Tag: jogi prem

  • ಅಮ್ಮನ ಮತ್ತೊಂದು  ಹಾಡಿಗೆ ದನಿಯಾದ ಜೋಗಿ ಪ್ರೇಮ್

    ಅಮ್ಮನ ಮತ್ತೊಂದು ಹಾಡಿಗೆ ದನಿಯಾದ ಜೋಗಿ ಪ್ರೇಮ್

    ಪ್ರಪಂಚದಲ್ಲಿ ಅಮ್ಮನ ಪ್ರೀತಿಗಿಂತ ಮಿಗಿಲಾದ ಪ್ರೀತಿ ಮತ್ತೊಂದಿಲ್ಲ. ಅಂತಹ ಅಮ್ಮ ಜೊತೆಗಿದ್ದರೆ ಧೈರ್ಯವೂ ಕೂಡ.  ಅದ್ಭುತ ವ್ಯಕ್ತಿತ್ವದ ಅಮ್ಮನ ಬಗ್ಗೆ “ಅಮ್ಮ ಎಂಬ ಹೆಸರೆ ಆತ್ಮ ಬಲ” ಎಂಬ  ಹಾಡನ್ನು ಪ್ರೇಮಕವಿ ಕೆ.ಕಲ್ಯಾಣ್ ಬರೆದಿದ್ದಾರೆ “ಪರಿಮಳ ಡಿಸೋಜಾ” (Parima D’Souza) ಚಿತ್ರಕ್ಕಾಗಿ. ಖ್ಯಾತ ನಿರ್ದೇಶಕ ಜೋಗಿ ಪ್ರೇಮ್ (Jogi Prem) ಈ ಗೀತೆಯನ್ನು ಹಾಡಿದ್ದಾರೆ. ಇತ್ತೀಚಿಗೆ ಈ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ ಸಮಾರಂಭ ನಡೆಯಿತು. ಕೆ.ಕಲ್ಯಾಣ್, ನಟಿ ಭವ್ಯ, ಜಂಕಾರ್ ಮ್ಯೂಸಿಕ್ ಭರತ್ ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

    ನಮ್ಮ ಚಿತ್ರಕ್ಕಾಗಿ ಕೆ.ಕಲ್ಯಾಣ್ ಅಮ್ಮನ ಬಗ್ಗೆ ಒಳ್ಳೆಯ ಹಾಡು ಬರೆದಿದ್ದಾರೆ. ಅಷ್ಟೇ ಅದ್ಭುತವಾಗಿ ಜೋಗಿ ಪ್ರೇಮ್ ಹಾಡಿದ್ದಾರೆ. ಕ್ರಿಸ್ಟೋಫರ್ ಜೇಸನ್ ಸಂಗೀತ ನೀಡಿದ್ದಾರೆ. ಜಂಕಾರ್ ಮ್ಯೂಸಿಕ್ ಮೂಲಕ ಈ ಹಾಡು ಬಿಡುಗಡೆಯಾಗಿದೆ. ಮರ್ಡರ್ ಮಿಸ್ಟರಿ ಜೊತೆಗೆ ಆಕ್ಷನ್, ಸೆಂಟಿಮೆಂಟ್ ಎಲ್ಲಾ ಅಂಶಗಳಿರುವ “ಪರಿಮಳ ಡಿಸೋಜಾ” ತೆರೆಗೆ ಬರಲು ಸಿದ್ದವಾಗಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ದೇಶಕ ಗಿರಿಧರ್ (Giridhar) ಹೆಚ್ ಟಿ. ಇದನ್ನೂ ಓದಿ: ಖ್ಯಾತ ತಮಿಳು ಹಾಸ್ಯ ನಟ ಮಯಿಲ್‌ಸಾಮಿ ಹಠಾತ್ ನಿಧನ

    ತಾಯಿ ಬಗ್ಗೆ ಹಾಡು ಬರೆಯಬೇಕೆಂದರೆ ಏನೋ ಒಂಥರ ಖುಷಿ. ಈ ಹಾಡನ್ನು ಶೀಘ್ರವಾಗಿ ಬರೆಯಬೇಕಿತ್ತು. ಆಗ ನಿರ್ಮಾಪಕರು ನನ್ನ ಅತ್ತಿಗೆಯ ಮೂಲಕ ಬೇಗ ಬರೆದುಕೊಡಲು ಹೇಳಿಸಿದರು. ಆಗ ನನಗೆ ತಿಳಿಯಿತು ನಿರ್ಮಾಪಕರು ನಮಗೆ ಬಳಗ ಎಂದು. ಅಮ್ಮನ ಹಾಡನ್ನು ಪ್ರೇಮ್ ಅವರು ಅಷ್ಟೇ ಅದ್ಭುತವಾಗಿ ಹಾಡಿದ್ದಾರೆ ಎಂದು ಪ್ರೇಮಕವಿ ಕಲ್ಯಾಣ್ ತಿಳಿಸಿದರು.  ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ನಾನು ಈ ಚಿತ್ರದಲ್ಲಿ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೀನಿ. ಹಾಡು ತುಂಬಾ ಚೆನ್ನಾಗಿದೆ. ಒಳ್ಳೆಯದಾಗಲಿ ಎಂದರು ಹಿರಿಯ ನಟಿ ಭವ್ಯ.  “ಪರಿಮಳ ಡಿಸೋಜಾ” ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಇಂದು ಅಮ್ಮನ ಹಾಡು ಲಿರಿಕಲ್ ವಿಡಿಯೋ ಬಿಡುಗಡೆಯಾಗಿದೆ. ಹಾಡು‌ ಬರೆದ ಕಲ್ಯಾಣ್ ಅವರಿಗೆ, ಸುಮಧುರವಾಗಿ ಹಾಡಿದ್ದ ಪ್ರೇಮ್ ಅವರಿಗೆ ಹಾಗೂ ಇಡೀ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದ ನಿರ್ಮಾಪಕ ವಿನೋದ್ ಶೇಷಾದ್ರಿ, ತಾವು ಈ ಚಿತ್ರದಲ್ಲಿ ನಟಿಸಿರುವುದಾಗಿ ಹೇಳಿದರು.

    ಸಂಗೀತ ನಿರ್ದೇಶಕ ಕ್ರಿಸ್ಟೋಫರ್ ಜೋಸನ್, ಛಾಯಾಗ್ರಾಹಕ ರಾಮು ಹಾಗೂ ಚಿತ್ರದಲ್ಲಿ ನಟಿಸಿರುವ ಕೋಮಲ ಬನವಾಸಿ ಸೇರಿದಂತೆ ಅನೇಕ ಕಲಾವಿದರು “ಪರಿಮಳ ಡಿಸೋಜಾ” ಚಿತ್ರದ ಬಗ್ಗೆ ಮಾತನಾಡಿದರು. ತಾಯಿಯ ಬಗ್ಗೆಗಿನ ಹಾಡು ಬಿಡುಗಡೆ ಸಮಾರಂಭ ಆಗಿರುವುದರಿಂದ ವಿಶೇಷವಾಗಿ ಮೂರು ಜನ ತಾಯಂದಿರನ್ನು ಸನ್ಮಾನಿಸಲಾಯಿತು.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸ್ಯಾಂಡಲ್ ವುಡ್ ಗೆ ಮತ್ತೊಮ್ಮೆ ಎಂಟ್ರಿ ಕೊಡಲಿದ್ದಾರೆ ಮುನ್ನಭಾಯ್

    ಸ್ಯಾಂಡಲ್ ವುಡ್ ಗೆ ಮತ್ತೊಮ್ಮೆ ಎಂಟ್ರಿ ಕೊಡಲಿದ್ದಾರೆ ಮುನ್ನಭಾಯ್

    ಶ್ ನಟನೆಯ ಕೆಜಿಎಫ್ 2 ಸಿನಿಮಾದಲ್ಲಿ ಅಧೀರನಾಗಿ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ್ದ ಬಾಲಿವುಡ್ ಬ್ಯಾಡ್ ಬಾಯ್ ಸಂಜಯ್ ದತ್, ಇದೀಗ ಮತ್ತೊಮ್ಮೆ ಚಂದನವನಕ್ಕೆ ಪ್ರವೇಶ ಮಾಡುತ್ತಿದ್ದಾರೆ. ಅಂದುಕೊಂಡಂತೆ ನಡೆದರೆ, ಜೋಗಿ ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬರಲಿರುವ ‘ಕೆಡಿ’ ಸಿನಿಮಾದಲ್ಲಿ ಅವರು ಪ್ರಮುಖ ಪಾತ್ರವೊಂದನ್ನು ಮಾಡಲಿದ್ದಾರೆ. ಈಗಾಗಲೇ ಸಂಜಯ್ ದತ್ ಜೊತೆ ಪ್ರೇಮ್ ಮಾತುಕತೆ ಕೂಡ ನಡೆಸಿದ್ದಾರೆ.

    ಬಲ್ಲ ಮೂಲಗಳ ಪ್ರಕಾರ ‘ಕೆಡಿ’ ಸಿನಿಮಾದಲ್ಲಿ ನಟಿಸಲು ಸಂಜಯ್ ಒಪ್ಪಿಗೆ ನೀಡಿದ್ದಾರಂತೆ. ಬರೋಬ್ಬರಿ 45 ದಿನಗಳ ಕಾಲ್ ಶೀಟ್ ಕೂಡ ನೀಡಿದ್ದಾರಂತೆ. ಅದೊಂದು ಪ್ರಮುಖ ಪಾತ್ರವಾಗಿದ್ದರಿಂದ ಈ ಪ್ರಮಾಣದ ಕಾಲ್ ಶೀಟ್ ತಗೆದುಕೊಂಡಿದ್ದಾರಂತೆ ಪ್ರೇಮ್. ಇದು ಪ್ರೇಮ್ ಮತ್ತು ಧ್ರುವ ಸರ್ಜಾ ಕಾಂಬಿನೇಷನ್ ನ ಮೊದಲ ಸಿನಿಮಾವಾಗಿದ್ದು, ಇನ್ನಷ್ಟೇ ಚಿತ್ರೀಕರಣ ಪ್ರಾರಂಭಿಸಬೇಕು. ಇದನ್ನೂ ಓದಿ: ತಂದೆಯ ಹುಟ್ಟುಹಬ್ಬಕ್ಕೆ ವಿಶೇಷ ಫೋಟೋ ಹಂಚಿಕೊಂಡ ನಟಿ ರಾಧಿಕಾ ಪಂಡಿತ್

    ಈ ಹಿಂದೆ ಪ್ರೇಮ್ ಅವರು ಸಂಜಯ್ ದತ್ ಅವರನ್ನು ಭೇಟಿ ಮಾಡಿದ ಫೋಟೋ ವೈರಲ್ ಆಗಿತ್ತು. ಕೆಡಿ ಸಿನಿಮಾದ ಟೈಟಲ್ ರಿಲೀಸ್ ಕಾರ್ಯಕ್ರಮಕ್ಕೆ ಸಂಜಯ್ ಅವರನ್ನು ಆಹ್ವಾನಿಸಲು ನಿರ್ದೇಶಕರು ಹೋಗಿದ್ದರು ಎಂದು ಹೇಳಲಾಗಿತ್ತು.  ಮೊನ್ನೆಯಷ್ಟೇ ರವಿಚಂದ್ರನ್ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದು ಗೊತ್ತಾದಾಗ, ಸಂಜಯ್ ಮಾಡಬೇಕಿದ್ದ ಪಾತ್ರವನ್ನು ರವಿಚಂದ್ರನ್ ನಿರ್ವಹಿಸುತ್ತಿದ್ದಾರೆ ಎಂದು ಸುದ್ದಿ ಆಗಿತ್ತು.

    ಇದೀಗ ಮತ್ತೊಂದು ಬ್ರೇಕಿಂಗ್ ಸುದ್ದಿ ಬಂದಿದ್ದು, ಸಂಜಯ್ ದತ್ ಈ ಸಿನಿಮಾದಲ್ಲಿ ನಟಿಸುವುದು ಗ್ಯಾರಂಟಿ ಎಂದು ಗೊತ್ತಾಗಿದೆ. ಈಗಾಗಲೇ ಪ್ರೇಮ್ ಕಾಲ್ ಶೀಟ್ ಪಡೆದುಕೊಂಡು ಬಂದು, ಅವರ ಭಾಗದ ಚಿತ್ರೀಕರಣದ ಪ್ಲ್ಯಾನ್ ಕೂಡ ಮಾಡುತ್ತಿದ್ದಾರಂತೆ. ಇದೊಂದು ಭಾರೀ ಬಜೆಟ್ ಸಿನಿಮಾವಾಗಿದ್ದು, ಭಾರತೀಯ ಸಿನಿಮಾ ರಂಗದ ಮೇರು ಕಲಾವಿದರು ಜೊತೆಯಾಗಲಿದ್ದಾರಂತೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಧ್ರುವ ಸರ್ಜಾ ಚಿತ್ರಕ್ಕೆ ಮಾಲಾಶ್ರೀ ಪುತ್ರಿ ರಾಧನಾ ರಾಮ್ ನಾಯಕಿ

    ಧ್ರುವ ಸರ್ಜಾ ಚಿತ್ರಕ್ಕೆ ಮಾಲಾಶ್ರೀ ಪುತ್ರಿ ರಾಧನಾ ರಾಮ್ ನಾಯಕಿ

    ಜೋಗಿ ಪ್ರೇಮ್ ಮತ್ತು ಧ್ರುವ ಸರ್ಜಾ ಕಾಂಬಿನೇಷನ್ ನ ‘ಕೆಡಿ’ ಸಿನಿಮಾ ಇನ್ನಷ್ಟೇ ಶುರುವಾಗಬೇಕಿದೆ. ಸಿಂಪಲ್ ಆಗಿ ಮುಹೂರ್ತ ಮಾಡಿದ್ದ ಚಿತ್ರತಂಡ, ಟೈಟಲ್ ಟೀಸರ್ ಬಿಡುಗಡೆ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಯೋಜನೆ ಮಾಡಿದ್ದರು. ಅಲ್ಲದೇ, ಈ ಸಿನಿಮಾದಲ್ಲಿ ಬಾಲಿವುಡ್ ನಟ ಸಂಜಯ್ ದತ್ ಸೇರಿದಂತೆ ಹಲವು ಅಚ್ಚರಿಯ ನಟರು ಇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ನಡುವೆ ಮತ್ತೊಂದು ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ.

    ಮಾಲಾಶ್ರೀ ಅವರ ಪುತ್ರಿ ರಾಧನಾ ರಾಮ್ ಈಗಾಗಲೇ ಕನ್ನಡ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸ್ಟಾರ್ ನಟನ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಆ ಸಿನಿಮಾದ ಶೂಟಿಂಗ್ ನಲ್ಲಿ ರಾಧನಾ ಭಾಗಿಯಾಗದೇ ಇದ್ದರೂ, ಮತ್ತೊಂದು ಚಿತ್ರಕ್ಕೆ ಆಯ್ಕೆ ಆಗುವ ಮೂಲಕ ಕುತೂಹಲ ಮೂಡಿಸಿದ್ದಾರೆ. ರಾಧನಾ ಇದೀಗ ಜೋಗಿ ಪ್ರೇಮ್ ನಿರ್ದೇಶನದ ‘ಕೆಡಿ’ ಸಿನಿಮಾವನ್ನೂ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:`ಬನಾರಸ್’ ಚಿತ್ರದ ಬೆನ್ನಲ್ಲೇ ಝೈದ್ ಖಾನ್‌ಗೆ ಬಂತು ಬಿಗ್ ಆಫರ್

    ಈಗಾಗಲೇ ಜೋಗಿ ಪ್ರೇಮ್ ಮತ್ತು ತಂಡ ರಾಧನಾ ಪಾತ್ರ ಮತ್ತು ಅವರ ಲುಕ್ ಟೆಸ್ಟ್ ಕೂಡ ನಡೆದಿದೆ ಎನ್ನುವ ಮಾಹಿತಿ ಇದೆ. ಆದರೆ, ಅಧಿಕೃತವಾಗಿ ಸಿನಿಮಾ ಟೀಮ್ ಆಗಲಿ, ರಾಧನಾ ಆಗಲಿ ಈ ಮಾಹಿತಿಯನ್ನು ಹಂಚಿಕೊಂಡಿಲ್ಲ. ಜೋಗಿ ಪ್ರೇಮ್ ಟೀಮ್ ನಿಂದಲೇ ಹರಿದಾಡುತ್ತಿರುವ ಮಾಹಿತಿ ಪ್ರಕಾರ ‘ಕೆಡಿ’ ಸಿನಿಮಾದಲ್ಲಿ ರಾಧನಾ ನಟಿಸುವುದು ಪಕ್ಕಾ ಎನ್ನಲಾಗುತ್ತಿದೆ. ಈ ಕುರಿತು ಒಂದು ಹಂತದ ಮಾತುಕತೆ ಕೂಡ ಆಗಿದೆಯಂತೆ. ಈ ಸಿನಿಮಾದಲ್ಲಿ ತಮ್ಮ ಮಗಳು ನಟಿಸಲು ಮಾಲಾಶ್ರೀ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ.

    ಅಂದುಕೊಂಡಂತೆ ನಡೆದರೆ ರಾಧನಾ ಲಕ್ಕಿ ಗರ್ಲ್. ಮೊದಲ ಸಿನಿಮಾದಲ್ಲೂ ಸ್ಟಾರ್ ನಟನ ಜೊತೆ ತೆರೆ ಹಂಚಿಕೊಳ್ಳುತ್ತಾರೆ. ಎರಡನೇ ಸಿನಿಮಾಗೂ ಮತ್ತೊಬ್ಬ ಸ್ಟಾರ್ ನಟನ ಸಿನಿಮಾ ಸಿಕ್ಕಿದೆ. ಅಲ್ಲದೇ, ಜೋಗಿ ಪ್ರೇಮ್ ರೀತಿಯ ನಿರ್ದೇಶಕರು ಜೊತೆಯಾಗಿದ್ದಾರೆ. ಹಾಗಾಗಿ ರಾಧನಾ ಎರಡೇ ಸಿನಿಮಾದಲ್ಲಿ ಸ್ಟಾರ್ ನಟಿಯಾಗಿ ಗುರುತಿಸಿಕೊಳ್ಳುವ ಬಂಪರ್ ಅವಕಾಶ ಸಿಕ್ಕಂತಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಜೋಗಿ ಪ್ರೇಮ್ ಮತ್ತು ಧ್ರುವ ಸರ್ಜಾ ಕಾಂಬಿನೇಷನ್ ‘KD’ ಸಿನಿಮಾ ಸ್ಪೆಷಲ್

    ಜೋಗಿ ಪ್ರೇಮ್ ಮತ್ತು ಧ್ರುವ ಸರ್ಜಾ ಕಾಂಬಿನೇಷನ್ ‘KD’ ಸಿನಿಮಾ ಸ್ಪೆಷಲ್

    ಟ ಧ್ರುವ ಸರ್ಜಾ (Dhruva Sarja) ಮತ್ತು ನಿರ್ದೇಶಕ ‘ಜೋಗಿ’ ಪ್ರೇಮ್‌ (Jogi Prem) ಕಾಂಬಿನೇಷನ್‌ನಲ್ಲಿ ಘೋಷಣೆ ಆಗಿದ್ದ ಸಿನಿಮಾಕ್ಕೆ ‘ಕೆ ಡಿ’ ಎಂದು ನಾಮಕರಣ ಮಾಡಲಾಗಿದೆ. ಬೆಂಗಳೂರಿನಲ್ಲಿ ಅದ್ದೂರಿಯಾಗಿ ಟೈಟಲ್ ಟೀಸರ್ ರಿಲೀಸ್ ಮಾಡಿ, ಚಿತ್ರತಂಡ ಈ ವಿಚಾರವನ್ನು ಹಂಚಿಕೊಂಡಿದೆ. ಬಾಲಿವುಡ್‌ ನಟ ಸಂಜಯ್ ದತ್ ಅವರು ಈ ಸಿನಿಮಾದಲ್ಲಿ ನಟಿಸಲಿದ್ದಾರೆ. ಟೈಟಲ್ (Title) ಟೀಸರ್ ರಿಲೀಸ್ ಆಗಮಿಸಿದ್ದ ಅವರು, ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ‘ಕೆಜಿಎಫ್‌ 2’ ಚಿತ್ರದಲ್ಲಿ ಅಧೀರ ಪಾತ್ರ ಮಾಡಿದ್ದ ಸಂಜಯ್ ದತ್, ಇಲ್ಲಿ ಮತ್ತೊಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

    ಈ ಸಿನಿಮಾವು 1970ರಲ್ಲಿ ನಡೆದ ನೈಜ ಘಟನೆಗಳಿಂದ ಸ್ಫೂರ್ತಿ ಪಡೆದ ಕಥೆಯನ್ನು ಹೊಂದಿದೆ. ಬೆಂಗಳೂರಿನಲ್ಲಿ ನಡೆದ ಈ ಕಥೆ ರೋಚಕವಾಗಿದ್ದು, ನೈಜವಾಗಿ ತೆರೆಮೇಲೆ ತರುವ ಪ್ರಯತ್ನ ಮಾಡಲಿದ್ದೇನೆ. ಸದ್ಯ ‘ಕೆಡಿ’ (KD) ಎಂದು ಟೈಟಲ್ ಅನೌನ್ಸ್ ಮಾಡಲಾಗಿದೆ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾ. ಹಾಗಾಗಿ, ಪರಭಾಷೆಯ ಕಲಾವಿದರು ಕೂಡ ಇರಲಿದ್ದಾರೆ. ಪಾತ್ರಕ್ಕೆ ಹೊಂದಿಕೆ ಆಗುವುದರಿಂದ ಅವರನ್ನು ಆಯ್ಕೆ ಮಾಡಲಿದ್ದೇವೆ. ಆ ಬಗ್ಗೆ ಮುಂದಿನ ದಿನಗಳಲ್ಲಿ ಅವರೆಲ್ಲ ಯಾರು ಎಂಬುದನ್ನು ಹೇಳಲಿದ್ದೇವೆ ಎಂದು ನಿರ್ದೇಶಕ ಪ್ರೇಮ್ ಹೇಳಿದರು. ಇದನ್ನೂ ಓದಿ:ಆಮದು ಮಾಡಿಕೊಂಡ ಧರ್ಮಗಳು ಎಂದು ಚೇತನ್ ಮತ್ತೆ ಕಿಡಿ

    ಮಚ್ಚು ಹಿಡಿದು ಖಡಕ್ ಆಗಿ ಪೋಸ್ ನೀಡಿರುವ ನಟ ಧ್ರುವ ಸರ್ಜಾ, ಪಾತ್ರಕ್ಕಾಗಿ ತುಂಬ ತಯಾರಿ ಮಾಡಿಕೊಂಡಿದ್ದಾರಂತೆ. ಈಗಾಗಲೇ ಅವರು 7 ಕೆಜಿ ತೂಕ ಕಡಿಮೆ ಮಾಡಿಕೊಂಡಿದ್ದಾರೆ. ಧ್ರುವ ರೆಟ್ರೋ ಶೈಲಿ ಉಡುಪಿನಲ್ಲಿ ಕಾಣಿಸಿಕೊಂಡಿದ್ದು, ಇದೊಂದು ಮಾಸ್ ಆಕ್ಷನ್ ಥ್ರಿಲ್ಲರ್ ಕಥೆಯನ್ನು ಹೊಂದಿದೆ. ಈ ಸಿನಿಮಾದಲ್ಲಿ ಕಾಳಿದಾಸ ಎಂಬ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಪರಭಾಷೆಯ ಪತ್ರಕರ್ತರ ಎದುರು ತಮ್ಮ ಪರಿಚಯ ಮಾಡಿಕೊಂಡ ಧ್ರುವ, ಇದು ನಾನಿನ್ನೂ ಕೇವಲ 5 ಸಿನಿಮಾ ಮಾಡಿರುವ ನಟ. ಇದು ನನ್ನ 6ನೇ ಸಿನಿಮಾ. ನಾನು ಹುಟ್ಟಿದ್ದು, ಆರನೇ ತಾರೀಖು. ನನ್ನ ಲಕ್ಕಿ ನಂಬರ್ ಆರು. ಹಾಗೆಯೇ  ಇದು ನನ್ನ 6ನೇ ಚಿತ್ರ. ಇದಿನ್ನೂ ಆರಂಭ ಅಷ್ಟೇ. ಚಿತ್ರೀಕರಣಕ್ಕಾಗಿ ಕಾಯುತ್ತಿದ್ದೇನೆ’ ಎಂದು ಧ್ರುವ ಸರ್ಜಾ ಹೇಳಿದರು.

    ಕೆ ಡಿ ಚಿತ್ರ ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ತಮಿಳು ಟೈಟಲ್ ಟೀಸರ್‌ಗೆ ವಿಜಯ್‌ ಸೇತುಪತಿ ಧ್ವನಿ ನೀಡಿದ್ದಾರೆ. ಮಲಯಾಳಂ ಟೈಟಲ್ ಟೀಸರ್‌ಗೆ  ಮೋಹನ್‌ಲಾಲ್‌ ಹಾಗೂ ಹಿಂದಿ ಟೈಟಲ್ ಟೀಸರ್‌ಗೆ ಸಂಜಯ್‌ ದತ್‌ (Sanjay Dutt) ಅವರು ಧ್ವನಿ ನೀಡಿದ್ದಾರೆ. ಕೆವಿನ್‌ ಪ್ರೊಡಕ್ಷನ್‌ನಲ್ಲಿ ಮೂಡಿಬರುತ್ತಿರುವ ನಾಲ್ಕನೇ ಸಿನಿಮಾ ಇದಾಗಿದೆ. ಪ್ರೇಮ್ ಅವರ 9ನೇ ಸಿನಿಮಾ ಈ ಕೆಡಿ. ಈ ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ನೀಡಲಿದ್ದು, ವಿಕ್ರಾಂತ್ ರೋಣ ಖ್ಯಾತಿಯ ವಿಲಿಯಂ ಡೇವಿಡ್‌ ಛಾಯಾಗ್ರಹಣ ಮಾಡಲಿದ್ದಾರೆ. ಬಹುತೇಕ ಸೆಟ್‌ನಲ್ಲಿ ಚಿತ್ರೀಕರಣ ನಡೆಯಲಿದೆ. ಅದಕ್ಕಾಗಿ ದೊಡ್ಡ ದೊಡ್ಡ ಸೆಟ್‌ಗಳನ್ನು ಹಾಕಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಜೋಗಿ ಪ್ರೇಮ್- ಧ್ರುವ ಸರ್ಜಾ ಚಿತ್ರದ ಟೈಟಲ್ ಟೀಸರ್ ಕಾರ್ಯಕ್ರಮಕ್ಕೆ ಮೋಹನ್ ಲಾಲ್

    ಜೋಗಿ ಪ್ರೇಮ್- ಧ್ರುವ ಸರ್ಜಾ ಚಿತ್ರದ ಟೈಟಲ್ ಟೀಸರ್ ಕಾರ್ಯಕ್ರಮಕ್ಕೆ ಮೋಹನ್ ಲಾಲ್

    ಜೋಗಿ ಪ್ರೇಮ್ ಮತ್ತು ಧ್ರುವ ಸರ್ಜಾ (Dhruva Sarja) ಕಾಂಬಿನೇಷನ್ ನ ಹೊಸ ಸಿನಿಮಾದ ಟೈಟಲ್ ಟೀಸರ್ (Title Teaser) ಬಿಡುಗಡೆ ಕಾರ್ಯಕ್ರಮವನ್ನು ಇದೇ ಅಕ್ಟೋಬರ್ 20 ರಂದು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಮೋಹನ್ ಲಾಲ್ (Mohanlal) ಬರಲಿದ್ದಾರೆ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ನಾನಾ ಸಿನಿಮಾ ರಂಗದ ಕಲಾವಿದರು ಕೂಡ ಕಾರ್ಯಕ್ರಮದಲ್ಲಿ ಹಾಜರಿರಲಿದ್ದಾರೆ.

    ಮೋಹನ್ ಲಾಲ್ ಅವರನ್ನು ಭೇಟಿ ಮಾಡಿರುವ ಫೋಟೋವನ್ನು ಪ್ರೇಮ್ (Jogi Prem) ಹಂಚಿಕೊಂಡಿದ್ದು, ಇದೊಂದು ಅಪರೂಪದ ಭೇಟಿ ಆಗಿತ್ತು ಎಂದು ಬರೆದುಕೊಂಡಿದ್ದಾರೆ. ಇಂತಹ ಮಹಾನ್ ಕಲಾವಿದನನ್ನು ಭೇಟಿ ಮಾಡಿದ್ದು ಸಂಭ್ರಮ ತಂದಿದೆ ಎಂದಿರುವ ಪ್ರೇಮ್, ಅಕ್ಟೋಬರ್ 20ರ ಕಾರ್ಯಕ್ರಮಕ್ಕೆ ತಮ್ಮೆಲ್ಲರ ಸಹಕಾರವಿರಲಿ ಎಂದೂ ಅವರು ಕೋರಿದ್ದಾರೆ. ಇದನ್ನೂ ಓದಿ:ಅಮ್ಜಾದ್ ಖಾನ್ ಧರ್ಮಕ್ಕೆ ಮತಾಂತರ ಆಗಿ ಮದುವೆ ಆಗಿರುವೆ: ನಟಿ ದಿವ್ಯಾ ಶ್ರೀಧರ್

    ಕೆವಿಎನ್ (KVN) ಪ್ರೊಡಕ್ಷನ್ ಲಾಂಛನದಲ್ಲಿ ಈ ಸಿನಿಮಾ ಮೂಡಿ ಬರಲಿದ್ದು, ಈಗಾಗಲೇ ಚಿತ್ರಕ್ಕೆ ಮುಹೂರ್ತ ಮಾಡಲಾಗಿದೆ. ಮೈಸೂರಿನಲ್ಲಿ ಸಿನಿಮಾದ ಮುಹೂರ್ತವಾಗಿದ್ದು, ಅರ್ಜುನ್ ಜನ್ಯ ಈ ಸಿನಿಮಾಗಾಗಿ ಸಂಗೀತ ಸಂಯೋಜನೆಯ ಕೆಲಸವನ್ನೂ ಆರಂಭಿಸಿದ್ದಾರೆ. ಈ ಸಿನಿಮಾದ ಹಾಡುಗಳು ಈಗಾಗಲೇ ದಾಖಲೆಯ ಮೊತ್ತಕ್ಕೆ ಮಾರಾಟವಾಗಿದೆ ಎನ್ನುವ ಮಾತೂ ಇದೆ.

    Live Tv
    [brid partner=56869869 player=32851 video=960834 autoplay=true]

  • ಧ್ರುವ ಸರ್ಜಾ  ಜೊತೆ ಸ್ಕ್ರೀನ್ ಶೇರ್ ಮಾಡ್ತಾರಾ ರವಿಮಾಮನ ಬೆಡಗಿ ಶಿಲ್ಪಾ ಶೆಟ್ಟಿ

    ಧ್ರುವ ಸರ್ಜಾ ಜೊತೆ ಸ್ಕ್ರೀನ್ ಶೇರ್ ಮಾಡ್ತಾರಾ ರವಿಮಾಮನ ಬೆಡಗಿ ಶಿಲ್ಪಾ ಶೆಟ್ಟಿ

    ವಿಚಂದ್ರನ್ ಜೊತೆ ‘ರಾಜಾ ರಾಜಾ..’ ಹಾಡಿಗೆ ಹೆಜ್ಜೆ ಹಾಕಿರುವ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) ಮತ್ತೆ ಕನ್ನಡ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ಮಾತು ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ. ಗುಳಿಕೆನ್ನೆ ಹುಡುಗಿಯ ಜೊತೆ ಈಗಾಗಲೇ ಒಂದು ಹಂತದ ಮಾತುಕತೆ ಕೂಡ ನಡೆದಿದ್ದು, ಅವರು ಕೂಡ ಸ್ಯಾಂಡಲ್ ವುಡ್ ಗೆ ಮರಳುವ ಇಂಗಿತವನ್ನು ವ್ಯಕ್ತ ಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅಂದುಕೊಂಡಂತೆ ನಡೆದರೆ, ಧ್ರುವ ಸರ್ಜಾ (Dhruv Sarja)  ನಟನೆಯ ಹೊಸ ಸಿನಿಮಾದಲ್ಲಿ ಶಿಲ್ಪಾ ಕಾಣಿಸಿಕೊಳ್ಳಲಿದ್ದಾರೆ.

    ಈಗಾಗಲೇ ಜೋಗಿ ಪ್ರೇಮ್ (Jogi Prem) ಮತ್ತು ಧ್ರುವ ಕಾಂಬಿನೇಷನ್ ನ ಹೊಸ ಸಿನಿಮಾದ ಘೋಷಣೆ ಆಗಿದೆ. ಏ.24 ರಂದು ಮೈಸೂರಿನ ಚಾಮುಂಡೇಶ್ವರ ದೇವಸ್ಥಾನದಲ್ಲಿ ಚಿತ್ರಕ್ಕೆ ಮುಹೂರ್ತ ಕೂಡ ನಡೆದಿದೆ. ಅಲ್ಲಿಂದ ಈ ಸಿನಿಮಾದ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಇದೀಗ ಶಿಲ್ಪಾ ಶೆಟ್ಟಿ ಈ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿದೆ. ಯಾವ ಪಾತ್ರ, ಏನು ಅನ್ನುವ ವಿಚಾರ ಸದ್ಯಕ್ಕೆ ಸಸ್ಪೆನ್ಸ್. ಆದರೆ, ಸ್ಯಾಂಡಲ್ ವುಡ್ ಗೆ (Sandalwood)ಅವರು ಮರಳುವುದು ಪಕ್ಕಾ ಎಂದೇ ಹೇಳಲಾಗುತ್ತಿದೆ. ಇದನ್ನೂ ಓದಿ:ಟಿವಿ ಬಿಗ್ ಬಾಸ್ ಸೀಸನ್ 9ಕ್ಕೆ ಭರ್ಜರಿ ತಯಾರಿ: ಹೇಗಿದೆ ಗೊತ್ತಾ ದೊಡ್ಮನೆ?

    ಕೆಲವ ದಿನಗಳ ಹಿಂದಿಯಷ್ಟೇ ಬಾಲಿವುಡ್ ನ ಮತ್ತೋರ್ವ ಖ್ಯಾತ ನಟ ಈ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಡಿತ್ತು. ಈಗಾಗಲೇ ಕೆಜಿಎಫ್ ಸಿನಿಮಾದಲ್ಲಿ ಅಧೀರನಾಗಿ ಅಬ್ಬರಿಸಿರುವ ಸಂಜಯ್ ದತ್ (Sanjay Dutt), ಈ ಸಿನಿಮಾದಲ್ಲೂ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಸಿನಿಮಾ ತಂಡದಿಂದ ಈ ಕುರಿತು ಯಾವುದೇ ಮಾಹಿತಿ ಹೊರ ಬಿದ್ದಿಲ್ಲ. ಶಿಲ್ಪಾ ಶೆಟ್ಟಿ ಮತ್ತು ಸಂಜಯ್ ದತ್ ಕುರಿತು ಅಧಿಕೃತವಾಗಿ ಸಿನಿಮಾ ತಂಡವೇ ಹೇಳಬೇಕಿದೆ.

    ಸಿನಿಮಾ ಶೂಟಿಂಗ್ ಗಾಗಿ ಪ್ರೇಮ್ ಈಗಾಗಲೇ ಎಲ್ಲ ಸಿದ್ಧತೆಯನ್ನೂ ಮಾಡಿಕೊಂಡಿದ್ದಾರೆ. ಧ್ರುವ ಮಾರ್ಟಿನ್ ಸಿನಿಮಾದ ಕೊನೆ ಹಂತದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಈ ಸಿನಿಮಾದ ಶೂಟಿಂಗ್ ಮುಗಿಯುತ್ತಿದ್ದಂತೆಯೇ ಪ್ರೇಮ್ ಅವರು ತಮ್ಮ ಹೊಸ ಸಿನಿಮಾದ ಚಿತ್ರೀಕರಣಕ್ಕೆ ಪ್ಲ್ಯಾನ್ ಮಾಡಲಿದ್ದಾರೆ. ಆದಷ್ಟು ಬೇಗ ಸಿನಿಮಾ ಶುರುವಾಗಲಿದೆಯಂತೆ.

    Live Tv
    [brid partner=56869869 player=32851 video=960834 autoplay=true]

  • ರಕ್ಷಿತಾ ಪ್ರೇಮ್ ಸಹೋದರನ ಮತ್ತೊಂದು ಸಿನಿಮಾ: ಪ್ರೇಮ್ ಶಿಷ್ಯನೇ ನಿರ್ದೇಶಕ

    ರಕ್ಷಿತಾ ಪ್ರೇಮ್ ಸಹೋದರನ ಮತ್ತೊಂದು ಸಿನಿಮಾ: ಪ್ರೇಮ್ ಶಿಷ್ಯನೇ ನಿರ್ದೇಶಕ

    ಕ್ ಲವ್ ಯಾ’ ಮೂಲಕ ಸ್ಯಾಂಡಲ್ ವುಡ್ ಅಂಗಳಕ್ಕೆ ಗ್ರ್ಯಾಂಡ್  ಎಂಟ್ರಿ ಕೊಟ್ಟ ನಟಿ ರಕ್ಷಿತಾ (Rakshita Prem) ಸಹೋದರ ರಾಣಾ ಮೊದಲ ಸಿನಿಮಾದಲ್ಲೇ ಭರವಸೆ ಹುಟ್ಟು ಹಾಕಿದ್ದು ಗೊತ್ತೇ ಇದೆ. ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬಂದ ಲವ್ ಕಹಾನಿಗೆ ಪ್ರೇಕ್ಷಕರು ಮೆಚ್ಚುಗೆ ಮುದ್ರೆ ಜೊತೆಗೆ ರಾಣಾ (Rana) ನಟನೆಯನ್ನು ಮೆಚ್ಚಿ ಕೊಂಡಾಡಿದ್ರು. ನಿರ್ದೇಶಕ ಪ್ರೇಮ್ ಕುಲುಮೆಯಲ್ಲಿ ಪಳಗಿರೋ ರಾಣಾ ಚಂದನವನಕ್ಕೆ ಭರವಸೆಯ ನಟನಾಗೋ ಸಕಲ ಲಕ್ಷಣಗಳನ್ನು ಹೊಂದಿದ್ದಾರೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಇದನ್ನೂ ಓದಿ:ನೆಗೆಟಿವ್ ಕಾಮೆಂಟ್ ಗೆ ಹೆದರಲ್ಲ, ತುಂಬಾ ಜನ ನನ್ನನ್ನು ಪ್ರೀತಿಸ್ತಾರೆ ಎಂದ ಸೋನು ಶ್ರೀನಿವಾಸ್ ಗೌಡ

    ಅನುಭವಿ ಕಲಾವಿದನಂತೆ ಮೊದಲ ಸಿನಿಮಾದಲ್ಲೇ ಮಿಂಚಿ ಚಿತ್ರರಸಿಕರಮನಗೆದ್ದ ರಾಣಾ ಈಗೇನು ಮಾಡ್ತಿದ್ದಾರೆ.? ಮುಂದಿನ ಸಿನಿಮಾ ಯಾವ್ದು..? ಯಾರ ನಿರ್ದೇಶನದಲ್ಲಿ ರಾಣಾ ಮುಂದಿನ ಸಿನಿಮಾ (New Movie) ಮೂಡಿಬರಲಿದೆ ಎಂಬೆಲ್ಲ ಪ್ರಶ್ನೆಗಳು ಮೂಡೋದು ಸಹಜ ಅದಕ್ಕೀಗ ಉತ್ತರ ಸಿಕ್ಕಿದೆ. ಹೌದು, ರಾಣಾ ಮುಂದಿನ ಸಿನಿಮಾ ನಿರ್ದೇಶನ ಮಾಡ್ತಿರೋದು ಯುವ ನಿರ್ದೇಶಕ. ಅದು ಬೇರೆ ಯಾರೂ ಅಲ್ಲ ಪ್ರೇಮ್ ನೆಚ್ಚಿನ ಶಿಷ್ಯ. ನಿರ್ದೇಶಕ ಪ್ರೇಮ್ (Jogi Prem) ಜೊತೆಗೆ ಹಲವು ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ದುಡಿದ ಅನುಭವ ಇರುವ ವಿಜಯ್ ಈಶ್ವರ್ (Vijay Eshwar) ಸ್ವತಂತ್ರ ನಿರ್ದೇಶಕನಾಗಿ ಬಡ್ತಿ ಪಡೆಯಲು ಸಜ್ಜಾಗಿದ್ದು ಮೊದಲ ಸಿನಿಮಾವನ್ನು ರಾಣಾಗೆ ಡೈರೆಕ್ಟ್ ಮಾಡುತ್ತಿದ್ದಾರೆ.

    ವಿಜಯ್ ಈಶ್ವರ್ ಮಾಡಿಕೊಂಡ ಸಬ್ಜೆಕ್ಟ್ ರಾಣಾಗೂ ಇಂಪ್ರೆಸ್ ಮಾಡಿದ್ದು, ವಿಜಯ್ ಜೊತೆ ಕೈ ಜೋಡಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಪ್ರೇಮ್, ರಕ್ಷಿತಾ ಕೂಡ ವಿಜಯ್ ಈಶ್ವರ್ ಹೇಳಿದ ಕಥೆ ಕೇಳಿ ಥ್ರಿಲ್ ಆಗಿದ್ದಾರಂತೆ. ಯಾವ ರೀತಿಯ ಸಬ್ಜೆಕ್ಟ್, ರಾಣಾ ಲುಕ್ ಹೇಗಿರುತ್ತೆ, ಸಿನಿಮಾದ ತಯಾರಿ ಯಾವ ಹಂತದಲ್ಲಿದೆ ಇದೆಲ್ಲದಕ್ಕೂ ಸದ್ಯದಲ್ಲೇ ಉತ್ತರ ಸಿಗಲಿದೆ.

    Live Tv
    [brid partner=56869869 player=32851 video=960834 autoplay=true]

  • ನಿರ್ಮಾಪಕ ಕೆ.ಮಂಜು ಪುತ್ರನ ‘ರಾಣ’ ಸಿನಿಮಾದ ಹಾಡು ರಿಲೀಸ್ ಮಾಡಿದ ಜೋಗಿ ಪ್ರೇಮ್

    ನಿರ್ಮಾಪಕ ಕೆ.ಮಂಜು ಪುತ್ರನ ‘ರಾಣ’ ಸಿನಿಮಾದ ಹಾಡು ರಿಲೀಸ್ ಮಾಡಿದ ಜೋಗಿ ಪ್ರೇಮ್

    ನಿರ್ಮಾಪಕ ಕೆ.ಮಂಜು (, K. Manju) ಪುತ್ರ ಶ್ರೇಯಸ್ ನಾಯಕನಾಗಿ ನಟಿಸಿರುವ , ನಂದಕಿಶೋರ್ ನಿರ್ದೇಶನದ “ರಾಣ” (Rana) ಚಿತ್ರದ “ಗಲ್ಲಿ ಬಾಯ್” ಹಾಡನ್ನು ಜೋಗಿ ಪ್ರೇಮ್ (Jogi Prem) ಬಿಡುಗಡೆ ಮಾಡಿದರು. ಚಂದನ್ ಶೆಟ್ಟಿ ಬರೆದು ಸಂಗೀತ ನೀಡಿರುವ ಈ ಹಾಡನ್ನು ಅನಿರುದ್ಧ್ ಶಾಸ್ತ್ರಿ ಹಾಗೂ ಅದಿತಿ ಸಾಗರ್ ಹಾಡಿದ್ದಾರೆ. ಆನಂದ್ ಆಡಿಯೋ ಮೂಲಕ ಈ ಹಾಡು ಬಿಡುಗಡೆಯಾಗಿದೆ. ಈ ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ. ಶ್ರೇಯಸ್ ಹಾಗೂ ರೀಷ್ಮಾ ನಾಣಯ್ಯ ಇಬ್ಬರೂ ಚೆನ್ನಾಗಿ ನೃತ್ಯ ಮಾಡಿದ್ದಾರೆ. ಚಂದನ್ ಶೆಟ್ಟಿ ಸಂಗೀತ ಸುಂದರವಾಗಿದೆ. ಅನಿರುದ್ಧ್ ಶಾಸ್ತ್ರಿ ಹಾಗೂ ಅದಿತಿ ಸಾಗರ್ ಗಾಯನ ಸುಮಧುರವಾಗಿದೆ. ನಂದ ಕಿಶೋರ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರ ಭರ್ಜರಿ ಯಶಸ್ಸು ಕಾಣಲಿ ಎಂದು ಜೋಗಿ ಪ್ರೇಮ್ ಹಾರೈಸಿದರು.

    ಮೊದಲು ನಾನು, ನನ್ನ ಸ್ಪೂರ್ತಿಯಾದ ವಿಷ್ಣುವರ್ಧನ್ ಹಾಗೂ ಅಪ್ಪು ಅವರನ್ನು ನೆನಪಿಸಿಕೊಳ್ಳುತ್ತೇನೆ. ಚಂದನ್ ಶೆಟ್ಟಿ  ಎಲ್ಲರ ಮನಸಿಗೆ ಹತ್ತಿರವಾಗುವಂತಹ ಸಾಹಿತ್ಯ ಬರೆದಿದ್ದಾರೆ. ಅಷ್ಟೇ ಚೆನ್ನಾಗಿ ಸಂಗೀತ ನೀಡಿದ್ದಾರೆ. ಅನಿರುಧ್ದ್ ಶಾಸ್ತ್ರಿ ಹಾಗೂ ಅದಿತಿ ಸಾಗರ್ ಅವರ ಅದ್ಭುತ ಗಾಯನ ಹಾಡಿನ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. ರೀಷ್ಮಾ ನಾಣಯ್ಯ ಒಳ್ಳೆಯ ನೃತ್ಯಗಾರ್ತಿ.  ನೃತ್ಯ ನಿರ್ದೇಶಕ ಇಮ್ರಾನ್ ಮಾಸ್ಟರ್ ಹಾಗೂ ಛಾಯಾಗ್ರಾಹಕ ಶೇಖರ್ ಚಂದ್ರ ಅವರ ಕಾರ್ಯವೈಖರಿ ಚೆನ್ನಾಗಿದೆ. ನಾನು ಈ ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡು ಅಭಿನಯಿಸಿದ್ದೇನೆ. ನವೆಂಬರ್ 11 ರಂದು ಚಿತ್ರ ತೆರೆಗೆ ಬರಲಿದೆ.‌ ಹಾಡು ಬಿಡುಗಡೆ ಮಾಡಿಕೊಟ್ಟ ಪ್ರೇಮ್ ಅವರಿಗೆ ಹಾಗೂ ಅವಕಾಶ ನೀಡಿರುವ ನಿರ್ಮಾಪಕ ಪುರುಷೋತ್ತಮ್ ಹಾಗೂ ನಿರ್ದೇಶಕ ನಂದಕಿಶೋರ್ ಅವರಿಗೆ ಧನ್ಯವಾದ ಎಂದರು ನಾಯಕ ಶ್ರೇಯಸ್ (Shreyash). ಇದನ್ನೂ ಓದಿ:ಯೂಟ್ಯೂಬ್‌ನಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ ಉಪ್ಪಿ- ಕಿಚ್ಚ ನಟನೆಯ ‘ಕಬ್ಜ’ ಟೀಸರ್

    ಚಿತ್ರ ಚೆನ್ನಾಗಿ ಬಂದಿದೆ. ಈ ಹಾಡಂತೂ ಸಖತ್‌ ಆಗಿದೆ. ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ (Chandan Shetty)  ಅವರು ಬರೆದಿರುವ ಈ ಹಾಡು ಎಲ್ಲರ ಗಮನ ಸೆಳೆಯುತ್ತಿದೆ ಎಂದರು ನಾಯಕಿ ರೀಷ್ಮಾ ನಾಣಯ್ಯ. ಗುಜ್ಜಲ್ ಪುರುಷೋತ್ತಮ್ ಅವರು ಒಂದು ಸಿನಿಮಾ ಮಾಡುತ್ತಿದ್ದೇನೆ. ನೀವು ಜೊತೆಗಿರಬೇಕು ಎಂದರು.  ನನ್ನ ಮಗನೇ ಹೀರೋ ಅಂತ ತಿಳಿದ ಮೇಲೆ, ನಾನು ಅವನಿಗೆ ಚಿತ್ರ ಚೆನ್ನಾಗಿ ಬರಲು ನಿರ್ದೇಶಕರು ಕಾರಣ ಅವರು ಹೇಳಿದ ಹಾಗೆ ಕೇಳಬೇಕು ಅಂತ ಹೇಳಿದೆ. “ರಾಣ” ಒಂದೊಳ್ಳೆಯ ಕೌಟುಂಬಿಕ ಚಿತ್ರ.  ಹಳ್ಳಿಯಿಂದ ನಗರಕ್ಕೆ ಬಂದು ನೆಲೆಸಿರುವವರ ಕುರಿತಾದ ಕಥೆಯಿದೆ. ನಂದಕಿಶೋರ್ (Nandakishor) ನಿರ್ದೇಶನ, ಚಂದನ್ ಶೆಟ್ಟಿ ಸಂಗೀತ ನಿರ್ದೇಶನ ಸೇರಿದಂತೆ ಎಲ್ಲರ ಕೆಲಸ ಚೆನ್ನಾಗಿದೆ. ನವೆಂಬರ್ 11ಕ್ಕೆ ಚಿತ್ರ ತೆರೆಗೆ ಬರುತ್ತಿದೆ ಎಂದು ತಿಳಿಸಿದ ಕೆ.ಮಂಜು, ಹಾಡು ಬಿಡುಗಡೆ ಮಾಡಲು ದೂರದ ಮುಂಬೈನಿಂದ ಬಂದ ಪ್ರೇಮ್ ಅವರಿಗೆ ಧನ್ಯವಾದ ಹೇಳಿದರು.

    ಹಾಡು (Song) ಬಿಡುಗಡೆ ಮಾಡಿದ ಪ್ರೇಮ್ ಸರ್ ಗೆ ಧನ್ಯವಾದ. ಚಿತ್ರ ತೆರೆಗೆ ಬರಲು ಸಿದ್ದವಾಗಿದೆ.‌ ನವೆಂಬರ್ 11ರಂದು ಬಿಡುಗಡೆಯಾಗಲಿದೆ. ತಂಡದವರೆಲ್ಲಾ ಸೇರಿ ಉತ್ತಮ ಚಿತ್ರ ಮಾಡಿದ್ದೇವೆ. ಪ್ರೋತ್ಸಾಹ ನೀಡಿ ಎಂದರು ನಿರ್ದೇಶಕ ನಂದಕಿಶೋರ್. ಕೆ.ಮಂಜು ಅವರ ಸಹಕಾರದಿಂದ ಈ ಚಿತ್ರ ನಿರ್ಮಾಣ ಮಾಡಿದ್ದೇನೆ. ಇಡೀ ತಂಡಕ್ಕೆ ನನ್ನ ಧನ್ಯವಾದ ಎಂದರು ನಿರ್ಮಾಪಕ ಗುಜ್ಜಲ್ ಪುರುಷೋತ್ತಮ್. ನಂದಕಿಶೋರ್ ನಿರ್ದೇಶನದಲ್ಲಿ ಚಿತ್ರ  ಚೆನ್ನಾಗಿ ಬಂದಿದೆ. ಹಾಡುಗಳು ಸುಂದರವಾಗಿದೆ. ಇದೇ ಮೊದಲ ಬಾರಿಗೆ ನಾನು ಹಿನ್ನೆಲೆ ಸಂಗೀತ ಕೂಡ ನೀಡಿದ್ದೇನೆ ಎಂದು ಸಂಗೀತದ ಬಗ್ಗೆ ಚಂದನ್ ಶೆಟ್ಟಿ ಮಾಹಿತಿ ನೀಡಿದರು. ಚಿತ್ರದಲ್ಲಿ ಅಭಿನಯಿಸಿರುವ ಕೋಟೆ ಪ್ರಭಾಕರ್, ಅಶೋಕ್, ರಘು ಹಾಗೂ ಗಾಯಕ ಅನಿರುದ್ಧ್ ಶಾಸ್ತ್ರಿ ಚಿತ್ರದ ಕುರಿತು ಮಾತನಾಡಿದರು. ರೈತ ಕೇಶವ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

    Live Tv
    [brid partner=56869869 player=32851 video=960834 autoplay=true]

  • ‘ಕಾಳಿ’ ಟೈಟಲ್ ಧ್ರುವ ಸರ್ಜಾಗಾ? ಅಥವಾ ಅಭಿಷೇಕ್ ಅಂಬರೀಶ್ ಗಾ?

    ‘ಕಾಳಿ’ ಟೈಟಲ್ ಧ್ರುವ ಸರ್ಜಾಗಾ? ಅಥವಾ ಅಭಿಷೇಕ್ ಅಂಬರೀಶ್ ಗಾ?

    ಜೋಗಿ ಖ್ಯಾತಿಯ ಪ್ರೇಮ್ ಮತ್ತು ಹೆಬ್ಬಲಿ ಚಿತ್ರ ಖ್ಯಾತಿಯ ಕೃಷ್ಣ ಹೊಸ ಸಿನಿಮಾ ಮಾಡಲು ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ. ಪ್ರೇಮ್ ಅವರು ಧ್ರುವ ಸರ್ಜಾಗಾಗಿ ಸಿನಿಮಾ ಮಾಡುತ್ತಿದ್ದರೆ, ಕೃಷ್ಣ ಅವರು ಅಭಿಷೇಕ್ ಅಂಬರೀಶ್ ಅವರ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಈ ಇಬ್ಬರೂ ನಿರ್ದೇಶಕರು ತಮ್ಮ ಚಿತ್ರಕ್ಕೆ ಒಂದೇ ಟೈಟಲ್ ಅಂದುಕೊಂಡಿದ್ದು ಅಚ್ಚರಿಗೆ ಕಾರಣವಾಗಿದೆ. ಇದನ್ನೂ ಓದಿ: ಬ್ರ್ಯಾಂಡ್ ಬೆಂಗಳೂರು ಹೆಸರು ಉಳಿಸಿ – ಪ್ರಧಾನಿಗೆ ನಟ ಅನಿರುದ್ಧ್ ಪತ್ರ

    ಪ್ರೇಮ್ ನಿರ್ದೇಶನದ, ಧ್ರುವ ಸರ್ಜಾ ನಟಿಸಲಿರುವ ಹೊಸ ಚಿತ್ರದ ಮುಹೂರ್ತ ಕೆಲ ದಿನಗಳ ಹಿಂದೆಯಷ್ಟೇ ಮೈಸೂರಿನಲ್ಲಿ ನಡೆದಿದೆ. ಕೃಷ್ಣ ಅವರ ಚಿತ್ರ ಇನ್ನಷ್ಟೇ ಶುರುವಾಗಬೇಕಿದೆ. ಈ ಎರಡೂ ಚಿತ್ರಕ್ಕೆ ಕಾಳಿ ಎಂದು ಹೆಸರಿಡಲು ನಿರ್ದೇಶಕರು ಆಯ್ಕೆ ಮಾಡಿಕೊಂಡಿದ್ದರಂತೆ. ಆದರೆ, ಈ ಕಾಳಿ ಟೈಟಲ್ ಅಂತಿಮವಾಗಿ ಯಾರಿಗೆ ಸಿಗಲಿದೆ ಎನ್ನುವುದೇ ಸದ್ಯಕ್ಕಿರುವ ಕುತೂಹಲ. ಇದನ್ನೂ ಓದಿ: ಚೇತನಾ ರಾಜ್ ಸಾವಿನ ಬೆನ್ನಲ್ಲೇ ಬಾಡಿ ಶೇಮಿಂಗ್ ಬಗ್ಗೆ ವಿನಯಾ ಪ್ರಸಾದ್ ಪುತ್ರಿ ಖಡಕ್ ಮಾತು

    ಈಗಾಗಲೇ ತಮ್ಮ ಚಿತ್ರಕ್ಕೆ ಕಾಳಿ ಎಂದು ಟೈಟಲ್ ಇಟ್ಟಿರುವುದಾಗಿ ಆಪ್ತರ ಬಳಿ ಕೃಷ್ಣ ಅವರು ಹೇಳಿಕೊಂಡಿದ್ದಾರೆ. ಆದರೆ, ಅವರು ಅಧಿಕೃತವಾಗಿಯೂ ಈ ವಿಷಯವನ್ನೂ ಎಲ್ಲಿಯೂ ಹೇಳಿಕೊಂಡಿಲ್ಲ. ಮತ್ತು ಘೋಷಣೆ ಕೂಡ ಮಾಡಿಲ್ಲ. ಹಾಗಾಗಿ ಪ್ರೇಮ್ ಅವರಿಗೆ ಈ ಟೈಟಲ್ ಸಿಗಬಹುದಾ ಎನ್ನುವ ಪ್ರಶ್ನೆಗೂ ಸ್ಪಷ್ಟ ಉತ್ತರವಿಲ್ಲ. ಇದನ್ನೂ ಓದಿ: ಮುನಿಸು ಮರೆತು ಮತ್ತೆ ಒಂದಾದ್ರು ಕಿಯಾರಾ- ಸಿದ್ಧಾರ್ಥ್ ಮಲ್ಹೋತ್ರಾ

    ಮೂಲಗಳ ಪ್ರಕಾರ ಈಗಾಗಲೇ ಕೃಷ್ಣ ಅವರ ಬಳಿಯೇ ಕಾಳಿ ಟೈಟಲ್ ಇದೆಯಂತೆ. ಪ್ರೇಮ್ ತಂಡವು ಈ ಟೈಟಲ್ ಅನ್ನು ಕೊಡುವಂತೆ ಮನವಿ ಮಾಡಿದರೂ, ಅದು ಸಾಧ್ಯವಾಗಿಲ್ಲ ಎನ್ನುವ ಸುದ್ದಿ ಹರಿದಾಡುತ್ತಿದೆ. ಹಾಗಾಗಿ ಮೊದಲ ಬಾರಿಗೆ ಪ್ರೇಮ್ ಅವರಿಗೆ ತಾವು ಅಂದುಕೊಂಡ ಟೈಟಲ್ ಸಿಕ್ಕಿಲ್ಲ ಎನ್ನುವ ನೋವು ಇದೆಯಂತೆ. ಕೃಷ್ಣ ಅವರು ಬರೆದ ಕಥೆಗೆ ಬೇರೆ ಟೈಟಲ್ ಹೊಂದುತ್ತಿದ್ದರೆ, ಬದಲಾಯಿಸಬಹುದು ಎನ್ನುವ ನಿರೀಕ್ಷೆ ಪ್ರೇಮ್ ಅವರದ್ದು. ಇದನ್ನೂ ಓದಿ : ‘ಧಾಕಡ್’ ಸೋಲಿಗೆ ಕಂಗೆಟ್ಟ ಕಂಗನಾ ರಣಾವತ್ : ವೀಕೆಂಡ್ ನಲ್ಲೂ ವೀಕ್ ಕಲೆಕ್ಷನ್

    ಈ ಇಬ್ಬರೂ ನಿರ್ದೇಶಕರು ಕಾಳಿ ಟೈಟಲ್ ಕುರಿತಾಗಿ ಬಹಿರಂಗವಾಗಿ ಎಲ್ಲಿಯೂ ಹೇಳಿಕೆ ನೀಡಿಲ್ಲ. ಟೈಟಲ್ ಕೂಡ ಅನೌನ್ಸ್ ಮಾಡಿಲ್ಲ. ಹಾಗಾಗಿ ಕಾಳಿ ಯಾರಿಗೆ ಒಲಿಯಲಿದ್ದಾಳೆ ಎನ್ನುವ ಕುತೂಹಲವಂತೂ ಗಾಂಧಿನಗರದಲ್ಲಿ ಮೂಡಿದೆ. ಇಬ್ಬರೂ ಕೂತು ಯೋಚಿಸಿ, ಯಾರ ಚಿತ್ರಕ್ಕೆ ಕಾಳಿ ಟೈಟಲ್ ಹೊಂದಿಕೆ ಆಗುತ್ತದೆ ಎನ್ನುವ ತೀರ್ಮಾನಕ್ಕೆ ಬರಬಹುದು.

  • ಜೋಗಿ ಪ್ರೇಮ್ ಸಿನಿಮಾದಲ್ಲಿ ಧ್ರುವ ಸರ್ಜಾ 70ರ ದಶಕದ ರೌಡಿ

    ಜೋಗಿ ಪ್ರೇಮ್ ಸಿನಿಮಾದಲ್ಲಿ ಧ್ರುವ ಸರ್ಜಾ 70ರ ದಶಕದ ರೌಡಿ

    ಜೋಗಿ ಪ್ರೇಮ್ ರೌಡಿಸಂ ಹಿನ್ನೆಲೆಯ ಸಿನಿಮಾ ಕೈಗೆತ್ತಿಕೊಂಡಿದ್ದಾರೆ ಅಂದರೆ, ಅಲ್ಲೊಂದು ಸನ್ಸೇಷನ್ ಇರುತ್ತದೆ. ಜೋಗಿ, ಜೋಗಯ್ಯ, ಕರಿಯಾ ಹೀಗೆ ಸಾಲು ಸಾಲು ರೌಡಿಸಂ ಚಿತ್ರಗಳನ್ನೇ ಪ್ರೇಮ್ ನೀಡಿದ್ದಾರೆ. ಆ ಸಿನಿಮಾಗಳ ಮೂಲಕ ಗೆದ್ದಿದ್ದಾರೆ. ಇದೀಗ ಮತ್ತೆ ಅಂಥದ್ದೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲು ಮುಂದಾಗಿದ್ದಾರೆ. ಇದನ್ನೂ ಓದಿ : ಸ್ಯಾಂಡಲ್‌ವುಡ್‌ ಕ್ವೀನ್ ಚಿತ್ರರಂಗಕ್ಕೆ ಬಂದು ನಿನ್ನೆಗೆ 19 ವರ್ಷ: ಸದ್ಯದಲ್ಲೇ ರೀ ಎಂಟ್ರಿ

    ಜೋಗಿ ಪ್ರೇಮ್ ಮತ್ತು ಧ್ರುವ ಸರ್ಜಾ ಕಾಂಬಿನೇಷನ್ ನ ಹೊಸ ಚಿತ್ರದ ಕಥೆಯೂ ರೌಡಿಸಂ ಹಿನ್ನೆಲೆಯಲ್ಲೇ ಬರೆದದ್ದಾಗಿದೆ. ಅದು 70ರ ದಶಕದಲ್ಲಿನ ಬೆಂಗಳೂರು ರೌಡಿಸಂ ಕಥೆಯನ್ನು ತಮ್ಮ ಹೊಸ ಸಿನಿಮಾಗಾಗಿ ಆಯ್ಕೆ ಮಾಡಿಕೊಂಡಿದ್ದಾರಂತೆ ನಿರ್ದೇಶಕರು. ಈ ಕಥೆಯಲ್ಲಿ ಬರುವ ಬಹುತೇಕ ಪಾತ್ರಗಳು ನೈಜ ಘಟನೆಗಳಿಗೆ ಸಾಕ್ಷಿ ಆಗಿವೆಯಂತೆ. ಇದನ್ನೂ ಓದಿ : ದಕ್ಷಿಣದ ಸಿನಿಮಾ ನೋಡಲ್ಲ: ವಿವಾದಕ್ಕೆ ಕಾರಣವಾದ ಬಾಲಿವುಡ್ ಖ್ಯಾತ ನಟ ನವಾಜುದ್ಧೀನ್ ಸಿದ್ದಿಕಿ

    ಬೆಂಗಳೂರಿನ ಭೂಗತ ಜಗತ್ತಿಗೆ ಅನೇಕ ಕಥೆಗಳನ್ನು ಈಗಾಗಲೇ ಸಿನಿಮಾ ಮಾಡಲಾಗಿದೆ. ಭೂಗತ ದೊರೆಗಳು ಕೂಡ ಸಿನಿಮಾವಾಗಿದ್ದಾರೆ. ಹಾಗಾಗಿ ಇನ್ನ್ಯಾವ ಘಟನೆಯನ್ನು ಪ್ರೇಮ್ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನುವ ಕುತೂಹಲ ಸಹಜವಾಗಿಯೇ ಮೂಡಿದೆ. 70 ರ ದಶಕದ ರೌಡಿಸಂ ಅಂದರೆ, ಕೆಲವು ವ್ಯಕ್ತಿಗಳು ನೆನಪಾಗುತ್ತಾರೆ. ಆದರೆ, ಪ್ರೇಮ್ ಅವರೇ ಈ ವಿಷಯವನ್ನು ಬಹಿರಂಗ ಪಡಿಸುವುದು ಉತ್ತಮ. ಇದನ್ನೂ ಓದಿ : ಕರ್ನಾಟಕದಲ್ಲೇ ನಡೆಯಿತು ತಮಿಳು ಸಿನಿಮಾಗೆ ಮುಹೂರ್ತ: ಬೆಂಗಳೂರಿಗೆ ಬಂದಿಳಿದ ತಮಿಳು ನಟ

    ಮೊನ್ನೆಯಷ್ಟೇ ಮೈಸೂರಿನಲ್ಲಿ ಈ ಚಿತ್ರದ ಮುಹೂರ್ತ ನಡೆದಿದೆ. ಮುಂದಿನ ತಿಂಗಳು ಅರಮನೆ ಮುಂದೆ ಅದ್ಧೂರಿ ಕಾರ್ಯಕ್ರಮ ಮಾಡಿ ಟೈಟಲ್ ಲಾಂಚ್ ಮಾಡುತ್ತಾರಂತೆ ನಿರ್ದೇಶಕರು. ಅವತ್ತು ಕೆಲವು ಮಾಹಿತಿಗಳನ್ನು ಅವರು ನೀಡಲಿದ್ದಾರಂತೆ. ಧ್ರುವ ಸರ್ಜಾ ಮಾಡುತ್ತಿರುವ ಪಾತ್ರವು ಬಹುಶಃ ಅಂದೇ ರಿವೀಲ್ ಆಗುವ ಸಾಧ್ಯತೆ ಇದೆ. ಇದನ್ನೂ ಓದಿ : ಮಸಾಜ್ ಪಾರ್ಲರ್ ಹುಡುಗಿ ಪಾತ್ರದಲ್ಲಿ ಅದಿತಿ ಪ್ರಭುದೇವ್

    ಈ ಸಿನಿಮಾಗಾಗಿ ಅನೇಕ ಸೆಟ್ ಗಳನ್ನು ಹಾಕಲಿದ್ದಾರಂತೆ ನಿರ್ಮಾಪಕರು. 70 ರ ದಶಕದ ಬೆಂಗಳೂರನ್ನು ಮರುಸೃಷ್ಟಿ ಮಾಡಲಾಗುತ್ತದೆಯಂತೆ. ಹಾಗಾಗಿ ಸಿನಿಮಾ ಕೊಂಚ ದುಬಾರಿಯೂ ಆಗಲಿದೆ. ಬಜೆಟ್ ಬಗ್ಗೆ ತಲೆಕೆಡಿಸಿಕೊಳ್ಳದೇ ಉತ್ತಮ ಸಿನಿಮಾ ಮಾಡುವುದೇ ಅವರ ಉದ್ದೇಶವಾಗಿದೆಯಂತೆ.