Tag: jio

  • 501 ರೂ.ಗೆ ಸಿಗಲಿದೆ ನೂತನ ಜಿಯೋ ಫೋನ್- 2: ಗುಣವೈಶಿಷ್ಟ್ಯಗಳೇನು?

    501 ರೂ.ಗೆ ಸಿಗಲಿದೆ ನೂತನ ಜಿಯೋ ಫೋನ್- 2: ಗುಣವೈಶಿಷ್ಟ್ಯಗಳೇನು?

    ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ನ 41ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ, ಮುಖೇಶ್ ಅಂಬಾನಿ ಅವರ ಮಗಳು ಇಶಾ ಅಂಬಾನಿ ಮತ್ತು ಮಗ ಆಕಾಶ್ ಅಂಬಾನಿಯವರು ನೂತನ ಜಿಯೋ ಫೋನ್- 2 ಅನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ.

    ಈ ಬಾರಿ ಜಿಯೋ ಫೋನ್- 2 ನಲ್ಲಿ ಹಲವಾರು ಹೊಸ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ. ಫೇಸ್ಬುಕ್, ವಾಟ್ಸಪ್ ಮತ್ತು ಯೂಟ್ಯೂಬ್ ನಂತಹ ಅತ್ಯಂತ ಜನಪ್ರಿಯ ಅಪ್ಲಿಕೇಶನ್ ಗಳನ್ನು ಒಳಗೊಂಡಿದೆ.

    ರಿಲಯನ್ಸ್ ಕಂಪನಿಯ ನೂತನ ಜಿಯೋ ಫೋನ್-2, ಆಗಸ್ಟ್ 15 ರಿಂದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಇದರ ಪ್ರಾರಂಭಿಕ ಬೆಲೆ 2,999 ರೂಪಾಯಿಗಳಾಗಿದೆ. ಇದಲ್ಲದೆ ಕಂಪನಿಯು ತನ್ನ ಹಳೆಯ ಜಿಯೋ ಫೋನ್ ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಅವರಿಗಾಗಿಯೇ ನೂತನ ಕೊಡುಗೆಯನ್ನು ನೀಡಿದೆ. ಈ ಕೊಡುಗೆಯಲ್ಲಿ ಗ್ರಾಹಕರು ತಮ್ಮ ಬಳಿ ಇರುವ ಹಳೆಯ ಜಿಯೋ ಫೋನನ್ನು ಕಂಪೆನಿಗೆ ಹಿಂದುರಿಗಿಸಿ 501 ರೂಪಾಯಿಯನ್ನು ಮಾತ್ರ ನೀಡಿ ಹೊಸ ಜಿಯೋ ಫೋನ್-2 ಖರೀದಿಸಬಹುದಾಗಿದೆ.

    ಜಿಯೋ ಫೋನ್-2ರ ಗುಣವೈಶಿಷ್ಟ್ಯಗಳು:
    * ಕ್ವರ್ಟಿ ಕೀ ಪ್ಯಾಡ್ ನ 2.4 ಇಂಚ್ ಸ್ಕೀನ್ ಡಿಸ್ಪ್ಲೇ (240X340 ಪಿಕ್ಸೆಲ್)
    * ಜಿಯೋ ಫೋನ್’ನ ಧ್ವನಿ ಆಜ್ಞೆ (ವಾಯ್ಸ್ ಕಮ್ಯಾಂಡ್) ವೈಶಿಷ್ಟ್ಯವನ್ನು
    * ಫೇಸ್ಬುಕ್, ವಾಟ್ಸಪ್, ಯುಟ್ಯೂಬ್, ವೈ-ಫೈ ಮತ್ತು ಜಿಪಿಎಸ್ ಸೌಲಭ್ಯ.
    * 512 MB RAM 4 ಜಿಬಿ ಆಂತರಿಕ ಮೆಮೊರಿ ಹೊಂದಿದೆ. ಮೆಮೊರಿ ಕಾರ್ಡ್ ಮೂಲಕ 128 ಜಿಬಿವರೆಗೆ ವಿಸ್ತರಿಸಬಹುದು.
    * ಹಿಂದುಗಡೆ 2 ಮೆಗಾಪಿಕ್ಸೆಲ್ ಕ್ಯಾಮೆರಾ ಮುಂದುಗಡೆ 0.3 ಮೆಗಾಪಿಕ್ಸೆಲ್(ವಿಜಿಎ) ಕ್ಯಾಮೆರಾ.
    * ಫೋನ್ ಡ್ಯೂಯಲ್ ಸಿಮ್ ವೈಶಿಷ್ಟ್ಯವನ್ನು ಹಾಗೂ ಲೌಡ್ ಮೆನೋ ಸ್ಪೀಕರ್
    * 2000 ಎಂಎಎಚ್ ಬ್ಯಾಟರಿ ಸಾಮರ್ಥ್ಯ.

    ಜಿಯೋ ಮೊದಲ ಫೋನಿನಲ್ಲಿ ನೀಡಿದಂತೆ ಎಫ್‍ಎಂ ರೇಡಿಯೋ, ವೈಫೈ, ಎನ್‍ಎಫ್‍ಸಿ, ಬ್ಲೂಟೂತ್, ಜಿಪಿಎಸ್ ಹೊಂದಿದ್ದು, ಕನ್ನಡ ಸೇರಿದಂತೆ ದೇಶದ 22 ಭಾಷೆಗಳನ್ನು ಈ ಫೋನ್ ಸಪೋರ್ಟ್  ಮಾಡುತ್ತದೆ. ಮೈ ಜಿಯೋ, ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಚಾಟ್, ಜಿಯೋ ಮ್ಯೂಸಿಕ್, ಜಿಯೋ ಎಕ್ಸ್ ಪ್ರೆಸ್ ನ್ಯೂಸ್ ಅಪ್ಲಿಕೇಶನ್‍ಗಳು ಪ್ರಿಲೋಡೆಡ್ ಆಗಿ ಇರಲಿದೆ.

    ಜಿಯೋ ಫೋನ್ -1ರ ಗುಣವೈಶಿಷ್ಟ್ಯ ಏನಿತ್ತು?
    ಸಿಂಗಲ್ ನ್ಯಾನೋ ಸಿಮ್ 2.4 ಇಂಚಿನ (240X320 ಪಿಕ್ಸೆಲ್), ಟಾರ್ಚ್ ಲೈಟ್ ಹೊಂದಿರುವ ಈ ಫೀಚರ್ ಫೋನ್ ಕೈ ಆಪರೇಟಿಂಗ್ ಸಿಸ್ಟಂ( KaiOS ) ನೀಡಿತ್ತು.

    1.2 GHz ಡ್ಯುಯಲ್ ಕೋರ್ ಎಸ್‍ಪಿಆರ್ಡಿ ಪ್ರೋಸೆಸರ್ ಹೊಂದಿರುವ ಈ ಫೋನ್ ಮಲಿ 400 ಗ್ರಾಫಿಕ್ಸ್ ಪ್ರೋಸೆಸರ್ ಇದೆ. 2000 ಎಂಎಎಚ್ ಲಿಪೋ ಬ್ಯಾಟರಿ ಹೊಂದಿರುವ ಈ ಫೋನ್ 4ಜಿಬಿ ಆಂತರಿಕ ಮೆಮೊರಿ, 128 ಜಿಬಿವರೆಗೆ ಮೆಮೊರಿ ವಿಸ್ತರಿಸುವ ಸಾಮರ್ಥ್ಯ, ಹಿಂದುಗಡೆ 2 ಎಂಪಿ ಕ್ಯಾಮೆರಾ, ಮುಂದುಗಡೆ ವಿಜಿಎ ಕ್ಯಾಮೆರಾ ಇದ್ದು, ವಿಡಿಯೋ ರೆಕಾರ್ಡಿಂಗ್ ನೀಡಿತ್ತು.

  • ಆಗಸ್ಟ್ 15ಕ್ಕೆ ಜಿಯೋ ಗಿಗಾ ಫೈಬರ್ ಸೇವೆ ಆರಂಭ- ಡೇಟಾ ವಾರ್ ಬಳಿಕ ಬ್ರಾಡ್‍ಬ್ಯಾಂಡ್ ವಾರ್?

    ಆಗಸ್ಟ್ 15ಕ್ಕೆ ಜಿಯೋ ಗಿಗಾ ಫೈಬರ್ ಸೇವೆ ಆರಂಭ- ಡೇಟಾ ವಾರ್ ಬಳಿಕ ಬ್ರಾಡ್‍ಬ್ಯಾಂಡ್ ವಾರ್?

    ಮುಂಬೈ: ಜಿಯೊ ಸಿಮ್ ಗಳ ಮೂಲಕ ಉಚಿತ ಕರೆ ಮತ್ತು ಅಗ್ಗದ ದರದಲ್ಲಿ ಡೇಟಾ ಪೂರೈಸುತ್ತಿರುವ ರಿಲಯನ್ಸ್ ಜಿಯೋ ಗುರುವಾರ ಸ್ಥಿರ ಬ್ರಾಂಡ್‍ಬ್ಯಾಂಡ್ ಇಂಟರ್ನೆಟ್ ಸೇವೆ ಪ್ರಾರಂಭಿಸುವುದಾಗಿ ಘೋಷಿಸಿದೆ.

    ಉಚಿತ ಕರೆ, ಉಚಿತ ಡೇಟಾ ನೀಡಿ ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಬಿರುಗಾಳಿ ಎಬ್ಬಿಸಿದ್ದ ಜಿಯೋ ಗಿಗಾ ಫೈಬರ್ ಮೂಲಕ ಸ್ಥಿರ ಬ್ರಾಡ್‍ಬ್ಯಾಂಡ್ ಇಂಟರ್ನೆಟ್ ಸೇವಾಕ್ಷೇತ್ರಕ್ಕೂ ಕಾಲಿಡುವ ಮೂಲಕ ಮತ್ತೊಮ್ಮೆ ತನ್ನ ಆರ್ಭಟ ಮುಂದುವರಿಸಲು ತಯಾರಾಗಿದೆ.

    ಮಾಧ್ಯಮಗಳ ಜೊತೆ ಮಾತನಾಡಿದ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿಯವರು, ಆಗಸ್ಟ್ 15 ರಂದು `ಜಿಯೋ ಗಿಗಾ ಫೈಬರ್’ ಸೇವೆ ಬಿಡುಗಡೆಗೊಳಿಸುವುದಾಗಿ ಘೋಷಿಸಿದ್ದಾರೆ. ಯೋಜಿತ ಫೈಬರ್ ಬ್ರಾಂಡ್‍ಬ್ಯಾಂಡ್ ವ್ಯವಸ್ಥೆ ಅತ್ಯಾಧುನಿಕವಾಗಿರಲಿದೆ ಎಂದು ಈ ವೇಳೆ ಹೇಳಿದ್ದಾರೆ.

    ದೇಶದ 1,100 ನಗರಗಳಿಗೆ ಫೈಬರ್ ಬ್ರಾಡ್‍ಬ್ಯಾಂಡ್ ಸೇವೆ ಪೂರೈಕೆ ಮಾಡಲಿದ್ದೇವೆ. ಇದು ವ್ಯಾಪಾರಿಗಳಿಗೆ, ಸಣ್ಣ ಮತ್ತು ಮಧ್ಯಮ ಉದ್ಯಮಗಳಲ್ಲಿ ಹಾಗೂ ಬೃಹತ್ ಉದ್ಯಮಗಳಿಗೆ ಬ್ರಾಡ್‍ಬ್ಯಾಂಡ್ ಸೇವೆ ವಿಸ್ತರಿಸುವುದಾಗಿ ಹೂಡಿಕೆದಾರರಿಗೆ ತಿಳಿಸಿದ್ದಾರೆ.

    ಜಿಯೋ ಫೈಬರ್ ಬ್ರಾಡ್‍ಬ್ಯಾಂಡ್ ಟಿವಿ ಸೆಟ್ ಟಾಪ್ ಬಾಕ್ಸ್ ಜೊತೆ ಬರಲಿದ್ದು, ಧ್ವನಿ ಮೂಲಕ ಸೂಚನೆ ನೀಡಬಹುದಾಗಿದೆ. ವಿವಿಧ ಪ್ರಾದೇಶಿಕ ಭಾಷೆಗಳಲ್ಲೂ ಧ್ವನಿ ಸೂಚನೆ ಲಭ್ಯವಿರಲಿದೆ.

    ಈಗಾಗಲೇ ಜಿಯೋ ತನ್ನ 22 ತಿಂಗಳುಗಳ ಅವಧಿಯಲ್ಲಿ ಭಾರತದ ಸುಮಾರು 21.5 ಕೋಟಿ ಗ್ರಾಹಕರನ್ನು ಸಂಪಾದಿಸಿದೆ. ಈ ಮೂಲಕ ಬ್ರಾಂಡ್‍ಬ್ಯಾಂಡ್ ಕ್ಷೇತ್ರದಲ್ಲಿ ಸದ್ದು ಮಾಡಲು ಸಜ್ಜಾಗಿದ್ದು, ಪ್ರಸ್ತುತ ಮನೆಗಳಿಗೆ ಭಾರತಿ ಏರ್‍ಟೆಲ್, ಟಾಟಾ ಡೊಕೊಮೊ ಹಾಗೂ ಸರ್ಕಾರಿ ಸ್ವಾಮ್ಯದ ಬಿಎಸ್‍ಎನ್‍ಎಲ್ ಬ್ರಾಡ್‍ಬ್ಯಾಂಡ್ ಸೇವೆ ಒದಗಿಸುತ್ತಿರುವ ಕಂಪೆನಿಗಳಗೆ ಭಾರೀ ಪೈಪೋಟಿ ನೀಡಲು ಸಿದ್ಧವಾಗಿದೆ.

    ಈ ಮೊದಲು 2016ರ ಸೆಪ್ಟೆಂಬರ್ ನಲ್ಲಿ ನಡೆದ ರಿಲಯನ್ಸ್ ವಾರ್ಷಿಕ ಸಭೆಯಲ್ಲಿ ಮುಕೇಶ್ ಅಂಬಾನಿ ಮಲ್ಟಿ ಗಿಗಾಬೈಟ್ ಸೇವೆಯನ್ನು ದೇಶದ 100 ನಗರಗಳಲ್ಲಿ ಆರಂಭಿಸಲಾಗುವುದು. ಅಲ್ಲದೇ ಕೆಲ ನಗರಗಳಲ್ಲಿ ಪರೀಕ್ಷಾರ್ಥ ಪ್ರಯೋಗಗಳನ್ನು ನಡೆಸುತ್ತಿದೆ ಎಂದು ತಿಳಿಸಿದ್ದರು. ಅಲ್ಲದೇ ಫೈಬರ್ ಸೇವೆಯನ್ನು ಯಾವಾಗ ಆರಂಭವಾಗಲಿದೆ ಎನ್ನುವುದನ್ನು ಅಧಿಕೃತವಾಗಿ ಪ್ರಕಟಿಸಿರಲಿಲ್ಲ.

    ಇದೇ ಸಂದರ್ಭದಲ್ಲಿ ಜಿಯೊ ಸ್ಮಾರ್ಟ್‍ಫೋನ್ ಸಾಧನಗಳನ್ನೂ ಪ್ರಕಟಿಸಲಾಗಿದೆ. ಆಡಿಯೋ ಮತ್ತು ವಿಡಿಯೋ ಡಾಂಗಲ್, ಸ್ಮಾಟ್ ಸ್ಪೀಕರ್, ವೈ-ಫೈ ಎಕ್ಸ್ ಟೆಂಡರ್, ಸ್ಮಾರ್ಟ್ ಪ್ಲಗ್, ಟಿವಿ ಕ್ಯಾಮೆರಾಗಳನ್ನು ಬಿಡುಗಡೆಗೊಳಿಸಲಾಗಿದೆ.

  • ಕಡಿಮೆ ಬೆಲೆಯಲ್ಲೇ ಹೆಚ್ಚು ಡೇಟಾ- ಇದು ಜಿಯೋ ರಿಪಬ್ಲಿಕ್ ಡೇ ಆಫರ್

    ಕಡಿಮೆ ಬೆಲೆಯಲ್ಲೇ ಹೆಚ್ಚು ಡೇಟಾ- ಇದು ಜಿಯೋ ರಿಪಬ್ಲಿಕ್ ಡೇ ಆಫರ್

    ಮುಂಬೈ: ಈ ಹಿಂದೆ ನ್ಯೂ ಇಯರ್, ಧನ್ ಧನಾ ಧನ್ ಆಫರ್ ಪ್ರಕಟಿಸಿದ್ದ ಜಿಯೋ ಈಗ ರಿಪಬ್ಲಿಕ್ ಡೇ ಆಫರ್ ಪ್ರಕಟಿಸಿದೆ.

    ಜಿಯೋ ಪ್ರೈ ಸದಸ್ಯರಿಗೆ ಮಾತ್ರ ಲಭ್ಯವಿರುವ ಈ ಪ್ಲಾನ್ ನಲ್ಲಿ ಗ್ರಾಹಕರು ಈ ಹಿಂದಿನ ದರದಲ್ಲೇ ಪ್ಯಾಕ್ ಹಾಕಿಸಿದ್ರೆ 50% ಹೆಚ್ಚು ಡೇಟಾ ಸಿಗಲಿದೆ. ಅಷ್ಟೇ ಅಲ್ಲದೇ ಈ ಕಡಿಮೆ ದರದಲ್ಲೇ ಹೆಚ್ಚಿನ ಡೇಟಾ ಸಿಗುವುದು ವಿಶೇಷ.

    ಹೊಸ ಡೇಟಾ ಪ್ಲಾನ್‍ಗಳು ಜನವರಿ 26ರ ಮಧ್ಯರಾತ್ರಿ 12 ಗಂಟೆಯಿಂದ ಲಭ್ಯವಾಗಲಿದೆ. ಎಂದಿನಂತೆ ಹೊರ ಹೋಗುವ ಎಲ್ಲ ಕರೆಗಳು ಉಚಿತವಾಗಿರಲಿದೆ. ಇದನ್ನೂ ಓದಿ: 15 ತಿಂಗಳ ನಂತ್ರ ಲಾಭಕ್ಕೆ ಮರಳಿದ ಜಿಯೋ- ಏರ್ ಟೆಲ್ ಆದಾಯ ಕುಸಿತ

    ಇದನ್ನೂ ಓದಿ: ಜಿಯೋ ಎಫೆಕ್ಟ್: ಟೆಲಿಕಾಂ ಕ್ಷೇತ್ರದಲ್ಲಿ ಉದ್ಯೋಗ ಕಳೆದುಕೊಂಡವರ ಸಂಖ್ಯೆ ಎಷ್ಟು?

    ಇದನ್ನೂ ಓದಿ: ಉಚಿತ ಕರೆ ನೀಡುತ್ತಿರೋ ಜಿಯೋಗೆ ಎಷ್ಟು ಕೋಟಿ ನಷ್ಟವಾಗಿದೆ? ನಷ್ಟವಾಗಿದ್ದು ಎಲ್ಲಿ?

    ಇದನ್ನೂ ಓದಿ: ಜಿಯೋ ಎಫೆಕ್ಟ್: ಐಡಿಯಾ, ವೊಡಾಫೋನ್ ಇಂಡಿಯಾ ವಿಲೀನ

    ಇದನ್ನೂ ಓದಿ: ಜಿಯೋದಿಂದಾಗಿ ಭಾರತದ ಟೆಲಿಕಾಂ ಮಾರುಕಟ್ಟೆಯಲ್ಲಿ ಆಗಿರೋ ಆ 9 ಬದಲಾವಣೆಗಳು

     

     

  • 15 ತಿಂಗಳ ನಂತ್ರ ಲಾಭಕ್ಕೆ ಮರಳಿದ ಜಿಯೋ- ಏರ್ ಟೆಲ್  ಆದಾಯ ಕುಸಿತ

    15 ತಿಂಗಳ ನಂತ್ರ ಲಾಭಕ್ಕೆ ಮರಳಿದ ಜಿಯೋ- ಏರ್ ಟೆಲ್ ಆದಾಯ ಕುಸಿತ

    ಮುಂಬೈ: ಸೇವೆ ಆರಂಭಗೊಂಡ ಬಳಿಕ ನಷ್ಟದಲ್ಲಿದ್ದ ರಿಲಯನ್ಸ್ ಜೀಯೋ 15 ತಿಂಗಳ ಬಳಿಕ ಇದೇ ಮೊದಲ ಬಾರಿ ಲಾಭದ ಫಲಿತಾಂಶ ದಾಖಲಿಸಿದೆ. ಡಿಸೆಂಬರ್ 31ಕ್ಕೆ ಅಂತ್ಯಗೊಂಡ ಮೂರನೇ ತ್ರೈಮಾಸಿಕದಲ್ಲಿ ಜಿಯೋ 504 ಕೋಟಿ ರೂ. ನಿವ್ವಳ ಲಾಭಗಳಿಸಿದೆ ಎಂದು ಮಾತೃಸಂಸ್ಥೆ ರಿಲಯನ್ಸ್ ಇಂಡಸ್ಟ್ರಿಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    ಎರಡನೇ ತ್ರೈಮಾಸಿಕದಲ್ಲಿ 271 ಕೋಟಿ ರೂ. ನಷ್ಟ ಅನುಭವಿಸಿದ್ದ ಜಿಯೋ ಮೂರನೇ ತ್ರೈಮಾಸಿಕದಲ್ಲಿ 6,879 ಕೋಟಿ ರೂ. ಆದಾಯಗಳಿಸಿದೆ.

    ಜಿಯೋ ಪ್ರತಿಸ್ಪರ್ಧಿ ಏರ್ ಟೆಲ್ ಆದಾಯ ಕುಸಿತಗೊಂಡಿದೆ. ಎರಡನೇ ತ್ರೈಮಾಸಿಕದಲ್ಲಿ 23,335 ಕೋಟಿ ರೂ. ಗಳಿಸಿದ್ದರೆ, ಡಿಸೆಂಬರ್ ಗೆ ಅಂತ್ಯಗೊಂಡ ತ್ರೈಮಾಸಿಕದಲ್ಲಿ 12.9% ಕುಸಿತವಾಗಿದ್ದು 20,319 ಕೋಟಿ ರೂ.ಗಳಿಸಿದೆ. ನಿವ್ವಳ ಲಾಭ 306 ಕೋಟಿ ರೂ. ಗಳಿಸಿದ್ದರೆ, ಎರಡನೇ ತ್ರೈ ಮಾಸಿಕದಲ್ಲಿ 504 ಕೋಟಿ ರೂ. ಗಳಿಸಿತ್ತು.

    ಏರ್‍ಟೆಲ್ ಎವರೇಜ್ ರೆವೆನ್ಯೂ ಪರ್ ಯೂಸರ್(ಎಆರ್‍ಪಿಯು) ಡಿಸೆಂಬರ್ ನಲ್ಲಿ 123 ರೂ. ಇದ್ದರೆ ಒಂದು ವರ್ಷದ ಹಿಂದೆ 172 ರೂ. ಇತ್ತು. ಜಿಯೋ ಎಆರ್‍ಪಿಯು ಮೂರನೇ ತ್ರೈಮಾಸಿಕದಲ್ಲಿ 154 ರೂ. ಇದ್ದರೆ, ಎರಡನೇ ತ್ರೈಮಾಸಿಕದಲ್ಲಿ 156 ರೂ. ಇತ್ತು. ಇದನ್ನೂ ಓದಿ: ಜಿಯೋ ಎಫೆಕ್ಟ್: ಟೆಲಿಕಾಂ ಕ್ಷೇತ್ರದಲ್ಲಿ ಉದ್ಯೋಗ ಕಳೆದುಕೊಂಡವರ ಸಂಖ್ಯೆ ಎಷ್ಟು?

    2016ರ ಸೆಪ್ಟೆಂಬರ್ ನಲ್ಲಿ ಜಿಯೋ ಅಧಿಕೃತವಾಗಿ ಆರಂಭಿಸಿ ಮೊದಲ 6 ತಿಂಗಳು ಉಚಿತ ಸೇವೆ ನೀಡಿತ್ತು. ಪ್ರಸ್ತುತ ಜಿಯೋಗೆ ಈಗ 16 ಕೋಟಿ ಗ್ರಾಹಕರಿದ್ದಾರೆ.

    ಇದನ್ನೂ ಓದಿ: ಜಿಯೋ ಎಫೆಕ್ಟ್: ಏರ್‍ಟೆಲ್‍ನಿಂದ ಟೆಲಿನಾರ್ ಕಂಪೆನಿ ಖರೀದಿ

    ಇದನ್ನೂ ಓದಿ: ಉಚಿತ ಕರೆ ನೀಡುತ್ತಿರೋ ಜಿಯೋಗೆ ಎಷ್ಟು ಕೋಟಿ ನಷ್ಟವಾಗಿದೆ? ನಷ್ಟವಾಗಿದ್ದು ಎಲ್ಲಿ?

    ಇದನ್ನೂ ಓದಿ: ಜಿಯೋ ಎಫೆಕ್ಟ್: ಐಡಿಯಾ, ವೊಡಾಫೋನ್ ಇಂಡಿಯಾ ವಿಲೀನ

    ಇದನ್ನೂ ಓದಿ: ಜಿಯೋದಿಂದಾಗಿ ಭಾರತದ ಟೆಲಿಕಾಂ ಮಾರುಕಟ್ಟೆಯಲ್ಲಿ ಆಗಿರೋ ಆ 9 ಬದಲಾವಣೆಗಳು

     

  • ಸಾಲದ ಸುಳಿಯಲ್ಲಿರೋ ತಮ್ಮನ ರಕ್ಷಣೆಗೆ ಧಾವಿಸಿದ ಅಣ್ಣ ಮುಕೇಶ್: ಎಷ್ಟು ಕೋಟಿಗೆ ಆರ್‌ಕಾಂ ಖರೀದಿ?

    ಸಾಲದ ಸುಳಿಯಲ್ಲಿರೋ ತಮ್ಮನ ರಕ್ಷಣೆಗೆ ಧಾವಿಸಿದ ಅಣ್ಣ ಮುಕೇಶ್: ಎಷ್ಟು ಕೋಟಿಗೆ ಆರ್‌ಕಾಂ ಖರೀದಿ?

    ಮುಂಬೈ: ಸಾಲದ ಸುಳಿಗೆ ಸಿಲುಕಿರುವ ಅನಿಲ್ ಅಂಬಾನಿ ರಿಲಯನ್ಸ್ ಕಮ್ಯೂನಿಕೇಶನ್ಸ್(ಆರ್‌ಕಾಂ) ಸ್ಪೆಕ್ಟ್ರಂ ಟವರ್, ಆಪ್ಟಿಕಲ್ ಫೈಬರ್ ನೆಟ್‍ವರ್ಕ್ ಮತ್ತು ಇತರೆ ವೈರ್‌ಲೆಸ್‌ ಸಂಪತ್ತನ್ನು ಖರೀದಿಸಲು ಮುಕೇಶ್ ಅಂಬಾನಿ ಮುಂದಾಗಿದ್ದಾರೆ.

    ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿಯ ಜಿಯೋ ಇನ್ಫೋಕಾಂ ಲಿಮಿಟೆಡ್‍ಗೆ ತನ್ನ ಆಸ್ತಿಯನ್ನು ಮಾರಾಟ ಮಾಡುವ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ರಿಲಯನ್ಸ್ ಕಮ್ಯೂನಿಕೇಷನ್ ಗುರುವಾರ ತಿಳಿಸಿದೆ.

    ಎಷ್ಟು ಕೋಟಿ ರೂ.ಗಳ ಒಪ್ಪಂದ ನಡೆದಿದೆ ಎನ್ನುವುದನ್ನು ಎರಡೂ ಕಂಪೆನಿಗಳು ಬಹಿರಂಗ ಪಡಿಸಿಲ್ಲ. ಆದರೆ ಬ್ಯಾಂಕಿಂಗ್ ಮೂಲಗಳ ಪ್ರಕಾರ 24 ಸಾವಿರ ಕೋಟಿಗಳಿಂದ 25 ಸಾವಿರ ಕೋಟಿ ರೂ.ಗಳವರೆಗೆ ಈ ಒಪ್ಪಂದ ನಡೆದಿದೆ ಎಂದು ಅಂದಾಜಿಸಲಾಗಿದೆ. ಈ ಒಪ್ಪಂದ 2018ರ ಮಾರ್ಚ್ ಒಳಗಡೆ ಪೂರ್ಣಗೊಳ್ಳುವ ಸಾಧ್ಯತೆಯಿದೆ.

    45 ಸಾವಿರ ಕೋಟಿ ರೂ. ಸಾಲ ಸುಳಿಗೆ ಆರ್‌ಕಾಂ ಸಿಲುಕಿದ್ದು, ರಿಲಯನ್ಸ್ ಸ್ಥಾಪಕ ಧೀರೂಭಾಯಿ ಅಂಬಾನಿ ಅವರ 85 ಜನ್ಮ ದಿನಾಚರಣೆ ಸಂದರ್ಭದಲ್ಲಿಯೇ ಈ ಬೆಳವಣಿಗೆ ನಡೆದಿರುವುದು ಭಾರೀ ಮಹತ್ವ ಪಡೆದುಕೊಂಡಿದೆ.  ಇದನ್ನೂ ಓದಿ: ಹೊಸ ವರ್ಷಕ್ಕೆ ಜಿಯೋದಿಂದ ಎರಡು ಹೊಸ ಪ್ಲಾನ್

    ಆರ್‌ಕಾಂಗೆ ಸೇರಿದ ಸಂಪತ್ತು ಮಾರಾಟ ಮಾಡಿ ಬ್ಯಾಂಕ್‍ಗಳ 40 ಸಾವಿರ ಕೋಟಿ ರೂ. ಸಾಲವನ್ನು ಪಾವತಿ ಮಾಡಲಾಗುವುದು ಎಂದು ಅನಿಲ್ ಅಂಬಾನಿ ಮೊನ್ನೆ ತಿಳಿಸಿದ್ದರು. ಆರ್‌ಕಾಂ ಸೇರಿದ ಸಂಪತ್ತು ಖರೀದಿಯಿಂದ ತನ್ನ ಮನೆ ಮನೆಗಳಿಗೆ ಫೈಬರ್, ವೈಯರ್‍ಲೆಸ್ ಸೇವೆ ಮತ್ತು ಉದ್ಯಮ ಸೇವೆ ವಿಸ್ತರಿಸಲು ಸಹಾಯವಾಗಲಿದೆ ಎಂದು ಜಿಯೋ ತಿಳಿಸಿದೆ.

    2016 ರ ಸೆಪ್ಟೆಂಬರ್ ನಲ್ಲಿ ಸೇವೆ ಆರಂಭಿಸಿದ ಜಿಯೋಗೆ ದೇಶದಲ್ಲಿ 16 ಕೋಟಿ ಗ್ರಾಹಕರಿದ್ದು, ನವೆಂಬರ್ ಮೊದಲ ವಾರದಲ್ಲಿ ರಿಲಯನ್ಸ್ ಕಮ್ಯೂನಿಕೇಶನ್ 2ಜಿ ಕರೆ ಸೇವೆಯನ್ನು ಡಿಸೆಂಬರ್ 1ರಿಂದ ಸ್ಥಗಿತಗೊಳಿಸಲಿದ್ದೇವೆ ಎಂದು ಹೇಳಿತ್ತು.

    ಇನ್ನು ಮುಂದೆ ಕೇವಲ 4ಜಿ ಸೇವೆಯನ್ನು ಮಾತ್ರ ನೀಡಲಾಗುವುದು. 4ಜಿ ಸೇವೆ ಬಳಸುತ್ತಿರುವ ಗ್ರಾಹಕರು ರಿಲಯನ್ಸ್ ಸೇವೆಯನ್ನು ಮುಂದುವರಿಸಬಹುದು. 2ಜಿ ಸೇವೆಯನ್ನು ಇನ್ನು ಮುಂದೆ ನೀಡಲು ಸಾಧ್ಯವಿಲ್ಲ. 2ಜಿ ಸೇವೆ ಬೇಕಿದ್ದಲ್ಲಿ ಬೇರೆ ಟೆಲಿಕಾಂ ಕಂಪೆನಿಗೆ ಹೋಗಬಹುದು ಎಂದು ತಿಳಿಸಿತ್ತು.

    ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಇತರ ಕಂಪೆನಿಗಳಿಗೆ ರಿಲಯನ್ಸ್ ಗ್ರಾಹಕರು ನಂಬರ್ ಪೋರ್ಟಿಂಗ್ ಅರ್ಜಿ ಹಾಕಿದರೆ ಪೋರ್ಟಿಂಗ್ ಮನವಿಯನ್ನು ಸ್ವೀಕರಿಸುವಂತೆ ಸೂಚಿಸಿತ್ತು.

    ನಷ್ಟದಲ್ಲಿರುವ ಆರ್‌ಕಾಂ  ಇತ್ತೀಚೆಗೆ ಏರ್‍ಸೆಲ್ ಕಂಪೆನಿಯನ್ನು ಖರೀದಿಸಲು ರಿಲಯನ್ಸ್ ಪ್ರಯತ್ನ ನಡೆಸಿತ್ತು. ಆದರೆ ಅದರಲ್ಲಿ ಯಶಸ್ವಿಯಾಗಿರಲಿಲ್ಲ. ಆಂಧ್ರಪ್ರದೇಶ, ಹರ್ಯಾಣ, ಮಹಾರಾಷ್ಟ್ರ, ಉತ್ತಪ್ರದೇಶ ಪೂರ್ವ ಮತ್ತು ಪಶ್ಚಿಮ, ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳದಲ್ಲಿ 2ಜಿ ಮತ್ತು 4ಜಿ ಸೇವೆ ಯನ್ನು ರಿಲಯನ್ಸ್ ನೀಡುತ್ತಿದೆ. ಇದನ್ನೂ: ಜಿಯೋದಿಂದಾಗಿ ಭಾರತದ ಟೆಲಿಕಾಂ ಮಾರುಕಟ್ಟೆಯಲ್ಲಿ ಆಗಿರೋ ಆ 9 ಬದಲಾವಣೆಗಳು

  • ಹೊಸ ವರ್ಷಕ್ಕೆ ಜಿಯೋದಿಂದ ಎರಡು ಹೊಸ ಪ್ಲಾನ್

    ಹೊಸ ವರ್ಷಕ್ಕೆ ಜಿಯೋದಿಂದ ಎರಡು ಹೊಸ ಪ್ಲಾನ್

    ಮುಂಬೈ: ಹೊಸ ವರ್ಷದ ಅಂಗವಾಗಿ ರಿಲಯನ್ಸ್ ಜಿಯೋ ಪ್ರಿಪೇಯ್ಡ್ ಗ್ರಾಹಕರಿಗೆ ‘ಹ್ಯಾಪಿ ನ್ಯೂ ಇಯರ್’ ಹೆಸರಿನಲ್ಲಿ ಎರಡು ಹೊಸ ಪ್ಲಾನ್ ಪರಿಚಯಿಸಿದೆ. 199 ರೂ. ಮತ್ತು 299 ರೂ. ಪ್ಲಾನ್ ಪರಿಚಯಿಸಿದ್ದು, ಜಿಯೋ ಪ್ರೈಂ ಸದಸ್ಯರಿಗೆ ಮಾತ್ರ ಈ ಆಫರ್ ಲಭ್ಯವಾಗಲಿದೆ.

    199 ರೂ.
    28 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಪ್ಲಾನ್ ನಲ್ಲಿ ಪ್ರತಿದಿನ 1.2 ಜಿಬಿ ಹೈ ಸ್ಪೀಡ್ 4ಜಿ ಡೇಟಾ ಸಿಗುತ್ತದೆ. ಎಲ್ಲ ಹೊರ ಹೋಗುವ ಕರೆಗಳು ಉಚಿತವಾಗಿದ್ದು ಮಿತಿ ಇಲ್ಲದಷ್ಟು ಎಸ್‍ಎಂಎಸ್ ಗಳನ್ನು ಕಳುಹಿಸಬಹುದಾಗಿದೆ.

    299 ರೂ.
    28 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಪ್ಲಾನ್ ನಲ್ಲಿ ಪ್ರತಿದಿನ 2 ಜಿಬಿ ಹೈ ಸ್ಪೀಡ್ ಡೇಟಾ ಸಿಗುತ್ತದೆ. ಎಲ್ಲ ಹೊರ ಹೋಗುವ ಕರೆಗಳು ಉಚಿತವಾಗಿದ್ದು ಮಿತಿ ಇಲ್ಲದಷ್ಟು ಎಸ್‍ಎಂಎಸ್ ಗಳನ್ನು ಕಳುಹಿಸಬಹುದಾಗಿದೆ.

    ಈ ಹಿಂದೆ ರಿಲಯನ್ಸ್ ಇಂಡಸ್ಟ್ರಿಸ್ ಮುಖ್ಯಸ್ಥ ಮುಕೇಶ್ ಅಂಬಾನಿ, ಪ್ರತಿ ತಿಂಗಳು ಜಿಯೋ ಬಳಕೆದಾರರು 100 ಕೋಟಿ ಜಿಬಿ ಡೇಟಾವನ್ನು ಬಳಸುತ್ತಿದ್ದು, ಪ್ರತಿ ದಿನ ಜಿಯೋ ನೆಟ್ ವರ್ಕ್ ಮೂಲಕ ಒಟ್ಟು 3.3 ಕೋಟಿ ಜಿಬಿ ಡೇಟಾ ಬಳಕೆಯಾಗುತ್ತಿದೆ ಎಂದು ಹೇಳಿದ್ದರು.

    ಈ ವರ್ಷದ ಫೆಬ್ರವರಿಯಲ್ಲಿ ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್, ಪ್ರತಿ ತಿಂಗಳು 150 ಕೋಟಿ ಗಿಗಾಬೈಟ್ ಮೊಬೈಲ್ ಡೇಟಾವನ್ನು ಬಳಸುವ ವಿಶ್ವದಲ್ಲೇ ಮೊಬೈಲ್ ಡೇಟಾ ಬಳಸುವ ದೇಶಗಳ ಪೈಕಿ ಭಾರತ ನಂಬರ್ ಒನ್ ಸ್ಥಾನ ಪಡೆದುಕೊಂಡಿದೆ. ಅಮೆರಿಕ ಮತ್ತು ಚೀನಾ ಎರಡನ್ನೂ ಸೇರಿಸಿದರೂ ಭಾರತದಲ್ಲೇ ಅತಿ ಹೆಚ್ಚು ಮೊಬೈಲ್ ಡೇಟಾ ಬಳಕೆಯಾಗುತ್ತಿದೆ ಎಂದು ಟ್ವೀಟ್ ಮಾಡಿದ್ದರು. ಇದನ್ನೂ: ಜಿಯೋದಿಂದಾಗಿ ಭಾರತದ ಟೆಲಿಕಾಂ ಮಾರುಕಟ್ಟೆಯಲ್ಲಿ ಆಗಿರೋ ಆ 9 ಬದಲಾವಣೆಗಳು

  • ಜಿಯೋ ಎಫೆಕ್ಟ್: ಟೆಲಿಕಾಂ ಕ್ಷೇತ್ರದಲ್ಲಿ ಉದ್ಯೋಗ ಕಳೆದುಕೊಂಡವರ ಸಂಖ್ಯೆ ಎಷ್ಟು?

    ಜಿಯೋ ಎಫೆಕ್ಟ್: ಟೆಲಿಕಾಂ ಕ್ಷೇತ್ರದಲ್ಲಿ ಉದ್ಯೋಗ ಕಳೆದುಕೊಂಡವರ ಸಂಖ್ಯೆ ಎಷ್ಟು?

    ಮುಂಬೈ: ರಿಲಯನ್ಸ್ ಜಿಯೋ ಟೆಲಿಕಾಂ ಪ್ರವೇಶಿಸಿದ ಮೇಲೆ ಭಾರತದಲ್ಲಿದ್ದ ಟೆಲಿಕಾಂ ಕಂಪೆನಿಗಳ ಆದಾಯಕ್ಕೆ ಹೊಡೆತ ಬಿದ್ದಿರುವುದು ಹಳೆಯ ಸುದ್ದಿ. ಈಗ ಈ ಕ್ಷೇತ್ರದಲ್ಲಿ ಆರಂಭವಾಗಿರುವ ಭಾರೀ ಸ್ಪರ್ಧೆಯಿಂದಾಗಿ ಉದ್ಯೋಗಿಗಳ ಉದ್ಯೋಗಕ್ಕೂ ಕುತ್ತು ಬಂದಿದ್ದು, ಒಟ್ಟು 75 ಸಾವಿರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ.

    ಕೆಲ ಕಂಪೆನಿಗಳು ವಿಲೀನಗೊಳ್ಳುತ್ತಿದ್ದರೆ, ಕೆಲವೊಂದು ಸಂಪೂರ್ಣವಾಗಿ ಮುಚ್ಚುತ್ತಿದೆ. ಇವುಗಳಿಂದಾಗಿ ಟೆಲಿಕಾಂ ಕ್ಷೇತ್ರದಲ್ಲಿರುವ ಒಟ್ಟು ಅಂದಾಜು 3 ಲಕ್ಷ ಉದ್ಯೋಗಿಗಳ ಪೈಕಿ ಶೇ. 25 ರಷ್ಟು ಮಂದಿ ಉದ್ಯೋಗವನ್ನು ತೊರೆದಿದ್ದಾರೆ ಎಂಬುದಾಗಿ ಮಾಧ್ಯಮವೊಂದು ವರದಿ ಮಾಡಿದೆ.

    ಈಗಾಗಲೇ ಕೆಲ ಕಂಪೆನಿಗಳು ಸಂಬಳವನ್ನು ಹೆಚ್ಚಿಸದ ಕಾರಣ ಕೆಲ ಉದ್ಯೋಗಿಗಳು ತೊರೆದಿದ್ದಾರೆ. ಈ ಕ್ಷೇತ್ರವನ್ನು ಬಿಟ್ಟವರಲ್ಲಿ ಶೇ.30ರಷ್ಟು ಮಧ್ಯಮ ಮ್ಯಾನೇಜ್‍ಮೆಂಟ್ ವಿಭಾಗದವರು. ಟೆಲಿಕಾಂ ಕ್ಷೇತ್ರದಲ್ಲಿ ಸುಮಾರು ಶೇ.50ರಷ್ಟು ಮಂದಿ ಈ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ.

    ಎಮಾ ಪಾರ್ಟ್ ನರ್ಸ್ ಕಂಪೆನಿಯ ಎ ರಾಮಚಂದ್ರನ್ ಎಂಬವರು ಪ್ರತಿಕ್ರಿಯಿಸಿ, ಒಂದು ವರ್ಷದ ಹಿಂದೆ ಟೆಲಿಕಾಂ ಕ್ಷೆತ್ರದಲ್ಲಿ 3 ಲಕ್ಷ ಮಂದಿ ಉದ್ಯೋಗಿಗಳಿದ್ದರು. ಆದರೆ ಈಗ ಇದರಲ್ಲಿ 25% ಮಂದಿ ಈ ಕ್ಷೇತ್ರವನ್ನು ತೊರೆದಿದ್ದಾರೆ ಎಂದು ಹೇಳಿದ್ದಾರೆ.

    ಹೆಚ್ಚಿನ ಕೌಶಲ್ಯ ಹೊಂದಿದ ಉದ್ಯೋಗಿಗಳನ್ನು ಕಂಪೆನಿಗಳು ಮುಂದುವರೆಸುತ್ತಿದ್ದು, ಕೆಲವರಿಗೆ ಮೊದಲೇ ಪ್ಯಾಕೇಜ್ ನೀಡಿ ತೊರೆಯುವಂತೆ ಹೇಳುತ್ತಿದೆ. ಕಂಪೆನಿಯ ಮಾನವ ಸಂಪನ್ಮೂಲಕ್ಕೆ ಒಟ್ಟು 4% ರಿಂದ 5% ರಷ್ಟು ಖರ್ಚಾಗುತ್ತದೆ. ಈ ಖರ್ಚನ್ನು ಭರಿಸುವ ಸಾಮರ್ಥ್ಯ ಇಲ್ಲದೇ ಇರುವ ಕಾರಣ ಕಂಪೆನಿಗಳು ಉದ್ಯೋಗನ್ನು ಕಡಿತಗೊಳಿಸುತ್ತಿದೆ.

    ಟೆಲಿಕಾಂ ಕಂಪೆನಿಯೊಂದರ ಹೆಸರು ಬಹಿರಂಗ ಪಡಿಸಲು ಇಚ್ಚಿಸದ ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಉದ್ಯೋಗಿಗಳಿಂದ ತೆರವಾದ ಜಾಗವನ್ನು ಶೀಘ್ರವೇ ಭರ್ತಿ ಮಾಡುವ ಸಾಧ್ಯತೆಗಳಿಲ್ಲ ಎಂದು ತಿಳಿಸಿದ್ದಾರೆ.

    ಟೆಲಿಕಾಂ ಕ್ಷೇತ್ರವನ್ನು ತೊರೆದು ಉದ್ಯೋಗಿಗಳು ಬೇರೆ ಕಡೆ ಉದ್ಯೋಗಕ್ಕೆ ಅರ್ಜಿ ಹಾಕುತ್ತಿದ್ದು, ಈ ಪ್ರಮಾಣ 35 – 40% ಹೆಚ್ಚಾಗಿದೆ ಎಂದು ಉದ್ಯೋಗಾತ ಸಂಸ್ಥೆಗಳು ತಿಳಿಸಿವೆ.

    2016ರ ಸೆಪ್ಟೆಂಬರ್ ನಲ್ಲಿ ಭಾರತದ ಮಾರುಕಟ್ಟೆಯನ್ನು ಜಿಯೋ ಪ್ರವೇಶಿಸಿದ ಬಳಿಕ ದೇಶದ ನಂ 2 ಮತ್ತು ನಂ 3 ಕಂಪೆನಿಗಳಾದ ವೊಡಾಫೋನ್ ಮತ್ತು ಐಡಿಯಾ ಕಂಪೆನಿಗಳು ವಿಲೀನಗೊಂಡಿತ್ತು. ಇದಕ್ಕೂ ಮೊದಲು ಏರ್ ಟೆಲ್ ಕಂಪೆನಿ ಟೆಲಿನಾರ್ ಇಂಡಿಯಾ ಕಂಪೆನಿಯನ್ನು ಖರೀದಿಸಿತ್ತು.

    ಈಗಾಗಲೇ ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಕಮ್ಯೂನಿಕೇಶನ್ ಈಗಾಗಲೇ ಡಿಸೆಂಬರ್ 1 ರಿಂದ 2ಜಿ ಕರೆಯನ್ನು ಸ್ಥಗಿತಗೊಳಿಸುವುದಾಗಿ ಹೇಳಿದೆ.

    ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಐಡಿಯಾ ಸೆಲ್ಯುಲರ್ ಕಂಪನಿಯು 1,107 ಕೋಟಿ ರೂ. ನಷ್ಟ ಅನುಭವಿಸಿತ್ತು. ಏರ್‍ಟೆಲ್‍ನ ನಿವ್ವಳ ಲಾಭವು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ.76ರಷ್ಟು ಕುಸಿದಿದ್ದು 343 ಕೋಟಿ ರೂ. ತಲುಪಿದೆ. ರಿಲಯನ್ಸ್ ಕಮ್ಯುನಿಕೇಷನ್ಸ್ ತ್ರೈಮಾಸಿಕ ಫಲಿತಾಂಶ ಪ್ರಕಟವಾಗಿದ್ದು, 2,709 ಕೋಟಿ ರೂ. ನಷ್ಟ ದಾಖಲಾಗಿದೆ.

    ಇದನ್ನೂ ಓದಿ: ಜಿಯೋ ಎಫೆಕ್ಟ್: ಏರ್‍ಟೆಲ್‍ನಿಂದ ಟೆಲಿನಾರ್ ಕಂಪೆನಿ ಖರೀದಿ

    ಇದನ್ನೂ ಓದಿ: ಉಚಿತ ಕರೆ ನೀಡುತ್ತಿರೋ ಜಿಯೋಗೆ ಎಷ್ಟು ಕೋಟಿ ನಷ್ಟವಾಗಿದೆ? ನಷ್ಟವಾಗಿದ್ದು ಎಲ್ಲಿ?

    ಇದನ್ನೂ ಓದಿ: ಜಿಯೋ ಎಫೆಕ್ಟ್: ಐಡಿಯಾ, ವೊಡಾಫೋನ್ ಇಂಡಿಯಾ ವಿಲೀನ

    ಇದನ್ನೂ ಓದಿ: ಜಿಯೋದಿಂದಾಗಿ ಭಾರತದ ಟೆಲಿಕಾಂ ಮಾರುಕಟ್ಟೆಯಲ್ಲಿ ಆಗಿರೋ ಆ 9 ಬದಲಾವಣೆಗಳು

     

     

     

     

  • ಜಿಯೋ 4ಜಿ ಮೊಬೈಲ್ ಬುಕ್ ಮಾಡಿದ್ದೀರಾ-ಹಾಗಾದ್ರೆ ಈ ಷರತ್ತುಗಳನ್ನು ಓದಿ

    ಜಿಯೋ 4ಜಿ ಮೊಬೈಲ್ ಬುಕ್ ಮಾಡಿದ್ದೀರಾ-ಹಾಗಾದ್ರೆ ಈ ಷರತ್ತುಗಳನ್ನು ಓದಿ

    ಮುಂಬೈ: ವಿಶ್ವ ಅತ್ಯಂತ ಅಗ್ಗದ 4ಜಿ ಮೊಬೈಲ್ ಎಂಬ ಹೆಗ್ಗಳಿಕೆಯನ್ನು ಪಡೆದಿರುವ ಜಿಯೋ ತನ್ನ ಗ್ರಾಹಕರಿಗೆ ಮೊಬೈಲ್ ಫೋನ್‍ಗಳನ್ನು ಕೆಲವು ಷರತ್ತುಗಳನ್ನು ವಿಧಿಸಿ ವಿತರಣೆ ಮಾಡುತ್ತಿದೆ.

    ಹೌದು, ಜಿಯೋ ಫೋನ್ ಬಿಡುಗಡೆಯಾಗುವ ಸಂದರ್ಭದಲ್ಲಿ ರಿಲಯನ್ಸ್ ಇಂಡಸ್ಟ್ರಿಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಇದು ಉಚಿತ ಫೋನ್ ಆಗಿದ್ದು, 1500 ರೂ. ಪಾವತಿಸಿದರೆ ಮೂರು ವರ್ಷದ ಬಳಿಕ ಸಂಪೂರ್ಣ ಹಣವನ್ನು ಮರುಪಾವತಿಸಲಾಗುವುದು ಎಂದು ಘೋಷಿಸಿದ್ದರು. ಆದರೆ ಈಗ ಈ ಉಚಿತ ಫೋನ್ ಗಳನ್ನ ಪಡೆಯಲು ಜಿಯೋ ಮತ್ತಷ್ಟು ಷರತ್ತುಗಳನ್ನು ವಿಧಿಸಿದ್ದು ಆ ವಿವರಗಳನ್ನು ಇಲ್ಲಿ ನೀಡಲಾಗಿದೆ.

    ಜಿಯೋ ಷರತ್ತುಗಳು:
    1) ಜಿಯೋ 4ಜಿ ಸೇವೆಯನ್ನು ಪಡೆಯಲು ಪ್ರತಿ ವರ್ಷ ಕನಿಷ್ಟ 1500 ರೂ.ಗಳನ್ನು ರಿಚಾರ್ಜ್ ಮಾಡಿಸಿಕೊಳ್ಳಬೇಕು.

    2) ಜಿಯೋ ಫೋನ್ ಸಿಮ್‍ಲಾಕ್ ಆಗಿರುತ್ತದೆ. ಅಂದರೆ ಗ್ರಾಹಕರು ಜಿಯೋ ಫೋನ್‍ನಲ್ಲಿ ಬೇರಾವುದೇ ಸಂಸ್ಥೆಯ ಸಿಮ್‍ಗಳನ್ನು ಬಳಸಲು ಸಾಧ್ಯವಿಲ್ಲ.

    3) ಗ್ರಾಹಕರು ತಮ್ಮ ಜಿಯೋ ಫೋನ್‍ನ್ನು ಮರು ಮಾರಾಟ, ಗುತ್ತಿಗೆ, ನಿಯೋಜಿಸಲು ಮತ್ತು ವರ್ಗಾವಣೆ ಮಾಡಲು ಅವಕಾಶವನ್ನು ನೀಡಿಲ್ಲ. ಫೋನ್‍ನ ಎಲ್ಲಾ ಹಕ್ಕುಗಳು ಸಂಸ್ಥೆಗೆ ಸೇರಿರುತ್ತದೆ.

    4) 12 ತಿಂಗಳ ಒಳಗಡೆ ಫೋನ್ ಹಿಂದಿರುಗಿಸಲು ಇಚ್ಚಿಸಿದರೆ 1550 ರೂ. ಹಾಗೂ ಜಿಎಸ್‍ಟಿ ಅಥವಾ ಇತರ ತೆರಿಗೆಯನ್ನು ಪಾವತಿಸಬೇಕು.

    5) 12 ತಿಂಗಳ ನಂತರ 24 ತಿಂಗಳ ಒಳಗಡೆ ಮೊಬೈಲ್ ಹಿಂದಿರುಗಿಸಿದ್ದರೆ, 1000ರೂ. ಹಾಗೂ ಜಿಎಸ್‍ಟಿ ಇತರ ತೆರಿಗೆಯನ್ನು ಪಾವತಿಸಬೇಕು.

    6) 24 ತಿಂಗಳ ನಂತರ 36 ತಿಂಗಳ ಒಳಗಡೆ ಮೊಬೈಲ್ ಹಿಂದಿರುಗಿಸಿದ ಸಂದರ್ಭದಲ್ಲಿ ಗ್ರಾಹಕರು ಜಿಎಸ್‍ಟಿ ತೆರಿಗೆ ಮತ್ತು 500ರೂ ಗಳನ್ನು ಪಾವತಿಸಬೇಕಿದೆ. ಪ್ರಸ್ತುತ ಮೊಬೈಲ್ ಬುಕ್ಕಿಂಗ್ ವೇಳೆಯೇ 1000 ರೂ. ಹಾಗೂ ಜಿಎಸ್‍ಟಿ ತೆರಿಗೆಯನ್ನು ಪಾವತಿಸಲಾಗುತ್ತದೆ.

    7) ವರ್ಷಕ್ಕೆ ಕನಿಷ್ಟ 1500 ರೂ. ರಿಚಾರ್ಜ್ ಮಾಡದೇ ಇದ್ದಲ್ಲಿ ಅಥವಾ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಜಿಯೋ ಗ್ರಾಹಕರಿಂದ ಮೊಬೈಲ್ ಹಿಂಪಡೆಯುವ ಹಕ್ಕನ್ನು ಹೊಂದಿರುತ್ತದೆ. ಹೀಗಾಗಿ ಗ್ರಾಹಕರು ಆರಂಭಿಕ ರಿಟರ್ನ್ ಶುಲ್ಕವನ್ನು ಪಾವತಿಸಿದರೆ ಕಂಪೆನಿ ಭದ್ರತಾ ಠೇವಣಿಯನ್ನು ಹಿಂದಿರುಗಿಸುತ್ತದೆ.

    8) ಗ್ರಾಹಕರು ತಮ್ಮ ಮೊಬೈಲ್‍ನ್ನು ಪಡೆದ 36 ತಿಂಗಳ ನಂತರ ಹಿಂದಿರುಗಿಸಿ ತಮ್ಮ ಭದ್ರತಾ ಠೇವಣಿಯನ್ನು ವಾಪಸ್ ಪಡೆಯಬಹುದು. 39 ತಿಂಗಳ ವರೆಗೂ ಈ ಸೇವೆ ಲಭ್ಯವಿರಲಿದೆ. ನಂತರ ಅವಧಿಯಲ್ಲಿ ಫೋನ್ ಹಿಂಪಡೆಯಲಾಗುವುದಿಲ್ಲ.

    https://publictv.in/9-ways-reliance-jio-has-changed-indias-telecom-landscape/

  • ಜಿಯೋದಿಂದಾಗಿ ಭಾರತದ ಟೆಲಿಕಾಂ ಮಾರುಕಟ್ಟೆಯಲ್ಲಿ ಆಗಿರೋ ಆ 9 ಬದಲಾವಣೆಗಳು

    ಜಿಯೋದಿಂದಾಗಿ ಭಾರತದ ಟೆಲಿಕಾಂ ಮಾರುಕಟ್ಟೆಯಲ್ಲಿ ಆಗಿರೋ ಆ 9 ಬದಲಾವಣೆಗಳು

    ಬೆಂಗಳೂರು: 2016 ಸೆಪ್ಟೆಂಬರ್ ನಲ್ಲಿ ಆರಂಭಗೊಂಡ ರಿಲಿಯನ್ಸ್ ಜಿಯೋಗೆ ಈಗ ಒಂದು ವರ್ಷ ಪೂರ್ಣಗೊಂಡಿದೆ. ಜಿಯೋ ಆರಂಭವಾದ ಬಳಿಕ ದೇಶದ ಟೆಲಿಕಾಂ ಮಾರುಕಟ್ಟೆಯಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು ಏನು ಬದಲಾವಣೆಯಾಗಿದೆ ಎನ್ನುವ ವಿವರವನ್ನು ಇಲ್ಲಿ ನೀಡಲಾಗಿದೆ.

    1. ಮೊಬೈಲ್ ಡೇಟಾ ಬಳಕೆ:
    ಆಗಸ್ಟ್ 2016 – 1 ತಿಂಗಳಿಗೆ 20 ಕೋಟಿ ಜಿಬಿ
    ಆಗಸ್ಟ್, 2017 – 1 ತಿಂಗಳಿಗೆ 150 ಕೋಟಿ ಜಿಬಿ – ವಿಶ್ವದಲ್ಲೇ ಅತಿ ಹೆಚ್ಚು ಸಾಧ್ಯತೆ

     

    2. ಡೇಟಾ ಶುಲ್ಕ
    ಆಗಸ್ಟ್ 2016 – 1 ಜಿಬಿ ಡೇಟಾಗೆ 250 ರೂ.
    ಆಗಸ್ಟ್ 2017 – 1 ಜಿಬಿಗೆ ಡೇಟಾ 50 ರೂ.ಗಿಂತ ಕಡಿಮೆ

     

     

    3. ತಿಂಗಳ ಪೋಸ್ಟ್ ಪೇಯ್ಡ್ ಬಿಲ್
    ಡಿಸೆಂಬರ್ 2016 – 349 ರೂ.
    ಈಗ ರೂ.240 – 280 ರೂ.

    4. ವಯರ್‍ಲೆಸ್ ಬ್ರಾಂಡ್‍ಬ್ಯಾಂಡ್ ಪಡೆದುಕೊಂಡ ಗ್ರಾಹಕರ ಸಂಖ್ಯೆ
    ಆಗಸ್ಟ್ 2016 – 15.4 ಕೋಟಿ
    ಜೂನ್ 2017 -28.2 ಕೋಟಿ

    5. 4ಜಿ ಸ್ಮಾರ್ಟ್ ಫೋನ್ ಮಾರಾಟದ ಸಂಖ್ಯೆಯಲ್ಲಿ ಹೆಚ್ಚಳ
    2016ರ ಪ್ರಥಮ ತ್ರೈಮಾಸಿಕ – ಶೇ.66
    2017ರ ಪ್ರಥಮ ತ್ರೈಮಾಸಿಕ – ಶೇ.95

    6. 4ಜಿ ಫೋನ್ ಫೋನ್ ಎಷ್ಟು ಮಾರಾಟ
    ಮಾರ್ಚ್ 2016 – 47 ಲಕ್ಷ
    ಮಾರ್ಚ್ 2017 -1.31 ಕೋಟಿ

    7. ಎವರೇಜ್ ರೆವೆನ್ಯೂ ಪರ್ ಯೂಸರ್(ಎಆರ್‍ಪಿಯು)
    ಡಿಸೆಂಬರ್‍ಗೆ ಅಂತ್ಯಗೊಂಡ ತ್ರೈಮಾಸಿಕ – 141 ರೂ.
    ಮಾರ್ಚ್ ಗೆ ಅಂತ್ಯಗೊಂಡ ತ್ರೈಮಾಸಿಕ – 131 ರೂ.

    8. ಸಿಮ್ ಆ್ಯಕ್ಟಿವೇಶನ್ ಅವಧಿ
    ಆಗಸ್ಟ್ 2016 – ಕನಿಷ್ಟ 3 ದಿನ
    ಆಗಸ್ಟ್ 2017 – ಕನಿಷ್ಟ 10 ನಿಮಿಷ

    9. ಎವರೇಜ್ ರೆವೆನ್ಯೂ ಪರ್ ಯೂಸರ್(ವಾಯ್ಸ್)
    ಆಗಸ್ಟ್ 2016 – 180 ರೂ.
    ಆಗಸ್ಟ್ 2017 – 68 ರೂ.

    ಇದನ್ನೂ ಓದಿ: ಜಿಯೋಗೆ ಫೈಟ್ ನೀಡಲು ಬಿಎಸ್‍ಎನ್‍ಎಲ್‍ನಿಂದ ಹೊಸ ಬಂಪರ್ ಆಫರ್

  • ಜಿಯೋಗೆ ಫೈಟ್ ನೀಡಲು ಬಿಎಸ್‍ಎನ್‍ಎಲ್‍ನಿಂದ ಹೊಸ ಬಂಪರ್ ಆಫರ್

    ಜಿಯೋಗೆ ಫೈಟ್ ನೀಡಲು ಬಿಎಸ್‍ಎನ್‍ಎಲ್‍ನಿಂದ ಹೊಸ ಬಂಪರ್ ಆಫರ್

    ನವದೆಹಲಿ: ರಿಲಯನ್ಸ್ ಜಿಯೋ ಡೇಟಾ ಸಮರ ಆರಂಭಗೊಂಡ ಬಳಿಕ ಉಳಿದ ಕಂಪನಿಗಳು ಆಕರ್ಷಕ ಡೇಟಾ ಪ್ಯಾಕ್ ನೀಡಲು ಆರಂಭಿಸಿದ್ದು, ಈಗ ಸರ್ಕಾರಿ ಸ್ವಾಮ್ಯದ ಬಿಎಸ್‍ಎನ್‍ಎಲ್ ಗ್ರಾಹಕರಿಗೆ ಹೊಸ ಡೇಟಾ ಆಫರ್ ನೀಡಿದೆ.

    90 ದಿನಗಳ ಕಾಲ ವ್ಯಾಲಿಡಿಟಿ ಹೊಂದಿರುವ 429 ರೂ. ಹೊಸ ರಿಚಾರ್ಜ್ ಆಫರ್ ಅನ್ನು ಬಿಎಸ್‍ಎನ್‍ಎಲ್ ಪ್ರಕಟಿಸಿದೆ.

    ಈ ಆಫರ್ ಪ್ರಕಾರ 90 ದಿನಗಳ ಕಾಲ ಪಾನ್ ಇಂಡಿಯಾ(ಕೇರಳ ವಲಯ ಹೊರತು ಪಡಿಸಿ)ದಲ್ಲಿ ಪ್ರತಿದಿನ ಗರಿಷ್ಟ 1 ಜಿಬಿ ಡೇಟಾವನ್ನು ಬಳಸಬಹುದು. ಅಷ್ಟೇ ಅಲ್ಲದೇ ಈ ಅವಧಿಯಲ್ಲಿ ಹೊರ ಹೋಗುವ ಎಲ್ಲ ಎಸ್‍ಟಿಡಿ ಮತ್ತು ಸ್ಥಳೀಯ ಕರೆಗಳು ಉಚಿತವಾಗಿರಲಿದೆ ಎಂದು ಬಿಎಸ್‍ಎನ್‍ಎಲ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    ಬಿಎಸ್‍ಎನ್‍ಎಲ್ ಬೋರ್ಡ್ ನಿರ್ದೇಶಕ ಆರ್‍ಕೆ ಮಿತ್ತಲ್ ಪ್ರತಿಕ್ರಿಯಿಸಿ, ಡೇಟಾ ಮತ್ತು ಕರೆಗೆ 429 ರೂ. ಅಂದರೆ ತಿಂಗಳಿಗೆ 143 ರೂ ಇದರಲ್ಲಿ ಸಿಗುತ್ತದೆ. ಪ್ರಸ್ತುತ ಈ ಆಫರ್ ಹೆಚ್ಚು ಸ್ಪರ್ಧಾತ್ಮಕವಾಗಿದೆ ಎಂದು ಹೇಳಿದರು.

    ಇದನ್ನೂ ಓದಿ:  84 ದಿನಗಳ ಕಾಲ 84 ಜಿಬಿ ಡೇಟಾ: ಜಿಯೋದ ಹೊಸ ಆಫರ್‍ಗಳ ಸಂಪೂರ್ಣ ಮಾಹಿತಿ ಇಲ್ಲಿದೆ