Tag: JNU University

  • ಸ್ಕಾಲರ್ಶಿಪ್‌ಗಾಗಿ ಜೆಎನ್‌ಯು ವಿದ್ಯಾರ್ಥಿಗಳು, ಸಿಬ್ಬಂದಿ ನಡುವೆ ಸಂಘರ್ಷ- 6 ವಿದ್ಯಾರ್ಥಿಗಳಿಗೆ ಗಾಯ

    ಸ್ಕಾಲರ್ಶಿಪ್‌ಗಾಗಿ ಜೆಎನ್‌ಯು ವಿದ್ಯಾರ್ಥಿಗಳು, ಸಿಬ್ಬಂದಿ ನಡುವೆ ಸಂಘರ್ಷ- 6 ವಿದ್ಯಾರ್ಥಿಗಳಿಗೆ ಗಾಯ

    ನವದೆಹಲಿ: ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ(ಜೆಎನ್‌ಯು) ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ನಡುವೆ ವಿದ್ಯಾರ್ಥಿವೇತನ ವಿಚಾರವಾಗಿ ಘರ್ಷಣೆ ಉಂಟಾಗಿದೆ. ಘಟನೆಯಲ್ಲಿ 6 ವಿದ್ಯಾರ್ಥಿಗಳು ಗಾಯಗೊಂಡಿರುವುದಾಗಿ ವರದಿಯಾಗಿದೆ.

    ಅಖಿಲ ಭಾರತ ವಿದ್ಯಾರ್ಥಿ ಪರಿಷತ್(ಎಬಿವಿಪಿ) ವಿದ್ಯಾರ್ಥಿಗಳ ಗುಂಪು ಇಂದು 2 ವರ್ಷಗಳಿಂದ ತಡೆಹಿಡಿಯಲಾದ ವಿದ್ಯಾರ್ಥಿವೇತನದ ಹಣವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದು, ಈ ವೇಳೆ ಸಂಸ್ಥೆಯ ಭದ್ರತಾ ಸಿಬ್ಬಂದಿ ತಮ್ಮ ಮೇಲೆ ದಾಳಿ ನಡೆಸಿರುವುದಾಗಿ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

    ವಿದ್ಯಾರ್ಥಿವೇತನದ ಬಗ್ಗೆ ವಿಚಾರಿಸಲು ಬೆಳಗ್ಗೆ 11 ಗಂಟೆಗೆ 5 ವಿದ್ಯಾರ್ಥಿಗಳು ವಿದ್ಯಾರ್ಥಿವೇತನ ವಿಭಾಗಕ್ಕೆ ತೆರಳಿದ್ದರು. ಈ ವೇಳೆ ಸಂಸ್ಥೆಯ ಸಿಬ್ಬಂದಿ ವಿದ್ಯಾರ್ಥಿಗಳನ್ನು ನಿಂದಿಸಿ, ಅನುಚಿತವಾಗಿ ವರ್ತಿಸಿದರು. ಈಗ ಸಂಸ್ಥೆಯ ಸ್ಥಿತಿ ಹೀಗಿದೆ, ಈ ಹಿಂದೆ 17 ಸಿಬ್ಬಂದಿ ಇದ್ದರು. ಈಗ 4 ಸಿಬ್ಬಂದಿ ಇದ್ದಾರೆ. ವಿದ್ಯಾರ್ಥಿಗಳು 2 ವರ್ಷಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಎಬಿವಿಪಿ ಜೆಎನ್‌ಯು ಅಧ್ಯಕ್ಷ ರೋಹಿತ್ ಕುಮಾರ್ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: 8 ತಿಂಗಳ ಗರ್ಭಿಣಿಯನ್ನು ಒದ್ದ ಟಿಎಂಸಿ ಶಾಸಕನ ಬೆಂಬಲಿಗರು

    ಅಧಿಕಾರಿಗಳು ಆಗಾಗ ಅನುಚಿತವಾಗಿ ವರ್ತಿಸುತ್ತಾರೆ, ಸುಳ್ಳು ಹೇಳುತ್ತಾರೆ. ನಾವು ಎಷ್ಟು ಕಾದರೂ ನಮಗೆ ಪರಿಹಾರ ನೀಡುವುದಿಲ್ಲ. ನಮಗೆ ಸ್ಕಾಲರ್‌ಶಿಪ್ ಹಣ ಬಿಡುಗಡೆಯಾಗುವವರೆಗೂ ಕಚೇರಿಯಿಂದ ಕದಲುವುದಿಲ್ಲ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ. ಇದನ್ನೂ ಓದಿ: ಶಿಕ್ಷಕರ ನೇಮಕಾತಿ ವಿಳಂಬ – ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್

    ಸಂಘರ್ಷದ ವೀಡಿಯೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ನಡುವೆ ಸಂಘರ್ಷ ಕಂಡುಬಂದಿದೆ. ಪ್ರತಿಭಟನೆಗೆ ಮುಂದಾದ ವಿದ್ಯಾರ್ಥಿಗಳನ್ನು ಸಿಬ್ಬಂದಿ ತಳ್ಳುವ ಹಾಗೂ ತಡೆಯುವುದು ಕಾಣಿಸಿಕೊಂಡಿದೆ.

    Live Tv
    [brid partner=56869869 player=32851 video=960834 autoplay=true]

  • ಶುಲ್ಕ ಹೆಚ್ಚಳ ವಿರೋಧಿಸಿ ಜೆಎನ್‍ಯುನಲ್ಲಿ ಪ್ರತಿಭಟನೆ – ಎಷ್ಟಿದ್ದ ಶುಲ್ಕ ಎಷ್ಟು ಹೆಚ್ಚಳವಾಗಿದೆ?

    ಶುಲ್ಕ ಹೆಚ್ಚಳ ವಿರೋಧಿಸಿ ಜೆಎನ್‍ಯುನಲ್ಲಿ ಪ್ರತಿಭಟನೆ – ಎಷ್ಟಿದ್ದ ಶುಲ್ಕ ಎಷ್ಟು ಹೆಚ್ಚಳವಾಗಿದೆ?

    – ತಾರಕಕ್ಕೇರಿದ ವಿದ್ಯಾರ್ಥಿಗಳ ಪ್ರತಿಭಟನೆ
    – ವೆಂಕಯ್ಯ ನಾಯ್ಡು ಇರುವಾಗಲೇ ಪ್ರತಿಭಟನೆ

    ನವದೆಹಲಿ: ಜವಹಾರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಮತ್ತೆ ಹೈಡ್ರಾಮಾ ನಡೆದಿದ್ದು, ಶುಲ್ಕ ಹೆಚ್ಚಳ ಖಂಡಿಸಿ, ನೂರಾರು ವಿದ್ಯಾರ್ಥಿಗಳು ವಿವಿ ಹೊರ ಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

    ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಜೆಎನ್‍ಯು ಹೊರಗಡೆ ಜಮಾಯಿಸಿ, ಹಾಸ್ಟೆಲ್ ಕೈಪಿಡಿ ಹಿಂಪಡೆಯಬೇಕು ಹಾಗೂ ಶುಲ್ಕವನ್ನು ಹೆಚ್ಚಳ ಮಾಡಬಾರದು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಒಂದು ವಾರದಿಂದ ಪ್ರತಿಭಟನೆ ನಡೆಯುತ್ತಿದ್ದು, ಭಾರೀ ಪೊಲೀಸ್ ಹಾಗೂ ಸಿಆರ್‍ಪಿಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

    ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು 3ನೇ ಘಟಿಕೋತ್ಸವದಲ್ಲಿ ಪಾಲ್ಗೊಂಡಿದ್ದ ಸಮಯದಲ್ಲೇ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

    ಕ್ಯಾಂಪಸ್ ಮುಂದೆ ಹೆಚ್ಚಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದು, ಕೆಲವು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿದ್ಯಾರ್ಥಿನಿಲಯದ ಶುಲ್ಕದ ಕೈಪಿಡಿಯ ಸಮಸ್ಯೆಗಳನ್ನು ಪರಿಹರಿಸಲು ಉಪಕುಲಪತಿಯವರನ್ನು ಒತ್ತಾಯಿಸುತ್ತಿದ್ದಾರೆ. ಇದೇ ವೇಳೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು 3ನೇ ಘಟಿಕೋತ್ಸವವನ್ನುದ್ದೇಶಿಸಿ ಭಾಷಣ ಮಾಡುತ್ತಿರುವುದರಿಂದ ಭಾರೀ ಭದ್ರತೆಯನ್ನು ಕಲ್ಪಿಸಲಾಗಿದೆ.

    ವಿಶ್ವವಿದ್ಯಾಲಯ ‘ವಿದ್ಯಾರ್ಥಿ ವಿರೋಧಿ ನೀತಿ’ಯನ್ನು ಅನುಸರಿಸುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಹಾಸ್ಟೆಲ್ ಕೈಪಿಡಿಯನ್ನು ಹಿಂಪಡೆಯುವಂತೆ ವಿದ್ಯಾರ್ಥಿ ಸಂಘವು ವಿಶ್ವವಿದ್ಯಾಲಯವನ್ನು ಒತ್ತಾಯಿಸಿದೆ. ಶುಲ್ಕ ಇಳಿಕೆ ವಿದ್ಯಾರ್ಥಿಗಳ ಪ್ರಮುಖ ಬೇಡಿಕೆಯಾಗಿದ್ದು, ಹಾಸ್ಟೆಲ್ ಕೈಪಿಡಿಯಲ್ಲಿ ಉಲ್ಲೇಖಿಸಿರುವ ‘ಡ್ರೆಸ್ ಕೋಡ್’ನ್ನು ಸಹ ವಿದ್ಯಾರ್ಥಿ ಸಂಘ ವಿರೋಧಿಸಿದೆ.

    ಶುಲ್ಕ ಎಷ್ಟು ಹೆಚ್ಚಳವಾಗಿದೆ?
    ವಿಶ್ವವಿದ್ಯಾಲಯದ ಹಾಸ್ಟೆಲ್‍ಗೆ ಇತ್ತೀಚೆಗೆ ಇದ್ದಕ್ಕಿದ್ದಂತೆ ಹೆಚ್ಚಿಸಲಾಗಿತ್ತು. ಪ್ರತಿ ತಿಂಗಳು ಡಬಲ್ ಸೀಟರ್‍ಗೆ 10 ರೂ.ನಿಂದ 300 ರೂ.ಗೆ ಹಾಗೂ ಸಿಂಗಲ್ ಸೀಟರ್‍ಗೆ 20 ರೂ.ನಿಂದ 600 ರೂ.ಗೆ ಶುಲ್ಕವನ್ನು ಹೆಚ್ಚಿಸಲಾಗಿತ್ತು. ಮೆಸ್ ಸೆಕ್ಯೂರಿಟಿ ಡಿಪಾಸಿಟ್ ಎಂದು ಪಡೆಯುತ್ತಿದ್ದ ಅಡ್ವಾನ್ಸ್ ಹಣವನ್ನು 5,500 ರೂ.ನಿಂದ 12 ಸಾವಿರಕ್ಕೆ ಹೆಚ್ಚಿಸಲಾಗಿತ್ತು. ಮುಂಗಡವಾಗಿ ಪಡೆದ ಈ ಶುಲ್ಕವನ್ನು ಮರುಪಾವತಿಸಲಾಗುತ್ತದೆ.

  • ರಾಣಿ ಚನ್ನಮ್ಮ ವಿವಿ, ದೆಹಲಿ ಜೆಎನ್‍ಯು ವಿವಿಯಂತೆ ಆಗಬಾರದು: ಸಂಸದ ಸುರೇಶ್ ಅಂಗಡಿ

    ರಾಣಿ ಚನ್ನಮ್ಮ ವಿವಿ, ದೆಹಲಿ ಜೆಎನ್‍ಯು ವಿವಿಯಂತೆ ಆಗಬಾರದು: ಸಂಸದ ಸುರೇಶ್ ಅಂಗಡಿ

    ಬೆಳಗಾವಿ: ಮಾಜಿ ಸಚಿವ ಜಾರಕಿಹೊಳಿ ಅವರ ಬೆಂಬಲಿಗರು ಎನ್ನಲಾದ ಕೆಲ ಕಾಂಗ್ರೆಸ್ ಕಾರ್ಯಕರ್ತರು ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದಲ್ಲಿ ದಾಂಧಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಸುರೇಶ್ ಅಂಗಡಿ ಕಿಡಿಕಾರಿದ್ದಾರೆ. ಅಲ್ಲದೇ ರಾಣಿ ಚನ್ನಮ್ಮ ವಿವಿ ಮತ್ತೊಂದು ದೆಹಲಿಯ ಜೆಎನ್‍ಯು ವಿವಿ ಆಗಬಾರದು ಎಂದು ಹೇಳಿದ್ದಾರೆ.

    ನಗರದಲ್ಲಿ ಇಂದು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಸಂಸದರು, ಚೆನ್ನಮ್ಮ ವಿಶ್ವ ವಿದ್ಯಾಲಯದ ದಾಂಧಲೆ ಪ್ರಕರಣ ಬೆಳಗಾವಿಗೆ ಕಪ್ಪು ಚುಕ್ಕೆ ಆಗಲಿದೆ. ಕಳೆದ 30 ವರ್ಷಗಳ ಹೋರಾಟದಿಂದ ವಿವಿ ಸ್ಥಾಪನೆ ಆಗಿದೆ. ವಿವಿಯಲ್ಲಿ ಪಕ್ಷ ರಾಜಕೀಯ ಬೇಡ. ರಾಣಿ ಚನ್ನಮ್ಮ ವಿವಿ ದೆಹಲಿ ಜೆಎನ್‍ಯು ವಿವಿಯಂತೆ ಆಗಬಾರದು. ದೇಶ ದ್ರೋಹಿಗಳನ್ನು ರಾಣಿ ಚನ್ನಮ್ಮ ವಿವಿಯಲ್ಲಿ ಬಿಟ್ಟಿರಬಹುದು. ಆದರೆ ನಾವು ಅದನ್ನು ಸಹಿಸುವುದಿಲ್ಲ. ವಿಶ್ವ ವಿದ್ಯಾಲಯ ಕುಲಪತಿ ಕೂಡಲೇ ಕಠಿಣ ಕ್ರಮಕೈಗೊಳ್ಳಬೇಕು ಆಗ್ರಹಿಸಿದರು.

    ಇದೇ ವೇಳೆ ವಿವಿಯ ಮುಂಭಾಗದಲ್ಲಿ ಅಂಡರ್ ಪಾಸ್ ಉದ್ಘಾಟನೆ ವಿಚಾರ ಪ್ರಸ್ತಾಪಿಸಿದ ಅವರು, ಉದ್ಘಾಟನೆ ವೇಳೆಯಲ್ಲಿ ಚಿಕ್ಕೋಡಿ ಸಂಸದ ಪ್ರಕಾಶ ಹುಕ್ಕೇರಿ, ಶಾಸಕ ಸತೀಶ ಜಾರಕಿಹೊಳಿ ಅವರಿಗೆ ಫೋನ್ ಮಾಡಿ ಆಗಮಿಸುವಂತೆ ಮನವಿ ಮಾಡಲು ಮುಂದಾಗಿದ್ದೆ. ಆದರೆ ಅವರಿಬ್ಬರು ನನ್ನ ಫೋನ್ ಕರೆ ಸ್ವೀಕರಿಸಲಿಲ್ಲ. ಈ ವೇಳೆ ನಾನೇ ಸ್ವತಃ ಹೋಗಿ ಉದ್ಘಾಟನೆ ಪೂಜೆ ನೆರವೇರಿಸಿದೆ. ಈ ಕಾರ್ಯಕ್ರಮಕ್ಕೆ ವಿವಿಯ ಕುಲಪತಿಗಳಿಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

    ಒಂದೊಮ್ಮೆ ಮಾಜಿ ಸಚಿವರಾದ ಸತೀಶ ಜಾರಕಿಹೊಳಿ ತಮ್ಮ ಬೆಂಬಲಿಗರು ಈ ರೀತಿ ನಡೆಸಿದ್ದಾರೆ ಕ್ರಮಕೈಗೊಳ್ಳಬೇಕು. ಸ್ವತಃ ಸತೀಶ್ ಅವರನ್ನೇ ಈ ಮೂಲಕ ಕೇಳಿಕೊಳ್ಳುತ್ತೇನೆ. ನಿಮ್ಮ ಬೆಂಬಲಿಗರಾದರೆ ಕ್ರಮಕೈಗೊಳ್ಳಿ. ಇಲ್ಲವೇ ಪೊಲೀಸರು ಕ್ರಮ ತೆಗೆದುಕೊಳ್ಳಲು ಅವಕಾಶ ನೀಡಿ ಎಂದು ಮನವಿ ಮಾಡುವುದಾಗಿ ತಿಳಿಸಿದರು. ಘಟನೆಯಲ್ಲಿ ಪೊಲೀಸ್ ಅಧಿಕಾರಿಗಳ ವೈಫಲ್ಯವನ್ನು ಟೀಕಿಸಿದ ಸಂಸದರು ರಾಜಕೀಯ ಒತ್ತಡದಿಂದ ಅಧಿಕಾರಿಗಳು ಭಯ ಪಡುತ್ತಿದ್ದಾರೆ. ಆದರೆ ಕಠಿಣ ಕ್ರಮ ಕೈಗೊಳ್ಳದೆ ಇದ್ದರೆ ಅಧಿಕಾರಿಗಳು ಜಾಗ ಖಾಲಿ ಮಾಡಬೇಕು ಎಂದು ಆಗ್ರಹಿಸಿದರು.

    ಏನಿದು ಘಟನೆ? ರಾಣಿಚನ್ನಮ್ಮ ವಿಶ್ವವಿದ್ಯಾಲಯಲ್ಲಿ ಸೋಮವಾರ ನಡೆದ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕುಲಪತಿ ಶಿವಾನಂದ ಹೊಸಮನಿ ಅವರನ್ನು ಮುತ್ತಿಗೆ ಹಾಕಿ ನೂಕಾಡಿದ್ದರು. ಶಾಸಕ ಸತೀಶ್ ಜಾರಕಿಹೊಳಿ ಅವರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡದೇ ಇರುವುದು ಕಾರ್ಯಕರ್ತರ ಕೋಪಕ್ಕೆ ಕಾರಣವಾಗಿತ್ತು ಎನ್ನಲಾಗಿತ್ತು. ಈ ವೇಳೆ ಬೆಳಗಾವಿ ಜಿಲ್ಲಾ ಪಂಚಾಯತ್ ಸದಸ್ಯ ಸಿದ್ದು ಸುಣಗಾರ್ ಹಾಗೂ ಕೆಲವು ಬೆಂಬಲಿಗರು ಕುಲಪತಿ ಅವರನ್ನು ಸುತ್ತುವರಿಯಲು ಯತ್ನಿಸಿದ್ದರು. ಘಟನೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಕುಲಪತಿ ಶಿವಾನಂದ ಹೊಸಮನಿ ಹಿಂದೇಟು ಹಾಕಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv