Tag: Jnanabharathi

  • ಮಹಾ ಕುಂಭಮೇಳದ ಹೆಸರಲ್ಲಿ ವ್ಯಕ್ತಿಗೆ 64 ಸಾವಿರ ಪಂಗನಾಮ

    ಮಹಾ ಕುಂಭಮೇಳದ ಹೆಸರಲ್ಲಿ ವ್ಯಕ್ತಿಗೆ 64 ಸಾವಿರ ಪಂಗನಾಮ

    ಬೆಂಗಳೂರು: ಮಹಾಕುಂಭಮೇಳದ ಹೆಸರಿನಲ್ಲಿ ವ್ಯಕ್ತಿಯೋರ್ವ ವಂಚನೆಗೊಳಗಾಗಿ ಬರೋಬ್ಬರಿ 64 ಸಾವಿರ ರೂ. ಕಳೆದುಕೊಂಡಿರುವ ಘಟನೆ ಬೆಂಗಳೂರಿನ ಜ್ಞಾನಭಾರತಿಯಲ್ಲಿ ನಡೆದಿದೆ.

    ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡುವುದು ಕೋಟ್ಯಂತರ ಜನರ ಹೆಬ್ಬಕೆಯಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡು ಕೆಲವರು ಜನರಿಗೆ ವಂಚಿಸಲು ಶುರುಮಾಡಿದ್ದಾರೆ.ಇದನ್ನೂ ಓದಿ: ಬೆಂಗಳೂರು| ಹೊಸ ಇಂದಿರಾ ಕ್ಯಾಂಟೀನ್‍ಗಳಿಗೆ ಆರಂಭದಲ್ಲೇ ವಿಘ್ನ – 52 ಹೊಸ ಕ್ಯಾಂಟೀನ್‍ಗಳು ಓಪನ್ ಆಗೋದೇ ಡೌಟ್?

    ಹೌದು, ಸೈಬರ್ ವಂಚಕರು ಟ್ರೆಂಡ್‌ಗೆ ತಕ್ಕಂತೆ ವಂಚನೆ ಮಾಡಲು ಶುರುಮಾಡಿದ್ದಾರೆ. ಜ್ಞಾನಭಾರತಿಯ ಓರ್ವ ನಿವಾಸಿ ಪ್ರಯಾಗ್‌ರಾಜ್‌ಗೆ ತೆರಳುವ ಪ್ಲ್ಯಾನ್‌ ಮಾಡಿದ್ದರು. ಹಾಗೆಯೇ ಗೂಗಲ್‌ನಲ್ಲಿ ಸರ್ಚ್ ಮಾಡಿ ಕುಂಭಮೇಳಕ್ಕೆ ಹೋಗಲು ಎಷ್ಟು ವೆಚ್ಚ ತಗಲಬಹುದು ಎಂದು ನೋಡಿದ್ದಾರೆ. ಅದಾದ ಕೆಲವೇ ನಿಮಿಷಗಳಲ್ಲಿ ಅಪರಿಚಿತ ವ್ಯಕ್ತಿಯಿಂದ ಕರೆ ಬಂದಿದೆ. ನಾನು ರಾಕೇಶ್ ಟೂರ್ಸ್‌ & ಟ್ರಾವೆಲ್‌ನಿಂದ ಮಾತಾಡ್ತಿದ್ದೀನಿ. ನಮ್ ಕಂಪನಿಯಿಂದ ಕಡಿಮೆ ಬೆಲೆಯಲ್ಲಿ ಪ್ರಯಾಗ್‌ರಾಜ್‌ಗೆ ಹೋಗುವ ಪ್ಯಾಕೆಜ್ ಇದೆ ಎಂದು ಪರಿಚಯ ಮಾಡಿಕೊಂಡಿದ್ದ. ಕರೆ ಮಾಡಿ ವ್ಯಕ್ತಿಯ ಮಾತನ್ನು ನಂಬಿ, ಅವರು ಹೇಳಿದ ಅಕೌಂಟ್‌ಗೆ ಹಂತ ಹಂತವಾಗಿ 64 ಸಾವಿರ ರೂ. ಹಾಕಿದ್ದಾರೆ.

    ಹಣ ಹಾಕಿದ ಕೆಲವೇ ನಿಮಿಷಗಳ ನಂತರ ಆ ವ್ಯಕ್ತಿಗೆ ಕರೆ ಮಾಡಿದಾಗ, ನಂಬರ್ ಸ್ವಿಚ್ ಆಫ್ ಬಂದಿದೆ. ಬಳಿಕ ಮೋಸ ಹೋಗಿರುವ ಬಗ್ಗೆ ಅರಿವಾದಾಗ 1930ಗೆ ಕರೆ ಮಾಡಿ ದೂರು ನೀಡಿದ್ದಾರೆ. ಅಷ್ಟೇ ಅಲ್ಲದೇ ಹಣ ಹಾಕಿರುವ ದಾಖಲೆಯೊಂದಿಗೆ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

    ಈ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಿದಾಗ ಸೈಬರ್ ವಂಚಕರು, ಪ್ರಯಾಗ್‌ರಾಜ್‌ನಲ್ಲಿ ನಡೆಯುವ ಕುಂಭಮೇಳಕ್ಕೆ ಟಿಕೆಟ್ ಕೊಡಿಸುವುದಾಗಿ ಹೇಳಿ ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ. ಜೊತೆಗೆ ನಗರದ ಹಲವು ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಇದೇ ರೀತಿಯ ವಂಚನೆ ಪ್ರಕರಣಗಳು ದಾಖಲಾಗುತ್ತಿವೆ.ಇದನ್ನೂ ಓದಿ: ಮಹಾ ಕುಂಭಮೇಳ‌ – ರುದ್ರಾಕ್ಷಿ ಮಾಲೆ ಧರಿಸಿ ತ್ರಿವೇಣಿ ಸಂಗಮದಲ್ಲಿ ಮೋದಿ ಪುಣ್ಯಸ್ನಾನ

  • ಬೆಂಗಳೂರು ವಿವಿಯ ಜ್ಞಾನಭಾರತಿ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು

    ಬೆಂಗಳೂರು ವಿವಿಯ ಜ್ಞಾನಭಾರತಿ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು

    ಬೆಂಗಳೂರು: ನಗರದ ಜ್ಞಾನಭಾರತಿ (Jnanabharathi) ಮಹಿಳಾ ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

    ವಿದ್ಯಾರ್ಥಿನಿಯನ್ನು ಹೆಚ್‌ಡಿ ಕೋಟೆಯ ಹೆಬ್ಬಲಗುಪ್ಪೆ ಹಳ್ಳಿಯ ಪಾವನ ಹೆಚ್‌ಎನ್ (23) ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಜನರು ಅವರನ್ನು ಘೋಷಣೆ ಕೂಗಲು ಕಳುಹಿಸಿದ್ದರೆ ಕೂಗಲು ಬಿಡಿ – ವಿಪಕ್ಷಗಳ ವಿರುದ್ಧ ಸ್ಪೀಕರ್ ಗರಂ

    ಮೃತ ವಿದ್ಯಾರ್ಥಿನಿ ಕನ್ನಡ ಅಧ್ಯಯನ ಕೇಂದ್ರದಲ್ಲಿ ದ್ವಿತೀಯ ವರ್ಷದ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದಳು. ಸೋಮವಾರ ಮದ್ಯಾಹ್ನ ಹಾಸ್ಟೆಲ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನೆಗೆ ಕಾರಣ ತಿಳಿದುಬಂದಿಲ್ಲ.

    ಸದ್ಯ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಇದನ್ನೂ ಓದಿ: ರೈಲು ನಿಲ್ಲೋದಕ್ಕೂ ಮುನ್ನ ಇಳಿಯಲು ಹೋಗಿ ಅವಘಡ – ಹಳಿಗೆ ಸಿಲುಕಿ 2 ಕಾಲು ಕಟ್, ಯುವಕ ಸಾವು

  • ಪತ್ನಿಯ ಶೀಲ ಶಂಕಿಸಿ ಚಾಕುವಿನಿಂದ ಮಾರಣಾಂತಿಕ ಹಲ್ಲೆಗೈದ ಪಾಪಿ ಪತಿ

    ಪತ್ನಿಯ ಶೀಲ ಶಂಕಿಸಿ ಚಾಕುವಿನಿಂದ ಮಾರಣಾಂತಿಕ ಹಲ್ಲೆಗೈದ ಪಾಪಿ ಪತಿ

    ಬೆಂಗಳೂರು: ಹೊಸ ವರ್ಷದಂದು ಹುಟ್ಟುಹಬ್ಬಕ್ಕೆ ತವರು ಮನೆಗೆ ಹೋಗುತ್ತಿದ್ದ ಪತ್ನಿಯನ್ನು ತಡೆದು ಪತಿಯೊಬ್ಬ ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಅಮಾನವೀಯ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಬೆಂಗಳೂರಿನ ಜ್ಞಾನ ಭಾರತಿಯ ಮಾರುತಿ ನಗರದ ನಿವಾಸಿ ಅಲ್ತಾಪ್ ಪತ್ನಿಯ ಮೇಲೆ ಹಲ್ಲೆ ಮಾಡಿದ ಪತಿ. ಖಾಜಿ ಹಲ್ಲೆಗೆ ಒಳಗಾದ ಪತ್ನಿ. ಹಲ್ಲೆಯ ಬಳಿಕ ಆರೋಪಿ ಪರಾರಿಯಾಗಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

    ಪತ್ನಿ ಖಾಜಿ ಅಪರಿಚಿತ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆ ಅಲ್ತಾಫ್‍ಗೆ ಕಾಡುತ್ತಿತ್ತು. ಇದರಿಂದಾಗಿ ಪತ್ನಿಯ ಜೊತೆಗೆ ಆಗಾಗ ಜಗಳ ಮಾಡುತ್ತಿದ್ದ. ಕಳೆದ ಕೆಲ ದಿನಗಳಿಂದ ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಗಲಾಟೆ ನಡೆದಿತ್ತು.

    ಹೊಸ ವರ್ಷದಂದು ಖಾಜಿಯಾಳ ಹುಟ್ಟುಹಬ್ಬ ಇತ್ತು. ಹೀಗಾಗಿ ಹುಟ್ಟುಹಬ್ಬ ಅಂತ ಖಾಜಿ ತವರು ಮನೆಗೆ ಹೋಗುತ್ತಿದ್ದಳು. ಈ ವೇಳೆ ಬೈಕ್‍ನಲ್ಲಿ ಬಂದ ಅಲ್ತಾಪ್ ಪತ್ನಿ ಖಾಜಿಯಾಳಿಗೆ ಡಿಕ್ಕಿ ಹೊಡೆದು ಕಳೆಗೆ ಬೀಳಿಸಿದ್ದ. ಬಳಿಕ ನಡುರಸ್ತೆಯಲ್ಲೇ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದ. ಗಂಭೀರವಾಗಿ ಗಾಯಗೊಂಡ ಖಾಜಿಯಾಳನ್ನು ಸಂಬಂಧಿಕರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಈ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.