Tag: Jofra Archer

  • ನಿರ್ಣಾಯಕ ಪಂದ್ಯಕ್ಕೂ ಮುನ್ನವೇ ಮುಂಬೈಗೆ ಆಘಾತ – IPLನಿಂದ ವೇಗಿ ಜೋಫ್ರಾ ಆರ್ಚರ್‌ ಔಟ್‌

    ನಿರ್ಣಾಯಕ ಪಂದ್ಯಕ್ಕೂ ಮುನ್ನವೇ ಮುಂಬೈಗೆ ಆಘಾತ – IPLನಿಂದ ವೇಗಿ ಜೋಫ್ರಾ ಆರ್ಚರ್‌ ಔಟ್‌

    ಮುಂಬೈ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ವಿರುದ್ಧ ಮಂಗಳವಾರ (ಮೇ 9) ನಡೆಯಲಿರುವ ನಿರ್ಣಾಯಕ ಪಂದ್ಯಕ್ಕೂ ಮುನ್ನವೇ ಮುಂಬೈ ಇಂಡಿಯನ್ಸ್‌ (Mumbai Indians) ತಂಡಕ್ಕೆ ಆಘಾತ ಎದುರಾಗಿದೆ.

    ಮುಂಬೈ ಇಂಡಿಯನ್ಸ್‌ ತಂಡದ ವೇಗಿ ಜೋಫ್ರಾ ಆರ್ಚರ್‌ (Jofra Archer) ಗಾಯದ ಸಮಸ್ಯೆಗೆ ತುತ್ತಾಗಿ ಟೂರ್ನಿಯಿಂದಲೇ ಹೊರ ಬಿದ್ದಿದ್ದಾರೆ. ಈ ಕುರಿತು ತನ್ನ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಇದನ್ನೂ ಓದಿ: Asia Cup: ಪಾಕ್‌ಗೆ ಕೈತಪ್ಪಿದ ಏಷ್ಯಾಕಪ್‌ ಆತಿಥ್ಯ – ಲಂಕಾದಲ್ಲಿ ಟೂರ್ನಿ ನಡೆಯುವ ಸಾಧ್ಯತೆ

    ಮುಂಬೈ ಪರ 10 ಪಂದ್ಯಗಳನ್ನಾಡಿರುವ ಜೋಫ್ರಾ ಯಶಸ್ವಿ ಬೌಲರ್‌ ಎನಿಸಿಕೊಂಡಿದ್ದರು. ಇದೀಗ ಆರ್‌ಸಿಬಿ ವಿರುದ್ಧ ಪಂದ್ಯಕ್ಕೂ ಮುನ್ನವೇ ಜೋಫ್ರಾ ಔಟ್‌ ಆಗಿದ್ದಾರೆ. ಆರ್ಚರ್‌ ಬದಲಿಗೆ ಇಂಗ್ಲೆಂಡ್‌ನ ಅನುಭವಿ ಆಟಗಾರ ಕ್ರಿಸ್‌ ಜೋರ್ಡಾನ್‌ (Chris Jordan) ಅವರನ್ನ ಮುಂಬೈ ಆಹ್ವಾನಿಸಿದೆ. ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ (ECB) ಜೋಫ್ರಾ ಆರ್ಚರ್‌ ಅವರ ಆರೋಗ್ಯ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದೆ ಎಂದು ಮುಂಬೈ ಇಂಡಿಯನ್ಸ್‌ ತಂಡ ತಿಳಿಸಿದೆ.

    ಮುಂದಿನ ಜೂನ್‌ 16 ರಿಂದ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಆಶಸ್‌ 2023 ಟೂರ್ನಿಗೆ ಇಂಗ್ಲೆಂಡ್‌ ತಂಡಕ್ಕೆ ಮರಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇದನ್ನೂ ಓದಿ: RCBvsMI ಹೈವೋಲ್ಟೇಜ್‌ ಕದನ – ಇಂದು ಸೋತರೆ RCB ಪ್ಲೇ ಆಫ್‌ ತಲುಪೋದು ಕಷ್ಟ

  • ನಾನು ಯಾವಾಗಲೂ ಮುಂಬೈ ಇಂಡಿಯನ್ಸ್‌ಗಾಗಿ ಆಡಲು ಬಯಸುತ್ತೇನೆ: ಜೋಫ್ರಾ ಆರ್ಚರ್

    ನಾನು ಯಾವಾಗಲೂ ಮುಂಬೈ ಇಂಡಿಯನ್ಸ್‌ಗಾಗಿ ಆಡಲು ಬಯಸುತ್ತೇನೆ: ಜೋಫ್ರಾ ಆರ್ಚರ್

    ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್‍ನಲ್ಲಿ (ಐಪಿಎಲ್) ಮುಂಬೈ ಇಂಡಿಯನ್ಸ್ ಅನ್ನು ಪ್ರತಿನಿಧಿಸಲು ನಾನು ಯಾವಾಗಲೂ ಬಯಸುತ್ತೇನೆ. ಅಂತಿಮವಾಗಿ ಮುಂಬೈ ತಂಡದ ಪರ ಆಡಲು ಅವಕಾಶ ಸಿಕ್ಕಿದ್ದಕ್ಕೆ ನನಗೆ ಸಂತೋಷವಾಗಿದೆ ಎಂದು ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಹೇಳಿದ್ದಾರೆ.

    ಬೆಂಗಳೂರಿನಲ್ಲಿ ನಡೆದ ಐಪಿಎಲ್ ಮೆಗಾ ಹರಾಜಿನ 2ನೇ ದಿನದಂದು ಆರ್ಚರ್ ಅವರನ್ನು ಮುಂಬೈ ಇಂಡಿಯನ್ಸ್ 8 ಕೋಟಿ ರೂ.ಗೆ ಖರೀದಿಸಿದೆ. ಆರ್ಚರ್ ಐಪಿಎಲ್ 2022 ಸೀಸನ್‍ಗೆ ಲಭ್ಯವಿರುವುದಿಲ್ಲ. ಆದರೆ ಅವರು ಮುಂದಿನ 2023ರ ಐಪಿಎಲ್ ಆವೃತ್ತಿಯಲ್ಲಿ ಮುಂಬೈ ತಂಡವನ್ನು ಸೇರಿಕೊಳ್ಳಲಿದ್ದಾರೆ. ಇದನ್ನೂ ಓದಿ: RCB ತಂಡದಲ್ಲಿ ಇಬ್ಬರು ಕನ್ನಡಿಗರು – ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

    ಮುಂಬೈ ಇಂಡಿಯನ್ಸ್ ತಂಡವನ್ನು ಸೇರಲು ನಾನು ತುಂಬಾ ಉತ್ಸುಕನಾಗಿದ್ದೇನೆ. ಮುಂಬೈ ತಂಡವು ಯಾವಾಗಲೂ ನನ್ನ ಹೃದಯಕ್ಕೆ ಹತ್ತಿರವಾಗಿರುವ ಫ್ರಾಂಚೈಸಿ ಆಗಿದೆ. ನಾನು ಯಾವಾಗಲೂ ಮುಂಬೈ ತಂಡಕ್ಕಾಗಿ ಆಡಲು ಬಯಸುತ್ತೇನೆ. ಅಂತಿಮವಾಗಿ ಫ್ರಾಂಚೈಸಿಗಾಗಿ ಆಡಲು ಮತ್ತು ಕ್ರಿಕೆಟ್‍ನ ದೊಡ್ಡ ತಾರೆಗಳೊಂದಿಗೆ ಡ್ರೆಸ್ಸಿಂಗ್ ಕೋಣೆಯನ್ನು ಹಂಚಿಕೊಳ್ಳಲು ನನಗೆ ಅವಕಾಶ ಸಿಕ್ಕಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಮುಂಬೈ ತಂಡದೊಂದಿಗಿನ ಹೊಸ ಅಧ್ಯಾಯವನ್ನು ಪ್ರಾರಂಭಿಸಲು ನಿಜವಾಗಿಯೂ ನಾನು ಎದುರು ನೋಡುತ್ತಿದ್ದೇನೆ ಎಂದು ಮುಂಬೈ ಇಂಡಿಯನ್ಸ್‌ನ ಯುಟ್ಯೂಬ್ ಚಾನೆಲ್‍ನಲ್ಲಿ ಪೋಸ್ಟ್ ಮಾಡಿದ ವೀಡಿಯೋದಲ್ಲಿ ಅವರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಐಪಿಎಲ್ ಹರಾಜು ಅಂತ್ಯ – ಫ್ರಾಂಚೈಸ್‍ಗಳಿಗೆ ಬೇಡವಾದ ಸ್ಟಾರ್ ಆಟಗಾರರು

    ಜೋಫ್ರಾ ಆರ್ಚರ್ ಮತ್ತು ಜಸ್ಪ್ರೀತ್ ಬುಮ್ರಾ ಅವರು ಮುಂಬೈ ತಂಡದಲ್ಲಿ ಒಟ್ಟಿಗೆ ಬೌಲಿಂಗ್ ಮಾಡುವುದನ್ನು ನೋಡಲು ಬಯಸುತ್ತಿದೆ ಎಂದು ಮುಂಬೈ ಇಂಡಿಯನ್ಸ್ ಕ್ರಿಕೆಟ್ ಕಾರ್ಯಾಚರಣೆಯ ನಿರ್ದೇಶಕ ಜಹೀರ್ ಖಾನ್ ಹೇಳಿದ್ದಾರೆ.

    ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಸಿಂಗಾಪುರದ ಟಿಮ್ ಡೇವಿಡ್ ಅವರಿಗೆ 8.25 ಕೋಟಿ ರೂ. ಇಶಾನ್ ಕಿಶನ್ ಅವರಿಗೆ 15.25 ಕೋಟಿ ರೂ. ಮತ್ತು ಅರ್ಜುನ್ ತೆಂಡೂಲ್ಕರ್ ಅವರಿಗೆ 30 ಲಕ್ಷ ರೂ. ನೀಡಿ ಅವರನ್ನು ಖರೀದಿಸಿದೆ.

  • ಈ ವರ್ಷ ಆಡದೇ ಇದ್ದರೂ ಆರ್ಚರ್‌ಗೆ ಮುಂಬೈ 8 ಕೋಟಿ ನೀಡಿದ್ದು ಯಾಕೆ: ರಿವೀಲ್‌ ಮಾಡಿದ ಆಕಾಶ್‌ ಅಂಬಾನಿ

    ಈ ವರ್ಷ ಆಡದೇ ಇದ್ದರೂ ಆರ್ಚರ್‌ಗೆ ಮುಂಬೈ 8 ಕೋಟಿ ನೀಡಿದ್ದು ಯಾಕೆ: ರಿವೀಲ್‌ ಮಾಡಿದ ಆಕಾಶ್‌ ಅಂಬಾನಿ

    ಬೆಂಗಳೂರು: ಈ ವರ್ಷ ಐಪಿಎಲ್‌ ಆಡದೇ ಇದ್ದರೂ ಜೋಫ್ರಾ ಆರ್ಚರ್‌ ಅವರನ್ನು ಮುಂಬೈ ಇಂಡಿಯನ್ಸ್‌ 8 ಕೋಟಿ ರೂ. ಖರೀದಿಸಿದ್ದು ಯಾಕೆ ಎಂಬ ಪ್ರಶ್ನೆಗೆ ಮಾಲಕಿ ನೀತಾ ಅಂಬಾನಿ ಪುತ್ರ ಆಕಾಶ್‌ ಅಂಬಾನಿ ತಿಳಿಸಿದ್ದಾರೆ.

    ವರ್ಚುಯಲ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ದಿನದ ಹರಾಜಿನ ನಂತರ ಉಳಿದಿರುವ ವೇಗದ ಬೌಲರ್‌ಗಳ ಪೈಕಿ ಜೋಫ್ರಾ ಆರ್ಚರ್ ಖರೀದಿಸುವ ಬಗ್ಗೆ ಚರ್ಚೆ ಮಾಡಿ ನಿರ್ಧಾರ ಮಾಡಿದೆವು. ಈ ವರ್ಷ ಅವರು ಲಭ್ಯ ಇರುವುದಿಲ್ಲ. ಫಿಟ್‌ ಆದಾಗ ಬುಮ್ರಾ, ಆರ್ಚರ್‌ ಜೋಡಿ ಬೌಲಿಂಗ್‌ನಲ್ಲಿ ನಮಗೆ ಬಲ ತುಂಬಬಹುದು ಎಂದು ಹೇಳಿದ್ದಾರೆ.

    ಶನಿವಾರ ರಾತ್ರಿಯೇ ಆರ್ಚರ್‌ ಅವರನ್ನು ಖರೀದಿಸುವ ಬಗ್ಗೆ ನಿರ್ಧಾರ ಮಾಡಲಾಯಿತು. ತಂಡಕ್ಕೆ ವೇಗದ ಬೌಲರ್‌ ಬೇಕು ಎಂದಾಗ ನಮ್ಮ ಆಯ್ಕೆ ಆರ್ಚರ್‌ ಆಗಿತ್ತು. ಈ ಕಾರಣಕ್ಕೆ ಬಜೆಟ್‌ ಅನ್ನು ಮೊದಲೇ ಸಿದ್ಧಪಡಿಸಿ ಶನಿವಾರ ರಾತ್ರಿಯೇ ಫೈನಲ್‌ ಮಾಡಿದ್ದೆವು ಎಂದು ತಿಳಿಸಿದರು. ಇದನ್ನೂ ಓದಿ: ಐಪಿಎಲ್ ಹರಾಜು ಅಂತ್ಯ – ಫ್ರಾಂಚೈಸ್‍ಗಳಿಗೆ ಬೇಡವಾದ ಸ್ಟಾರ್ ಆಟಗಾರರು

    ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಸಮತೋಲನ ಹೊಂದಿರುವ ಮುಂಬೈ 5 ಬಾರಿ ಚಾಂಪಿಯನ್‌ ಆಗಿದೆ. ಹೀಗಾಗಿ 2023ರ ಐಪಿಎಲ್‌ ಅನ್ನು ಗಮನದಲ್ಲಿಟ್ಟುಕೊಂಡು ಆರ್ಚರ್‌ ಅವರನ್ನು ಖರೀದಿ ಮಾಡಿದೆ.

    ಲಸಿತ್ ಮಲಿಂಗ ವಿದಾಯದ ಬಳಿಕ ಮುಂಬೈ ಇಂಡಿಯನ್ಸ್ ಹಲವು ವಿದೇಶಿ ಬೌಲರ್‌ಗಳನ್ನು ಖರೀದಿ ಮಾಡಿದೆ. ಆದರೆ ಯಾರೂ ಅಷ್ಟೊಂದು ಯಶಸ್ವಿಯಾಗಿಲ್ಲ. ಹೀಗಾಗಿ ಬುಮ್ರಾ, ಆರ್ಚರ್‌ ಜೋಡಿ ಒಂದಾದರೆ ಬೌಲಿಂಗ್‌ನಲ್ಲಿ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕಬಹುದು ಎಂಬ ಲೆಕ್ಕಾಚಾರವನ್ನು ಮುಂಬೈ ಹಾಕಿಕೊಂಡಿದೆ.  ಇದನ್ನೂ ಓದಿ: ಮೋದಿಯಿಂದ ದೀಪ ಹಚ್ಚುವಂತೆ ಕರೆ – ವೈರಲ್ ಆಯ್ತು ಜೋಫ್ರಾ ಆರ್ಚರ್ ನುಡಿದಿದ್ದ ಭವಿಷ್ಯ

    ಗಾಯಗೊಂಡಿರುವ ಜೋಫ್ರಾ ಆರ್ಚರ್ 2021ರ ಐಪಿಎಲ್ ಟೂರ್ನಿಯಿಂದಲೂ ಹೊರಗುಳಿದಿದ್ದರು. ಟಿ20 ವಿಶ್ವಕಪ್ ಟೂರ್ನಿ ಕಾರಣ ಜೋಫ್ರಾ ಐಪಿಎಲ್ ಟೂರ್ನಿಯಿಂದ ದೂರ ಉಳಿದಿದ್ದರು. ಇದು ರಾಜಸ್ಥಾನ ರಾಯಲ್ಸ್ ತಂಡಕ್ಕೆ ಭಾರೀ ಹೊಡೆತ ನೀಡಿತ್ತು.

    ಐಪಿಎಲ್ ಟೂರ್ನಿಯಲ್ಲಿ ಒಟ್ಟು 35 ಪಂದ್ಯಗಳನ್ನು ಆಡಿರುವ ಜೋಫ್ರಾ ಆರ್ಚರ್ 46 ವಿಕೆಟ್ ಪಡೆದಿದ್ದಾರೆ. 15 ರನ್ ನೀಡಿ 3 ವಿಕೆಟ್ ಕಬಳಿಸಿರುವುದು ಜೋಫ್ರಾ ಅತ್ಯುತ್ತಮ ಸಾಧನೆಯಾಗಿದೆ. ಇಂಗ್ಲೆಂಡ್ ಪರ 12 ಟಿ20 ಪಂದ್ಯ ಆಡಿರುವ ಜೋಫ್ರಾ ಆರ್ಚರ್ 14 ವಿಕೆಟ್ ಉರುಳಿಸಿದ್ದಾರೆ. 13 ಟೆಸ್ಟ್ ಪಂದ್ಯ ಹಾಗೂ 17 ಏಕದಿನ ಪಂದ್ಯವನ್ನೂ ಆಡಿದ್ದಾರೆ.  ಇದನ್ನೂ ಓದಿ: ಐಪಿಎಲ್ ಹರಾಜು ಅಂತ್ಯ – ಫ್ರಾಂಚೈಸ್‍ಗಳಿಗೆ ಬೇಡವಾದ ಸ್ಟಾರ್ ಆಟಗಾರರು

  • ಅವಳು ಬಾಗಿಲು ಹಾಕು ಎಂದು ಹೇಳಿದಾಗ- ಕೊಹ್ಲಿ ಡ್ಯಾನ್ಸ್‌ಗೆ ಆರ್ಚರ್ ಫನ್ನಿ ಕಾಮೆಂಟ್

    ಅವಳು ಬಾಗಿಲು ಹಾಕು ಎಂದು ಹೇಳಿದಾಗ- ಕೊಹ್ಲಿ ಡ್ಯಾನ್ಸ್‌ಗೆ ಆರ್ಚರ್ ಫನ್ನಿ ಕಾಮೆಂಟ್

    ಅಬುಧಾಬಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು, ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಕ್ಕೂ ಮುನ್ನ ನಿನ್ನೆ ಕ್ರೀಡಾಂಗಣದಲ್ಲಿ ವಿರಾಟ್ ಕೊಹ್ಲಿ ಡ್ಯಾನ್ಸ್ ಮಾಡುವಂತೆ ದೈಹಿಕ ಕಸರತ್ತು ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಈ ವಿಡಿಯೋ ಸದ್ಯ ರಾಜಸ್ಥಾನ ರಾಯಲ್ಸ್ ತಂಡದ ಆಟಗಾರ ಜೋಫ್ರಾ ಆರ್ಚರ್ ಪ್ರತಿಕ್ರಿಯೆ ನೀಡಿದ್ದಾರೆ.

    ಪಂದ್ಯಕ್ಕೂ ಮುನ್ನ ಕೊಹ್ಲಿ ಬಹಳ ಸಂಭ್ರಮದಲ್ಲಿರುವ ವಿಡಿಯೋ ಅಭಿಮಾನ ಮನಗೆದ್ದಿತ್ತು. ಈ ವಿಡಿಯೋಗೆ ಹಲವು ನೆಟ್ಟಿಗರು ತಮ್ಮದೇ ಪ್ರತಿಕ್ರಿಯೆ ನೀಡಿ ವಿಡಿಯೋ ಶೇರ್ ಮಾಡಿದ್ದರು. ಇದೇ ವಿಡಿಯೋಗೆ ಪ್ರತಿಕ್ರಿಯೆ ನೀಡಿರುವ ಜೋಫ್ರಾ ಆರ್ಚರ್, ಹೋಗಿ ಬಾಗಿಲು ಹಾಕು ಎಂದು ಅವಳು ಹೇಳಿದಾಗ ಎಂದು ಪ್ರತಿಕ್ರಿಯೆ ನೀಡಿ ರೀ ಟ್ವೀಟ್ ಮಾಡಿದ್ದಾರೆ. ಸದ್ಯ ಕೊಹ್ಲಿ ವಿಡಿಯೋದೊಂದಿಗೆ ಆರ್ಚರ್ ಅವರ ಕಾಮೆಂಟ್ ಸಾಕಷ್ಟು ವೈರಲ್ ಆಗುತ್ತಿದೆ. ಇದನ್ನೂ ಓದಿ: ಆರ್‌ಸಿಬಿ ವಿರುದ್ಧ 1 ಬೌಂಡರಿ, 5 ಸಿಕ್ಸರ್ – ಟಿ-20 ಇತಿಹಾಸದಲ್ಲೇ ಗೇಲ್ ಹೊಸ ದಾಖಲೆ

    ಉಳಿದಂತೆ ಪಂದ್ಯದ ಅಂತಿಮ ಎಸೆತದಲ್ಲಿ ಗೆಲುವು ಪಡೆದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ತನ್ನ ಸೋಲಿನ ಸರಣಿಗೆ ಬ್ರೇಕ್ ಹಾಕಿತ್ತು. ಆದರೆ ಪಂದ್ಯದಲ್ಲಿ ಇನ್‍ಫಾರ್ಮ್ ನಲ್ಲಿದ್ದ ಆಟಗಾರ ಎಬಿ ಡಿಲಿಯರ್ಸ್ ಅವರನ್ನು 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿಸಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ಕುರಿತಂತೆ ಪಂದ್ಯದ ಬಳಿಕ ಪ್ರತಿಕ್ರಿಯೆ ನೀಡಿದ ವಿರಾಟ್ ಕೊಹ್ಲಿ, ನಾವು ಈ ಬಗ್ಗೆ ಮೊದಲೇ ಮಾತನಾಡಿಕೊಂಡಿದ್ದೇವು. ಎಬಿಡಿ ನಂ.6ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಆಗಮಿಸಿದ್ದು, ಎಡಗೈ-ಬಲಗೈ ಕಾಂಬಿನೇಷನ್‍ನ ಭಾಗವಾಗಿತ್ತು. ಕೆಲವೊಮ್ಮೆ ನೀವು ತೆಗೆದುಕೊಳ್ಳುವ ಈ ನಿರ್ಧಾರಗಳಿಂದ ಹೊರಬರುವುದಿಲ್ಲ. ಆದರೆ ಪಂದ್ಯದಲ್ಲಿ ತಂಡ ಗಳಿಸಿದ್ದ 170 ರನ್ ಗಳ ಸ್ಕೋರ್ ಉತ್ತಮ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದರು. ಆರ್‍ ಸಿಬಿ ತಂಡ ಅಕ್ಟೋಬರ್ 17 ರಂದು ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ. ಇದನ್ನೂ ಓದಿ: ಆರ್‌ಸಿಬಿಗಾಗಿ 200 ಪಂದ್ಯಗಳನ್ನಾಡಿ ದಾಖಲೆ ಬರೆದ ಕೊಹ್ಲಿ

  • ಆರ್ಚರ್ ಯಾರ್ಕರಿಗೆ ಮಂಕಾದ ರೈಸರ್ಸ್ – ರಾಜಸ್ಥಾನಕ್ಕೆ 159 ರನ್‍ಗಳ ಗುರಿ

    ಆರ್ಚರ್ ಯಾರ್ಕರಿಗೆ ಮಂಕಾದ ರೈಸರ್ಸ್ – ರಾಜಸ್ಥಾನಕ್ಕೆ 159 ರನ್‍ಗಳ ಗುರಿ

    – ಅರ್ಧಶತಕ ಸಿಡಿಸಿ ಮಿಂಚಿದ ಕನ್ನಡಿಗ
    – ಮೊದಲ 3 ಓವರ್ ಕೇವಲ 6 ರನ್

    ದುಬೈ: ಇಂದು ನಡೆಯುತ್ತಿರುವ ಐಪಿಎಲ್-2020ಯ 26ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್‍ರೈಸರ್ಸ್ ಹೈದರಾಬಾದ್ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 159 ರನ್‍ಗಳ ಗುರಿ ನೀಡಿದೆ.

    ರಾಯಲ್ಸ್ ಬೌಲಿಂಗ್ ದಾಳಿ
    ಮೊದಲ ಓವರಿನಿಂದಲೇ ರಾಜಸ್ಥಾನ್ ರಾಯಲ್ಸ್ ತಂಡದ ಬೌಲರ್ ಗಳು ಹೈದರಾಬಾದ್ ತಂಡದ ಆಟಗಾರರ ಮೇಲೆ ಸವಾರಿ ಮಾಡಿದರು. ಪವರ್ ಪ್ಲೇನಲ್ಲಿ ಹೈದರಾಬಾದ್ ತಂಡದ ಬ್ಯಾಟ್ಸ್ ಮ್ಯಾನ್‍ಗಳು ರನ್ ಕದಿಯುವಲ್ಲಿ ಕಷ್ಟಪಟ್ಟರು. ನಾಲ್ಕು ಓವರ್ ಬೌಲ್ ಮಾಡಿದ ಜೋಫ್ರಾ ಆರ್ಚರ್ ಒಂದು ವಿಕೆಟ್ ಪಡೆದು ಕೇವಲ 25 ರನ್ ನೀಡಿ ಮಿಂಚಿದರು. ಇವರಿಗೆ ಉತ್ತಮ ಸಾಥ್ ಕೊಟ್ಟ ಜಯದೇವ್ ಉನಾದ್ಕಟ್ ಅವರು ನಾಲ್ಕು ಓವರಿನಲ್ಲಿ ಒಂದು ವಿಕೆಟ್ ಕಿತ್ತು 31 ರನ್ ನೀಡಿದರು.

    ಇನ್ನಿಂಗ್ಸ್‍ನ ಆರಂಭದಿಂದಲೇ ರಾಜಸ್ಥಾನ್ ರಾಯಲ್ಸ್ ಬೌಲರ್ಸ್ ಗಳು ಬಿಗುವಿನ ಬೌಲಿಂಗ್ ದಾಳಿ ಮಾಡಿದರು. ಪವರ್ ಪ್ಲೇ ಹಂತದಲ್ಲೇ ಮೊದಲ ಮೂರು ಓವರಿಗೆ ಕೇವಲ ಆರು ರನ್ ಬಿಟ್ಟುಕೊಟ್ಟರು. ಇದಾದ ನಂತರ ನಾಲ್ಕನೇ ಓವರ್ ನಾಲ್ಕನೇ ಬಾಲಿನಲ್ಲಿ ಜಾನಿ ಬೈರ್‌ಸ್ಟೋವ್ ಅವರು 16 ರನ್ ಸಿಡಿಸಿ ಸಂಜು ಸ್ಯಾಮ್ಸನ್ ಅವರು ಹಿಡಿದ ಸೂಪರ್ ಕ್ಯಾಚಿಗೆ ಬಲಿಯಾದರು. ನಂತರ ಜೊತೆಯಾದ ಡೇವಿಡ್ ವಾರ್ನರ್ ಮತ್ತು ಮನೀಶ್ ಪಾಂಡೆ ತಾಳ್ಮೆಯ ಆಟಕ್ಕೆ ಮುಂದಾದರು.

    ಮಂದಗತಿಯಿಂದ ಇನ್ನಿಂಗ್ಸ್ ಆರಂಭಿಸಿದ ಸನ್‍ರೈಸರ್ಸ್ ಹೈದರಾಬಾದ್ 7ನೇ ಓವರ್ ಮುಕ್ತಾಯದ ವೇಳಗೆ 38 ರನ್ ಗಳಿಸಿ ಒಂದು ವಿಕೆಟ್ ಕಳೆದುಕೊಂಡಿತು. ಈ ವೇಳೆ ಉತ್ತಮ ಜೊತೆಯಾಟವಾಡಿದ ವಾರ್ನರ್ ಮತ್ತು ಮನೀಶ್ ಪಾಂಡೆ ಜೊಡಿ 37 ಬಾಲಿಗೆ ಅರ್ಧಶತಕದ ಜೊತೆಯಾಟವಾಡಿತು. ಆರಂಭದಿಂದ ಉತ್ತಮವಾಗಿ ಆಡಿಕೊಂಡು ಬಂದ ನಾಯಕ ವಾರ್ನರ್ ಅವರು 38 ಬಾಲಿಗೆ 48 ರನ್ ಸಿಡಿಸಿ ಜೋಫ್ರಾ ಆರ್ಚರ್ ಅವರಿಗೆ ಕ್ಲೀನ್ ಬೌಲ್ಡ್ ಆದರು.

    ಜಾನಿ ಬೈರ್‌ಸ್ಟೋವ್ ಔಟ್ ಆದ ನಂತರ ಕಣಕ್ಕಿಳಿದು ಉತ್ತಮವಾಗಿ ಬ್ಯಾಟ್ ಬೀಸಿದ ಮನೀಶ್ ಪಾಂಡೆ 40 ಬಾಲಿನಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ನಂತರ 17ನೇ ಓವರ್ ನಾಲ್ಕನೇ ಬಾಲಿನಲ್ಲಿ 44 ಬಾಲಿಗೆ 54 ರನ್ ಸಿಡಿಸಿ ಆಡುತ್ತಿದ್ದ ಮನೀಶ್ ಪಾಂಡೆ ಅವರು ಜಯದೇವ್ ಉನಾದ್ಕಟ್ ಅವರು ಬೌಲಿಂಗ್‍ನಲ್ಲಿ ಕ್ಯಾಚ್ ಕೊಟ್ಟ ಔಟ್ ಆಗಿ ಪೆವಿಲಿಯನ್ ಸೇರಿದರು. ನಂತರ ಕೊನೆಯ ಬಾಲಿನಲ್ಲಿ ಪ್ರಿಯಮ್ ಗರ್ಗ್ ಅವರು ರನೌಟ್ ಆದರು.

  • ಐಪಿಎಲ್‍ನಲ್ಲಿ ಇಂಗ್ಲೆಂಡ್ ಕ್ರಿಕೆಟಿಗರ ಪಕ್ಷಪಾತ?- ಗವಾಸ್ಕರ್ ಆಕ್ರೋಶ

    ಐಪಿಎಲ್‍ನಲ್ಲಿ ಇಂಗ್ಲೆಂಡ್ ಕ್ರಿಕೆಟಿಗರ ಪಕ್ಷಪಾತ?- ಗವಾಸ್ಕರ್ ಆಕ್ರೋಶ

    ಅಬುಧಾಬಿ: ಐಪಿಎಲ್ 2020ರ ಆವೃತ್ತಿಯಲ್ಲಿ ಇಂಗ್ಲೆಂಡ್ ಕ್ರಿಕೆಟಿಗರು ಪಕ್ಷಪಾತದಿಂದ ಆಡುತ್ತಿದ್ದಾರೆ ಎಂಬ ಅನುಮಾನ ರಾಜಸ್ಥಾನ ಮತ್ತು ಕೋಲ್ಕತ್ತಾ ವಿರುದ್ಧದ ಪಂದ್ಯದ ಬಳಿಕ ಮೂಡಿದೆ.

    ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ನಾಯಕ ಐಯಾನ್ ಮಾರ್ಗನ್ ಎದುರು ವೇಗದ ಬೌಲರ್ ಜೋಫ್ರಾ ಆರ್ಚರ್, ಟಾಮ್ ಕರ್ರನ್ ಕನಿಷ್ಠ ಒಂದು ಬೌನ್ಸರ್ ಕೂಡ ಎಸೆಯದಿರುವುದು ಅನುಮಾನಗಳಿಗೆ ಕಾರಣವಾಗಿದೆ. ಇದೇ ವಿಚಾರದ ಕುರಿತು ಕ್ರಿಕೆಟ್ ವಿಶ್ಲೇಷಕ ಸುನಿಲ್ ಗವಾಸ್ಕರ್ ಗರಂ ಆಗಿದ್ದಾರೆ.

    ಕೋಲ್ಕತ್ತಾ ತಂಡ 13.1 ಓವರ್ ಗಳಲ್ಲಿ 106 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಐಯಾನ್ ಮಾರ್ಗನ್ ಬ್ಯಾಟಿಂಗ್‍ಗೆ ಇಳಿದಿದ್ದರು. ಪಂದ್ಯದಲ್ಲಿ 23 ಎಸೆತಗಳಲ್ಲಿ 34 ರನ್ ಗಳಿಸಿದ ಮಾರ್ಗನ್ ಚೆಂಡನ್ನು ಮಿಡಲ್ ಮಾಡಲು ವಿಫಲರಾಗುತ್ತಿದ್ದರು. ಆದರೂ ಆರ್ಚರ್ ಮತ್ತು ಕರ್ರನ್ ಆತನ ವಿರುದ್ಧ ಕನಿಷ್ಠ ಒಂದು ಬೌನ್ಸರ್ ಕೂಡ ಎಸೆಯಲಿಲ್ಲ. ಸ್ಲಾಗ್ ಓವರ್ ಗಳಲ್ಲಿ 2 ಸಿಕ್ಸರ್ ಸಿಡಿಸಿದ ಮಾರ್ಗನ್ ತಂಡಕ್ಕೆ ಉಪಯುಕ್ತವಾದರು. ಇದನ್ನೂ ಓದಿ: ಗುರು ದ್ರಾವಿಡ್ ಪರಿಶ್ರಮ – ಐಪಿಎಲ್ ಅಲ್ಲ ಇದು ಇಂಡಿಯನ್ ಪ್ಲೇಯರ್ಸ್ ಲೀಗ್

    ಐಪಿಎಲ್‍ನಲ್ಲಿ ಫಾಸ್ಟೆಸ್ಟ್ ಬೌಲರ್ ಎಂದು ಗುರುತಿಸಿಕೊಂಡಿರುವ ಆರ್ಚರ್ ಪಂದ್ಯದಲ್ಲಿ ಇಯಾನ್ ಮಾರ್ಗನ್‍ಗೆ ಒಂದು ಬೌನ್ಸರ್ ಕೂಡ ಹಾಕಿಲಿಲ್ಲ. ಆರ್ಚರ್ ರಂತಹ ಆಟಗಾರನಿಂದ ನಾನು ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಇನ್ನು ಕರ್ರನ್ ಆದ್ರೆ ಏಕಾಏಕಿ ಫುಲ್‍ಟಾಸ್ ಎಸೆದು ತನ್ನ ಕ್ಯಾಪ್ಟನ್ ಸಿಕ್ಸರ್ ಸಿಡಿಸುವಂತೆ ಮಾಡಿದ್ದರು ಎಂದು ಸುನಿಲ್ ಗವಾಸ್ಕರ್ ಆರೋಪಿಸಿದ್ದಾರೆ. ಪಂದ್ಯದಲ್ಲಿ ಕೋಲ್ಕತ್ತಾ ತಂಡ 6 ವಿಕೆಟ್ ನಷ್ಟಕ್ಕೆ 174 ರನ್ ಸಿಡಿಸಿದ್ರೆ, ರಾಜಸ್ಥಾನ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಲಷ್ಟೇ ಶಕ್ತವಾಯ್ತು.

  • ಮೋದಿಯಿಂದ ದೀಪ ಹಚ್ಚುವಂತೆ ಕರೆ – ವೈರಲ್ ಆಯ್ತು ಜೋಫ್ರಾ ಆರ್ಚರ್ ನುಡಿದಿದ್ದ ಭವಿಷ್ಯ

    ಮೋದಿಯಿಂದ ದೀಪ ಹಚ್ಚುವಂತೆ ಕರೆ – ವೈರಲ್ ಆಯ್ತು ಜೋಫ್ರಾ ಆರ್ಚರ್ ನುಡಿದಿದ್ದ ಭವಿಷ್ಯ

    ನವದೆಹಲಿ: ತಮ್ಮ ಟ್ವಿಟ್ಟರ್ ಮೂಲಕವೇ ಭವಿಷ್ಯದ ಘಟನೆಗಳ ಕುರಿತು ಸುಳಿವು ನೀಡುತ್ತಿರುವ ಇಂಗ್ಲೆಂಡ್ ವೇಗದ ಬೌಲರ್ ಜೋಫ್ರಾ ಆರ್ಚರ್ ಅವರ ಹಳೆಯ ಟ್ವೀಟ್‍ಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಅದರಲ್ಲೂ ಪ್ರಧಾನಿ ಮೋದಿ ಅವರು ಇಂದು ನೀಡಿದ ವಿಡಿಯೋ ಸಂದೇಶದ ಬಳಿಕ ಆರ್ಚರ್ ಅವರ ಟ್ವೀಟ್ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

    ಅನೇಕ ಬಾರಿ ಭವಿಷ್ಯದ ಘಟನೆಗಳ ಬಗ್ಗೆ ಸುಳಿವು ನೀಡುವ ಮೂಲಕ ಅತೀಂದ್ರಿಯ ಶಕ್ತಿಯನ್ನು ಪ್ರದರ್ಶಿಸಿರುವ ಇಂಗ್ಲೆಡ್ ವೇಗದ ಬೌಲರ್ ಜೋಫ್ರಾ ಆರ್ಚರ್, ಮಗದೊಮ್ಮೆ ಸುದ್ದಿಯಲ್ಲಿದ್ದಾರೆ.

    ಮಾರ್ಚ್ 23ರಂದು ದೇಶದ ಜನರಲ್ಲಿ ಮನವಿ ಮಾಡಿದ್ದ ಪ್ರಧಾನಿ ಮೋದಿ ಮೂವರು ವಾರಗಳ ಲಾಕ್‍ಡೌನ್ ಮಾಹಿತಿ ನೀಡಿ ಸಹಕಾರ ನೀಡುವಂತೆ ಮನವಿ ಮಾಡಿದ್ದರು. ಇತ್ತ 2017ರ ಅಕ್ಟೋಬರ್ ನಲ್ಲಿ ಟ್ವೀಟ್ ಮಾಡಿದ್ದ ಆರ್ಚರ್ ‘ಮನೆಯಲ್ಲೇ ಮೂರು ವಾರಗಳ ಉಳಿವುಯುವುದು ಸಾಕಾಗುವುದಿಲ್ಲ’ ಎಂದು ಬರೆದುಕೊಂಡಿದ್ದರು.

    ಲಾಕ್‍ಡೌನ್ ಆದೇಶದ ಬಳಿಕ ಮತ್ತೆ ಶುಕ್ರವಾರ ವಿಡಿಯೋ ಸಂದೇಶ ರವಾನೆ ಮಾಡಿರೋ ಮೋದಿ ಅವರು, ಏಪ್ರಿಲ್ 5ರ ಭಾನುವಾರ ರಾತ್ರಿ 9 ಗಂಟೆಗೆ 9 ನಿಮಿಷ ಲೈಟ್ ಆಫ್ ಮಾಡಿ ದೀಪ ಬೆಳಗಿ ಎಂದು ಮನವಿ ಮಾಡಿ ಎಲ್ಲರೂ ಒಟ್ಟಾಗೋಣ ಎಂದು ಮನವಿ ಮಾಡಿದ್ದರು. ಸದ್ಯ ಜೋಫ್ರಾ ಆರ್ಚರ್ ಅವರ ಹಳೆಯ ಟ್ವೀಟ್‍ಗಳಲ್ಲಿ ಮೋದಿ ಅವರ ಮನವಿಯಂತೆ 9 ಫಾರ್ಮ್ 9 ಲೈಟ್ ಅಫ್ ಮಾಡಿ ಟಾರ್ಚ್ ಹಾಕಿ ಎಂದು ಟ್ವೀಟ್ ಮಾಡಿರುವುದು ಸಾಕಷ್ಟು ವೈರಲ್ ಆಗುತ್ತಿದೆ.

    ಆರ್ಚರ್ ಅವರು ಸುಮಾರು ಆರು ವರ್ಷಗಳ ಹಿಂದೆಯೇ ಭವಿಷ್ಯತ್ ಪರಿಣಾಮದ ಬಗ್ಗೆ ಟ್ವೀಟ್ ಮಾಡಿದ್ದರು. ಕೆಲ ದಿನಗಳ ಹಿಂದೆಯಷ್ಟೇ ಆರ್ಚರ್ ಅವರ ಟ್ವೀಟ್ ಭಾರೀ ವೈರಲ್ ಆಗಿತ್ತು. ‘ಓಡಲು ಜಾಗವಿಲ್ಲದ ಆ ದಿನಗಳು ಬರಲಿದೆ’ ಎಂದು ಜೋಫ್ರಾ ಆರ್ಚರ್ 2014ರ ಆಗಸ್ಟ್ 20ರಂದು ಟ್ವೀಟ್ ಮಾಡಿದ್ದರು. ಅಕ್ಷರಶ: ಜೋಫ್ರಾ ಆರ್ಚರ್ ನುಡಿದ ಭವಿಷ್ಯ ನಿಜವಾಗಿದೆ. ಕೋವಿಡ್ 19 ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಆಟಗಾರರೆಲ್ಲ ಮನೆಯಲ್ಲೇ ಕುಳಿತುಕೊಳ್ಳುವಂತಾಗಿದೆ. ಕ್ರಿಕೆಟಿಗರ ಅಭ್ಯಾಸ ಸಂಪೂರ್ಣವಾಗಿ ರದ್ದುಗೊಂಡಿದೆ. ಮೈದಾನಕ್ಕಿಳಿಯದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ವೈರಲ್ ಟ್ವೀಟ್ ಗಮನಿಸಿರುವ ನೆಟ್ಟಿಗರು ಆರ್ಚರ್ ಅವರನ್ನು ಗಾಡ್ (ದೇವರು) ಎಂದು ಸಂಬೋಧಿಸುತ್ತಾರೆ. ಜೋಫ್ರಾ ಆರ್ಚರ್ ಅವರ ಟ್ವೀಟ್‍ಗಳು ಸಾಕಷ್ಟು ಅಚ್ಚರಿಯನ್ನು ಮೂಡಿಸಿದೆ.

    ಕಳೆದ ಏಕದಿನ ವಿಶ್ವಕಪ್‍ನಲ್ಲಿ ಇಂಗ್ಲೆಂಡ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಜೋಫ್ರಾ ಆರ್ಚರ್, ಬಳಿಕ ಆಸ್ಟ್ರೇಲಿಯಾ ವಿರುದ್ಧ ಆ್ಯಶಸ್ ಸರಣಿ ವೇಳೆ ಟೆಸ್ಟ್ ಕ್ರಿಕೆಟ್‍ಗೂ ಡೆಬ್ಯು ಮಾಡಿದ್ದರು. ಆದರೆ ಗಾಯದ ಸಮಸ್ಯೆಯಿಂದಾಗಿ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಿಂದ ಹೊರಗುಳಿಯುವಂತಾಗಿದೆ.

  • ರಕ್ತ ಸುರಿಯುತ್ತಿದ್ದರೂ ಬ್ಯಾಟಿಂಗ್ ನಡೆಸಿ ಅಭಿಮಾನಿಗಳ ಮನಗೆದ್ದ ಆಸೀಸ್ ಆಟಗಾರ

    ರಕ್ತ ಸುರಿಯುತ್ತಿದ್ದರೂ ಬ್ಯಾಟಿಂಗ್ ನಡೆಸಿ ಅಭಿಮಾನಿಗಳ ಮನಗೆದ್ದ ಆಸೀಸ್ ಆಟಗಾರ

    ಲಂಡನ್: ವಿಶ್ವಕಪ್ ಟೂರ್ನಿಯ 2ನೇ ಸೆಮಿಫೈನಲ್ ಪಂದ್ಯದಲ್ಲಿ ಆಸೀಸ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಅಲೆಕ್ಸ್ ಕ್ಯಾರಿ ಇಂಗ್ಲೆಂಡ್ ವೇಗದ ಬೌಲರ್ ಜೋಫ್ರೇ ಆರ್ಚರ್ ಬೌಲಿಂಗ್ ನಲ್ಲಿ ಗಾಯಗೊಂಡರು. ಈ ಸಂದರ್ಭದಲ್ಲಿ ಅವರ ಗಲ್ಲದಿಂದ ರಕ್ತ ಸುರಿಯುತ್ತಿದ್ದರೂ ಪೆವಿಲಿಯನ್‍ಗೆ ತೆರಳದೆ ಬ್ಯಾಟಿಂಗ್ ನಡೆಸಿ ಕ್ರಿಕೆಟ್ ಅಭಿಮಾನಿಗಳ ಮನಗೆದ್ದಿದ್ದಾರೆ.

    ಪಂದ್ಯದ 8ನೇ ಓವರಿನ ಅಂತಿಮ ಎಸೆತದಲ್ಲಿ ಘಟನೆ ನಡೆದಿದ್ದು, ಆರ್ಚರ್ ಅವರ ಬೌನ್ಸರ್ ನೇರ ಅಲೆಕ್ಸ್ ರ್ ಮುಖಕ್ಕೆ ಬಡಿದ ಪರಿಣಾಮ ಅವರ ಹೆಲ್ಮೆಟ್ ಕೂಡ ಕಳಚಿ ಬಂದಿತ್ತು. ತಕ್ಷಣ ಕ್ಯಾರಿ ತಮ್ಮ ಹೆಲ್ಮೆಟನ್ನು ಹಿಡಿದರು. ಈ ಸಂದರ್ಭದಲ್ಲಿ ಕ್ಯಾರಿ ಅವರ ಗಲ್ಲದಿಂದ ರಕ್ತ ಸೋರುತ್ತಿತ್ತು. ಕೂಡಲೇ ಅವರಿಗೆ ಚಿಕಿತ್ಸೆ ನೀಡಲಾಯಿತು. ಈ ಸಂದರ್ಭದಲ್ಲಿ ಆಟಗಾರರಲ್ಲಿ ಆತಂಕ ಮನೆ ಮಾಡಿತ್ತು.

    https://twitter.com/LucyBluck_/status/1149261581039165440

    ಗಾಯಗೊಂಡಿದ್ದರೂ ಮೈದಾನದಿಂದ ಹೊರ ತೆರಳದ ಕ್ಯಾರಿ ಬ್ಯಾಟಿಂಗ್ ಮುಂದುವರಿಸಿದರು. ಪಂದ್ಯದಲ್ಲಿ 70 ಎಸೆತ ಎದುರಿಸಿದ ಕ್ಯಾರಿ 4 ಬೌಂಡರಿ ನೆರವಿನಿಂದ 46 ರನ್ ಗಳಿಸಿ ಔಟಾದರು. ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ಮೊದಲ 10 ಓವರ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಕೇವಲ 27 ರನ್ ಗಳಿಸಿತ್ತು.

    ಸಾಮಾಜಿಕ ಜಾಲತಾಣದಲ್ಲಿ ಅಲೆಕ್ಸ್ ಕ್ಯಾರಿರ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು, ಅವರ ಹೋರಾಟದ ಮನೋಭಾವಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ವಿಶ್ವಕಪ್ ನಂತಹ ಟೂರ್ನಿಯಲ್ಲಿ ತಂಡದ ಪರ ಆಡುವುದು ಪ್ರತಿಯೊಬ್ಬ ಆಟಗಾರನ ಕನಸಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಬ್ಯಾಂಡೇಜ್ ಕಟ್ಟಿಕೊಂಡೇ ಅಲೆಕ್ಸ್ ಕ್ಯಾರಿ ಬ್ಯಾಟಿಂಗ್ ನಡೆಸಿದ್ದರು. ಉಳಿದಂತೆ ಪಂದ್ಯದಲ್ಲಿ ಗೆಲುವು ಪಡೆದ ತಂಡ ಜುಲೈ 14 ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.