Tag: jogging

  • ಜಾಗಿಂಗ್ ಮಾಡುವಾಗ ಕಾರು ಡಿಕ್ಕಿ – ಟೆಕ್ ಸಿಇಒ ಸಾವು

    ಜಾಗಿಂಗ್ ಮಾಡುವಾಗ ಕಾರು ಡಿಕ್ಕಿ – ಟೆಕ್ ಸಿಇಒ ಸಾವು

    ಮುಂಬೈ: ಜಾಗಿಂಗ್‍ಗೆ (Jogging) ಹೋಗಿದ್ದ ತಂತ್ರಜ್ಞಾನ ಸಂಸ್ಥೆಯೊಂದರ ಸಿಇಓಗೆ (Tech CEO) ಕಾರೊಂದು (Car) ಡಿಕ್ಕಿ ಹೊಡೆದು ಮೃತಪಟ್ಟ ಘಟನೆ ಮುಂಬೈನ (Mumbai) ವರ್ಲಿ ಪ್ರದೇಶದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

    ಮೃತ ಮಹಿಳೆಯನ್ನು ರಾಜಲಕ್ಷ್ಮಿ ರಾಮಕೃಷ್ಣ (42) ಎಂದು ಗುರುತಿಸಲಾಗಿದೆ. ದಾದರ್ ಮಾತುಂಗಾ ಪ್ರದೇಶದ ನಿವಾಸಿಯಾಗಿರುವ ರಾಜಲಕ್ಷ್ಮಿ ತನ್ನ ಪತಿಯೊಂದಿಗೆ ಬೆಳಗ್ಗೆ ಜಾಗಿಂಗ್ ಹೋಗಿದ್ದರು. ಅಲ್ಲಿಂದ ಹಿಂದಿರುಗುವಾಗ ವರ್ಲಿ ಬಾಂದ್ರಾ ಬಳಿ ಈ ಘಟನೆ ಸಂಭವಿಸಿದೆ. ಇದನ್ನೂ ಓದಿ: ಮೋದಿ ಫೋಟೋ ಸ್ಟೇಟಸ್ ಹಾಕಿದ್ದ ಯವಕನಿಗೆ ಹಲ್ಲೆ – ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಕೇಸ್‌

    ಹಿಂಬದಿಯಿಂದ ವೇಗವಾಗಿ ಬಂದ ಎಸ್‌ಯುವಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದು, ಚಾಲಕನ ನಿಯಂತ್ರಣ ತಪ್ಪಿ ರಾಜಲಕ್ಷ್ಮಿಗೆ ಡಿಕ್ಕಿ ಹೊಡೆದಿತ್ತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

    ಘಟನೆಗೆ ಸಂಬಂಧಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಚಾಲಕ ಸುಮರ್ ಮರ್ಚೆಂಟ್ (23)ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದ ವೇಳೆ ಕಾರಿನ ಚಾಲಕ ಸುಮೇರ್ ಮರ್ಚೆಂಟ್ ಕೂಡ ಗಾಯಗೊಂಡಿದ್ದಾನೆ. ಕಾರು ಚಾಲಕ ಸುಮೇರ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಾನೆ. ಈತ ಮುಂಬೈನ ತಾರ್ಡಿಯೋ ಪ್ರದೇಶದಲ್ಲಿ ವಾಸವಿದ್ದ. ಘಟನೆಗೆ ಸಂಬಂಧಿಸಿ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದರು. ಇದನ್ನೂ ಓದಿ: ಜಮ್ಮು ಕಾಶ್ಮೀರಕ್ಕೆ ಬಂತು ಮೊದಲ ಎಫ್‌ಡಿಐ – ಶಾಪಿಂಗ್‌ ಮಾಲ್‌ ನಿರ್ಮಾಣಕ್ಕೆ ಭೂಮಿ ಪೂಜೆ

  • ತಂತಿ ಉರುಳಿಗೆ ಸಿಲುಕಿದ್ದ ನವಿಲಿನ ರಕ್ಷಣೆ

    ತಂತಿ ಉರುಳಿಗೆ ಸಿಲುಕಿದ್ದ ನವಿಲಿನ ರಕ್ಷಣೆ

    ಚಿತ್ರದುರ್ಗ: ಬೇಟೆಗಾರರ ತಂತಿ ಉರುಳಿಗೆ ಸಿಲುಕಿ ಪರದಾಡುತ್ತಿದ್ದ ನವಿಲನ್ನು ಚಿತ್ರದುರ್ಗದಲ್ಲಿ ರಕ್ಷಣೆ ಮಾಡಲಾಗಿದೆ.

    ಚಿತ್ರದುರ್ಗ ಹೊರವಲಯದ ಜೋಗಿಮಟ್ಟಿ ಅರಣ್ಯ ಸಮೀಪದ ಜಮೀನಿನಲ್ಲಿ ಬೇಟೆಗಾಗಿ ಹಾಕಿದ್ದ ತಂತಿಯಲ್ಲಿ ಸಿಲುಕಿ ನವಿಲು ಪ್ರಾಣಾಪಾಯದಲ್ಲಿತ್ತು. ನವಿಲು ಒದ್ದಾಡುತ್ತಿರುವುದನ್ನು ವಾಯುವಿಹಾರಿಗಳು ಗನಿಸಿದ್ದಾರೆ. ಅಲ್ಲದೇ ಅದನ್ನು ರಕ್ಷಣೆ ಮಾಡುವ ಮೂಲಕ ನಮ್ಮ ರಾಷ್ಟ್ರೀಯ ಪಕ್ಷಿಯ ಜೀವ ಉಳಿಸಿದ್ದಾರೆ. ಬಳಿಕ ಜೋಗಿಮಟ್ಟಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

    ಜೋಗಿಮಟ್ಟಿ ಅರಣ್ಯ ಪ್ರದೇಶ ನವಿಲುಗಳ ಆವಾಸಸ್ಥಾನವಾಗಿದೆ. ಆದ್ರೆ ಇದೀಗ ನೀರು, ಆಹಾರ ಅರಸಿ ಕಾಡು ಪ್ರಾಣಿ-ಪಕ್ಷಿಗಳು ನಗರ ಪ್ರದೇಶದತ್ತ ಬರುತ್ತಿದ್ದು, ಬೇಟೆಗಾರರ ಬಲೆಗೆ ಸಿಲುಕಿ ಅವನತಿಯತ್ತ ಸಾಗುತ್ತಿದೆ ಅನ್ನೋ ಆರೋಪ ಕೇಳಿಬರುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv