Tag: Johannesburg

  • ದಕ್ಷಿಣ ಆಫ್ರಿಕಾದಲ್ಲಿ ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಅವಘಡ – 73 ಮಂದಿ ಸಾವು

    ದಕ್ಷಿಣ ಆಫ್ರಿಕಾದಲ್ಲಿ ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಅವಘಡ – 73 ಮಂದಿ ಸಾವು

    ಕೇಪ್‌ ಟೌನ್‌: ದಕ್ಷಿಣ ಆಫ್ರಿಕಾದ (South Africa) ಅತಿದೊಡ್ಡ ನಗರ ಜೋಹಾನ್ಸ್‌ಬರ್ಗ್‌ನಲ್ಲಿ (Johannesburg) ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಹೊತ್ತಿ ಉರಿದು ಕನಿಷ್ಠ 73 ಜನರು ಸಾವನ್ನಪ್ಪಿದ್ದಾರೆ ಎಂದು ತುರ್ತು ನಿರ್ವಹಣಾ ಸೇವೆ ಗುರುವಾರ ತಿಳಿಸಿದೆ.

    ಗುರುವಾರ ಮುಂಜಾನೆ ಸಂಭವಿಸಿದ ಬೆಂಕಿಯಲ್ಲಿ 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತುರ್ತು ಸೇವಾ ವಿಭಾಗದ ವಕ್ತಾರ ರಾಬರ್ಟ್ ಮುಲಾಡ್ಜಿ ತಿಳಿಸಿದ್ದಾರೆ. ಇದನ್ನೂ ಓದಿ: 2ನೇ ಮಹಾಯುದ್ಧದ ನಂತರ ಅತಿ ಹೆಚ್ಚು ಸಾವುಗಳಾದ ಯುದ್ಧ ರಷ್ಯಾ-ಉಕ್ರೇನ್‌ ವಾರ್‌; ಮಡಿದವರೆಷ್ಟು?

    ಅಗ್ನಿಶಾಮಕ ದಳದವರು ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದುವರೆಗೆ 63 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಇನ್ನೂ ಹೆಚ್ಚಿನ ಜನರು ಒಳಗೆ ಸಿಲುಕಿರುವ ಸಾಧ್ಯತೆಯಿದೆ ಎಂದು ರಾಬರ್ಟ್‌ ಮಾಹಿತಿ ನೀಡಿದ್ದಾರೆ.

    ಬೆಂಕಿಯನ್ನು ನಂದಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಕಪ್ಪು ಕಟ್ಟಡದ ಡೌನ್ಟೌನ್‌ನ ಕಿಟಕಿಗಳಿಂದ ಹೊಗೆ ಇನ್ನೂ ಹರಡಿದೆ. ಬೆಂಕಿ ಬಿದ್ದ ಕಟ್ಟಡದಲ್ಲಿ ಸುಮಾರು 200 ಮಂದಿ ವಾಸವಾಗಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಪಾಕಿಸ್ತಾನದ ಯಾವ ಪ್ರಧಾನಿಯೂ 5 ವರ್ಷ ಪೂರೈಸಿಲ್ಲ – ಕಾರಣಗಳೇನು?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜೋಹಾನ್ಸ್‌ಬರ್ಗ್‌ನಲ್ಲಿ ಭೀಕರ ಅಗ್ನಿ ದುರಂತ – 63 ಮಂದಿ ದುರ್ಮರಣ

    ಜೋಹಾನ್ಸ್‌ಬರ್ಗ್‌ನಲ್ಲಿ ಭೀಕರ ಅಗ್ನಿ ದುರಂತ – 63 ಮಂದಿ ದುರ್ಮರಣ

    ಕೇಪ್‌ಟೌನ್: ದಕ್ಷಿಣ ಆಫ್ರಿಕಾದ (South Africa) ಜೋಹಾನ್ಸ್‌ಬರ್ಗ್‌ನ (Johannesburg) 5 ಅಂತಸ್ತಿನ ಕಟ್ಟಡವೊಂದರಲ್ಲಿ ಭೀಕರ ಅಗ್ನಿ (Fire) ದುರಂತ ಸಂಭವಿಸಿ 63 ಜನರು ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

    ಮಧ್ಯ ಜೋಹಾನ್ಸ್‌ಬರ್ಗ್‌ನ ಬಹುಮಹಡಿ ವಸತಿ ಕಟ್ಟಡದಲ್ಲಿ ಗುರುವಾರ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಕನಿಷ್ಠ 63 ಜನರು ಸಾವನ್ನಪ್ಪಿದ್ದಾರೆ. 40ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರುವ ಸಾಧ್ಯತೆ ಇದೆಯೆಂದು ತುರ್ತು ನಿರ್ವಾಹಣಾ ಅಧಿಕಾರಿಗಳು ತಿಳಿಸಿದ್ದಾರೆ.

    ಬೆಂಕಿಯನ್ನು ಬಹುಮಟ್ಟಿಗೆ ನಂದಿಸಲಾಗಿದೆ. ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ಮುಂದುವರಿಯುತ್ತಿದೆ. ಅಗ್ನಿಶಾಮಕ ದಳ ಹಾಗೂ ತುರ್ತು ವಾಹನಗಳು ಕಾರ್ಯಚರಣೆಯಲ್ಲಿ ತೊಡಗಿದ್ದು, ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಜಿ20 ಶೃಂಗಸಭೆಯಲ್ಲಿ ಭಾಗಿಯಾಗಲು ಚೀನಾ ಅಧ್ಯಕ್ಷ ಜಿನ್‌ಪಿಂಗ್ ಹಿಂದೇಟು

    ಕಟ್ಟಡದಲ್ಲಿ ಸುಮಾರು 200 ಜನರು ವಾಸವಿದ್ದರು ಎನ್ನಲಾಗಿದೆ. ಭಾರೀ ಬೆಂಕಿಗೆ ಕಾರಣ ಹಾಗೂ ಹಾನಿಯ ಪ್ರಮಾಣ ಇನ್ನೂ ತಿಳಿದುಬಂದಿಲ್ಲ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • BRICS ಶೃಂಗಸಭೆ: ನೆಲದ ಮೇಲಿದ್ದ ತ್ರಿವರ್ಣ ಧ್ವಜವನ್ನು ಕೈಗೆತ್ತಿಕೊಂಡು ಗೌರವ ತೋರಿದ ಮೋದಿ

    BRICS ಶೃಂಗಸಭೆ: ನೆಲದ ಮೇಲಿದ್ದ ತ್ರಿವರ್ಣ ಧ್ವಜವನ್ನು ಕೈಗೆತ್ತಿಕೊಂಡು ಗೌರವ ತೋರಿದ ಮೋದಿ

    ಕೇಪ್‌ಟೌನ್: ಬ್ರಿಕ್ಸ್ ಶೃಂಗಸಭೆಯಲ್ಲಿ (BRICS Summit) ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ದಕ್ಷಿಣ ಆಫ್ರಿಕಾದ (South Africa) ಜೋಹನ್ಸ್‌ಬಗ್‌ಗೆ (Johannesburg) ತೆರಳಿದ್ದಾರೆ. ಪ್ರವಾಸದಲ್ಲಿರುವ ಮೋದಿಯವರು ಭಾರತದ ತ್ರಿವರ್ಣ ಧ್ವಜಕ್ಕೆ (Tricolor) ಗೌರವ ತೋರಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಮೋದಿ ಬಗ್ಗೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗುತ್ತಿದೆ.

    ಶೃಂಗಸಭೆಯಲ್ಲಿ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಹಾಗೂ ದಕ್ಷಿಣ ಆಫ್ರಿಕಾದ ನಾಯಕರನ್ನು ಗ್ರೂಪ್ ಫ್ರೋಟೋ ಕ್ಲಿಕ್ಕಿಸಿಕೊಳ್ಳಲು ವೇದಿಕೆಗೆ ಕರೆಯಲಾಗಿತ್ತು. ಈ ವೇಳೆ ನರೇಂದ್ರ ಮೋದಿ ಅವರು ವೇದಿಕೆಯ ನೆಲದ ಮೇಲೆ ತಾವು ನಿಲ್ಲಬೇಕಾಗಿದ್ದ ಸ್ಥಳದಲ್ಲಿ ಪುಟ್ಟ ತ್ರಿವರ್ಣ ಧ್ವಜವನ್ನು ಗಮನಿಸಿದ್ದಾರೆ.

    ತಕ್ಷಣ ಮೋದಿ ಧ್ವಜದ ಮೇಲೆ ತಾವು ಕಾಲಿಡದಂತೆ ನೋಡಿಕೊಂಡು, ಪುಟ್ಟ ರಾಷ್ಟ್ರ ಧ್ವಜವನ್ನು ಕೈಗೆತ್ತಿಕೊಂಡು, ತಮ್ಮ ಜೇಬಿನಲ್ಲಿ ಇರಿಸಿಕೊಂಡರು. ಇದನ್ನು ಗಮನಿಸಿದ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲೆ ರಾಮಾಫೋಸಾ ಕೂಡಾ ಮೋದಿಯವರನ್ನು ಅನುಸರಿಸಿ, ನೆಲದ ಮೇಲೆ ಇಡಲಾಗಿದ್ದ ದಕ್ಷಿಣ ಆಫ್ರಿಕಾದ ಧ್ವಜವನ್ನು ಎತ್ತಿಕೊಂಡರು. ಇದನ್ನೂ ಓದಿ: ಆ.26ಕ್ಕೆ ಬೆಂಗಳೂರಿಗೆ ಮೋದಿ – ಇಸ್ರೋ ಕೇಂದ್ರ ಕಚೇರಿಗೆ ಭೇಟಿ

    ಇದಾದ ಬಳಿಕ ಮೋದಿ ಅವರು ವೇದಿಕೆಯಲ್ಲಿ ಬ್ರೆಜಿಲ್ ಅಧ್ಯಕ್ಷ ಲೂಯಿಸ್ ಇನಾಸಿಯೊ ಲುಲಾ ಡಾ ಸಿಲ್ವಾ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಾಫೋಸಾ, ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡರು.

    ಇದಕ್ಕೆ ಸಂಬಂಧಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಮೋದಿ ರಾಷ್ಟ್ರಧ್ವಜಕ್ಕೆ ತೋರಿದ ಗೌರವದ ಬಗ್ಗೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಈಗ ಕರ್ನಾಟಕಕ್ಕೂ ಚಂದ್ರನಿಗೂ ನೇರ ಸಂಪರ್ಕ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಾರ್‌ನಲ್ಲಿ ಗುಂಡಿನ ದಾಳಿ- 15 ಮಂದಿ ಸ್ಥಳದಲ್ಲೇ ಸಾವು

    ಬಾರ್‌ನಲ್ಲಿ ಗುಂಡಿನ ದಾಳಿ- 15 ಮಂದಿ ಸ್ಥಳದಲ್ಲೇ ಸಾವು

    ಜೋಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾದ ಸೊವೆಟೊ ಟೌನ್‌ಶಿಪ್‌ನಲ್ಲಿರುವ ಬಾರ್‌ನಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿ ವೇಳೆ 15 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನ ಸೊವೆಟೊ ಟೌನ್‌ಶಿಪ್‌ನಲ್ಲಿರುವ ಬಾರ್‌ನಲ್ಲಿ ಈ ಘಟನೆ ನಡೆದಿದೆ. ಮಿನಿಬಸ್ ಟ್ಯಾಕ್ಸಿಯಲ್ಲಿ ಬಂದ ಗುಂಪೊಂದು ಬಾರ್‌ನಲ್ಲಿ ಕೆಲವರ ಮೇಲೆ ಗುಂಡು ಹಾರಿಸಿದೆ. ಈ ವೇಳೆ 15 ಮಂದಿ ಮೃತಪಟ್ಟಿದ್ದು, 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

    crime

    ಇದಾದ ಬಳಿಕ ಆರೋಪಿಗಳೆಲ್ಲರೂ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಎಷ್ಟು ಮಂದಿ ಭಾಗಿಯಾಗಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇದನ್ನೂ ಓದಿ: ಶಿವ, ಪಾರ್ವತಿ ವೇಷ ಧರಿಸಿ ಹಣದುಬ್ಬರದ ಬಗ್ಗೆ ನಾಟಕ- ಶಿವ ವೇಷಧಾರಿಯ ಬಂಧನ

    crime

    ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಘಟನೆಯಲ್ಲಿ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕ್ರಿಸ್ ಹನಿ ಬರಗವಾನಾಥ್ ಆಸ್ಪತ್ರೆಗೆ ದಾಖಲಿಸಲಾಗಿದೆ. ದಕ್ಷಿಣ ಆಫ್ರಿಕಾವು ವಿಶ್ವದ ಅತ್ಯಂತ ಹಿಂಸಾತ್ಮಕ ರಾಷ್ಟ್ರಗಳಲ್ಲಿ ಒಂದಾಗಿದೆ, ಪ್ರತಿವರ್ಷ 20,000 ಜನರು ಹತ್ಯೆಯಾಗುತ್ತಾರೆ. ಇದನ್ನೂ ಓದಿ: ಸಾರ್ವಜನಿಕ ವಿಚಾರಣೆ ವೇಳೆ ವ್ಯಕ್ತಿಯನ್ನು ಜೀವಂತವಾಗಿ ಸುಟ್ಟು ಹಾಕಿದ್ರು

    Live Tv
    [brid partner=56869869 player=32851 video=960834 autoplay=true]

  • 30 ಸೆಕೆಂಡ್‍ನಲ್ಲಿ ಉರುಳಿತು 108 ಮೀ. ಎತ್ತರದ ಕಟ್ಟಡ – ವಿಡಿಯೋ

    30 ಸೆಕೆಂಡ್‍ನಲ್ಲಿ ಉರುಳಿತು 108 ಮೀ. ಎತ್ತರದ ಕಟ್ಟಡ – ವಿಡಿಯೋ

    ಜೋಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾದಲ್ಲಿ 22 ಅಂತಸ್ತಿನ ಕಟ್ಟಡವನ್ನು ಕೇವಲ 30 ಸೆಕೆಂಡ್‍ನಲ್ಲಿ ನೆಲಸಮ ಮಾಡಲಾಗಿದೆ.

    ಕಳೆದ ಸೆಪ್ಟೆಂಬರ್ ನಲ್ಲಿ ಸಂಭವಿಸಿದ ಬೆಂಕಿ ಅವಘಡದ ನಂತರ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್ ನ ಬ್ಯಾಂಕ್ ಆಫ್ ಲಿಸ್ಬನ್ ಕಟ್ಟಡವನ್ನು ಭಾನುವಾರ ನೆಲಸಮ ಮಾಡಲಾಯಿತು.

    ಭಾನುವಾರ ಬೆಳಗ್ಗೆ ಕೇವಲ 30 ಸೆಕೆಂಡ್‍ಗಳಿಗಿಂತ ಕಡಿಮೆ ಅವಧಿಯಲ್ಲಿ ಈ ಕಟ್ಟಡವನ್ನು ಸ್ಫೋಟಕಗಳನ್ನು ಬಳಸಿ ನೆಲಸಮ ಮಾಡಲಾಗಿದೆ. ನೆಲಸಮ ಮಾಡಿದ ಕಟ್ಟಡಗಳ ಪೈಕಿ ಇದು ವಿಶ್ವದಲ್ಲೇ ಎರಡನೇ ಅತ್ಯಂತ ದೊಡ್ಡ ಕಟ್ಟಡವಾಗಿದೆ ಎಂದು ವರದಿಯಾಗಿದೆ.

    ಇದರ ಎತ್ತರ 108 ಮೀಟರ್ ಆಗಿದ್ದು, ಈ ಹಿಂದೆ 114 ಮೀಟರ್ ಎತ್ತರದ ಕಟ್ಟಡವನ್ನು ನೆಲಸಮಗೊಳಿಸಲಾಗಿತ್ತು. ಇದೇ ವಿಶ್ವದಲ್ಲಿ ಅತ್ಯಂತ ಹೆಚ್ಚು ಎತ್ತರದ ನೆಲಸಮಗೊಂಡ ಕಟ್ಟಡವಾಗಿದೆ ಎಂದು ಗೌಟೆಂಗ್‍ನ ಮೂಲ ಸೌಲಭ್ಯ ಮತ್ತು ಆಸ್ತಿ ಅಭಿವೃದ್ಧಿ ಮಂಡಳಿ ಸದಸ್ಯೆ ತಸ್ನೀಮ್ ಮೊತರಾ ಮಾಹಿತಿ ನೀಡಿದ್ದಾರೆ. ಇದನ್ನು ಉರುಳಿಸುವುದು ಅತ್ಯಂತ ಕಷ್ಟಕರ ಕೆಲಸವಾಗಿತ್ತು. ಆದರೆ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

    ಸ್ಫೋಟದ ಮೊದಲು, ಹತ್ತಿರದ ಕಟ್ಟಡಗಳಲ್ಲಿ ವಾಸವಿದ್ದ ಸುಮಾರು 2 ಸಾವಿರಕ್ಕೂ ಅಧಿಕ ಜನರನ್ನು ಸ್ಥಳಾಂತರಿಸಲಾಗಿತ್ತು. ಕಟ್ಟಡ ಕೆಡವಿದ ನಂತರ ವ್ಯಾಪಕ ಧೂಳು ತುಂಬಿತ್ತು. ಯಾವ ಪ್ರಮಾಣದಲ್ಲಿ ಧೂಳಿತ್ತು ಎಂಬುದನ್ನು ವಿಡಿಯೋ ಮೂಲಕ ನೋಡಬಹುದಾಗಿದೆ.

    ಬ್ಯಾಂಕ್ ಆಫ್ ಲಿಸ್ಬನ್ ಬದಲಿಗೆ ಇನ್ನೊಂದು ಕಟ್ಟಡವನ್ನು ನಿರ್ಮಿಸಲಾಗುವುದು. ಈ ಕಟ್ಟಡದಲ್ಲಿ ಸರ್ಕಾರಿ ಇಲಾಖೆಗಳ ಕಚೇರಿಗಳನ್ನೂ ಸ್ಥಾಪಿಸಲಾಗುವುದು ಎಂದು ತಸ್ನೀಮ್ ಮಾಹಿತಿ ನೀಡಿದರು.

    ಬೆಂಕಿ ಹೊತ್ತಿಕೊಂಡ ನಂತರ ಅಲ್ಲಿನ ಗೌಟೆಂಗ್ ಪ್ರಾಂತೀಯ ಸರ್ಕಾರ ಕಟ್ಟಡದ ರಚನಾತ್ಮಕ ಮೌಲ್ಯಮಾಪನವನ್ನು ನಡೆಸಿತು. ಕಟ್ಟಡ ಉತ್ತಮ ಸ್ಥಿತಿಯಲ್ಲಿ ಇಲ್ಲದೇ ಇರುವುದು ಮತ್ತು ಸುರಕ್ಷತಾ ಮಾನದಂಡ ಪಾಲನೆಯಲ್ಲಿ ವಿಫಲಗೊಂಡಿತ್ತು. ಈ ಕಟ್ಟಡಕ್ಕೆ ಬೆಂಕಿ ಹೊತ್ತಿಕೊಂಡಿದ್ದ ವೇಳೆ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದ ಮೂವರು ಅಗ್ನಿಶಾಮಕ ಸಿಬ್ಬಂದಿ ಸಾವನ್ನಪ್ಪಿದ್ದರು. ಈ ಎಲ್ಲ ಕಾರಣಗಳಿಂದಾಗಿ ಸರ್ಕಾರ ಈ ಕಟ್ಟಡವನ್ನು ನೆಲಸಮಗೊಳಿಸುವ ನಿರ್ಧಾರವನ್ನು ತೆಗೆದುಕೊಂಡಿತ್ತು.

  • ಸಲಿಂಗಿ ಮದುವೆಯಾದ ಮಹಿಳಾ ತಂಡದ ಕ್ರಿಕೆಟ್ ಆಟಗಾರ್ತಿಯರು!

    ಸಲಿಂಗಿ ಮದುವೆಯಾದ ಮಹಿಳಾ ತಂಡದ ಕ್ರಿಕೆಟ್ ಆಟಗಾರ್ತಿಯರು!

    ಜೊಹಾನ್ಸ್ ಬರ್ಗ್: ದಕ್ಷಿಣ ಆಫ್ರಿಕಾ ಅಂತರಾಷ್ಟ್ರೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರು ಸಲಿಂಗಿ ಮದುವೆ ಆಗಿದ್ದಾರೆ.

    ದಕ್ಷಿಣ ಆಫ್ರಿಕಾ ಮಹಿಳಾ ತಂಡದ ಕ್ಯಾಪ್ಟನ್ ಡೇನ್ ವ್ಯಾನ್ ನಿಕೆರ್ಕ್ ಹಾಗೂ ಅದೇ ತಂಡದ ಅಲ್‍ರೌಂಡರ್ ಮರಿಝಾನ್ ಕಾಪ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಲ್‍ರೌಂಡರ್ ಕಾಪ್ ತಮ್ಮ ಮದುವೆಯ ವಿಷಯವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವುದರ ಮೂಲಕ ಬಹಿರಂಗಪಡಿಸಿದ್ದಾರೆ.

    2009ರ ಮಹಿಳಾ ವಿಶ್ವಕಪ್ ಸಮಯದಲ್ಲಿ ನಿಕೆರ್ಕ್ ಹಾಗೂ ಕಾಪ್ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ್ದರು. ನಿಕೆರ್ಕ್ ತಮ್ಮ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು ಮಾರ್ಚ್ 8ರಂದು ವೆಸ್ಟ್ ಇಂಡೀಸ್ ವಿರುದ್ಧ ಆಡಿದ್ದರು. ಇನ್ನೂ ಕಾಪ್ ತಮ್ಮ ಮೊದಲ ಅಂತರಾಷ್ಟ್ರೀಯ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಆಡಿದ್ದರು.

    ಈ ಮದುವೆಗೆ ಇಬ್ಬರು ಆಟಗಾರ್ತಿಯರ ಕುಟುಂಬದವರು, ಸ್ನೇಹಿತರು ಹಾಗೂ ದಕ್ಷಿಣ ಆಫ್ರಿಕಾ ತಂಡದ ಸಹ ಆಟಗಾರರು ಇವರ ಮದುವೆಯಲ್ಲಿ ಭಾಗಿಯಾಗಿದ್ದರು. ನಿಕೆರ್ಕ್ ಹಾಗೂ ಕಾಪ್ ಅವರದ್ದು ಸಲಿಂಗಿ ಮದುವೆಯಾಗಿದ್ದು, ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಇವರ ಮದುವೆ ಎರಡನೇ ಪ್ರಕರಣವಾಗಿದೆ.

    ಈ ಮೊದಲು ನ್ಯೂಜಿಲೆಂಡ್ ಮಹಿಳಾ ತಂಡದ ಆಟಗಾರ್ತಿಯರಾದ ಆಮಿ ಸಟರ್ತೈಟ್ ಹಾಗೂ ಲೀ ಟಾಹುಹು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

    ????

    A post shared by Marizanne Kapp (@kappie777) on

  • 33 ರನ್‍ಗೆ 7 ವಿಕೆಟ್ ಬಿತ್ತು, ನಾಲ್ವರು ‘ಶೂನ್ಯ’ಕ್ಕೆ ಔಟ್ – ಟೀಂ ಇಂಡಿಯಾಗೆ ಹರಿಣಗಳ ವಿರುದ್ಧ ಗೆಲುವು

    33 ರನ್‍ಗೆ 7 ವಿಕೆಟ್ ಬಿತ್ತು, ನಾಲ್ವರು ‘ಶೂನ್ಯ’ಕ್ಕೆ ಔಟ್ – ಟೀಂ ಇಂಡಿಯಾಗೆ ಹರಿಣಗಳ ವಿರುದ್ಧ ಗೆಲುವು

    ಜೊಹಾನ್ಸ್ ಬರ್ಗ್: ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯವನ್ನು ಗೆದ್ದು ಟೀಂ ಇಂಡಿಯಾ ವೈಟ್ ವಾಷ್‍ನಿಂದ ತಪ್ಪಿಸಿಕೊಂಡಿದೆ. ಗೆಲ್ಲಲು 241 ರನ್‍ಗಳನ್ನು ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ ತಂಡ 177 ರನ್‍ಗೆ ಆಲೌಟಾಯಿತು. ಈ ಮೂಲಕ 63 ರನ್‍ಗಳಿಂದ ಭಾರತ ಈ ಪಂದ್ಯದಲ್ಲಿ ಗೆಲುವು ಸಾಧಿಸಿತು. 144 ರನ್‍ಗೆ 4ನೇ ವಿಕೆಟ್ ಕಳೆದುಕೊಂಡ ದಕ್ಷಿಣ ಆಫ್ರಿಕಾ 177 ರನ್‍ಗಳಿಗೆ ತನ್ನೆಲ್ಲಾ ವಿಕೆಟ್‍ಗಳನ್ನು ಕಳೆದುಕೊಂಡಿತು.

    ಆರಂಭಿಕ ಆಟಗಾರ ಎಲ್ಗರ್ ಭಾರತದ ದಾಳಿಗೆ ಪ್ರತಿರೋಧ ತೋರಿ 86 ರನ್ ಗಳಿಸಿದರೂ ಭಾರತದ ವೇಗಿಗಳ ಮುಂದೆ ಇತರೆ ಎಲ್ಲಾ ಆಟಗಾರರು ರನ್ ಗಳಿಸಲು ತಿಣುಕಾಡಿದರು. ಇದರಿಂದಾಗಿ ದಕ್ಷಿಣ ಆಫ್ರಿಕಾದ ಆಟಗಾರರು ಎರಡಂಕಿ ರನ್ ತಲುಪುವಲ್ಲೂ ವಿಫಲರಾದರು. ಅಲ್ಲದೆ ನಾಲ್ವರು ಆಟಗಾರು ಶೂನ್ಯಕ್ಕೆ ಔಟಾದರು.

    ಟೀಂ ಇಂಡಿಯಾ ಪರವಾಗಿ ವೇಗದ ಬೌಲರ್ ಮೊಹಮ್ಮದ್ ಶಮಿ 5 ವಿಕೆಟ್ ಗಳಿಸಿದರೆ, ಬೂಮ್ರಾ 2, ಇಶಾಂತ್ ಶರ್ಮಾ 2, ಪಾಂಡ್ಯಾ ಹಾಗೂ ಭುವನೇಶ್ವರ್ ಕುಮಾರ್ ತಲಾ 1 ವಿಕೆಟ್ ಗಳಿಸಿದರು. ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‍ನಲ್ಲಿ 187 ಹಾಗೂ ಎರಡನೇ ಇನ್ನಿಂಗ್ಸ್‍ನಲ್ಲಿ 247 ರನ್ ಗಳಿಸಿದರೆ ದಕ್ಷಿಣ ಆಫ್ರಿಕಾ 194 ಹಾಗೂ 177 ರನ್ ಗಳಿಸಿತು. ಈ ಮೂಲಕ ಭಾರತ 63 ರನ್ ಗಳ ಗೆಲುವು ಸಾಧಿಸಿತು. ಭಾರತದ ಪರವಾಗಿ ಬೂಮ್ರಾ ಮೊದಲ ಇನ್ನಿಂಗ್ಸ್‍ನಲ್ಲಿ 5 ವಿಕೆಟ್ ಗಳಿಸಿದ್ದರು.

    ದಕ್ಷಿಣ ಆಫ್ರಿಕಾ ತಂಡದ ಪರವಾಗಿ ಆರಂಭಿಕ ಆಟಗಾರ ಎಲ್ಗರ್ ಅಜೇಯ 86 ರನ್, ಹಶೀಂ ಆಮ್ಲ 52, ಎಬಿಡಿ ವಿಲಿಯರ್ಸ್ 6, ಫಿಲಾಂಡರ್ 10, ಮಕ್ರ್ರಮ್ 4 ರನ್ ಗಳಿಸಿದರು. ಡಿ’ಕಾಕ್, ಫೆಲುಕ್ವಾಯೋ, ರಬಾಡ ಹಾಗೂ ಮಾರ್ಕೆಲ್ ಸೊನ್ನೆ ಸುತ್ತಿದರು.