Tag: JioGigaFiber

  • ಆಗಸ್ಟ್ 12ಕ್ಕೆ ಜಿಯೋ ಗಿಗಾ ಫೈಬರ್ ಲಾಂಚ್

    ಆಗಸ್ಟ್ 12ಕ್ಕೆ ಜಿಯೋ ಗಿಗಾ ಫೈಬರ್ ಲಾಂಚ್

    ಮುಂಬೈ: ರಿಲಯನ್ಸ್ ಜಿಯೋ ಕಂಪನಿಯ ಫಿಕ್ಸೆಡ್ ಬ್ರಾಡ್‍ಬ್ಯಾಂಡ್ ಸೆಗ್ಮೆಂಟ್ ಹೊಸ ಕನೆಕ್ಷನ್ ‘ಜಿಯೋಗಿಗಾಫೈಬರ್’ ಸೇವೆ ಆಗಸ್ಟ್ 12ರಂದು ಲಾಂಚ್ ಆಗಲಿದೆ ಎಂದು ವರದಿಯಾಗಿದೆ. ರಿಲಯನ್ಸ್ ಜಿಯೋ ಕಂಪನಿ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ‘ಜಿಯೋಗಿಗಾಫೈಬರ್’ ಸೇವೆಯನ್ನು ಸಾರ್ವಜನಿಕರಿಗೆ ನೀಡಲು ತೀರ್ಮಾನಿಸಲಾಗಿದೆ ಎಂದು ಪತ್ರಿಕೆ ವರದಿ ಮಾಡಿದೆ.

    ಜಿಯೋಗಿಗಾಫೈಬರ್ ಸಂಪರ್ಕ ವಿಶ್ವದ ಅತಿದೊಡ್ಡ ಗ್ರೀನ್ ಫೀಲ್ಡ್ ಫಿಕ್ಸಡ್ ಬ್ರಾಡ್‍ಬ್ಯಾಂಡ್ ಲೈನ್ ಆಗಲಿದೆ. ಭಾರತದ ಸುಮಾರು 1,100 ನಗರಗಳಲ್ಲಿ ಜಿಯೋಗಿಗಾಫೈಬರ್ ಸೇವೆ ಲಭ್ಯವಾಗಲಿದೆ ಎಂದು 2018ರ ಜುಲೈನಲ್ಲಿ ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮುಕೇಶ್ ಅಂಬಾನಿ ತಿಳಿಸಿದ್ದರು.

    ಬ್ರಾಡ್‍ಬ್ಯಾಂಡ್, ಲ್ಯಾಂಡ್‍ಲೈನ್ ಮತ್ತು ಟಿವಿ ಕಾಂಬೋ ಮೂರು ಸೇವೆಗಳನ್ನು ತಿಂಗಳಿಗೆ 600 ರೂ.ಗೆ ನೀಡಲು ಜಿಯೋ ಮುಂದಾಗಿದೆ. ಜಿಯೋ ಗಿಗಾಫೈಬರ್ ಕಳೆದ ವರ್ಷದಿಂದ ಮುಂಬೈ ಮತ್ತು ದೆಹಲಿಯಲ್ಲಿ ಪರೀಕ್ಷಾರ್ಥ ಪ್ರಯೋಗಗಳನ್ನು ನಡೆಸುತ್ತಿದೆ. ಗಿಗಾ ಫೈಬರ್ ಪಡೆದ ಗ್ರಾಹಕರು 100 ಮೆಗಾಬೈಟ್ಸ್ ಪರ್ ಸೆಕೆಂಡ್ (ಎಂಬಿಪಿಎಸ್) ವೇಗದ ಇಂಟರ್ ನೆಟ್ ಸಿಗಲಿದೆ.

    ರೂಟರ್ ಖರೀದಿ:
    ಜಿಯೋ ಗಿಗಾ ಫೂಬರ್ ಒಂದು ವರ್ಷ ಉಚಿತ ಸೇವೆ ಆದರೂ ಗ್ರಾಹಕರು ಆರಂಭದಲ್ಲಿ 4,500 ರೂ. ನೀಡಿ ರೂಟರ್ ಖರೀದಿಸಬೇಕು. ಎಲ್ಲ ಇಂಟರ್ ನೆಟ್ ಸೇವೆಗಳು ಆಪ್ಟಿಕಲ್ ನೆಟ್‍ವರ್ಕ್ ಟರ್ಮಿನಲ್ (ಒಎನ್‍ಟಿ) ಬಾಕ್ಸ್ ರೂಟರ್ ಮೂಲಕ ನಡೆಯಲಿದ್ದು, ಒಂದೇ ಬಾರಿಗೆ ಒಟ್ಟು 40-45 ಡಿವೈಸ್ ಗಳನ್ನು ಕನೆಕ್ಟ್ ಮಾಡಬಹುದು. ಮೊಬೈಲ್, ಸ್ಮಾರ್ಟ್ ಟಿವಿ, ಲ್ಯಾಪ್ ಟಾಪ್, ಟ್ಯಾಬ್ಲೆಟ್, ಗೇಮಿಂಗ್, ಸಿಸಿಟಿವಿ, ಸ್ಮಾರ್ಟ್ ಹೋಮ್ ಸಿಸ್ಟಂ ಸಹ ಕನೆಕ್ಟ್ ಮಾಡಬಹುದು.

    ಈ ಸೇವೆಯ ಇನ್ನೊಂದು ವಿಶೇಷ ಏನೆಂದರೆ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ಸೇರಿದಂತೆ ಇತರ ಡೇಟಾಗಳನ್ನು ಕ್ಲೌಡ್ ಮೂಲಕ ಸೇವ್ ಆಗಲಿದೆ. ಈ ಮೂಲಕ ಎಲ್ಲೇ ಹೋದರೂ ಡೇಟಾಗಳನ್ನು ಗ್ರಾಹಕರು ಚೆಕ್ ಮಾಡಬಹುದು.