Tag: JoeRoot

  • ಧ್ರುವ್ ಜುರೆಲ್, ಗಿಲ್ ತಾಳ್ಮೆಯ ಜೊತೆಯಾಟ – ಹ್ಯಾಟ್ರಿಕ್ ಗೆಲುವಿನೊಂದಿಗೆ ಭಾರತಕ್ಕೆ ಸರಣಿ ಜಯ

    ಧ್ರುವ್ ಜುರೆಲ್, ಗಿಲ್ ತಾಳ್ಮೆಯ ಜೊತೆಯಾಟ – ಹ್ಯಾಟ್ರಿಕ್ ಗೆಲುವಿನೊಂದಿಗೆ ಭಾರತಕ್ಕೆ ಸರಣಿ ಜಯ

    – 5 ಪಂದ್ಯಗಳ ಟೆಸ್ಟ್ ಸರಣಿ, 3-1ರಲ್ಲಿ ಭಾರತ ಮುನ್ನಡೆ
    – ಜೋ ರೂಟ್ ದಾಖಲೆಯ ಶತಕ ವ್ಯರ್ಥ,

    ರಾಂಚಿ: ರೋಹಿತ್ ಶರ್ಮಾ, ಶುಭಮನ್ ಗಿಲ್ (Shubman Gill) ಜವಾಬ್ದಾರಿಯುತ ಅರ್ಧಶತಕ, ಧ್ರುವ್ ಜುರೆಲ್ ತಾಳ್ಮೆಯ ಬ್ಯಾಟಿಂಗ್ ನೆರವಿನಿಂದ ಭಾರತ, ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ 5 ವಿಕೆಟ್‌ಗಳ ಜಯ ಸಾಧಿಸಿದೆ. ಈ ಮೂಲಕ ಹ್ಯಾಟ್ರಿಕ್ ಗೆಲುವಿನೊಂದಿಗೆ ಸರಣಿಯನ್ನು ಕೈವಶ ಮಾಡಿಕೊಂಡಿದೆ. 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 3-1 ಅಂತರದಲ್ಲಿ ಭಾರತ ಮುನ್ನಡೆ ಸಾಧಿಸಿದೆ.

    ಇಲ್ಲಿನ ಜೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ 4ನೇ ಟೆಸ್ಟ್ ಪಂದ್ಯದಲ್ಲಿ ಗೆಲುವಿಗೆ 192 ರನ್‌ಗಳ ಗುರಿ ಪಡೆದ ಭಾರತ (Team India)  61 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 192 ರನ್ ಗಳಿಸುವ ಮೂಲಕ ಗೆಲುವಿನ ನಗೆ ಬೀರಿದೆ. 40 ರನ್‌ಗಳಿಂದ 4ನೇ ದಿನದ ಕ್ರೀಸ್ ಆರಂಭಿಸಿದ ಭಾರತ, ಆಂಗ್ಲರ (England) ಸ್ಪಿನ್ ದಾಳಿಯ ನಡುವೆಯೂ ಗೆಲುವು ಸಾಧಿಸಿದೆ. ಈ ಮೂಲಕ ಭಾರತವು ತವರಿನಲ್ಲಿ ನಡೆದ ಸತತ 17 ಟೆಸ್ಟ್ ಸರಣಿಗಳನ್ನು ಗೆದ್ದ ವಿಶೇಷ ಸಾಧನೆ ಮಾಡಿದಂತಾಗಿದೆ.

    4ನೇ ದಿನದಾಟದಲ್ಲಿ ಸ್ಫೋಟಕ ಆರಂಭ ಪಡೆಯುವ ನಿರೀಕ್ಷೆಯಲ್ಲಿದ್ದ ಭಾರತ 120 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ನಾಯಕ ರೋಹಿತ್ ಶರ್ಮಾ (Rohit Sharma) ಹಾಗೂ ಯಶಸ್ವಿ ಜೈಸ್ವಾಲ್ (Yashasvi Jaiswal) ಜೋಡಿ ಮೊದಲ ವಿಕೆಟ್‌ಗೆ 84 ರನ್‌ಗಳ ಜೊತೆಯಾಟ ನೀಡಿದ್ದರು. ಆದ್ರೆ 37 ರನ್ ಗಳಿಸಿ ಯಶಸ್ವಿ ಜೈಸ್ವಾಲ್ ಔಟಾಗುತ್ತಿದ್ದಂತೆ, ಅರ್ಧಶತಕ ಗಳಿಸಿದ್ದ ರೋಹಿತ್, ರಜತ್ ಪಾಟೀದಾರ್, ರವೀಂದ್ರ ಜಡೇಜಾ ಹಾಗೂ ಸರ್ಫರಾಜ್ ಖಾನ್ ಬ್ಯಾಕ್ ಟು ಬ್ಯಾಕ್ ವಿಕೆಟ್ ಒಪ್ಪಿಸಿ ಹೊರ ನಡೆದರು. ಜಡೇಜಾ 33 ಎಸೆತಗಳಲ್ಲಿ ಕೇವಲ 4 ರನ್ ಗಳಿಸಿದ್ರೆ, ಪಾಟೀದಾರ್ ಹಾಗೂ ಸರ್ಫರಾಜ್ ಖಾನ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದರು. ಈ ವೇಳೆ ಶುಭಮನ್‌ಗಿಲ್ ಜೊತೆಗೂಡಿದ ಧ್ರುವ್ ಜುರೆಲ್ ಉತ್ತಮ ಇನ್ನಿಂಗ್ಸ್ ಕಟ್ಟಿದರು. ಇದರಿಂದ ಗೆಲುವು ಭಾರತದತ್ತ ವಾಲಿತು.

    ಅಂತಿಮವಾಗಿ ಶುಭಮನ್‌ ಗಿಲ್‌ 124 ಎಸೆತಗಳಲ್ಲಿ ಎರಡು ಭರ್ಜರಿ ಸಿಕ್ಸರ್‌ಗಳೊಂದಿಗೆ 52 ರನ್‌ ಗಳಿಸಿದ್ರೆ, ಧ್ರುವ್‌ ಜುರೆಲ್‌ (Dhruv Jurel) 77 ಎಸೆತಗಳಲ್ಲಿ 39 ರನ್‌ ಗಳಿಸಿ ಅಜೇಯರಾಗುಳಿದರು.

    ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯದ 3ನೇ ದಿನದಾಟದಲ್ಲಿ ಇಂಗ್ಲೆಂಡ್ 145 ರನ್‌ಗಳಿಗೆ ಆಲೌಟ್ ಆಗಿ ತೀವ್ರ ಮುಖಭಂಗ ಅನುಭವಿಸಿತ್ತು. ಟೀಂ ಇಂಡಿಯಾ ಸ್ಪಿನ್ನರ್ಸ್ ಅಶ್ವಿನ್, ಕುಲ್ದೀಪ್ ಯಾದವ್ ಸ್ಪಿನ್ ಮೋಡಿಗೆ ತತ್ತರಿಸಿದ ಇಂಗ್ಲೆಂಡ್ ಅರ್ಧದಿನದಲ್ಲೇ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಇದರಿಂದ 192 ರನ್‌ಗಳ ಗುರಿ ಪಡೆದಿದ್ದದ ಭಾರತ 8 ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೇ 40 ರನ್ ಕಲೆಹಾಕಿತ್ತು.

    ಕ್ರಾವ್ಲಿ ಅರ್ಧಶತಕ: 3ನೇ ದಿನ 46 ರನ್‌ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡ ಉತ್ತಮ ಪ್ರದರ್ಶನ ನೀಡುವ ಉತ್ಸಾಹದಲ್ಲಿತ್ತು. ಆದ್ರೆ ಟೀಂ ಇಂಡಿಯಾ ಸ್ಪಿನ್ನರ್‌ಗಳ ದಾಳಿಗೆ ತುತ್ತಾಗಿ ತೀವ್ರ ಹಿನ್ನಡೆ ಅನುಭವಿಸಿತು. ಇಂಗ್ಲೆಂಡ್ ಪರ ಝಾಕ್ ಕ್ರಾವ್ಲಿ 60 ರನ್ (91 ಎಸೆತ, 7 ಬೌಂಡರಿ), ಜಾನಿ ಬೈರ್ಸ್ಟೋವ್‌ 30 ರನ್ ಗಳಿಸಿದ್ದು ಬಿಟ್ಟರೆ, ಉಳಿದೆಲ್ಲರೂ ತರಗೆಲೆಗಳಂತೆ ಉದುರಿದರು, ಇದರಿಂದ ಇಂಗ್ಲೆಂಡ್ 145 ರನ್‌ಗಳಿಗೆ ಆಲೌಟ್ ಆಯಿತು.

    ಆಂಗ್ಲರ ಈ ಉತ್ಸಾಹಕ್ಕೆ ಟೀಂ ಇಂಡಿಯಾ ಸ್ಪಿನ್ನರ್‌ಗಳು ಬ್ರೇಕ್ ಹಾಕಿದರು. ರವಿಚಂದ್ರನ್ ಅಶ್ವಿನ್ 15.5 ಓವರ್‌ಗಳಲ್ಲಿ 51 ರನ್ ಬಿಟುಕೊಟ್ಟ ಅಶ್ವಿನ್ 5 ವಿಕೆಟ್ ಕಿತ್ತರೆ, ಕುಲ್ದೀಪ್ ಯಾದವ್ 4 ವಿಕೆಟ್ ಹಾಗೂ ರವೀಂದ್ರ ಜಡೇಜಾ 1 ವಿಕೆಟ್ ಪಡೆದು ಮುಂಚಿದರು.

    ಜುರೆಲ್, ಜೈಸ್ವಾಲ್ ಬ್ಯಾಟಿಂಗ್ ಬಲ:
    4ನೇ ಟೆಸ್ಟ್ ಪಂದ್ಯದ 2ನೇ ದಿನದಾಟದಲ್ಲಿ ದಿನದಾಟದಲ್ಲಿ ಯಶಸ್ವಿ ಜೈಸ್ವಾಲ್ ಹೊರತುಪಡಿಸಿ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಕಳಪೆ ಪ್ರದರ್ಶನ ತೋರಿದ್ದರು. ಇದರಿಂದ ಸಂಕಷ್ಟಕ್ಕೆ ಸಿಲುಕಿದ್ದ ಟೀಮ್ ಇಂಡಿಯಾ, ಪಂದ್ಯದ ಮೂರನೇ ದಿನದಾಟದಲ್ಲಿ ದಿಟ್ಟ ಹೋರಾಟ ನಡೆಸಿತು. ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಧ್ರುವ್ ಜುರೆಲ್ ಅವರ 90 ರನ್‌ಗಳ ಬಲದಿಂದ ಭಾರತ ತಂಡ ಚೇತರಿಸಿಕೊಂಡಿತು. ಇದರೊಂದಿಗೆ ಕುಲ್ದೀಪ್ ಯಾದವ್ 131 ಎಸೆತಗಳಲ್ಲಿ 28 ರನ್‌ಗಳ ಕೊಡುಗೆ ನೀಡಿದರು. ಇದರಿಂದ ಭಾರತ 300 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ಮೊದಲ ಇನ್ನಿಂಗ್ಸ್‌ನಲ್ಲಿ 307 ರನ್ ಕಲೆಹಾಕಿ, ಕೇವಲ 46 ರನ್‌ಗಳ ಹಿನ್ನಡೆ ಅನುಭವಿಸಿತ್ತು.

    ಭಾರತ ತಂಡದ ಯುವ ವಿಕೆಟ್‌ಕೀಪರ್ ಬ್ಯಾಟ್ಸ್ಮನ್ ಧ್ರುವ್ ಜುರೆಲ್ ಬ್ಯಾಟಿಂಗ್‌ಗೆ ಬಂದಾಗ ತಂಡ 200ಕ್ಕೂ ಹೆಚ್ಚು ರನ್‌ಗಳ ಹಿನ್ನಡೆ ಅನುಭವಿಸುವ ಭೀತಿಯಲ್ಲಿತ್ತು. 177 ರನ್‌ಗಳಿಗೆ ಭಾರತ ತಂಡ ತನ್ನ 7ನೇ ವಿಕೆಟ್ ಕಳೆದುಕೊಂಡು ಅಪಾಯಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಕುಲ್ದೀಪ್ ಯಾದವ್ ಜೊತೆಗೂಡಿ ಅಮೋಘ ಪ್ರದರ್ಶನ ನೀಡಿದ ಧ್ರುವ್ ಜುರೆಲ್, 8ನೇ ವಿಕೆಟ್‌ಗೆ 202 ಎಸೆತಗಳಲ್ಲಿ 76 ರನ್‌ಗಳ ಜೊತೆಯಾಟ ನೀಡಿದರು. ನಂತರ ಬಂದ ಆಕಾಶ್ ದೀಪ್ ಜೊತೆಗೂಡಿಯೂ 40 ರನ್‌ಗಳ ಜೊತೆಯಾಟ ಕಟ್ಟಿ ತಂಡದ ಮೊತ್ತವನ್ನು 300 ರನ್‌ಗಳ ಗಡಿ ದಾಟಿಸಿದರು. ಈನಡುವೆ ಜುರೆಲ್ ಶತಕ ವಂಚಿತರಾದರು.

    ಶೋಯೆಬ್ ಬಶೀರ್ ಚೊಚ್ಚಲ 5 ವಿಕೆಟ್ ಸಾಧನೆ:
    ಇಂಗ್ಲೆಂಡ್ ತಂಡದ ಪರ ಯುವ ಆಫ್ ಸ್ಪಿನ್ನರ್ ಶೋಯೆಬ್ ಬಶೀರ್ ಚೊಚ್ಚಲ 5 ವಿಕೆಟ್ ಸಾಧನೆಯೊಂದಿಗೆ ಮಿಂಚಿದರು. 20 ವರ್ಷದ ಯುವ ಬೌಲರ್ ಒಟ್ಟಾರೆ 44 ಓವರ್‌ಗಳನ್ನು ಎಸೆದು 119ರನ್ ಬಿಟ್ಟುಕೊಟ್ಟು 5 ವಿಕೆಟ್ ಪಡೆದು ಮಿಂಚಿದರು. ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿಬದುಕಿನ 2ನೇ ಪಂದ್ಯದಲ್ಲೇ 5 ವಿಕೆಟ್ ಸಾಧನೆಯೊಂದಿಗೆ ಗಮನ ಸೆಳೆದರು. ಇದರೊಂದಿಗೆ ಟಾಮ್ ಹಾಟ್ಲೀð 3 ವಿಕೆಟ್, ಜೇಮ್ಸ್ ಆಂಡರ್ಸನ್ 2 ವಿಕೆಟ್ ಕಿತ್ತರು. ಮೊದಲ ಇನಿಂಗ್ಸ್ನಲ್ಲಿ 353 ರನ್ ಗಳಿಸಿದ್ದ ಇಂಗ್ಲೆಂಡ್ ತಂಡ 46 ರನ್‌ಗಳ ಮುನ್ನಡೆಯೊಂದಿಗೆ 2ನೇ ಇನಿಂಗ್ಸ್ ಆರಂಭಿಸಿತ್ತು.

  • ಭರ್ಜರಿ ಕಂಬ್ಯಾಕ್‌; ಅಶ್ವಿನ್‌ ಸ್ಪಿನ್‌ ಮೋಡಿಗೆ ಮಕಾಡೆ ಮಲಗಿದ ಇಂಗ್ಲೆಂಡ್ – ಸರಣಿ ಗೆಲುವಿನ ವಿಶ್ವಾಸದಲ್ಲಿ ಭಾರತ

    ಭರ್ಜರಿ ಕಂಬ್ಯಾಕ್‌; ಅಶ್ವಿನ್‌ ಸ್ಪಿನ್‌ ಮೋಡಿಗೆ ಮಕಾಡೆ ಮಲಗಿದ ಇಂಗ್ಲೆಂಡ್ – ಸರಣಿ ಗೆಲುವಿನ ವಿಶ್ವಾಸದಲ್ಲಿ ಭಾರತ

    ರಾಂಚಿ: ಭಾರತ ಮತ್ತು ಇಂಗ್ಲೆಂಡ್‌ (IND vs ENG) ನಡುವೆ ನಡೆಯುತ್ತಿರುವ 4ನೇ ಟೆಸ್ಟ್‌ ಪಂದ್ಯದ 3ನೇ ದಿನದಾಟದಲ್ಲಿ ಇಂಗ್ಲೆಂಡ್‌ 145 ರನ್‌ಗಳಿಗೆ ಆಲೌಟ್‌ ಆಗಿದ್ದು, ಮತ್ತೊಮ್ಮೆ ತೀವ್ರ ಮುಖಭಂಗ ಅನುಭವಿಸಿದೆ. ಟೀಂ ಇಂಡಿಯಾ (Team India) ಸ್ಪಿನ್ನರ್ಸ್‌ ಅಶ್ವಿನ್‌ (Ashwin), ಕುಲ್ದೀಪ್‌ ಯಾದವ್‌ ಸ್ಪಿನ್‌ ಮೋಡಿಗೆ ತತ್ತರಿಸಿದ ಇಂಗ್ಲೆಂಡ್‌ ಅರ್ಧದಿನದಲ್ಲೇ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿದೆ.

    ಇನ್ನೂ 192 ರನ್‌ಗಳ ಗುರಿ ಪಡೆದಿರುವ ಭಾರತ 8 ಓವರ್‌ಗಳಲ್ಲಿ ಯಾವುದೇ ವಿಕೆಟ್‌ ನಷ್ಟವಿಲ್ಲದೇ 40 ರನ್‌ ಕಲೆಹಾಕಿದೆ. ಟೀಂ ಇಂಡಿಯಾ ಗೆಲುವಿಗೆ ಇನ್ನೂ 152 ರನ್‌ಗಳ ಅಗತ್ಯವಿದೆ. ಭಾರತದ ಪರ ನಾಯಕ ರೋಹಿತ್‌ ಶರ್ಮಾ 24 ರನ್‌, ಯಶಸ್ವಿ ಜೈಸ್ವಾಲ್‌ (Yashasvi Jaiswal) 16 ರನ್‌ ಗಳಿಸಿ ಅಜೇಯರಾಗುಳಿದಿದ್ದು ಸೋಮವಾರ (ಫೆ.26) ಕ್ರೀಸ್‌ ಆರಂಭಿಸಲಿದ್ದಾರೆ. ಈ ಮೂಲಕ ಹ್ಯಾಟ್ರಿಕ್‌ ಗೆಲುವಿನೊಂದಿಗೆ ಸರಣಿಯನ್ನೂ ಗೆಲ್ಲುವ ವಿಶ್ವಾದಲ್ಲಿ ಟೀಂ ಇಂಡಿಯಾ ಇದೆ.

    3ನೇ ದಿನ 46 ರನ್‌ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್‌ ಆರಂಭಿಸಿದ ಇಂಗ್ಲೆಂಡ್‌ ತಂಡ ಉತ್ತಮ ಪ್ರದರ್ಶನ ನೀಡುವ ಉತ್ಸಾಹದಲ್ಲಿತ್ತು. ಆದ್ರೆ ಟೀಂ ಇಂಡಿಯಾ ಸ್ಪಿನ್ನರ್‌ಗಳ ದಾಳಿಗೆ ತುತ್ತಾಗಿ ತೀವ್ರ ಹಿನ್ನಡೆ ಅನುಭವಿಸಿತು. ಇಂಗ್ಲೆಂಡ್‌ ಪರ ಝಾಕ್‌ ಕ್ರಾವ್ಲಿ (Zak Crawley) 60 ರನ್‌ (91 ಎಸೆತ, 7 ಬೌಂಡರಿ), ಜಾನಿ ಬೈರ್ಸ್ಟೋವ್‌ 30 ರನ್‌ ಗಳಿಸಿದ್ದು ಬಿಟ್ಟರೆ, ಉಳಿದೆಲ್ಲರೂ ತರಗೆಲೆಗಳಂತೆ ಉದುರಿದರು, ಇದರಿಂದ ಇಂಗ್ಲೆಂಡ್‌ 145 ರನ್‌ಗಳಿಗೆ ಆಲೌಟ್‌ ಆಯಿತು.

    ಆಂಗ್ಲರ ಈ ಉತ್ಸಾಹಕ್ಕೆ ಟೀಂ ಇಂಡಿಯಾ ಸ್ಪಿನ್ನರ್‌ಗಳು ಬ್ರೇಕ್‌ ಹಾಕಿದರು. ರವಿಚಂದ್ರನ್‌ ಅಶ್ವಿನ್‌ 15.5 ಓವರ್‌ಗಳಲ್ಲಿ 51 ರನ್‌ ಬಿಟುಕೊಟ್ಟ ಅಶ್ವಿನ್‌ 5 ವಿಕೆಟ್‌ ಕಿತ್ತರೆ, ಕುಲ್ದೀಪ್‌ ಯಾದವ್‌ 4 ವಿಕೆಟ್‌ ಹಾಗೂ ರವೀಂದ್ರ ಜಡೇಜಾ 1 ವಿಕೆಟ್‌ ಪಡೆದು ಮುಂಚಿದರು.

    ಜುರೆಲ್‌, ಜೈಸ್ವಾಲ್‌ ಬ್ಯಾಟಿಂಗ್‌ ಬಲ:
    4ನೇ ಟೆಸ್ಟ್‌ ಪಂದ್ಯದ 2ನೇ ದಿನದಾಟದಲ್ಲಿ ದಿನದಾಟದಲ್ಲಿ ಯಶಸ್ವಿ ಜೈಸ್ವಾಲ್‌ ಹೊರತುಪಡಿಸಿ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಕಳಪೆ ಪ್ರದರ್ಶನ ತೋರಿದ್ದರು. ಇದರಿಂದ ಸಂಕಷ್ಟಕ್ಕೆ ಸಿಲುಕಿದ್ದ ಟೀಮ್ ಇಂಡಿಯಾ, ಪಂದ್ಯದ ಮೂರನೇ ದಿನದಾಟದಲ್ಲಿ ದಿಟ್ಟ ಹೋರಾಟ ನಡೆಸಿತು. ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಧ್ರುವ್ ಜುರೆಲ್‌ ಅವರ 90 ರನ್‌ಗಳ ಬಲದಿಂದ ಭಾರತ ತಂಡ ಚೇತರಿಸಿಕೊಂಡಿತು. ಇದರೊಂದಿಗೆ ಕುಲ್ದೀಪ್‌ ಯಾದವ್‌ 131 ಎಸೆತಗಳಲ್ಲಿ 28 ರನ್‌ಗಳ ಕೊಡುಗೆ ನೀಡಿದರು. ಇದರಿಂದ ಭಾರತ 300 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ಮೊದಲ ಇನ್ನಿಂಗ್ಸ್‌ನಲ್ಲಿ 307 ರನ್‌ ಕಲೆಹಾಕಿ, ಕೇವಲ 46 ರನ್‌ಗಳ ಹಿನ್ನಡೆ ಅನುಭವಿಸಿತ್ತು.

    ಭಾರತ ತಂಡದ ಯುವ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಧ್ರುವ್ ಜುರೆಲ್‌ ಬ್ಯಾಟಿಂಗ್‌ಗೆ ಬಂದಾಗ ತಂಡ 200ಕ್ಕೂ ಹೆಚ್ಚು ರನ್‌ಗಳ ಹಿನ್ನಡೆ ಅನುಭವಿಸುವ ಭೀತಿಯಲ್ಲಿತ್ತು. 177 ರನ್‌ಗಳಿಗೆ ಭಾರತ ತಂಡ ತನ್ನ 7ನೇ ವಿಕೆಟ್‌ ಕಳೆದುಕೊಂಡು ಅಪಾಯಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಕುಲ್ದೀಪ್‌ ಯಾದವ್‌ ಜೊತೆಗೂಡಿ ಅಮೋಘ ಪ್ರದರ್ಶನ ನೀಡಿದ ಧ್ರುವ್‌ ಜುರೆಲ್‌, 8ನೇ ವಿಕೆಟ್‌ಗೆ 202 ಎಸೆತಗಳಲ್ಲಿ 76 ರನ್‌ಗಳ ಜೊತೆಯಾಟ ನೀಡಿದರು. ನಂತರ ಬಂದ ಆಕಾಶ್‌ ದೀಪ್‌ ಜೊತೆಗೂಡಿಯೂ 40 ರನ್‌ಗಳ ಜೊತೆಯಾಟ ಕಟ್ಟಿ ತಂಡದ ಮೊತ್ತವನ್ನು 300 ರನ್‌ಗಳ ಗಡಿ ದಾಟಿಸಿದರು. ಈನಡುವೆ ಜುರೆಲ್‌ ಶತಕ ವಂಚಿತರಾದರು.

    ಶೋಯೆಬ್‌ ಬಶೀರ್‌ ಚೊಚ್ಚಲ 5 ವಿಕೆಟ್‌ ಸಾಧನೆ:
    ಇಂಗ್ಲೆಂಡ್‌ ತಂಡದ ಪರ ಯುವ ಆಫ್‌ ಸ್ಪಿನ್ನರ್‌ ಶೋಯೆಬ್‌ ಬಶೀರ್‌ ಚೊಚ್ಚಲ 5 ವಿಕೆಟ್‌ ಸಾಧನೆಯೊಂದಿಗೆ ಮಿಂಚಿದರು. 20 ವರ್ಷದ ಯುವ ಬೌಲರ್‌ ಒಟ್ಟಾರೆ 44 ಓವರ್‌ಗಳನ್ನು ಎಸೆದು 119ರನ್‌ ಬಿಟ್ಟುಕೊಟ್ಟು 5 ವಿಕೆಟ್‌ ಪಡೆದು ಮಿಂಚಿದರು. ತಮ್ಮ ಟೆಸ್ಟ್‌ ಕ್ರಿಕೆಟ್ ವೃತ್ತಿಬದುಕಿನ 2ನೇ ಪಂದ್ಯದಲ್ಲೇ 5 ವಿಕೆಟ್‌ ಸಾಧನೆಯೊಂದಿಗೆ ಗಮನ ಸೆಳೆದರು. ಇದರೊಂದಿಗೆ ಟಾಮ್‌ ಹಾರ್ಟ್ಲೀ 3 ವಿಕೆಟ್‌, ಜೇಮ್ಸ್‌ ಆಂಡರ್ಸನ್‌ 2 ವಿಕೆಟ್‌ ಕಿತ್ತರು. ಮೊದಲ ಇನಿಂಗ್ಸ್‌ನಲ್ಲಿ 353 ರನ್‌ ಗಳಿಸಿದ್ದ ಇಂಗ್ಲೆಂಡ್‌ ತಂಡ 46 ರನ್‌ಗಳ ಮುನ್ನಡೆಯೊಂದಿಗೆ 2ನೇ ಇನಿಂಗ್ಸ್‌ ಆರಂಭಿಸಿತ್ತು.

  • ಬಶೀರ್‌ ಸ್ಪಿನ್‌ ದಾಳಿಗೆ ಭಾರತ ಕಂಗಾಲು – ಇಂಗ್ಲೆಂಡ್‌ಗೆ 134 ರನ್‌ಗಳ ಮುನ್ನಡೆ

    ಬಶೀರ್‌ ಸ್ಪಿನ್‌ ದಾಳಿಗೆ ಭಾರತ ಕಂಗಾಲು – ಇಂಗ್ಲೆಂಡ್‌ಗೆ 134 ರನ್‌ಗಳ ಮುನ್ನಡೆ

    – 2ನೇ ದಿನ ಯಶಸ್ವಿ ಏಕಾಂಗಿ ಹೋರಾಟ, ಇನ್ನಿಂಗ್ಸ್‌ ಕಟ್ಟುವ ಪ್ರಯತ್ನದಲ್ಲಿ ಜುರೆಲ್‌, ಕುಲ್ದೀಪ್‌

    ರಾಂಚಿ: ಭಾರತ ಹಾಗೂ ಇಂಗ್ಲೆಂಡ್‌ (Ind vs Eng) ನಡುವಿನ 4ನೇ ಟೆಸ್ಟ್‌ ಪಂದ್ಯದ 2ನೇ ದಿನದಾಟ ಮುಕ್ತಾಯಗೊಂಡಿದ್ದು, ಇಂಗ್ಲೆಂಡ್‌ 134 ರನ್‌ಗಳ ಮುನ್ನಡೆ ಸಾಧಿಸಿದೆ. ಇನ್ನು ತನ್ನ ಮೊದಲ ಇನ್ನಿಂಗ್ಸ್‌ ಆರಂಭಿಸಿದ ಭಾರತ 73 ಓವರ್‌ಗಳಲ್ಲಿ 219 ರನ್‌ಗಳಿಗೆ 7 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

    ಟೀಂ ಇಂಡಿಯಾ ಪರ ಯಶಸ್ವಿ ಜೈಸ್ವಾಲ್‌ (Yashasvi Jaiswal) ಹೊರತುಪಡಿಸಿದ್ರೆ ಉಳಿದ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ವಿಕೆಟ್‌ ಕೈಚೆಲ್ಲಿದ ಕಾರಣ ಭಾರತ ಸಂಕಷ್ಟಕ್ಕೆ ಸಿಲುಕಿದೆ. ಸದ್ಯ ಕ್ರೀಸ್‌ನಲ್ಲಿರುವ ಧ್ರುವ್‌ ಜುರೆಲ್‌ (Dhruv Jurel) ಮತ್ತು ಕುಲ್ದೀಪ್‌ ಯಾದವ್‌ (Kuldeep Yadav) ಇನ್ನಿಂಗ್ಸ್‌ ಕಟ್ಟುವ ಪ್ರಯತ್ನದಲ್ಲಿದ್ದಾರೆ. ಇದನ್ನೂ ಓದಿ: ಮಾ.22 ರಿಂದ IPL ಶುರು; ಉದ್ಘಾಟನಾ ಪಂದ್ಯದಲ್ಲೇ ಚೆನ್ನೈ-ಆರ್‌ಸಿಬಿ ನಡುವೆ ಹೈವೋಲ್ಟೇಜ್‌ ಕದನ!

    ಶನಿವಾರ ತನ್ನ ಮೊದಲ ಇನ್ನಿಂಗ್ಸ್‌ ಆರಂಭಿಸಿದ ಟೀಂ ಇಂಡಿಯಾ ಪರ ಯಶಸ್ವಿ ಜೈಸ್ವಾಲ್‌ 73 ರನ್‌ (117 ಎಸೆತ, 8 ಬೌಂಡರಿ, 1 ಸಿಕ್ಸರ್‌) ಗಳಿಸುವ ಮೂಲಕ ತಂಡವನ್ನು ಮೇಲೆತ್ತಲು ಪ್ರಯತ್ನಿಸಿದ್ದರು. ಆದ್ರೆ ಶೋಯೆಬ್‌ ಪಶೀರ್‌ ಸ್ಪಿನ್‌ ದಾಳಿಗೆ ತುತ್ತಾಗಿ ವಿಕೆಟ್‌ ಒಪ್ಪಿಸಿದರು. ಇನ್ನುಳಿದಂತೆ ರೋಹಿತ್‌ ಶರ್ಮಾ 2 ರನ್‌, ಶುಭಮನ್‌ ಗಿಲ್‌ 38 ರನ್‌, ರಜತ್‌ ಪಾಟೀದಾರ್‌ 17 ರನ್‌, ರವೀಂದ್ರ ಜಡೇಜಾ 12 ರನ್‌ ಮತ್ತು ಸರ್ಫರಾಜ್‌ ಖಾನ್‌ 14 ರನ್‌ ಗಳಿಸಿದ್ರೆ ರವಿಚಂದ್ರನ್‌ ಅಶ್ವಿನ್‌ 1 ರನ್‌ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಸದ್ಯ ಧ್ರುವ್‌ ಜುರೆಲ್‌ 30 ರನ್‌ ಮತ್ತು ಕುಲ್ದೀಪ್‌ ಯಾದವ್‌ 17 ರನ್‌ ಗಳಿಸಿ ಕ್ರೀಸ್‌ನಲ್ಲಿದ್ದು, ಭಾನುವಾರ ಇನ್ನಿಂಗ್ಸ್‌ ಆರಂಭಿಸಲಿದ್ದಾರೆ.

    ಇನ್ನೂ ಇಂಗ್ಲೆಂಡ್‌ ಪರ ಸ್ಪಿನ್‌ ದಾಳಿ ನಡೆಸಿದ ಶೋಯೆಬ್‌ ಬಶೀರ್‌ 4 ವಿಕೆಟ್‌ ಕಿತ್ತರೆ, ಟಾಮ್‌ ಹಾರ್ಟ್ಲೀ 2 ವಿಕೆಟ್, ಜೇಮ್ಸ್‌ ಆ್ಯಂಡರ್ಸನ್‌ 1 ವಿಕೆಟ್‌ ಪಡೆದು ಮಿಂಚಿದರು. ಇದನ್ನೂ ಓದಿ: ಟೀಂ ಇಂಡಿಯಾ ವಿರುದ್ಧ ಶತಕ – ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ರೂಟ್‌!

    ಇದಕ್ಕೂ ಮುನ್ನ ಶನಿವಾರ ಬೆಳಗ್ಗೆ 302 ರನ್‌ಗಳಿಂದ ಪ್ರಥಮ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್‌ ತಂಡ, 104.5 ಓವರ್‌ಗಳಿಗೆ 353 ರನ್‌ಗಳಿಗೆ ಆಲ್‌ಔಟ್‌ ಆಯಿತು. 2ನೇ ದಿನ ಆಂಗ್ಲರು ಕೇವಲ 51 ರನ್‌ಗಳನ್ನುಗಳಿಗೆ ಸೀಮಿತರಾದರು. ಜೋ ರೂಟ್‌ 122 ರನ್‌ ಗಳಿಸಿ ಅಜೇಯರಾಗಿ ಉಳಿದರು. ಕೊನೆಯಲ್ಲಿ ಓಲ್ಲೀ ರಾಬಿನ್ಸನ್‌ 58 ರನ್‌ ಗಳಿಸಿದರು. ಭಾರತದ ಪರ ರವೀಂದ್ರ ಜಡೇಜಾ 4 ವಿಕೆಟ್‌ ಕಿತ್ತರೆ, ಆಕಾಶ್‌ ದೀಪ್ 3 ವಿಕೆಟ್‌ ಹಾಗೂ ಮೊಹಮ್ಮದ್‌ ಸಿರಾಜ್‌ 2 ವಿಕೆಟ್‌ ಹಾಗೂ ಅಶ್ವಿನ್‌ 1 ವಿಕೆಟ್‌ ಕಿತ್ತರು.

    ಶುಕ್ರವಾರ ಆರಂಭವಾಗಿದ್ದ 4ನೇ ಟೆಸ್ಟ್‌ ಪಂದ್ಯದಲ್ಲಿ ಟಾಸ್‌ ಗೆದ್ದಿದ್ದ ಇಂಗ್ಲೆಂಡ್‌ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಆದರೆ, 112 ರನ್‌ಗಳಿಗೆ ಪ್ರಮುಖ 5 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿದ ರೂಟ್‌ ಶತಕ ಸಿಡಿಸುವ ಮೂಲಕ ತಂಡಕ್ಕೆ ಆಸರೆಯಾದರು. ಇದು ತಮ್ಮ ಟೆಸ್ಟ್ ವೃತ್ತಿ ಜೀವನದ 31ನೇ ಶತಕವೂ ಆಗಿದೆ.

  • ಭಾರತದ ಕನಸು ಭಗ್ನ – ಇಂಗ್ಲೆಂಡ್‌ಗೆ 7 ವಿಕೆಟ್‌ಗಳ ಜಯ

    ಭಾರತದ ಕನಸು ಭಗ್ನ – ಇಂಗ್ಲೆಂಡ್‌ಗೆ 7 ವಿಕೆಟ್‌ಗಳ ಜಯ

    ಬರ್ಮಿಂಗ್‌ಹ್ಯಾಮ್: ಜೋ ರೂಟ್ ಹಾಗೂ ಜಾನಿ ಬೈರ್‌ಸ್ಟೋವ್ ಅವರ ಶತಕಗಳ ನೆರವಿನಿಂದ ಭಾರತದ ವಿರುದ್ಧದ 5ನೇ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ 7 ವಿಕೆಟ್‌ಗಳಿಂದ ಜಯಗಳಿಸಿದೆ. ಈ ಮೂಲಕ ಟೆಸ್ಟ್ ಸರಣಿ 2-2ರಲ್ಲಿ ಸಮಬಲ ಸಾಧಿಸಿದೆ.

    ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ ನೀಡಿದ್ದ 378 ರನ್‌ಗಳ ಗುರಿ ಪಡೆದಿದ್ದ ಇಂಗ್ಲೆಂಡ್ ತಂಡವು 2ನೇ ಇನ್ನಿಂಗ್ಸ್‌ನ 76.4 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 378 ರನ್‌ಗಳಿಸುವ ಮೂಲಕ ಜಯ ಸಾಧಿಸಿತು. ಇದರಿಂದ ಅಂತಿಮ ಟೆಸ್ಟ್ಗೆದ್ದು ಸರಣಿ ಕೈವಶ ಮಾಡಿಕೊಳ್ಳುವ ಟೀಂ ಇಂಡಿಯಾ ಕನಸು ಭಗ್ನಗೊಂಡಿತು. ಇದನ್ನೂ ಓದಿ: ಹಿಟ್‌ಮ್ಯಾನ್ ರೋಹಿತ್ ಶರ್ಮಾ ಕೋವಿಡ್‌ನಿಂದ ಗುಣಮುಖ – T20ಗೆ ಲಭ್ಯ

    ಇಂಗ್ಲೆಂಡ್ ತಂಡವು 2ನೇ ಇನ್ನಿಂಗ್ಸ್‌ನ 4ನೇ ದಿನದ ಆಟದಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 259 ರನ್ ಪೇರಿಸಿತ್ತು. ಜಾನಿ ಬೈರ್‌ಸ್ಟೋವ್ ಹಾಗೂ ಜೋ ರೂಟ್ ತಮ್ಮ ಆಕರ್ಷಕ ಬ್ಯಾಟಿಂಗ್‌ನಿಂದ ಕ್ರಮವಾಗಿ 114 ಹಾಗೂ 142 ರನ್‌ಗಳನ್ನು ಗಳಿಸಿದ್ದರು. ಇದನ್ನೂ ಓದಿ: ಸುಮ್ನೆ ಬ್ಯಾಟಿಂಗ್ ಮಾಡ್ ಗುರು – ಬೈರ್‌ಸ್ಟೋವ್ ಜೊತೆ ವಾಗ್ವಾದಕ್ಕಿಳಿದ ಕೊಹ್ಲಿ

    5ನೇ ದಿನದ ಆಟಕ್ಕೆ ಗೆಲ್ಲಲು 119 ರನ್‌ಗಳು ಮಾತ್ರವೇ ಬೇಕಿತ್ತು. ಆದರೆ ಟೀಂ ಇಂಡಿಯಾವು ರೂಟ್ ಹಾಗೂ ಬೈರ್‌ಸ್ಟೋವ್ ಅವರ ಜೋಡಿಯು ಭಾರತದ ಸರಣಿ ಗೆಲ್ಲುವ ಆಸೆಗೆ ತಣ್ಣೀರು ಎರಚಿತು.

    ಮೊದಲ 4 ಪಂದ್ಯಗಳಲ್ಲಿ ಟೀಂ ಇಂಡಿಯಾ 2 ಪಂದ್ಯಗಳಲ್ಲಿ ಗೆದ್ದು ಮುನ್ನಡೆ ಸಾಧಿಸಿತ್ತು. ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ನ್ಯಾಟಿಂಗ್‌ಹ್ಯಾಮ್‌ನಲ್ಲಿ ನಡೆದಿದ್ದ ಮೊದಲ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿತ್ತು. ಕಾಶಿ ಲಾರ್ಡ್ಸ್ ಮೈದಾನದಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 151 ರನ್‌ಗಳಿಂದ ಇಂಗ್ಲೆಂಡ್ ತಂಡವನ್ನು ಮಣಿಸಿತ್ತು. ಹೆಡಿಂಗ್ಲೆಯಲ್ಲಿ ನಡೆದ 3ನೇ ಪಂದ್ಯದಲ್ಲಿ ಅಬ್ಬರಿಸಿದ್ದ ಇಂಗ್ಲೆಂಡ್ ತಂಡವು 76 ರನ್ ಹಾಗೂ 7 ವಿಕೆಟ್‌ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿತ್ತು.

    ಓವಲ್ ಮೈದಾನದಲ್ಲಿ ನಡೆದ 4ನೇ ಪಂದ್ಯದಲ್ಲಿ ಭಾರತವು 157 ರನ್‌ಗಳಿಂದ ಇಂಗ್ಲೆಂಡ್ ತಂಡವನ್ನು ಸೋಲಿಸಿ ಸರಣಿ ಕೈವಶ ಮಾಡಿಕೊಳ್ಳುವ ಕನಸುಕಂಡಿತ್ತು. ಆದರೆ ಅಂತಿಮ ಟೆಸ್ಟ್‌ನಲ್ಲಿ ರೂಟ್ ಹಾಗೂ ಬೈರ್‌ಸ್ಟೋವ್ ಜೋಡಿಯ ಬಿರುಸಿನ ಆಟವು ಇಂಡಿಯಾದ ಸರಣಿ ಗೆಲ್ಲುವ ಕನಸನ್ನು ನುಚ್ಚುನೂರು ಮಾಡಿದೆ.

    ರೂಟ್, ಬೈರ್‌ಸ್ಟೋವ್ ಶತಕಗಳ ಅಬ್ಬರ: ಅಂತಿಮ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ 4ನೇ ವಿಕೆಟ್ ಆಟಕ್ಕೆ ಜೊತೆಯಾದ ಜೋ ರೂಟ್ ಹಾಗೂ ಜಾನಿ ಬೈರ್‌ಸ್ಟೋವ್ 315 ಎಸೆತಗಳಲ್ಲಿ 268 ರನ್‌ಗಳ ಜೊತೆಯಾಟವಾಡಿದರು. ಇಬ್ಬರ ಆಕರ್ಷಕ ಶತಕಗಳ ನೆರವಿನಿಂದ ತವರಿನಲ್ಲಿ ಮುಖಭಂಗ ಆಗುವುದನ್ನು ತಪ್ಪಿಸಿಕೊಂಡಿತು. ಜೋ ರೂಟ್ 173 ಎಸೆತಗಳಲ್ಲಿ 142 ರನ್ (19 ಫೋರ್, 1 ಸಿಕ್ಸರ್) ಗಳಿಸಿದರೆ 145 ಎಸೆತಗಳನ್ನು ಎದುರಿಸಿದ ಬೈರ್‌ಸ್ಟೋವ್ 114 ರನ್ (15 ಫೋರ್ ಹಾಗೂ 1 ಸಿಕ್ಸರ್) ಗಳಿಸುವ ಮೂಲಕ ತವರಿನಲ್ಲಿ ಗೆದ್ದು ಬೀಗಿದರು.

    ಇಂಗ್ಲೆಂಡ್ ಪರ ಬೌಲಿಂಗ್ ನಲ್ಲಿ ಬೆನ್‌ಸ್ಟೋಕ್ಸ್ 4, ಬ್ರಾಡ್ ಮತ್ತು ಪೋಟ್ಸ್ ತಲಾ 2 ವಿಕೆಟ್ ಹಾಗೂ ಲೀಚ್, ಆಂಡ್ರ‍್ಯೂಸನ್ ತಲಾ 1 ವಿಕೆಟ್ ಪಡೆದಿದ್ದರು. ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯಕ್ಕೆ ವಿವಿಎಸ್ ಲಕ್ಷ್ಮಣ್ ಟೀಂ ಇಂಡಿಯಾ ಕೋಚ್?

    ಆತಿಥೇಯ ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ 245 ರನ್ ಗಳಿಗೆ ಆಲೌಟ್ ಆಗಿ ಇಂಗ್ಲೆಂಡ್‌ಗೆ ಗೆಲ್ಲಲು 378 ರನ್‌ಗಳ ಗುರಿ ನೀಡಿತ್ತು. 2ನೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ 245 ರನ್ ಗಳಿಗೆ ಸರ್ವಪತನ ಕಂಡಿತ್ತು. ಟೀಂ ಇಂಡಿಯಾ ಪರ ಚೇತೇಶ್ವರ ಪೂಜಾರ 66, ವಿರಾಟ್ ಕೊಹ್ಲಿ 20, ರಿಷಬ್ ಪಂತ್ 57, ಶ್ರೇಯಸ್ ಅಯ್ಯರ್ 19, ರವೀಂದ್ರ ಜಡೇಜಾ 23 ರನ್ ಗಳಿಸಿದ್ದರು.

    Live Tv
    [brid partner=56869869 player=32851 video=960834 autoplay=true]