Tag: jogi prem

  • ಧ್ರುವ ಸರ್ಜಾ ಅಂಡರ್ ವರ್ಲ್ಡ್ ಡಾನ್

    ಧ್ರುವ ಸರ್ಜಾ ಅಂಡರ್ ವರ್ಲ್ಡ್ ಡಾನ್

    ಸ್ಯಾಂಡಲ್ ವುಡ್ ಅಂಗಳದಿಂದ ಧ್ರುವ ಸರ್ಜಾ ಅಭಿಮಾನಿಗಳಿಗೆ ಭರ್ಜರಿ ಸುದ್ದಿ ಸಿಕ್ಕಿದೆ. ಇದೇ ಮೊದಲ ಬಾರಿಗೆ ಧ್ರುವ ಹೊಸ ರೂಪದ ಕಥೆಯನ್ನು ಒಪ್ಪಿಕೊಂಡಿದ್ದಾರಂತೆ. ಅಲ್ಲದೇ, ಈ ಸಿನಿಮಾದಲ್ಲಿ ಅವರು ಅಂಡರ್ ವರ್ಲ್ಡ್ ಡಾನ್ ಆಗಿ ಕಾಣಿಸಿಕೊಳ್ಳಲಿದ್ದಾರಂತೆ. ಇದು ನೈಜ ಘಟನೆ ಮತ್ತು ವ್ಯಕ್ತಿಗಳನ್ನು ಆಧರಿಸಿದ ಸಿನಿಮಾವಾಗಿದೆ ಎನ್ನುವುದು ವಿಶೇಷ. ಇದನ್ನೂ ಓದಿ : ಖ್ಯಾತ ಗಾಯಕ ರಘು ದೀಕ್ಷಿತ್ ತಾಯಿ ನಿಧನ : ದುಬೈನಲ್ಲಿದ್ದಾರೆ ರಘು

    ಎಪ್ಪತ್ತರ ದಶಕದ ಕಥೆ

    ಮದ್ರಾಸ್ ಪ್ರಾಂತ್ಯದ 70ರ ದಶಕದಲ್ಲಿ ನಡೆದ ಘಟನೆಯನ್ನು ಈ ಸಿನಿಮಾಗೆ ಆಯ್ಕೆ ಮಾಡಿಕೊಂಡಿದ್ದಾರಂತೆ ನಿರ್ದೇಶಕರು. ಈ ದಶಕವನ್ನು ಕಟ್ಟಿಕೊಡುವುದಕ್ಕಾಗಿ ಈಗಾಗಲೇ ಸೆಟ್‍ಗಳು ಕೂಡ ನಿರ್ಮಾಣವಾಗುತ್ತಿವೆಯಂತೆ. ಸೀಗೆಹಳ್ಳಿ ಸಮೀಪದಲ್ಲಿ ಈ ಬೃಹತ್ ಸೆಟ್ ಗಳು ಈಗಾಗಲೇ ಸಿದ್ಧವಾಗುತ್ತಿವೆ. ಬಹುತೇಕ ಚಿತ್ರೀಕರಣ ಈ ಅದ್ಧೂರಿ ಸೆಟ್ ನಲ್ಲಿಯೇ ನಡೆಯಲಿದೆ ಎನ್ನುವ ಮಾಹಿತಿ ಇದೆ. ಇದನ್ನೂ ಓದಿ : ಶಿವರಾಜ್ ಕುಮಾರ್ ಭೇಟಿಯಾದ ಜಗ್ಗೇಶ್

    ಹಾಗಾದರೆ ನಿರ್ದೇಶಕರು ಯಾರು?

    70ರ ದಶಕದ ಕಥೆಯನ್ನು ಕೈಗೆತ್ತಿಕೊಂಡಿರುವ ನಿರ್ದೇಶಕರು ಬೇರೆ ಯಾರೂ ಅಲ್ಲ, ಜೋಗಿ ಪ್ರೇಮ್. ಲಾಂಗ್ ಮಚ್ಚುಗಳ ಚಿತ್ರಗಳಿಗೆ ಫೇಮಸ್ ಆಗಿರುವ ಪ್ರೇಮ್, ಈ ಬಾರಿಯೂ ಭೂಗತ ಜಗತ್ತಿನ ಕಥೆಯೊಂದಿಗೆ ಮತ್ತೆ ಪ್ರೇಕ್ಷಕರಿಗೆ ಎದುರಾಗಲಿದ್ದಾರೆ. ಕೆಲವೇ ದಿನಗಳಲ್ಲಿ ಈ ಹೊಸ ಸಿನಿಮಾದ ಮುಹೂರ್ತ ಕೂಡ ನಡೆಯಲಿದೆಯಂತೆ. ಇದನ್ನೂ ಓದಿ : ಅಶರೀರವಾಣಿ ಆಲ್ಬಂಗೆ ನೀನಾಸಂ ಸತೀಶ್ ಸಿಂಗರ್ : ಮಗಳೊಂದಿಗೆ ಹಾಡಿದ ಸ್ಟಾರ್ ನಟ

    ಗೊಂದಲ ಗೂಡಾಗಿರುವ ಪ್ರಾಜೆಕ್ಟ್

    ದರ್ಶನ್ ಮತ್ತು ಪ್ರೇಮ್ ಕಾಂಬಿನೇಷನ್ ನಲ್ಲಿ ಸಿನಿಮಾವೊಂದು ಮೂಡಿ ಬರಲಿದೆ ಎಂದು ಕೆಲ ವರ್ಷಗಳಿಂದ ಸುದ್ದಿ ಹರಿದಾಡುತ್ತಿತ್ತು. ಈ ಸಿನಿಮಾವನ್ನು ಉಮಾಪತಿ ನಿರ್ಮಾಣ ಮಾಡಲಿದ್ದಾರೆ ಎನ್ನುವ ಸುದ್ದಿಯೂ ಇತ್ತು. ಇದೀಗ ಆ ಕಥೆಯನ್ನೇ ಧ್ರುವಗಾಗಿ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ, ಉಮಾಪತಿ ಅವರ ಬದಲು ಬೇರೆ ನಿರ್ಮಾಣ ಸಂಸ್ಥೆಯು ಈ ಸಿನಿಮಾವನ್ನು ಮಾಡಲಿದೆ ಎಂದೂ ಹೇಳಲಾಗುತ್ತಿದೆ. ಈ ಕುರಿತು ಸ್ಪಷ್ಟ ಮಾಹಿತಿ ಸಿಗಬೇಕಿದೆ.

  • ಹುಟ್ಟುಹಬ್ಬದ ಸಂಭ್ರಮಾಚರಣೆಗೆ ಬ್ರೇಕ್ ಹಾಕಿದ ‘ಜೋಗಿ ಪ್ರೇಮ್’

    ಹುಟ್ಟುಹಬ್ಬದ ಸಂಭ್ರಮಾಚರಣೆಗೆ ಬ್ರೇಕ್ ಹಾಕಿದ ‘ಜೋಗಿ ಪ್ರೇಮ್’

    ಬೆಂಗಳೂರು: ಸ್ಯಾಂಡಲ್‍ವುಡ್ ನಿರ್ದೇಶಕ ಜೋಗಿ ಪ್ರೇಮ್ ಅವರು ಈ ಬಾರಿ ತಮ್ಮ ಹುಟ್ಟುಹಬ್ಬದ ಸಂಭ್ರಮಾಚರಣೆಗೆ ಬ್ರೇಕ್ ಹಾಕಿದ್ದಾರೆ. ಸದ್ಯ ಈ ಕುರಿತಂತೆ ವೀಡಿಯೋವೊಂದನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದರ ಮೂಲಕ ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ.

    prem

    ಪ್ರತಿವರ್ಷ ಅಭಿಮಾನಿಗಳೊಂದಿಗೆ ಅದ್ದೂರಿಯಾಗಿ ಬರ್ತ್‍ಡೇ ಸೆಲೆಬ್ರೆಟ್ ಮಾಡುತ್ತಿದ್ದ ಪ್ರೇಮ್ ಅವರು ಈ ಬಾರಿ ಕೊರೊನಾ ಕಾರಣಾಂತರದಿಂದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದೇ ಇರಲು ನಿರ್ಧರಿಸಿದ್ದಾರೆ. ಸದ್ಯ ಈ ಬಗ್ಗೆ ವೀಡಿಯೋವೊಂದನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.  ಇದನ್ನೂ ಓದಿ: ಹೊಸ ಯುದ್ಧಕ್ಕೆ ಸಜ್ಜಾದ ಧ್ರುವ ಸರ್ಜಾ-ಪ್ರೇಮ್

    ಇದೇ ಅಕ್ಟೋಬರ್ 22ರಂದು ನನ್ನ ಹುಟ್ಟುಹಬ್ಬವಿದೆ. ಪ್ರತಿ ಬಾರಿ ನನ್ನ ಅನ್ನದಾತರು, ಸ್ನೇಹಿತರು ಹಾಗೂ ನನ್ನ ಬಂಧು, ಬಳಗದವರು ಪ್ರತಿಯೊಬ್ಬರು ಬಂದು ಶುಭಾಶಯ ತಿಳಿಸಿ ಹೋಗುತ್ತಿದ್ದರು. ಆದರೆ ನಾನು ಈ ಬಾರಿ ಮನೆಯಲ್ಲಿ ಇರುವುದಿಲ್ಲ. ಕಾರಣ ಏಕಲವ್ಯ ಸಿನಿಮಾದ ಕೆಲಸಗಳು ನಡೆಯುತ್ತಿದ್ದು, ನಾನು ಮುಂಬೈನಲ್ಲಿರುತ್ತೇನೆ. ಹಾಗಾಗಿ ದಯವಿಟ್ಟು ಯಾರೂ ಕೂಡ ಮನೆಯ ಬಳಿ ಬಂದು ಕಾಯಬೇಡಿ. ಎಲ್ಲೆ ಇದ್ದರೂ ದೂರದಿಂದಲೇ ನನಗೆ ಆಶೀರ್ವಾದ ಮಾಡಿ ಎಂದು ನಿಮ್ಮಲ್ಲಿ ಪ್ರೀತಿಯಿಂದ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.  ಇದನ್ನೂ ಓದಿ: ಜೋಗಿ ಪ್ರೇಮ್ ಸಾರಥ್ಯದಲ್ಲಿ ಧ್ರುವ ಸಿನಿಮಾ!

     

    View this post on Instagram

     

    A post shared by Prem❣️s (@directorprems)

    ಇದೇ ವೇಳೆ, ನವೆಂಬರ್ 4ರಂದು ಈ ಬಾರಿ ದೀಪಾವಳಿ ಹಬ್ಬದ ದಿನ ‘ಏಕ್ ಲವ್ ಯಾ’ ಸಿನಿಮಾದ ಮೂರನೇ ಹಾಡನ್ನು ಬಿಡುಗಡೆಗೊಳಿಸುತ್ತಿದ್ದೇವೆ. ಈಗಾಗಲೇ ಎರಡು ಹಾಡನ್ನು ಹಿಟ್ ಮಾಡಿಕೊಟ್ಟಿದ್ದೀರಾ. ಈಗ ಮತ್ತೊಂದು ಲವ್ ಬ್ರೇಕ್ ಅಪ್ ಸಾಂಗ್ ರಿಲೀಸ್ ಆಗುತ್ತಿದೆ. ಈ ಹಾಡನ್ನು ವಿಶೇಷವಾಗಿ ಹುಡುಗಿಯರಿಗೆಂದು ಬಿಡುಗಡೆ ಮಾಡಲಾಗುತ್ತಿದೆ. ಹಾಡನ್ನು ಕೇಳಿ, ನೋಡಿ, ಬೆಂಬಲಿಸಿ ಮತ್ತು ಜನವರಿ 21ಕ್ಕೆ ‘ಏಕ್ ಲವ್ ಯಾ’ ಸಿನಿಮಾ ಎಲ್ಲೆಡೆ ಬಿಡುಗಡೆಗೊಳಿಸಲಾಗುತ್ತಿದೆ. ನಿಮ್ಮ ಪ್ರೀತಿ ವಿಶ್ವಾಸ ಸದಾ ನನ್ನ ಮೇಲೆ ಹೀಗೆ ಇರಲಿ ಎಂದು ತಿಳಿಸಿದ್ದಾರೆ.  ಇದನ್ನೂ ಓದಿ: ಪ್ರೇಮಿಗಳ ದಿನಕ್ಕೆ ಪ್ರೇಮ್ ಉಡುಗೊರೆ – ‘ಏಕ್ ಲವ್ ಯಾ’ ಲಿರಿಕಲ್ ಸಾಂಗ್ ರಿಲೀಸ್

    ‘ಏಕ್ ಲವ್ ಯಾ’ ಸಿನಿಮಾದ ಬಳಿಕ ಜೋಗಿ ಪ್ರೇಮ್ ಅವರು ಸ್ಯಾಂಡಲ್‍ವುಡ್ ನಟ ಧ್ರುವ ಸರ್ಜಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಕುರಿತಂತೆ ಕೆಲವು ದಿನಗಳ ಹಿಂದೆಯಷ್ಟೇ ಪ್ರೇಮ್ ಟ್ವೀಟ್ ಮಾಡಿದ್ದು, ಯುದ್ಧದ ಮುನ್ನುಡಿ ಇಲ್ಲಿಂದ ಆರಂಭ, ನಿಮ್ಮ ಪ್ರೀತಿ, ಪ್ರೋತ್ಸಾಹ, ಅಭಿಮಾನ, ಆಶೀರ್ವಾದ ಸದಾ ಹೀಗೆ ಇರಲಿ ಎಂದು ಬರೆದುಕೊಂಡಿದ್ದರು.

  • ಒಡೆದ ಮನಗಳ ಸರಿ ಮಾಡಿ: ಉದ್ಯಮದ ಹಿರಿಯರು, ವಾಣಿಜ್ಯ ಮಂಡಳಿಗೆ ಜಗ್ಗೇಶ್ ಮನವಿ

    ಒಡೆದ ಮನಗಳ ಸರಿ ಮಾಡಿ: ಉದ್ಯಮದ ಹಿರಿಯರು, ವಾಣಿಜ್ಯ ಮಂಡಳಿಗೆ ಜಗ್ಗೇಶ್ ಮನವಿ

    ಬೆಂಗಳೂರು: ಚಂದನವನದಲ್ಲಿ ಆಗುತ್ತಿರುವ ಬೆಳವಣಿಗೆ ಕುರಿತು ಹಿರಿಯ ನಟ, ನವರಸ ನಾಯಕ ಜಗ್ಗೇಶ್ ಬೇಸರ ವ್ಯಕ್ತಪಡಿಸಿದ್ದು, ಉದ್ಯಮದ ಹಿರಿಯರು ಮತ್ತು ವಾಣಿಜ್ಯ ಮಂಡಳಿ ಮಧ್ಯಪ್ರವೇಶಿಸಿ ಒಡೆದ ಮನಗಳ ಸರಿ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

    ಫೇಸ್‍ಬುಕ್ ನಲ್ಲಿ ಪೋಸ್ಟ್ ಮಾಡಿಕೊಂಡಿರುವ ಜಗ್ಗೇಶ್, ಹಲವು ವಿಷಯದ ಜೊತೆ ತಮ್ಮ ಕಷ್ಟದ ದಿನಗಳನ್ನು ತಿಳಿಸಿದ್ದಾರೆ. ಜೊತೆಗೆ ತಮ್ಮ ವೃತ್ತಿ ಆರಂಭದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

    ಜಗ್ಗೇಶ್ ಹೇಳಿದ್ದೇನು?
    ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಮಾಯಸಂದ್ರ ಹೋಬಳಿಯ ಆನಡುಗು ಗ್ರಾಮದ ಸಣ್ಣ ಕುಟುಂಬದ ಹಳ್ಳಿಹುಡುಗ ನಾನು ಈಶ್ವರ್ ಗೌಡ, ಜಗ್ಗೇಶ್. ಅಂದು ಡಾ.ರಾಜ್‍ಕುಮಾರ್ ಅವರನ್ನು ಕಂಡು ಆಶೀರ್ವಾದ ಪಡೆದು ಸಿನಿಮಾ ನಟಗನಾಗಬೇಕು ಎಂಬುವುದು ನನ್ನ ಗುರಿಯಾಗಿತ್ತು. 1980ರಲ್ಲಿ ಈ ಕಾರ್ಯ ಆರಂಭಗೊಂಡಿತು. ಆಗ ಹೇಗಿದ್ದೆ ನಾನು ದಾಖಲಿಸಿರುವೆ ಚಿತ್ರಗಳಲ್ಲಿ ಮತ್ತೊಮ್ಮೆ ಮುಖ ನೋಡಿ ನಕ್ಕುಬಿಡಿ. ಆ ಮುಖಕ್ಕೆ ಆಕಾಲಕ್ಕೆ ಸಿನಿಮಾ ನಟ ಆಗುವ ಕನಸು? ಈಗಿನ ಜಗ್ಗೇಶನ ಮರೆತು ಇದು ಸಾಧ್ಯನಾ ಎಂದು ಒಮ್ಮೆ ಯೋಚಿಸಿ. ಇದನ್ನೂ ಓದಿ: ನಾನೊಬ್ಬ ಹಾರ್ಡ್ ವರ್ಕಿಂಗ್ ಆರ್ಡಿನರಿ ಮ್ಯಾನ್ – ಪಬ್ಲಿಕ್ ಟಿವಿ ಜೊತೆ ದರ್ಶನ್ ಆಪ್ತ ಹರ್ಷ ಮಾತು

    ಉಗಿದು ಮುಚ್ಕೊಂಡು ಅನ್ನ ಸಿಗುವ ಕೆಲಸ ನೋಡಿಕೊಳ್ಳಬೇಕು ಎಂದು ಆಗ ಅಪ್ಪ-ಅಮ್ಮ ಬಂಧು ಮಿತ್ರರು ಹೇಳಿದ್ದರು. ಶಿವಲಿಂಗಪ್ಪನ ಮರ್ಯಾದೆ ಉಳಿಸು ಮಂಗ ಮುಂಡೆದೆ ಎಂದು ಹೇಳುತ್ತಿದ್ದರು. ಗುರು ಹಿಂದೆ ಗುರಿ ಮಂದೆ ಹಠ ಬಿಡಲಿಲ್ಲ. ಗಾಂಧಿನಗರ ಅಲೆದು ಚಪ್ಪಲಿ ಸವೆಸಿ ದಡಮುಟ್ಟಿದೆ ಎಂದು ಬಿಟ್ಟರೆ ಆತ್ಮ ದ್ರೋಹ ಆಗಿಬಿಡುತ್ತದೆ. ಕಾರಣ ದಡ ಮುಟ್ಟಿಸಿದ್ದು ಅಂದಿನ ನಿರ್ದೇಶಕರು, ನಿರ್ಮಾಪಕರು, ಮಾಧ್ಯಮ ಮಿತ್ರರು ಹಾಗೂ ವಿಶೇಷವಾಗಿ ಸ್ವಾಭಿಮಾನಿ ಕನ್ನಡಿಗರು. ಇದನ್ನೂ ಓದಿ: ಇಂದೇ ಸ್ಟಿಂಗ್ ಆಪರೇಷನ್ ಮಾಡಿದರೂ ನಾನು ಹೆದರಲ್ಲ: ದರ್ಶನ್

    ಹೇಳಿ ಹೇಗಿದ್ದರಬೇಕು ಅಪಮಾನ ಅವಮಾನ ಹಸಿವಿನಿಂದ ನಿದ್ರೆಗೆಟ್ಟು ಗೆದ್ದ ಒಬ್ಬ ಸಾಮಾನ್ಯನ ಬದುಕು. ಆಗ ನಮ್ಮ ಬಗ್ಗೆ ಹೇಳಲು ಇದ್ದದ್ದು ಒಂದೇ ಬರಹ ಮಾಧ್ಯಮ. ನೆನಪಿಡಿ ಇಂದು ನೂರಾರು ಮಾಧ್ಯಮಗಳಿವೆ. ಅಂಗೈಯಲ್ಲೆ ಆಕಾಶ ತೋರಿ ಹತ್ತಾರು ವರ್ಷ ಸಾಧನೆ ಕ್ಷಣ ಮಾತ್ರದಲ್ಲೆ ಅನುಮಾನದಿಂದ ಸಾಧಕನ ನೋಡುವಂತ ಮಾಯಾಜಾಲವೇ ಸಾಮಾಜಿಕ ಜಾಲತಾಣ. ಇದು ಸಿಕ್ಕಸಿಕ್ಕವರ ಕೈಯಲ್ಲಿ ವಯಸ್ಸು ಸಾಧನೆ ಅವರ ಮೂಗಿನ ನೇರಕ್ಕೆ ಅವರು ಬದುಕಿದ ಪರಿಸರ ಭಾಷೆ ಬಳಸಿ ಅವಮಾನ ಮಾಡಿ ವಿಕೃತ ಆನಂದ ಅನುಭವಿಸುವುದು? ವಿಪರ್ಯಾಸ ದಿನಗಳು. ಇಂದಿನ ಸಾರ್ವಜನಿಕ ಜೀವನ ಸಾರ್ವಜನಿಕ ಶೌಚಾಲಯದಂತೆ ಆಗಿದೆ. ಆದರೂ ವಿಧಿಯಿಲ್ಲಾ ಚರ್ಮ ದಪ್ಪಮಾಡಿ ಬದುಕಬೇಕು. ಇದನ್ನೂ ಓದಿ: ಇಂಡಸ್ಟ್ರಿ ನಮ್ಮ ಮನೆ, ಇಲ್ಲಿ ಯಾರೂ ದೊಡ್ಡವರು ಚಿಕ್ಕವರಿಲ್ಲ- ದರ್ಶನ್ ವಿರುದ್ಧ ರಕ್ಷಿತಾ ಬೇಸರ

    ಉದ್ಯಮದ ಕಲಾಬಂಧುಗಳಿಗೆ ನನ್ನ ಸಣ್ಣ ಅನುಭವದ ನುಡಿ:
    ಮಾನ್ಯರೇ, ನಶ್ವರ ಬಣ್ಣದ ಬದುಕು. ಕಲಾವಿದನ ಜೀವನ ನಡೆಯುವವರೆಗೆ ನಾಣ್ಯ ಮಿಕ್ಕಂತೆ ಸವಕಲು. ಎಲ್ಲಿಯವರೆಗು ಕಲಾವಿದ ವರ್ಷಕ್ಕೆ ಮಾತ್ರ ಹೊರಬರುವ ಊರ ಮೆರೆ ದೇವರಂತೆ ಹೊರ ಬರಬೇಕು. ಆಗ ದೇವರಪರ ಅದ್ಭುತ ಅನನ್ಯ ದಿನ. ಆ ದೇವರು ಬೀದಿಗೆ ಬಂದರೆ ಮೌಲ್ಯ ಇರುವುದಿಲ್ಲ. ರಾಜನಾಗಲಿ, ಸೇವಕನಾಗಲಿ ಜಗಳ ಘರ್ಷಣೆ ಸಹಜ. ಆ ಘರ್ಷಣೆ ನಿಭಾಯಿಸುವ ಕಲೆ ಕರಗತ ಆಗಿರಬೇಕು. ಆಗ ಕಾಡ್ಗಿಚ್ಚನ್ನು ತಣ್ಣಗೆ ಮಾಡಬಹುದು. ಹಾಗೆ ಅನ್ಯತ ಭಾವಿಸದೆ ನನ್ನ ಮಾತು ಆಲಿಸಬೇಕು.  ಇದನ್ನೂ ಓದಿ: ದರ್ಶನ್ ಹೊಡೆದಿದ್ದು ನಿಜ: ಸಂದೇಶ್ ಪ್ರಿನ್ಸ್ ಸೆಕ್ಯೂರಿಟಿ ಗಾರ್ಡ್ ಸ್ಫೋಟಕ ಹೇಳಿಕೆ

    ಆತ್ಮೀಯ ಮಾಧ್ಯಮ ಮಿತ್ರರು ಕಲಾರಂಗದ ನಮ್ಮ ಕಾಯಕ ಜನರಿಗೆ ತಲುಪಿಸೋ ನಾವಿಕರು. ನಾವು ನೀವು ದೇಹದ ಎರಡು ಕಣ್ಣಂತೆ ಯಾವುದಕ್ಕೂ ನೋವಾದರು ನಮಗೆ ನಷ್ಟ. ದಯಮಾಡಿ ವಿಶೇಷ ಹೃದಯ ನಿಮ್ಮದಾಗಿ ನಮ್ಮ ಚಿತ್ರರಂಗ ಬೀದಿ ಚರ್ಚೆಗೆ ವಿಷಯವಾಗದಿರಲಿ ವಿನಂತಿ. ಈಗಾಗಲೆ ಚಿತ್ರರಂಗ ಕೊರೊನಾ ಹೆಮ್ಮಾರಿ ಹೊಡೆತಕ್ಕೆ ನಲುಗಿದೆ. ಉದ್ಯಮದ ಹಿರಿಯರು, ವಾಣಿಜ್ಯ ಮಂಡಳಿ ಮಧ್ಯ ಪ್ರವೇಶಿಸಿ ಒಡೆದ ಮನಗಳ ಸರಿಮಾಡಿ ಎಂದು ಎಂದು ಜಗ್ಗೇಶ್ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ದರ್ಶನ್ ಅವ್ರೇ ನನಗ್ಯಾವ ಕೊಂಬೂ ಬರ್ಲಿಲ್ಲ, ದೇವ್ರು ನಿಮಗೆ ಒಳ್ಳೇದ್ ಮಾಡ್ಲಿ: ಪ್ರೇಮ್

  • ಇಂಡಸ್ಟ್ರಿ ನಮ್ಮ ಮನೆ, ಇಲ್ಲಿ ಯಾರೂ ದೊಡ್ಡವರು ಚಿಕ್ಕವರಿಲ್ಲ- ದರ್ಶನ್ ವಿರುದ್ಧ ರಕ್ಷಿತಾ ಬೇಸರ

    ಇಂಡಸ್ಟ್ರಿ ನಮ್ಮ ಮನೆ, ಇಲ್ಲಿ ಯಾರೂ ದೊಡ್ಡವರು ಚಿಕ್ಕವರಿಲ್ಲ- ದರ್ಶನ್ ವಿರುದ್ಧ ರಕ್ಷಿತಾ ಬೇಸರ

    ಬೆಂಗಳೂರು: ಚಿತ್ರರಂಗ ನಮ್ಮ ಮನೆ ಇದ್ದಂತೆ. ಇಲ್ಲಿ ಯಾರೂ ದೊಡ್ಡವರಲ್ಲ, ಚಿಕ್ಕವರಲ್ಲ ಎಂದು ನಟಿ ರಕ್ಷಿತಾ ಪ್ರೇಮ್ ಅವರು ದರ್ಶನ್ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

    ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿಚಾರದಲ್ಲಿ ನಿರ್ದೇಶಕ ಪ್ರೇಮ್ ಹೆಸರು ಥಳುಕು ಹಾಕಿಕೊಂಡಿದ್ದಕ್ಕೆ ಪ್ರೇಮ್ ಬೇಸರ ಹೊರಹಾಕಿದ ಬೆನ್ನಲ್ಲೇ ರಕ್ಷಿತಾ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಇನ್‍ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿರುವ ರಕ್ಷಿತಾ, ಚಿತ್ರರಂಗದಲ್ಲಿ ಅವರವರ ಕೆಲಸವೇ ಅವರು ಏನೆಂಬುದನ್ನು ಗುರುತಿಸುತ್ತದೆ. ಇಲ್ಲಿ ಎಲ್ಲರನ್ನೂ ಪ್ರೀತಿಸುತ್ತೇವೆ ಹಾಗೆಯೇ ಎಲ್ಲರಿಗೂ ಗೌರವವನ್ನು ನೀಡುತ್ತೇವೆ ಎಂದು ಹೇಳಿದ್ದಾರೆ.

    ರಕ್ಷಿತಾ ಬರೆದುಕೊಂಡಿದ್ದೇನು..?
    ಕನ್ನಡ ಚಿತ್ರರಂಗ ನಮ್ಮದು, ನಮ್ಮ ಮನೆ ಇದ್ದಂತೆ. ಇಲ್ಲಿ ಯಾರೂ ದೊಡ್ಡವರು ಚಿಕ್ಕವರಿಲ್ಲ. ಎಲ್ಲರೂ ಸಮಾನರು. ಆದರೆ ಅವರವರ ಕೆಲಸವೇ ಅವರು ಏನೆಂಬುದನ್ನು ಗುರುತಿಸುತ್ತದೆ. ಇಲ್ಲಿ ನಾವು ಎಲ್ಲರನ್ನೂ ಪ್ರೀತಿಸುತ್ತೇವೆ. ಹಾಗೆಯೇ ಎಲ್ಲರಿಗೂ ಗೌರ ಕೊಡುತ್ತೇವೆ. ಆದರೆ ಇಂತಹ ಘಟನೆಗಳು ನಡೆದಾಗ ಬೇಸರವಾಗುತ್ತದೆ. ಇಲ್ಲಿ ದುರದೃಷ್ಟಕರ ಕೆಲವೊಂದು ವಿಚಾರಗಳು ತೆರೆದುಕೊಳ್ಳುತ್ತಿರುವುದು ಮನಸ್ಸಿಗೆ ಬೇಸರವನ್ನು ಉಂಟುಮಾಡುತ್ತಿದೆ ಅಂತ ರಕ್ಷಿತಾ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ದರ್ಶನ್ ಅವ್ರೇ ನನಗ್ಯಾವ ಕೊಂಬೂ ಬರ್ಲಿಲ್ಲ, ದೇವ್ರು ನಿಮಗೆ ಒಳ್ಳೇದ್ ಮಾಡ್ಲಿ: ಪ್ರೇಮ್

    ಪ್ರೇಮ್ ಹೇಳಿದ್ದೇನು..?
    ಇನ್‍ಸ್ಟಾಗ್ರಾಂ ಖಾತೆಯಲ್ಲಿ, ನನಗೆ ಯಾವ ಕೊಂಬೂ ಬಂದಿಲ್ಲ. ಇನ್ನೊಬ್ರ ಬಗ್ಗೆ ಮಾತನಾಡಬೇಕಾದರೆ ಯೋಚಿಸಿ ಮಾತನಾಡಿ ಎಂದು ದರ್ಶನ್‍ಗೆ ಕಿವಿಮಾತು ಹೇಳಿ, ತಮ್ಮ ಹೆಸರು ಪ್ರಸ್ತಾಪಿಸಿದ್ದಕ್ಕೆ ನಿರ್ದೇಶಕ ಪ್ರೇಮ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಇಂದೇ ಸ್ಟಿಂಗ್ ಆಪರೇಷನ್ ಮಾಡಿದರೂ ನಾನು ಹೆದರಲ್ಲ: ದರ್ಶನ್

    ದರ್ಶನ್ ಅವ್ರೆ, ನಾನು ಕರಿಯ ಸಿನಿಮಾ ಮಾಡ್ಬೇಕಾದ್ರೆ ಯಾವ್ ಪುಡಂಗುನೂ ಅಲ್ಲಾ ನಂಗ್ ಕೊಂಬು ಇರ್ಲಿಲ್ಲ.. ನಾನೊಬ್ಬ ಸಾಮಾನ್ಯ ನಿರ್ದೇಶಕ. ರಾಜಕುಮಾರ್ ರವರು, ಅಂಬರೀಷ್ ರವರು, ವಿಷ್ಣುವರ್ಧನ್ ರವರು ಹಾಗೂ ರಜನಿಕಾಂತ್ ರವರು ಒಬ್ಬ ಒಳ್ಳೆ ನಿರ್ದೇಶಕ ಅಂದು ಬೆನ್ನು ತಟ್ಟಿದ್ರು. ಇಡೀ ಕರ್ನಾಟಕ ಜನತೆ ಹರಸಿ ಹಾರೈಸಿ ಹ್ಯಾಟ್ರಿಕ್ ನಿರ್ದೇಶಕ ಅಂತ ಬಿರುದು ಕೊಟ್ಟಾಗ್ಲು ನನಗ್ ಕೊಂಬು ಬರ್ಲಿಲ್ಲ.. ನಾನು ನಂದೇ ಆದ್ ಸ್ಟೈಲ್ ನಲ್ಲಿ ಸಿನಿಮಾ ಮಾಡ್ಕೊಂಡು ಬಂದೋವ್ನು.. ಸುಮಾರು ನಿರ್ಮಾಪಕರುಗಳು ಹಾಗೂ ನಿಮ್ಮ ಅಭಿಮಾನಿಗಳು ಹಾಗೂ ನನ್ನ ಅಭಿಮಾನಿಗಳು ಪ್ರತಿ ಸಾರಿ ದರ್ಶನ್ ಹಾಗೂ ನಿಮ್ಮ ಕಾಂಬಿನೇಶನ್ ನಲ್ಲಿ ಯಾವಾಗ ಚಿತ್ರ ಮಾಡ್ತಿರಂತ ಕೇಳ್ತಾನೆಯಿದ್ರು. ಇದ್ರ ಬಗ್ಗೆ ನಿಮಗೂ ಗೊತ್ತು ನನಗು ಗೊತ್ತು. ಇಬ್ಬರು ಸೇರಿ ಸಿನಿಮಾ ಮಾಡೋದ್ರ ಬಗ್ಗೆ ಚೆರ್ಚೆ ಮಾಡಿದ್ವಿ. ನಾನು ನಮ್ ಬ್ಯಾನರ್ ನಲ್ ಸಿನಿಮಾ ಮಾಡಿ ಇಲ್ಲಾ ನಿಮ್ ಬ್ಯಾನರ್ ನಲ್ ಸಿನಿಮಾ ಮಾಡೋಣ ಅಂತ ಮತ್ತೆ ಚರ್ಚೆ ಮಾಡಿದ್ವಿ. ಆದರೆ ನನಗೆ ಉಮಾಪತಿಯವರು, ನೀವು ಹಾಗೂ ದರ್ಶನ್ ಸೇರಿ ನಂಗ್ ಸಿನಿಮಾ ಮಾಡ್ಕೊಡಿ ಅಂತ ಅಂದ್ರು. ಅದಿಕ್ಕೆ ನಾನು ಉಮಾಪತಿ ಅವ್ರನ್ನ ನಿಮಗೆ ಪರಿಚಯ ಮಾಡಿ.. ಇದನ್ನೂ ಓದಿ: ಇಂದ್ರಜಿತ್ ಅಪ್ಪನಿಗೆ ಹುಟ್ಟಿದವರಾಗಿದ್ರೆ ದಾಖಲೆ ರಿಲೀಸ್ ಮಾಡಲಿ: ದರ್ಶನ್ ನೇರ ಸವಾಲ್

    ಮೂರು ಜನ ಸೇರಿ ಸಿನಿಮಾ ಮಾಡೋಣ ಅಂತ ಡಿಸೈಡ್ ಮಾಡಿದ್ವಿ.. ಆದ್ರೆ ನನ್ ದಿ ವಿಲ್ಲನ್ ಸಿನಿಮಾ ಲೇಟ್ ಆದ ಕಾರಣ ನಾನೇ ಉಮಾಪತಿಯವರಿಗೆ ದರ್ಶನ್ ಅವ್ರ ಡೇಟ್ ಇದ್ದ ಕಾರಣ ಬೇರೆ ನಿರ್ದೇಶಕರನ್ನ ಹಿಡಿದು ಸಿನಿಮಾ ಮಾಡಿ ಅಂತ ಹೇಳಿದ್ದೆ.. ನನ್ನ ಸಂಭಾವನೆಯನ್ನ ಉಮಾಪತಿಯವರಿಗೆ ವಾಪಸ್ ನೀಡಿ ರಾಬರ್ಟ್ ಸಿನಿಮಾ ಗೆ ಹಾರೈಸಿದವನು ನಾನು.. ಅದೇ ರೀತಿ ರಾಬರ್ಟ್ ಚಿತ್ರ ಹಿಟ್ ಆಯ್ತು, ಎಲ್ಲರ ಹಾಗೇ ನಾನು ಖುಷಿ ಪಟ್ಟೆ.. ಇದ್ರ ಮದ್ಯೆ ನನ್ ಹೆಸ್ರು ಯಾಕೆ.. ದರ್ಶನ್ ಅವ್ರೆ ನಿರ್ದೇಶಕ್ರು ಯಾವ್ ಪುಡಂಗಿಗಳು ಅಲ್ಲಾ, ಅವ್ರಿಗೆ ಕೊಂಬು ಇರಲ್ಲ.. ತೆರೆಮೇಲೆ ಒಬ್ಬ ನಟನನ್ನ ಹುಟ್ಟಾಕಿ ಅವ್ನಿಗ್ ಕೊಂಬು ಬರ್ಬೇಕಾದ್ರೆ ನಿರ್ದೇಶಕನ ಶ್ರಮ ಎಷ್ಟಿರುತ್ತೆಂತ ಪ್ರತಿಯೊಬ್ಬ ಕಲಾವಿದರಿಗೂ ಗೊತ್ತು ಅದು ನಿಮ್ಗೂ ಗೊತ್ತು.. ದಯವಿಟ್ಟು ಇನ್ನೊಬ್ರ ಬಗ್ಗೆ ಮಾತಾಡ್ಬೇಕಾದ್ರೆ ಯೋಚಿಸಿ ಮಾತಾಡಿ ದರ್ಶನ್ ಅವರೇ… Thank you for your kind words. ದೇವ್ರು ನಿಮಗೆ ಒಳ್ಳೇದ್ ಮಾಡ್ಲಿ…

  • ಕಾಲೆಳೆಯುವವರು ಇದ್ರೆನೇ ಬೆಳೆಯಲು ಸಾಧ್ಯ- ದಿ ವಿಲನ್ ಬಗ್ಗೆ ಪ್ರೇಮ್ ಮಾತು

    ಕಾಲೆಳೆಯುವವರು ಇದ್ರೆನೇ ಬೆಳೆಯಲು ಸಾಧ್ಯ- ದಿ ವಿಲನ್ ಬಗ್ಗೆ ಪ್ರೇಮ್ ಮಾತು

    ಬೆಂಗಳೂರು: ಸ್ಯಾಂಡಲ್ ವುಡ್ ನ ದಿಗ್ಗಜರುಗಳಾದ ಶಿವಣ್ಣ ಹಾಗೂ ಸುದೀಪ್ ಅವರನ್ನಿಟ್ಟುಕೊಂಡು ಸಿನಿಮಾ ಮಾಡಲು ಮುಂದಾದಾಗ ಅನೇಕ ಮಂದಿ ನನ್ನ ವಿರುದ್ಧ ಮಾತನಾಡಿದ್ರು. ಅದನ್ನೇ ಚಾಲೆಂಜ್ ಆಗಿ ತೆಗೆದುಕೊಂಡು ಇಂದು ನಾನು ದಿ ವಿಲನ್ ಸಿನಿಮಾ ಮಾಡಿದ್ದೇನೆ. ಒಟ್ಟಿನಲ್ಲಿ ಕಾಲೆಳೆಯುವವರು ಇದ್ರೇನೆ ನಾವು ಬೆಳೆಸಲು ಸಾಧ್ಯ ಅಂತ ನಿರ್ದೇಶಕ ಪ್ರೇಮ್ ಹೇಳಿದ್ರು.

    ತನ್ನ ಸಿನಿಮಾ ಪ್ರಚಾರದ ವೇಳೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಇದು ಬರೀ ಪ್ರಚಾರ ಅಲ್ಲ. ಅದರಿಂದ ಸಮಾಜಕ್ಕೆ ಉಪಯೋಗವಾಗಲಿ ಎಂಬುದೇ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ದಿ ವಿಲನ್ ತಂಡಕ್ಕೆ ಧನ್ಯವಾದಗಳನ್ನು ಹೇಳಲು ಇಷ್ಟಪಡುತ್ತೇನೆ. ಪ್ರಚಾರದಿಂದ ಬಂದದ್ರಲ್ಲಿ ಒಂದು ಪರ್ಸೆಂಟ್ ಹಣವನ್ನು ನಾವು ನಿರ್ದೇಶಕರ ಸಂಘಕ್ಕೆ ಕೊಡುತ್ತಿದ್ದೇವೆ ಅಂತ ಅವರು ಹೇಳಿದ್ರು.

    ಸುದೀಪ್ ಹಾಗೂ ಶಿವರಾಜ್ ಕುಮಾರ್ ಅವರನ್ನಿಟ್ಟುಕೊಂಡು ಸಿನಿಮಾ ಮಾಡಲು ಮುಂದಾದಾಗ ಹಲವು ಜನ ಮಾತನಾಡಿದ್ದರು. ಈದು ಸಿನಿಮಾ ಆಗತ್ತಾ? ಇವರು ಸಿನಿಮಾ ಮಾಡ್ತಾರಾ? ಇದು ಸ್ಕ್ರೀನ್ ಗೆ ಬರುತ್ತಾ ಅಂತೆಲ್ಲಾ ಪ್ರಶ್ನೆಗಳು ಹರಿದಾಡುತ್ತಿದ್ದವು. ಆದ್ರೆ ಇವೆಲ್ಲ ಪ್ರಶ್ನೆಗಳನ್ನು ನಾನು ಚಾಲೆಂಜ್ ಆಗಿ ತೆಗೆದುಕೊಂಡೆ. ನಾನು ಮೊದಲಿನಿಂದಲೂ ಮಾಡು ಇಲ್ಲವೇ ಮಡಿ ಅನ್ನೋ ಗುಣದವನು. ಹೀಗಾಗಿ ಬೇರೆ ಭಾಷೆಯವರು ಮಾಡಿದಾಗ ನಾವು ಯಾಕೆ ಮಾಡಬಾರದೆಂಬ ಪ್ರಶ್ನೆ ಹುಟ್ಟಿಕೊಂಡಿತ್ತು. ಈ ಕಾರಣದಿಂದಾಗಿ ಇಬ್ಬರೂ ನಟರ ಬಳಿ ಈ ಕುರಿತು ಮಾತನಾಡಿದ್ದೇನೆ. ಇಬ್ಬರೂ ನಟರೂ ಕೂಡ ನನಗೆ ಸಹಕರಿಸಿದ್ರು. ಹೀಗೆ ಎಲ್ಲರೂ ಸೇರಿ ಒಂದು ಒಳ್ಳೆಯ ಸಿನಿಮಾ ಮಾಡಿದೆವು. ಅಂದು ಯಾರು ಆಗಲ್ಲ ಅಂದ್ರೋ, ಇಂದು ಅವರೇ ಪಬ್ಲಿಸಿಟಿ ಕೊಡಲು ಆರಂಭಿಸಿದ್ದಾರೆ ಅಂತ ನಕ್ಕರು. ಇದನ್ನೂ ಓದಿ: ಮತ್ತೊಂದು ವಿವಾದದಲ್ಲಿ `ದಿ ವಿಲನ್’ – ಸಿನಿಮಾ ನೋಡಿ ಆಮೇಲೆ ಮಾತ್ನಾಡಿ ಅಂದ್ರು ನಿರ್ದೇಶಕ ಪ್ರೇಮ್

    ಸುದೀಪ್ ಹಾಗೂ ಶಿವಣ್ಣ ಇಬ್ಬರೂ ಸಿನಿಮಾ ಸೆಟ್ ಗೆ ಬಂದಾಗ ಮಕ್ಕಳಂತೆ ನಡೆದುಕೊಳ್ಳುತ್ತಾರೆ. ಹೊರಗಡೆ ಜನ ಏನೂ ಬೇಕಾದ್ರೂ ಹೇಳಲಿ. ಆ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ. ಆದ್ರೆ ನನ್ನ ಪ್ರಕಾರ ಕನ್ನಡ ಚಿತ್ರರಂಗದಲ್ಲಿ ಇಬ್ಬರೂ ಒಳ್ಳೆಯ ಹಾಗೂ ಅದ್ಭುತ ನಟರು. ಒಟ್ಟಿನಲ್ಲಿ ಇಬ್ಬರೂ ಒಳ್ಳೆಯ ರೀತಿಯಲ್ಲಿ ಅಭಿನಯಿಸಿ ದಿ ವಿಲನ್ ಚಿತ್ರಕ್ಕೆ ಸಹಕರಿಸಿದ್ದಾರೆ ಅಂದ್ರು.

    ನಾನು ಮೊದಲಿನಿಂದಲೂ ಸಿನಿಮಾದಲ್ಲಿ ಹೊಸತನವನ್ನು ಹುಡುಕುತ್ತಿರುತ್ತೇನೆ. ಅದನ್ನೇ ಕೆಲವರು ಗಿಮಿಕ್, ಸ್ವಮೇಕ್ ಅಂತೆಲ್ಲಾ ಹೇಳುತ್ತಿರುತ್ತಾರೆ. ಅವರು ಅಂದುಕೊಳ್ಳಲಿ. ಆದ್ರೆ ಜನರಿಗೆ ಈ ವಿಷಯ ಇದೆ ಅನ್ನೋದನ್ನು ಮನದಟ್ಟು ಮಾಡುವುದು ನನ್ನ ಉದ್ದೇಶವಾಗಿರುತ್ತದೆ. ಹೀಗಾಗಿ ಆ ಮಟ್ಟಕ್ಕೆ ನಾನು ಪ್ರಯತ್ನಿಸುತ್ತೇನೆ. ಒಂದು ಸಲ ಸಿನಿಮಾ ನೋಡಬೇಕೆನ್ನುವ ಮನಸ್ಸು ಪ್ರತಿಯೊಬ್ಬನಿಗೂ ಬರಬೇಕು. ಅದಕ್ಕೆ ನಾನು ಶ್ರಮಿಸುತ್ತೇನೆ ಅಂತ ಹೇಳಿದ್ರು. ಇದನ್ನೂ ಓದಿ: ‘ದಿ ವಿಲನ್’ ಟೈಟಲ್ ಟ್ರ್ಯಾಕ್ ಲಿರಿಕಲ್ ವಿಡಿಯೋ ರಿಲೀಸ್

    ದಿ ವಿಲನ್ ಸಿನಿಮಾದ ಆಡಿಯೋ ಬಿಡುಗಡೆಯಾಗುತ್ತಿದೆ. ನಿನ್ನೆಯಷ್ಟೇ ಸಿನಿಮಾ ಸೆನ್ಸಾರ್ ಗೆ ಹೋಗಿದೆ. ಹೀಗಾಗಿ ಅಲ್ಲಿ ಏನಾದ್ರೂ ಕರೆಕ್ಷನ್ ಗಳಿದ್ದಲ್ಲಿ ಅದನ್ನು ಸರಿಪಡಿಸಲು 10-12 ದಿನಗಳು ಬೇಕೆ ಬೇಕಾಗುತ್ತದೆ. ಚಿತ್ರದಲ್ಲಿ ಗ್ರಾಫಿಕ್ಸ್ ತುಂಬಾ ಇದೆ. ಆಗಸ್ಟ್ 24ರಂದು ಬಿಡುಗಡೆ ಮಾಡಬೇಕು ಅಂತ ಪ್ಲ್ಯಾನ್ ಮಾಡಿದ್ದೇವೆ. ಒಟ್ಟಿನಲ್ಲಿ ಬರುವ ವಾರ ಸೆನ್ಸಾರ್ ಆಗುತ್ತದೆ. ಹೀಗಾಗಿ ಬರುವ ವಾರವೇ ಚಿತ್ರ ಬಿಡುಗಡೆ ದಿನವನ್ನು ಘೋಷಿಸುವುದಾಗಿ ಹೇಳಿದ್ರು. ಒಟ್ಟಿನಲ್ಲಿ ಚಿತ್ರದಲ್ಲಿ ನಮಗೆ ಪ್ರತಿಯೊಬ್ಬರು ಸಹಾಯ ಮಾಡುವ ಮೂಲಕ ನಮಗೆ ಬೆನ್ನೆಲುಬಾಗಿ ನಿಂತಿದ್ದಾರೆ ಅವರೆಲ್ಲರಿಗೂ ಅಭಿನಂದನೆಗಳನ್ನು ತಿಳಿಸಿದ್ದಾರೆ. ಇದನ್ನೂ ಓದಿ: ವಿವಾದಕ್ಕೆ ಗುರಿಯಾಗ್ತಿದೆ `ದಿ ವಿಲನ್’ ಹಾಡು?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ಹೈಪರ್ ಹಾಡುಗಳು ಸಖತ್ ಹಿಟ್!

    ಹೈಪರ್ ಹಾಡುಗಳು ಸಖತ್ ಹಿಟ್!

    ಬೆಂಗಳೂರು: ಎಂ.ಕಾರ್ತಿಕ್ ನಿರ್ಮಾಣದ ಹೈಪರ್ ಚಿತ್ರ ಸದ್ಯ ಪ್ರೇಕ್ಷಕರ ವಲಯದಲ್ಲೊಂದು ಸಂಚಲನ ಸೃಷ್ಟಿಸಿದೆ. ನಿರ್ದೇಶಕ ಜೋಗಿ ಪ್ರೇಮ್ ಬಿಡುಗಡೆ ಮಾಡಿದ್ದ ಈ ಚಿತ್ರದ ಹಾಡು ಮತ್ತು ಟ್ರೈಲರನ್ನು ಲೆಕ್ಕವಿಲ್ಲದಷ್ಟು ಜನ ನೋಡಿ ಮೆಚ್ಚಿಕೊಳ್ಳುವ ಮೂಲಕ ಹೈಪರ್ ಚಿತ್ರದ ಬಗ್ಗೆ ಎಲ್ಲೆಡೆ ನಿರೀಕ್ಷೆ ಹುಟ್ಟಿಕೊಂಡಿತ್ತು.

    ತೆರೆಗೆ ಬರಲು ರೆಡಿಯಾಗಿ ನಿಂತಿರೋ ಈ ಚಿತ್ರ ಎಂ ಬಿಗ್ ಪಿಕ್ಚರ್ಸ್ ಲಾಂಛನದಡಿಯಲ್ಲಿ ನಿರ್ಮಾಣಗೊಂಡಿದೆ. ಈಗಾಗಲೇ ತಮಿಳಿನಲ್ಲಿ ಮೂರು ಚಿತ್ರಗಳನ್ನು ನಿರ್ದೇಶನ ಮಾಡಿರುವ ಗಣೇಶ್ ವಿನಾಯಕ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ನಾಯಕ ನಟರಾದ ಅರ್ಜುನ್ ಆರ್ಯ ಅವರೇ ಕಥೆಯನ್ನೂ ಬರೆದಿರೋದು ವಿಶೇಷ.

    ಇದೊಂದು ಕಾಲೇಜ್ ಲವ್ ಕಥಾಹಂದರವನ್ನು ಹೊಂದಿರುವ ಚಿತ್ರ. ಆದರೆ ಅದರಾಚೆಗಿನ ಊಹಿಸಲಸಾಧ್ಯವಾದ ತಿರುವು, ಸಾಹಸ, ಅಪ್ಪ ಮಗಳ ಸೆಂಟಿಮೆಂಟು ಸೇರಿದಂತೆ ಇಡೀ ಚಿತ್ರವನ್ನು ಸಮೃದ್ಧವಾಗಿ ರೂಪಿಸಿದ ಸಮಾಧಾನದಲ್ಲಿದೆ ಚಿತ್ರತಂಡ. ಕಥೆಗೆ ಪೂರಕವಾಗಿ ಈ ಚಿತ್ರದಲ್ಲಿ ಐದು ಚೆಂದದ ಹಾಡುಗಳಿವೆ. ಇಮ್ಮಾನ್ ಡಿ ಹಾಗೂ ಎಲ್ವಿನ್ ಆ ಐದೂ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಈಗಾಗಲೇ ಈ ಹಾಡುಗಳು ಮತ್ತು ಟ್ರೈಲರ್ ಗೆ ಗಣ್ಯರ ಕಡೆಯಿಂದಲೂ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ರವಿಶಂಕರ್ ಮತ್ತು ಚಿಕ್ಕಣ್ಣ ಸೇರಿದಂತೆ ಕನ್ನಡದ ಸ್ಟಾರ್ ನಟರೂ ಕೂಡಾ ಈ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

    ಶಕ್ತಿವೇಲ್ ಅವರ ಛಾಯಾಗ್ರಹಣ, ರುಬಾನ್ ಸಂಕಲನ, ಥ್ರಿಲ್ಲರ್ ಮಂಜು, ಮಾಸ್ ಮಾದ, ವಿಕ್ರಂ, ಹೈಪರ್ ಸೂರಿ ಸಾಹಸ ನಿರ್ದೇಶನ, ಕಲೈ ನೃತ್ಯ ನಿರ್ದೇಶನ ಹಾಗೂ ಕನಕ ಅವರ ಕಲಾ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಎ.ಪಿ.ಅರ್ಜುನ್, ಬಹದ್ದೂರ್ ಚೇತನ್, ದಿಲ್‍ವಾಲ ಅನಿಲ್ ಹಾಗೂ ಗೌಸ್‍ಫಿûರ್ ಬರೆದಿದ್ದಾರೆ. ಅರ್ಜುನ್ ಆರ್ಯ, ಶೀಲ, ರಂಗಾಯಣ ರಘು, ಶೋಭ್‍ರಾಜ್, ಬುಲೆಟ್ ಪ್ರಕಾಶ್, ಅಚ್ಯುತಕುಮಾರ್, ಶ್ರೀನಿವಾಸಪ್ರಭು, ಬ್ಯಾಂಕ್ ಜನಾರ್ದನ್, ವೀಣಾಸುಂದರ್, ಲಕ್ಷ್ಮೀಸಿದ್ದಯ್ಯ, ಉಮೇಶ್ ಪುಂಗ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

  • ವಿಲನ್ ಚಿತ್ರದಲ್ಲಿ ವಿಲನ್ ಯಾರು? ಪ್ರೇಮ್ ಹೇಳಿದ್ದೇನು? ಶೂಟಿಂಗ್ ಎಲ್ಲಿ ನಡೆಯತ್ತೆ?

    ವಿಲನ್ ಚಿತ್ರದಲ್ಲಿ ವಿಲನ್ ಯಾರು? ಪ್ರೇಮ್ ಹೇಳಿದ್ದೇನು? ಶೂಟಿಂಗ್ ಎಲ್ಲಿ ನಡೆಯತ್ತೆ?

    ಬೆಂಗಳೂರು: ಸುದೀಪ್ ಹಾಗೂ ಶಿವರಾಜ್‍ಕುಮಾರ್ ನಟನೆಯ `ದಿ ವಿಲನ್’ ಚಿತ್ರದ ಫಸ್ಟ್ ಲುಕ್ ಈಗಾಗಲೇ ಬಿಡುಗಡೆಯಾಗಿದ್ದು ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ.

    ಇತ್ತೀಚಿನ ದಿನಗಳಲ್ಲಿ ಹೊಸ ಹುಡುಗರ ಸಿನೆಮಾ ಬಂದಾಗ ಸ್ಟಾರ್ ನಟರು ಬಂದು ಚಿತ್ರದ ಪೋಸ್ಟರ್‍ಗಳನ್ನು ಲಾಂಚ್ ಮಾಡ್ತಾರೆ. ಆದ್ರೆ ಇಲ್ಲಿ ಸ್ಟಾರ್ ನಟರನ್ನು ಹೊಸ ಹುಡುಗ ರೋಗ್ ಚಿತ್ರದ ಹೀರೋ ಇಶಾನ್ ಲಾಂಚ್ ಮಾಡಿದ್ದಾರೆ. ಇದು ನನಗೆ ಹೆಮ್ಮೆಯ ವಿಷಯ ಅಂತಾ `ದಿ ವಿಲನ್’ ಚಿತ್ರದ ನಿರ್ದೇಶಕ ಪ್ರೇಮ್ ಹರ್ಷ ವ್ಯಕ್ತಪಡಿಸಿದ್ದಾರೆ.

    ಎಲ್ಲರಿಗೂ ಒಂದು ಕುತೂಹಲವಿತ್ತು. ಯಾಕಂದ್ರೆ ನನ್ನ ಕೆಲಸ ಸ್ವಲ್ಪ ನಿಧಾನ. ಹೀಗಾಗಿ ನನ್ನನ್ನು ಬಿಳಿ ಆನೆ ಅಂತಾನೆ ಎಲ್ರೂ ಗೇಲಿ ಮಾಡ್ತಾ ಇದ್ರು. ಇಬ್ಬರು ಸ್ಟಾರ್ ನಟರನ್ನಿಟ್ಟುಕೊಂಡು ಪ್ರೇಮ್ ಹೇಗೆ ಈ ಚಿತ್ರ ಮಾಡಬಹುದು ಅನ್ನೋ ಕುತೂಹಲ ಎಲ್ಲರಿಗೂ ಇತ್ತು. ಆದ್ರೆ ಇಲ್ಲಿ ನಿರ್ಮಾಪಕರಾದ ಮನೋಹರ್ ನನ್ನ ಸಾಕಿದ್ದಾರೆ. ಹೀಗಾಗಿ ಇಂದು ಚಿತ್ರದ ಫಸ್ಟ್ ಲುಕ್ ಬಿಡುಗಡೆಗೊಂಡಿದೆ ಅಂತಾ ಹೇಳಿದ್ರು.

    ಚಿತ್ರದಲ್ಲಿ ಇಬ್ಬರು ನಟರಿಗೂ ವಿಭಿನ್ನವಾದ ಲುಕ್ ಕೊಟ್ಟಿದ್ದೀವಿ. ಯಾಕಂದ್ರೆ ಶಿವಣ್ಣ ಹಾಗೂ ಸುದೀಪ್ ಇಬ್ಬರೂ ನನಗೆ ಅಣ್ಣನಂತೆ. ಹೀಗಾಗಿ ಈ ಇಬ್ಬರೂ ಸೋಲಬಾರದು ಎಂಬ ಉದ್ದೇಶದಿಂದ ಡಿಫರೆಂಟ್ ಲುಕ್ ಕೊಟ್ಟಿದ್ದೀವಿ ಅಂತಾ ಅಂದ್ರು.

    ಎಲ್ಲೆಲ್ಲಿ ಚಿತ್ರೀಕರಣ: ಸೋಮವಾರದಿಂದ ಚಿತ್ರದ ಶೂಟಿಂಗ್ ಪ್ರಾರಂಭವಾಗುತ್ತದೆ. ಬೆಂಗಳೂರಿನಲ್ಲಿ 13 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಬಳಿಕ 20 ದಿನಗಳ ಕಾಲ ಲಂಡನ್‍ನಲ್ಲಿ, ಅಲ್ಲಿಂದ ವಾಪಾಸ್ಸಾದ ಬಳಿಕ ಬ್ಯಾಂಕಾಂಕ್ ಗೆ ಚಿತ್ರತಂಡ ತೆರಳಿ ಅಲ್ಲಿಯೂ ಶೂಟಿಂಗ್ ನಡೆಸಲಿದೆ. ಇನ್ನು ಕೇರಳ ಅಥವಾ ಚೈನಾದಲ್ಲಿಯೂ ಚಿತ್ರೀಕರಣ ಮಾಡೋ ಉದ್ದೇಶ ಪ್ರೇಮ್ ಅವರಿಗಿದೆ.

    ವಿಲನ್ ಯಾರು?: ಚಿತ್ರದಲ್ಲಿ ವಿಲನ್ ಯಾರು ಎಂಬುವುದನ್ನು ಗೌಪ್ಯವಾಗಿಯೇ ಇಟ್ಟ ಪ್ರೇಮ್ ಸ್ಕ್ರೀನ್ ಮೇಲೆ ಬಂದ ಬಳಿಕ ವಿಲನ್ ಯಾರು ಎಂಬುವುದನ್ನೇ ನೀವೇ ನೋಡಿ ಅಂತಾ ಹೇಳಿದ್ರು. ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ ಹೊಸ ಹುಡುಗ ಇಶಾನ್ ಅವರಿಗೆ ಶಿವಣ್ಣ, ಸುದೀಪ್ ಹಾಗೂ ಮನೋಹರ್ ಹೀಗೆ ಎಲ್ಲರ ಆಶೀರ್ವಾದ ಮೇಲಿರಲಿ. ಮುಂದೊಂದು ದಿನ ಆತನೂ ದೊಡ್ಡ ಸ್ಟಾರ್ ನಟ ಆಗಲಿ ಅಂತಾ ಪ್ರೇಮ್ ಹಾರೈಸಿದ್ರು.

    ಸುದೀಪ್‍ಗೆ ನಾಯಕಿ ಫಿಕ್ಸ್ ಆಗಿಲ್ಲ: ಅಣ್ಣಮ್ಮನ ಮೇಲಿನ ಭಕ್ತಿಯಿಂದ ಫಸ್ಟ್ ಲುಕ್ ಇಲ್ಲಿ ಬಿಡುಗಡೆ ಮಾಡಿದ್ದೇನೆ. ಶಿವರಾಜಕುಮಾರ್ ಅವರ ನಾಯಕಿಯಾಗಿ ಶ್ರುತಿ ಹರಿಹರನ್ ಆಯ್ಕೆಯಾಗಿದ್ದಾರೆ. ಆದ್ರೆ ಸುದೀಪ್‍ಗೆ ಇಲ್ಲಿಯವರೆಗೆ ನಾಯಕಿ ಯಾರೆಂಬುದನ್ನ ನಿರ್ಧರಿಸಿಲ್ಲ. ನಾಯಕಿಯ ಬಗ್ಗೆ ಕಟ್ಟುಕತೆಗಳು ಹರಿದಾಡ್ತಿವಿ. ಆದ್ರೆ ನಾಯಕಿಯನ್ನ ಇನ್ನಷ್ಟೇ ಫಿಕ್ಸ್ ಮಾಡ್ತಾ ಇದ್ದೇವೆ ಅಂತಾ ಹೇಳಿದ್ರು.

    ನಟ ಶಿವರಾಜ್ ಕುಮಾರ್ ಹಾಗೂ ಸುದೀಪ್ ಇಬ್ಬರೂ ನನಗೆ ಅಣ್ಣಂದಿರಂತೆ. ಹೀಗಾಗಿ ಇಂದು ನಾನು ಅವರ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿರೋದು ನನಗೆ ತುಂಬಾನೇ ಸಂತಸವಾಗಿದೆ. ಇದಕ್ಕೆ ಅವಕಾಶ ಮಾಡಿಕೊಟ್ಟ ಚಿತ್ರತಂಡಕ್ಕೆ ನನ್ನ ಅಭಿನಂದನೆ. ನನ್ನ ಚಿತ್ರ ರೋಗ್ ಈಗಾಗಲೇ ಬಿಡುಗಡೆಗೊಂಡಿದ್ದು, ಹಾರೈಸಿದ ಎಲ್ಲರಿಗೂ ಧನ್ಯವಾದ ಅಂತಾ ಫಸ್ಟ್ ಲುಕ್ ಬಿಡುಗಡೆ ಮಾಡಿದ ರೋಗ್ ಚಿತ್ರದ ನಟ ಇಶಾನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ರು.

    ಶಿವಣ್ಣ ಜೊತೆ ಇದು ನನ್ನ ಎರಡನೆಯ ಚಿತ್ರ. ದೊಡ್ಡ ಸ್ಟಾರ್‍ಗಳನ್ನಿಟ್ಟುಕೊಂಡು ಚಿತ್ರ ಮಾಡೋದು ತುಂಬಾನೇ ಕಷ್ಟ. ಹಲವು ಮಂದಿ ಪ್ರೇಮ್ ಅವರು ಈ ಚಿತ್ರ ಮಾಡ್ತಾರಾ ಅನ್ನೋ ಪ್ರಶ್ನೆಗಳನ್ನು ಹಾಕಿದ್ರು. ಆದ್ರೆ ಇಂದು ನಾವು ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದೇವೆ. ಶಿವಣ್ಣ ಸುದೀಪ್ ಇಬ್ರೂ ಹೃದಯ ಶ್ರೀಮಂತಿಕೆ ಇರುವಂತಹ ನಾಯಕ ನಟರು. ಪ್ರೇಮ್ ಅವರ ಒಡನಾಟದಿಂದ ಇಂದು ಇದು ಸಾಧ್ಯವಾಯಿತು ಅಂತಾ ಚಿತ್ರದ ನಿರ್ಮಾಪಕ ಮನೋಹರ್ ಹೇಳಿದ್ರು.

    ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಕಿಚ್ಚ ಸುದೀಪ್ ಅಭಿನಯದ `ದಿ ವಿಲನ್’ ಚಿತ್ರವನ್ನು ಜೋಗಿ ಪ್ರೇಮ್ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತವಿದ್ದು ತನ್ವಿ ಫಿಲಂಸ್‍ನಡಿ ಈ ಚಿತ್ರವನ್ನು ಸಿ.ಆರ್. ಮನೋಹರ್ ನಿರ್ಮಾಣ ಮಾಡುತ್ತಿದ್ದಾರೆ.

    ಇದನ್ನೂ ಓದಿದಿ ವಿಲನ್ ಫಸ್ಟ್ ಲುಕ್ ರಿಲೀಸ್, ಬೆಂಗಳೂರಿನಲ್ಲಿ ನಂಬರ್ ಒನ್ ಟ್ರೆಂಡಿಂಗ್ ಟಾಪಿಕ್