Tag: JNCC Engineering College

  • ಎಂಜಿನಿಯರಿಂಗ್ ವಿದ್ಯಾರ್ಥಿ ನೇಣಿಗೆ ಶರಣು

    ಎಂಜಿನಿಯರಿಂಗ್ ವಿದ್ಯಾರ್ಥಿ ನೇಣಿಗೆ ಶರಣು

    ಶಿವಮೊಗ್ಗ: ಎಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ಹಾಸ್ಟೆಲ್‍ನ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಜೆಎನ್‍ಸಿಸಿ ಎಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲ್‍ನಲ್ಲಿ ನಡೆದಿದೆ.

    SUICIDE

    ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯನ್ನು ಸಂದೀಪ್ (20) ಎಂದು ಗುರುತಿಸಲಾಗಿದೆ. ಸಂದೀಪ್ ಮೂಲತಃ ಕಲಬುರಗಿ ಮೂಲದವನಾಗಿದ್ದು, ಜೆಎನ್ ಎನ್‍ಸಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಮೂರನೇ ಸೆಮಿಸ್ಟರ್ ವ್ಯಾಸಂಗ ಮಾಡುತ್ತಿದ್ದ.  ಇದನ್ನೂ ಓದಿ: ಬಸವೇಶ್ವರ ಮೂರ್ತಿಗೆ ಮುಸ್ಲಿಂರಿಂದ ಸ್ವಾಗತ

    ಈತನ ಜೊತೆ ಹಾಸ್ಟೆಲ್‍ನಲ್ಲಿದ್ದ ಸಹಪಾಠಿಗಳು ರಜೆಯ ಕಾರಣ ತಮ್ಮ ಊರಿಗೆ ತೆರಳಿದ್ದರು. ಎರಡು ದಿನಗಳಿಂದ ಕೊಠಡಿಯಿಂದ ಅವನು ಹೊರಗೆ ಬಂದಿರಲಿಲ್ಲ. ಆತನು ಎಲ್ಲೋ ಹೊರಗಡೆ ಹೋಗಿರಬಹುದು ಎಂದುಕೊಂಡಿದ್ದರು. ಆದರೆ ಸೋಮವಾರ ಮಧ್ಯಾಹ್ನ ಮೃತ ಸಂದೀಪ್‍ನ ಹಾಸ್ಟೆಲ್ ಸಹಪಾಠಿ ಕೊಠಡಿ ಬಾಗಿಲು ತೆಗೆದಾಗ ನೇಣು ಬಿಗಿದುಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.

    ಸ್ಥಳಕ್ಕೆ ವಿನೋಬನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ವಿಧಾನ ಪರಿಷತ್ ಸಭಾಪತಿ ಸ್ಥಾನ, ಜೆಡಿಎಸ್‌ಗೆ ಬಸವರಾಜ ಹೊರಟ್ಟಿ ರಾಜೀನಾಮೆ