ಬೆಂಗಳೂರು: ಕನ್ನಡ ಗೊತ್ತಿಲ್ಲ ಉರ್ದುನಲ್ಲಿ ಮಾತನಾಡಿ ಎಂದಿದ್ದರು. ಬಳಿಕ ಚಾಕುವಿನಿಂದ ಇರಿದು ಚಂದ್ರುವನ್ನು ಕೊಲೆ ಮಾಡಿದ್ದಾರೆ ಎಂದು ಇದೀಗ ಸ್ನೇಹಿತ ಸೈಮನ್ ರಾಜ್ ತಿಳಿಸಿದ್ದಾರೆ.
ಚಂದ್ರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನನ್ನ ಹುಟ್ಟಹಬ್ಬ ಇತ್ತು. ನಾನು ಮತ್ತು ಚಂದ್ರು ಚಿಕನ್ ರೋಲ್ ತಿನ್ನಲು ಹಳೆಗುಡ್ಡದಹಳ್ಳಿಗೆ ಹೋಗಿದ್ದೆವು. ಆದರೆ ಚಿಕನ್ ರೋಲ್ ಅಂಗಡಿ ಕ್ಲೋಸ್ ಆಗಿತ್ತು. ಬಳಿಕ ಅಲ್ಲಿದ್ದ ಬೇಕರಿಗೆ ಹೋಗುವ ವೇಳೆ ಬೈಕ್ ಟಚ್ ಆದ ವಿಚಾರವಾಗಿ ಸ್ಥಳೀಯ ಯುವಕರ ನಡುವೆ ಮಾತಿನ ಚಕಮಕಿ ನಡೆಯಿತು. ಆ ಬಳಿಕ ಮೂರು ಜನ ಬಂದು ಚಾಕು ತೆಗೆದಾಗ ನಾನು ಅವರನ್ನು ತಳ್ಳಿ ಓಡಿ ಹೋಗಿದ್ದೆ. ಚಂದ್ರುವನ್ನು ಓಡಲು ಹೇಳಿದ್ದೆ ಬಳಿಕ ಚಂದ್ರುಗೆ ಫೋನ್ ಮಾಡಿದಾಗ ಫೋನ್ ತೆಗೆದಿರಲಿಲ್ಲ. ನಂತರ ಘಟನಾ ಸ್ಥಳಕ್ಕೆ ವಾಪಸ್ ಬಂದಾಗ ಆತ ರಕ್ತದ ಮಡುವಿನಲ್ಲಿ ಬಿದ್ದಿದ್ದ ನಂತರ ಆಟೋದಲ್ಲಿ ಹಾಕಿಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿದ್ದೆ ಅಷ್ಟೋತ್ತಿಗೆ ಆತ ಮೃತಪಟ್ಟಿದ್ದ ಎಂದು ದುಃಖಿತರಾದರು. ಇದನ್ನೂ ಓದಿ: ನಾನು ಯಾವುದೇ ಸುಳ್ಳು ಹೇಳಿಲ್ಲ: ಕಮಲ್ ಪಂಥ್ ಸ್ಪಷ್ಟನೆ
ಈ ಮೊದಲು ಕಮಿಷನರ್ ಕಮಲ್ ಪಂಥ್ ಪ್ರಕರಣ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿ, ನಾನು ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಸುಳ್ಳು ಹೇಳಿಲ್ಲ. ನಮ್ಮ ತನಿಖೆ ಪ್ರಕಾರ ಬೈಕ್ ಟಚ್ ಆಗಿದ್ದಕ್ಕೆ ಚಂದ್ರು ಕೊಲೆ ನಡೆದಿದೆ. ಚಂದ್ರು ಕೊಲೆ ಪ್ರಕರಣದ ತನಿಖೆಯಲ್ಲಿ ಕಂಡುಕೊಂಡ ವಿಚಾರವನ್ನಷ್ಟೇ ಹೇಳಿದ್ದೇನೆ. ನಮ್ಮ ತನಿಖೆಯಲ್ಲಿ ಮೃತ ಚಂದ್ರು ಜೊತೆಗೆ ಘಟನೆ ವೇಳೆ ಇದ್ದ ಸೈಮನ್ ಹೇಳಿಕೆ ನೀಡಿದ್ದಾನೆ. ನಮ್ಮ ತನಿಖೆ ವೇಳೆ ಬೈಕ್ ಟಚ್ ಆಗಿದ್ದರಿಂದಲೇ ಚಾಕುವಿನಿಂದ ಇರಿದಿದ್ದಾಗಿ ಸೈಮನ್ ಹೇಳಿಕೆ ನೀಡಿದ್ದಾನೆ. ಈ ಹಿನ್ನೆಲೆ ತನಿಖೆ ಮಾಡಿದ್ದ ಬಳಿಕ ಕಂಡುಕೊಂಡ ವಿಚಾರದ ಬಗ್ಗೆ ಮಾಹಿತಿ ನೀಡಿದ್ದೇನೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಇದನ್ನೂ ಓದಿ:ಪೊಲೀಸ್ ಕಮಿಷನರ್ ಸುಳ್ಳು ಹೇಳಿದ್ದಾರೆ, ಚಂದ್ರು ಕೊಲೆಗೆ ಉರ್ದು ಕಾರಣ: ರವಿಕುಮಾರ್
ಪೊಲೀಸ್ ಕಮಿಷನರ್ ಕಮಲ್ ಪಂಥ್ ಸುಳ್ಳು ಹೇಳಿದ್ದಾರೆ. ಚಂದ್ರು ಸ್ನೇಹಿತ ಸೈಮನ್ ರಾಜ್ ಹೇಳಿರುವುದೇ ಸತ್ಯ. ಚಂದ್ರು ಮನೆಯವರು ಹೇಳಿರುವಂತೆ ಉರ್ದು ಕಾರಣಕ್ಕಾಗಿಯೇ ಚಂದ್ರು ಕೊಲೆ ಆಗಿರುವುದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಆರೋಪಿಸಿದ್ದರು. ಇದಕ್ಕೆ ಪೂರಕ ಎಂಬಂತೆ ಸೈಮನ್ ರಾಜ್ ಉರ್ದು ಮಾತನಾಡದ್ದಕ್ಕೆ ಕೊಲೆ ಆಗಿದೆ ಎಂದು ಹೇಳಿಕೆ ನೀಡಿರುವುದು ಮತ್ತು ಕೊಲೆಯಾದ ದಿನವೇ ಪೋಷಕರಿಂದಲೂ ಇದೇ ಆರೋಪ ಕೇಳಿಬಂದಿರುವುದು ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಅನುಮಾನಗಳು ಮೂಡಲಾರಂಭಿಸಿದೆ. ಇದೀಗ ಚಂದ್ರು ಕೊಲೆ ಪ್ರಕರಣದಲ್ಲಿ ಟ್ವಿಸ್ಟ್ ಹಿನ್ನೆಲೆ ಪೊಲೀಸರಿಂದ ಮತ್ತೊಮ್ಮೆ ಸೈಮನ್ ರಾಜ್ ವಿಚಾರಣೆಗಾಗಿ ಜೆಜೆನಗರ ಪೊಲೀಸರು ಕರೆಸಿಕೊಂಡಿದ್ದಾರೆ.
ಬೆಂಗಳೂರು: ಬೈಕ್ ಡಿಕ್ಕಿ ಹೊಡೆದಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ಚಂದ್ರವನ್ನು ಕೊಲೆ ಮಾಡಲಾಗಿದೆ ಎಂದು ಗೆಳೆಯ ಸೈಮನ್ ಹೇಳಿದ್ದಾರೆ.
ಚಂದ್ರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಮನ್ ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಹಳೇ ಗುಡ್ಡದ ಹಳ್ಳಿಯಲ್ಲಿ ಪುಂಡರ ಪುಂಡಾಟ ಹೇಗಿತ್ತು? ಚಂದ್ರು ಕೊಲೆ ದಿನ ನಿಜವಾಗಿಯೂ ನಡೆದಿದ್ದೇನು ಎಂಬುದನ್ನು ಸೈಮನ್ ದೂರಿನಲ್ಲಿ ಸಂಪೂರ್ಣವಾಗಿ ವಿವರಿಸಿದ್ದಾರೆ. ಇದನ್ನೂ ಓದಿ: ಬೈಕ್‍ಗೆ ಡಿಕ್ಕಿ ಹೊಡೆದಿದ್ದಕ್ಕೆ ಚಂದ್ರು ಕೊಲೆ: ಕಮಲ್ ಪಂಥ್
ದೂರಿನಲ್ಲಿ ಏನಿದೆ?
ಏಪ್ರಿಲ್ 4 ಅಂದರೆ ಕಳೆದ ಸೋಮವಾರ ಸೈಮನ್ ರಾಜ್ ಆದ ನನ್ನ ಬರ್ತಡೇ ಇತ್ತು. ರಾತ್ರಿ 12 ಗಂಟೆ ಸಮಯದಲ್ಲಿ ಚಂದ್ರು ನನ್ನ ಬರ್ತಡೇಗೆ ಕೇಕ್ ಕಟ್ ಮಾಡಿಸಿದ್ದ. ನಂತರ ಚಂದ್ರು ನಂಗೆ ಚಿಕನ್ ರೋಲ್ ತಿನ್ನಬೇಕು ಅಂತಾ ಹೇಳಿದ್ದ.
ಆ ವೇಳೆ ನನ್ನ ಹೋಂಡಾ ಅಕ್ಟೀವಾ ಬೈಕ್ ಕೆಎ 02-ಕೆಜೆ 4195 ರಲ್ಲಿ ಸಿಟಿ ಮಾರ್ಕೆಟ್, ಚಾಮರಾಜಪೇಟೆ ಎಲ್ಲ ಕಡೆ ಚಿಕನ್ ರೋಲ್‍ಗಾಗಿ ಹುಡುಕಾಟ ನಡೆಸಿದ್ದು, ಎಲ್ಲೂ ಕೂಡ ಚಿಕನ್ ರೋಲ್ ಸಿಕ್ಕಿರಲಿಲ್ಲ. ರಂಜಾನ್ ಇರುವ ಕಾರಣ ಗೋರಿಪಾಳ್ಯದಲ್ಲಿ ಚಿಕನ್ ರೋಲ್ ಸಿಗುತ್ತೆ ಅನ್ನೋ ಕಾರಣಕ್ಕೆ ನಸುಕಿನ ಜಾವ 2:15 ರ ಸಮಯದಲ್ಲಿ ಹಳೇ ಗುಡ್ಡದ ಹಳ್ಳಿಗೆ ಹೋಗಿದ್ವಿ.
ಈ ವೇಳೆ ವೇಗವಾಗಿ ಬಂದ ಬೈಕ್‍ವೊಂದು ನಮ್ಮ ಬೈಕ್‍ಗೆ ಡಿಕ್ಕಿ ಹೊಡೆದಿತ್ತು. ನಾವು ಏರುಧ್ವನಿಯಲ್ಲಿ ಯಾಕೋ ಡಿಕ್ಕಿ ಹೊಡೆದೆ ಅಂತಾ ಕೇಳಿದ್ವಿ. ಇದಕ್ಕೆ ಶಾಹೀದ್ ಎಂಬಾತ, “ಯಾರೋ ನೀವು, ತೇರಿ ಮಾಕಿ ಸೂದ್, ನಾನು ಇದೇ ಏರಿಯಾದವನು ಏನ್ ಮಾಡ್ತಿಯಾ” ಎಂದು ಪ್ರಶ್ನಿಸಿದ. ಜೊತೆಗೆ ಇತರೆ ಹುಡುಗರನ್ನು ಸೇರಿಸಿಕೊಂಡು ಗಲಾಟೆ ಶುರುಮಾಡಿದರು. ಈ ವೇಳೆ ಶಾಹೀದ್ ತನ್ನ ಚಾಕುವಿನಿಂದ ಚಂದ್ರು ತೋಡೆಗೆ ಇರಿದ. ಇದನ್ನೂ ಓದಿ: ಚಂದ್ರು ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಕೊಟ್ಟ ಜಮೀರ್
ಚಂದ್ರು ತೋಡೆಗೆ ಚಾಕು ಇರಿದ ಪರಿಣಾಮ ತೀವ್ರವಾಗಿ ರಕ್ತಸ್ತ್ರಾವ ಆಗಿದ್ದನ್ನು ನೋಡಿ ಶಾಹೀದ್ ಮತ್ತು ಸ್ನೇಹಿತರು ಅಲ್ಲಿಂದ ಓಡಿ ಹೋಗಿದ್ರು. ಈ ಗಲಾಟೆಯಿಂದ ತಪ್ಪಿಸಿಕೊಂಡು ನಾನು ಓಡಿ ಹೋದೆ. ಆಟೋದಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ನಾಲ್ಕು ಗಂಟೆ ಸಮಯದಲ್ಲಿ ಚಂದ್ರು ಸಾವನ್ನಪ್ಪಿದ್ದಾನೆ.
ಬೆಂಗಳೂರು: ಚಿಕನ್ ಖರೀದಿ ಮಾಡಲು ಹೋದ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಜೆಜೆ ನಗರದಲ್ಲಿ ನಡೆದಿದೆ.
ಚಂದ್ರು ಕೊಲೆಯಾದ ಯುವಕ. ಜೆಜೆ ನಗರದ ಹಳೇ ಗುಡ್ಡದಹಳ್ಳಿಯಲ್ಲಿ ಘಟನೆ ನಡೆದಿದ್ದು, ಯುವಕ ಚಂದ್ರುನನ್ನು ಸೋಮವಾರ ರಾತ್ರಿ ದುಷ್ಕರ್ಮಿಗಳು ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ. ಇದನ್ನೂ ಓದಿ: ಸತತ 15ನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ
ನಡೆದಿದ್ದೇನು?
ಅಂಜಪ್ಪ ಗಾರ್ಡನ್‍ನಲ್ಲಿ ಚಂದ್ರ ಬರ್ತ್‍ಡೇ ಪಾರ್ಟಿಗೆಂದು ಹೋಗಿದ್ದನು. ಈ ವೇಳೆ ಜೆಜೆ ನಗರದಲ್ಲಿ ಚಿಕನ್ ತರಲು ಬಂದಿದ್ದಾನೆ. ಚಿಕನ್ ಖರೀದಿ ಮಾಡುವಾಗ ಗಲಾಟೆ ನಡೆದಿದೆ. ಗಲಾಟೆ ಅತಿರೇಕಕ್ಕೆ ಹೋಗಿದ್ದು, ಮೂವರು ದುಷ್ಕರ್ಮಿಗಳು ಚಂದ್ರನನ್ನು ಚಾಕುನಿಂದ ತೊಡೆಗೆ ಚುಚ್ಚಿ ಪರಾರಿಯಾಗಿದ್ದಾರೆ.
ಬೆಂಗಳೂರು: ಸ್ಕ್ರ್ಯಾಪ್ ಅಂಗಡಿಯ ಕೆಲಸಕ್ಕೆ ಬರಲಿಲ್ಲ ಎಂದು ತಂದೆ ನಿಂದಿಸಿದ್ದಕ್ಕೆ 23 ವರ್ಷದ ಯುವಕ ಚಾಕು ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಜೆಜೆ ನಗರದಲ್ಲಿ ನಡೆದಿದೆ.
ಮೃತ ಯುವಕನನ್ನು ಸಾಹೀಲ್ ಎಂದು ಗುರುತಿಸಲಾಗಿದ್ದು, ಯುವಕನ ತಂದೆ ಅಬ್ಬಾಸ್ ತಮ್ಮ ಮಗ ಕೆಟ್ಟ ಹಾದಿಯನ್ನು ಹಿಡಿದಿದ್ದು, ಸರಿಯಾಗಿ ಕೆಲಸಕ್ಕೆ ಹಾಜರಾಗುತ್ತಿಲ್ಲ ಎಂದು ಬೇಸತ್ತಿದ್ದರು. ಆಟೋ ರಿಕ್ಷಾ ಚಾಲಕನಾಗಿದ್ದ ಅಬ್ಬಾಸ್, ಭಾನುವಾರ ಕೆಲಸಕ್ಕೆ ಹೋಗದೇ ಟಿ.ವಿ ನೋಡಿಕೊಂಡು ಕುಳಿತಿದ್ದ ಸಾಹೀಲ್‍ಗೆ ನಿಂದಿಸಿ ಕೆಲಸಕ್ಕೆ ತೆರಳಿದ್ದಾರೆ. ಆದರೆ ಇದರಿಂದ ಮನನೊಂದ ಸಾಹೀಲ್ ಅಡುಗೆ ಮನೆಗೆ ಹೋಗಿ ಚಾಕುವಿನಿಂದ ಹೊಟ್ಟೆಗೆ ಇರಿದುಕೊಂಡಿದ್ದಾನೆ. ಇದನ್ನೂ ಓದಿ: ಅಧಿಕಾರಕ್ಕಾಗಿ ಕಾಂಗ್ರೆಸ್‍ನಿಂದ ಮೇಕೆದಾಟು ಪಾದಯಾತ್ರೆ ನಾಟಕ: ಹಾಲಪ್ಪ ಆಚಾರ್
ಮೊದಲಿಗೆ ಚಾಕು ಹಿಡಿದು ಕೇವಲ ಬೆದರಿಸುತ್ತಿದ್ದಾನೆ ಎಂದು ಆತನ ತಾಯಿ ರೇಷ್ಮಾ ಅಂದುಕೊಂಡಿದ್ದರು ಮತ್ತು ಹೊಟ್ಟೆಯಲ್ಲಿ ಆಗಿರುವ ಗಾಯ ಸಣ್ಣದು ಎಂದು ಭಾವಿಸಿದ್ದರು. ಆದರೆ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಸಾಹೀಲ್‍ಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ತಕ್ಷಣ ಸಾಹೀಲ್ ಕರೆದೊಯ್ದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಸೋಮವಾರ ಮುಂಜಾನೆ 3 ಗಂಟೆ ಸುಮಾರಿಗೆ ಸಾಹೀಲ್ ಕೊನೆಯುಸಿರೆಳಿದಿದ್ದಾನೆ.
ಈ ಪ್ರಕರಣ ಕುರಿತಂತೆ ರೇಷ್ಮಾ ಅವರು, ಸಾಹೀಲ್ ಅಡುಗೆ ಕೋಣೆಗೆ ಹೋಗಿ ತನ್ನ ತಂದೆಯ ಮೇಲೆ ಕೂಗಾಡುತ್ತಾ ಕೋಪದಿಂದ ಚಾಕು ತೆಗೆದುಕೊಂಡು ಇರಿದುಕೊಂಡಿದ್ದಾನೆ. ನಂತರ ಚೂರಿಯನ್ನು ನೆಲದ ಮೇಲೆ ಎಸೆದು ಹಾಲ್‍ನಲ್ಲಿದ್ದ ಸೋಫಾದ ಮೇಲೆ ಕುಳಿತುಕೊಂಡಿದ್ದ. ಆದರೆ ಸಾಹೀಲ್ ನೋವಿನಿಂದ ಅಳಲು ಆರಂಭಿಸಿದಾಗಲೇ ರೇಷ್ಮಾಗೆ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂಬ ಅರಿವಾಗಿದೆ. ಸದ್ಯ ಈ ಸಂಬಂಧ ಜೆಜೆ ನಗರ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕೊರೊನಾ ಅಂಟಿಸಿ ಪಾದಯಾತ್ರೆ ನಿಲ್ಲಿಸಲು ಯತ್ನಿಸುತ್ತಿದ್ದೀರಾ, ನಿಮ್ಗೆ ಒಳ್ಳೆಯದಾಗಲ್ಲ: ಡಿಕೆಶಿ ಕಣ್ಣೀರು
ಬೆಂಗಳೂರು: ಪಾದರಾಯನಪುರ ಕಾರ್ಪೊರೇಟರ್ ಇರ್ಮಾನ್ ಪಾಷಾ ವಿರುದ್ಧ ಎಫ್‍ಐಆರ್ ದಾಖಲಾಗಿದೆ.
ಬೆಂಗಳೂರಿನ ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 188 (ಸರ್ಕಾರಿ ಅಧಿಕಾರಿಗಳ ಕೆಲಸಕ್ಕೆ ಅಡ್ಡಿ), 270 (ವೈರಸ್ ಹಬ್ಬಿಸಲು ಯತ್ನ), 271 (ರೋಗ ನಿರೋಧಕ ನಿರ್ಬಂಧ ನಿಯಮವನ್ನು ಉಲ್ಲಂಘಿಸುವುದು) ಹಾಗೂ ಕ್ವಾರಂಟೈನ್ ನಿಯಮ ಉಲ್ಲಂಘನೆ ಆರೋಪದಡಿ ಪ್ರಕರಣ ದಾಖಲಾಗಿದೆ.
ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ಇಮ್ರಾನ್ ಪಾಷಾ ಅವರನ್ನು ಆರೋಗ್ಯ ಅಧಿಕಾರಿಗಳು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಪಾದರಾಯನಪುರಕ್ಕೆ ಹೋಗಿದ್ದರು. ಈ ವೇಳೆ ಇಮ್ರಾನ್ ಪಾಷಾ ಮನೆ ಬಳಿ ಹೈಡ್ರಾಮಾ ಸೃಷ್ಟಿಸಿ ನೂರಾರು ಜನ ಸೇರುವಂತೆ ಮಾಡಿದ್ದರು. ಈ ಸಂಬಂಧ ಆರೋಗ್ಯ ಅಧಿಕಾರಿಗಳು ಜೆಜೆ ನಗರ ಪೊಲೀಸರಿಗೆ ದೂರು ನೀಡಿದ್ದರು. ಆರೋಗ್ಯ ಅಧಿಕಾರಿಗಳ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಕಾರ್ಪೊರೇಟರ್ ಹೈಡ್ರಾಮಾ:
ಪಾದರಾಯನಪುರ ವಾರ್ಡ್ ಕಾರ್ಪೊರೇಟರ್ ಇಮ್ರಾನ್ ಪಾಷಾ ಅವರಿಗೆ ಶುಕ್ರವಾರ ಕೊರೊನಾ ಸೋಂಕು ದೃಢಪಟ್ಟಿದ್ದರೂ ಅವರು ಆಸ್ಪತ್ರೆ ಸೇರಿದ್ದು ಶನಿವಾರ ಮಧ್ಯಾಹ್ನದ ಹೊತ್ತಿಗೆ. ಇಮ್ರಾನ್ ಪಾಷಾ ಆಸ್ಪತ್ರೆಗೆ ದಾಖಲು ನಿರಾಕರಿಸಿ ಮೊಂಡಾಟ ಪ್ರದರ್ಶಿಸಿದ್ದರು. ಮನೆ ಬಳಿಗೆ ಪೊಲೀಸರು, ಆರೋಗ್ಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಬಂದರೂ ಇಮ್ರಾನ್ ಪಾಷಾ ಮನೆಯಿಂದ ಹೊರಬರಲಿಲ್ಲ.
ಕಾರ್ಪೊರೇಟರ್ ಇಮ್ರಾನ್ ತಂದೆ ಆರೀಫ್, ಶಾಸಕ ಜಮೀರ್ ಅಹ್ಮದ್ ಮಾತನ್ನೂ ಕೇಳಲಿಲ್ಲ. ಕೊನೆಗೆ ಪೊಲೀಸರು, ನೀವು ಆಸ್ಪತ್ರೆಗೆ ಬರಲಿಲ್ಲ ಅಂದ್ರೆ ಪ್ರಕರಣ ದಾಖಲಿಸಿ ಅರೆಸ್ಟ್ ಮಾಡ್ತೀವಿ ಎಂದು ವಾರ್ನಿಂಗ್ ಕೊಟ್ಟರು. ಸತತ ಮೂರು ಗಂಟೆಗಳ ಹೈಡ್ರಾಮಾ ಬಳಿಕ ಇಮ್ರಾನ್ ಪಾಷಾ ಪಿಪಿಇ ಕಿಟ್ ಸಮೇತ ಮನೆಯಿಂದ ಹೊರಬಂದು, ಜನರತ್ತ ಕೈಬೀಸಿ ಅಂಬುಲೆನ್ಸ್ ಹತ್ತಿ ವಿಕ್ಟೋರಿಯಾ ಆಸ್ಪತ್ರೆ ಸೇರಿದ್ದರು.
ಇಮ್ರಾನ್ ಬೆಂಬಲಿಗರನ್ನು ನಿಯಂತ್ರಿಸುವುದು ಪೊಲೀಸರಿಗೆ ಕಷ್ಟವಾಗಿಬಿಟ್ಟಿತ್ತು. ಇಮ್ರಾನ್ ಪಾಷಾ 200ಕ್ಕೂ ಹೆಚ್ಚು ಮಂದಿ ಜೊತೆ ಸಂಪರ್ಕದಲ್ಲಿದ್ದು, ಎಲ್ಲರನ್ನೂ ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಲಾಗುತ್ತಿದೆ. ಕಾರ್ಪೊರೇಟರ್ ನಡುವಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇಂಥಾದ್ದೆಲ್ಲಾ ಸಹಿಸೋಕೆ ಆಗಲ್ಲ ಎಂದು ಆರೋಗ್ಯ ಸಚಿವ ಶ್ರೀರಾಮುಲು ಶನಿವಾರ ಗರಂ ಆಗಿದ್ದರು. ಅಷ್ಟೇ ಅಲ್ಲದೆ ಕಾರ್ಪೊರೇಟರ್ ಇಮ್ರಾನ್ ಪಾಷಾ ವಿರುದ್ಧ ಕ್ರಮಕ್ಕೆ ಕಂದಾಯ ಸಚಿವ ಅಶೋಕ್ ಆಗ್ರಹಿಸಿದ್ದರು.
ಬೆಂಗಳೂರು: ಮಹಿಳೆಯೊಬ್ಬರು ಐದನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ ಘಟನೆ ಜಗಜೀವನ್ ರಾಮ್ ನಗರದಲ್ಲಿ ನಡೆದಿದೆ.
ಆರ್.ಆರ್ ನಗರದ ನಿವಾಸಿ ಯಶೋಧಾ (45) ಮೃತ ಮಹಿಳೆ. ಜೆಜೆ ನಗರದ ಸಂಬಂಧಿಕರ ಮನೆಗೆ ಹೋಗಿದ್ದಾಗ ಘಟನೆ ನಡೆದಿದೆ. ರಕ್ತದೊತ್ತಡ ಹಾಗೂ ಮಧುಮೇಹ ಕಾಯಿಲೆಗಳಿಂದ ಬಳಲುತ್ತಿದ್ದ ಯಶೋಧಾ ಅವರು ಸಂಬಂಧಿಕರ ಮನೆ ಹೋಗಿದ್ದರು. ಇಂದು ಊಟ ಮಾಡಿ ಮನೆಯ 5ನೇ ಮಹಡಿಗೆ ಹೋಗಿದ್ದರು. ಈ ವೇಳೆ ತಲೆ ತಿರುಗಿ ಕೆಳಗೆ ಬಿದ್ದಿದ್ದಾರೆ. ಪರಿಣಾಮ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಈ ಸಂಬಂಧ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಜೆಜೆ ನಗರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಯಶೋಧಾ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಬೆಂಗಳೂರು: ಪೊಲೀಸ್ ಪೇದೆ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರೋ ಘಟನೆ ನಗರದ ಜೆಜೆ ನಗರದಲ್ಲಿ ನಡೆದಿದೆ.
ಜೆಜೆ ನಗರ ಠಾಣೆಯ ರಾಜೇಂದ್ರ ಹಲ್ಲೆಗೊಳಗಾದ ಪೊಲೀಸ್ ಪೇದೆ. ರೌಡಿಶೀಟರ್ ಮಹಮ್ಮದ್ ಆಲೀಂ ಮತ್ತು ತಂಡದಿಂದ ಈ ಕೃತ್ಯ ನಡೆದಿದೆ. ಜೆಜೆ ನಗರದಲ್ಲಿ ದುಷ್ಕರ್ಮಿಗಳ ಗುಂಪು ಗಾಂಜಾ ಸೇವಿಸಿ ಪುಂಡಾಟ ಮಾಡುತ್ತಿದ್ದ ಬಗ್ಗೆ ಸ್ಥಳೀಯರು ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದರು.
ಕಂಟ್ರೋಲ್ ರೂಂ ಮಾಹಿತಿ ಅಧರಿಸಿ ಹೊಯ್ಸಳ ಬೀಟ್‍ನಲ್ಲಿದ್ದ ಪೇದೆ ರಾಜೇಂದ್ರ ಸ್ಥಳಕ್ಕೆ ಹೋಗಿದ್ರು. ಈ ವೇಳೆ ಪೇದೆ ರಾಜೇಂದ್ರ ಅವರ ಮೇಲೆ ದುಷ್ಕರ್ಮಿಗಳು ಮಚ್ಚು, ಲಾಂಗಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.
ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದ್ದು, ಗಾಯಾಳು ಪೇದೆ ರಾಜೇಂದ್ರ ಅವರನ್ನು ವಿಕ್ಟೋರಿಯಾ ಅಸ್ಪತ್ರೆಗೆ ದಾಖಲು ಮಾಡಲಾಗಿದೆ.
2016ರಲ್ಲಿ ಇದೇ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರೌಡಿ ಶೀಟರ್ ಮಹಮ್ಮದ್ ಅಲೀಂ ಮತ್ತು ತಂಡ ಪೇದೆಯೊಬ್ಬರ ಮೇಲೆ ಹಲ್ಲೆ ಮಾಡಿದ್ದರು. ಆರೋಪಿಗಳು ಪುಂಡರ ಗ್ಯಾಂಗ್ ಕಟ್ಟಿಕೊಂಡು ಅಮಾಯಾಕರ ಮೇಲೆ ಹಲ್ಲೆ ಮಾಡಿ ವಸೂಲಿ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.