ಸಂದರ್ಶನವೊಂದರಲ್ಲಿ ಮಾತನಾಡಿದ ಜಾನ್ ಅಬ್ರಹಾಂ, ಸೋಶಿಯಲ್ ಮೀಡಿಯಾದಲ್ಲಿ ನಿಮ್ಮನ್ನು ಟೀಕಿಸಲು ಕಾಯುತ್ತಿರುತ್ತಾರೆ. ನಿಮಗೆ ನೋವುಂಟು ಮಾಡುವ ಅಧಿಕಾರವಿದೆ ಎಂದು ಜನರು ಭಾವಿಸುತ್ತಾರೆ. ಇಂದು ಸಾಮಾಜಿಕ ಜಾಲತಾಣ ವಿಷಕಾರಿಯಾಗಿದೆ. ನೆಗೆಟಿವಿಯಿಂದ ಕೂಡಿದೆ. ಪಬ್ಲಿಕ್ ಪಿಗರ್ ಆಗಿರುವ ಮಾತ್ರಕ್ಕೆ ಟ್ರೋಲ್‌ಗಳಿಂದ ನೋಯಿಸುತ್ತಾರೆ ಎಂದಿದ್ದಾರೆ. ಹಾಗಾಗಿ ತಾವ್ಯಾಕೆ ಸಾಮಾಜಿಕ ಜಾಲತಾಣದಲ್ಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಅಂದಹಾಗೆ, ಶಿವಂ ನಾಯರ್ ಅವರ ‘ದಿ ಡಿಪ್ಲೋಮ್ಯಾಟ್’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಜಾನ್ ಅಬ್ರಹಾಂ ನಟನೆಯ ಈ ಚಿತ್ರ ಮಾ.14ರಂದು ರಿಲೀಸ್ ಆಗಲಿದೆ.
ಚಾರ್ಲಿ 777 (Charlie 777) ಸಿನಿಮಾದ ನಂತರ ನಿರ್ದೇಶಕ ಕಿರಣ್ ರಾಜ್ (Kiran Raj) ಮುಂದೇನು ಮಾಡುತ್ತಾರೆ ಎನ್ನುವ ಕುತೂಹಲ ಸಹಜವಾಗಿಯೇ ಅವರ ಅಭಿಮಾನಿಗಳಲ್ಲಿ ಇತ್ತು. ಚಾರ್ಲಿ ನಂತರ ನಟ ರಕ್ಷಿತ್ ಶೆಟ್ಟಿ ಹಲವಾರು ಪ್ರಾಜೆಕ್ಟ್ ಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅದರ ನಾಯಕಿ ಕೂಡ ಬಿಗ್ ಬಾಸ್ ಸೇರಿದಂತೆ ಹಲವು ಕೆಲಸಗಳಲ್ಲಿ ತಮ್ಮನ್ನು ತಾವು ವಿನಿಯೋಗಿಸಿಕೊಂಡಿದ್ದಾರೆ. ಆದರೆ, ನಿರ್ದೇಶಕರು ಮಾತ್ರ ಸುಮ್ಮನಿದ್ದರು.
ಕೆಲ ತಿಂಗಳ ಹಿಂದೆ ಹೊಸದೊಂದು ಪ್ರಾಜೆಕ್ಟ್ ಕೈಗೆತ್ತಿಕೊಂಡಿರುವ ಬಗ್ಗೆ ಕಿರಣ್ ರಾಜ್ ಹೇಳಿಕೊಂಡಿದ್ದರು. ಅದೊಂದು ಕಾಮಿಡಿ ಹಾರರ್ ಚಿತ್ರ ಎಂದು ಮಾಹಿತಿ ಹಂಚಿಕೊಂಡಿದ್ದರು. ವಿಎಫ್ ಎಕ್ಸ್ ತುಂಬಾ ಇರುವ ಕಾರಣದಿಂದಾಗಿ ಅದನ್ನು ಕಲಿಯಲು ಹೊರಟಿದ್ದೇನೆ ಎಂದಿದ್ದರು. ವಿದೇಶಕ್ಕೂ ಹಾರಿದ್ದರು.
ಕಿರಣ್ ರಾಜ್ ಇದೀಗ ವಿದೇಶದಿಂದ ವಾಪಸ್ಸಾಗಿದ್ದರು. ಬಂದವರೇ ಬಾಲಿವುಡ್ ನತ್ತ ಮುಖ ಮಾಡಿದ್ದಾರೆ. ಮುಂಬೈನಲ್ಲಿ ಅವರು ಬಾಲಿವುಡ್ (Bollywood) ನಟ ಜಾನ್ ಅಬ್ರಾಹಂ (John Abraham) ಅವರನ್ನು ಭೇಟಿ ಮಾಡಿದ್ದು, ಆ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೊಂದು ಅತ್ಯುತ್ತಮ ಗಳಿಗೆ ಎಂದು ಬರೆದುಕೊಂಡಿದ್ದಾರೆ.
ಹಲವು ಭಾಷೆಗಳಲ್ಲಿ ತಮ್ಮ ಸಿನಿಮಾ ನಿರ್ಮಾಣವಾಗಲಿದೆ ಎಂದು ಹೇಳಿದ್ದರಿಂದ, ಮುಂದಿನ ಸಿನಿಮಾವನ್ನು ಜಾನ್ ಅಬ್ರಾಹಂಗಾಗಿ ಮಾಡಲಿದ್ದಾರೆ ಎನ್ನುವ ಪ್ರಶ್ನೆ ಮೂಡಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ಅವರೇ ಉತ್ತರ ಕೊಡಬೇಕು.
ಬಾಲಿವುಡ್ ನಟ ಜಾನ್ ಅಬ್ರಹಾಂ (John Abraham) ಈಗ ಆ್ಯಕ್ಷನ್ ಅವತಾರ ತಾಳಿದ್ದಾರೆ. ವಿಲನ್ ಬದಲು ಹೀರೋ ಆಗಿ ಜಾನ್ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಪಠಾಣ್ ವಿಲನ್ ಈಗ ‘ವೇದಾ’ಳ (Vedaa) ಕಥೆ ಹೇಳೋಕೆ ರೆಡಿಯಾಗಿದ್ದಾರೆ. ಇದನ್ನೂ ಓದಿ:ಚುಂಬನ ಎಫೆಕ್ಟ್: ‘ಫೈಟರ್’ ಸಿನಿಮಾ ವಿರುದ್ಧ ಸಿಡಿದೆದ್ದ ವಾಯುಸೇನಾ ಅಧಿಕಾರಿ
2019ರಲ್ಲಿ ಜಾನ್ ಅಬ್ರಹಾಂ- ನಿಖಿಲ್ ಅಡ್ವಾಣಿ ಕಾಂಬೋದಲ್ಲಿ ‘ಬಾಟ್ಲಾ ಹೌಸ್’ ಸಿನಿಮಾ ಗೆದ್ದಿತ್ತು. ಇದೀಗ ಮತ್ತೆ ‘ವೇದಾ’ ಎಂಬ ಸಿನಿಮಾ ಮೂಲಕ ಜಾನ್ ಅಬ್ರಾಹಂ ಹೀರೋ ಆಗಿ ನಟಿಸಿದ್ದು, ನಿಖಿಲ್ ಅಡ್ವಾಣಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸದ್ಯ ಚಿತ್ರದ ಪೋಸ್ಟರ್ ರಿವೀಲ್ ಆಗಿದ್ದು, ಜಾನ್ ಅಬ್ರಾಹಂ ರಾ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಅವಳಿಗೆ ಒಬ್ಬ ರಕ್ಷಕನ ಅಗತ್ಯವಿತ್ತು. ಆಕೆಗೆ ಆಯುಧ ಸಿಕ್ಕಿತು, ಎಂದು ‘ವೇದಾ’ ಚಿತ್ರದ ಪೋಸ್ಟರ್ ಜೊತೆಗೆ ಕ್ಯಾಪ್ಷನ್ ಹಂಚಿಕೊಂಡಿದೆ ಚಿತ್ರತಂಡ. ಚಿತ್ರದಲ್ಲಿ ಅಭಿಷೇಕ್ ಬ್ಯಾನರ್ಜಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಬಾಟ್ಲಾ ಹೌಸ್’ ನೈಜ ಘಟನೆ ಆಧರಿಸಿ ಸಿದ್ಧವಾದ ಸಿನಿಮಾವಾಗಿತ್ತು. ವೇದಾ ಇದು ಕೇವಲ ಸಿನಿಮಾ ಅಲ್ಲ. ನೈಜ ಘಟನೆ ಆಧರಿಸಿದ ನಮ್ಮ ಸಮಾಜದ ಪ್ರತಿಬಿಂಬ. ಅಬ್ರಾಹಂ, ಶಾರ್ವರಿ ಈ ಚಿತ್ರದ ನಾಯಕ, ನಾಯಕಿಯಾಗಿ ನಟಿಸಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಜಾನ್ ಕಾಶ್ಮೀರದಲ್ಲಿ ‘ವೇದಾ’ ಚಿತ್ರೀಕರಣದ ಸ್ಕೆಡ್ಯೂಲ್ ಮುಗಿಸಿದ್ದರು.
ಇದೇ ಜುಲೈ 12ಕ್ಕೆ ‘ವೇದಾ’ (Vedaa) ಸಿನಿಮಾ ರಿಲೀಸ್ ಆಗುತ್ತಿದೆ. ವಿಲನ್ ಆಗಿ ನಟಿಸಿ ಗೆದ್ದಿರೋ ಜಾನ್ ಅಬ್ರಹಾಂ ಹೀರೋ ಆಗಿ ಈ ಹಿಂದೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಅವರಿಗೆ ಹೇಳಿಕೊಳ್ಳುವಂತಹ ಬ್ರೇಕ್ ಸಿಗಲಿಲ್ಲ. ಈಗ ಮತ್ತೆ ‘ವೇದಾ’ ಮೂಲಕ ಹೀರೋ ಆಗಿ ಖಡಕ್ ಎಂಟ್ರಿ ಕೊಟ್ಟಿದ್ದಾರೆ. ಜಾನ್ ಅಬ್ರಹಾಂಗೆ ಬಿಗ್ ಬ್ರೇಕ್ ಸಿಗುತ್ತಾ ಕಾಯಬೇಕಿದೆ.
ಬಾಲಿವುಡ್ ನಟ ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಅನೇಕ ಅಚ್ಚರಿ ಸಂಗತಿಗಳೊಂದಿಗೆ ಈ ಟ್ರೈಲರ್ ಗಮನ ಸೆಳೆಯುತ್ತಿದೆ. ಅಲ್ಲದೇ, ಕೆಲವು ಪಾತ್ರಗಳ ಹಿನ್ನೆಲೆಯನ್ನೂ ಅದು ರಿವಿಲ್ ಮಾಡಿದೆ. ಈ ಸಿನಿಮಾದಲ್ಲಿ ಖ್ಯಾತ ಬಾಲಿವುಡ್ ನಟ ಜಾನ್ ಅಬ್ರಾಹಂ ಉಗ್ರ ಸಂಘಟನೆಯ ಮುಖ್ಯಸ್ಥನಾಗಿ ಕಾಣಸಿಕೊಂಡಿದ್ದರೆ, ಶಾರುಖ್ ರಾ ಏಜೆಂಟ್ ಪಾತ್ರವನ್ನು ಮಾಡಿದ್ದಾರೆ.
ಔಟ್ ಫುಟ್ ಎಕ್ಸ್ ಎನ್ನುವ ಉಗ್ರ ಸಂಘಟನೆಯೊಂದಿಗೆ ಗುರುತಿಸಿಕೊಂಡಿರುವ ಜಾನ್ ಅಬ್ರಾಹಂ, ಈ ಸಂಘಟನೆಯ ಮೂಲಕ ಭಾರತದ ಮೇಲೆ ದಾಳಿ ಮಾಡಲು ಸಂಚು ರೂಪಿಸುತ್ತಾರೆ. ಈ ದಾಳಿಯನ್ನು ಭಾರತ ರಾ ಏಜೆಂಟ್ ಆಗಿರುವ ಶಾರುಖ್ ಖಾನ್ ಹೇಗೆ ತಡೆಯುತ್ತಾರೆ ಎನ್ನುವುದೇ ಪಠಾಣ್ ಸಿನಿಮಾದ ಕಥಾ ಹಂದರ. ಟ್ರೈಲರ್ ನಲ್ಲಿ ಶಾರುಖ್ ಸಖತ್ತಾಗಿ ಕಾಣಿಸಿಕೊಂಡಿದ್ದಾರೆ. ಅನೇಕ ಸಾಹಸಮಯ ದೃಶ್ಯಗಳಲ್ಲಿ ಅವರು ವಯಸ್ಸಿಗೂ ಮೀರಿದ ಆ್ಯಕ್ಷನ್ ಮಾಡಿದ್ದಾರೆ. ಇಡೀ ಟ್ರೈಲರ್ ಆ್ಯಕ್ಷನ್ ದೃಶ್ಯಗಳಿಂದಲೇ ತುಂಬಿದೆ. ಇದನ್ನೂ ಓದಿ:ಎಷ್ಟೇ ಕಷ್ಟ ಬಂದರೂ ಸಿನಿಮಾ ಮೇಲಿನ ಪ್ರೀತಿ ಕಳೆದುಕೊಂಡಿಲ್ಲ: ಗಳಗಳನೇ ಅತ್ತ ಸಮಂತಾ
ನಾನಾ ಕಾರಣಗಳಿಂದಾಗಿ ವಿವಾದಕ್ಕೆ ಕಾರಣವಾಗಿರುವ ಈ ಸಿನಿಮಾ, ದೇಶಪ್ರೇಮವನ್ನು ಸಾರಲಿದೆ ಎಂದು ಈ ಹಿಂದೆಯೇ ಶಾರುಖ್ ಹೇಳಿದ್ದರು. ಸಿನಿಮಾ ನೋಡಿದ ನಂತರ ಮಾತನಾಡಿ ಎಂದೂ ಅವರು ವಿರೋಧಿಗಳಿಗೆ ಪ್ರತಿಕ್ರಿಯಿಸಿದ್ದರು. ಕಥಾ ಹಂದರ ಮತ್ತು ಶಾರುಖ್ ಮಾಡಿರುವ ಪಾತ್ರವನ್ನು ಗಮನಿಸಿದರೆ, ಉಗ್ರರಿಂದ ಭಾರತವನ್ನು ತಪ್ಪಿಸುವಂತಹ ಕಥಾಹಂದರ ಇರು ಹೊಂದಿದೆ ಎಂದು ಮೇಲ್ನೋಟಕ್ಕೆ ತಿಳಿಯುತ್ತದೆ.
ಪಠಾಣ್ ಸಿನಿಮಾದ ಹಾಡಿನಲ್ಲಿ ಹಿಂದೂಗಳ ಭಾವನೆ ಧಕ್ಕೆ ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿ ಈ ಸಿನಿಮಾವನ್ನು ಬಾಯ್ಕಾಟ್ ಮಾಡಿ ಎನ್ನುವ ಅಭಿಯಾನ ಶುರುವಾಗಿದೆ. ಈಗಾಗಲೇ ಹಲವು ಕಡೆಗಳಲ್ಲಿ ಚಿತ್ರವನ್ನು ನಿಷೇಧಿಸಬೇಕು ಎಂದು ಹೋರಾಟಗಳು ನಡೆದಿವೆ. ಈ ಸಂದರ್ಭದಲ್ಲಿ ಟ್ರೈಲರ್ ಬಿಡುಗಡೆ ಆಗಿದ್ದು, ಅದ್ಭುತ ರೆಸ್ಪಾನ್ಸ್ ಸಿಗುತ್ತಿದೆ. ಸಿನಿಮಾದ ಕಥೆಯಿಂದಾಗಿ ಚಿತ್ರವನ್ನು ಪ್ರೇಕ್ಷಕರು ಒಪ್ಪಿಕೊಳ್ಳುತ್ತಾರಾ ಕಾದು ನೋಡಬೇಕಿದೆ.
Live Tv
[brid partner=56869869 player=32851 video=960834 autoplay=true]
ಬಾಲಿವುಡ್ ಬ್ಯೂಟಿ ದಿಶಾ ಪಟಾನಿ ಸದ್ಯ `ಏಕ್ ವಿಲನ್ ರಿಟರ್ನ್ಸ್’ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗು ಚಿತ್ರದಿಂದ ಸಿನಿ ಕೆರಿಯರ್ ಶುರುಮಾಡಿದ್ದ ನಟಿ ದಿಶಾ ಈಗ ಬಾಲಿವುಡ್‌ನಲ್ಲಿ ಮಿರ ಮಿರ ಅಂತಾ ಮಿಂಚ್ತಿದ್ದಾರೆ. `ಏಕ್ ವಿಲನ್ ರಿಟರ್ನ್ಸ್’ ಪ್ರಚಾರದ ವೇಳೆಯಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡು, ಪಡ್ಡೆ ಹುಡುಗರ ನಿದ್ದೆ ಗೆಡಿಸಿದ್ದಾರೆ.
ಬಿಟೌನ್ ಕ್ವೀನ್ ದಿಶಾ ಈಗ `ಏಕ್ ವಿಲನ್ ರಿಟರ್ನ್ಸ್’ ಚಿತ್ರದ ಮೂಲಕ ಹೈಪ್ ಕ್ರಿಯೇಟ್ ಮಾಡಿದ್ದಾರೆ. ಅರ್ಜುನ್ ಕಪೂರ್, ಜಾನ್ ಅಬ್ರಹಾಂ, ತಾರಾ ಜತೆ ಪ್ರಮುಖ ಪಾತ್ರದಲ್ಲಿ ದಿಶಾ ನಟಿಸಿದ್ದಾರೆ. ಈ ಚಿತ್ರದ ಟ್ರೈಲರ್ ಮತ್ತು ಪೋಸ್ಟರ್ ಮೂಲಕ ಭರ್ಜರಿ ಸೌಂಡ್ ಮಾಡುತ್ತಿದ್ದು, ಇದೇ ಜುಲೈ 29ಕ್ಕೆ ತೆರೆಗೆ ಅಬ್ಬರಿಸಲಿದೆ. ಹಾಗಾಗಿ ಪ್ರಚಾರ ಕಾರ್ಯದಲ್ಲಿ ಭಾಗಿದ್ದ ವೇಳೆ ದಿಶಾ ಹಾಟ್ ಲುಕ್ ಗಂಡ್ ಹೈಕ್ಳ ಟೆಂಪ್ರೇಚರ್ ಹೆಚ್ಚಿಸಿದೆ. ಇದನ್ನೂ ಓದಿ:ರಿಲೀಸ್‌ಗೂ ಮುನ್ನವೇ ವಿವಾದಕ್ಕೆ ಸಿಲುಕಿದ ಕಂಗನಾ ನಟನೆಯ `ಎಮರ್ಜೆನ್ಸಿ’ ಚಿತ್ರ
ಬ್ಲ್ಯಾಕ್ ಕಲರ್ ಕ್ರಾಪ್ ಟಾಪ್‌ನಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ದಿಶಾ ಲುಕ್ ಈಗ ನೋಡುಗರ ಗಮನ ಸೆಳೆಯುತ್ತಿದೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
Live Tv
[brid partner=56869869 player=32851 video=960834 autoplay=true]
ಶಾರುಖ್ ಖಾನ್ ನಟನೆಯ ಸಿನಿಮಾಗಾಗಿ ಐದು ವರ್ಷಗಳಿಂದ ಕಾದು ಕುಳಿತಿದ್ದ ಅಭಿಮಾನಿಗಳಿಗೆ ಇಂದು ಗುಡ್ ನ್ಯೂಸ್ ಸಿಕ್ಕಿದೆ. ಹಲವು ವರ್ಷಗಳಿಂದ ‘ಪಠಾಣ್’ ಸಿನಿಮಾದಲ್ಲೇ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಶಾರುಖ್ ಖಾನ್, ಕೊನೆಗೂ ಈ ಸಿನಿಮಾದ ರಿಲೀಸ್ ಡೇಟ್ ಘೋಷಣೆ ಮಾಡಿದ್ದಾರೆ. ಮುಂದಿನ ವರ್ಷ ಜನವರಿ 25 ರಂದು ವಿಶ್ವದಾದ್ಯಂತ ಸಿನಿಮಾ ರಿಲೀಸ್ ಮಾಡುವುದಾಗಿ ಅವರು ಟ್ವಿಟ್ ಮಾಡಿದ್ದಾರೆ. ಸಖತ್ತಾಗಿರುವ ಪೋಸ್ಟರ್ ಕೂಡ ಹಾಕಿದ್ದಾರೆ.
ದೀಪಿಕಾ ಪಡುಕೋಣೆ, ಜಾನ್ ಅಬ್ರಾಹಂ ಸೇರಿದಂತೆ ಹೆಸರಾಂತ ತಾರಾ ಬಳಗವೇ ಇರುವ ಈ ಸಿನಿಮಾ ಈಗಾಗಲೇ ನಿರೀಕ್ಷೆ ಮೂಡಿಸಿದೆ. ಸಿನಿಮಾದ ಫಸ್ಟ್ ಲುಕ್ ಕೂಡ ವೈರಲ್ ಆಗಿದೆ. ಈ ಚಿತ್ರಕ್ಕಾಗಿ ಶಾರುಖ್ ಖಾನ್ ಲುಕ್ ಕೂಡ ಬದಲಾಯಿಸಿಕೊಂಡಿದ್ದಾರೆ. ಶಾರುಖ್ ಲುಕ್ ಬದಲಿಸಿಕೊಂಡಿದ್ದರೆ, ದೀಪಿಕಾ ಪಡುಕೋಣೆ ಬಿಕನಿಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಶೂಟಿಂಗ್ ಸಮಯದಲ್ಲಿ ದೀಪಿಕಾ ಬಿಕನಿಯಲ್ಲಿರುವ ಫೋಟೋ ಲೀಕ್ ಆಗಿ ವೈರಲ್ ಕೂಡ ಆಗಿತ್ತು. ಇದನ್ನೂ ಓದಿ : ಚಾಮುಂಡಿ ದರ್ಶನ ಮುಗಿಸಿ ಮೈಸೂರಿನಲ್ಲಿ ಉಪಾಧ್ಯಕ್ಷನನ್ನು ಭೇಟಿಯಾದ ಶಿವರಾಜ್ ಕುಮಾರ್
ಶಾರುಖ್ ಖಾನ್ ಪೋಸ್ಟ್ ಮಾಡಿರುವ ಪ್ರಕಾರ ಈ ಸಿನಿಮಾ ಮೂರು ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಹಿಂದಿ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ರಿಲೀಸ್ ಮಾಡುವುದಾಗಿ ಅವರು ಘೋಷಣೆ ಮಾಡಿದ್ದಾರೆ. ಶಾರುಖ್ ಖಾನ್ ಸಿನಿಮಾ ರಂಗಕ್ಕೆ ಬಂದು ಮೂರು ದಶಕ ಕಂಡ ಖುಷಿಯಾಗಿ ಇವತ್ತು ಪಠಾಣ್ ಸಿನಿಮಾದ ರಿಲೀಸ್ ದಿನಾಂಕವನ್ನು ಘೋಷಣೆ ಮಾಡಿದ್ದಾರೆ ಶಾರುಖ್. ಅಂದಹಾಗೆ ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ನಲ್ಲಿ ಮೂಡಿ ಬಂದಿರುವ ಐವತ್ತನೇ ಸಿನಿಮಾ ಇದಾಗಿದೆ.
ಒಂದು ಕಾಲದಲ್ಲಿ ಬಾಲಿವುಡ್‌ನಲ್ಲಿ ದಕ್ಷಿಣ ಭಾರತದ ಸಿನಿಮಾಗಳಿಗೆ ಮಣೆ ಹಾಕ್ತಿರಲಿಲ್ಲ. ಸೌತ್ ಚಿತ್ರಗಳನ್ನ ಅಲ್ಲಿನ ಕಲಾವಿದರನ್ನ ಬಾಲಿವುಡ್ ಮಂದಿ ಅಸಡ್ಡೆಯಿಂದ ನೋಡ್ತಿದ್ರು. ಈಗ ಭಾರತೀಯ ಚಿತ್ರರಂಗದ ಸ್ವರೂಪವೇ ಬದಲಾಗಿದೆ.
ದಕ್ಷಿಣದ ಸಿನಿಮಾಗಳನ್ನ ಬಿಟೌನ್‌ನಲ್ಲಿ ಅಪ್ಪಿ ಒಪ್ಪಿಕೊಳ್ತಿದ್ದಾರೆ. ಅದಕ್ಕೆ ತಾಜಾ ಉದಾಹರಣೆ `ಪುಷ್ಪ’ ಸಿನಿಮಾ, ಈಗೀಗ ದಕ್ಷಿಣ ಭಾರತದ ಸಿನಿಮಾಗಳಿಗೆ ಬಾಲಿವುಡ್ ಮನ್ನಣೆ ದೊರೆಯುತ್ತಿದೆ. ಸೌತ್ ಚಿತ್ರಗಳನ್ನ ಹಿಂದಿ ಸಿನಿಮಾ ರಸಿಕರು ಮುಗಿಬಿದ್ದು ನೋಡ್ತಿದ್ದಾರೆ. ಆದರೆ ಇತ್ತೀಚಿನ ಬಿಟೌನ್ ನಟ ಜಾನ್ ಅಬ್ರಹಾಂ ಕೊಟ್ಟಿರೋ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ.
ಜಾನ್ ಅಬ್ರಾಹಾಂ ನಟನೆಯ ಅಟ್ಯಾಕ್ ಚಿತ್ರ ಏ.೧ರಂದು ತೆರೆಕಂಡಿತ್ತು. ಈ ಚಿತ್ರದ ಪ್ರಚಾರದ ವೇಳೆ ನಟ ಜಾನ್, ನಾನು ಎಂದೂ ತೆಲುಗು ಸಿನಿಮಾ ಮಾಡುವುದಿಲ್ಲ. ನಾನು ಬಾಲಿವುಡ್ ಹೀರೋ, ಬಿಸಿನೆಸ್ ಮಾಡುವ ಸಲುವಾಗಿ ತೆಲುಗು ಅಥವಾ ಪರಭಾಷಾ ಚಿತ್ರಗಳಲ್ಲಿ ನಟಿಸೋದಿಲ್ಲ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯಿಂದ ಜಾನ್ ನಟನೆಯ `ಅಟ್ಯಾಕ್’ ಸಿನಿಮಾ ಕಲೆಕ್ಷನ್‌ಗೆ ಪೆಟ್ಟು ಬಿದ್ದಿದೆ.
ಜಾನ್ ಅಬ್ರಾಹಾಂ ನಟನೆಯ `ಅಟ್ಯಾಕ್’ ಚಿತ್ರದ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆಯಿತ್ತು. ಆದರೆ ಆ ನಿರೀಕ್ಷೆ ಸುಳ್ಳಾಗಿದೆ. ಚಿತ್ರದ ಮೊದಲ ದಿನದ ಕಲೆಕ್ಷನ್ ೩.೫ ಕೋಟಿ ಗಳಿಸಿ ಚಿತ್ರ ಸೋಲುವ ಲಕ್ಷಣ ಕಾಣುತ್ತಿದೆ. `ಅಟ್ಯಾಕ್’ ಚಿತ್ರಕ್ಕೆ ಪೈಪೋಟಿ ನೀಡುತ್ತಿರುವ ಚಿತ್ರ `ಆರ್‌ಆರ್‌ಆರ್’ ಈ ಚಿತ್ರವನ್ನ ಅಭಿಮಾನಿಗಳು ಮುಗಿಬಿದ್ದು ನೋಡ್ತಿದ್ದಾರೆ. ಇದನ್ನು ಓದಿ:ಜಾನ್ ಅಬ್ರಾಹಾಂ ಹೊಸ ಚಿತ್ರದಲ್ಲಿ ಬಿಟೌನ್ ಕಿಲಾಡಿ
Lol you talk about South cinema. Telugu – Big budget Malayalam – Strong content Tamil – High action Kanada – Unique concepts Even if you want to act in south no one's gonna give you offer.#AttackMovie#RRR#Beast#JohnAbraham
`ಆರ್‌ಆರ್‌ಆರ್’ ಚಿತ್ರದ ಎದುರು ಹೀನಾಯವಾಗಿ ಅಟ್ಯಾಕ್ ಸೋಲ್ತಿರೋದಕ್ಕೆ ನೆಟ್ಟಿಗರು ನಟ ಜಾನ್‌ರನ್ನ ಹಿಗ್ಗಾಮುಗ್ಗಾ ಟ್ರೋಲ್ ಮಾಡ್ತಿದ್ದಾರೆ. ತೆಲುಗಿನಲ್ಲಿ ಬಿಗ್ ಬಜೆಟ್ ಚಿತ್ರ, ತಮಿಳಿನಲ್ಲಿ ಹೈ ಒಲ್ಟೇಜ್ ಆಕ್ಷನ್, ಮಲೆಯಾಳಂನಲ್ಲಿ ಸೂಪರ್ ಕಂಟೆAಟ್, ಕನ್ನಡದಲ್ಲಿ ಭಿನ್ನ ಕಾನ್ಸೆಪ್ಟ್ ಇರುತ್ತದೆ. ಇಂತಹ ಚಿತ್ರಗಳಲ್ಲಿ ನಟಿಸಬೇಕು ಅಂದ್ರು ನಿಮಗೆ ಯಾರು ಅವಕಾಶ ಕೊಡಲ್ಲ ಅಂತಾ ಜಾನ್‌ಗೆ ನೆಟ್ಟಿಗರು ಲೆಫ್ಟು ರೈಟು ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.
ಬಾಲಿವುಡ್‌ನ `ದೇಸಿಬಾಯ್ಸ್’ ಮತ್ತೆ ತೆರೆಯ ಮೇಲೆ ಮಿಂಚೋದಕ್ಕೆ ಸಜ್ಜಾಗ್ತಿದ್ದಾರೆ. ಕಿಲಾಡಿ ಜೋಡಿ ಅಕ್ಷಯ್ ಕುಮಾರ್ ಮತ್ತು ನಟ ಜಾನ್ ಅಬ್ರಾಹಾಂ ಒಂದೇ ಸಿನಿಮಾದಲ್ಲಿ ನಟಿಸೋದಕ್ಕೆ ತೆರೆಮರೆಯಲ್ಲಿ ಭರ್ಜರಿ ಕಸರತ್ತು ನಡೆಯುತ್ತಿದೆ. ಈ ಹೊಸ ಪ್ರಾಜೆಕ್ಟ್ `ಪರ್ಮನು’ ಖ್ಯಾತಿಯ ನಿರ್ದೇಶಕ ಅಭಿಷೇಕ್ ಶರ್ಮಾ ಆಕ್ಷನ್ ಕಟ್ ಹೇಳ್ತಿದ್ದಾರೆ.
ಅಭಿಷೇಕ್ ಶರ್ಮಾ ನಿರ್ದೇಶನದ ೨೦೧೮ರ `ಪರ್ಮನು’ ಚಿತ್ರದಲ್ಲಿ ಜಾನ್ ಅಬ್ರಾಹಾಂ ಪ್ರಮುಖ ಪಾತ್ರದಲ್ಲಿ ನಟಿಸಿದ್ರು. ಈಗ ಮತ್ತೆ ಅಭಿಷೇಕ್ ಮತ್ತು ಜಾನ್ ಕಾಂಬಿನೇಷನ್‌ನಲ್ಲಿ ಹೊಸ ಚಿತ್ರ ಮೂಡಿ ಬರುತ್ತಿದೆ. ಈ ಚಿತ್ರದಲ್ಲಿ ನಟ ಜಾನ್‌ಗೆ ಸಾಥ್ ಕೊಡೋಕೆ ಬಿಟೌನ್ ಕಿಲಾಡಿ ಅಕ್ಷಯ್ ಕುಮಾರ್ ಕೂಡ ಕಾಣಿಸಿಕೊಳ್ತಿದ್ದಾರೆ. ಇದನ್ನು ಓದಿ:`ಪುಕ್ಸಟ್ಟೆ ಲೈಫು’ ನಿರ್ಮಾಪಕನ ಹೊಸ ಚಿತ್ರದಲ್ಲಿ `ಗಿಲ್ಕಿ’ ನಟಿ ಚೈತ್ರಾ ಆಚಾರ್
ಈಗಾಗಲೇ ಜಾನ್ ಅಬ್ರಾಹಂ ಮತ್ತು ಅಕ್ಷಯ್ ಕುಮಾರ್ ಕಾಂಬೋದಲ್ಲಿ `ದೇಸಿ ಬಾಯ್ಸ್’, `ಹೌಸ್‌ಫುಲ್ ೨’, `ಗರಂ ಮಸಾಲ’ ಚಿತ್ರಗಳು ಕಮಾಲ್ ಮಾಡಿದೆ. ಈಗ ಅಭಿಷೇಕ್ ನಿರ್ದೇಶನದ ಚಿತ್ರದಲ್ಲಿ ಭಿನ್ನ ಕಥೆ, ಪಾತ್ರಗಳ ಮೂಲಕ ಮೋಡಿ ಮಾಡಲು ದೇಸಿ ಬಾಯ್ಸ್ ಬರುತ್ತಿದ್ದಾರೆ. ಸಾಕಷ್ಟು ಚಿತ್ರಗಳ ಮೂಲಕ ಅಟ್ರಾಕ್ಟ್ ಮಾಡಿರೋ ಜಾನ್ ಮತ್ತು ಅಕ್ಷಯ್ ಕುಮಾರ್ ಜುಗಲ್‌ಬಂದಿ ನೋಡಲು ಫ್ಯಾನ್ಸ್ ಕಾತರದಿಂದ ಕಾಯ್ತಿದ್ದಾರೆ.
ಮುಂಬೈ: ವಿಫಲವಾದ ಮದುವೆಗಳು ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದು ಬಾಲಿವುಡ್ ಖ್ಯಾತ ನಟಿ ಬಿಪಾಶಾ ಬಸು ಹೇಳಿದರು.
ನಟರಾದ ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ಪರಸ್ಪರ ಪ್ರೀತಿಸುತ್ತಿದ್ದು, 2016 ಏಪ್ರಿಲ್ 30 ರಂದು ಬಂಗಾಳಿ ಸಾಂಪ್ರದಾಯದಂತೆ ವಿವಾಹವಾಗಿದ್ದರು. ಆದರೆ ಇವರಿಬ್ಬರ ವಿವಾಹದ ಹಾದಿ ಅಷ್ಟೊಂದು ಸುಗಮವಾಗಿರಲಿಲ್ಲ. ಕರಣ್‍ರವರ ಎರಡು ಹಿಂದಿನ ವಿವಾಹಗಳು ವಿಫಲವಾಗಿದ್ದ ಕಾರಣ ಬಿಪಾಶಾರವರ ಹೆತ್ತವರು ಈ ವಿವಾಹದ ಕುರಿತು ಮತ್ತು ಅವರ ಆಯ್ಕೆಯ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು ಎಂದು ಬಿಪಾಶಾ ಬಹಿರಂಗಪಡಿಸಿದ್ದಾರೆ. ‘ಕುಬೂಲ್ ಹೈ’ ಚಿತ್ರದ ಖ್ಯಾತ ನಟ ಮೊದಲು ಶ್ರದ್ಧಾ ನಿಗಮ್ ಮತ್ತು ಜೆನ್ನಿಫರ್ ವಿಂಗೆಟ್ ಅವರನ್ನು ವಿವಾಹವಾಗಿದ್ದರು. ಇದನ್ನೂ ಓದಿ: ಐಪಿಎಲ್ 2022ರ ಹರಾಜು ಪ್ರಕ್ರಿಯೆ ವೀಕ್ಷಿಸಿ ತುಂಬಾ ದಣಿದಿದ್ದೇನೆ: ಪ್ರೀತಿ ಜಿಂಟಾ
ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಬಿಪಾಶಾ ತಮ್ಮ ಪ್ರಸ್ತುತ ದಾಂಪತ್ಯ ಜೀವನದ ಹಿಂದಿನ ಕೆಲ ಕರಾಳ ನೆನಪುಗಳ ಬಗ್ಗೆ ಮಾತನಾಡಿ, ವಿಫಲವಾದ ಮದುವೆಗಳು ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಎಂದಿಗೂ ನಿರ್ಧರಿಸಲು ಸಾಧ್ಯವಿಲ್ಲ. ಆದ್ದರಿಂದ ಅವರನ್ನು ಖಂಡಿಸಬೇಕು ಅಂತ ಅಲ್ಲ. ನಾನು ಇಷ್ಟಪಟ್ಟಂತಹ ವ್ಯಕ್ತಿತ್ವವುಳ್ಳ ಹುಡುಗ ನನಗೆ ಸಿಕ್ಕಿದ್ದಾನೆ. ನನ್ನ ಆಯ್ಕೆಯ ಸಂಬಂಧವು ಯಾವಾಗಲೂ ದೀರ್ಘಾವಧಿಯವರೆಗೆ ಇರಿಸಿಕೊಳ್ಳಲು ನಾನು ಇಷ್ಟಪಡುತ್ತೇನೆ ಎಂದರು.
ನಾನು ರಿಜಿಸ್ಟರ್ ಆಫೀಸಿನ ಕಾಗದದ ತುಂಡಿಗೆ ಸಹಿ ಮಾಡಲಿಲ್ಲ. ಮದುವೆಯ ಮೊದಲಿನ ಯಾವ ಸಂಬಂಧಗಳು ಗಟ್ಟಿ ಇರಲು ಸಾಧ್ಯವಿಲ್ಲ. ಇದು ದುರದೃಷ್ಟಕರ ಆದರೆ ದೀರ್ಘಾವಧಿಯ ಸಂಬಂಧಗಳ ಕೆಲ ನೆನಪುಗಳನ್ನು ನೀವು ಹಿಂದಿರುಗಿ ನೋಡಿದಾಗ ನೀವು ಯಾವಾಗಲೂ ಸಂತೋಷವಾಗಿರುತ್ತೀರಿ. ನಿಮ್ಮ ಜೀವನದಲ್ಲಿ ಯಾವುದೇ ಒಂದು ಕಾರಣಕ್ಕಾಗಿ ಏನಾದರೂ ಒಂದು ಮರೆಯಲಾಗದ ಘಟನೆ ಸಂಭವಿಸಿರುತ್ತದೆ ಎಂದು ಕರಣ್ ಮತ್ತು ಅವರ ಪೋಷಕರೊಂದಿಗಿನ ಪ್ರಸ್ತುತ ಬಾಂಧವ್ಯದ ಬಗ್ಗೆ ತಿಳಿ ಹೇಳಿದರು. ಇದನ್ನೂ ಓದಿ: ಪ್ರಧಾನಿಗೆ ಭದ್ರತೆ ನೀಡಲು ಸಾಧ್ಯವಾಗದ ಚನ್ನಿ ಪಂಜಾಬ್‍ನ್ನು ಹೇಗೆ ಕಾಪಾಡಿಕೊಳ್ಳುವರು: ಅಮಿತ್ ಶಾ
ಬಿಪಾಶಾ ಕರಣ್‍ರವರನ್ನ ವಿವಾಹವಾಗುವ ಮೊದಲು, ಜಾನ್ ಅಬ್ರಹಾಂ ಜೊತೆ ಸಂಬಂಧದಲ್ಲಿದ್ದರು. ಇಬ್ಬರೂ 9 ವರ್ಷಗಳ ಕಾಲ ಡೇಟಿಂಗ್ ಕೂಡಾ ನಡೆಸಿದ್ದರು. ನಂತರ 2011ರಲ್ಲಿ ಈ ಸಂಬಂಧ ಮುರಿದು ಬಿದ್ದಿದೆ.
ಮುಂಬೈ: ಬಾಲಿವುಡ್ ನಟ ಜಾನ್ ಅಬ್ರಹಾಂ ಯಾವುದೇ ಸೂಪರ್ ಸ್ಟಾರ್ ಗೆ ಕಡಿಮೆಯಿಲ್ಲ. ಅವರ ಆಕ್ಟಿಂಗ್ ಹಾಗೂ ಸಿಕ್ಸ್ ಪ್ಯಾಕ್ ಗೆ ಯುವತಿಯರು ಮನಸೋತಿರುವುದು ಹಳೆಯ ಸುದ್ದಿ. ಈಗ ಅವರ ಮನೆಗೆ ಸಂಬಂಧಿಸಿದಂತೆ ಹೊಸ ಸುದ್ದಿ ಬಂದಿದೆ.
ಜಾನ್ ತಮ್ಮ ಗೆಳತಿ ಪ್ರಿಯಾ ರೂಚಾಲ್ ಜೊತೆ ಸಂತೋಷದಿಂದಿದ್ದು, ಮುಂಬೈನ ಬಾಂದ್ರಾದಲ್ಲಿರುವ ಅವರ ಮನೆಯನ್ನು ನೋಡಿದ್ದರೆ ನೀವು ಆಶ್ಚರ್ಯ ಪಡುತ್ತೀರಿ. ತಮ್ಮ ನಿವಾಸವನ್ನು ಜಾನ್ ತಮ್ಮ ಮನೆಯನ್ನು ತಮ್ಮ ಸಹೋದರ ಎಲಾನ್ ಜೊತೆ ಸೇರಿಕೊಂಡು ಡಿಸೈನ್ ಮಾಡಿದ್ದು, ‘ವಿಲ್ಲಾ ಇನ್ ದಿ ಸ್ಕೈ’ ಎಂದು ಹೆಸರಿಟ್ಟಿದ್ದಾರೆ.
5000 ಚದರ ಅಡಿ ವಿಸ್ತೀರ್ಣದಲ್ಲಿ ಹೈಕ್ಲಾಸ್ ವಸ್ತುಗಳನ್ನು ಬಳಸಿ 14 ತಿಂಗಳಿನಲ್ಲಿ ವಿಲ್ಲಾ ನಿರ್ಮಾಣಗೊಂಡಿದೆ. ಬೆಡ್ ರೂಮ್‍ನಿಂದ ಪೇಂಟಿಂಗ್ ರೂಮ್ ವರೆಗೂ ಎಲ್ಲವೂ ಸುಂದರವಾಗಿ ನಿರ್ಮಾಣವಾಗಿದ್ದು, ಮುಂದುಗಡೆ ಸಮುದ್ರವನ್ನು ನೋಡಬಹುದಾಗಿದೆ.
ಈ ಹಿಂದೆ ನಟ ಅಭಿಷೇಕ್ ಬಚ್ಚನ್ ತಮ್ಮ ಸುಂದರ ಪತ್ನಿ ಐಶ್ವರ್ಯ ರೈಗೆ 21 ಕೋಟಿ ರೂ. ಬೆಲೆ ಬಾಳುವ ಹೊಸ ಅಪಾರ್ಟ್ ಮೆಂಟ್ ಗಿಫ್ಟ್ ನೀಡಿದ್ದರು. ಆ ಹೊಸ ಅಪಾರ್ಟ್ ಮೆಂಟ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಅಭಿಷೇಕ್ ಮತ್ತು ಐಶ್ವರ್ಯ ರೈ, ಬಚ್ಚನ್ ಕುಟುಂಬದೊಂದಿಗೆ ಮುಂಬೈನ `ಜಲ್ಸಾ’ ನಿವಾಸದಲ್ಲಿ ವಾಸವಾಗಿದ್ದರು. ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ ಹತ್ತಿರದ `ಹೈ ಎಂಡ್ ರೆಸಿಡೆನ್ಸಿಯಲ್ ಕಾಂಪ್ಲೆಕ್ಸ್, ಸಿಂಗಾನಿಯಾ ಐಸೆಲ್‍ನಲ್ಲಿ ಹೊಸ ಅಪಾರ್ಟ್ ಮೆಂಟ್ ಖರೀದಿಸಿದ್ದರು.