Tag: Johnny Depp

  • ಮಾಜಿ ಪತ್ನಿ ವಿರುದ್ಧ ಗೆದ್ದ ಖುಷಿಯಲ್ಲಿ 48 ಲಕ್ಷ ಖರ್ಚು ಮಾಡಿದ ಜಾನಿ ಡೆಪ್

    ಮಾಜಿ ಪತ್ನಿ ವಿರುದ್ಧ ಗೆದ್ದ ಖುಷಿಯಲ್ಲಿ 48 ಲಕ್ಷ ಖರ್ಚು ಮಾಡಿದ ಜಾನಿ ಡೆಪ್

    ಟಿ ಮತ್ತು ಮಾಜಿ ಪತ್ನಿ ಆದ ಅಂಬರ್ ಹರ್ಡ್ ವಿರುದ್ಧದ ಮಾನಹಾನಿ ಮೊಕದ್ದಮೆಯಲ್ಲಿ ಅಮೆರಿಕದ ಖ್ಯಾತ ಹಾಲಿವುಡ್ ನಟ ಜಾನಿ ಡೆಪ್ ಗೆ ನ್ಯಾಯಾಲಯದಲ್ಲಿ ಗೆಲುವು ಸಿಕ್ಕಿದೆ. ಇದೇ ಖುಷಿಯಲ್ಲಿ ತನ್ನ ಸ್ನೇಹಿತರೊಂದಿಗೆ ಭರ್ಜರಿ ಪಾರ್ಟಿ ಮಾಡಿದ್ದಾರೆ. ನಟ ಜಾನಿ ಡೆಪ್ ಪಾರ್ಟಿಗೆ 48 ಲಕ್ಷ ಖರ್ಚು ಮಾಡಿದ್ದಾರೆ.

    ಮಾಜಿ ಪತ್ನಿ ನಟಿ ಅಂಬರ್ ಹರ್ಡ್ ಮಾನನಷ್ಟ ಮೊಕದ್ದಮೆ ವಿರುದ್ಧ ಗೆದ್ದಿರುವ ಜಾನಿ ಡೆಪ್‌ಗೆ 10.15 ಮಿಲಿಯನ್ ಡಾಲರ್ ದಂಡ ಪಾವತಿಸುವಂತೆ ಅಂಬರ್ ಹರ್ಡ್ ಗೆ ನ್ಯಾಯಾಲಯ ಆದೇಶಿಸಿದೆ. ಅಂಬರ್ ಹರ್ಡ್ ಮದುವೆಯ ಮೊದಲು ಮತ್ತು ನಂತರ ಆಕೆಯ ಮೇಲೆ ನಿಂದನೆ ಮಾಡಿದ ಆರೋಪ ನ್ಯಾಯಾಲಯದಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದ ವಿಫಲವಾಗಿದ್ದು ಜಾನಿ ಡೆಪ್ ಗೆಲ್ಲುವಂತಾಯಿತು. ಈ ಹಿನ್ನೆಲೆ ತನ್ನ ಸ್ನೇಹಿತರೊಂದಿಗೆ ವಿಶೇಷ ಭೋಜನಕ್ಕೆ 48 ಲಕ್ಷ ಖರ್ಚು ಮಾಡಿ, ಸುದ್ದಿಯಲ್ಲಿದ್ದಾರೆ.

    ನಟಿ ಅಂಬರ್ ಹರ್ಡ್ ವಿರುದ್ಧ ಗೆದ್ದಿರುವ ಖುಷಿಯಲ್ಲಿ ಇಂಗ್ಲೆಂಡ್‌ನ ಬರ್ಮಿಂಗ್ಹ್ಯಾಮ್‌ನಲ್ಲಿ ಅತೀದೊಡ್ಡ ಭಾರತೀಯ ರೆಸ್ಟೋರೆಂಟ್‌ನಲ್ಲಿ ಕಾಕ್‌ಟೈಲ್ ಮತ್ತು ಡಿನ್ನರ್ ಪಾರ್ಟಿ ಅನ್ನು ಜಾನಿ ಡೆಪ್ ಮಾಡಿದ್ದರು. ಮಾಜಿ ಪತ್ನಿ ವಿರುದ್ಧ ಗೆದ್ದಿರುವ ಖುಷಿಯಲ್ಲಿ ಸುದ್ದಿಯಾಗಿದ್ರೆ, ಈಗ ಪಾರ್ಟಿಗೆ 48 ಲಕ್ಷ ಖರ್ಚು ಮಾಡಿ ಸುದ್ದಿಯಾಗಿದ್ದಾರೆ.

  • ಹಾಲಿವುಡ್ ನಟಿ ಆಂಬರ್ ಹರ್ಡ್ ಮತ್ತು ನಟ ಜಾನಿ ಡೆಪ್ ದಾಂಪತ್ಯ ಒಂದೇ ವರ್ಷದ್ದು : ದಂಡಕಟ್ಟಿದ್ದು 115 ಕೋಟಿ

    ಹಾಲಿವುಡ್ ನಟಿ ಆಂಬರ್ ಹರ್ಡ್ ಮತ್ತು ನಟ ಜಾನಿ ಡೆಪ್ ದಾಂಪತ್ಯ ಒಂದೇ ವರ್ಷದ್ದು : ದಂಡಕಟ್ಟಿದ್ದು 115 ಕೋಟಿ

    ಹಾಲಿವುಡ್ ಸಿನಿಮಾ ರಂಗದ ಖ್ಯಾತ ಜೋಡಿಯಾದ ಜಾನಿ ಡೆಪ್ ಮತ್ತು ಆಂಬರ್ ಹರ್ಡ್ ಇಂದು ಮಾನನಷ್ಟ ಮೊಕದ್ದಮೆ ಕಾರಣದಿಂದಾಗಿ ಸಾಕಷ್ಟು ಸುದ್ದಿಯಾಗಿದ್ದಾರೆ. ಕೌಟುಂಬಿಕ ದೌರ್ಜನ್ಯ ಮತ್ತು ಮಾನನಷ್ಟ ಪ್ರಕರಣದ ತೀರ್ಪು ಹೊರ ಬಂದಿದ್ದು, ಅಚ್ಚರಿಯ ಸಂಗತಿ ಅಂದರೆ, ಇಬ್ಬರು ತಪ್ಪಿತಸ್ಥರು ಎಂದು ನ್ಯಾಯಾಲಯ ಹೇಳಿದೆ. ಇದನ್ನೂ ಓದಿ : ನಾಳೆ ಉಪೇಂದ್ರ ಹೊಸ ಸಿನಿಮಾಗೆ ಮುಹೂರ್ತ : ಅತಿಥಿಗಳಾದ ನಾಲ್ವರು ಸ್ಟಾರ್ ನಟರು

    ದಿ ರಮ್ ಡೈರಿ ಚಿತ್ರದ ಶೂಟಿಂಗ್ ವೇಳೆಯಲ್ಲಿ ಜಾನಿ ಡೆಪ್ ಅವರಿಗೆ ನಟಿ ಆಂಬರ್ ಹರ್ಡ್ ಪರಿಚಯವಾಗುತ್ತಾರೆ. ಪರಿಚಯವು ಸ್ನೇಹಕ್ಕೆ ತಿರುಗಿ, ಅದು ಪ್ರೇಮವಾಗಿ 2015ರಲ್ಲಿ ಈ ಜೋಡಿ ಮದುವೆ ಆಗುತ್ತದೆ. ಒಂದು ವರ್ಷ ಕೂಡ ಅವರು ಜತೆಯಾಗಿ ಇರುವುದಿಲ್ಲ. ಹೊಂದಾಣಿಕೆಯ ಕಾರಣದಿಂದಾಗಿ ಇಬ್ಬರೂ ವಿಚ್ಛೇದನ ಪಡೆಯಲು ಮುಂದಾಗುತ್ತಾರೆ. ಈ ವೇಳೆಯಲ್ಲಿ ಡ್ರಗ್ಸ್ ಮತ್ತು ಮದ್ಯದ ನಶೆಯಲ್ಲಿ ತಮ್ಮ ಮೇಲೆ ದೈಹಿಕ ದೌರ್ಜನ್ಯವಾಗಿದೆ ಎಂದು ಹರ್ಡ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುತ್ತಾರೆ. ವಿಚ್ಛೇದನವನ್ನೂ ಪಡೆಯುತ್ತಾರೆ. ಇದನ್ನೂ ಓದಿ : ಖ್ಯಾತ ಗಾಯಕ ಕೆಕೆ ಅಂತ್ಯ ಸಂಸ್ಕಾರ ಮುಂಬೈನಲ್ಲಿ : ಅಂತಿಮ ನಮನ ಸಲ್ಲಿಸಿದ ಬಿಟೌನ್

    ಇದಾದ ನಂತರ 2018ರಲ್ಲಿ ಆಂಬರ್ ಹರ್ಡ್ ತಮ್ಮ ಬದುಕಿನಲ್ಲಿ ನಡೆದ ಕಹಿ ಘಟನೆ ಮತ್ತು ತಮ್ಮ ದಾಂಪತ್ಯದಲ್ಲಿ ಬಿಟ್ಟ ಬಿರುಕಿನ ಕಾರಣವನ್ನು ಹಾಗೂ ತಮ್ಮ ಮೇಲೆ ನಡೆದ ದೌರ್ಜನ್ಯವನ್ನು ಪತ್ರಿಕೆಯೊಂದರಲ್ಲಿ ಬರೆಯುತ್ತಾರೆ. ಜಾನಿ ಡೆಪ್ ತಮಗೆ ಏನೆಲ್ಲ ಹಿಂಸೆ ಕೊಟ್ಟ ಎನ್ನುವುದನ್ನು ಲೇಖನದಲ್ಲಿ ವಿವರಿಸುತ್ತಾರೆ. ಹಾಗಾಗಿ ಜಾನಿ ಡೆಪ್, ಮಾಜಿ ಪತ್ನಿಯ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸುತ್ತಾರೆ. ಇದನ್ನೂ ಓದಿ : ಕೆಕೆ ಕೊಂದಿದ್ದು ಕೋಲ್ಕತ್ತಾ, ಸಾವು ಮುಚ್ಚಿಹಾಕಲು ಸರ್ಕಾರಿ ಗೌರವ : ನಂದಿತಾ ಪುರಿ ಆಕ್ರೋಶ

    ಆರು ವಾರಗಳ ಕಾಲ ನಡೆದ ವಿಚಾರಣೆಯಲ್ಲಿ ಮಾಜಿ ಪತ್ನಿಯು ಜಾನಿ ಡೆಪ್ ಅವರ ಮಾನಹಾನಿ ಮಾಡಿರುವುದು ಸಾಕ್ಷ್ಯಾಧಾರಗಳಿಂದ ರುಜುವಾತಾದ ಹಿನ್ನೆಲೆಯಲ್ಲಿ ಮಾಜಿಪತಿಗೆ 115 ಕೋಟಿ ರೂಪಾಯಿ ಪರಿಹಾರವನ್ನು ನೀಡಬೇಕು ಎಂದು ಕೋರ್ಟ್ ಹೇಳಿದೆ. ಅಲ್ಲದೇ, ಮಾಜಿಪತ್ನಿಗೆ ಜಾನಿ ಕಿರುಕುಳ ನೀಡಿರುವ ಕೆಲ ಸಾಕ್ಷ್ಯಗಳು ದೊರೆತಿರುವುದರಿಂದ ಮಾಜಿಪತ್ನಿಗೆ ಜಾನಿ 15 ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ಕೋರ್ಟ್ ಆದೇಶಿಸಿದೆ.

  • ಪತ್ನಿ ವಿರುದ್ಧ ಹೂಡಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಗೆದ್ದ ಹಾಲಿವುಡ್ ಸ್ಟಾರ್ ನಟ ಜಾನಿ ಡೆಪ್ : ನೂರಾರು ಕೋಟಿ ಪರಿಹಾರ

    ಪತ್ನಿ ವಿರುದ್ಧ ಹೂಡಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಗೆದ್ದ ಹಾಲಿವುಡ್ ಸ್ಟಾರ್ ನಟ ಜಾನಿ ಡೆಪ್ : ನೂರಾರು ಕೋಟಿ ಪರಿಹಾರ

    ಳೆದ ಆರು ವಾರಗಳಲ್ಲಿ ನೂರು ಗಂಟೆಗೂ ಹೆಚ್ಚು ಕಾಲ ನಡೆದ ಸಾಕ್ಷ್ಯದ ವಿಚಾರಣೆ ನಂತರ ಹಾಲಿವುಡ್ ಖ್ಯಾತ ನಟ ಜ್ಯೂರಿ ಜಾನಿ ಡೆಪ್ ತಮ್ಮ ಪತ್ನಿ ಅಂಬರ್ ಹರ್ಡ್ ವಿರುದ್ಧದ ಮಾನಹಾನಿ ಮೊಕದ್ದಮೆ ಕೇಸ್ ಗೆದ್ದಿದ್ದಾರೆ. ಈ ಮೂಲಕ ಸುದೀರ್ಘ ಕಾನೂನು ಹೋರಾಟ ಅಂತ್ಯವಾಗಿದೆ. ಇದನ್ನೂ ಓದಿ: ಸಿಧು ಮೂಸೆ ವಾಲಾ ಹತ್ಯೆ: ತನಿಖೆ ವೇಳೆ ಶಾಕಿಂಗ್ ವಿಚಾರ ಬಯಲು

    ತಮ್ಮ ಗೌರವನ್ನು ಧಕ್ಕೆ ತರುವಂತೆ ಪತ್ರಿಕೆಯೊಂದರಲ್ಲಿ ಲೇಖನ ಬರೆದಿದ್ದಾರೆ ಎಂದು ಮಾಜಿ ಪತ್ನಿ ಅಂಬರ್ ಹರ್ಡ್ ವಿರುದ್ಧವೇ ಜಾನಿ ಡೆಪ್ ದೂರು ದಾಖಲಿಸಿದ್ದರು. ಹೀಗಾಗಿ ನ್ಯಾಯಾಧೀಶರು ಸುದೀರ್ಘ ವಿಚಾರಣೆ ನಂತರ ತೀರ್ಪು ನೀಡಿದ್ದು, ಅಂಬರ್ ಹರ್ಡ್ ಅವರನ್ನು ತಪ್ಪಿತಸ್ಥರೆಂದು ಘೋಷಿಸಿದ್ದಷ್ಟೇ ಅಲ್ಲ, ಜಾನಿ ಡೆಪ್ ಗೆ ಪರಿಹಾರವಾಗಿ 10 ಮಿಲಿಯನ್ ಡಾಲರ್ ಮೊತ್ತ ಹಾಗೂ ದಂಡವಾಗಿ 5 ಮಿಲಿಯನ್ ಡಾಲರ್ ಹಣವನ್ನು ಪಾವತಿಸಲು ಆದೇಶಿಸಿದ್ದಾರೆ. ಇದನ್ನೂ ಓದಿ: ವಿಜಯ್ ದೇವರಕೊಂಡ ಚಿತ್ರಕ್ಕೆ ಜೋಡಿಯಾಗಿ ಕರಾವಳಿ ನಟಿ ಫಿಕ್ಸ್

    ಜಾನಿ ಡೆಪ್ ಮತ್ತು ಅಂಬರ್ ಹರ್ಡ್ ಇಬ್ಬರೂ ಹಾಲಿವುಡ್ ನ ಖ್ಯಾತ ತಾರಾ ಜೋಡಿ, ಮೊದ ಮೊದಲು ಪ್ರೀತಿಸುತ್ತಿದ್ದವರು ನಂತರ 2015ರಲ್ಲಿ ಮದುವೆಯಾದರು. ಮದುವೆಯಾಗಿ ಒಂದು ವರ್ಷವೂ ಸರಿಯಾಗಿ ಜೀವನ ನಡೆಸಲಿಲ್ಲ ವಿಚ್ಛೇದನ ಪಡೆದುಕೊಂಡು ದೂರವಾದರು. ಇದೇ ಸಮಯದಲ್ಲೇ ಜಾನಿ ವಿರುದ್ಧ ಮಾನಹಾನಿ ಆಗುವಂತೆ ಪತ್ರಿಕೆಯೊಂದರಲ್ಲಿ ಹರ್ಡ್ ಲೇಖನವೊಂದನ್ನು ಬರೆದಿದ್ದರು. ಅದು ಸಾಕಷ್ಟು ವೈರಲ್ ಕೂಡ ಆಗಿತ್ತು. ಇದನ್ನೂ ಓದಿ:ಕಿಯಾರಾಗೆ ಸಿದ್ಧಾರ್ಥ್ ಮಲ್ಹೋತ್ರಾ ಕ್ಲಾಸ್: ಅಷ್ಟಕ್ಕೂ ಆಗಿದ್ದೇನು?

    ಈ ಪ್ರಕರಣದ ಕುರಿತು ನನಗೆ ನ್ಯಾಯ ಸಿಕ್ಕಿದೆ. ನ್ಯಾಯದ ಪರ ಗೆಲುವು ಎಂದು ಜಾನಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರೆ, ಈ ತೀರ್ಪು ನನಗೆ ನಿರಾಸೆಯಾಗಿದೆ ಎಂದು ಹರ್ಡ್ ಬರೆದುಕೊಂಡಿದ್ದಾರೆ. ಮಹಿಳೆಯರಿಗೆ ಈ ತೀರ್ಪು ಸರಿಯಾದ ಸಂದೇಶ ರವಾಣಿಸುವುದಿಲ್ಲ ಎಂದು ಬರೆದುಕೊಂಡಿದ್ದಾರೆ.