ನಡ ಸಿನ್ಮಾ ಸಪೋರ್ಟರ್ಸ್’ ತಂಡ ಈ ಪ್ರಯತ್ನಕ್ಕೆ ಕೈ ಹಾಕಿದೆ…

    ಏನಿದು ವಿಶೇಷ ಪ್ರದರ್ಶನ?!
    ನಿಮ್ಮ ಮನೆಯಲ್ಲಿ ನೀವು, ನಿಮ್ಮ ವೈಫು ಹಾಗೂ ನಿಮಗೆ ಪಿಯುಸಿ ಆಸುಪಾಸಿನ ಹೆಣ್ಣುಮಗಳು ಇದ್ದರೆ ಈಗಲೇ 9538000044 ನಂಬರಿಗೆ ವಾಟ್ಸಪ್ ಮಾಡಿ…ಪೋಟೋ ಇಲ್ಲ ಎಂದರೆ ಸಿನೆಮಾಗೆ ಪ್ರವೇಶವಿಲ್ಲ. ದುನಿಯಾ ವಿಜಿ ಹಾಗೂ ಅವರ ಮಗಳ ಜೊತೆ ಸಿನೆಮಾ ನೋಡುವ ಅವಕಾಶ ಇಲ್ಲ! ಈಗಲೇ ಗಂಡ ಹೆಂಡತಿ ಮತ್ತು ಮೊನ್ನೆ ತಾನೇ ಪಿಯುಸಿ ಮುಗಿಸಿರುವ ಮಗಳು ಅಕ್ಕ ಪಕ್ಕ ನಿಂತು ಸೆಲ್ಫೀ ತೆಗೆದು 9538000044 ಗೆ ವಾಟ್ಸಪ್ ಮಾಡಿ… ಮೊದಲು ಯಾವ 50 ಫೋಟೋಗಳು ವಾಟ್ಸಪ್ ಗೆ ಬಂದು ಸೇರುತ್ತದೆಯೋ ಆ ಫ್ಯಾಮಿಲಿಗೆ (50*3=150ಸೀಟುಗಳು ಮಾತ್ರ) ಮನೆ ಮನ ಗೆದ್ದ, ಫ್ಯಾಮಿಲಿ ಸಮೇತ ಕೂತು ನೋಡಬಹುದಾದ ಜಾನಿ ಜಾನಿ ಯೆಸ್ ಪಪ್ಪಾ ಸಿನೆಮಾವನ್ನ ಚಿತ್ರತಂಡದ ಜೊತೆ ನೋಡುವ ಅದೃಷ್ಟ… ಆ ಅದೃಷ್ಟ ನಿಮ್ಮ ಫ್ಯಾಮಿಲಿಗೂ ಲಭಿಸಬಹುದು, ಯಾರಿಗೆ ಗೊತ್ತು?

    ಈಗಲೇ ಗಂಡ ಹೆಂಡತಿ ಜೊತೆ ನಿಮ್ಮ ಪಿಯುಸಿ ಆಸುಪಾಸಿನ ಮಗಳ ಜೊತೆ ಒಂದು ಕ್ಲಿಕ್ ತೆಗೆದು ವಾಟ್ಸಪ್ ಮಾಡಿ. ಮಾಗಡಿ ರಸ್ತೆಯ ಜಿಟಿ ಮಾಲ್ ನಲ್ಲಿ ಸಿನೆಮಾ ನೋಡೋ ಅವಕಾಶ ಪಡೆಯಿರಿ.

    ನೀವು ನಿಮ್ಮ ಮಗಳ ಹಾಗೂ ಹೆಂಡತಿಯ ಜೊತೆಗೇ ಬಂದು ಸಿನೆಮಾ ನೋಡಿ ಅಂತ ಪರ್ಟಿಕ್ಯುಲರ್ ಆಗಿ ಹೇಳಲು ಒಂದು ರೀಸನ್ ಇದೆ. ಅದು ಏನು ಎಂದು ಸಿನೆಮಾ ನೋಡಿದ ನಂತರ ಖುದ್ದು ದುನಿಯಾ ವಿಜಯ್ ಅವರೇ ವಿವರಿಸುತ್ತಾರೆ.

    ಜಾನಿಜಾನಿ ಯೆಸ್ ಪಪ್ಪಾ… ಒಟ್ಗೇ ಕುಂತು ಸಿನ್ಮಾ ನೋಡೋಣ ಬನ್ನಿಪ್ಪಾ…

    ವಿಶೇಷ ಸೂಚನೆ: ಮೇಲಿರೋ ನಂಬರ್ ಗೆ ವಾಟ್ಸಪ್ ಮಾತ್ರ ಮಾಡಿ, ಮೊದಲು ಕಳಿಸಿದವರಿಗೆ ಮೊದಲ ಆದ್ಯತೆ. ಹಾಗೇ ಈ ಶೋ ನೋಡಲು ಆಯ್ಕೆಯಾದ ಗಂಡ ಹೆಂಡತಿ ಮಾತ್ರ ಟಿಕೆಟ್ ಖರೀದಿ ಮಾಡಿದ್ರೆ ಸಾಕು, ನಿಮ್ಮ ಮಗಳಿಗೆ ಟಿಕೆಟ್ ಉಚಿತ.

  • ಮಜಾ ಕೊಡಲು ಬರ್ತಿದೆ ಜಾನಿ ಜಾನಿ ಯೆಸ್ ಪಪ್ಪಾ..!

    ಮಜಾ ಕೊಡಲು ಬರ್ತಿದೆ ಜಾನಿ ಜಾನಿ ಯೆಸ್ ಪಪ್ಪಾ..!

    ಬೆಂಗಳೂರು: ಜಾನಿ ಮೇರಾ ನಾಮ್ ಚಿತ್ರದ ನಂತರ ದುನಿಯಾ ವಿಜಯ್ ಮತ್ತು ಪ್ರೀತಂ ಗುಬ್ಬಿ ‘ಜಾನಿ ಜಾನಿ ಯೆಸ್ ಪಪ್ಪಾ’ ಚಿತ್ರದ ಮೂಲಕ ಮತ್ತೆ ಒಂದಾಗಿದ್ದಾರೆ. ರಚಿತಾ ರಾಮ್ ಮತ್ತು ವಿಜಿ ಒಟ್ಟಾಗಿ ನಟಿಸಿರೋ ಈ ಚಿತ್ರ ಈ ವಾರ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ.

    ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಬೇರೊಂದು ಲೋಕವನ್ನೇ ಸೃಷ್ಟಿಸಿದ್ದ ಚಿತ್ರ ತಂಡ ಅಲ್ಲಿಯೇ ಐವತ್ತು ದಿನಗಳ ಚಿತ್ರೀಕರಣವನ್ನೂ ಪೂರೈಸಿಕೊಂಡಿತ್ತು. ಅಂದಹಾಗೆ ಈ ಚಿತ್ರ ದುನಿಯಾ ಟಾಕೀಸ್ ಲಾಂಛನದಲ್ಲಿ ದುನಿಯಾ ವಿಜಯ್ ಸ್ವತಃ ನಿರ್ಮಾಣ ಮಾಡುತ್ತಿರೋ ಮೊದಲ ಚಿತ್ರ. ಇದೊಂದು ತೆರನಾಗಿ ಜಾನಿ ಮೇರಾ ನಾಮ್ ಚಿತ್ರದ ಮುಂದುವರೆದ ಭಾಗವಿದ್ದಂತೆ. ಈ ಚಿತ್ರದಲ್ಲಿಯೂ ರಂಗಾಯಣ ರಘು ಮತ್ತು ವಿಜಿ ಕಾಂಬಿನೇಷನ್ ಪ್ರಮುಖ ಆಕರ್ಷಣೆ. ಇನ್ನುಳಿದಂತೆ ರಚಿತಾ ರಾಮ್ ವಿಜಯ್ ಜೋಡಿಯಾಗಿ ಹೊಸದಾಗಿ ಸೇರ್ಪಡೆಗೊಂಡಿದ್ದಾರೆ.

    ರಚಿತಾ ರಾಮ್ ಈ ಚಿತ್ರದ ಮೂಲಕ ಮೊದಲ ಸಲ ದುನಿಯಾ ವಿಜಿ ಜೊತೆ ನಟಿಸಿದ್ದಾರೆ. ರಚಿತಾ ಇಲ್ಲಿ ಇಂಗ್ಲಿಷ್ ಮತ್ತು ಕನ್ನಡವನ್ನು ಮಿಕ್ಸ್ ಮಾಡಿ ಮಾತಾಡೋ ವೆಸ್ಟರ್ನ್ ಹುಡುಗಿಯ ಪಾತ್ರದಲ್ಲಿ ನಟಿಸಿದ್ದಾರಂತೆ. ಒಂದು ವಿಶೇಷವಾದ ಹಾಡಿನಲ್ಲಿ ವಿಜಯ್ ದೇಹವನ್ನು ಸಜ್ಜುಗೊಳಿಸಿಕೊಂಡು ನಟಿಸಿದ್ದಾರಂತೆ. ನಿರ್ದೇಶಕ ಪ್ರೀತಂ ಗುಬ್ಬಿ ಕನಸಿನಂತೆ ವಿಶೇಷವಾದ ಸೆಟ್ ಹಾಕಲೆಂದೇ ಒಂದೂವರೆ ಕೋಟಿ ವ್ಯಯಿಸಲಾಗಿತ್ತು. ವಿಜಯ್ ಮತ್ತು ರಂಗಾಯಣ ರಘು ಕಾಂಬಿನೇಷನ್ನು ಈ ಚಿತ್ರದ ಆಕರ್ಷಣೆಗಳಲ್ಲಿ ಮುಖ್ಯ ವಿಚಾರ ಎಂಬುದು ಚಿತ್ರತಂಡದ ಭರವಸೆ. ಇದಲ್ಲದೇ ರಂಗಾಯಣ ರಘು ಮತ್ತು ವಿಜಿ ಎಂಟು ಗೆಟಪ್‍ಗಳಲ್ಲಿ ಕಾಣಿಸಿಕೊಳ್ಳುತ್ತಿರೋದು ಅಸಲೀ ವಿಶೇಷ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರೋ ಹಾಡುಗಳು ಈಗಾಗಲೇ ಟ್ರೆಂಡ್ ಕ್ರಿಯೇಟ್ ಮಾಡಿದೆ.