Tag: Jnanabharathi Police Station

  • ಮಹಾ ಕುಂಭಮೇಳದ ಹೆಸರಲ್ಲಿ ವ್ಯಕ್ತಿಗೆ 64 ಸಾವಿರ ಪಂಗನಾಮ

    ಮಹಾ ಕುಂಭಮೇಳದ ಹೆಸರಲ್ಲಿ ವ್ಯಕ್ತಿಗೆ 64 ಸಾವಿರ ಪಂಗನಾಮ

    ಬೆಂಗಳೂರು: ಮಹಾಕುಂಭಮೇಳದ ಹೆಸರಿನಲ್ಲಿ ವ್ಯಕ್ತಿಯೋರ್ವ ವಂಚನೆಗೊಳಗಾಗಿ ಬರೋಬ್ಬರಿ 64 ಸಾವಿರ ರೂ. ಕಳೆದುಕೊಂಡಿರುವ ಘಟನೆ ಬೆಂಗಳೂರಿನ ಜ್ಞಾನಭಾರತಿಯಲ್ಲಿ ನಡೆದಿದೆ.

    ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡುವುದು ಕೋಟ್ಯಂತರ ಜನರ ಹೆಬ್ಬಕೆಯಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡು ಕೆಲವರು ಜನರಿಗೆ ವಂಚಿಸಲು ಶುರುಮಾಡಿದ್ದಾರೆ.ಇದನ್ನೂ ಓದಿ: ಬೆಂಗಳೂರು| ಹೊಸ ಇಂದಿರಾ ಕ್ಯಾಂಟೀನ್‍ಗಳಿಗೆ ಆರಂಭದಲ್ಲೇ ವಿಘ್ನ – 52 ಹೊಸ ಕ್ಯಾಂಟೀನ್‍ಗಳು ಓಪನ್ ಆಗೋದೇ ಡೌಟ್?

    ಹೌದು, ಸೈಬರ್ ವಂಚಕರು ಟ್ರೆಂಡ್‌ಗೆ ತಕ್ಕಂತೆ ವಂಚನೆ ಮಾಡಲು ಶುರುಮಾಡಿದ್ದಾರೆ. ಜ್ಞಾನಭಾರತಿಯ ಓರ್ವ ನಿವಾಸಿ ಪ್ರಯಾಗ್‌ರಾಜ್‌ಗೆ ತೆರಳುವ ಪ್ಲ್ಯಾನ್‌ ಮಾಡಿದ್ದರು. ಹಾಗೆಯೇ ಗೂಗಲ್‌ನಲ್ಲಿ ಸರ್ಚ್ ಮಾಡಿ ಕುಂಭಮೇಳಕ್ಕೆ ಹೋಗಲು ಎಷ್ಟು ವೆಚ್ಚ ತಗಲಬಹುದು ಎಂದು ನೋಡಿದ್ದಾರೆ. ಅದಾದ ಕೆಲವೇ ನಿಮಿಷಗಳಲ್ಲಿ ಅಪರಿಚಿತ ವ್ಯಕ್ತಿಯಿಂದ ಕರೆ ಬಂದಿದೆ. ನಾನು ರಾಕೇಶ್ ಟೂರ್ಸ್‌ & ಟ್ರಾವೆಲ್‌ನಿಂದ ಮಾತಾಡ್ತಿದ್ದೀನಿ. ನಮ್ ಕಂಪನಿಯಿಂದ ಕಡಿಮೆ ಬೆಲೆಯಲ್ಲಿ ಪ್ರಯಾಗ್‌ರಾಜ್‌ಗೆ ಹೋಗುವ ಪ್ಯಾಕೆಜ್ ಇದೆ ಎಂದು ಪರಿಚಯ ಮಾಡಿಕೊಂಡಿದ್ದ. ಕರೆ ಮಾಡಿ ವ್ಯಕ್ತಿಯ ಮಾತನ್ನು ನಂಬಿ, ಅವರು ಹೇಳಿದ ಅಕೌಂಟ್‌ಗೆ ಹಂತ ಹಂತವಾಗಿ 64 ಸಾವಿರ ರೂ. ಹಾಕಿದ್ದಾರೆ.

    ಹಣ ಹಾಕಿದ ಕೆಲವೇ ನಿಮಿಷಗಳ ನಂತರ ಆ ವ್ಯಕ್ತಿಗೆ ಕರೆ ಮಾಡಿದಾಗ, ನಂಬರ್ ಸ್ವಿಚ್ ಆಫ್ ಬಂದಿದೆ. ಬಳಿಕ ಮೋಸ ಹೋಗಿರುವ ಬಗ್ಗೆ ಅರಿವಾದಾಗ 1930ಗೆ ಕರೆ ಮಾಡಿ ದೂರು ನೀಡಿದ್ದಾರೆ. ಅಷ್ಟೇ ಅಲ್ಲದೇ ಹಣ ಹಾಕಿರುವ ದಾಖಲೆಯೊಂದಿಗೆ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

    ಈ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಿದಾಗ ಸೈಬರ್ ವಂಚಕರು, ಪ್ರಯಾಗ್‌ರಾಜ್‌ನಲ್ಲಿ ನಡೆಯುವ ಕುಂಭಮೇಳಕ್ಕೆ ಟಿಕೆಟ್ ಕೊಡಿಸುವುದಾಗಿ ಹೇಳಿ ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ. ಜೊತೆಗೆ ನಗರದ ಹಲವು ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಇದೇ ರೀತಿಯ ವಂಚನೆ ಪ್ರಕರಣಗಳು ದಾಖಲಾಗುತ್ತಿವೆ.ಇದನ್ನೂ ಓದಿ: ಮಹಾ ಕುಂಭಮೇಳ‌ – ರುದ್ರಾಕ್ಷಿ ಮಾಲೆ ಧರಿಸಿ ತ್ರಿವೇಣಿ ಸಂಗಮದಲ್ಲಿ ಮೋದಿ ಪುಣ್ಯಸ್ನಾನ

  • ಬೆಂಗಳೂರಲ್ಲಿ ಮತ್ತೊಂದು ಸರಣಿ ಅಪಘಾತ – KSRTC ಬಸ್‌, ಆಟೋ ಸಂಪೂರ್ಣ ಜಖಂ!

    ಬೆಂಗಳೂರಲ್ಲಿ ಮತ್ತೊಂದು ಸರಣಿ ಅಪಘಾತ – KSRTC ಬಸ್‌, ಆಟೋ ಸಂಪೂರ್ಣ ಜಖಂ!

    ಬೆಂಗಳೂರು: ಇತ್ತೀಚೆಗಷ್ಟೇ ನೆಲಮಂಗಲದ ಬಳಿ ಸರಣಿ ಅಪಘಾತವೊಂದು ನಡೆದು ಒಂದೇ ಕುಟುಂಬದ 6 ಮಂದಿ ಸಾವನ್ನಪ್ಪಿದ್ದ ಘಟನೆ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಸರಣಿ ಅಪಘಾತ ನಗರದ ಜ್ಞಾನಭಾರತಿ ಮೆಟ್ರೋ ನಿಲ್ದಾಣದ ಬಳಿ ನಡೆದಿದೆ.

    ಆಟೋ ಚಾಲಕ ಓವರ್‌ ಟೇಕ್‌ ಮಾಡಲು ಬಂದಾಗ ಕೆಎಸ್‌ಆರ್‌ಟಿಸಿ ಬಸ್ & ಆಟೋ ಮಧ್ಯೆ ಭೀಕರ ಅಪಘಾತ ನಡೆದಿದೆ. ಈ ವೇಳೆ ಕೆಎಸ್‌ಆರ್‌ಟಿಸಿ ಬಸ್‌ ಡಿವೈಡರ್‌ಗೆ ಗುದ್ದಿ ಆಚೆ ಬಂದ ಪರಿಣಾಮ ಪಕ್ಕದಲ್ಲಿದ್ದ ಗಾಡಿಗಳಿಗೂ ಡ್ಯಾಮೇಜ್ ಆಗಿದೆ. ಇದನ್ನೂ ಓದಿ: Pune | ಫುಟ್‌ಪಾತ್‌ನಲ್ಲಿ ಮಲಗಿದ್ದವರ ಮೇಲೆ ಹರಿದ ಟ್ರಕ್ – ಇಬ್ಬರು ಮಕ್ಕಳು ಸೇರಿ ಮೂವರ ದುರ್ಮರಣ

    ಅಪಘಾತದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಗಾಜು ಪುಡಿಪುಡಿಯಾಗಿದೆ, ಡೋರ್‌ ಸಂಪೂರ್ಣ ಹಾನಿಯಾಗಿದೆ. 1 ಎಲೆಕ್ಟ್ರಿಕ್‌ ಕೆಎಸ್‌ಆರ್‌ಟಿಸಿ, ಇನ್ನೊಂದು ರೆಡ್ ಬಸ್ ಕೆಎಸ್‌ಆರ್‌ಟಿಸಿ, ಒಂದು ಕಾರು, ಆಟೋ ಸಂಪೂರ್ಣ ಜಖಂಗೊಂಡಿದೆ. ಸದ್ಯ ಇಬ್ಬರು ಚಾಲಕರಿಗೂ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: Uttar Pradesh | ಖಾಲಿಸ್ತಾನ್‌ ಕಮಾಂಡೋ ಫೋರ್ಸ್‌ನ ಮೂವರು ಭಯೋತ್ಪಾದಕರು ಎನ್‌ಕೌಂಟರ್‌

    ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ಘಟನೆ ನಡೆದಿದೆ.

  • ಬೆಂಗ್ಳೂರಲ್ಲಿ ಪೋರ್ನ್‌ ದಂಧೆ; ಹಣಕ್ಕಾಗಿ ತಮ್ಮದೇ ವೀಡಿಯೋಗಳನ್ನ ಪೋರ್ನ್‌ ಸೈಟ್‌ನಲ್ಲಿ ಅಪ್ಲೋಡ್‌ ಮಾಡ್ತಿದ್ದ ಜೋಡಿ!

    ಬೆಂಗ್ಳೂರಲ್ಲಿ ಪೋರ್ನ್‌ ದಂಧೆ; ಹಣಕ್ಕಾಗಿ ತಮ್ಮದೇ ವೀಡಿಯೋಗಳನ್ನ ಪೋರ್ನ್‌ ಸೈಟ್‌ನಲ್ಲಿ ಅಪ್ಲೋಡ್‌ ಮಾಡ್ತಿದ್ದ ಜೋಡಿ!

    ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹಣ ಗಳಿಸುವ ಸಲುವಾಗಿ ಎಂತಹ ಕೆಲಸಗಳನ್ನ ಮಾಡ್ತಾರೆ ಅನ್ನೋದು ಬೆಂಗಳೂರು (Bengaluru) ಮಹಾನಗರದಲ್ಲಿ ಆಗಾಗ್ಗೆ ಬೆಳಕಿಗೆ ಬರುತ್ತಿದೆ. ಅದೇ ರೀತಿ ಮಹಿಳೆಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ಲೈಂಗಿಕ ಚಟುವಟಿಕೆ ನಡೆಸಿ, ಚಿತ್ರೀಕರಿಸಿದ ವೀಡಿಯೋವನ್ನು ಪೋರ್ನ್‌ ವೆಬ್‌ಸೈಟ್‌ಗೆ ಅಪ್ಲೋಡ್‌ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.

    ಈ ಬಗ್ಗೆ ಗುತ್ತಿಗೆದಾರ ಅಮರ್‌ನಾಥ್‌ ಎಂಬವರು ಐಟಿ ಆಕ್ಟ್ (ಮಾಹಿತಿ ತಂತ್ರಜ್ಞಾನ ಕಾಯ್ದೆ) (IT Act) ಅಡಿಯಲ್ಲಿ ದೂರು ನೀಡಿದ್ದು, ಜ್ಞಾನಭಾರತಿ ಪೊಲೀಸ್‌ ಠಾಣೆಯಲ್ಲಿ (Jnanabharathi Police Station) ಪ್ರಕರಣ ದಾಖಲಾಗಿದೆ. ಸದ್ಯ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಇದನ್ನೂ ಓದಿ: ಕೆಫೆ ಬ್ಲಾಸ್ಟ್ ಪ್ರಕರಣ – ಶಂಕಿತ ಉಗ್ರನ ಸುಳಿವು ಕೊಟ್ಟವರಿಗೆ 10 ಲಕ್ಷ ರೂ. ಬಹುಮಾನ ಘೋಷಣೆ

    ಹಣಗಳಿಸುವ ಉದ್ದೇಶದಿಂದ ಮಹಿಳೆ ಸೌಮ್ಯ ಆಕೆಯ ಪ್ರಿಯಕರ ರವಿ ರಾಮನಗರ ಎಂಬಾತನೊಂದಿಗೆ ಸೇರಿ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಸಿದ್ದಾಳೆ. ಈ ಸೀಕ್ರೇಟ್‌ ಕೆಲಸಕ್ಕಾಗಿಯೇ ಉಲ್ಲಾಳ ಉಪನಗರದ ಬಳಿ ಮನೆಯೊಂದನ್ನು ಬಾಡಿಗೆಗೆ ಪಡೆದುಕೊಂಡಿದ್ದಾರೆ. ಅಲ್ಲಿ ತಾವೇ ಲೈಂಗಿಕ ಚಟುವಟಿಕೆ ನಡೆಸಿ, ಅದನ್ನು ಚಿತ್ರೀಕರಿಸಿ ಪೋರ್ನ್ ವೆಬ್‌ಸೈಟ್‌ನಲ್ಲಿ ಅಪ್ಲೋಡ್‌ ಮಾಡಿದ್ದಾರೆ. ಇದರ ವೀಡಿಯೋ ಚಿತ್ರೀಕರಣಕ್ಕೆ ಮತ್ತೊಂದು ಜೋಡಿ ಸಹಕಾರ ನೀಡಿದೆ. ಆದ್ದರಿಂದ ಅವರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಅಮರನಾಥ್‌ ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸುತ್ತಿದ್ದಂತೆ ಅಮರಮಾಥ್‌ಗೆ ಖತರ್ನಾಕ್‌ ಜೋಡಿಗಳು ಧಮ್ಕಿ ಹಾಕಿದ್ದು, ಪೊಲೀಸರ ಬಳಿ ದೂರುದಾರರು ರಕ್ಷಣೆ ಕೋರಿದ್ದಾರೆ.

    ಎಫ್‌ಐಆರ್‌ನಲ್ಲಿ ಏನಿದೆ?
    ಸೌಮ್ಯ ಎಂಬಾಕೆ ಮತ್ತು ಆಕೆಯ ಪ್ರಿಯಕರ ರವಿ ರಾಮನಗರ ಇಬ್ಬರೂ ಸೇರಿ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಅಶ್ಲೀಲ ವೀಡಿಯೋ ಚಿತ್ರೀಕರಣ ಮಾಡಿ ಪೋರ್ನ್‌ ವೆಬ್‌ಸೈಟ್‌ನಲ್ಲಿ ಪ್ರಸಾರ ಮಾಡಿದ್ದಾರೆ. ಇದು ಐಟಿ ಆಕ್ಟ್‌ ಸೆಕ್ಷನ್‌ 67 ಮತ್ತು 67A ಅನ್ವಯ ಅಪರಾಧವಾಗಿದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ದೂರಿನೊಂದಿಗೆ ನೀಡಿದ್ದೇನೆ. ಇದನ್ನೂ ಓದಿ: ಅಮೇಥಿಯಿಂದ ರಾಹುಲ್‌ ಗಾಂಧಿ, ರಾಯ್‌ಬರೇಲಿ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧೆ?

    ಈ ಅಶ್ಲೀಲ ಚಿತ್ರೀಕರಣಕ್ಕಾಗಿ ಉಲ್ಲಾಳ ಉಪನಗರದ ಮುಖ್ಯರಸ್ತೆಯ 5ನೇ ಮೇನ್‌ನಲ್ಲಿ ಮನೆಯೊಂದನ್ನ ಭೋಗ್ಯಕ್ಕೆ ಪಡೆದುಕೊಂಡಿದ್ದಾರೆ. ಇಲ್ಲಿ ವೀಡಿಯೋ ಚಿತ್ರೀಕರಣ ಮಾಡಿದ್ದಾರೆ. ಈ ಕೃತ್ಯಕ್ಕೆ ರೇಣುಕಾ ಚೊಟ್ಟನಹಳ್ಳಿ, ರಮೇಶ್‌ ಪಾಂಡವಪುರ ಸಹಕರಿಸಿದ್ದಾರೆ. ಈ ನಾಲ್ವರು ಹಣ ಮಾಡುವ ಉದ್ದೇಶದಿಂದ ಈ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ವಿಷಯ ತಿಳಿಸಿದ ನನ್ನ ಮೇಲೆ ಯಾವುದೇ ಹಲ್ಲೆ ಆಗದಂತೆ ಸೂಕ್ಷ ರಕ್ಷಣೆ ನೀಡಬೇಕು ಎಂದು ಅಮರನಾಥ್‌ ಮನವಿ ಮಾಡಿರುವುದಾಗಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

  • ಮಹಿಳಾ ಆಟಗಾರ್ತಿಯ ಸ್ನಾನದ ವಿಡಿಯೋ ಸೆರೆ ಹಿಡಿದ ಮತ್ತೋರ್ವ ಆಟಗಾರ್ತಿ

    ಮಹಿಳಾ ಆಟಗಾರ್ತಿಯ ಸ್ನಾನದ ವಿಡಿಯೋ ಸೆರೆ ಹಿಡಿದ ಮತ್ತೋರ್ವ ಆಟಗಾರ್ತಿ

    ಬೆಂಗಳೂರು: ನಗರದ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದಲ್ಲಿ  (Sports Authority of India) ವಿಲಕ್ಷಣ ಘಟನೆಯೊಂದು ನಡೆದಿದೆ. ಆಟಗಾರ್ತಿಯೊಬ್ಬರು ಸ್ನಾನ ಮಾಡುವಾಗ ಇನ್ನೋರ್ವ ಆಟಗಾರ್ತಿ ವಿಡಿಯೋವನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾಳೆ.

    ಟೇಕ್ವಾಂಡೋ (Tekwando) ಪ್ಲೇಯರ್ ಒಬ್ಬರು ಸ್ನಾನಕ್ಕೆ ತೆರಳಿದ್ದಾಗ ಇನ್ನೋರ್ವ ವಾಲಿಬಾಲ್ (Volleyball) ಆಟಗಾರ್ತಿ ಮೊಬೈಲ್‍ನಲ್ಲಿ ವಿಡಿಯೋ ಮಾಡಿದ್ದಾಳೆ. ಮೊಬೈಲ್ ನೋಡಿ ಗಾಬರಿಗೊಂಡ ಆಟಗಾರ್ತಿ ಪ್ರಶ್ನೆ ಮಾಡಿದ್ದಾಳೆ. ಬಳಿಕ ರೆಕಾರ್ಡ್ ಮಾಡಿದ್ದ ಮೊಬೈಲ್‍ನ್ನು ಒಡೆದು ಹಾಕಿದ್ದಾಳೆ. ಈ ಬಗ್ಗೆ ನೊಂದ ಯುವತಿ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ (Jnanabharathi Police Station) ದೂರು ದಾಖಲಿಸಿದ್ದಾಳೆ. ಇದನ್ನೂ ಓದಿ: ನಾನೇ ಮೋದಿ ನಾನೇ ದೇವ್ರು, ಮೋದಿ ಪಾದಿ ಯಾವ್ದೂ ಇಲ್ಲ – ಶಿವರಾಜ್ ಪಾಟೀಲ್ ಆಡಿಯೊ ವೈರಲ್

    ಮೊಬೈಲ್‍ನಲ್ಲಿ ಚಿತ್ರೀಕರಿಸಿದ ಆರೋಪಿಯ ವಿರುದ್ಧ ಸೆಕ್ಷನ್ 354, 201, 66ಸಿ ಐಟಿ ಕಾಯ್ದೆಯಡಿ ಕೇಸ್ ದಾಖಲಾಗಿದೆ. ಪೊಲೀಸರು ರೆಕಾರ್ಡ್ ಮಾಡಿದ ಮೊಬೈಲ್‍ನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮೋದಿ ಹಟಾವೋ, ದೇಶ್ ಬಚಾವೋ ಪೋಸ್ಟರ್ ಪ್ರಕರಣ- 8 ಮಂದಿ ಆರೋಪಿಗಳ ಬಂಧನ