Tag: jnanadeevige

  • ಮೇಲೂರು ಶಾಲೆಯ ಮಕ್ಕಳಿಗೆ ಪಬ್ಲಿಕ್ ಟಿವಿ ಫ್ರೀ ಟ್ಯಾಬ್ ವಿತರಣೆ

    ಮೇಲೂರು ಶಾಲೆಯ ಮಕ್ಕಳಿಗೆ ಪಬ್ಲಿಕ್ ಟಿವಿ ಫ್ರೀ ಟ್ಯಾಬ್ ವಿತರಣೆ

    ಚಿಕ್ಕಬಳ್ಳಾಪುರ: ಪಬ್ಲಿಕ್ ಟಿವಿ, ರೋಟರಿ ಕ್ಲಬ್‌ ಜ್ಞಾನದೀವಿಗೆ ಮಹಾಯಜ್ಞ ಮುಂದುವರಿದಿದ್ದು, ಇಂದು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಮೇಲೂರು ಗ್ರಾಮದ ಗಂಗಾದೇವಿ ಸರ್ಕಾರಿ ಪ್ರೌಢ ಶಾಲೆಯ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಟ್ಯಾಬ್ ವಿತರಿಸಲಾಯಿತು.

    ಜಯಪ್ರಕಾಶ್ ನಾರಾಯಣಗೌಡ, ಎಚ್ ಡಿ ದೇವೇಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ಸೆವೆನ್ ಹಿಲ್ಸ್ ಎಂಟರ್ ಪ್ರೈಸರ್ಸ್ ಮಾಲೀಕ ಅದೇ ಶಾಲೆಯ ಹಳೆಯ ವಿದ್ಯಾರ್ಥಿ ಕಾಕಚೊಕ್ಕಂಡಹಳ್ಳಿ ಗ್ರಾಮದ ವೆಂಕಟಮೂರ್ತಿ ಎಂಬುವವರು ಶಾಲೆಯ ಕನ್ನಡ ಮಾಧ್ಯಮದ 44 ವಿದ್ಯಾರ್ಥಿಗಳಿಗೆ ಇಂದು 22 ಟ್ಯಾಬ್ ವಿತರಿಸಿದರು.

    ಇಂಗ್ಲೀಷ್ ಮಾಧ್ಯಮದ 27 ಮಂದಿ ವಿದ್ಯಾರ್ಥಿಗಳಿದ್ದು ಪಬ್ಲಿಕ್ ಟಿವಿ ವತಿಯಿಂದ ಈ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಿಸಲಾಗುವುದು. ಟ್ಯಾಬ್ ಪಡೆದ ವಿದ್ಯಾರ್ಥಿಗಳು ಪಬ್ಲಿಕ್ ಟಿವಿಗೆ ಹಾಗೂ ರೋಟರಿ ಕ್ಲ್‌ಬ್‌ಗೆ ಧನ್ಯವಾದಗಳನ್ನು ಅರ್ಪಿಸಿದರು.

  • ಬೀದರ್‌ ಗ್ರಾಮೀಣ ಭಾಗದ 114 ಮಕ್ಕಳಿಗೆ ಟ್ಯಾಬ್‌ ವಿತರಣೆ

    ಬೀದರ್‌ ಗ್ರಾಮೀಣ ಭಾಗದ 114 ಮಕ್ಕಳಿಗೆ ಟ್ಯಾಬ್‌ ವಿತರಣೆ

    ಬೀದರ್ : ಪಬ್ಲಿಕ್ ಟಿವಿ ಹಾಗೂ ರೋಟರಿ ಕ್ಲಬ್ ಜ್ಲಾನದೀವಿಗೆ ಅಭಿಯಾನದ ಅಡಿ ಬೀದರ್ ಜಿಲ್ಲೆಯ ಗ್ರಾಮೀಣ ಭಾಗದ ಸರ್ಕಾರಿ ಶಾಲೆಯ 114 ವಿದ್ಯಾರ್ಥಿಗಳಿಗೆ ಇಂದು ಉಚಿತ ಟ್ಯಾಬ್‌ ವಿತರಣೆ ಮಾಡಲಾಯಿತು.

    ಬಸವಕಲ್ಯಾಣ ತಾಲೂಕಿನ ತಾಲೂಕಿನ ಗೌರ ಮತ್ತು ಸಸ್ತಾಪೂರ್ ಹಾಗೂ ಹುಲಸೂರ ತಾಲೂಕಿನ ಮುಚಳಂಬ ಗ್ರಾಮದ  ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್‌ ವಿತರಣೆ ಮಾಡಲಾಯಿತು. ಟ್ಯಾಬ್‌ ದಾನಿಗಳಾದ ಬಸವಕಲ್ಯಾಣದ ಬಿಜೆಪಿ ಮುಖಂಡರಾದ ಶರಣು ಸಲಗಾರ ಅವರು ಮಚಳಂಬ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್‌ಗಳನ್ನು ವಿತರಣೆ ಮಾಡಿದರು.

    ಕೊರೊನಾ ಸಮಯದಲ್ಲಿ ಶಾಲೆಗಳು ಇಲ್ಲದೆ ಕಲಿಕೆಯಲ್ಲಿ ನಾವು ಹಿಂದೆ ಉಳಿದಿದ್ದೇವೆ. ಹೀಗಾಗಿ ಮುಂಬರುವ ಪರೀಕ್ಷೆಯನ್ನು ಬರೆಯುವುದು ಹೇಗೆ ಎಂಬ ಭಯ ಶುರುವಾಗಿತ್ತು. ಈಗ ಪಬ್ಲಿಕ್‌ ಟಿವಿ ನಮಗೆ ಉಚಿತ ಟ್ಯಾಬ್‌ಗಳನ್ನು ನೀಡಿದೆ. ಇದರ ಸದುಪಯೋಗ ಪಡೆದು ಒಳ್ಳೆಯ ಫಲಿತಾಂಶ ಪಡೆಯುತ್ತೇವೆ. ಉಚಿತವಾಗಿ ಟ್ಯಾಬ್‌ ನೀಡಿದ ಪಬ್ಲಿಕ್ ಟಿವಿ ಹಾಗೂ ದಾನಿಗಳಿಗೆ ವಿದ್ಯಾರ್ಥಿಗಳು ಧನ್ಯವಾದಗಳನ್ನು ತಿಳಿಸಿದರು.

    ಟ್ಯಾಬ್‌ ಕೊಡುಗೆ ನೀಡಿದ ಶರಣು ಸಲಗಾರ ಮಾತನಾಡಿ, ಶ್ರೀಮಂತರ ಮಕ್ಕಳು ಹೈಟೆಕ್ ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಈ ದಿಶೆಯಲ್ಲಿ ಪಬ್ಲಿಕ್‌ ಟಿವಿ ಉತ್ತಮ ಕಾರ್ಯ ಮಾಡುತ್ತಿದ್ದು, ಈ ಕಾರ್ಯ ನನಗೆ ವೈಯುಕ್ತಿಕವಾಗಿ ಖುಷಿ ನೀಡಿದೆ. ಬಡ ಮಕ್ಕಳಿಗೆ ಅನುಕೂಲ ಮಾಡಿಕೊಡಲು ಅವಕಾಶ‌ ನೀಡಿದ ಪಬ್ಲಿಕ್‌ ಟಿವಿಗೆ ಧನ್ಯವಾದಗಳು ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ನಾಗಭೂಷಣ ಶಿವಯೋಗಿ ಮಠದ ಪೀಠಾಧಿಪತಿಗಳಾದ ಪ್ರಣವಾನಂದ ಶಿವಯೋಗಿಗಳು, ಶಿಕ್ಷಕರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ವಿದ್ಯಾರ್ಥಿಗಳು ಭಾಗಿಯಾಗಿದ್ದರು.

  • ಜ್ಞಾನದೀವಿಗೆಗೆ ಬಿಜೆಪಿ ಮಾಜಿ ಶಾಸಕ ಎಸ್.ಮುನಿರಾಜು ನೆರವು

    ಜ್ಞಾನದೀವಿಗೆಗೆ ಬಿಜೆಪಿ ಮಾಜಿ ಶಾಸಕ ಎಸ್.ಮುನಿರಾಜು ನೆರವು

    ಬೆಂಗಳೂರು: ಸರ್ಕಾರಿ ಶಾಲೆಯ ಬಡ ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ನೆರವಾಗಲು ರೋಟರಿ ಸಹಾಯೋಗದಿಂದಿಗೆ ನಡೆಸುತ್ತಿರುವ ಪಬ್ಲಿಕ್ ಟಿವಿಯ ಜ್ಞಾನದೀವಿಗೆ ಕಾರ್ಯಕ್ರಮಕ್ಕೆ ಬೆಂಗಳೂರಿನ ಟಿ.ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದ ಮಾಜಿ ಬಿಜೆಪಿ ಶಾಸಕ ಎಸ್.ಮುನಿರಾಜು ತಮ್ಮ ನೆರವಿನ ಹಸ್ತ ನೀಡಿದ್ದಾರೆ.

    ಇಬ್ಬರು ವಿದ್ಯಾರ್ಥಿಗಳಿಗೆ ಒಂದು ಟ್ಯಾಬ್‌ನೊಂದಿಗೆ ಆರಂಭವಾದ ಕಾರ್ಯಕ್ರಮಕ್ಕೆ ಮಾಜಿ ಶಾಸಕ ಎಸ್ ಮುನಿರಾಜು ಅವರು 40 ವಿದ್ಯಾರ್ಥಿಗಳಿಗೆ ನೆರವಾಗುವಂತೆ 20 ಟ್ಯಾಬ್‌ಗಳನ್ನು ನೀಡಲು ಮುಂದಾಗಿದ್ದಾರೆ.

    ಪಠ್ಯವನ್ನು ಒಳಗೊಂಡ ಎಲೆಕ್ಟ್ರಾನಿಕ್ ಟ್ಯಾಬ್‌ ನೀಡುವುದು ಉತ್ತಮ ಕಾರ್ಯಕ್ರಮ. ಈ ಪ್ರಯೋಜನವನ್ನು ಮಕ್ಕಳು ಸದುಪಯೋಗ ಪಡಿಸಿಕೊಂಡು ಉನ್ನತ ವಿದ್ಯಾಭ್ಯಾಸಕ್ಕೆ ಮಕ್ಕಳು ಮುಂದಾಗಿ, ಗ್ರಾಮ, ಶಾಲೆ, ಗುರುಗಳು, ತಂದೆತಾಯಿಗೆ ಉತ್ತಮ ಕೀರ್ತಿ ಹೆಸರು ಬರುವಂತೆ ಮುಂದಾಗಬೇಕು. ನಾನು ಸಹ ಸರ್ಕಾರಿ ಶಾಲೆಯಲ್ಲಿ ಓದಿ ಬೆಳೆದಿದ್ದೇನೆ. ಹೀಗಾಗಿ ನಾನು ಕಿರು ಸಹಾಯವನ್ನು ನೀಡುತ್ತಿರುವುದಾಗಿ ಮುನಿರಾಜು ತಿಳಿಸಿದರು.

  • ಜ್ಞಾನ ದೀವಿಗೆಗೆ ಗೌರವ ಧನದ  ಜೊತೆ 2 ಟ್ಯಾಬ್ ಕೊಟ್ಟ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ

    ಜ್ಞಾನ ದೀವಿಗೆಗೆ ಗೌರವ ಧನದ ಜೊತೆ 2 ಟ್ಯಾಬ್ ಕೊಟ್ಟ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ

    ಉಡುಪಿ: ಪಬ್ಲಿಕ್ ಟಿವಿ ರಾಜ್ಯದಲ್ಲೇ ಒಂದು ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟಿದೆ. ಸರ್ಕಾರಿ ಶಾಲೆ ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ಉಚಿತ ಟ್ಯಾಬ್ ವಿತರಣೆ ಒಂದು ಹೋರಾಟದ ಯೋಜನೆ. ನನ್ನಂತಹ ಸಾವಿರಾರು ಜನರಿಗೆ ಕಣ್ಣು ತೆರೆಸುವ ಯೋಜನೆಯಿದೆ. ನನ್ನ ಒಂದು ತಿಂಗಳ ಗೌರವಧನ ಮತ್ತು ಎರಡು ಟ್ಯಾಬ್ ನೀಡುವುದಾಗಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಘವೇಂದ್ರ ಕಿಣಿ ಹೇಳಿದರು.

    ಇದು ಮಕ್ಕಳ ಭವಿಷ್ಯ ನಿರ್ಣಯವಾಗುವ ವರ್ಷ. ಸರ್ಕಾರದಿಂದ ನನಗೆ ಪ್ರತಿ ತಿಂಗಳು ಗೌರವಧನ ಬರುತ್ತದೆ. ಈ ತಿಂಗಳ ನನ್ನ ಸಂಬಳವನ್ನು ಜ್ಞಾನದೀವಿಗೆ ಕಾರ್ಯಕ್ರಮಕ್ಕೆ ನೀಡುತ್ತೇನೆ. ಇದರ ಜೊತೆಗೆ ಎರಡು ಟ್ಯಾಬ್ ನನ್ನ ವೈಯಕ್ತಿಕ ನೆಲೆಯಲ್ಲಿ ಮೂಲಕ ಸರ್ಕಾರಿ ಶಾಲೆಯ ಮಕ್ಕಳಿಗೆ ಕೊಡುತ್ತೇನೆ.

    ಇಂತಹ ಜನಪರ ಯೋಜನೆ ಮಾಧ್ಯಮದ ಮೂಲಕ ಆರಂಭವಾಗಿ ಸಮಾಜಕ್ಕೆ ಹೋದರೆ ಇದೊಂದು ಕ್ರಾಂತಿ ಆಗುತ್ತದೆ. ಸರ್ಕಾರಿ ಶಾಲೆಯ ಮಕ್ಕಳಿಗೆ ಸದುಪಯೋಗವಾಗುವ ಎಷ್ಟು ಯೋಜನೆಗಳು ಬಂದರೂ ಅದಕ್ಕೆ ಖಂಡಿತವಾಗಿ ಜನ ಬೆಂಬಲ ಕೊಡಲೇಬೇಕು. ಈ ಜನಪರ ಯೋಜನೆ ಕರ್ನಾಟಕಕ್ಕೆ ಮಾತ್ರ ಸೀಮಿತವಾಗದೆ ಇಡೀ ದೇಶದಲ್ಲಿ ಒಂದು ಸಂಚಲನ ಮೂಡಿಸುವ ಯೋಜನೆಯಾಗಲಿ. ಆಯಾಯ ರಾಜ್ಯದ ಮಾಧ್ಯಮಗಳು, ಸಂಸ್ಥೆಗಳು ಸರ್ಕಾರಗಳು ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಿ ಎಂದರು.

    ಶಾಲೆ ಆರಂಭ ಆಗುವ ಬಗ್ಗೆ ಸಾಕಷ್ಟು ಗೊಂದಲ ಪೋಷಕರಲ್ಲಿ ಮಕ್ಕಳಲ್ಲಿ ಸರ್ಕಾರದಲ್ಲಿ ಇದೆ. ಇಂತಹ ಸಂದರ್ಭದಲ್ಲಿ ಶಾಲೆಗಳನ್ನು ತೆರೆಯುವುದು ಬಹಳ ಕಷ್ಟ. ವಿದ್ಯಾಭ್ಯಾಸ ವಿಚಾರದಲ್ಲಿ ಮಕ್ಕಳ ಭವಿಷ್ಯ ಬಹಳ ಮುಖ್ಯ. ಶಾಲೆ ಆರಂಭವಾಗದಿದ್ದರೆ ಅವರ ಮುಂದಿನ ಭವಿಷ್ಯಕ್ಕೆ ಸಾಕಷ್ಟು ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಇಡೀ ವರ್ಷ ಶೂನ್ಯ ವರ್ಷ ಆಗುವ ಸಾಧ್ಯತೆ ಇದೆ.

    ಶ್ರೀಮಂತರ ಮಕ್ಕಳು ಈಗಾಗಲೇ ಅತ್ಯಾಧುನಿಕ ತಂತ್ರಜ್ಞಾನಕ್ಕೆ ತೆರೆದುಕೊಂಡಿದ್ದಾರೆ. ಮಧ್ಯಮ ವರ್ಗದ ಮಕ್ಕಳು ಸಾಲ ಮಾಡಿಯಾದರು ಮಕ್ಕಳಿಗೆ ಲ್ಯಾಪ್ಟಾಪ್ ಟ್ಯಾಬ್ ಮೊಬೈಲ್ ಕೊಡಿಸಿದ್ದಾರೆ. ಆದರೆ ಸರ್ಕಾರಿ ಶಾಲೆಗೆ ಹೋಗುವ ಕಡುಬಡ ಮಕ್ಕಳು ಎಲ್ಲಾ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಈಗ ಕೊರೊನಾ ಸಂಕಷ್ಟ ಇದೆ. ಎಲ್ಲರನ್ನೂ ಆರ್ಥಿಕ ಸಂಕಷ್ಟ ಇದೆ. ಈ ನಡುವೆಯೂ ಸಹಾಯ ಮಾಡುವ ದೊಡ್ಡ ಮನಸ್ಸು ಮಾಡಬೇಕು.

    ಎಲ್ಲವನ್ನು ಸರ್ಕಾರನೇ ಕೊಡಬೇಕು ಎಂದು ಒತ್ತಡ ಹಾಕಲು ಸಾಧ್ಯವಿಲ್ಲ. ಸಿರಿವಂತರು ಧನವಂತರು ತಮ್ಮ ಬಳಿ ಹೆಚ್ಚುವರಿ ಹಣ ಇದ್ದವರು ತಮ್ಮ ಕೈಲಾದ ಸಹಾಯವನ್ನು ಬಡಮಕ್ಕಳಿಗೆ ಸಹಾಯ ಮಾಡಿ. ಆರಂಭವಾದ ಯೋಜನೆಯನ್ನು ಸರಕಾರ ಮುಂದೆ ಕೈಗೆತ್ತುಕೊಂಡು ಪ್ರತಿಯೊಬ್ಬರಿಗೂ ಕೂಡ ಜ್ಞಾನ ದೀವಿಗೆ ಟ್ಯಾಬ್ ಯೋಜನೆ ತಲುಪಬೇಕು. ಯೋಜನೆಗೆ ದಾರಿ ಗೊತ್ತಾಗಿದೆ ಆ ದಾರಿಯ ಮೂಲಕ ಮುನ್ನಡೆಯಬೇಕಾಗಿದೆ ಎಂದರು.