Tag: Jnanaprakash Swamiji

  • ದಲಿತ ಸಿಎಂ ಆಗಲೇಬೇಕು – ಜ್ಞಾನಪ್ರಕಾಶ ಸ್ವಾಮೀಜಿ ಆಗ್ರಹ

    ದಲಿತ ಸಿಎಂ ಆಗಲೇಬೇಕು – ಜ್ಞಾನಪ್ರಕಾಶ ಸ್ವಾಮೀಜಿ ಆಗ್ರಹ

    ಬೆಂಗಳೂರು: ಕಾಂಗ್ರೆಸ್‌ನಲ್ಲಿ (Congress) ದಲಿತ‌ ಸಿಎಂ (Dalit CM) ಚರ್ಚೆ‌ ಬೆನ್ನಲ್ಲೇ‌, ಉರಿಲಿಂಗ ಪೆದ್ದಿಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿಯವರು ದಲಿತ ಸಿಎಂ ಆಗಲೇಬೇಕು ಎಂದು ಆಗ್ರಹಿಸಿದ್ದಾರೆ.

    ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಅವರನ್ನು ಭೇಟಿಯಾದ ಬಳಿಕ‌ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ಈ ವೇಳೆ, ಖಂಡಿತವಾಗಿಯೂ ದಲಿತ ಸಿಎಂ ಆಗಲೇಬೇಕು. ಪ್ರಜಾಪ್ರಭುತ್ವದಲ್ಲಿ ಶೋಷಿತ ಸಮುದಾಯದವರು ಮುಖ್ಯಮಂತ್ರಿ ಸ್ಥಾನಕ್ಕೆ ಹೋಗದೇ ಇದ್ದರೆ ಇದಕ್ಕಿಂತ ಹೀನಾಯ ಸ್ಥಿತಿ ಮತ್ತೊಂದಿಲ್ಲ. ಸಾಮಾಜಿಕ ನ್ಯಾಯ ಸಿಗಲಿ ಅನ್ನೋದೇ ನಮ್ಮ ಉದ್ದೇಶ. ಶೋಷಿತ ಸಮುದಾಯದವರು ಯಾರೇ ಆದರೂ‌ ಸಿಎಂ ಆಗಲಿ ಎಂದಿದ್ದಾರೆ. ಇದನ್ನೂ ಓದಿ: ಪಟ್ಟಭದ್ರರು ಬಹಿರಂಗವಾಗಿ ಬಸವಣ್ಣನನ್ನು ವಿರೋಧಿಸುವುದು ಅಸಾಧ್ಯ, ಅದಕ್ಕೆ ಆಂತರಿಕವಾಗಿ ವಿರೋಧಿಸುತ್ತಿದ್ದಾರೆ – ಸಿಎಂ

    ಇದೇ ವೇಳೆ ಜಾತಿಗಣತಿ ಬಿಡುಗಡೆ ಆಗಲೇಬೇಕು ಎಂದು ಅವರು ಆಗ್ರಹಿಸಿದ್ದಾರೆ. ಸಾಮಾಜಿಕ ನ್ಯಾಯ ಸಿಗಬೇಕಲ್ಲವಾ? ಹಾಗಾದರೆ ಜಾತಿಗಣತಿ ವರದಿ ಬಿಡುಗಡೆ ಆಗಬೇಕು. ಗ್ರಾಮಪಂಚಾಯಿತಿ ಸದಸ್ಯರಾಗದಿರುವ ಸಮುದಾಯವೂ ಇದೆ. ಉಳ್ಳವರು ಬಲಿಷ್ಠರ ಕೈಯಲ್ಲಿ ಆಡಳಿತ ಸಿಕ್ಕಿಹಾಕಿಕೊಂಡ್ರೆ ಕಷ್ಟ. ಹಾಗಾಗಿ ಜಾತಿಗಣತಿ ಜಾರಿಯಾಗಲೇ ಬೇಕು. ಸಿಎಂಗೆ ಈ ಬಗ್ಗೆ ಮನವಿ ಮಾಡಿದ್ದೇವೆ. ಅತ್ಯಂತ ಕಟ್ಟಕಡೆಯ ವ್ಯಕ್ತಿಗೂ ಕೂಡ ರಾಜಕೀಯ ಹಕ್ಕು, ಅಧಿಕಾರ ಸಿಗಬೇಕು ಎಂದು ಅವರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಶ್ರೀರಾಮುಲು ಪಾದಯಾತ್ರೆಗೆ ಮತ್ತೊಬ್ಬ ಆಕಾಂಕ್ಷಿ ಟಕ್ಕರ್- ಸೂರ್ಯ ಪಾಪಣ್ಣ ಪಾದಯಾತ್ರೆ

  • ಅಮಿತ್ ಶಾ ವಿರುದ್ಧ ರಾಷ್ಟ್ರದ್ರೋಹ ಪ್ರಕರಣ ದಾಖಲಿಸಿ.. ಸಚಿವ ಸಂಪುಟದಿಂದ ಕೈಬಿಡಿ: ಜ್ಞಾನಪ್ರಕಾಶ್ ಸ್ವಾಮೀಜಿ ಆಗ್ರಹ

    ಅಮಿತ್ ಶಾ ವಿರುದ್ಧ ರಾಷ್ಟ್ರದ್ರೋಹ ಪ್ರಕರಣ ದಾಖಲಿಸಿ.. ಸಚಿವ ಸಂಪುಟದಿಂದ ಕೈಬಿಡಿ: ಜ್ಞಾನಪ್ರಕಾಶ್ ಸ್ವಾಮೀಜಿ ಆಗ್ರಹ

    – ಮೋದಿ ಅವರ ಬಗ್ಗೆ ಗೌರವವಿದೆ ಎಂದ ಸ್ವಾಮೀಜಿ
    – ದೇವರು ಬಂದು ನಿಮಗೆ ವೋಟ್ ಹಾಕಿ ಗೆಲ್ಲಿಸಿಲ್ಲ
    – ಡಾ. ಬಿ.ಆರ್.ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆಗೆ ಖಂಡನೆ – ಚಾ.ನಗರದಲ್ಲಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

    ಚಾಮರಾಜನಗರ: ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರ ವಿರುದ್ಧ ರಾಷ್ಟ್ರದ್ರೋಹ ಪ್ರಕರಣ ದಾಖಲಿಸಬೇಕು. ಕೂಡಲೇ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಉರಿಲಿಂಗಿಪೆದ್ದಿ ಮಠದ ಸ್ವಾಮೀಜಿ ಜ್ಞಾನಪ್ರಕಾಶ್ ಸ್ವಾಮೀಜಿ (Jnanaprakash Swamiji) ಆಕ್ರೋಶ ಹೊರಹಾಕಿದರು.

    ಡಾ.ಬಿ.ಆರ್ ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಚಾಮರಾಜನಗರದಾದ್ಯಂತ ದಲಿತ ಸಂಘಟನೆಗಳು ಮಂಗಳವಾರ ಬಂದ್‌ಗೆ ಕರೆ ನೀಡಿದ್ದವು. ಈ ವೇಳೆ ಮಾತನಾಡಿದ ಅವರು, ಅಮಿತ್ ಶಾ ಅವರ ಹೇಳಿಕೆ ರಾಷ್ಟ್ರಕ್ಕೆ ಮಾಡಿರುವ ಅವಮಾನ. ಜ್ವಲಂತ ಸಮಸ್ಯೆಗಳ ಬಗ್ಗೆ ಮಾತನಾಡುವುದನ್ನು ಬಿಟ್ಟು ಅಂಬೇಡ್ಕರ್ ಅವರನ್ನು ಅವಮಾನಿಸಿದ್ದಾರೆ. ಅಮಿತ್ ಶಾ ವಿರುದ್ಧ ಸುಪ್ರೀಂ ಕೋರ್ಟ್ ಸುಮೋಟೊ ಕೇಸ್ ದಾಖಲಿಸಬೇಕು ಎಂದು ಮನವಿ ಮಾಡಿದರು.

    ಮೋದಿ ಜಿ ಸಂವಿಧಾನದ ಬಗ್ಗೆ ಬಹಳ ಗೌರವ ಇಟ್ಟು ಮಾತನಾಡುತ್ತಿದ್ದಾರೆ. ಸಂವಿಧಾನಕ್ಕೆ ನಮಸ್ಕಾರವನ್ನೂ ಮಾಡಿದ್ದಾರೆ. ಮೋದಿಯವರ ಬಗ್ಗೆ ಗೌರವವಿದೆ. ಆದರೆ ಅವರ ಸಚಿವ ಸಂಪುಟದಲ್ಲಿ ಅಮಿತ್ ಶಾ ಇರುವುದು ಅಸಹ್ಯ. ಅಮಿತ್ ಶಾ ಅವರನ್ನು ಕೂಡಲೇ ಸಚಿವ ಸಂಪುಟದಿಂದ ಕೈಬಿಡಬೇಕು. ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

    ಇನ್ನೆರಡು ದಿನಗಳಲ್ಲಿ ಕ್ರಮ ಕೈಗೊಳ್ಳದಿದ್ದಲ್ಲಿ ರಾಷ್ಟ್ರ ಹಾಗೂ ರಾಜ್ಯ ವ್ಯಾಪಿ ಎಲ್ಲ ಎಂಪಿ, ಎಂಎಲ್‌ಎಗಳ ಕಚೇರಿ ತೆರೆಯಲು ಬಿಡುವುದಿಲ್ಲ. ಬಿಜೆಪಿ-ಕಾಂಗ್ರೆಸ್ ಸೇರಿದಂತೆ ಯಾವುದೇ ಶಾಸಕರು, ಸಂಸದರು ಆಗಿರಲಿ ಅವರ ಕಚೇರಿ ತೆರೆಯಲು ಬಿಡಲ್ಲ. ದೇವರು ಬಂದು ನಿಮಗೆ ವೋಟು ಹಾಕಿ ಗೆಲ್ಲಿಸಿಲ್ಲ. ದೇವರು ವೋಟು ಹಾಕಿರುವ ಬಗ್ಗೆ ದಾಖಲೆ ಕೊಟ್ಟರೆ ನಾವೇ ಶಿಕ್ಷೆಗೆ ಒಳಗಾಗುತ್ತೇವೆ. ಜನರಿಂದ ವೋಟು ಪಡೆದು ಸದನದಲ್ಲಿ ದೇವರು.. ದೇವರು ಅಂದರೆ ಇದು ಪ್ರಜಾಪ್ರಭುತ್ವನಾ? ದೇವರ ಪ್ರಭುತ್ವನಾ ಎಂದು ಪ್ರಶ್ನಿಸಿದ್ದಾರೆ.

    ಇಂದು ಚಾಮರಾಜನಗರ ಬಂದ್‌ಗೆ ದಲಿತ ಸಂಘಟನೆಗಳ ಕರೆ ನೀಡಿದ್ದವು. ಬಂದ್‌ಗೆ ಕಾಂಗ್ರೆಸ್ ಶಾಸಕ ಪುಟ್ಟರಂಗಶೆಟ್ಟಿ ಬೆಂಬಲ ನೀಡಿ ನೀಡಿದ್ದಾರೆ. ಬಂದ್ ಹಿನ್ನೆಲೆ ನಗರದ ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ರಜೆ ಘೋಷಣೆ ಮಾಡಿದ್ದವು. ತಾತ್ಕಾಲಿಕವಾಗಿ ಸಾರಿಗೆ ಸಂಚಾರ ನಿಲ್ಲಿಸಲಾಗಿತ್ತು. ಅಂಗಡಿ ಮುಂಗಟ್ಟು ಸಂಪೂರ್ಣ ಬಂದ್ ಆಗಿದ್ದವು. ದೊಡ್ಡಂಗಡಿ ಬೀದಿ, ಚಿಕ್ಕಂಗಡಿ ಬೀದಿ, ಬಸ್ ಸ್ಟ್ಯಾಂಡ್ ರೋಡ್‌ನ ಅಂಗಡಿಗಳು ಮುಚ್ಚಿದ್ದವು.

  • ವೀರಶೈವರು ನಮ್ಮಲ್ಲಿ ದಲಿತರ ರಕ್ತ ಹರಿಯುತ್ತಿದೆ ಎಂದು ಹೇಳಲಿ: ಜ್ಞಾನ ಪ್ರಕಾಶ ಸ್ವಾಮೀಜಿ

    ವೀರಶೈವರು ನಮ್ಮಲ್ಲಿ ದಲಿತರ ರಕ್ತ ಹರಿಯುತ್ತಿದೆ ಎಂದು ಹೇಳಲಿ: ಜ್ಞಾನ ಪ್ರಕಾಶ ಸ್ವಾಮೀಜಿ

    ಬೀದರ್: ವೀರಶೈವ (VeeraShivas) ಜಂಗಮರು, ದೊಡ್ಡ-ದೊಡ್ಡ ಪೀಠಾಧ್ಯಕ್ಷರು ಎಲ್ಲ ಸ್ವಾಮೀಜಿಗಳು ವಿಧಾನಸೌಧದ ಮುಂದೆ ಬನ್ನಿ, ಬಂದು ನಮ್ಮಲ್ಲಿ ದಲಿತರ ರಕ್ತ ಹರಿಯುತ್ತಿದೆ ಎಂದು ಬಹಿರಂಗವಾಗಿ ಸುದ್ದಿಗೋಷ್ಠಿ ಮಾಡಿ ಹೇಳಿ ಎಂದು ಮೈಸೂರಿನ ಉರಿಲಿಂಗ ಪೆದ್ದಿ ಮಠದ ಮಠಾಧೀಶರಾದ ಜ್ಞಾನ ಪ್ರಕಾಶ ಸ್ವಾಮೀಜಿ (Jnanaprakash Swamiji) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಮುಂದುವರಿದು ಮಾತನಾಡಿದ ಅವರು, ನಾವು ಹೊಲೆಯಾ, ಮಾದಿಗರಿಗೆ ಹುಟ್ಟಿದ್ದೇವೆ. ನಾವೆಲ್ಲ ಅಣ್ಣ ತಮ್ಮಂದಿರು, ನಾವೆಲ್ಲ ಸಮಾನರಾಗಿರೋಣ ಎಂದು ಹೇಳಿ ಬೇಕಿದ್ದರೆ ನಾನು ಬರುತ್ತೇನೆ. ಚರ್ಚೆ ಮಾಡೋಣ ಎಂದು ವೀರಶೈವ, ಲಿಂಗಾಯತ ಜಂಗಮರಿಗೆ ಸವಾಲು ಹಾಕಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನಿಂದ `ಸಿಎಂ ಅಂಕಲ್’ ಅಭಿಯಾನ – ಭುಗಿಲೆದ್ದ ಕೇಸರಿ ವಿವಾದ, ಸರ್ಕಾರಕ್ಕೆ ಹಲವು ಪ್ರಶ್ನೆ

    ನಂತರ ನೀವು ಸರ್ಟಿಫಿಕೇಟ್ ತೆಗೆದುಕೊಳ್ಳಿ ಬೇಡ ಅಂತ ಹೇಳಲ್ಲ ಎಂದು ಪಂಚ ಪೀಠದ ಜಗದ್ಗುರುಗಳನ್ನು ಪರೋಕ್ಷವಾಗಿ ಟೀಕಿಸಿದ್ದಾರೆ. ಇದನ್ನೂ ಓದಿ: ಸಕ್ಕರೆ ಕಾಯಿಲೆ ಇರುವವರಿಗೆ ಬೇರೆ ಊಟ – ಹೊಸ ಮೆನುವಿಗೆ ರೈಲ್ವೆ ಮಂಡಳಿ ಸೂಚನೆ

    ಎಸ್ಟಿ-ಎಸ್ಟಿ ವರ್ಗದವರನ್ನ (SCST Community) ಮುಟ್ಟಬಾರದು ಅಂತಾರೆ, ಹಾಗಾದ್ರೆ ಐದು ವರ್ಷಕ್ಕೊಮ್ಮೆ ವೋಟಿಗಾಗಿ ಎಲ್ಲರೂ ಬಂದು ಕಾಲಿಗೆ ನಮಸ್ಕಾರ ಮಾಡ್ತಾರೆ. ಅಂಬೇಡ್ಕರರು (Ambedkar) ಸಂವಿಧಾವನ್ನು (Constitution) ಎಚ್ಚರಿಕೆಯಿಂದ ಮಾಡಿದ್ದಾರೆ. ನಮ್ಮೆಲ್ಲರಿಗೂ ಮತದಾನದ ಹಕ್ಕು ಕೊಟ್ಟಿದ್ದಾರೆ. ಆದರೆ ನಾವು ನಮ್ಮೆಲ್ಲಾ ಆಯುಧಗಳನ್ನು ಉಳ್ಳವರ ಕೈಗೆ ಕೊಟ್ಟು ಸುಮ್ಮನಿದ್ದೇವೆ ಬೇಸರ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]