Tag: Jobs

  • ರಾಜ್ಯದಲ್ಲಿ 27,000 ಕೋಟಿ ಹೂಡಿಕೆಗೆ ಅಸ್ತು – 13 ಯೋಜನೆಗಳಿಂದ 8,000 ಉದ್ಯೋಗ ಸೃಷ್ಟಿ

    ರಾಜ್ಯದಲ್ಲಿ 27,000 ಕೋಟಿ ಹೂಡಿಕೆಗೆ ಅಸ್ತು – 13 ಯೋಜನೆಗಳಿಂದ 8,000 ಉದ್ಯೋಗ ಸೃಷ್ಟಿ

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿಂದು ನಡೆದ ಸಭೆಯಲ್ಲಿ ರಾಜ್ಯದಲ್ಲಿ 13 ಕಂಪನಿಗಳಿಂದ 27,000 ಕೋಟಿ ರೂ. ಹೂಡಿಕೆ ಮಾಡಲು ಒಪ್ಪಿಗೆ ಸೂಚಿಸಲಾಯಿತು.

    ಸಿದ್ದರಾಮಯ್ಯ ವಿಧಾನಸೌಧದಲ್ಲಿಂದು ನಡೆದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯ ಸಭೆಯಲ್ಲಿ ರಾಜ್ಯದಲ್ಲಿ 13 ಕಂಪನಿಗಳಿಂದ 27 ಸಾವಿರ ಕೋಟಿ ಹೂಡಿಕೆಗೆ (Investment Proposals) ಒಪ್ಪಿಗೆ ನೀಡಲಾಗಿದೆ. ಅದರ ಅನ್ವಯ 11 ಹೊಸ ಯೋಜನೆಗಳು, 8 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿದೆ ಎಂದು ಅಂದಾಜಿಸಲಾಗಿದೆ. 11 ಹೊಸ ಕೈಗಾರಿಕಾ ಯೋಜನೆಗಳು ಮತ್ತು 2 ಹೆಚ್ಚುವರಿ ಹೂಡಿಕೆ ಪ್ರಸ್ತಾವನೆಗಳು ಸೇರಿವೆ ಒಟ್ಟು 13 ಯೋಜನೆಗಳಿಂದ 8,704 ನೇರ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಸಚಿವ ಎಂ.ಬಿ ಪಾಟೀಲ್‌ (MB Patil) ಎಕ್ಸ್‌ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

    11 ಹೊಸ ಹೂಡಿಕೆ ಯೋಜನೆಗಳ ಪೈಕಿ ತೇಜಸ್ ನೆಟ್ವರ್ಕ್ಸ್ 542.19 ಕೋಟಿ ರೂ., ವಾಯು ಅಸೆಟ್ಸ್ 1,251 ಕೋಟಿ ರೂ., ಜಿಂದಾಲ್ ಸ್ಟೀಲ್ಸ್ 1,300.57 ಕೋಟಿ ರೂ., ಜಿಂದಾಲ್ ಎಲೆಕ್ಟ್ರಿಕಲ್ ಸ್ಟೀಲ್ 7,102 ಕೋಟಿ ರೂ., ಗ್ರಾಸಿಂ ಇಂಡಸ್ಟ್ರೀಸ್ 1,386 ಕೋಟಿ ರೂ., ಎಸ್ಎಫ್ಎಕ್ಸ್ ಇಂಡಿಯಾ 9,298 ಕೋಟಿ ರೂ., ಸ್ನೀಡರ್ ಎಲೆಕ್ಟ್ರಿಕ್ ಐಟಿ ಬಿಝಿನೆಸ್, ಎಚ್ಎಸ್ಎಸ್ ಟೆಕ್ಸ್ಟೈಲ್ಸ್ 740 ಕೋಟಿ ರೂ., ಸ್ನೈಡರ್ ಎಲೆಕ್ಟ್ರಿಕ್ ಬಿಸಿನೆಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ 1,520.75 ಕೋಟಿ ರೂ., ಕ್ಯೂಪಿಐಎಐ ಇಂಡಿಯಾ 1,136 ಕೋಟಿ ರೂ., ಟೊಯೋಟಾ ಇಂಡಸ್ಟ್ರೀಸ್ ಎಂಜಿನ್ ಇಂಡಿಯಾ ಲಿಮಿಟೆಡ್ 1,330 ಕೋಟಿ ರೂ. ಮತ್ತು ರಿಲಯನ್ಸ್ ಕನ್ಸೂಮರ್ ಪ್ರಾಡಕ್ಟ್ಸ್ 1,622 ಕೋಟಿ ರೂ., ಹೂಡಿಕೆ ಮಾಡಲಿವೆ. ಮಿಕ್ಕಂತೆ, ಎಂಬೆಸಿ ಇಂಡಸ್ಟ್ರಿಯಲ್ ಪಾರ್ಕ್ ಮತ್ತು ಬಾಲಾಜಿ ವೇಫರ್ಸ್ ಕಂಪನಿಗಳು ಕ್ರಮವಾಗಿ 80 ಮತ್ತು 298.75 ಕೋಟಿ ರೂ. ಹೆಚ್ಚುವರಿ ಬಂಡವಾಳ ಹೂಡಿಕೆ ಮಾಡಲಿವೆ.

  • 2 ಲಕ್ಷ ಉದ್ಯೋಗ ಸೃಷ್ಟಿಗೆ ಪೂರಕವಾಗಿ ಜವಳಿ ನೀತಿ ರೂಪಿಸಲು ಕ್ರಮ: ಶಿವಾನಂದ ಪಾಟೀಲ್‌

    2 ಲಕ್ಷ ಉದ್ಯೋಗ ಸೃಷ್ಟಿಗೆ ಪೂರಕವಾಗಿ ಜವಳಿ ನೀತಿ ರೂಪಿಸಲು ಕ್ರಮ: ಶಿವಾನಂದ ಪಾಟೀಲ್‌

    ಬೆಂಗಳೂರು: ಜವಳಿ ಹಾಗೂ ಸಿದ್ಧ ಉಡುಪು ಕ್ಷೇತ್ರದಲ್ಲಿ ಹೆಚ್ಚಿನ ಬಂಡವಾಳ ಆಕರ್ಷಣೆ ಮತ್ತು ಸುಮಾರು 2 ಲಕ್ಷ ಉದ್ಯೋಗ (Jobs) ಸೃಷ್ಟಿಗೆ ಪೂರಕವಾಗಿ ಜವಳಿ ನೀತಿ (extile Policy) 2025-30 ನೀತಿ ರೂಪಿಸಲಾಗುವುದು ಎಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ (Shivanand Patil) ಹೇಳಿದರು.

    ನೂತನ ಜವಳಿ ನೀತಿ ರಚನೆಗೆ ಸಲಹೆ ಪಡೆಯಲು ವಿಧಾನಸೌಧದಲ್ಲಿ ಶುಕ್ರವಾರ (ಸೆ.12) ಕರೆದಿದ್ದ ಜನಪ್ರತಿನಿಧಿಗಳು, ಜವಳಿ ಉದ್ಯಮಿಗಳ ಸಭೆಯಲ್ಲಿ ಅವರು ಮಾತನಾಡಿದರು. ಈ ವೇಳೆ ಇಂದಿನ ಸಭೆಯಲ್ಲಿ ವ್ಯಕ್ತವಾಗಿರುವ ಸಲಹೆಗಳನ್ನು ಪರಿಗಣಿಸಿ ಜವಳಿ ನೀತಿಯಲ್ಲಿ ಅಳವಡಿಸಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

    ಜವಳಿ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. 2020ರಿಂದ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ರಾಜ್ಯ ಜವಳಿ ಮೂಲ ಸೌಕರ್ಯ ಅಭಿವೃದ್ಧಿ ನಿಗಮಗಳ ಆಡಿಟ್‌ ಆಗಿರಲಿಲ್ಲ. ಈಗ ಆಡಿಟ್‌ ನಡೆದಿದ್ದು, ನಷ್ಟದ ಕಾರಣ ಎರಡನ್ನೂ ವಿಲೀನ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಇದನ್ನೂ ಓದಿ: ರಾಜ್ಯ ಸರ್ಕಾರಕ್ಕೆ ಹಿಂದೂ ವಿರೋಧಿ ಪಟ್ಟ ಕಟ್ಟುವ ಯತ್ನ: ಲಕ್ಷ್ಮೀ ಹೆಬ್ಬಾಳ್ಕರ್

    ಕೈಮಗ್ಗ ಉತ್ಪನ್ನಗಳನ್ನು ಸರ್ಕಾರದ ಇಲಾಖೆಗಳಿಗೆ ಖರೀದಿ ಮಾಡಲು ಈಗಾಗಲೇ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಶಾಸಕರೊಂದಿಗೆ ಮತ್ತೊಮ್ಮೆ ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳುವ ಉದ್ದೇಶವಿದೆ. ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಕೈಮಗ್ಗ ಉತ್ಪನ್ನಗಳನ್ನು ಖರೀದಿ ಮಾಡಿದರೆ ಕೈಮಗ್ಗ ನೇಕಾರರಿಗೆ ಉತ್ತೇಜನ ನೀಡಲು ಸಹಕಾರಿಯಾಗಲಿದೆ ಎಂದು ಹೇಳಿದರು.

    ಶೂನ್ಯ ಬಡ್ಡಿ ದರದ ಸಾಲದ ಮೇಲೂ ಜಿಎಸ್‌ಟಿ ವಿಧಿಸುತ್ತಿರುವುದಿಂದ ನೇಕಾರರಿಗೆ ಬಡ್ಡಿ ರಹಿತ ಸಾಲ ಸಿಕ್ಕರೂ ಉಪಯೋಗ ಆಗುತ್ತಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಎಲ್ಲರ ಸಹಕಾರದೊಂದಿಗೆ ಜಿಎಸ್‌ಟಿ ತೆರವಿಗೆ ಪ್ರಯತ್ನ ಮಾಡಲಾಗುವುದು. ಬೆಳಗಾವಿಯಲ್ಲಿ ಜವಳಿ ಸಂಶೋಧನಾ ಕೇಂದ್ರ ಆರಂಭಿಸಲಾಗುವುದು. ಚರ್ಮಹೊರತುಪಡಿಸಿ ತಯಾರಾಗುವ ಚಪ್ಪಲಿ ಮತ್ತು ಶೂ ಉದ್ಯಮದ ಅಭಿವೃದ್ಧಿ ಬಗ್ಗೆಯೂ ನೀತಿ ರೂಪಿಸಬೇಕು ಎಂಬ ಬೇಡಿಕೆ ವ್ಯಕ್ತವಾಗಿದೆ. ಸಣ್ಣ ಕೈಗಾರಿಕೆ ಕ್ಷೇತ್ರದ ಅಡಿಯಲ್ಲಿ ಬರುವ ಈ ಉದ್ಯಮವನ್ನು ಜವಳಿ ನೀತಿಯಲ್ಲಿ ಪರಿಗಣಿಸುವ ಪ್ರಯತ್ನ ಮಾಡಲಾಗುವುದು ಎಂದರು.

    ಆದಾಯದ ಮೂಲ ಕಂಡುಕೊಳ್ಳಲು ಇಲಾಖೆ ಆಸ್ತಿ ಇರುವ ಕಡೆ ಪೆಟ್ರೋಲ್‌ ಪಂಪ್‌ಗಳನ್ನು ಸ್ಥಾಪನೆ ಮಾಡುವ ಬೇಡಿಕೆಯನ್ನು ಪರಿಶೀಲಿಸಲಾಗುವುದು. ಹಾಗೂ ನಷ್ಟದಲ್ಲಿರುವ ಸಹಕಾರ ಕ್ಷೇತ್ರದ ಜವಳಿ ಉದ್ಯಮದ ಆಸ್ತಿ ಮಾರಾಟಕ್ಕೆ ಅವಕಾಶ ನೀಡದೆ ಪುನಶ್ಚೇತನಕ್ಕೆ ಪ್ರಯತ್ನಿಸಲಾಗುವುದು. ನೇಕಾರ ಸಮ್ಮಾನ ಯೋಜನೆಯ ನೆರವನ್ನು ಐದು ಸಾವಿರ ರೂ.ಗಳಿಂದ ಹತ್ತು ಸಾವಿರ ರೂ.ಗಳಿಗೆ ಹೆಚ್ಚಳ ಮಾಡುವ ಬೇಡಿಕೆ ಸೂಕ್ತವಾಗಿದ್ದು, ಪರಿಗಣಿಸಲಾಗುವುದು ಹಾಗೂ ಕುಟುಂಬದಲ್ಲಿ ಒಬ್ಬರನ್ನು ಮಾತ್ರ ಪರಿಗಣಿಸುವ ಬದಲಿಗೆ ಎಲ್ಲ ಸದಸ್ಯರನ್ನು ಪರಿಗಣಿಸಲಾಗುವುದು ಎಂದು ಭರವಸೆ ನೀಡಿದರು.

    ಜವಳಿ ಕ್ಷೇತ್ರದ ಅಭಿವೃದ್ಧಿಗೆ ಎಷ್ಟೇ ಯೋಜನೆ ರೂಪಿಸಿದರೂ ಬಜೆಟ್‌ನಲ್ಲಿ ಅಗತ್ಯ ಅನುದಾನ ಒದಗಿಸದಿದ್ದರೆ ಪ್ರಯೋಜನ ಆಗದು. ಆದ್ದರಿಂದ ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಿ ಅನುದಾನ ಪ್ರಮಾಣ ಹೆಚ್ಚಳ ಮಾಡಲು ಮನವಿ ಮಾಡಬೇಕು ಎಂದು ಮಾಜಿ ಶಾಸಕ, ಕೆಎಚ್‌ಡಿಸಿ ಮಾಜಿ ಅಧ್ಯಕ್ಷ ಎಂ.ಡಿ. ಲಕ್ಷ್ಮೀನಾರಾಯಣ ಸಲಹೆ ನೀಡಿದರು.

    ನೇಕಾರರಿಗೆ ವರ್ಷವಿಡೀ ಉದ್ಯೋಗ ಒದಗಿಸಬೇಕು. ಪರಿವರ್ತನಾ ನಿಧಿ ಹೆಚ್ಚಳ ಮಾಡಬೇಕು. ನಿಗಮವನ್ನು ಲಾಭದಾಯಕ ಹಾದಿಯಲ್ಲಿ ಕೊಂಡೊಯ್ಯಲು ಆದಾಯದ ಮೂಲಗಳನ್ನು ಸೃಷ್ಟಿಸಬೇಕು. ನಿಗಮದಿಂದ ಹಂಚಿಕೆ ಮಾಡಿರುವ ಮನೆಗಳಿಗೆ ಹಕ್ಕು ಪತ್ರ ವಿತರಿಸಬೇಕು ಎಂದು ಶಾಸಕ ಸಿದ್ದು ಸವದಿ ಮನವಿ ಮಾಡಿದರು.

    ಕೈಮಗ್ಗ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆ ನಿಗದಿಪಡಿಸಬೇಕು. ಉತ್ಪನ್ನಗಳನ್ನು ಬ್ರಾಂಡಿಂಗ್‌ ಮಾಡಿ ಇ – ಕಾಮರ್ಸ್‌ ಫ್ಲಾಟ್‌ಫಾರಂನಲ್ಲಿ ಮಾರಾಟಕ್ಕೆ ವ್ಯವಸ್ಥೆ ಮಾಡಬೇಕು. ಇತ್ತೀಚೆಗೆ ನೇಕಾರರ ಕುಟುಂಬದ ಯುವಕರು ಕುಲಕಸುಬಿನಿಂದ ವಿಮುಖರಾಗುತ್ತಿದ್ದು, ಅವರನ್ನು ಸೆಳೆಯುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಬೇಕು ಎಂದು ಶಾಸಕ ನವೀನ್‌ ಹೇಳಿದರು.

    ಹತ್ತು ಕೋಟಿ ಬಂಡವಾಳ ಹೂಡಿದರೆ ಎಷ್ಟು ಉದ್ಯೋಗಾವಕಾಶ, ನೂರು ಕೋಟಿ ಬಂಡವಾಳ ಹೂಡಿದರೆ ಎಷ್ಟು ಉದ್ಯೋಗ ಸೃಷ್ಟಿಯಾಗಲಿದೆ ಎಂಬ ಬಗ್ಗೆ ಸ್ಪಷ್ಟ ನೀತಿ ಬೇಕು. ಎಲ್ಲವನ್ನೂ ಯಾಂತ್ರೀಕರಣಗೊಳಿಸಿದರೆ ಉದ್ದೇಶ ಈಡೇರದು. ಈ ಬಗ್ಗೆ ಚಿಂತನೆ ಮಾಡಬೇಕು ಎಂದು ಶಾಸಕ ಕೇಶವಪ್ರಸಾದ್‌ ಹೇಳಿದರು. ಅನವತಿಯಲ್ಲಿರುವ ಅಣ್ಣಿಗೇರಿ ಜವಳಿ ಪಾರ್ಕ್‌ ಪುನಶ್ಚೇತನಗೊಳಿಸಬೇಕು. ಆಸ್ತಿ ಮಾರಾಟಕ್ಕೆ ಅವಕಾಶ ನೀಡಬಾರದು ಎಂದು ಶಾಸಕ ಎನ್‌.ಎಚ್‌. ಕೋನರೆಡ್ಡಿ ಹೇಳಿದರು.

    ಉತ್ತರ ಕರ್ನಾಟಕದಲ್ಲಿ ಜವಳಿ ಕ್ಷೇತ್ರದ ಅಭಿವೃದ್ಧಿಗೆ ಸಂಶೋಧನಾ ಕೇಂದ್ರ ಆರಂಭಿಸುವ ಅಗತ್ಯವಿದ್ದು, ಈ ಬಗ್ಗೆ ಗಮನ ಹರಿಸಬೇಕು ಎಂದು ಶಾಸಕ ಅಭಯ ಪಾಟೀಲ ಹೇಳಿದರು. ಕಾವೇರಿ ಹ್ಯಾಂಡ್‌ಲೂಮ್‌ ಅಧ್ಯಕ್ಷ ಜೆ.ಬಿ. ಗಣೇಶ್‌, ಕೆಎಚ್‌ಡಿಸಿ ಮಾಜಿ ಅಧ್ಯಕ್ಷ ರವೀಂದ್ರ ಕಲಬುರ್ಗಿ ಸೇರಿದಂತೆ ಅನೇಕರು ಸಲಹೆ ಸೂಚನೆ ನೀಡಿದರು.

    ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಕಾರ್ಯದರ್ಶಿ ಸಮೀರ್‌ ಶುಕ್ಲಾ, ಯೋಜನಾ ಇಲಾಖೆ ಕಾರ್ಯದರ್ಶಿ ರಮ್‌ದೀಪ್‌ ಚೌಧರಿ, ಜವಳಿ ಇಲಾಖೆ ಆಯುಕ್ತೆ ಜ್ಯೋತಿ, ಕೆಎಚ್‌ಡಿಡಿಸಿ ವ್ಯವಸ್ಥಾಪಕ ನಿರ್ದೇಶಕಿ ಗರೀಮಾ ಪನ್ವಾರ್‌ ಸೇರಿದಂತೆ ಜವಳಿ ಇಲಾಖೆ ಹಲವು ಅಧಿಕಾರಿಗಳು, ಜವಳಿ ಉದ್ಯಮಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಇದನ್ನೂ ಓದಿ: 4 ಶಂಕಾಸ್ಪದ ಸಾವುಗಳ ತನಿಖೆಗೆ ತಿಮರೋಡಿ ದೂರು, ವಿಠಲಗೌಡ ಆರೋಪವನ್ನು ಎಸ್‌ಐಟಿ ಪರಿಶೀಲಿಸಿ ಕ್ರಮ: ಪರಮೇಶ್ವರ್

  • ಅಮೆರಿಕದಲ್ಲಿ 10 ಶತಕೋಟಿ ಡಾಲರ್‌ ಹೂಡಿಕೆಗೆ ಬದ್ಧ, 15,000 ಉದ್ಯೋಗ ಸೃಷ್ಟಿ ಗುರಿ: ಅದಾನಿ

    ಅಮೆರಿಕದಲ್ಲಿ 10 ಶತಕೋಟಿ ಡಾಲರ್‌ ಹೂಡಿಕೆಗೆ ಬದ್ಧ, 15,000 ಉದ್ಯೋಗ ಸೃಷ್ಟಿ ಗುರಿ: ಅದಾನಿ

    ನವದೆಹಲಿ: ಅಮೆರಿಕದ ಇಂಧನ ಭದ್ರತೆ (US energy security) ಮತ್ತು ಸ್ಥಿತಿಸ್ಥಾಪಕತ್ವ ಮೂಲ ಸೌಕರ್ಯಗಳ (Resilient Infrastructure) ಯೋಜನೆಗೆ 10 ಶತಕೋಟಿ ಡಾಲರ್‌ ಹೂಡಿಕೆ ಮಾಡುವ ಉದ್ದೇಶವನ್ನು ಅದಾನಿ ಸಮೂಹ ಹೊಂದಿದೆ. ಈ ಮೂಲಕ 15,000 ಉದ್ಯೋಗ ಸೃಷ್ಟಿಸುವ ಗುರಿ ಹೊಂದಿದೆ ಎಂದು ಅಧ್ಯಕ್ಷ ಗೌತಮ್‌ ಅದಾನಿ (Gautam Adani) ಹೇಳಿದ್ದಾರೆ.

    ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ 2ನೇ ಬಾರಿಗೆ ಗೆಲುವು ಸಾಧಿಸಿದ ಡೊನಾಲ್ಡ್‌ ಟ್ರಂಪ್‌ ಅವರಿಗೆ ಅಭಿನಂದನೆ ಸಲ್ಲಿಸಿರುವ ಅದಾನಿ, ಭಾರತ ಮತ್ತು ಅಮೆರಿಕ ನಡುವಿನ ಸಂಬಂಧವನ್ನು ಮತ್ತಷ್ಟು ಗಾಢವಾಗಿಸುವ ವಿಶ್ವಾಸ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಅದಾನಿ ಸಮೂಹ ತನ್ನ ಜಾಗತೀಕ ಪರಿಣತಿ ಬಳಸಿಕೊಂಡು ಉದ್ಯೋಗ ಸೃಷ್ಟಿಸುವ ಗುರಿ ಹೊಂದಿದೆ. 10 ಶತಕೋಟಿ ಡಾಲರ್‌ ಹೂಡಿಕೆಗೆ ಅದಾನಿ ಬದ್ಧವಾಗಿದ್ದು, 15,000 ಉದ್ಯೋಗ ಸೃಷ್ಟಿ ಮಾಡುವ ಗುರಿ ಹೊಂದಿದೆ ಎಂದು ಎಕ್ಸ್‌ ಖಾತೆಯಲ್ಲಿ ತಿಳಿಸಿದ್ದಾರೆ.

    ಬಿಲಿಯನೇರ್ ಉದ್ಯಮಿಯೂ ಆಗಿರುವ ಡೊನಾಲ್ಡ್ ಟ್ರಂಪ್ (DonaldTrump) ಅವರು ಇತ್ತೀಚೆಗೆ ಪ್ರತಿಸ್ಪರ್ಧಿ ಡೆಮಾಕ್ರೆಟಿಕ್‌ ಪಕ್ಷದ ಕಮಲಾ ಹ್ಯಾರಿಸ್ ಅವರನ್ನ ಸೋಲಿಸಿದರು. ಟ್ರಂಪ್‌ ಅವರ ಈ ಗೆಲುವು ಅಮೆರಿಕ ಮತ್ತು ಭಾರತದ (USA And India) ನಡುವಿನ ಸಂಬಂಧ ಉತ್ತಮಗೊಳಿಸುತ್ತದೆ ಎಂದು ಹೇಳಲಾಗಿದೆ. ಈ ಬೆಳವಣಿಗೆಯ ನಡುವೆ ಅದಾನಿ ಮಹತ್ವದ ಘೋಷಣೆ ಮಾಡಿದ್ದಾರೆ. ಸದ್ಯ ಅಮೆರಿಕದಲ್ಲಿ ಇಂಧನ ಭದ್ರತೆ ಮತ್ತು ಮೂಲ ಸೌಕರ್ಯಗಳಲ್ಲಿ ಹೂಡಿಕೆ ಮಾಡುವುದಾಗಿ ಹೇಳಿದ್ದರೂ, ನಿರ್ದಿಷ್ಟ ಯೋಜನೆಯ ಟೈಮ್‌ಲೈನ್‌ಗಳ ಬಗ್ಗೆ ಸ್ಪಷ್ಟಪಡಿಸಿಲ್ಲ ಎಂದು ವರದಿಗಳು ಹೇಳಿವೆ.

    ಒಂದು ದಿನದ ಹಿಂದೆಯಷ್ಟೇ ಯೂರೋಪಿಯನ್‌ ಯೂನಿಯನ್‌, ಜರ್ಮನಿ, ಡೆನ್ಮಾರ್ಕ್‌ ಮತ್ತು ಬೆಲ್ಜಿಯಂ ರಾಯಭಾರಿಗಳು ಅದಾನಿ ಸಮೂಹ ನೇತೃತ್ವದ ಗುಜರಾತ್‌ನ ಖಾವ್ಡಾದಲ್ಲಿರುವ ವಿಶ್ವದ ಅತಿದೊಡ್ಡ ನವೀಕರಿಸಬಹುದಾದ ಎನರ್ಜಿ ಪಾರ್ಕ್ ಹಾಗೂ ಮುಂದ್ರಾದಲ್ಲಿರುವ ಬಂದರು ಹಾಗೂ ಲಾಜಿಸ್ಟಿಕ್ಸ್ ಮತ್ತು ಕೈಗಾರಿಕಾ ಸಂಕೀರ್ಣಕ್ಕೆ ಭೇಟಿ ನೀಡಿದ್ದರು.

    ಈ ವೇಳೆ ಭಾರತದಲ್ಲಿ ಶಕ್ತಿ ಪರಿವರ್ತನೆಯನ್ನು ಹೆಚ್ಚಿಸುವುದು, ಹೈಡ್ರೋಜನ್‌ ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ವಿಷಯಗಳ ಬಗ್ಗೆ ಚರ್ಚಿಸಲಾಗಿತ್ತು. ಇದರೊಂದಿಗೆ ಜಾಗತಿಕವಾಗಿ ಪಾಲುದಾರಿಕೆಯನ್ನು ಬಲಪಡಿಸುವ ವಿಷಯಗಳ ಮೇಲೆ ಕೇಂದ್ರೀಕರಿಸಲಾಗಿದೆ ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ಹೇಳಿದ್ದರು.

  • 4 ವರ್ಷಗಳಲ್ಲಿ 8 ಕೋಟಿ ಉದ್ಯೋಗ ಸೃಷ್ಟಿ – ಲೆಕ್ಕಕೊಟ್ಟ ಮೋದಿ ವಿರುದ್ಧ ಖರ್ಗೆ ಕಿಡಿ!

    4 ವರ್ಷಗಳಲ್ಲಿ 8 ಕೋಟಿ ಉದ್ಯೋಗ ಸೃಷ್ಟಿ – ಲೆಕ್ಕಕೊಟ್ಟ ಮೋದಿ ವಿರುದ್ಧ ಖರ್ಗೆ ಕಿಡಿ!

    – ಮೋದಿ ಮುಂದೆ ಮೂರು ಪ್ರಶ್ನೆಗಳನ್ನಿಟ್ಟ ಎಐಸಿಸಿ ಅಧ್ಯಕ್ಷ

    ನವದೆಹಲಿ: ಕಳೆದ 4 ವರ್ಷಗಳಲ್ಲಿ ಸುಮಾರು 8 ಕೋಟಿ ಹೊಸ ಉದ್ಯೋಗಗಳನ್ನು ದೇಶದಲ್ಲಿ ಸೃಷ್ಟಿಸಲಾಗಿದೆ ಎಂಬ ಪ್ರಧಾನಿ ನರೇಂದ್ರ ಮೋದಿ (PM Modi) ಹೇಳಿಕೆಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ತೀವ್ರವಾಗಿ ಖಂಡಿಸಿದ್ದಾರೆ. ನಿರುದ್ಯೋಗದ ಬಗ್ಗೆ ನಕಲಿ ನಿರೂಣೆಗಳನ್ನು ಹರಡುತ್ತಾ ಸುಳ್ಳಿನ ಜಾಲವನ್ನೇ ಹೆಣೆಯುತ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದ್ದಾರೆ.

    ಶನಿವಾರ ಮುಂಬೈನಲ್ಲಿ ಪ್ರಧಾನಿ ಮೋದಿ 29,000 ಕೋಟಿ ರೂ. ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಬಳಿಕ ಕಾರ್ಯಕ್ರಮದಲ್ಲಿ ಆರ್‌ಬಿಐ ವರದಿ ಉಲ್ಲೇಖಿಸಿ ಮಾತನಾಡಿದ್ದರು. ಉದ್ಯೋಗ ಸೃಷ್ಟಿಯ ಕುರಿತು ಇತ್ತೀಚೆಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ (RBI) ವರದಿ ನೀಡಿದೆ. ಕಳೆದ 3-4 ವರ್ಷದಲ್ಲಿ ಸುಮಾರು 8 ಕೋಟಿ ಹೊಸ ಉದ್ಯೋಗಗಳನ್ನು (Jobs) ದೇಶದಲ್ಲಿ ಸೃಷ್ಟಿಸಲಾಗಿದೆ ಎಂದು ಹೇಳಿದ್ದರು. ಈ ಹೇಳಿಕೆಯನ್ನು ಖರ್ಗೆ ಖಂಡಿಸಿದ್ದಾರೆ. ಅಲ್ಲದೇ ಪ್ರಧಾನಿ ಮುಂದೆ ಮೂರು ಪ್ರಶ್ನೆಗಳನ್ನೂ ಇಟ್ಟಿದ್ದಾರೆ. ಇದನ್ನೂ ಓದಿ: ಬೆಂಗಳೂರು ಮೆಟ್ರೋ ನಿಲ್ದಾಣಗಳಿಗೆ ಶಂಕರ್‌ ನಾಗ್‌, ಅಪರ್ಣಾ ಹೆಸರಿಡಿ: ಸರ್ಕಾರಕ್ಕೆ ಯತ್ನಾಳ್‌ ಆಗ್ರಹ

    ಮೋದಿ ಮುಂದಿಟ್ಟ ಮೂರು ಪ್ರಶ್ನೆ:
    ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಅವರು, ನರೇಂದ್ರ ಮೋದಿಜೀ ನಮಗೆ ಮೂರು ಪ್ರಶ್ನೆಗಳಿವೆ. ರಾಷ್ಟ್ರೀಯ ನೇಮಕಾತಿ ಏಜೆನ್ಸಿಯ (NRA) ಕಳೆದ 4 ವರ್ಷಗಳಿಂದ ಒಂದೇ ಒಂದು ಪರೀಕ್ಷೆಯನ್ನೂ ನಡೆಸಿಲ್ಲ, ಏಕೆ? ಎನ್‌ಆರ್‌ಎಗೆ 1,517.57 ಕೋಟಿ ರೂ. ಹಣ ನೀಡಿದ್ದರೂ ಕಳೆದ 4 ವರ್ಷಗಳಲ್ಲಿ ಕೇವಲ 58 ಕೋಟಿ ರೂ. ಮಾತ್ರ ಬಳಕೆಯಾಗಿದೆ ಏಕೆ? ಎನ್‌ಆರ್‌ಎ ಅನ್ನು ಸರ್ಕಾರಿ ಉದ್ಯೋಗಗಳಿಗೆ ನೇಮಕಾತಿ ನಡೆಸಲು ಒಂದು ಸಂಸ್ಥೆಯಾಗಿ ರಚಿಸಲಾಗಿದೆ. ಆದ್ರೆ ಸರ್ಕಾರ ಎಸ್ಸಿ, ಎಸ್ಟಿ, ಒಬಿಸಿ ಮತ್ತು ಇಡಬ್ಲ್ಯೂಎಸ್‌ (ಆರ್ಥಿಕ ದುರ್ಬಲ ವರ್ಗ) ಯುವಜನರ ಮೀಸಲಾತಿ ಹಕ್ಕನ್ನು ಕಸಿದುಕೊಳ್ಳಲು ಉದ್ದೇಶಪೂರ್ವಕವಾಗಿಯೇ ರಾಷ್ಟ್ರೀಯ ನೇಮಕಾತಿ ಏಜೆನ್ಸಿಯನ್ನು ನಿಕ್ಷ್ರಿಯಗೊಳಿಸಲಾಗಿದೆಯೇ? ಎಂದು ಮೂರು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಸದ್ಯ ಈ ಬಗ್ಗೆ ಮೋದಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    ಪ್ರಧಾನಿ ಮೋದಿ ಹೇಳಿದ್ದೇನು?
    ಉದ್ಯೋಗ ಸೃಷ್ಟಿಯ ಕುರಿತು ಇತ್ತೀಚೆಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ ವರದಿ ನೀಡಿದೆ. ಕಳೆದ 3-4 ವರ್ಷದಲ್ಲಿ ಸುಮಾರು 8 ಕೋಟಿ ಹೊಸ ಉದ್ಯೋಗಗಳನ್ನು ದೇಶದಲ್ಲಿ ಸೃಷ್ಟಿಸಲಾಗಿದೆ. ಆರ್‌ಬಿಐ ನೀಡಿದ ಈ ಅಂಕಿ-ಅಂಶಗಳು ಸುಳ್ಳು ಸುದ್ದಿ ಹರಡುವವರು, ಅಜೆಂಡಾ ಬಿತ್ತುವವರನ್ನು ಸುಮ್ಮನಾಗಿಸಿವೆ. ಯಾರು ಹೂಡಿಕೆ, ಮೂಲ ಸೌಕರ್ಯ ಹಾಗೂ ದೇಶದ ಅಭಿವೃದ್ಧಿಯನ್ನು ವಿರೋಧಿಸುತ್ತಿದ್ದರೋ, ಅವರೆಲ್ಲರ ಬಣ್ಣ ಈಗ ಬಯಲಾಗಿದೆ. ಇಂತಹ ಪಿತೂರಿಗಳನ್ನು ದೇಶದ ಜನ ತಿರಸ್ಕರಿಸುತ್ತಿದ್ದಾರೆ ಎಂದು ಪ್ರತಿಪಕ್ಷಗಳಿಗೆ ಕುಟುಕಿದ್ದರು. ಇದನ್ನೂ ಓದಿ: ಬೆಂಗಳೂರಲ್ಲಿ ತಡರಾತ್ರಿ 2 ಗಂಟೆಯವರೆಗೆ ಹೋಟೆಲ್, ಬಾರ್&ರೆಸ್ಟೋರೆಂಟ್ ಓಪನ್‌ಗೆ ಮನವಿ

    ದೇಶದ ಜನರಿಗೆ ಎನ್‌ಡಿಎ ಮೇಲೆ ಅಪಾರ ವಿಶ್ವಾಸವಿದೆ. ಎನ್‌ಡಿಎ ಸರ್ಕಾರ ಮಾತ್ರ ಸ್ಥಿರತೆಯನ್ನು ಕಾಪಾಡಲು ಸಾಧ್ಯ ಎಂದು ನಮ್ಮನ್ನು 3ನೇ ಬಾರಿಗೆ ಆಯ್ಕೆ ಮಾಡಿದ್ದಾರೆ. ಸಣ್ಣ ಹಾಗೂ ಬೃಹತ್‌ ಹೂಡಿಕೆದಾರರು ನಮ್ಮ ಸರ್ಕಾರ ಮತ್ತೆ ಬಂದಿರುವುದನ್ನು ಸ್ವಾಗತಿಸಿದ್ದಾರೆ. 3ನೇ ಅವಧಿಯಲ್ಲಿ ನಮ್ಮ ಕೆಲಸವು ಇನ್ನಷ್ಟು ಕ್ಷಿಪ್ರವಾಗುತ್ತದೆ, ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಗುತ್ತದೆ ಎಂಬುದಾಗಿ ಹೇಳಿದ್ದೆ. ಅದರಂತೆ ಈಗ ವೇಗವಾಗಿ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲಾಗುತ್ತಿದೆ ಎಂದು ಶ್ಲಾಘಿಸಿದ್ದರು. ಇದನ್ನೂ ಓದಿ: ವಾಲ್ಮೀಕಿ ನಿಗಮ ಆಯ್ತು ಈಗ ವಕ್ಫ್‌ ಬೋರ್ಡ್‌ನಲ್ಲೂ ಕೋಟ್ಯಂತರ ರೂ. ಅಕ್ರಮ ವರ್ಗಾವಣೆ 

  • ಕೇವಲ 2 ತಿಂಗಳಿನಲ್ಲಿ ಟೆಕ್ ಕಂಪನಿಗಳಿಂದ 1.2 ಲಕ್ಷಕ್ಕೂ ಮಂದಿ ವಜಾ

    ಕೇವಲ 2 ತಿಂಗಳಿನಲ್ಲಿ ಟೆಕ್ ಕಂಪನಿಗಳಿಂದ 1.2 ಲಕ್ಷಕ್ಕೂ ಮಂದಿ ವಜಾ

    ನವದೆಹಲಿ: ಜನವರಿ-ಫೆಬ್ರವರಿ ತಿಂಗಳಿನಲ್ಲಿ 417 ಕಂಪನಿಗಳು 1.2 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು (Employees) ಜಾಗತಿಕವಾಗಿ ವಜಾಗೊಳಿಸಿದೆ (Lay Off).

    ಬಿಗ್ ಟೆಕ್‌ನಿಂದ ಸ್ಟಾರ್ಟ್ಅಪ್‌ನವರೆಗೆ 1,046 ಕಂಪನಿಗಳು 1.61 ಲಕ್ಷಕ್ಕೂ ಅಧಿಕ ಉದ್ಯೋಗಿಗಳನ್ನು 2022ರಲ್ಲಿ ವಜಾಗೊಳಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಕಳೆದ ವರ್ಷದಿಂದ ಈ ಫೆಬ್ರವರಿವರೆಗೆ ಒಟ್ಟು 3 ಲಕ್ಷ ಟೆಕ್ (Tech) ಉದ್ಯೋಗಿಗಳು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ವರ್ಗಾವಣೆ, ಅಧಿಕ ನೇಮಕ, ಕಂಪನಿಯ ಆರ್ಥಿಕ ಪರಿಸ್ಥಿತಿ, ಕೋವಿಡ್ 19 ಸಾಂಕ್ರಮಿಕದಿಂದ ಆದ ನಷ್ಟದಿಂದಾಗಿ ಟೆಕ್ ಕಂಪನಿಗಳು (Tech Company) ಹೆಚ್ಚು ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿವೆ.

    ಕಳೆದ ವರ್ಷ ನವೆಂಬರ್‌ನಲ್ಲಿ ಘೋಷಿಸಿದಂತೆಯೇ ಕಾರ್ಯಕ್ಷಮತೆಯ ಆಧಾರದ ಮೇಲೆ ಮುಂದಿನ ತಿಂಗಳ ಆರಂಭದಲ್ಲಿ ಮತ್ತೊಂದು ದೊಡ್ಡ ಪ್ರಮಾಣದಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಲಾಗುವುದು ಎಂದು ಫೇಸ್‌ಬುಕ್ ಮಾತೃಸಂಸ್ಥೆ ಮೆಟಾ ತಿಳಿಸಿದೆ. ಇದನ್ನೂ ಓದಿ: ಪುಟಿನ್‌ನನ್ನು ಅವರ ಆಪ್ತ ವಲಯದವರೇ ಕೊಲ್ತಾರೆ: ಝೆಲೆನ್ಸ್ಕಿ ಭವಿಷ್ಯ

    ವೆಚ್ಚವನ್ನು ಕಡಿತಗೊಳಿಸಲು ಸ್ವೀಡಿಷ್ ಟಿಲಿಕಾಂ ಕಂಪನಿ ಎರಿಕ್ಸನ್ ಸುಮಾರು 8,500 ಉದ್ಯೋಗಿಗಳ ಪೈಕಿ 8% ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದೆ.

    ಜಾಗತಿಕ ಸಲಹಾ ಸಂಸ್ಥೆಯಾದ McKinsey & Co ಸುಮಾರು 2,000 ಉದ್ಯೋಗಗಳನ್ನು ಕಡಿತಗೊಳಿಸಲು ಯೋಚಿಸುತ್ತಿದೆ. ಮತ್ತೊಂದು ಪ್ರಮುಖ ಸಂಸ್ಥೆಯಾದ ಕೆಪಿಎಮ್‌ಜಿ ತನ್ನ ಉದ್ಯೋಗಿಗಳ ಪೈಕಿ ಶೇ.2ರಷ್ಟು ಉದ್ಯೋಗಿಗಳನ್ನು ವಜಾಗೊಳಿಸುತ್ತಿದ್ದು ಇದು ಯುಎಸ್ ನಲ್ಲಿ ಸುಮಾರು 700 ಉದ್ಯೋಗಿಗಳ ಮೇಲೆ ಪರಿಣಾಮವನ್ನು ಬೀರಲಿದೆ. ಇದನ್ನೂ ಓದಿ: ನೆಟ್‌ನಲ್ಲಿ ಬೆವರಳಿಸಿದ ಕೊಹ್ಲಿ – ನಿರ್ಣಾಯಕ ಪಂದ್ಯದ ಗೆಲುವಿಗೆ ಭಾರತ ಭರ್ಜರಿ ತಯಾರಿ

  • ಕರಡಿವೇಷ ಹಾಕಿ ಓಡಾಡಿದ್ರೆ ತಿಂಗಳಿಗೆ 15 ಸಾವಿರ ವೇತನ: ಹೀಗೊಂದು ವಿಶಿಷ್ಟ ಉದ್ಯೋಗ

    ಕರಡಿವೇಷ ಹಾಕಿ ಓಡಾಡಿದ್ರೆ ತಿಂಗಳಿಗೆ 15 ಸಾವಿರ ವೇತನ: ಹೀಗೊಂದು ವಿಶಿಷ್ಟ ಉದ್ಯೋಗ

    ತೆಲಂಗಾಣ: ತೆಲಂಗಾಣದ ಸಿದ್ದಿಪೇಟ್ ಜಿಲ್ಲೆಯ ರೈತರು ತಮ್ಮ ಬೆಳೆಯನ್ನು ಮಂಗಗಳು ಮತ್ತು ಕಾಡುಹಂದಿಗಳಿಂದ ರಕ್ಷಿಸಲು ವಿಶಿಷ್ಟ ಉಪಾಯವೊಂದನ್ನು ಮಾಡಿದ್ದಾರೆ. ವ್ಯಕ್ತಿಯೊಬ್ಬನಿಗೆ ಕರಡಿ ವೇಷ ಹಾಕಿ ತಮ್ಮ ಹೊಲದಲ್ಲಿ ನಿಲ್ಲಿಸುವ ಮೂಲಕ ಅವರು ಕೋತಿಗಳಿಂದ ಬೆಳೆಯನ್ನು ರಕ್ಷಿಸಲು ಮುಂದಾಗಿದ್ದಾರೆ.

    ತೆಲಂಗಾಣದ ಸಿದ್ದಿಪೇಟೆಯ ಕೋಹೆಡದ ರೈತ ಭಾಸ್ಕರ್ ರೆಡ್ಡಿ ಕೋತಿಗಳು ಮತ್ತು ಕಾಡುಹಂದಿಗಳು ಬೆಳೆ ಹಾನಿ ಮಾಡುವುದನ್ನು ತಡೆಯಲು ಕರಡಿಯ ವೇಷ ಧರಿಸಿ ಹೊಲದಲ್ಲಿ ಓಡಾಡಲು ವ್ಯಕ್ತಿಯನ್ನು ನೇಮಿಸಿದ್ದಾರೆ. ಈ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಷ್ಟೇ ಅಲ್ಲದೆ, ಕರಡಿ ವೇಷ ಧರಿಸಿ ಓಡಾಡುವ ವ್ಯಕ್ತಿಗೆ ದಿನಕ್ಕೆ 500 ರೂ. ವೇತನವನ್ನೂ ನಿಗದಿ ಮಾಡಲಾಗಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

    BEAR

    ಹೊಲದ ಬೆಳೆಯನ್ನು ಸುರಕ್ಷಿತವಾಗಿಡಲು ವ್ಯಕ್ತಿಯೊಬ್ಬ ದಿನವಿಡೀ ಹೊಲದಲ್ಲಿ ತಿರುಗಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಕೆಲಸಕ್ಕಾಗಿ ಅವರಿಗೆ ದಿನದ ವೇತನ 500 ರೂಪಾಯಿ ನೀಡಲಾಗುತ್ತಿದೆ. ಸದ್ಯ ಜಾಲತಾಣದಲ್ಲಿ ಈ ಮಾಹಿತಿಗೆ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ. ಕೆಲವರು ಏನೇ ಆದರೂ ಪ್ರಾಣಿಗಳನ್ನು ನಿಯಂತ್ರಣಗೊಳಿಸಲು ಸಾಧ್ಯವೇ ಎಂಬ ಪ್ರಶ್ನೆ ಎತ್ತಿದರೆ, ಇನ್ನೂ ಕೆಲವರು ಕರಡಿ ವೇಷ ಹಾಕಿಕೊಳ್ಳಲು ತಿಂಗಳಿಗೆ 15,000 ರೂ. ಸಂಬಳವೇ? ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

    ಒಟ್ಟಿನಲ್ಲಿ ಇತ್ತೀಚಿನ ದಿನಗಳಲ್ಲಿ ಉದ್ಯೋಗಗಳು ಹೊರ ಆಯಾಮ ಪಡೆದುಕೊಳ್ಳುತ್ತಿವೆ. ಅವು ಅಚ್ಚರಿ ಎನಿಸಿದರೂ ಅದರಿಂದ ಬರುವ ವೇತನವೇನು ಕಡೆಮೆಯಿಲ್ಲವೆನ್ನುವುದು ಇದರಿಂದ ಗೊತ್ತಾಗಿದೆ.

     

  • Budget 2022: ಮುಂದಿನ 5 ವರ್ಷಗಳಲ್ಲಿ 60 ಲಕ್ಷ ಉದ್ಯೋಗ ಸೃಷ್ಟಿಯ ಗುರಿ

    Budget 2022: ಮುಂದಿನ 5 ವರ್ಷಗಳಲ್ಲಿ 60 ಲಕ್ಷ ಉದ್ಯೋಗ ಸೃಷ್ಟಿಯ ಗುರಿ

    ನವದೆಹಲಿ: ಪ್ರೊಡೆಕ್ಷನ್ ಲಿಂಕ್ಡ್ ಇನ್ಸೆಂಟಿವ್ (PLI) ಯೋಜನೆಯಡಿ ಮುಂದಿನ 5 ವರ್ಷಗಳಲ್ಲಿ 60 ಲಕ್ಷ ಜನರಿಗೆ ಉದ್ಯೋಗ ನೀಡುವ ಗುರಿಯನ್ನು ಹೊಂದಲಾಗಿದೆ ಎಂದು ಕೇಂದ್ರ ಬಜೆಟ್‍ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.

    ಕೇಂದ್ರ ಬಜೆಟ್ ಮಂಡನೆ ವೇಳೆ ನಿರ್ಮಲಾ ಸೀತಾರಾಮನ್, ದೇಶದ ಜನತೆ ಕೊರೊನಾದಿಂದ ಚೇತರಿಕೆ ಕಾಣುತ್ತಿದ್ದಾರೆ. ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಇದೆ. 2014ರಿಂದಲೂ ಯುವಕರು ಮತ್ತು ಮಹಿಳೆಯರ ಸಬಲೀಕರಣ ಮಾಡುವುದೇ ನಮ್ಮ ಸರ್ಕಾರದ ಮುಂದಿರುವ ಗುರಿಯಾಗಿದೆ. ಬಡತನದಿಂದ ಮೇಲೆತ್ತಲು ಈ ಉದ್ಯೋಗಗಳು ಮುಂದಿನ ದಿನಗಳಲ್ಲಿ ಅನುಕೂಲವಾಗಲಿದೆ. ಮೇಕ್ ಇನ್ ಇಂಡಿಯಾ ಮೂಲಕ 60 ಲಕ್ಷ ಉದ್ಯೋಗ ಸೃಷ್ಟಿ ಮಾಡುವ ಗುರಿ ಹೊಂದಿದ್ದು, ಆತ್ಮ ನಿರ್ಭರ್ ಭಾರತದ ಮೂಲಕ ಈಗಾಗಲೇ ಉದ್ಯೋಗ ಸೃಷ್ಟಿ ಮಾಡುತ್ತಿದ್ದೇವೆ ಜನ ಸೂಕ್ತವಾಗಿ ಸ್ಪಂದಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: Budget 2022: ತಾಲಿಬಾನ್‌ ಆಡಳಿತದ ಅಫ್ಘಾನಿಸ್ತಾನಕ್ಕೆ 200 ಕೋಟಿ ನೆರವು

    ನಿರಂತರ ಕೌಶಲಾಭಿವೃದ್ಧಿ, ಸುಸ್ಥಿರತೆ ಮತ್ತು ಉದ್ಯೋಗವನ್ನು ಉತ್ತೇಜಿಸಲು ಮರುದೃಷ್ಟಿಕೋನದ ಮೂಲಕ ಉದ್ಯಮ ವಲಯದ ಪಾಲುದಾರಿಕೆ ಮತ್ತು ಕೌಶಲ್ಯ ಕಾರ್ಯಕ್ರಮಗಳನ್ನು ಜಾರಿಗೊಳಿಸುವುದಾಗಿ ತಿಳಿಸಿದ್ದಾರೆ. ಕ್ರಿಯಾತ್ಮಕ ಕೈಗಾರಿಕಾ ವಲಯದ ಅಗತ್ಯಗಳಿಗೆ ಹೊಂದಿಕೆಯಾಗುವಂತೆ ರಾಷ್ಟ್ರೀಯ ಅರ್ಹತಾ ಕೈಗಾರಿಕಾ (ಎನ್‍ಎಸ್‍ಕ್ಯೂಎಫ್) ಚೌಕಟ್ಟು ರೂಪಿಸಲಾಗುವುದು. ಕೌಶಲ್ಯ ಮತ್ತು ಜೀವನೋಪಾಯಕ್ಕಾಗಿ ಡಿಜಿಟಲ್ ಪರಿಸರ ವ್ಯವಸ್ಥೆ, ದೇಶ್ ಸ್ಟಾಕ್-ಇ-ಪೋರ್ಟಲ್ ಪ್ರಾರಂಭಿಸಲಾಗುವುದು. ನಾಗರಿಕರನ್ನು ಈ ಪೋರ್ಟಲ್ ಮೂಲಕ ಆನ್‍ಲೈನ್ ತರಬೇತಿಯಲ್ಲಿ ಮರು ಕೌಶಲ್ಯ ಮತ್ತು ಕೌಶಲ್ಯವನ್ನು ಮೇಲ್ದರ್ಜೆಗೇರಿಸುವ ಮೂಲಕ ಸಬಲೀಕರಣಗೊಳಿಸುವ ಉದ್ದೇಶ ಹೊಂದಲಾಗಿದೆ. ಇದು ಎಪಿಐ ಆಧಾರಿತ ವಿಶ್ವಾಸಾರ್ಹ ಕೌಶಲ್ಯವನ್ನು ನಿರೂಪಿಸುವ, ಪಾವತಿ ಮತ್ತು ಸಂಬಂಧಿತ ಉದ್ಯೋಗಗಳು ಹಾಗೂ ಉದ್ಯಮಶೀಲತಾ ಅವಕಾಶಗಳ ಅನ್ವೇಷಣೆಗೆ ಅವಕಾಶ ಕಲ್ಪಿಸುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: Budget 2022: ಯಾವುದು ಇಳಿಕೆ? ಯಾವುದು ಏರಿಕೆ?

    ಅಲ್ಲದೆ ವಿವಿಧ ಅಪ್ಲಿಕೇಷನ್‍ಗಳ ಮೂಲಕ ಮತ್ತು ಡ್ರೋನ್ ಆಸ್ ಎ ಸೇವೆಗಾಗಿ ‘ಡ್ರೋನ್ ಶಕ್ತಿ’ ಮೂಲಕ ನವೋದ್ಯಮಗಳನ್ನು ಉತ್ತೇಜಿಸಲಾಗುವುದು. ಆಯ್ದ ಐಟಿಐಗಳಲ್ಲಿ, ಎಲ್ಲಾ ರಾಜ್ಯಗಳಲ್ಲಿ ಕೌಶಲ್ಯಕ್ಕಾಗಿ ಅಗತ್ಯವಿರುವ ಕೋರ್ಸ್‍ಗಳನ್ನು ಪ್ರಾರಂಭಿಸಲಾಗುವುದು. ತಮ್ಮ ಮನೆ ಬಾಗಿಲಿಗೆ ವೈಯಕ್ತಿಕ ಕಲಿಕೆಯ ಅನುಭವದೊಂದಿಗೆ ವಿಶ್ವದರ್ಜೆಯ ಗುಣಮಟ್ಟದ ಸಾರ್ವತ್ರಿಕ ಶಿಕ್ಷಣಕ್ಕಾಗಿ ದೇಶಾದ್ಯಂತ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲು ಡಿಜಿಟಲ್ ವಿಶ್ವವಿದ್ಯಾಲಯವನ್ನು ಪ್ರಾರಂಭಿಸಲಾಗುವುದು. ಐಸಿಟಿ ಮಾದರಿಗಳು ಮತ್ತು ಭಾರತದ ವಿವಿಧ ಭಾಷೆಗಳಲ್ಲಿ ಶಿಕ್ಷಣ ಲಭ್ಯವಿದೆ. ವಿಶ್ವವಿದ್ಯಾಲಯವನ್ನು ಸಂಪರ್ಕಜಾಲ ಕೇಂದ್ರದ ಮೂಲಕ ಮಾತನಾಡುವ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಈ ಕಟ್ಟಡ ಅತ್ಯಾಧುನಿಕ ಐಸಿಟಿ ಪರಿಣತಿಯನ್ನು ಹೊಂದಿದ್ದು, ದೇಶದ ಅತ್ಯುತ್ತಮ ಸಾರ್ವಜನಿಕ ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳ ಸಹಯೋಗವನ್ನು ಇವು ಪಡೆಯಲಿವೆ ಎಂದರು.

  • ಕೇಂದ್ರ ಸ್ಫರ್ಧಾತ್ಮಕ ಪರೀಕ್ಷೆಗಳಿಗೆ ರಾಜ್ಯ ವಿದ್ಯಾರ್ಥಿಗಳ ಸಾಮರ್ಥ್ಯ ಹೆಚ್ಚಳಕ್ಕೆ ಕ್ರಮ: ಡಿಸಿಎಂ

    ಕೇಂದ್ರ ಸ್ಫರ್ಧಾತ್ಮಕ ಪರೀಕ್ಷೆಗಳಿಗೆ ರಾಜ್ಯ ವಿದ್ಯಾರ್ಥಿಗಳ ಸಾಮರ್ಥ್ಯ ಹೆಚ್ಚಳಕ್ಕೆ ಕ್ರಮ: ಡಿಸಿಎಂ

    -ಅನ್ ಅಕಾಡೆಮಿ ಜೊತೆ ಸರ್ಕಾರದ ಒಪ್ಪಂದ

    ಬೆಂಗಳೂರು: ರಾಷ್ಟ್ರೀಯ ಮಟ್ಟದ ಸ್ಫರ್ಧಾತ್ಮಕ ಪರೀಕ್ಷೆಗಳಲ್ಲಿ ರಾಜ್ಯದ ವಿದ್ಯಾರ್ಥಿಗಳು ಹೆಚ್ಚು ಪ್ರಮಾಣದಲ್ಲಿ ತೇರ್ಗಡೆಯಾಗಿ ಉದ್ಯೋಗ ಪಡೆಯಲು ಮಾರ್ಗದರ್ಶನ ನೀಡುವುದಕ್ಕೆ ರಾಜ್ಯ ಸರ್ಕಾರವು ದೇಶದ ಹೆಸರಾಂತ ಆನ್‍ಲೈನ್ ಕಲಿಕಾ ವೇದಿಕೆ ‘ಅನ್ ಅಕಾಡೆಮಿ’ ಜೊತೆ ಒಪ್ಪಂದ ಮಾಡಿಕೊಂಡಿದೆ.

    ಉನ್ನತ ಶಿಕ್ಷಣ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವಥ್ ನಾರಾಯಣ ಅವರ ಸಮಕ್ಷಮದಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಪ್ರದೀಪ್ ಪ್ರಭಾಕರ್ ಹಾಗೂ ಅನ್ ಅಕಾಡೆಮಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ವಿವೇಕ್ ಸಿನ್ಹಾ ಒಪ್ಪಂದಕ್ಕೆ ಸಹಿ ದಾಖಲೆಗಳನ್ನು ವಿನಿಮಯ ಮಾಡಿಕೊಂಡರು.

    ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ ಅವರು, ಈ ಒಪ್ಪಂದವು ಮೂರು ವರ್ಷ, ಅಂದರೆ 2021ರಿಂದ 2024ರವರೆಗೆ ಜಾರಿಯಲ್ಲಿರುತ್ತದೆ. ಈ ಮೂರು ವರ್ಷಗಳ ಅವಧಿಯಲ್ಲಿ ಪ್ರತೀ ವರ್ಷ 1,500 ವಿದ್ಯಾರ್ಥಿಗಳಂತೆ ಒಟ್ಟು 4,500 ವಿದ್ಯಾರ್ಥಿಗಳಿಗೆ ಅನ್ ಅಕಾಡೆಮಿ ಉಚಿತ ತರಬೇತಿ ನೀಡಲಿದೆ. ಪ್ರತಿ 6 ತಿಂಗಳಿಗೊಮ್ಮೆ ಆನ್‍ಲೈನ್ ಪರೀಕ್ಷೆಗಳನ್ನು ನಡೆಸಿ ಅದರಲ್ಲಿ ಆಯ್ಕೆಯಾಗುವ 750 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುವುದು ಹಾಗೂ ಆ ವಿದ್ಯಾರ್ಥಿಗಳನ್ನು ಯಾವುದೇ ಶುಲ್ಕವಿಲ್ಲದೆ ಅನ್ ಅಕಾಡೆಮಿ ಚಂದಾದಾರರನ್ನಾಗಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ನಾನು ಸನ್ಯಾಸತ್ವ ಪಡೆದಿಲ್ಲ: ಚೈತ್ರಾ ಕೊಟ್ಟೂರು ಸ್ಪಷ್ಟನೆ

    ಸರ್ಕಾರಿ ಪದವಿ, ಸ್ನಾತಕೋತ್ತರ, ಇಂಜಿನಿಯರಿಂಗ್, ಪಾಲಿಟೆಕ್ನಿಕ್‍ನಲ್ಲಿ ವ್ಯಾಸಂಗ ಮಾಡುತ್ತಿರುವ ಅಂತಿಮ ವರ್ಷ ಅಥವಾ ಫ್ರೀ ಫೈನಲ್ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲ ವಿದ್ಯಾರ್ಥಿಗಳು ಈ ಯೋಜನೆಯ ಫಲಾನುಭವಿಗಳು ಆಗಿದ್ದು, ಪ್ರಸ್ತುತ ಕೇಂದ್ರ ಆಡಳಿತ ಸೇವೆ, ಬ್ಯಾಂಕಿಂಗ್, ಗ್ರೂಪ್ ಸಿ ಸೇರಿದಂತೆ ವಿವಿಧ ವಲಯಗಳಲ್ಲಿ 3 ಲಕ್ಷಕ್ಕೂ ಹೆಚ್ಚು ಉದ್ಯೋಗಾವಕಾಶಗಳಿಗೆ ಪ್ರತಿ ವರ್ಷ ಕೇಂದ್ರ ಸರ್ಕಾರ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಆಯ್ಕೆ ಮಾಡಿಕೊಳ್ಳುತ್ತಿದೆ. ಆದರೆ ಈ ಆಯ್ಕೆಯಲ್ಲಿ ಕನ್ನಡದ ವಿದ್ಯಾರ್ಥಿಗಳು ಹಿಂದೆ ಬೀಳುತ್ತಿದ್ದಾರೆ. ಇದನ್ನು ಸರಿಪಡಿಸುವ ಉದ್ದೇಶದಿಂದ ಅನ್ ಅಕಾಡೆಮಿ ಜೊತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಈ ಕೋಚಿಂಗ್ ಮೂಲಕ ನಮ್ಮ ವಿದ್ಯಾರ್ಥಿಗಳ ಪರೀಕ್ಷಾ ಸಾಮಥ್ರ್ಯ ಹೆಚ್ಚಿಸಲಾಗುವುದು. ಉತ್ತಮ ಫಲಿತಾಂಶ ಸಾಧಿಸಲಾಗುವುದು ಎಂದು ಅವರು ವಿವರಿಸಿದರು.

    ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ್ ನಾಯಕ್, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್ ಸೇರಿ ಇನ್ನು ಕೆಲ ಗಣ್ಯರು, ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

  • ಕರ್ನಾಟಕದ ಉದ್ಯೋಗ ಕನ್ನಡಿಗರಿಗೆ ಸಿಗಲಿ – ಟ್ವಿಟ್ಟರ್‌ನಲ್ಲಿ ಕನ್ನಡಿಗರ ಅಭಿಯಾನ

    ಕರ್ನಾಟಕದ ಉದ್ಯೋಗ ಕನ್ನಡಿಗರಿಗೆ ಸಿಗಲಿ – ಟ್ವಿಟ್ಟರ್‌ನಲ್ಲಿ ಕನ್ನಡಿಗರ ಅಭಿಯಾನ

    ಬೆಂಗಳೂರು: ‘ಕರ್ನಾಟಕದ ಉದ್ಯೋಗ ಕನ್ನಡಿಗರಿಗೆ ಸಿಗಲಿ’ ಎಂಬ ಅಭಿಯಾನಕ್ಕೆ ಕನ್ನಡಿಗರು ಕರೆ ಕೊಟ್ಟಿದ್ದು, ಸದ್ಯ ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್ ಆಗಿದೆ.

    ಕರ್ನಾಟದಲ್ಲಿ ಉದ್ಯೋಗ ಬೇರೆ ರಾಜ್ಯದವರ ಪಾಲಾಗುತ್ತಿದೆ, ಕರ್ನಾಟಕದಲ್ಲೇ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎಂದು ಟ್ವೀಟ್ ಮಾಡುವ ಮೂಲಕ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    #karnatakaJobsForkannadigas ಎಂಬ ಹ್ಯಾಶ್ ಟ್ಯಾಗ್‍ನೊಂದಿಗೆ ಅಭಿಯಾನ ನಡೆಯುತ್ತಿದೆ. ಟ್ವಿಟರ್ ನಲ್ಲಿ ಸಖತ್ ಟ್ರೆಂಡಿಂಗ್ ಆಗುತ್ತಿದೆ. ಸಾಕಷ್ಟು ಜನ ಕನ್ನಡಿಗರು ಅಭಿಯಾನದಲ್ಲಿ ಭಾಗಿಯಾಗುವ ಮೂಲಕ ಕನ್ನಡಿಗರಿಗೆ ಕರ್ನಾಟಕದಲ್ಲಿ ಉದ್ಯೋಗ ನೀಡಿ ಹಾಗೂ ಕನ್ನಡಿಗರಿಗೆ ಉದ್ಯೋಗ ನೀಡುವ ಕುರಿತಾಗಿ ಸರೋಜಿನಿ ಮಹಿಷಿ ವರದಿ ಜಾರಿಗೆ ಮಾಡುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ನನ್ನ ನಿಸ್ವಾರ್ಥ ಸೇವೆಯನ್ನು ಕಂಡು ಕಾಂಗ್ರೆಸ್‍ನಿಂದ ವಿಕೃತಿ ಪ್ರದರ್ಶನ – ರೇಣುಕಾಚಾರ್ಯ

     

     

     

  • ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ

    ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ

    ಮಡಿಕೇರಿ: ಕಾಫಿ ತೋಟ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆಯೊಂದು ದಾಳಿ ಮಾಡಿದ ಪರಿಣಾಮ ಓರ್ವ ಗಂಭೀರ ಗಾಯಗೊಂಡಿದ್ದು, ಮತ್ತೋರ್ವ ಪ್ರಾಣಾಪಾಯದಿಂದ ಪಾರಾದ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬರಡಿ ಗ್ರಾಮದಲ್ಲಿ ನಡೆದಿದೆ.

    ಕಾಡಾನೆ ದಾಳಿಯಿಂದ ಗಾಯಗೊಂಡ ಸುರೇಂದ್ರ(50) ಸಿದ್ದಾಪುರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಮತ್ತೋರ್ವ ಕಾರ್ಮಿಕ ಜನಾರ್ದನ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಕಾಡಾನೆ ಹಾವಳಿಯಿಂದ ಗ್ರಾಮಸ್ಥರಲ್ಲಿ ಇದೀಗ ಆತಂಕ ಮನೆ ಮಾಡಿದೆ. ಕುಶಾಲನಗರ ತಾಲೂಕಿನ ನೆಲ್ಯಹುದಿಕೇರಿ ಪಂಚಾಯಿತಿ ವ್ಯಾಪ್ತಿಯ ಬರಡಿ ಗ್ರಾಮದಲ್ಲಿ ಬೆಳಗ್ಗೆ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ಹಠಾತ್ ದಾಳಿ ಮಾಡಿದೆ. ವಿಷಯ ತಿಳಿದ ಸ್ಥಳೀಯರು, ಸ್ಥಳಕ್ಕೆ ಆಗಮಿಸಿದ ವೇಳೆ ಕಾಡಾನೆ ಕಾಫಿ ತೋಟದತ್ತ ತೆರಳಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

    ಕೆಲ ದಿನಗಳಿಂದ ಗ್ರಾಮ ವ್ಯಾಪ್ತಿಯಲ್ಲಿ ಕಾಣಿಸಿಕೊಳ್ಳುತ್ತಿರುವ ಕಾಡಾನೆಯಿಂದ ರೈತರ ಕೃಷಿ ಫಸಲು ನಾಶವಾಗುತ್ತಿದ್ದು, ಕಾರ್ಮಿಕರ ಮೇಲೆ ನಿರಂತರ ದಾಳಿಮಾಡುತ್ತಿದೆ. ಕಾಡಾನೆ ಹಾವಳಿ ತಡೆಗಟ್ಟಲು ಅರಣ್ಯ ಇಲಾಖೆ ವಿಫಲವಾಗಿದ್ದು, ಶಾಶ್ವತವಾಗಿ ಕಾಡಾನೆ ಹಾವಳಿ ತಡೆಗಟ್ಟಲು ಕಾರ್ಮಿಕ ಸಂಘಟನೆಯ ಮುಖಂಡ ಪಿ.ಆರ್. ಭರತ್ ಒತ್ತಾಯಿಸಿದರು.

    ಉಪವಲಯ ಅರಣ್ಯಾಧಿಕಾರಿ ಸುಬ್ರಾಯ, ಅರಣ್ಯ ರಕ್ಷಕ ಚರಣ್ ಆಸ್ಪತ್ರೆಗೆ ಭೇಟಿ ನೀಡಿ ಹೆಚ್ಚಿನ ಚಿಕಿತ್ಸೆಗೆ ಸುರೇಂದ್ರರನ್ನು ಮಡಿಕೇರಿಗೆ ದಾಖಲಿಸಿದ್ದಾರೆ. ವಲಯ ಅರಣ್ಯಾಧಿಕಾರಿ ಸುಬ್ರಾಯ ಪತ್ರಿಕೆಯೊಂದಿಗೆ ಮಾತನಾಡಿ ಅರಣ್ಯದಂಚಿನಲ್ಲಿ ಅಳವಡಿಸಲಾಗಿರುವ ಸೋಲಾರ್ ವಿದ್ಯುತ್ ತಂತಿ ಮೇಲೆ ಮಳೆಯಿಂದ ಮರ ಬಿದ್ದು ತುಂಡಾಗಿದೆ. ಕಾಡಾನೆಯೊಂದು ಬರಡಿ ವ್ಯಾಪ್ತಿಯಲ್ಲಿ ಬೀಡು ಬಿಟ್ಟಿರುವುದು ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ತಕ್ಷಣ ಕಾಡಿಗಟ್ಟುವ ಕಾರ್ಯಾಚರಣೆ ಮಾಡಲಾಗುವುದು ಎಂದು ಹೇಳಿದರು.