Tag: Job scheme

  • ಬಿಹಾರ ಚುನಾವಣೆಗೂ ಮುನ್ನವೇ ಭರ್ಜರಿ ಗಿಫ್ಟ್‌ – 75 ಲಕ್ಷ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ತಲಾ 10,000 ರೂ. ವರ್ಗಾವಣೆ

    ಬಿಹಾರ ಚುನಾವಣೆಗೂ ಮುನ್ನವೇ ಭರ್ಜರಿ ಗಿಫ್ಟ್‌ – 75 ಲಕ್ಷ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ತಲಾ 10,000 ರೂ. ವರ್ಗಾವಣೆ

    – ʻಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್‌ ಯೋಜನೆʼಗೆ ಪ್ರಧಾನಿ ಮೋದಿ ಚಾಲನೆ

    ಪಾಟ್ನಾ: ವಿಧಾನಸಭೆ ಚುನಾವಣೆಗೆ ಕೆಲ ದಿನಗಳು ಬಾಕಿಯಿರುವಾಗಲೇ ಬಿಹಾರದ ಮಹಿಳೆಯರಿಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಸರ್ಕಾರ ಭರ್ಜರಿ ಕೊಡುಗೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi_ ಅವರಿಂದು ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆಗೆ (Mukhyamantri Mahila Rojgar Yojana) ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ್ದಾರೆ.

    ಈ ಯೋಜನೆಯ ಮೂಲಕ ಬಿಹಾರದಾದ್ಯಂತ (Bihar) 75 ಲಕ್ಷ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ತಲಾ 10,000 ರೂ.ಗಳನ್ನು ನೇರವಾಗಿ ವರ್ಗಾಯಿಸಲಾಗುತ್ತಿದೆ. ಇದಕ್ಕಾಗಿ ಒಟ್ಟು 7,500 ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ. ಇದನ್ನೂ ಓದಿ: MiG-21 Retires | 6 ದಶಗಳ ಸೇವೆಗೆ ವಿದಾಯ – ʻಹಾರುವ ಶವಪೆಟ್ಟಿಗೆʼ ಮಿಗ್‌-21ಗೆ ಗುಡ್‌ಬೈ ಹೇಳಿದ ಭಾರತ

    ಪ್ರತಿ ಕುಟುಂಬದ ಒಬ್ಬ ಮಹಿಳೆಗೆ ಅವರ ಆಯ್ಕೆಯ ಜೀವನೋಪಾಯ ಚಟುವಟಿಕೆಗಳಿಗಾಗಿ ಆರ್ಥಿಕ ನೆರವು ನೀಡುವ ಮೂಲಕ ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯ ಮತ್ತು ಸಾಮಾಜಿಕ ಸಬಲೀಕರಣವನ್ನು ಉತ್ತೇಜಿಸುವುದು ಯೋಜನೆಯ ಉದ್ದೇಶವಾಗಿದೆ. ಕೃಷಿ, ಪಶುಸಂಗೋಪನೆ, ಕರಕುಶಲ ವಸ್ತುಗಳು, ಟೈಲರಿಂಗ್, ನೇಯ್ಗೆ ಮತ್ತು ಇತರ ಸಣ್ಣ-ಪ್ರಮಾಣದ ಉದ್ಯಮಗಳನ್ನು ಮಹಿಳೆಯರು ನಡೆಸಬಹುದು, ನಂತರದ ಹಂತಗಳಲ್ಲಿ 2 ಲಕ್ಷ ರೂ.ಗಳವರೆಗೆ ಹೆಚ್ಚುವರಿ ಆರ್ಥಿಕ ನೆರವು ದೊರೆಯುವ ಸಾಧ್ಯತೆ ಇದೆ.

    ಯೋಜನೆಯನ್ನು ಉದ್ಘಾಟಿಸಿದ ನಂತರ ಮಾತನಾಡಿದ ಪ್ರಧಾನಿ ಮೋದಿ, ನವರಾತ್ರಿಯ ಈ ಶುಭ ಸಂದರ್ಭದಲ್ಲಿ ಬಿಹಾರದ ಮಹಿಳೆಯರ ಸಂತೋಷದಲ್ಲಿ ಪಾಲ್ಗೊಳ್ಳಲು ನನಗೆ ಹರ್ಷವಾಗುತ್ತಿದೆ. ನಾನು ಪರದೆಯ ಮೇಲೆ ಲಕ್ಷಾಂತರ ಮಹಿಳೆಯರನ್ನ ನೋಡುತ್ತಿದ್ದೇನೆ. ಅವರ ಆಶೀರ್ವಾದ ನಮಗೆಲ್ಲರಿಗೂ ಶಕ್ತಿಯ ಮೂಲವಾಗಿದೆ. ಅವರೆಲ್ಲರಿಗೂ ನನ್ನ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ಇದನ್ನೂ ಓದಿ: IAF ಗ್ರೂಪ್ ಕ್ಯಾಪ್ಟನ್ ಕಳಿಸಿದ ಮೇಲ್‌ನಿಂದ ಚೈತನ್ಯಾನಂದನ ಕಾಮಪುರಾಣ ಬಯಲಾಯ್ತು!

    ಬಿಹಾರ ಸಿಎಂ ನಿತೀಶ್ ಕುಮಾರ್ ಮಾತನಾಡಿ, ಪ್ರಧಾನಿ ನಿಮಗಾಗಿ ಬಹಳಷ್ಟು ಕೆಲಸ ಮಾಡ್ತಿದ್ದಾರೆ. ಹಿಂದಿನ ಸರ್ಕಾರ ಮಹಿಳೆಯರ ಪರ ಇರಲಿಲ್ಲ. ಲಾಲು ಪ್ರಸಾದ್‌ ಯಾದವ್ ಪದಚ್ಯುತಗೊಳಿಸಿದಾಗ, ಅವರು ತಮ್ಮ ಪತ್ನಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರು. ಅವರು ತಮ್ಮ ಕುಟುಂಬದ ಬಗ್ಗೆ ಕಾಳಜಿ ವಹಿಸಿದ್ದರು. ಆದ್ರೆ ನಾವು ನಮ್ಮ ಕುಟುಂಬಗಳನ್ನ ನೋಡಿಕೊಳ್ಳುವುದಿಲ್ಲ, ಬದಲಾಗಿ ಇಡೀ ಬಿಹಾರಕ್ಕಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: 1.22 ಲಕ್ಷ ಕೋಟಿ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಚಾಲನೆ

  • ʻಒಂದು ಕುಟುಂಬ, ಒಂದು ಸರ್ಕಾರಿ ಕೆಲಸʼ – ನೀತಿಯನ್ನು ಎತ್ತಿ ಹಿಡಿದ ಹೈಕೋರ್ಟ್‌

    ʻಒಂದು ಕುಟುಂಬ, ಒಂದು ಸರ್ಕಾರಿ ಕೆಲಸʼ – ನೀತಿಯನ್ನು ಎತ್ತಿ ಹಿಡಿದ ಹೈಕೋರ್ಟ್‌

    ಗ್ಯಾಂಗ್ಟಾಕ್: ಸಿಕ್ಕಿಂ ರಾಜ್ಯ ಸರ್ಕಾರದ ʻಒಂದು ಕುಟುಂಬ – ಒಂದು ಸರ್ಕಾರಿ ಕೆಲಸʼ ಯೋಜನೆಯನ್ನು ಸಿಕ್ಕಿಂ ಹೈಕೋರ್ಟ್ ಎತ್ತಿಹಿಡಿದಿದೆ. ಯೋಜನೆಯ ಸತ್ಯಾಸತ್ಯತೆಗಳ ಬಗ್ಗೆ ಯಾವುದೇ ಸಂದೇಹವಿಲ್ಲ, ಇದು ನಾಗರಿಕರಿಗೆ ಪ್ರಯೋಜನಕಾರಿಯಾಗಿದೆ ಎಂದು ಹೇಳಿದೆ.

    ಮಾಜಿ ಮುಖ್ಯಮಂತ್ರಿ ಪವನ್ ಚಾಮ್ಲಿಂಗ್ ಅವರು ಪ್ರಾರಂಭಿಸಿದ ಈ ಯೋಜನೆಯಡಿ 13,000 ಕ್ಕೂ ಹೆಚ್ಚು ನಾಗರಿಕರು ಉದ್ಯೋಗ ಪಡೆದಿದ್ದಾರೆ ಎಂದು ಮುಖ್ಯ ನ್ಯಾಯಮೂರ್ತಿ ಬಿಸ್ವನಾಥ್ ಸೋಮದ್ದರ್ ಮತ್ತು ನ್ಯಾಯಮೂರ್ತಿ ಮೀನಾಕ್ಷಿ ಮದನ್ ರೈ ಅವರ ವಿಭಾಗೀಯ ಪೀಠ ಗಮನಿಸಿದೆ. ಇದನ್ನೂ ಓದಿ: ಸ್ಥಳಾಂತರವಾಗಲು ಬಯಸುವ ಕಾಶ್ಮೀರಿ ಪಂಡಿತರಿಗೆ ಮಹಾರಾಷ್ಟ್ರದ ಬಾಗಿಲು ಯಾವಾಗ್ಲೂ ತೆರೆದಿರುತ್ತದೆ: ಆದಿತ್ಯ ಠಾಕ್ರೆ

    Law

    ಸಿಕ್ಕಿಂ ರಾಜ್ಯದಲ್ಲಿ ನೆಲೆಸಿರುವ 13,000ಕ್ಕೂ ಹೆಚ್ಚು ನಾಗರಿಕರು ಈ ಪ್ರಕ್ರಿಯೆಯಲ್ಲಿ ಉದ್ಯೋಗ ಪಡೆದಿದ್ದಾರೆ. ಒಂದು ಕುಟುಂಬಕ್ಕೆ ಒಂದು ಉದ್ಯೋಗ ಒದಗಿಸುವ ಈ ನೀತಿಯು ಸದುದ್ಧೇಶ ಹೊಂದಿದೆ. ಹಾಗಾಗಿ ಸಿಕ್ಕಿಂ ಸರ್ಕಾರಿ ಸೇವಾ ನಿಯಮ-1974ರ ಅಡಿಯಲ್ಲಿ ಒದಗಿಸಲಾದ ತಾಂತ್ರಿಕತೆಗಳ ಆಧಾರದ ಮೇಲೆ ಈ ಹಂತದಲ್ಲಿ ಯೋಜನೆಯ ಪ್ರಯೋಜನಕಾರಿ ಸ್ವರೂಪವನ್ನು ಅನುಮಾನಿಸಲಾಗುವುದಿಲ್ಲ ಮತ್ತು ಪರಿಶೀಲಿಸಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಇದನ್ನೂ ಓದಿ: 20 ಮಂದಿಯ ರಾಜೀನಾಮೆಯ ಬೆನ್ನಲ್ಲೇ ನೂತನ ಸಚಿವ ಸಂಪುಟ ರಚನೆ- 13 ಮಂದಿ ಪ್ರಮಾಣವಚನ

    ಸಿಕ್ಕಿಂ ರಾಜ್ಯದ ಆಡಳಿತ ಸುಧಾರಣೆ ಮತ್ತು ತರಬೇತಿ ಇಲಾಖೆಯ ಜಂಟಿ ಕಾರ್ಯದರ್ಶಿ ಉಮೇಶ್ ಸುನಮ್ ಅವರು ತಮ್ಮ ರಾಜ್ಯದ 31 ಕ್ಷೇತ್ರಗಳ ಪ್ರವಾಸಗಳನ್ನು ಪೂರ್ಣಗೊಳಿಸಿದ ನಂತರ ಮಾಜಿ ಮುಖ್ಯಮಂತ್ರಿ (ಸಿಎಂ) ಅವರು ಈ ಯೋಜನೆಯನ್ನು ಪ್ರಾರಂಭಿಸಿದ್ದಾರೆ ಎಂದು ಮನವಿ ಸಲ್ಲಿಸಲಾಗಿತ್ತು. ಈ ಪ್ರವಾಸದ ಸಮಯದಲ್ಲಿ, ಸಿಕ್ಕಿಂ ಜನರ ಮುಖ್ಯ ಕುಂದುಕೊರತೆ ಸರ್ಕಾರಿ ಸೇವೆಯಲ್ಲಿ ಉದ್ಯೋಗದ ಕೊರತೆ ಎಂದು ಗಮನಿಸಲಾಗಿದೆ ಎಂದು ಪೀಠವು ಗಮನಿಸಿತು.

    court order law

    ಅಲ್ಲದೆ, ಅಂದಿನ ಸರ್ಕಾರವು ಸರ್ಕಾರಿ ಸೇವೆಯಲ್ಲಿ ಯಾವುದೇ ಕುಟುಂಬ ಸದಸ್ಯರನ್ನು ಹೊಂದಿರದ ಅರ್ಜಿದಾರರ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುವುದು ಎಂದು ಅಂದಿನ ಸರ್ಕಾರ ನಿರ್ಧರಿಸಿದೆ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.‌ ಈ ಪ್ರಶ್ನೆಯು ಯೋಜನೆಯ ಪರಿಕಲ್ಪನೆಗೆ ಕಾರಣವಾಗಿದೆ ಎಂದು ಹೇಳಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಈದ್ಗಾ ಮೈದಾನ ವಿವಾದ- ಗ್ರೌಂಡ್‍ನಲ್ಲಿ ಹಿಂದೂ ಸಂಘಟನೆಯ ಮುಖಂಡರ ಹೈಡ್ರಾಮಾ

    ಈ ಅಫಿಡವಿಟ್ ನಲ್ಲಿ 1974ರ ನಿಯಮವನ್ನು ಕಟ್ಟು ನಿಟ್ಟಾಗಿ ಪಾಲಿಸದಿದ್ದರೂ ತಾಂತ್ರಿಕ ಅವಶ್ಯಕತೆಗಳನ್ನು ಅನುಸರಿಸಿದೆ. ಆದರೂ ಈ ಪ್ರಕ್ರಿಯೆಯಲ್ಲಿ ಸರ್ಕಾರ ಶಾಸನ ಬದ್ಧ ಕಾನೂನು ಮತ್ತು ನಿಯಮಗಳಿಗೆ ಕಟ್ಟುನಿಟ್ಟಾಗಿ ಪಾಲಿಸಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ನಿರ್ಧರಿಸಲಾಗಿದೆ. ಇದರೊಂದಿಗೆ ಮುಂದೆ ಜನ ಕಲ್ಯಾಣ ಹಾಗೂ ಪ್ರಯೋಜನಕಾರಿ ಯೋಜನೆಗಳನ್ನು ರಾಜ್ಯ ಹಾಗೂ ಏಜೆನ್ಸಿಗಳು ಜಾರಿಗೆ ತರಲು ನ್ಯಾಯಾಲಯ ಸಲಹೆ ನೀಡಿದೆ.

    Law

    ಅರ್ಜಿದಾರರ ಪರ ಹಿರಿಯ ವಕೀಲ ಎ. ಮೌಲಿಕ್, ವಕೀಲರಾದ ಕೆ.ಡಿ.ಭುಟಿಯಾ ಮತ್ತು ರಂಜಿತ್ ಪ್ರಸಾದ್ ವಾದ ಮಂಡಿಸಿದರು. ಅಡ್ವೊಕೇಟ್ ಜನರಲ್ ವಿವೇಕ್ ಕೊಹ್ಲಿ, ಸರ್ಕಾರಿ ವಕೀಲರಾದ ವೈಡಬ್ಲ್ಯೂ ರಿಂಚೆನ್ ಮತ್ತು ಪೆಮಾ ಭುಟಿಯಾ ಅವರು ರಾಜ್ಯ ಅಧಿಕಾರಿಗಳನ್ನು ಪ್ರತಿನಿಧಿಸಿದರು.