Tag: jn1

  • ರಾಜ್ಯದಲ್ಲಿ 35 ಜೆಎನ್.1 ಪಾಸಿಟಿವ್, ಬೆಂಗಳೂರಲ್ಲೇ ಹೆಚ್ಚು: ದಿನೇಶ್ ಗುಂಡೂರಾವ್

    ರಾಜ್ಯದಲ್ಲಿ 35 ಜೆಎನ್.1 ಪಾಸಿಟಿವ್, ಬೆಂಗಳೂರಲ್ಲೇ ಹೆಚ್ಚು: ದಿನೇಶ್ ಗುಂಡೂರಾವ್

    – ಹೊಸ ವರ್ಷಾಚರಣೆಗೆ ಯಾವುದೇ ಹೊಸ ರೂಲ್ಸ್ ಇಲ್ಲ

    ಬೆಂಗಳೂರು: ರಾಜ್ಯದಲ್ಲಿ 35 ಜೆಎನ್.1 (JN.1) ಪಾಸಿಟಿವ್ ಬಂದಿದೆ. ಬೆಂಗಳೂರಿನಲ್ಲಿ (Bengaluru) ಹೆಚ್ಚು ಸಂಖ್ಯೆ ಇದ್ದ ಹಾಗೆ ಇದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ತಿಳಿಸಿದ್ದಾರೆ.

    ಕೊರೊನಾ ಹೊಸ ರೂಪಾಂತರಿಯಾದ ಜೆಎನ್.1 ವೈರಸ್ ದಿನೇ ದಿನೇ ಹೆಚ್ಚುತ್ತಿದೆ. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ನಾಳೆ ಜಿಲ್ಲಾವಾರು ಮಾಹಿತಿ ನೀಡಲಾಗುತ್ತದೆ. ನಾಳೆ ಸಬ್ ಕಮಿಟಿ ಸಭೆ ಇದೆ. ಅದರಲ್ಲಿ ಈ ಕುರಿತು ಚರ್ಚೆ ಮಾಡಲಾಗುತ್ತದೆ. ತಜ್ಞರ ಜೊತೆ ಉಪ ಸಮಿತಿ ಸಭೆ ಮಾಡಲಾಗುತ್ತದೆ. ಜೆಎನ್.1 ಬಂದ ಬಗ್ಗೆ ಮಾಹಿತಿ ಇತ್ತು. ಅಧಿಕೃತವಾಗಿ ತಿಳಿಯಲು ಮಾತ್ರ ಸ್ಯಾಂಪಲ್ ಕಳುಹಿಸಲಾಗಿತ್ತು. ಸದ್ಯ ಯಾವುದೇ ಮಾರ್ಗಸೂಚಿ ಬರಲ್ಲ. ಇಡೀ ದೇಶದಲ್ಲಿ ಮಾರ್ಗಸೂಚಿ ಜಾರಿ ಇಲ್ಲ. ಜನ ಗುಂಪಾಗಿ ಸೇರಬಾರದು, ಕಾರ್ಯಕ್ರಮ ಮಾಡಬಾರದು ಎಂದು ನಿಯಮ ಇರಲ್ಲ. ಪಾಸಿಟಿವ್ ಬಂದವರು ಸದ್ಯ ಮನೆಯಲ್ಲೇ ಕ್ವಾರಂಟೈನ್ ಆಗಿದ್ದಾರೆ ಎಂದರು. ಇದನ್ನೂ ಓದಿ: ದೇವರ ಪ್ರಸಾದ ತಿಂದು ನೂರಾರು ಜನ ಅಸ್ವಸ್ಥ – ಓರ್ವ ಮಹಿಳೆ ಸಾವು

    ಜೆಎನ್.1 ಬಂದಿದೆ ಅನ್ನೋ ಮಾಹಿತಿ ಇತ್ತು. ಸಿಎಂ ಹೇಳಿದ್ರು, ನಾನು ಹೇಳಿದ್ದೆ, WHO ಕೂಡ ಹೇಳಿತ್ತು. ಹೊಸದಾಗಿ ಗಾಬರಿ ಆಗುವಂತಹದ್ದು ಏನಿಲ್ಲ. ಎಚ್ಚರಿಕೆಯಿಂದ ಇರಿ ಎಂದು WHO ಕೂಡ ಹೇಳಿದೆ. ಸಾವಿನ ಬಗ್ಗೆ ಈಗಾಗಲೇ ಮಾಹಿತಿ ನೀಡಿದ್ದೇವೆ. ಅವರಿಗೆ ಬೇರೆ ಬೇರೆ ರೋಗದ ಜೊತೆ ಸೋಂಕು ಕೂಡ ಇತ್ತು. ಜೆಎನ್.1 ಸೋಂಕಿನ ಬಗ್ಗೆ ಆಶ್ಚರ್ಯ ಪಡುವ ಅವಶ್ಯಕತೆ ಇಲ್ಲ. ಜನರು ಸೋಂಕಿನ ಬಗ್ಗೆ ಭಯ ಪಡುವ ಅಗತ್ಯವಿಲ್ಲ. ಸತ್ತವರಲ್ಲಿ ಜೆಎನ್.1 ಪತ್ತೆಯಾಗಿದೆ ಎಂದು ಹೇಳಿದರು. ಇದನ್ನೂ ಓದಿ: ರಾಜ್ಯದ 8 ಮಂದಿಯಲ್ಲಿ JN.1 ವೈರಸ್‌ ಪತ್ತೆ

    ರಾಜ್ಯದಲ್ಲಿ 35 ಜೆಎನ್.1 ವೈರಸ್ ಇರುವ ಮಾಹಿತಿ ಇದೆ. ಬಹುತೇಕ ಕೇಸ್‌ಗಳು ಬೆಂಗಳೂರಲ್ಲೇ ಇರುವ ಸಾಧ್ಯತೆಯಿದೆ. ನಾಳೆ ಸಂಪೂರ್ಣ ಮಾಹಿತಿ ತಿಳಿಸುತ್ತೇವೆ. ನಾಳೆ ಮಧ್ಯಾಹ್ನ 12 ಗಂಟೆಗೆ ಸಭೆ ಇದೆ. ಸಭೆಯಲ್ಲಿ ಎಲ್ಲಾ ಮಾಹಿತಿ ನೀಡುತ್ತೇವೆ. ಜಿನೋಮಿಕ್ ಸೀಕ್ವೆನ್ಸ್‌ಗೆ ಸ್ಯಾಂಪಲ್ ಕಳುಹಿಸಲಾಗಿತ್ತು. ಜೆಎನ್.1 ಕೇಸ್ ಇದೆ ಅನ್ನೋದು ಮೊದಲೇ ಗೊತ್ತಿತ್ತು. ಹೊಸ ವರ್ಷಕ್ಕೆ (New Year) ಎಲ್ಲೂ ಹೊಸ ಮಾರ್ಗಸೂಚಿ ಇಲ್ಲ. ಯಾವುದೇ ರೀತಿ ಗೈಡ್‌ಲೈನ್ಸ್ ಸದ್ಯ ಬಿಟ್ಟಿಲ್ಲ. ನಾಳೆ ಮಧ್ಯಾಹ್ನದ ನಂತರ ಆ ಬಗ್ಗೆ ತಿಳಿಸುತ್ತೇವೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಯಡಿಯೂರಪ್ಪ ಶಕುನಿ ಇದ್ದ ಹಾಗೆ: ಯತ್ನಾಳ್

    ಸಭೆಯ ಬಳಿಕ ಮುಂದಿನ ರೂಲ್ಸ್ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ. ಸದ್ಯ ಆತಂಕಗೊಳ್ಳುವ ಅಗತ್ಯವಿಲ್ಲ. ಜೆಎನ್.1ರಿಂದಲೇ ಕೊರೊನಾ ಸಂಖ್ಯೆ ಏರಿಕೆಯಾಗುತ್ತಿದೆ. ಹೊಸ ವರ್ಷದ ಆಚರಣೆಗೆ ನಾಳೆಯ ಸಭೆಯ ಬಳಿಕ ತಿಳಿಸುತ್ತೇವೆ. ಸದ್ಯಕ್ಕೆ ಯಾವುದೇ ರೂಲ್ಸ್ ಇಲ್ಲ ಎಂದರು. ಇದನ್ನೂ ಓದಿ: ಡ್ರಗ್ಸ್ ತೆಗೆದುಕೊಳ್ತಿದ್ದಿದ್ದಕ್ಕೆ ರಿಲೇಷನ್‍ಶಿಪ್ ಬೇಡ ಎಂದಿದ್ದೇನೆ: ಕಾರಿಯಪ್ಪ

  • ಉತ್ತರ ಕನ್ನಡ ಜಿಲ್ಲೆಗೂ ಕಾಲಿಟ್ಟ ಕೊರೊನಾ ವೈರಸ್- ಗೋವಾದಿಂದ ಬಂದಿದ್ದ ಯುವಕನಲ್ಲಿ ಸೋಂಕು ಪತ್ತೆ

    ಉತ್ತರ ಕನ್ನಡ ಜಿಲ್ಲೆಗೂ ಕಾಲಿಟ್ಟ ಕೊರೊನಾ ವೈರಸ್- ಗೋವಾದಿಂದ ಬಂದಿದ್ದ ಯುವಕನಲ್ಲಿ ಸೋಂಕು ಪತ್ತೆ

    ಕಾರವಾರ: ಕೊರೊನಾ (Corona) ರೂಪಾಂತರಿಯಾದ ಜೆಎನ್1 (JN1) ವೈರಸ್ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದೀಗ ಕರ್ನಾಟಕದ ಉತ್ತರ ಕನ್ನಡ (Uttara Kannada) ಜಿಲ್ಲೆಗೂ ಕಾಲಿಟ್ಟಿದೆ. ಕಾರವಾರ (Karwar) ತಾಲೂಕಿನ ಸದಾಶಿವಗಡ ಗ್ರಾಮದ ಯುವಕನಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.

    ಗೋವಾದಿಂದ ಕಾರವಾರಕ್ಕೆ ಬಂದಿದ್ದ ಯುವಕನೋರ್ವನಲ್ಲಿ ಕಳೆದ 15 ದಿನಗಳ ಹಿಂದೆ ಸೋಂಕು ಪತ್ತೆಯಾಗಿದ್ದು, ಈಗ ಆರ್‌ಟಿಪಿಸಿಆರ್ (RTPCR) ರಿಪೋರ್ಟ್ ನೆಗೆಟಿವ್ ಬಂದಿದೆ. ಒಟ್ಟು 15ರಿಂದ 20 ಜನರಲ್ಲಿ ಕೆಮ್ಮು, ನೆಗಡಿ ಹಾಗೂ ಜ್ವರ ಕಾಣಿಸಿಕೊಂಡಿತ್ತು. ಒಂದೇ ಕುಟುಂಬದ ಸದಸ್ಯರಲ್ಲಿ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿದ್ದು, ಲಸಿಕೆ ಪಡೆದ ಹಿನ್ನೆಲೆ ಕೇವಲ 3ರಿಂದ 4 ದಿನಗಳಲ್ಲಿ ಪೂರ್ತಿ ಗುಣಮುಖರಾಗಿದ್ದಾರೆ. ಇದನ್ನೂ ಓದಿ: ತಾಳಿ ಒಬ್ಬರ ಹತ್ತಿರ ಕಟ್ಟಿಸಿಕೊಂಡು ಸಂಸಾರ ಇನ್ನೊಬ್ಬರ ಜೊತೆ ಮಾಡ್ಬಾರ್ದು: ಈಶ್ವರಪ್ಪ ಕಿಡಿ

    ಚಳಿಗಾಲದ ಹಿನ್ನೆಲೆ ಹೆಚ್ಚು ಜನರಲ್ಲಿ ನೆಗಡಿ, ಕೆಮ್ಮು, ಜ್ವರ ಕಾಣಿಸಿಕೊಳ್ಳುತ್ತಿದೆ. ಕೊರೊನಾ ಲಕ್ಷಣ ಹೆಚ್ಚಾಗಿ ಕಂಡು ಬಂದಲ್ಲಿ ಮಾತ್ರ ಕೊರೊನಾ ಪರೀಕ್ಷೆ ಮಾಡಲಾಗುತ್ತಿದೆ. ಹೊಸ ವರ್ಷಕ್ಕೆ ಹೊರ ರಾಜ್ಯಗಳಿಂದ ಹೆಚ್ಚಿನ ಜನ ಕಾರವಾರಕ್ಕೆ ಬರುವ ಹಿನ್ನೆಲೆ ಮುಂಜಾಗೃತ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಚಿಂತನೆ ನಡೆಸಿದೆ. ಇದನ್ನೂ ಓದಿ: ಬರ ಪರಿಹಾರ ನೀಡಿ- ಮೋದಿಗೆ ಸಿಎಂ ಸಿದ್ದರಾಮಯ್ಯ ಮನವಿ

  • ಕೋವಿಡ್ ಉಲ್ಬಣವಾಗುತ್ತಿದೆ ಎಂದು ಆತಂಕಗೊಳ್ಳುವುದು ಬೇಡ: ಡಿ.ಕೆ ಶಿವಕುಮಾರ್

    ಕೋವಿಡ್ ಉಲ್ಬಣವಾಗುತ್ತಿದೆ ಎಂದು ಆತಂಕಗೊಳ್ಳುವುದು ಬೇಡ: ಡಿ.ಕೆ ಶಿವಕುಮಾರ್

    ನವದೆಹಲಿ: ಕೋವಿಡ್ (Covid) ಉಲ್ಬಣವಾಗುತ್ತಿರುವ ಬಗ್ಗೆ ಯಾರೂ ಗಾಬರಿಯಾಗುವುದು ಬೇಡ. ಆರೋಗ್ಯ ಇಲಾಖೆ ವತಿಯಿಂದ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಜನರು ಆತಂಕಗೊಳ್ಳಬಾರದು ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.

    ನವದೆಹಲಿಯಲ್ಲಿ (New Delhi) ಮಾತನಾಡಿದ ಅವರು, ಈಗಾಗಲೇ ಜನರು ಮಾಸ್ಕ್ ಹಾಕಲು ಆರಂಭಿಸಿದ್ದಾರೆ. ಕೊರೊನಾ (Corona) ಹೆಚ್ಚಾಗುತ್ತಿದೆ ಎಂದುಕೊಳ್ಳಬೇಡಿ ಎಂದು ಮನವಿ ಮಾಡಿದರು. ಇನ್ನು ದೆಹಲಿ ಭೇಟಿಯ ಬಗ್ಗೆ ಮಾತನಾಡಿದ ಅವರು, ಪಕ್ಷದ ಕೆಲ ವರಿಷ್ಠರನ್ನು ಭೇಟಿ ಮಾಡಲು ಬಂದಿದ್ದೇವೆ. ಕೆಲವು ಕೇಂದ್ರ ಸಚಿವರ ಭೇಟಿಗೂ ಸಮಯ ಕೇಳಿದ್ದೇವೆ. ಮುಖ್ಯಮಂತ್ರಿಗಳಿಗೆ ಪಿಎಂ ಅವರು ಸಮಯ ನೀಡಿದ್ದಾರೆ. ನಾನು ಸಹ ಪ್ರಧಾನಿ ಭೇಟಿಗೆ ಸಮಯ ಕೇಳಿದ್ದೇನೆ. ನಿರ್ಮಲಾ ಸೀತಾರಾಮನ್ ಅವರನ್ನು ನಾನು ಭೇಟಿಯಾಗಲು ಕೇಳಿದ್ದೇನೆ. ಆದರೆ ಸಮಯ ಇನ್ನು ನಿಗದಿ ಆಗಿಲ್ಲ ಎಂದರು. ಇದನ್ನೂ ಓದಿ: ಲೋಕಸಭೆಯಿಂದ ಮತ್ತೆ 31 ಸಂಸದರು ಅಮಾನತು

    ನಿಗಮಮಂಡಳಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಪಕ್ಷದ ಸಭೆ ಇದೆ. ನಿಗಮ ಮಂಡಳಿ ವಿಚಾರ ಫೈನಲ್ ಮಾಡುತ್ತೇವೆ. ಖಂಡಿತವಾಗಿಯೂ ಅದನ್ನ ಮಾಡಲೇಬೇಕು. ಎಷ್ಟು ದಿನ ಅಂತ ನಾವು ಖಾಲಿ ಇಟ್ಟುಕೊಳ್ಳಲು ಸಾಧ್ಯ? ಎಷ್ಟು ಅಂತ ಮಾಡುತ್ತೇವೆ ಎಂದು ಹೇಳೋಕೆ ಆಗಲ್ಲ. ಆದರೆ ಶಾಸಕರದ್ದು ಫಸ್ಟ್ ಲಿಸ್ಟ್‌ನಲ್ಲಿ ಮುಗಿಸುತ್ತೇವೆ. 3 ಹಂತದಲ್ಲಿ ನಿಗಮ ಮಂಡಳಿ ಫೈನಲ್ ಮಾಡುತ್ತೇವೆ ಎಂದರು. CWC ಮೀಟಿಂಗ್ 28ಕ್ಕೆ ನಾಗಪುರದಲ್ಲಿ ನಡೆಯಲಿದೆ. ಅದಕ್ಕಿಂತ ಮುಂಚೆ 21ಕ್ಕೆ ಇಲ್ಲೊಂದು ಸಭೆ ಮಾಡಲಾಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ವಾರಣಾಸಿ ಜಿಲ್ಲಾ ನ್ಯಾಯಾಲಯಕ್ಕೆ ಜ್ಞಾನವಾಪಿ ಮಸೀದಿಯ ಸಮೀಕ್ಷಾ ವರದಿ ಸಲ್ಲಿಕೆ

  • ಇಂದಿನಿಂದ 60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯ: ದಿನೇಶ್ ಗುಂಡೂರಾವ್

    ಇಂದಿನಿಂದ 60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯ: ದಿನೇಶ್ ಗುಂಡೂರಾವ್

    ಮಡಿಕೇರಿ: ರಾಜ್ಯದಲ್ಲಿ ಕೊರೊನಾ (Corona) ರೂಪಾಂತರಿ ಬಗ್ಗೆ ಯಾರೂ ಕೂಡ ಆತಂಕಪಡಬೇಕಿಲ್ಲ. ಆದರೆ 60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ (Mask) ಕಡ್ಡಾಯ ಮಾಡಲಾಗುತ್ತದೆ. ಇಂದಿನಿಂದಲೇ ರಾಜ್ಯ ಸರ್ಕಾರ ಆದೇಶ ಹೊರಡಿಸಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ತಿಳಿಸಿದ್ದಾರೆ.

    ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಮಾತಾನಾಡಿದ ಅವರು, ಮೊನ್ನೆ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಿದ್ದೇವೆ. ರವಿ ಅವರ ನೇತೃತ್ವದಲ್ಲಿ ನಿನ್ನೆಯೂ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಯಾವ ಕ್ರಮ ತೆಗೆದುಕೊಳ್ಳಬೇಕು ಚರ್ಚೆ ನಡೆಸಿದ್ದಾರೆ. ಅಲ್ಲದೇ ಕೇಂದ್ರ ಸರ್ಕಾರದ ಜೊತೆಗೂ ಚರ್ಚೆ ಮಾಡಿದ್ದಾರೆ. ಕೆಲವು ಸಲಹೆ ಮಾರ್ಗಸೂಚಿ ಪಡೆದಿದ್ದೇವೆ. 60 ವರ್ಷ ಮೇಲ್ಪಟ್ಟವರು ಮತ್ತು ಹೃದಯ, ಕಿಡ್ನಿ ಸಂಬಂಧಿತ ಇತರ ಕಾಯಿಲೆಗಳಿಂದ ಬಳಲುತ್ತಿರುವವರು ಹಾಗೂ ಜ್ವರ, ಕಫ, ಶೀತ ಇರುವಂತಹವರು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಬೇಕು ಎಂದು ಮನವಿ ಮಾಡಿದ್ದೇವೆ ಎಂದರು.

    ಈಗಾಗಲೇ ಆಸ್ಪತ್ರೆ ಹಾಗೂ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡು ಸಜ್ಜು ಆಗುವಂತೆಯೂ ಸೂಚನೆ ನೀಡಲಾಗಿದೆ. ಹಾಗೆಯೇ ಗಡಿ ಜಿಲ್ಲೆಗಳಾದ ಕೊಡಗು, ಮಂಗಳೂರು, ಚಾಮರಾಜನಗರದ ಭಾಗದಲ್ಲಿ ಹೆಚ್ಚಿನ ನಿಗಾ ಇಡುವಂತೆ ಸೂಚನೆ ಕೋಡಲಾಗಿದೆ. ಕೇರಳದಿಂದ ಬರುವವರ ಮೇಲೆ ಹೆಚ್ಚು ಟೆಸ್ಟ್ ಮಾಡುವಂತೆ ಆದೇಶ ಮಾಡಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಗುಡ್‌ನ್ಯೂಸ್‌ – ಕುನೋ ಪಾರ್ಕ್‌ನಲ್ಲಿ ಇನ್ಮುಂದೆ ಪ್ರವಾಸಿಗರಿಗೆ ಚೀತಾ ವೀಕ್ಷಣೆ ಭಾಗ್ಯ

    ಉಸಿರಾಟದ ತೊಂದರೆ, ಇತರ ಸಮಸ್ಯೆಯಿಂದ ಬಳಲುತ್ತಿದ್ದವರಿಗೆ ಕಡ್ಡಾಯವಾಗಿ ಟೆಸ್ಟಿಂಗ್ ಮಾಡಲಾಗುತ್ತದೆ. ಆಗ ತಿಳಿಯುತ್ತದೆ ಕೋವಿಡ್ ದಿನಕ್ಕೆ ಹೆಚ್ಚು ಇದೆಯೇ ಅಥವಾ ಕಡಿಮೆ ಇದೆಯೇ ಎಂದು. ಆಗ ಏನು ಮಾಡಬೇಕು ಎಂದು ತೀರ್ಮಾನ ಮಾಡುತ್ತೇವೆ. ಈಗ ಆ ಹಂತದಲ್ಲಿ ಇದೆ. ಗಡಿ ಭಾಗದಲ್ಲಿ ಟೆಸ್ಟಿಂಗ್ ಹೆಚ್ಚು ಮಾಡುತ್ತೇವೆ. ಯಾರ ಯಾರ ಮೇಲೆ ಸಂಶಯ ಇದೆ ಅವರೆಲ್ಲರಿಗೂ ಟೆಸ್ಟ್ ಮಾಡಿಸುತ್ತೇವೆ ಎಂದು ತಿಳಿಸಿದರು.

    ಇನ್ನೂ 2-3 ದಿನಗಳಲ್ಲಿ ಅದರ ತೀವ್ರತೆ ಗೋತ್ತಾಗಲಿದೆ. ಈಗ ಪ್ರಸ್ತುತ ಜನ ಸೇರುವ ಹಾಗೆ ಇಲ್ಲ. ಗುಂಪಿನಲ್ಲಿ ಓಡಾಟ ಮಾಡುವ ಹಾಗೆ ಇಲ್ಲ. ಸದ್ಯಕ್ಕೆ ರಾಜ್ಯದಲ್ಲಿ ಸಹಜ ಸ್ಥಿತಿಯಲ್ಲಿ ಇದೆ. ಹೆಚ್ಚು ಪಾಸಿಟಿವ್ ಬಂದರೆ ಮಾತ್ರ ನಿಷೇಧ. ಸದ್ಯಕ್ಕೆ ಅಂತಹ ಪರಿಸ್ಥಿತಿ ಇಲ್ಲ. ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಂಸತ್‌ನಲ್ಲಿ ಭದ್ರತಾ ಲೋಪ ಕೇಸ್‌ – ತನಿಖೆಗೆ ಕರ್ನಾಟಕ ಸೇರಿದಂತೆ 6 ರಾಜ್ಯಗಳಲ್ಲಿ ವಿಶೇಷ ಸೆಲ್‌

  • ಹೆಚ್ಚಾಗ್ತಿದೆ ಕೋವಿಡ್ ಉಪತಳಿ JN.1 ಭೀತಿ – ಕ್ರಿಸ್‌ಮಸ್, ಹೊಸವರ್ಷ ಸಂಭ್ರಮಕ್ಕೆ ಬೀಳುತ್ತಾ ಬ್ರೇಕ್?

    ಹೆಚ್ಚಾಗ್ತಿದೆ ಕೋವಿಡ್ ಉಪತಳಿ JN.1 ಭೀತಿ – ಕ್ರಿಸ್‌ಮಸ್, ಹೊಸವರ್ಷ ಸಂಭ್ರಮಕ್ಕೆ ಬೀಳುತ್ತಾ ಬ್ರೇಕ್?

    ಬೆಂಗಳೂರು: ಕೋವಿಡ್‌ ಉಪತಳಿ JN.1 (covid sub Variant JN1 ಭೀತಿ ಮತ್ತೆ ಹೆಚ್ಚಾಗುತ್ತಿದೆ. ಈ ನಡುವೆ ಹೊಸ ವರ್ಷ ಮತ್ತು ಕ್ರಿಸ್‌ಮಸ್ ಸಂಭ್ರಮಕ್ಕೆ ಸಿದ್ಧತೆ ಜೋರಾಗಿದ್ದು, ಈ ಬಾರಿಗೂ ಅದ್ಧೂರಿ ಸಂಭ್ರಮಕ್ಕೆ ಬ್ರೇಕ್ ಬೀಳುತ್ತಾ ಅನ್ನೋ ತಲೆನೋವು ಶುರುವಾಗಿದೆ.

    ಹೊಸ ವರ್ಷ ಮತ್ತು ಕ್ರಿಸ್‌ಮಸ್ ಹಬ್ಬ ನೋಡಿಕೊಂಡು ಕೊರೊನಾ ಜಾಗೃತಿಗಾಗಿ ಹೊಸ ರೂಲ್ಸ್ ಜಾರಿಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ. ಮಂಗಳವಾರ (ಡಿ.19) ತಾಂತ್ರಿಕ ಸಲಹಾ ಸಮಿತಿ ಸಭೆ ಕೂಡ ಇದ್ದು. ಹೊಸ ಮಾರ್ಗಸೂಚಿಯ ವರದಿ ಆರೋಗ್ಯ ಇಲಾಖೆಗೆ ಸಲ್ಲಿಕೆಯಾಗಲಿದೆ. ಇದನ್ನೂ  ಓದಿ: ಯೋಧರ ಮೇಲೆ ಹಲ್ಲೆಗೆ ಯತ್ನ – ಬಾಂಗ್ಲಾ ಮೂಲದ ಇಬ್ಬರು ಸ್ಮಗ್ಲರ್‌ಗಳು ಗುಂಡೇಟಿಗೆ ಬಲಿ

    ಕೇರಳದಲ್ಲಿ ಕೊವಿಡ್-19 ಉಪತಳಿ ಜೆಎನ್.1 ಕಾಣಿಸಿಕೊಂಡಿದ್ದು ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಹೀಗಾಗಿ ರಾಜ್ಯ ಆರೋಗ್ಯ ಇಲಾಖೆ ಹೈಅಲರ್ಟ್ ಆಗಿದ್ದು ಮುಂಜಾಗ್ರತಾ ಕ್ರಮ ಕೈಗೊಳ್ಳಲು ತಯಾರಿ ಶುರು ಮಾಡಿದೆ. ಮಂಗಳವಾರ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಯಲಿದ್ದು, ಹೊಸ ಮಾರ್ಗಸೂಚಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.

    ದೇಶದಲ್ಲಿ ಆಕ್ಟೀವ್ ಕೇಸ್‌ಗಳ ಸಂಖ್ಯೆ 1,300 ಗಡಿ ದಾಟಿದೆ. ಒಂದು ಕಡೆ ಕೇರಳದಲ್ಲೂ ಪ್ರತಿನಿತ್ಯ 300ಕ್ಕೂ ಹೆಚ್ಚು ಕೇಸ್‌ಗಳು ದಾಖಲಾಗುತ್ತಿದೆ. ಹೀಗಾಗಿ ಪ್ರಾಥಮಿಕ ಹಂತದಲ್ಲಿಯೇ ಕೊರೊನಾ ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಇದನ್ನೂ  ಓದಿ: ಕೋಲಾರದಲ್ಲಿ ವಸತಿ ಶಾಲೆ ಕರ್ಮಕಾಂಡ – ನಾಲ್ವರ ವಿರುದ್ಧ FIR, ಪ್ರಾಂಶುಪಾಲೆ ಸೇರಿ ಇಬ್ಬರು ಅರೆಸ್ಟ್

    ಟಫ್‌ ರೂಲ್ಸ್‌ ಏನೇನು ಮಾಡಬಹುದು?
    * ಕ್ರಿಸ್‌ಮಸ್, ನ್ಯೂ ಇಯರ್ ವೇಳೆ ಗುಂಪುಗೂಡದಂತೆ ಎಚ್ಚರ
    * ಸಾಮಾಜಿಕ ಅಂತರ ಪಾಲನೆ, ಸ್ಯಾನಿಟೈಸ್ ಬಳಕೆ
    * ಆಸ್ಪತ್ರೆ ಒಳಗೆ ಆರೋಗ್ಯ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು
    * ಮಾಸ್ಕ್ ಧರಿಸಿಯೇ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡಬೇಕು
    * ಆಸ್ಪತ್ರೆಗಳಲ್ಲಿ, ಜನಸಂದಣಿ ಪ್ರದೇಶದಲ್ಲಿ ಸಾಮಾಜಿಕ ಅಂತರ ಕಾಪಾಡಬೇಕು
    * ಜ್ವರ, ಶೀತ, ಬೇರೆ ರೋಗದಿಂದ ಬಳಲುತ್ತಿರುವವರು ವೈದ್ಯರನ್ನ ಭೇಟಿಯಾಗಬೇಕು
    * ಬೆಂಗಳೂರು ಸೇರಿದಂತೆ ಜಿಲ್ಲೆಗಳಲ್ಲಿ ಕೋವಿಡ್ ಟೆಸ್ಟ್ಗೆ ಟಾರ್ಗೆಟ್
    * ಆಸ್ಪತ್ರೆಗಳಲ್ಲಿ ರೋಗ ಲಕ್ಷಣಗಳು ಇರೋ ರೋಗಿಗಳಿದ್ರೆ ಕೋವಿಡ್ ಟೆಸ್ಟ್ ಕಡ್ಡಾಯ
    * ಸಾರ್ವಜನಿಕರಿಗೆ ಕಡ್ಡಾಯವಾಗಿ ಈಗಿನಿಂದಲೇ ಜಾಗೃತಿ ಮೂಡಿಸಬೇಕು
    * ಐಎಲ್‌ಐ, ಸ್ಯಾರಿ ಕೇಸ್‌ಗಳಿದ್ರೆ ಕೂಡಲೇ ಕೋವಿಡ್ ಟೆಸ್ಟ್ ಮಾಡಬೇಕು
    * ಕೇರಳದಿಂದ ಬರುವ ಪ್ರಯಾಣಿಕರ ಮೇಲೆ ನಿಗಾ ವಹಿಸಬೇಕು

  • ಕೇರಳದಲ್ಲಿ ಹೊಸ ತಳಿಗೆ ಇಬ್ಬರು ಸಾವು- ರಾಜ್ಯದಲ್ಲಿ ಆರೋಗ್ಯ ಸಚಿವರ ತುರ್ತುಸಭೆ

    ಕೇರಳದಲ್ಲಿ ಹೊಸ ತಳಿಗೆ ಇಬ್ಬರು ಸಾವು- ರಾಜ್ಯದಲ್ಲಿ ಆರೋಗ್ಯ ಸಚಿವರ ತುರ್ತುಸಭೆ

    ಬೆಂಗಳೂರು: ಭಾರತ ಸೇರಿ ಜಗತ್ತಿನೆಲ್ಲೆಡೆ ಮತ್ತೊಮ್ಮೆ ಕೊರೋನಾ ವಕ್ಕರಿಸುವಂತಿದೆ. ಮತ್ತೆ ಕೊರೋನಾ ಕೇಸ್‍ಗಳ ಸಂಖ್ಯೆ ಹೆಚ್ಚುತ್ತಿದೆ. ಅಮೆರಿಕ, ಬ್ರಿಟನ್, ಚೀನಾ, ಫ್ರಾನ್ಸ್ ದೇಶಗಳಲ್ಲಿ ಕಂಡುಬಂದಿದ್ದ ಕೊರೋನಾದ (Corona Virus) ಹೊಸ ಸಬ್ ವೇರಿಯಂಟ್ ಜೆಎನ್-1 (JN.1) ಭಾರತದಲ್ಲೂ ಇದೀಗ ಕಂಡುಬಂದಿದೆ.

    ನೆರೆಯ ಕೇರಳದಲ್ಲಿ (Kerala) ಮೊದಲ ಕೇಸ್ ಪತ್ತೆಯಾಗಿದೆ. ಜೆಎನ್1 ಒಮಿಕ್ರಾನ್‍ನ್ ಸಬ್ ವೇರಿಯಂಟ್ ಬಿಎ 2.86 ವಂಶಕ್ಕೆ ಸೇರಿದ್ದಾಗಿದೆ. ಇದನ್ನು ಪಿರೋಲಾ ಎಂದು ಕೂಡ ಕರೆಯಲಾಗುತ್ತೆ. ಇದು ಅಪಾಯಕಾರಿನಾ ಅಲ್ವಾ ಅನ್ನೋದು ಇನ್ನೂ ನಿರ್ಧಾರಿತವಾಗಿಲ್ಲ. ಆದರೆ ಶರವೇಗದಲ್ಲಿ ಹಬ್ಬುತ್ತಿದೆ. ಕೇರಳದ ಕಣ್ಣೂರಿನಲ್ಲಿ 80 ವರ್ಷದ ವೃದ್ಧರೊಬ್ಬರು ಕೋವಿಡ್‍ಗೆ ಬಲಿ ಆಗಿದ್ದಾರೆ.

    ಇದು ಕಳೆದ 2 ದಿನಗಳಲ್ಲಿ 2ನೇ ಸಾವಾಗಿರೋದು ಕಳವಳಕ್ಕೆ ಕಾರಣವಾಗಿದೆ. ಕಣ್ಣೂರಿನ ಪನೂರಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧಾರಣೆ ಕಡ್ಡಾಯ ಮಾಡಲಾಗಿದೆ. ಸಾರ್ವಜನಿಕ ಸಭೆ ಸಮಾರಂಭಗಳ ಮೇಲೆಯೂ ಹಲವು ನಿರ್ಬಂಧಗಳನ್ನು ಹೇರಲಾಗುತ್ತಿದೆ. ಈ ಬೆನ್ನಲ್ಲೇ ರಾಜ್ಯ ಸಕಾರವೂ ಅಲರ್ಟ್ ಆಗಿದೆ. ಆರೋಗ್ಯಮಂತ್ರಿ ದಿನೇಶ್ ಗುಂಡೂರಾವ್ ತುರ್ತು ಸಭೆ ನಡೆಸಿ, ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಸದ್ಯಕ್ಕೆ ಆತಂಕ ಬೇಡ ಎಂದಿದ್ದಾರೆ.  ಇದನ್ನೂ ಓದಿ: ಕೊರೊನಾ ಭೀತಿ ಮತ್ತೆ ಶುರು; ಕೇರಳದ ಮಹಿಳೆಯಲ್ಲಿ ಕೋವಿಡ್ ಉಪತಳಿ ಜೆಎನ್.1 ಪತ್ತೆ