Tag: Jogi

  • ತಿಂಗಳೊಳಗೆ 18 ಕೆಜಿ ತೂಕ ಇಳಿಸಿಕೊಂಡ ಧ್ರುವ ಸರ್ಜಾ: ಆತಂಕ ವ್ಯಕ್ತ ಪಡಿಸಿದ ಫ್ಯಾನ್ಸ್

    ತಿಂಗಳೊಳಗೆ 18 ಕೆಜಿ ತೂಕ ಇಳಿಸಿಕೊಂಡ ಧ್ರುವ ಸರ್ಜಾ: ಆತಂಕ ವ್ಯಕ್ತ ಪಡಿಸಿದ ಫ್ಯಾನ್ಸ್

    ಪೊಗರು ಚಿತ್ರಕ್ಕಾಗಿ ನಟ ಧ್ರುವ ಸರ್ಜಾ ದೇಹದ ತೂಕವನ್ನು ಹೆಚ್ಚಿಸಿಕೊಂಡಿದ್ದಾರೆ. ಪಾತ್ರವೇ ಒಂದು ರೀತಿಯಲ್ಲಿ ಕಟ್ಟುಮಸ್ತಾದ ದೇಹ ಬೇಡುತ್ತಿತ್ತು. ಹಾಗಾಗಿ ಜಿಮ್ ನಲ್ಲಿ ಬೆವರು ಇಳಿಸಿಕೊಂಡು ತೂಕವನ್ನು ಹೆಚ್ಚಿಸಿಕೊಂಡಿದ್ದರು. ಇದೀಗ ಅಚ್ಚರಿ ಎನ್ನುವಂತೆ ಕೇವಲ 23 ದಿನಗಳಲ್ಲಿ 18 ಕೆಜಿ ತೂಕವನ್ನು ಅವರು ಇಳಿಸಿಕೊಂಡಿದ್ದಾರೆ. ಅದು ಜೋಗಿ ಪ್ರೇಮ್ ನಿರ್ದೇಶನದ ‘ಕೆಡಿ’ ಸಿನಿಮಾದ ಪಾತ್ರಕ್ಕಾಗಿ ಅನ್ನುವುದು ವಿಶೇಷ.

    ‘ಕೆಡಿ’ ಸಿನಿಮಾದಲ್ಲಿ ಧ್ರುವ ಸರ್ಜಾ ನಾಯಕನಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ ಕೂಡ ಆ್ಯಕ್ಷನ್ ಪ್ರಧಾನವಾದ ಕಥೆಯನ್ನೇ ಒಳಗೊಂಡಿದೆ. ಆದರೂ, ಧ್ರುವ ತೂಕ ಇಳಿಸಿಕೊಳ್ಳಲೇಬೇಕಾಗಿತ್ತಂತೆ. ನಿರ್ದೇಶಕರು ಹೇಳಿದ ಸಲಹೆ ಮೇರೆಗೆ ಕೇವಲ ಕೆಲವೇ ದಿನಗಳಲ್ಲಿ ಬರೋಬ್ಬರಿ 18 ಕೆಜಿ ತೂಕವನ್ನು ಅವರು ಇಳಿಸಿಕೊಂಡಿದ್ದಾರೆ. ಈ ನಡೆಗೆ ಅಭಿಮಾನಿಗಳು ಆತಂಕ ವ್ಯಕ್ತ ಪಡಿಸಿದ್ದಾರೆ. ಕಡಿಮೆ ಅವಧಿಯಲ್ಲಿ ಈ ಪ್ರಮಾಣದಲ್ಲಿ ತೂಕ ಇಳಿಸಿಕೊಳ್ಳಲು ಸಾಧ್ಯವೇ ಇಲ್ಲ. ಬೇರೆ ಮಾರ್ಗದಿಂದ ಟ್ರೈ ಮಾಡಿದ್ದರೆ ದಯವಿಟ್ಟು ಬಿಡಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಸಿಂಹಪ್ರಿಯ ಮ್ಯಾರೇಜ್: ಜನವರಿ 26ಕ್ಕೆ ಮದುವೆ, 28ಕ್ಕೆ ಆರತಕ್ಷತೆ

    ತೂಕ ಇಳಿಸಿಕೊಳ್ಳುವುದಕ್ಕಾಗಿ ಮಾರುಕಟ್ಟೆಯಲ್ಲಿ ಬಗೆ ಬಗೆಯ ಔಷಧಿಗಳಿವೆ. ಅವುಗಳನ್ನು ಉಪಯೋಗಿಸಿ ಧ್ರುವ ತೂಕ ಇಳಿಸಿದ್ದಾರೆ ಎನ್ನುವುದು ಅವರ ಅಭಿಮಾನಿಗಳ ಅನುಮಾನ. ಅಂತಹ ಔಷಧಿಗಳು ದೇಹಕ್ಕೆ ಬೇರೆ ರೀತಿಯಲ್ಲಿ ಪರಿಣಾಮ ಬೀರುವುದರಿಂದ ಎಂತಹ ಅಪಾಯ ಬೇಕಾದರೂ ಸಂಭವಿಸಬಹುದು. ಹಾಗಾಗಿ, ಸಡನ್ನಾಗಿ ತೂಕ ಇಳಿಸಿಕೊಳ್ಳುವುದಾಗಲಿ, ಹೆಚ್ಚಿಸಿಕೊಳ್ಳುವುದಾಗಲಿ ಮಾಡಬೇಡಿ ಎಂದು ಅನೇಕರು ಸೋಷಿಯಲ್ ಮೀಡಿಯಾ ಮೂಲಕ ಕಾಳಜಿ ವ್ಯಕ್ತ ಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಟ ರಮೇಶ್ ಅರವಿಂದ್ ಬರೆದ ಯಶಸ್ಸಿನ ಕುರಿತಾದ ಪುಸ್ತಕ ಬಿಡುಗಡೆ

    ನಟ ರಮೇಶ್ ಅರವಿಂದ್ ಬರೆದ ಯಶಸ್ಸಿನ ಕುರಿತಾದ ಪುಸ್ತಕ ಬಿಡುಗಡೆ

    ಬೆಂಗಳೂರಿನ ಬಿ. ಪಿ. ವಾಡಿಯಾ ಸಭಾಂಗಣದಲ್ಲಿ ಸಾವಣ್ಣ ಪ್ರಕಾಶನ ಪ್ರಕಟಿಸಿರುವ ನಟ ರಮೇಶ್ ಅರವಿಂದ್ (Ramesh Aravind)  ಅವರ ‘ಪ್ರೀತಿಯಿಂದ ರಮೇಶ್ ಯಶಸ್ಸಿನ ಸರಳ ಸೂತ್ರಗಳು’ ಕೃತಿಯನ್ನು ಹಿರಿಯ ನಟ ಅನಂತ್ ನಾಗ್ (Ananth Nag) ಬಿಡುಗಡೆ ಮಾಡಿದರು. ಇದನ್ನೂ ಓದಿ:ಬಾಲಿವುಡ್‌ನಲ್ಲಿ ರಶ್ಮಿಕಾ ಮಂದಣ್ಣಗೆ ಭರ್ಜರಿ ಡಿಮ್ಯಾಂಡ್

    ಈ ವೇಳೆ ಮಾತನಾಡಿದ ಅವರು, ಬಾಲ್ಯದಲ್ಲಿ ನಮಗೆ ೩೦-೪೦ ಪುಟಗಳ ಸಣ್ಣ ಸಣ್ಣ ಕೈಪಿಡಿಗಳು ಸಿಗುತ್ತಿದ್ದವು. ಮನೆಗೆ ನೆಂಟರು ಬರುವಾಗ ವಿವೇಕಾನಂದ, ಪರಮಹಂಸರ ಕುರಿತ ಕೈಪಿಡಿಗಳನ್ನು ತರುತ್ತಿದ್ದರು. ಆ ಕೈಪಿಡಿಗಳಿಂದ ನಮಗೆ ಧಾರ್ಮಿಕ, ದೇವರ ಬಗ್ಗೆ ಮಾರ್ಗದರ್ಶನ ಸಿಗುತ್ತಿತ್ತು. ರಮೇಶ್ ಅವರ ಕೃತಿ ಕೂಡ ಹೆಚ್ಚು-ಕಡಿಮೆ ಅದೇ ಮಾದರಿಯಲ್ಲಿದೆ. ನೈತಿಕತೆಯ ಬಗ್ಗೆ ಉಪಯುಕ್ತ ತಿಳವಳಿಕೆ ನೀಡುವ ಈ ಪುಸ್ತಕ ಬರೆಯುವ ಮೂಲಕ ರಮೇಶ್ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

    ರಮೇಶ್ ಅರವಿಂದ ಅವರು, ಘಟನೆ, ಸನ್ನಿವೇಶಗಳನ್ನು ನೋಡಿದಾಗ ಅದನ್ನು ತನ್ನ ಹತ್ತಿರದವರ ಜೊತೆ ತಕ್ಷಣವೇ ಹೇಳಿಕೊಳ್ಳಬೇಕು ಎಂದು ಅನಿಸುವುದು ಮಾನವನ ಸಹಜ ಗುಣ. ಮಾತು ಕರಗತವಾಗಿರದಿದ್ದ ಕಾಲಘಟ್ಟದಲ್ಲಿಯೂ ಸಂಜ್ಞೆಗಳ ಮೂಲಕ ತನ್ನವರಿಗೆ ಮಾಹಿತಿಯನ್ನು ಮನುಷ್ಯ ತಿಳಿಸುತ್ತಿದ್ದ. ನಡೆದ ಘಟನೆಯಲ್ಲಿ ತನ್ನ ಪಾತ್ರವಿರದಿದ್ದರೂ ಹೇಳುವ ಸಂದರ್ಭದಲ್ಲಿ ತನ್ನನ್ನು ಸೇರಿಸಿಕೊಂಡು ವಿವರಿಸುತ್ತಿದ್ದ. ಇಂತಹ ಮಾನವ ಸಹಜ ಗುಣದ ಮುಂದುವರಿದ ಭಾಗವೇ ಬರವಣಿಗೆ. ನಾನು ನನ್ನ ಜೀವನದ ಅನುಭವಗಳನ್ನು ಮಕ್ಕಳಿಗೂ ಅರ್ಥವಾಗುವ ರೀತಿಯಲ್ಲಿ ಈ ಕೃತಿಯಲ್ಲಿ ಬರೆಯಲು ಯತ್ನಿಸಿದ್ದೇನೆ ಎಂದರು.

    ಕನ್ನಡಪ್ರಭದ ಪುರವಣಿ ಸಂಪಾದಕ ಗಿರೀಶ್‌ರಾವ್ ಹತ್ವಾರ್ (ಜೋಗಿ) (Jogi) ಮಾತನಾಡಿ, ರಮೇಶ್ ಆವರಿಂದ ಒಂದು ಕೆಟ್ಟ ಮಾತು ಬರಬಹುದು ಎಂದು ಕಳೆದ ೨೫ ವರ್ಷದಿಂದ ಪತ್ರಕರ್ತರಾಗಿ ನಾವು ಕಾಯುತ್ತಿದ್ದೇವೆ.ಆದರೆ ಅವರದ್ದು ಸಕಾರಾತ್ಮಕ ದೃಷ್ಟಿಕೋನ. ಸದಾ ಅಧ್ಯಯನಶೀಲತೆ, ಹುಡುಕಾಟ, ಹೊಸತನದ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಅವರ ಈ ಗುಣ ಈ ಕೃತಿಯಲ್ಲಿ ಬಿಂಬಿತವಾಗಿದೆ ಎಂದು ಹೇಳಿದರು. ಝಿ ಕನ್ನಡದ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು (Raghavendra Hunsur) ವೇದಿಕೆಯಲ್ಲಿದ್ದರು. ಜಮೀಲ್ ಸಾವಣ್ಣ (Jameel) ಪ್ರಾಸ್ತಾವಿಕ ಮಾತು ಆಡಿದರು. ರಂಜನೀಕೀರ್ತಿ ನಿರೂಪಣೆ ಮಾಡಿದರು.

    Live Tv
    [brid partner=56869869 player=32851 video=960834 autoplay=true]

  • ಜೋಗಿ ಪ್ರೇಮ್ ಹೊಸ ಸಿನಿಮಾ ಘೋಷಣೆ : ಧ್ರುವ ಸರ್ಜಾ ಹೀರೋ, ಏ.24 ಮುಹೂರ್ತ

    ಜೋಗಿ ಪ್ರೇಮ್ ಹೊಸ ಸಿನಿಮಾ ಘೋಷಣೆ : ಧ್ರುವ ಸರ್ಜಾ ಹೀರೋ, ಏ.24 ಮುಹೂರ್ತ

    ಮೊನ್ನೆಯಷ್ಟೇ ‘ಏಕ್ ಲವ್ ಯಾ’ ಸಿನಿಮಾವನ್ನು ಅಭಿಮಾನಿಗಳಿಗೆ ಅರ್ಪಿಸಿದ್ದ ನಿರ್ದೇಶಕ ಜೋಗಿ ಪ್ರೇಮ್ ಇದೀಗ ಮತ್ತೊಂದು ಹೊಸ ಸಿನಿಮಾವನ್ನು ಘೋಷಣೆ ಮಾಡಿದ್ದಾರೆ. ಈ ಹಿಂದೆಯೇ ಅವರು ಹೇಳಿದ್ದಂತೆ ಧ್ರುವ ಸರ್ಜಾಗಾಗಿ ಈ ಸಿನಿಮಾವನ್ನು ಅವರು ನಿರ್ದೇಶನ ಮಾಡುತ್ತಿದ್ದು, ಈ ಸಿನಿಮಾದ ಮುಹೂರ್ತ ಇದೇ ಏ.24ರಂದು ಮೈಸೂರಿನಲ್ಲಿ ನಡೆಯಲಿದೆ. ಇದನ್ನೂ ಓದಿ : ಭಾವಿ ಪತಿಯ ತಂದೆ ನಿಧನ: ನಟಿ ಕಾವ್ಯ ಶಾ ಮದುವೆ ಮುಂದೂಡಿಕೆ

    ಅಂದು ಡಾ.ರಾಜ್ ಕುಮಾರ್ ಅವರ ಹುಟ್ಟು ಹಬ್ಬ. ಈ ಸಂದರ್ಭದಲ್ಲಿಯೇ ಪ್ರೇಮ್ ಮೈಸೂರಿನ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಈ ಚಿತ್ರಕ್ಕೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ. ಈ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿದ್ದು ಸದ್ಯ ಚಿತ್ರಕ್ಕೆ ಕೆವಿಎನ್ 4 ಎಂದು ಟೈಟಲ್ ಇಡಲಾಗಿದೆ. ಮುಂದೆ ಈ ಶೀರ್ಷಿಕೆ ಬದಲಾಗಲಿದೆ. ಇದನ್ನೂ ಓದಿ : ನಾನೇಕೆ ಡ್ರಗ್ಸ್ ತಗೆದುಕೊಳ್ಳುತ್ತಿದ್ದೆ? ಅಸಲಿ ಕಾರಣ ಬಿಚ್ಚಿಟ್ಟ ಸಂಜಯ್ ದತ್

    ಮೈಸೂರಿನಲ್ಲಿ ಬೆಳಗ್ಗೆ 9.30ಕ್ಕೆ ಚಾಮುಂಡಿ ಬೆಟ್ಟದಲ್ಲಿ ಮುಹೂರ್ತ ನಡೆಲಿದ್ದು, ನಾಯಕ ಧ್ರುವ ಸರ್ಜಾ ಮತ್ತು ಇತರ ಕಲಾವಿದರು ಹಾಗೂ ಚಿತ್ರತಂಡ ಅಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದೆ. ಅಲ್ಲದೇ, ಸ್ಯಾಂಡಲ್ ವುಡ್ ನ ಕೆಲವು ಸಿಲೆಬ್ರಿಟಿಗಳು ಕೂಡ ಈ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಇದನ್ನೂ ಓದಿ: 29 ದಾಖಲೆಗಳನ್ನು ಬರೆದು ರಾಕೆಟ್ ವೇಗದಲ್ಲಿ ಮುನ್ನುಗ್ತಿದೆ ಕೆಜಿಎಫ್ 2: ದಾಖಲೆಗಳ ಪಟ್ಟಿ ಇಲ್ಲಿದೆ

    ಧ್ರುವ ಮತ್ತು ಪ್ರೇಮ್ ಕಾಂಬಿನೇಷನ್ ನ ಮೊದಲ ಸಿನಿಮಾ ಇದಾಗಿದ್ದು, ಹಾಗಾಗಿಯೇ ಚಿತ್ರಕ್ಕೆ ಅವರು ಯುದ್ದದ ಮುನ್ನುಡಿ ಇಲ್ಲಿಂದ ಆರಂಭ ಎಂಬ ಟ್ಯಾಗ್ ಲೈನ್ ಕೂಡ ಕೊಟ್ಟಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಪ್ರೇಮ್, ‘ಮುಹೂರ್ತಕ್ಕೆ ನೀವೇ ಮುಖ್ಯ ಅತಿಥಿ. ಒಟ್ಟಿಗೆ ಹಬ್ಬ ಮಾಡೋಣ ಬನ್ನಿ’ ಎಂದು ಬರೆದುಕೊಂಡಿದ್ದಾರೆ.