Tag: Jobs

  • ವೀಡಿಯೋ- 11 ವರ್ಷ ಕಾರ್ಯನಿರ್ವಹಿಸಿದ್ದ ಶ್ವಾನಕ್ಕೆ ಸಿಬ್ಬಂದಿಯಿಂದ ಬೀಳ್ಕೊಡುಗೆ

    ವೀಡಿಯೋ- 11 ವರ್ಷ ಕಾರ್ಯನಿರ್ವಹಿಸಿದ್ದ ಶ್ವಾನಕ್ಕೆ ಸಿಬ್ಬಂದಿಯಿಂದ ಬೀಳ್ಕೊಡುಗೆ

    ಮುಂಬೈ: ನಾಸಿಕ್ ಸಿಟಿ ಪೊಲೀಸ್ ಪಡೆ ಮತ್ತು ಬಾಂಬ್ ಪತ್ತೆದಳದಲ್ಲಿ 11 ವರ್ಷ ಕಾರ್ಯನಿರ್ವಹಿಸಿದ್ದ ಸ್ಪೈಕ್ ಹೆಸರಿನ ಶ್ವಾನವೊಂದಕ್ಕೆ ಬೀಳ್ಕೊಟ್ಟ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

    ಕರ್ತವ್ಯದಿಂದ ನಿವೃತ್ತಿ ಹೊಂದಿ ಶ್ವಾನವನ್ನು ಪೊಲೀಸ್ ವ್ಯಾನ್‍ನ ಬಾನೆಟ್‍ನಲ್ಲಿ ಕೂರಿಸಿ ಹಾರ ಹಾಕಿ ಮೆರವಣಿಗೆ ಮಾಡಲಾಗಿದೆ. ವಾಹನವನ್ನು ಬಲೂನ್ ಮತ್ತು ಹೂವಿನಿಂದ ಶೃಂಗಾರ ಮಾಡಲಾಗಿತ್ತು. ಪೊಲೀಸ್ ಸಿಬ್ಬಂದಿ ಚಪ್ಪಾಳೆ ತಟ್ಟುವ ಮೂಲಕವಾಗಿ ಪ್ರೀತಿಯಿಂದ ಬೀಳ್ಕೊಟ್ಟಿದ್ದಾರೆ.

    ಸ್ಪೈಕ್ ಕೂಡ ಶಾಂತವಾಗಿ ಕುಳಿತು ಮೆರವಣಿಗೆಯಲ್ಲಿ ಸಾಗಿದೆ. ವೃತ್ತಿಜೀವನದ ಹಂತವನ್ನು ಮುಗಿಸಿ ನಿವೃತ್ತಿ ಜೀವನದಲ್ಲಿ ಕೆಲ ಸಮಯ ವಿಶ್ರಾಂತಿ ಪಡೆಯಲಿದೆ. ಕಷ್ಟಪಟ್ಟು ನಿಯತ್ತಿನಿಂದ ಕೆಲಸ ಮಾಡಿರುವ ಶ್ವಾನದ ಕಾರ್ಯಕ್ಕೆ ಸಿಬ್ಬಂದಿ ಮೆಚ್ಚುಗೆಯ ಮಾತುಗಳನ್ನಾಡಿ ಕೇಕ್ ಕತ್ತರಿಸಿ ಬೀಳ್ಕೊಟ್ಟು ಸಂಭ್ರಮಿಸಿದ್ದಾರೆ.

    ಗೋಲ್ಡನ್ ಲ್ಯಾಬ್ರಡಾರ್ 2010 ರಲ್ಲಿ ನಾಸಿಕ್ ಬಾಂಬ್ ಡಿಟೆಕ್ಷನ್ ಡಾಗ್ ಸ್ಕ್ವಾಡ್‍ಗೆ ಸೇರಿತ್ತು. ಗುಪ್ತ ಪೆಟ್ರೋಲ್ ಬಾಂಬ್‍ಗಳನ್ನು ಪತ್ತೆ ಹಚ್ಚುವಲ್ಲಿ ಈ ಶ್ವಾನವು ಅತ್ಯಂತ ಪರಿಣತಿಯನ್ನು ಹೊಂದಿತ್ತು.

  • ಗುಜುರಿ ನೀತಿಯಿಂದ 50 ಸಾವಿರ ಉದ್ಯೋಗ ಸೃಷ್ಟಿ – ಗಡ್ಕರಿ

    ಗುಜುರಿ ನೀತಿಯಿಂದ 50 ಸಾವಿರ ಉದ್ಯೋಗ ಸೃಷ್ಟಿ – ಗಡ್ಕರಿ

    ನವದೆಹಲಿ: ಬಜೆಟ್‌ನಲ್ಲಿ ಮಂಡನೆಯಾದ ನೂತನ ಸ್ವಯಂ ಪ್ರೇರಿತ ಗುಜುರಿ ನೀತಿಯಿಂದ ಅಂದಾಜು 50 ಸಾವಿರ ಉದ್ಯೋಗಗಳು ಸೃಷ್ಟಿಯಾಗಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.

    ತಮ್ಮ ನಿವಾಸದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಂದಿನ 15 ದಿನಗಳ ಒಳಗಡೆ ಗುಜುರಿ ನೀತಿಯ ಬಗ್ಗೆ ಸಮಗ್ರವಾದ ವಿವರವನ್ನು ಪ್ರಕಟಿಸಲಾಗುವುದು. ಈ ನೀತಿಯಿಂದ ದೇಶದಲ್ಲಿ ಅಂದಾಜು 10 ಸಾವಿರ ಕೋಟಿ ರೂ. ಹೂಡಿಕೆಯಾಗಲಿದೆ ಎಂದು ಹೇಳಿದರು.

    ಪ್ರಸ್ತುತ ಭಾರತದಲ್ಲಿ 20 ವರ್ಷ ಮೇಲ್ಪಟ್ಟ 51 ಲಕ್ಷ, 15 ವರ್ಷ ಮೇಲ್ಪಟ್ಟ 34 ಲಕ್ಷ ಲಘು ಮೋಟಾರು ವಾಹನಗಳಿವೆ. 15 ವರ್ಷ ಮೇಲ್ಪಟ್ಟ 17 ಲಕ್ಷ ಮಧ್ಯಮ ಮತ್ತು ಭಾರೀ ಗಾತ್ರದ ವಾಹನಗಳಿವೆ. ಈ ವಾಹನಗಳು ಯಾವುದೇ ಫಿಟ್‌ನೆಸ್‌ ಪ್ರಮಾಣಪತ್ರವನ್ನು ಹೊಂದಿಲ್ಲ. ಹೊಸ ವಾಹನಗಳಿಗೆ ಹೋಲಿಸಿದರೆ ಈ ವಾಹನಗಳು 10-12 ಪಟ್ಟು ಮಾಲಿನ್ಯವನ್ನು ಹೊರ ಹಾಕುತ್ತಿವೆ ಎಂದು ವಿವರಿಸಿದರು.

    ಮೆಟಲ್‌(ಲೋಹ) ತ್ಯಾಜ್ಯ ಮರುಬಳಕೆ, ಸುಧಾರಿತ ಸುರಕ್ಷತೆ, ವಾಯುಮಾಲಿನ್ಯ ಮತ್ತು ಇಂಧನ ಆಮದು ಕಡಿಮೆ ಮಾಡುವುದರ ಜೊತೆಗೆ ಹೂಡಿಕೆಯನ್ನು ಉತ್ತೇಜಿಸಲು ಹೊಸ ನೀತಿ ಸಹಾಯವಾಗಲಿದೆ ಎಂದು ಅದರ ಪ್ರಯೋಜನವನ್ನು ತಿಳಿಸಿದರು.

    ಬಜೆಟ್‌ನಲ್ಲಿ ಹೆದ್ದಾರಿ ಕ್ಷೇತ್ರಕ್ಕೆ 1,18,000 ಕೋಟಿ ರೂ. ಅನುದಾನ ನೀಡಿದ್ದನ್ನು ಸ್ವಾಗತಿಸಿದ ಗಡ್ಕರಿ ಇದರಿಂದಾಗಿ ದೇಶದಲ್ಲಿ ರಸ್ತೆ ಜಾಲವನ್ನು ವಿಸ್ತರಿಸಲು ಸಹಾಯವಾಗಲಿದೆ ಎಂದು ಹೇಳಿದರು.

    ಬಜೆಟ್‌ ಭಾಷಣದಲ್ಲಿ ಸ್ವಯಂಪ್ರೇರಿತ ಗುಜುರಿ ನೀತಿ ಜಾರಿಯ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಪ್ರಸ್ತಾಪ ಮಾಡಿದ್ದಾರೆ. 20 ವರ್ಷ ಮೇಲ್ಪಟ್ಟ ಖಾಸಗಿ ವಾಹನ, 15 ವರ್ಷ ಮೇಲ್ಪಟ್ಟ ವಾಣಿಜ್ಯ  ವಾಹನಗಳು ಫಿಟ್‌ನೆಸ್ ಪರೀಕ್ಷೆಗೆ ಒಳಗಾಗಬೇಕು ಎಂದು ಹೇಳಿದ್ದರು ಇದನ್ನೂ ಓದಿ : ಏನಿದು ಗುಜುರಿ ನೀತಿ? ದರ ನಿಗದಿ ಹೇಗೆ?

  • ಅಸಹಾಯಕ ಯುವತಿಯರೇ ಇವರ ಟಾರ್ಗೆಟ್ – ಕೆಲಸಕ್ಕೆ ಕರೆದು ಸೆಕ್ಸ್ ದಂಧೆಗೆ ಬಳಕೆ!

    ಅಸಹಾಯಕ ಯುವತಿಯರೇ ಇವರ ಟಾರ್ಗೆಟ್ – ಕೆಲಸಕ್ಕೆ ಕರೆದು ಸೆಕ್ಸ್ ದಂಧೆಗೆ ಬಳಕೆ!

    ಪಾಟ್ನಾ: ಕೆಲಸ ಹುಡುಕುತ್ತಿದ್ದ ಅಮಾಯಕ ಯುವತಿಯರನ್ನ ಬಳಸಿಕೊಂಡು ಸೆಕ್ಸ್ ದಂಧೆ ನಡೆಸುತ್ತಿದ್ದ ಹೋಟೆಲ್ ಮೇಲೆ ಪೊಲೀಸರು ದಾಳಿ ನಡೆಸಿ, ಆರಕ್ಕೂ ಹೆಚ್ಚು ಜನರನ್ನ ಬಂಧಿಸಿದ್ದಾರೆ. ಬಿಹಾರದ ಸಮಸ್ತಿಪುರದ ಸಿದ್ಧಿ ವಿನಾಯಕ್ ಹೋಟೆಲ್ ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿತ್ತು.

    ವೇಶ್ಯಾವಾಟಿಕೆಯ ಸೂಚನೆ ಸಿಗುತ್ತಿದ್ದಂತೆ ಟ್ರೈನಿ ಐಪಿಎಸ್ ಹಿಮಾಂಶು ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಹೋಟೆಲ್ ನ ವಿವಿಧ ಕೋಣೆಗಳಿಂದ ಮೂರು ಜೋಡಿಗಳನ್ನ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಹೋಟೆಲ್ ಮಾಲೀಕನ ಪುತ್ರ ಮತ್ತು ಓರ್ವ ಕೆಲಸಗಾರನನ್ನು ಬಂಧಿಸಿದ್ದಾರೆ.

    ಕೆಲಸ ಮತ್ತು ಹಣದ ಅವಶ್ಯಕತೆ ಇರೋ ಯುವತಿಯರನ್ನ ಟಾರ್ಗೆಟ್ ಮಾಡಿ ಅವರನ್ನ ವೇಶ್ಯಾವಾಟಿಕೆ ಬಳಸಿಕೊಳ್ಳುತ್ತಿದ್ದರು. ಕೆಲಸದ ಆಮೀಷ ಒಡ್ಡಿ ಬಲವಂತವಾಗಿ ಸೆಕ್ಸ್ ಕೂಪಕ್ಕೆ ತಳ್ಳುತ್ತಿದ್ದರು. ಪೊಲೀಸರು ಯುವತಿಯರಿಂದ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.

    ವೇಶ್ಯಾವಾಟಿಕೆ ನಡೆಸುತ್ತಿದ್ದ ಹೋಟೆಲ್ ಮೇಲೆ ಪೊಲೀಸರು ದಾಳಿ ನಡೆಸಿ ನಾಲ್ವರು ವಿವಾಹಿತೆಯರು, ಓರ್ವ ಯುವತಿ ಮತ್ತು ಗ್ರಾಹಕರಿಬ್ಬರನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ದಂಧೆಯ ಕಿಂಗ್ ಪಿನ್ ಎಸ್ಕೇಪ್ ಆಗಿದ್ದಾನೆ. ಉತ್ತರ ಪ್ರದೇಶದ ಆಗ್ರಾ ರಕಾಬಂಗಾಜ್‍ನಲ್ಲಿರುವ ಆರ್.ಬಿ.ರೆಸಿಡೆನ್ಸಿ ಹೋಟೆಲ್ ನಲ್ಲಿ ಸೆಕ್ಸ್ ದಂಧೆ ನಡೆಯುತ್ತಿರುವ ಬಗ್ಗೆ ಪೊಲೀಸರಿಗೆ ದೂರುಗಳು ಬಂದಿದ್ದವು.

    ಆಗ್ರಾದ ಹೋಟೆಲ್ ಮೇಲೆ ದಾಳಿ: ಆಗ್ರಾದ ಹೋಟೆಲ್ ಮೇಲೆ ದಾಳಿ ನಡೆಸಿದಾಗ ವಿವಿಧ ಕೋಣೆಗಳಲ್ಲಿದ್ದ ಒಟ್ಟು ಏಳು ಜನರನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಪೊಲೀಸರ ದಾಳಿಯಾಗುತ್ತಲೇ ಭಯಗೊಂಡ ಯುವತಿ ಗೋಳು ಅಂತ ಕಣ್ಣೀರಿಟ್ಟಿದ್ದಾಳೆ. ಎಲ್ಲರನ್ನ ಠಾಣೆಗೆ ಕರೆ ತಂದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮಹಿಳೆಯರು ಫಿರೋಜಾಬಾದ್, ಧನೌಲಿ, ಮಲ್ಪುರಾ ನಿವಾಸಿಗಳೆಂದು ತಿಳಿದು ಬಂದಿದೆ. ಹೋಟೆಲ್ ಹೊರಗೆ ನಿಲ್ಲುತ್ತಿದ್ದ ವ್ಯಕ್ತಿ ಗಂಟೆಗೆ 600 ರೂ.ಯಂತೆ ಕೋಣೆಗಳನ್ನ ಬಾಡಿಗೆ ನೀಡುತ್ತಿದ್ದನು. ಇನ್ನು ಹೋಟೆಲ್ ನಲ್ಲಿದ್ದ ಮಹಿಳೆಯರು ಸಾವಿರ ರೂಪಾಯಿ ಪಡೆದುಕೊಳ್ಳುತ್ತಿದ್ದರು.

    ವೇಶ್ಯಾವಾಟಿಕೆ ಸಿಲುಕಿರುವ ಮಹಿಳೆಯರಿಗೆ ಗಂಡ, ಮಕ್ಕಳು ಇವೆ. ಸ್ಪಾಗಳಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರು ಕೊರೊನಾ ವೇಳೆ ಕೆಲಸ ಕಳೆದುಕೊಂಡಿದ್ದರು. ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದ ಇವರು ದೇಹ ವ್ಯಾಪಾರಕ್ಕೆ ಮುಂದಾಗಿದ್ದರು. ಆದ್ರೆ ಇವರ ಈ ಕೆಲಸ ಕುಟುಂಬಸ್ಥರಿಗೆ ಹೇಳಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿ ಮಹೇಶ್ ಕುಮಾರ್ ಹೇಳಿದ್ದಾರೆ. ಇದೇ ಪ್ರಕರಣದಲ್ಲಿ ಸಿಲುಕಿರುವ ಯುವತಿ ತನ್ನ ಹೆಸರು ಮತ್ತು ವಿಳಾಸ ಹೇಳಿಲ್ಲ. ಗೆಳೆಯನ ಜೊತೆ ಬಂದಿದ್ದೆ ಎಂದು ಕಣ್ಣೀರು ಹಾಕುತ್ತಿದ್ದಾಳೆ. ಆದ್ರೆ ರೂಮ್ ಬುಕ್ ಮಾಡಿದ್ಯಾಕೆ ಎಂಬ ಪ್ರಶ್ನೆಗೆ ಯುವತಿ ಉತ್ತರಿಸುತ್ತಿಲ್ಲ. ಬಂಧಿತ ಯುವಕರು ಮಲ್ಪುರಾದವರು ಎಂದು ವರದಿಯಾಗಿದೆ.

  • ಕೆಲಸ ಕೊಡಿಸುವುದಾಗಿ ನಂಬಿಸಿ ಟೆಕ್ಕಿಗೆ 28 ಲಕ್ಷ ವಂಚನೆ

    ಕೆಲಸ ಕೊಡಿಸುವುದಾಗಿ ನಂಬಿಸಿ ಟೆಕ್ಕಿಗೆ 28 ಲಕ್ಷ ವಂಚನೆ

    – ಸೆಕ್ಯೂರಿಟಿ ಗಾರ್ಡ್ ಬ್ಯಾಂಕ್ ಖಾತೆ ಬಳಸಿ ಮೋಸ
    – 28 ಲಕ್ಷ ರೂ.ಬಾಂಡ್ ನೀಡುವಂತೆ ಬೇಡಿಕೆ

    ನವದೆಹಲಿ: ಕೆಲಸ ಕೊಡಿಸುವುದಾಗಿ ನಂಬಿಸಿ ಮಹಿಳಾ ಎಂಜಿನಿಯರ್‍ಗೆ 28 ಲಕ್ಷ ರೂ.ಗಳನ್ನು ವಂಚಿಸಿರುವ ಆಘಾತಕಾರಿ ಘಟನೆ ನಡೆದಿದೆ.

    ನೋಯ್ಡಾದಲ್ಲಿ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 28 ವರ್ಷದ ಸೆಕ್ಯೂರಿಟಿ ಗಾರ್ಡ್ ಪಿಂಕೇಶ್ ಕುಮಾರ್‍ನನ್ನು ಬಂಧಿಸಲಾಗಿದ್ದು, ಈತ ನೋಯ್ಡಾದ ವಸತಿ ಸಮುಚ್ಛಯದಲ್ಲಿ ಕೆಲಸ ಮಾಡುತ್ತಿದ್ದ. ಎರಡು ವರ್ಷಗಳ ಹಿಂದೆ ಕಮಿಷನ್ ನೀಡುವುದಾಗಿ ಹೇಳಿ ಸೆಕ್ಯೂರಿಟಿ ಗಾರ್ಡ್‍ನಿಂದ ವಿವಿಧ ಬ್ಯಾಂಕ್‍ಗಳಲ್ಲಿ ಒತ್ತಾಯಪೂರ್ವಕವಾಗಿ ಖಾತೆ ತೆರೆಸಿದ್ದ. ವ್ಯಕ್ತಿ ತಾನು ಬೇರೆಯವರಿಗೆ ವಂಚಿಸಿದ ಹಣವನ್ನು ಸೆಕ್ಯೂರಿಟಿ ಖಾತೆಗೆ ಹಾಕುತ್ತಿದ್ದ. ನಂತರ ಹಣ ಸಂದಾಯವಾಗುತ್ತಿದ್ದಂತೆ ಎಟಿಎಂಗಳ ಮೂಲಕ ಬಿಡಿಸಿಕೊಳ್ಳುತ್ತಿದ್ದ. ಬಿಡಿಸಿದ ಒಟ್ಟು ಹಣದಲ್ಲಿ ಸೆಕ್ಯೂರಿಟಿ ಕುಮಾರ್‍ಗೆ ಶೇ.10ರಷ್ಟು ಕಮಿಶನ್ ನೀಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ವಂಚನೆ ಕುರಿತು ಅರಿವಾಗುತ್ತಿದ್ದಂತೆ ಟೆಕ್ಕಿ ಯುವತಿ ಮಾಳವಿಯಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ವೇಳೆ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚಿಸಿದ್ದಾರೆ ಎಂದು ಪೊಲೀಸರ ಬಳಿ ಹೇಳಿಕೊಂಡಿದ್ದಾರೆ. ಮಹಿಳೆ ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದು, ಕಂಪನಿಯೊಂದರಲ್ಲಿ ಉಪ ವ್ಯವಸ್ಥಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೇ ವೇಳೆ ಬೇರೆಡೆ ಕೆಲಸ ಹುಡುಕಲು ಯತ್ನಿಸಿದ್ದಾರೆ.

    ವಂಚನೆ ಹೇಗಾಯ್ತು?
    ಘಟನೆ ಕುರಿತು ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದು, ಜುಲೈ ಮೊದಲ ವಾರದಲ್ಲಿ ಆನ್‍ಲೈನ್ ಜಾಬ್ ಪೋರ್ಟಲ್‍ನಿಂದ ವಾಯ್ಸ್ ಓವರ್ ಇಂಟರ್ನೆಟ್ ಪ್ರೊಟೊಕಾಲ್(ವಿಒಐಪಿ) ಕರೆ ಬಂತು. ವ್ಯಕ್ತಿ ತನ್ನ ಹೆಸರು ರಾಹುಲ್ ಎಂದು ಪರಿಚಯ ಮಾಡಿಕೊಂಡ. ಈ ವೇಳೆ ನಿಮ್ಮ ಸಿವಿ ಡಿಎಲ್‍ಎಫ್ ಲಿಮಿಟೆಡ್‍ಗೆ ಆಯ್ಕೆಯಾಗಿದೆ ಎಂದು ತಿಳಿಸಿದ. ಕೆಲ ದಿನಗಳ ಬಳಿಕ ಮತ್ತೊಂದು ವಿಒಐಪಿ ಕರೆ ಬಂತು, ಈ ವೇಳೆ ಮತ್ತೊಬ್ಬ ವ್ಯಕ್ತಿ ಮಾತನಾಡಿ ಡಿಎಲ್‍ಎಫ್ ಎಚ್‍ಆರ್ ಎಂದು ಪರಿಚಯಿಸಿಕೊಂಡ. ನಂತರ ನೀವು ಹಿರಿಯ ವ್ಯವಸ್ಥಾಪಕಿ ಹುದ್ದೆಗೆ ಆಯ್ಕೆಯಾಗಿದ್ದೀರಿ. ಉತ್ತಮ ಪ್ಯಾಕೇಜ್ ಸಹ ನೀಡಲಾಗುವುದು ಎಂದು ಹೇಳಿದ ಎಂದು ದೂರಿನಲ್ಲಿ ಮಹಿಳೆ ಉಲ್ಲೇಖಿಸಿದ್ದಾರೆ.

    ಹೀಗೆ ಮಾತನಾಡುತ್ತ 28 ಲಕ್ಷ ರೂ.ಗಳ ಬಾಂಡ್ ನೀಡುವಂತೆ ಕೇಳಿದ್ದಾನೆ. ಮೊದಲ ಹಂತದಲ್ಲಿ 6.8 ಲಕ್ಷ ರೂ. ಠೇವಣಿ ಇಡುವಂತೆ ಹೇಳಿದ್ದಾನೆ. ಹೀಗೆ ಮಾಡಿ ಮಹಿಳಾ ಎಂಜಿನಿಯರಿಂದ ವಿವಿಧ ಬ್ಯಾಂಕ್‍ಗಳ ಖಾತೆಗೆ 28 ಲಕ್ಷ ರೂ.ಗಳನ್ನು ಡೆಪಾಸಿಟ್ ಮಾಡಿಸಿಕೊಂಡಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.

    ಇದೀಗ ದೂರು ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಮಹಿಳೆಯ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿ ಬ್ಯಾಂಕ್ ಖಾತೆಯ ವಿವರಗಳನ್ನು ಕಲೆ ಹಾಕಲಾಗುತ್ತಿದೆ. ಅಲ್ಲದೆ ಕರೆ ಮಾಡಿದ ನಂಬರ್‍ಗಳನ್ನೂ ಟ್ರೇಸ್ ಮಾಡಲಾಗುತ್ತಿದೆ ಎಂದು ನೋಯ್ಡಾ ದಕ್ಷಿಣ ವಿಭಾಗದ ಡಿಸಿಪಿ ಅತುಲ್ ಕುಮಾರ್ ಠಾಕೂರ್ ಹೇಳಿದ್ದಾರೆ.

    ಟೆಕ್ನಿಕಲ್ ಅನಾಲಿಸಿಸ್ ಸಹಾಯದಿಂದ ಕರೆ ಮಾಡಿದ ವಿವರಗಳು ಹಾಗೂ ಸ್ಥಳೀಯ ಮೂಲಗಳ ಮಾಹಿತಿ ಮೇರೆಗೆ ನೊಯ್ಡಾ ಸೆಕ್ಟರ್ 122ನ ಖಂಜರ್‍ಪುರದ ಬಳಿ ಕುಮಾರ್‍ನನ್ನು ಬಂಧಿಸಲಾಗಿದೆ. ಆದರೆ ಕುಮಾರ್ ಯಾವುದೇ ಅಪರಾಧಗಳಲ್ಲಿ ಭಾಗಿಯಾಗಿಲ್ಲ. ಪ್ರಮುಖ ಆರೋಪಿಗಳನ್ನು ಬಂಧಿಸಬೇಕಿದೆ ಎಂದು ಠಾಕೂರ್ ವಿವರಿಸಿದ್ದಾರೆ.

  • ಇನ್ನು ಮುಂದೆ ಕೇಂದ್ರದ ಹುದ್ದೆಗಳಿಗೆ ಒಂದೇ ಪರೀಕ್ಷೆ

    ಇನ್ನು ಮುಂದೆ ಕೇಂದ್ರದ ಹುದ್ದೆಗಳಿಗೆ ಒಂದೇ ಪರೀಕ್ಷೆ

    – ನಾನ್‌ ಗೆಜೆಟೆಡ್‌ ಹುದ್ದೆಗಳಿಗೆ ಏಕರೂಪದ ಸಿಇಟಿ
    – ಮೂರು ವರ್ಷಗಳವರೆಗೆ ಅಂಕಗಳಿಗೆ ಮಾನ್ಯತೆ
    – ದೇಶದ ವಿವಿಧ ಭಾಷೆಗಳಲ್ಲಿ ಪರೀಕ್ಷೆ

    ನವದೆಹಲಿ: ಇನ್ನು ಮುಂದೆ ಕೇಂದ್ರ ಸರ್ಕಾರದ ಹುದ್ದೆ ಪಡೆಯಲು ಹಲವು ಪರೀಕ್ಷೆಗಳನ್ನು ಬರೆಯಬೇಕಿಲ್ಲ. ಒಂದೇ ಪರೀಕ್ಷೆ ಬರೆಯುವ ಮೂಲಕ ವಿವಿಧ ಇಲಾಖೆಯ ಹುದ್ದೆಯನ್ನು ಪಡೆಯಬಹುದು.

    ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಕ್ಯಾಬಿನೆಟ್‌ ಸಭೆಯಲ್ಲಿ ರಾಷ್ಟ್ರೀಯ ನೇಮಕಾತಿ ಸಂಸ್ಥೆ (ಎನ್‌ಆರ್‌ಎ) ರಚನೆಗೆ ಅನುಮೋದನೆ ನೀಡಿದೆ. ಈ ವರ್ಷದ ಬಜೆಟ್‌ನಲ್ಲಿ ಎನ್‌ಆರ್‌ಎ ರಚಿಸಲಾಗುವುದು ಎಂದು ಸರ್ಕಾರ ತಿಳಿಸಿತ್ತು.

     

    ಕೇಂದ್ರ ಸರ್ಕಾರ ಇಲಾಖೆ ಮತ್ತು ಸಾರ್ವಜನಿಕ ವಲಯದಲ್ಲಿರುವ ಬ್ಯಾಂಕುಗಳ ನಾನ್‌ ಗೆಜೆಟೆಡ್‌ ಹುದ್ದೆಗಳನ್ನು ಬಯಸುವ ಮಂದಿಗೆ ಸುಲಭವಾಗಲು ಸರ್ಕಾರ ಎನ್‌ಆರ್‌ಎ ಸ್ಥಾಪನೆಗೆ ಮುಂದಾಗಿದೆ.

     

     

     

    ಯಾಕೆ ಈ ಪರೀಕ್ಷೆ?
    ಪ್ರಸ್ತುತ, ಸರ್ಕಾರಿ ಉದ್ಯೋಗಗಳನ್ನು ಬಯಸುವ ಅಭ್ಯರ್ಥಿಗಳು ವಿವಿಧ ಹುದ್ದೆಗಳಿಗೆ ಬಹು ನೇಮಕಾತಿ ಏಜೆನ್ಸಿಗಳು ನಡೆಸುವ ಪ್ರತ್ಯೇಕ ಪರೀಕ್ಷೆಗಳಿಗೆ ಹಾಜರಾಗಬೇಕಾಗುತ್ತದೆ. ಅಷ್ಟೇ ಅಲ್ಲದೇ ಅಭ್ಯರ್ಥಿಗಳು ಅನೇಕ ನೇಮಕಾತಿ ಏಜೆನ್ಸಿಗಳಿಗೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಮತ್ತು ವಿವಿಧ ಪರೀಕ್ಷೆಗಳಿಗೆ ಹಾಜರಾಗಲು ದೂರದ ಪ್ರಯಾಣ ಮಾಡಬೇಕಾಗುತ್ತದೆ. ಇದನ್ನು ತಪ್ಪಿಸಲು ಒಂದೇ ಸಿಇಟಿ ಪರೀಕ್ಷೆಯನ್ನು ರಾಷ್ಟ್ರೀಯ ನೇಮಕಾತಿ ಸಂಸ್ಥೆ ನಡೆಸಲಿದೆ. ಸಿಇಟಿ ಅಂಕ ಮೂರು ವರ್ಷಗಳವರೆಗೆ ಮಾನ್ಯವಾಗಿರುತ್ತದೆ, ಪ್ರಯತ್ನಗಳಿಗೆ ಯಾವುದೇ ನಿರ್ಬಂಧವಿಲ್ಲ ಎಂದು ಸರ್ಕಾರ ತಿಳಿಸಿದೆ.

     

    ಯಾವೆಲ್ಲ ಪರೀಕ್ಷೆ?
    ಎನ್‌ಆರ್‌ಎ ಮೂರು ಹಂತದ ಪದವೀಧರ, ಹೈಯರ್ ಸೆಕೆಂಡರಿ (12 ನೇ ಪಾಸ್) ಮತ್ತು ತಾಂತ್ರಿಕೇತರ ಹುದ್ದೆಗಳಿಗೆ ಮೆಟ್ರಿಕ್ಯುಲೇಟ್ (10 ನೇ ಪಾಸ್) ಅಭ್ಯರ್ಥಿಗಳಿಗೆ ತಲಾ ಪ್ರತ್ಯೇಕ ಸಿಇಟಿಯನ್ನು ನಡೆಸಿ ಅಂಕ ನೀಡುತ್ತದೆ.

    ಪ್ರಸ್ತುತ ನೇಮಕಾತಿಯನ್ನು ಸಿಬ್ಬಂದಿ ಆಯ್ಕೆ ಆಯೋಗ (ಎಸ್‌ಎಸ್‌ಸಿ), ರೈಲ್ವೆ ನೇಮಕಾತಿ ಮಂಡಳಿಗಳು (ಆರ್‌ಆರ್‌ಬಿಎಸ್‌) ಮತ್ತು ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್‌ ಸೆಲೆಕ್ಷನ್‌( ಐಬಿಪಿಎಸ್) ಮಾಡುತ್ತದೆ. ಈಗ ಇವುಗಳು ನಡೆಸುವ ಪರೀಕ್ಷೆಗಳನ್ನು ಎನ್‌ಆರ್‌ಎ ನಡೆಸಲಿದೆ.

    ಈ ಎಲ್ಲ ಪರೀಕ್ಷೆಗಳ ಸಂಬಂಧಿಸಿದ ಪಠ್ಯಗಳು ಒಂದೇ ಆಗಿರಲಿದೆ. ಸಿಇಟಿ ಪರೀಕ್ಷೆ ದೇಶದ ಹಲವು ಭಾಷೆಗಳಲ್ಲಿ ನಡೆಯಲಿದೆ. ಎನ್‌ಆರ್‌ಎ ಸ್ಥಾಪನೆಗೆ ಕೇಂದ್ರ ಸರ್ಕಾರ 1,517.57 ಕೋಟಿ ರೂ. ಹಣವನ್ನು ಮೀಸಲಿಟ್ಟಿದೆ.

     

     

     

  • 4 ಸಾವಿರ ಮಂದಿಗೆ ಉದ್ಯೋಗ – ಮಂಗಳೂರಿನಲ್ಲಿ ಟೆಕ್‌ ಪಾರ್ಕ್ ತೆರೆಯಲಿದೆ ಟಿಸಿಎಸ್‌

    4 ಸಾವಿರ ಮಂದಿಗೆ ಉದ್ಯೋಗ – ಮಂಗಳೂರಿನಲ್ಲಿ ಟೆಕ್‌ ಪಾರ್ಕ್ ತೆರೆಯಲಿದೆ ಟಿಸಿಎಸ್‌

    ಬೆಂಗಳೂರು: ದೇಶದ ಅತಿ ದೊಡ್ಡ ಸಾಫ್ಟ್‌ವೇರ್‌ ಸೇವಾ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌(ಟಿಸಿಎಸ್‌) ಮಂಗಳೂರು ಸಮೀಪದ ಕಾರ್ನಾಡ್‌ ಎಂಬಲ್ಲಿ ದೊಡ್ಡ ಕಚೇರಿಯನ್ನು ತೆರೆಯಲಿದೆ.

    ಈ ವರ್ಷದ ಮಾರ್ಚ್ ನಿಂದ ಕರ್ನಾಟಕದಲ್ಲಿ ಹೂಡಿಕೆ ಸಂಬಂಧ 27,107.39 ಕೋಟಿ ರೂಪಾಯಿ ಮೌಲ್ಯದ ಬಂಡವಾಳ ಹರಿದು ಬಂದಿದ್ದು, ಈ ಯೋಜನೆಗಳಿಂದ ರಾಜ್ಯದಲ್ಲಿ 46 ಸಾವಿರ ಉದ್ಯೋಗಗಳು ಸೃಷ್ಟಿಯಾಗುವ ಸಾಧ್ಯತೆಯಿದೆ.

    6,136.97 ಕೋಟಿಯ 85 ಯೋಜನೆಗಳಿಂದ 31,648 ಉದ್ಯೋಗ, ಒಟ್ಟು 18,989.02 ಕೋಟಿಯ 16 ಯೋಜನೆಗಳಿಂದ 10 ಸಾವಿರ ಉದ್ಯೋಗ ಸೃಷ್ಟಿಯಾಗಬಹುದು ಎಂದು ಅಂದಾಜಿಸಲಾಗಿದೆ.

    ಬಳ್ಳಾರಿಯಲ್ಲಿ ಜೆಎಸ್ ಡಬ್ಲ್ಯು ವಿಜಯನಗರ್ ಮೆಟಾಲಿಕ್ಸ್ ಲಿಮಿಟೆಡ್ 13,026 ಕೋಟಿ ಹೂಡಿಕೆ, ಸೀಮನ್ಸ್ ಹೆಲ್ತ್ ಕೇರ್ ನಿಂದ ಬೆಂಗಳೂರಿನಲ್ಲಿ 1,085.30 ಕೋಟಿ ವೆಚ್ಚದಲ್ಲಿ ರೀಸರ್ಚ್ ಅಂಡ್ ಎಕ್ಸ್ ಪೆರಿಮೆಂಟಲ್ ಡೆವಲಪ್ ಮೆಂಟ್ ಸರ್ವೀಸಸ್ ಸೆಂಟರ್, ಟಿಸಿಎಸ್ ನಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 495 ಕೋಟಿ ರುಪಾಯಿ ಹೂಡಿಕೆ ಸೇರಿದಂತೆ ಹಲವು ಯೋಜನೆಗಳು ಮಂಜೂರಾಗಿವೆ.

    ಸ್ಯಾಪ್ ಲ್ಯಾಬ್ಸ್ ಇಂಡಿಯಾ ಪ್ರೈ. ಬೆಂಗಳೂರಿನ ಹೊರವಲಯದಲ್ಲಿರುವ ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್ (ಐಟಿ ಸೆಕ್ಟರ್) ನಲ್ಲಿ 499 ಕೋಟಿ ರೂ. ಹೂಡಿಕೆ ಮಾಡುವುದಾಗಿ ತಿಳಿಸಿದೆ. 5 ವರ್ಷಗಳಲ್ಲಿ ಹಂತಹಂತವಾಗಿ ಯೋಜನೆಯ ವೆಚ್ಚವನ್ನು 490 ಕೋಟಿಯಿಂದ 1 ಸಾವಿರ ಕೋಟಿ ರೂ.ಗೆ ಏರಿಸಲಿದೆ ಎಂದು ಕಂಪನಿ ತಿಳಿಸಿದೆ.

    ಟಿಸಿಎಸ್‌ ದಕ್ಷಿಣ ಕನ್ನಡದಲ್ಲಿ 38 ಎಕ್ರೆ ಜಾಗದಲ್ಲಿ ತನ್ನ ಕ್ಯಾಂಪಸ್‌ ತೆರೆಯಲಿದೆ. ಸಂಪೂರ್ಣವಾಗಿ ಕ್ಯಾಂಪಸ್‌ ಆರಂಭಗೊಂಡರೆ ಒಟ್ಟು 4 ಸಾವಿರ ಮಂದಿಗೆ ಉದ್ಯೋಗ ಸಿಗಲಿದೆ.

  • ಕೆಲಸ ಕಳ್ಕೊಂಡು ತರಕಾರಿ ಮಾರಾಟ ಮಾಡ್ತಿದ್ದ ಟೆಕ್ಕಿಗೆ ಸೋನು ಸೂದ್ ಸಹಾಯ

    ಕೆಲಸ ಕಳ್ಕೊಂಡು ತರಕಾರಿ ಮಾರಾಟ ಮಾಡ್ತಿದ್ದ ಟೆಕ್ಕಿಗೆ ಸೋನು ಸೂದ್ ಸಹಾಯ

    – ಉದ್ಯೋಗಕ್ಕೆ ಸೇರಿದ ಮೂರು ತಿಂಗಳಿಗೆ ಕೆಲಸದಿಂದ ವಜಾ

    ಹೈದರಾಬಾದ್: ಕೊರೊನಾ ಲಾಕ್‍ಡೌನ್ ಶುರುವಾದಗಿನಿಂದ ಬಾಲಿವುಡ್ ನಟ ಸೋನು ಸೂದ್ ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿದ್ದಾರೆ. ಇದೀಗ ಕೋವಿಡ್‍ನಿಂದ ಕೆಲಸ ಕಳೆದುಕೊಂಡು ತರಕಾರಿ ಮಾರಾಟ ಮಾಡುತ್ತಿದ್ದ ಮಹಿಳಾ ಟೆಕ್ಕಿ ನೆರವಿಗೆ ಸೋನು ಸೂದ್ ಧಾವಿಸಿದ್ದಾರೆ. ಇದನ್ನೂ ಓದಿ: ದಯವಿಟ್ಟು ಅಜ್ಜಿಯ ಅಡ್ರೆಸ್ ಹೇಳಿ- ಸೋನು ಸೂದ್

    ಹೈದರಾಬಾದ್‍ನ ಟೆಕ್ಕಿ ಉಂಡಾಡಿ ಶಾರದಾ ಕೊರೊನಾದಿಂದ ಕೆಲಸ ಕಳೆದುಕೊಂಡು ಶ್ರೀನಗರ ಕಾಲೋನಿಯಲ್ಲಿ ತರಕಾರಿಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದ್ದರು. ಈ ಬಗ್ಗೆ ತಿಳಿದು ಸೋನು ಸೂದ್ ಮಹಿಳಾ ಟೆಕ್ಕಿಗೆ ಉದ್ಯೋಗವನ್ನು ಕೊಡಿಸಿದ್ದಾರೆ. ಇದನ್ನೂ ಓದಿ: ನೇಗಿಲು ಹಿಡಿದು ಉಳುಮೆ ಮಾಡಿದ ಯುವತಿಯರು- ಕೊಟ್ಟ ಮಾತಿನಂತೆ ಟ್ರ್ಯಾಕ್ಟರ್ ನೀಡಿದ ಸೋನು ಸೂದ್

    ಟೆಕ್ಕಿ ಶಾರದಾ ಬಗ್ಗೆ ರಿಚ್ಚಿ ಶೆಲ್ಸನ್ ಎಂಬವರು ಸೋನ್ ಸೂದ್ ಗಮನಕ್ಕೆ ತಂದಿದ್ದರು. “ಇವರು ಟೆಕ್ಕಿ ಶಾರದಾ, ಇತ್ತೀಚೆಗೆ ಕೊರೊನಾದಿಂದ ಕೆಲಸ ಕಳೆದುಕೊಂಡಿದ್ದಾರೆ. ನಂತರ ಅವರು ತರಕಾರಿ ಮಾರಾಟ ಮಾಡುತ್ತಿದ್ದಾರೆ. ಆದ್ದರಿಂದ ನೀವು ಇವರಿಗೆ ಮತ್ತು ಕುಟುಂಬದವರಿಗೆ ಸಹಾಯ ಮಾಡಬೇಕು” ಎಂದು ಟ್ವೀಟ್ ಮಾಡುವ ಮೂಲಕ ಮನವಿ ಮಾಡಿಕೊಂಡಿದ್ದರು.

    ಇವರ ಮನವಿಗೆ ಸ್ಪಂದಿಸಿದ ನಟ, “ನನ್ನ ಅಧಿಕಾರಿಗಳು ಅವರನ್ನು ಭೇಟಿಯಾಗಿದ್ದಾರೆ. ಟೆಕ್ಕಿಯ ಸಂದರ್ಶನ ಮುಗಿದಿದ್ದು, ಈಗಾಗಲೇ ಉದ್ಯೋಗದ ಪತ್ರವನ್ನು ಕಳುಹಿಸಲಾಗಿದೆ. ಜೈ ಹಿಂದ್” ಎಂದು ಟ್ವಿಟ್ಟರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

    “ಸೋನು ಸೂದ್ ಅವರು ತುಂಬಾ ದಿನಗಳಿಂದ ಜನರಿಗೆ ಸಹಾಯ ಮಾಡುತ್ತಿದ್ದಾರೆ. ಅವರ ಬಗ್ಗೆ ನನಗೆ ತಿಳಿದಿತ್ತು. ಆದರೆ ನನಗೆ ಅವರು ಫೋನ್ ಮಾಡಿದಾಗ ಆಶ್ಚರ್ಯ ಮತ್ತು ಸಂತೋಷವಾಯಿತು. ನಾನು ತರಕಾರಿ ಮಾರಾಟ ಮಾಡುತ್ತಿರುವುದಕ್ಕೆ ನಾಚಿಕೆ ಇಲ್ಲ. ಈ ಸಂದರ್ಭದಲ್ಲಿ ನಾವು ಬದುಕುಳಿಯುವುದು ಮುಖ್ಯವಾಗಿದೆ. ಹೀಗಾಗಿ ನಾವು ಯಾವುದೇ ಕೆಲಸ ಮಾಡಿದರೂ ನಾಚಿಕೆಪಡಬೇಕಿಲ್ಲ” ಎಂದು ಶಾರದಾ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

    ಶಾರದಾ ಹೈದರಾಬಾದ್‍ನಲ್ಲಿ ಎಂಎನ್‍ಸಿ ಕಂಪನಿಗೆ ಸೇರಿದ್ದರು. ಆದರೆ ಕೆಲಸಕ್ಕೆ ಸೇರಿದ ಮೂರು ತಿಂಗಳ ನಂತರ ಕೊರೊನಾ ವೈರಸ್ ಬಿಕ್ಕಟ್ಟಿನಿಂದ ಕಂಪನಿಯ ಶಾರದಾರನ್ನು ಕೆಲಸದಿಂದ ವಜಾ ಮಾಡಲಾಗಿತ್ತು. ಕೆಲಸ ಕಳೆದುಕೊಂಡ ನಂತರ ಸ್ಥಳೀಯ ಮಾರುಕಟ್ಟೆಯಲ್ಲಿ ತರಕಾರಿಗಳನ್ನು ಮಾರಾಟ ಮಾಡುವ ಮೂಲಕ ತನ್ನ ಕುಟುಂಬವನ್ನು ಪೋಷಿಸಲು ಪ್ರಾರಂಭಿಸಿದ್ದರು.

    ಶಾರದಾ ಪ್ರತಿದಿನ ಮುಂಜಾನೆ 4 ಗಂಟೆಗೆ ಎದ್ದು, ತರಕಾರಿಗಳನ್ನು ಪಡೆಯಲು ಸಗಟು ಮಾರುಕಟ್ಟೆಗೆ ಹೋಗುತ್ತಾರೆ. ಅಲ್ಲಿಂದ ತರಕಾರಿ ಖರೀದಿಸಿಕೊಂಡು ನಂತರ ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ.

    ಸೋನು ಸೂದ್ ಅವರ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇವರೆಗೂ 47,000ಕ್ಕೂ ಹೆಚ್ಚು ಮಂದಿ ಲೈಕ್ಸ್ ಮಾಡಿದ್ದಾರೆ. ಅಲ್ಲದೇ 6,700ಕ್ಕೂ ಹೆಚ್ಚು ನೆಟ್ಟಿಗರು ನಟನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನೆಟ್ಟಿಗರೊಬ್ಬರು “ಈ ಕೊರೊನಾ ಸವಾಲಿನ ಕಾಲದಲ್ಲಿ ನೀವು ನಿಜವಾಗಿಯೂ ಸ್ಪೂರ್ತಿದಾಯಕರಾಗಿದ್ದೀರಿ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಲಾಕ್‍ಡೌನ್‍ನಿಂದ ಕೆಲಸ ಕಳೆದುಕೊಂಡ ಟೆಕ್ಕಿ – ಜೀವನ ನಿರ್ವಹಣೆಗೆ ತರಕಾರಿ ಮಾರಾಟ

    ಲಾಕ್‍ಡೌನ್‍ನಿಂದ ಕೆಲಸ ಕಳೆದುಕೊಂಡ ಟೆಕ್ಕಿ – ಜೀವನ ನಿರ್ವಹಣೆಗೆ ತರಕಾರಿ ಮಾರಾಟ

    ಮಂಡ್ಯ: ತನ್ನ ಮಗಳು ಚೆನ್ನಾಗಿ ಓದಿ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಒಳ್ಳೆಯ ಕೆಲಸಕ್ಕೆ ಸೇರಬೇಕೆಂದು ಆ ತಂದೆಯ ಬಯಕೆ ಆಗಿತ್ತು. ಅದರಂತೆ ಅವರ ಮಗಳು ಚೆನ್ನಾಗಿ ಓದಿ ಸಾಫ್ಟ್ ವೇರ್ ಕಂಪನಿಯಲ್ಲಿ ಟೆಕ್ಕಿ ಕೂಡ ಆಗಿದ್ದರು. ಆದರೆ ಇದೀಗ ಕೊರೊನಾ ಆರ್ಭಟದಿಂದಾಗಿ ಇದ್ದ ಕೆಲಸವನ್ನು ಕಳೆದುಕೊಂಡಿದ್ದಾರೆ. ಕೆಲಸವಿಲ್ಲದ ಕಾರಣ ಇದೀಗ ಜೀವನೋಪಾಯಕ್ಕೆ ತರಕಾರಿ ಮಾರುತ್ತಿದ್ದಾರೆ.

    ಸದ್ಯ ಕಳೆದ ಮೂರು ನಾಲ್ಕು ತಿಂಗಳಿನಿಂದ ಇಡೀ ವಿಶ್ವದಲ್ಲಿ ಕೊರೊನಾ ರಣಕೇಕೆ ನಡೆಸುತ್ತಿದೆ. ಕೊರೊನಾ ಮಟ್ಟ ಹಾಕುವ ಉದ್ದೇಶದಿಂದ ವಿಶ್ವದ ಬಹುತೇಕ ರಾಷ್ಟ್ರಗಳು ಲಾಕ್‍ಡೌನ್ ಮೊರೆ ಹೋಗಿದ್ದಾವೆ. ಹೀಗಾಗಿ ಆರ್ಥಿಕ ಪರಿಸ್ಥಿತಿಯಿಂದಾಗಿ ಅನೇಕ ಕಂಪನಿಗಳು ಬಾಗಿಲು ಹಾಕಿದ್ದು, ಇದರಿಂದ ಲಕ್ಷಾಂತರ ಮಂದಿ ಕೆಲಸ ಕಳೆದುಕೊಂಡು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

    ಹೀಗಿದ್ದರೂ ಸಹ ಮಂಡ್ಯದ ಯುವತಿ ಅನು ಧೃತಿಗೆಡದೆ ಬದುಕು ಕಟ್ಟಿಕೊಳ್ಳಲು ತರಕಾರಿ ಮಾರಾಟ ಮಾಡುತ್ತಿದ್ದಾರೆ. ಅನು ಕಳೆದ ನಾಲ್ಕು ವರ್ಷದಿಂದ ಬೆಂಗಳೂರಿನ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದರು. ಆದರೆ ಲಾಕ್‍ಡೌನ್‍ನಿಂದಾಗಿ ಈಕೆ ಕೆಲಸ ಮಾಡುತ್ತಿದ್ದ ಕಂಪನಿ ಮುಚ್ಚಿದ ಪರಿಣಾಮ ಕೆಲಸವಿಲ್ಲದೇ ವಾಪಸ್ ಮಂಡ್ಯಗೆ ಬಂದಿದ್ದಾರೆ. ಮಂಡ್ಯಗೆ ಬಂದು ಏನು ಮಾಡಬೇಕು ಎಂದು ಕುಳಿತಿದ್ದಾಗ ಈಕೆಗೆ ಹೊಳೆದಿದ್ದು ತರಕಾರಿ ಮಾರಾಟ ಮಾಡುವುದು. ಹೀಗಾಗಿ ಈಕೆ ಮಂಡ್ಯದ ಚಾಮುಂಡೇಶ್ವರಿ ನಗರದಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದಾರೆ.

    ಅನು ಅವರ ತಂದೆ ವಿರೇಂದ್ರಸಿಂಗ್ ಮೂಲತಃ ಉತ್ತರ ಪ್ರದೇಶದವರು. ಮಂಡ್ಯದಲ್ಲಿ ಕಳೆದ 26 ವರ್ಷಗಳಿಂದ ನೆಲಸಿದ್ದು, ತನ್ನ ಮಗಳನ್ನು ಓದಿಸುವ ಸಲುವಾಗಿ ಪಾನಿಪುರಿ, ತರಕಾರಿ ಮಾರಾಟ ಮಾಡುವ ಕೆಲಸ ಮಾಡುತ್ತಿದ್ದರು. ತಂದೆಯ ಶ್ರಮದ ಪ್ರತಿಫಲವಾಗಿ ಅನು ರಾಮನಗರದ ಗೌಸಿಯಾ ಎಂಜಿಯರಿಂಗ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆದರು. ನಂತರ ಕೆಲಸಕ್ಕಾಗಿ ಬೆಂಗಳೂರಿಗೆ ಹೋಗಿ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು.

    ಇಷ್ಟು ವರ್ಷ ಕೆಲಸ ಮಾಡಿಕೊಂಡು ನೆಮ್ಮದಿಯಾಗಿ ಇದ್ದರು. ಆದರೆ ಇದೀಗ ಕೊರೊನಾದಿಂದ ಕೆಲಸ ಕಳೆದುಕೊಂಡಿದ್ದಾರೆ. ಈಗ ಅನು ಅವರ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹೀಗಾಗಿ ಬದುಕು ನಡೆಸಲು ತರಕಾರಿ ಮಾರಾಟ ಮಾಡುವ ಕೆಲಸ ಮಾಡುತ್ತಿದ್ದಾರೆ. ಮಗಳು ಮಾಡುತ್ತಿರುವ ಈ ಕೆಲಸ ಬೇಸರ ತಂದರು ಸಹ ನನ್ನ ಮಗಳು ಮಾಡುತ್ತಿರುವುದು ಇನ್ನೊಬ್ಬರಿಗೆ ಮಾದರಿಯಾಗುತ್ತಿರುವುದು ನನಗೆ ನೆಮ್ಮದಿ ಇದೆ ಎಂದು ಅನು ತಂದೆ ಹೇಳಿದ್ದಾರೆ.

  • ಕೊರೊನಾದಿಂದ ಕೆಲಸ ಕಳ್ಕೊಂಡ ತಂದೆ- ಬಿರಿಯಾನಿ ಮಾರಲು ನಿಂತ ಮಗ

    ಕೊರೊನಾದಿಂದ ಕೆಲಸ ಕಳ್ಕೊಂಡ ತಂದೆ- ಬಿರಿಯಾನಿ ಮಾರಲು ನಿಂತ ಮಗ

    – ಸ್ವ ಉದ್ಯೋಗ ಮಾಡೋ ಮೂಲಕ ಸ್ನೇಹಿತರಿಂದ ಕುಟುಂಬ ನಿರ್ವಹಣೆ

    ಹುಬ್ಬಳ್ಳಿ: ಕೊರೊನಾ ಮಹಾಮಾರಿ ಅದೆಷ್ಟೋ ಜನರ ಉದ್ಯೋಗ ಕಸಿದುಕೊಂಡು ಮೂಲೆ ಸೇರುವಂತೆ ಮಾಡಿದೆ. ಅಲ್ಲದೇ ಅನೇಕರು ಬೇರೆ ಉದ್ಯೋಗ ಮಾಡಲಾಗದೆ ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕಾಲೇಜಿಗೆ ಹೋಗಿ ವ್ಯಾಸಂಗ ಮಾಡಬೇಕಿದ್ದ ವಿದ್ಯಾರ್ಥಿಗಳಿಬ್ಬರು ಬಿರಿಯಾನಿ ಮಾರುವ ಮೂಲಕ ಕುಟುಂಬಕ್ಕೆ ಆಸರೆಯಾಗಿ ನಿಂತಿದ್ದಾರೆ.

    ಚೇತನ ಹಳ್ಳಿಕೇರಿ ತಂದೆ ಗ್ಯಾರೇಜ್ ನಡೆಸುತ್ತಿದ್ದರು. ಆದರೆ ಕೊರೊನಾ ಕಾರಣದಿಂದ ಗ್ರಾಹಕರು ಕಡಿಮೆಯಾಗಿ ಗ್ಯಾರೇಜ್ ಮುಚ್ಚಿದ್ದಾರೆ. ಹೀಗಾಗಿ ಕುಟುಂಬ ನಿರ್ವಹಣೆಗಾಗಿ ಚೇತನ ತನ್ನ ಸ್ನೇಹಿತ ಸೋಯೆಬ್ ಶೇಖ್ ಜೊತೆ ಸೇರಿ ಹೋಂ ಮೆಡ್ ಬಿರಿಯಾನಿ ಆರಂಭಿಸಿದ್ದಾರೆ.

    ತಮ್ಮ ಹತ್ತಿರವಿದ್ದ ಕಾರನ್ನೇ ಬಳಸಿಕೊಂಡು ಮನೆಯಲ್ಲಿಯೇ ಬಿರಿಯಾನಿ ಪ್ಯಾಕೇಟ್‍ಗಳನ್ನು ಸಿದ್ಧಪಡಿಸಿಕೊಂಡು ಬಂದು ದೇಶಪಾಂಡೆ ನಗರ ಸೇರಿದಂತೆ ಹಲವು ಕಡೆ ವ್ಯಾಪಾರ ಮಾಡುತ್ತಾರೆ. ಎಗ್ ಬಿರಿಯಾನಿ 49 ರೂಪಾಯಿ, ಚಿಕನ್ ಬಿರಿಯಾನಿ 59 ರೂಪಾಯಿಯಂತೆ ಮಾರಾಟ ಮಾಡುತ್ತಾರೆ. ಪ್ರತಿದಿನ 12 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೂ 20ಕ್ಕೂ ಹೆಚ್ಚು ಪ್ಯಾಕೇಟ್‍ಗಳನ್ನು ಮಾರಾಟ ಮಾಡುತ್ತಿದ್ದಾರೆ. ಎಲ್ಲಾ ಖರ್ಚು ಕಳೆದು ಪ್ರತಿ ದಿನ ಐದಾರು ನೂರು ಸಂಪಾದನೆ ಮಾಡುತ್ತಿದ್ದಾರೆ.

    ಚೇತನ ಆರ್.ಎನ್.ಶೆಟ್ಟಿ ಕಾಲೇಜಿನಲ್ಲಿ ದ್ವೀತಿಯ ಪಿಯುಸಿ ಪರೀಕ್ಷೆ ಬರೆದಿದ್ದಾರೆ. ಇನ್ನೂ ಸೋಯೆಬ್ ಅನಿವಾರ್ಯ ಕಾರಣಗಳಿಂದ ವಿದ್ಯಾಭ್ಯಾಸ ನಿಲ್ಲಿಸಿದ್ದಾನೆ. ಕೊರೊನಾ ಸಂಕಷ್ಟ ಕಾಲದಲ್ಲಿ ಈ ಸ್ನೇಹಿತರು ಸ್ವ ಉದ್ಯೋಗ ಸೃಷ್ಟಿಸಿಕೊಳ್ಳುವ ಮೂಲಕ ಕುಟುಂಬ ನಿರ್ವಹಣೆ ಮಾಡಿ ಇತರರಿಗೂ ಮಾದರಿಯಾಗಿದ್ದಾರೆ.

  • ಪತಂಜಲಿ 5 ಲಕ್ಷ ಹೊಸ ಉದ್ಯೋಗಗಳನ್ನು ನೀಡಲಿದೆ: ಬಾಬಾ ರಾಮ್‍ದೇವ್

    ಪತಂಜಲಿ 5 ಲಕ್ಷ ಹೊಸ ಉದ್ಯೋಗಗಳನ್ನು ನೀಡಲಿದೆ: ಬಾಬಾ ರಾಮ್‍ದೇವ್

    ನವದೆಹಲಿ: ಪತಂಜಲಿ ಸಂಸ್ಥೆ 5 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ಯೋಗ ಗುರು ಬಾಬಾ ರಾಮ್‍ದೇವ್ ಹೇಳಿದ್ದಾರೆ.

    ಮಹಾಮಾರಿ ಕೊರೊನಾ ವೈರಸ್ ವಿರುದ್ಧ ಹೋರಾಡಲು ಮತ್ತು ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಯುರ್ವೇದ ಅತ್ಯುತ್ತಮ ಮಾರ್ಗ. ಕಳೆದ 40 ವರ್ಷಗಳಿಂದ ನಾನು ಬೆಳಗ್ಗೆ 4 ಗಂಟೆಯಿಂದ ರಾತ್ರಿ 10 ಗಂಟೆಯವರೆಗೂ ಚಟುವಟಿಕೆಯಿಂದ ಜೀವನ ನಡೆಸುತ್ತಿದ್ದೇನೆ ಎಂದು ಯೋಗ ಗುರು ಬಾಬಾ ರಾಮ್‍ದೇವ್ ಹೇಳಿದ್ದಾರೆ.

    ಮಾಧ್ಯವೊಂದರ ಜೊತೆ ಬಾಬಾ ರಾಮ್‍ದೇವ್ ಮಾತನಾಡಿ ಸ್ವಾವಲಂಬಿ (ಆತ್ಮನಿರ್ಭರ್) ಭಾರತಕ್ಕಾಗಿ ಅಳವಡಿಸಿಕೊಳ್ಳಬಹುದಾದ ಪ್ರಮುಖ ವಿಚಾರಗಳ ಬಗ್ಗೆ ತಿಳಿಸಿದ್ದಾರೆ. ಆತ್ಮನಿರ್ಭರ್ ಭಾರತಕ್ಕಾಗಿ ನಾನು ಮೊದಲು ಮೂರು ಕೆಲಸಗಳನ್ನು ಮಾಡುತ್ತೇನೆ. ದೇಶವು ಖಾದ್ಯ ತೈಲದ ಮೇಲೆ ಸ್ವಾವಲಂಬಿಯಾಗಲು ಸೋಯಾ, ಸೂರ್ಯಕಾಂತಿ, ಸಾಸಿವೆ ಆಗಿರಲಿ… ಉತ್ಪಾದನೆ ಹೆಚ್ಚಿಸಲು ಚಳುವಳಿಯನ್ನು ನಡೆಸುತ್ತೇವೆ. ಮುಂದಿನ 5 ರಿಂದ 10 ವರ್ಷದಲ್ಲಿ ನಾವು ಇತರರನ್ನು ಅವಲಂಬಿಸಬೇಕಾಗಿಲ್ಲ. ಆ ಮೂಲಕ 5 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡುತ್ತೇನೆ. ಪತಂಜಲಿಯ ಮತ್ತು ರುಚಿ ಸೋಯಾದ ವಿವಿಧ ಯೋಜನೆಗಳ ಮೂಲಕ ಮುಂದಿನ 5 ವರ್ಷದಲ್ಲಿ ಲಕ್ಷ ಕೋಟಿ ರೂ. ಆದಾಯ ಕೊಡುಗೆಯಾಗಿ ನೀಡಬಹುದು ಎಂದು ಹೇಳಿದ್ದಾರೆ.

    ಇದೇ ವೇಳೆ ರಾಜಕಾರಣಿಗಳಿಂದ ನೀವು ಏನು ನಿರೀಕ್ಷೆ ಮಾಡುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿ, ಕೃಷಿ, ಕೈಗಾರಿಕೆ, ಉತ್ಪಾದನೆ, ಆಟೋ ಮೊಬೈಲ್‍ಗಳಂತಹ ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಲು ಭಾರತ ಕೇಂದ್ರಿತ ನೀತಿಗಳನ್ನು ರೂಪಿಸಬೇಕಿದೆ. ಅನೇಕ ಸಂಸ್ಥೆಗಳು, ಜನರು ಬಂಡವಾಳವನ್ನು ಹೊಂದಿದ್ದಾರೆ. ಜನರು ಖರ್ಚು ಮಾಡಲು ಹಿಂಜರಿಯದಂತಹ ನೀತಿಗಳನ್ನು ರೂಪಿಸಬೇಕಿದೆ. ಇದರಿಂದ ಸ್ವಲ್ಪ ಲಾಭಗಳಿಸುವ ಭಾವನೆ ಅವರಿಗೆ ಮೂಡುವಂತಿರಬೇಕು ಎಂದು ಹೇಳಿದ್ದಾರೆ.

    ಕೋವಿಡ್-19 ವಿರುದ್ಧ ಹೋರಾಟ ಮಾಡಲು ಮೆಡಿಸಿನ್ ತಯಾರಿ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಈ ಕುರಿತು ಕಾರ್ಯನಿರ್ವಹಿಸುತ್ತಿದ್ದು, ಖಂಡಿತ ಯಶಸ್ಸು ಸಾಧಿಸುತ್ತೇವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಕೋವಿಡ್ ಕಾಣಿಸಿಕೊಂಡ ಸಮಯದಿಂದ ಈ ಕುರಿತ ಸಂಶೋಧನೆಯನ್ನು ನಡೆಸುತ್ತಿದ್ದೇವೆ. ಪ್ರಾಣಾಯಾಮ ಪರಿಣಾಮಕಾರಿಯಾಗಿದೆ. ವಿವಿಧ ಪ್ರದೇಶಗಳಲ್ಲಿ ಈ ಕುರಿತ ಸಂಶೋಧನೆಗಳನ್ನು ನಡೆಸಿದ್ದು, ಉತ್ತಮ ಫಲಿತಾಂಶ ಲಭಿಸುತ್ತಿದೆ. ಕೋವಿಡ್‍ಗೆ ಲಸಿಕೆ ಲಭಿಸುವ ಮೊದಲು ನಾವು ಆಯುರ್ವೇದವನ್ನು ಕೋವಿಡ್ ವಿರುದ್ಧ ಹೋರಾಡಲು ಆಯುಧವಾಗಿ ನೀಡುತ್ತೇವೆ ಎಂದಿದ್ದಾರೆ.