Tag: jio

  • ಡೇಟಾ ಟ್ರಾಫಿಕ್‌- ಚೀನಾ ಕಂಪನಿ ಹಿಂದಿಕ್ಕಿದ  ರಿಲಯನ್ಸ್‌

    ಡೇಟಾ ಟ್ರಾಫಿಕ್‌- ಚೀನಾ ಕಂಪನಿ ಹಿಂದಿಕ್ಕಿದ ರಿಲಯನ್ಸ್‌

    ಮುಂಬೈ: ಕಳೆದ ತ್ರೈಮಾಸಿಕದಲ್ಲಿ 40.9 ಎಕ್ಸಾಬೈಟ್‌ ಡೇಟಾ ಟ್ರಾಫಿಕ್‌ (Data Traffic) ದಾಖಲಾಗುವ ಮೂಲಕ  ರಿಲಯನ್ಸ್‌ ಜಿಯೋ (Reliance Jio) ಮೈಲಿಗಲ್ಲು  ಬರೆದಿದೆ.

    ಮೊಬೈಲ್‌ ಸೇವೆಗಳ ಬಗ್ಗೆ ಅಧ್ಯಯನ ನಡೆಸುವ Tefficient ಕಂಪನಿ ಈ ವರದಿ ಪ್ರಕಾರ ಜಿಯೋ 40.9 ಎಕ್ಸಾಬೈಟ್‌ ಡೇಟಾ ಬಳಕೆಯಾಗಿದ್ದರೆ ಇಲ್ಲಿಯವರೆಗೆ ನಂಬರ್‌ 1 ಸ್ಥಾನದಲ್ಲಿದ್ದ ಚೀನಾದ ಚೀನಾ ಮೊಬೈಲ್‌ (China Mobile) 38 ಎಕ್ಸಾಬೈಟ್‌ ಡೇಟಾ ದಾಖಲಾಗಿದೆ.

    ಜಿಯೋ 10.8 ಕೋಟಿ ಗ್ರಾಹಕರನ್ನು ಹೊಂದುವ ಮೂಲಕ 5ಜಿ ಗ್ರಾಹಕರ ಪೈಕಿ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ. ಸದ್ಯ ಜಿಯೋದ 28% ಆದಾಯ 5ಜಿ ಸೇವೆಯಿಂದ ಬರುತ್ತಿದೆ.

    ಜಿಯೋದ ಏರ್‌ಫೈಬರ್‌ ಸೇವೆ 5,900 ನಗರದಲ್ಲಿ ಇದೆ. ಜಿಯೋ ಏರ್‌ಫೈಬರ್‌ನಲ್ಲಿ ಪ್ರತಿದಿನ 13 ಗಿಗಾಬೈಟ್‌ ಡೇಟಾ ಬಳಕೆ ಆಗುತ್ತಿದ್ದು, ಜಿಯೋ ಫೈಬರ್‌ಗೆ ಹೋಲಿಸಿದರೆ 30% ಹೆಚ್ಚಿದೆ

    ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಅವರು ರಿಲಯನ್ಸ್ ಜಿಯೋ ಯಶಸ್ಸಿನ ಬಗ್ಗೆ ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಆರ್ಥಿಕತೆಯನ್ನು ಬಲಪಡಿಸುವುದರ ಜೊತೆಗೆ, ಎಲ್ಲಾ ವಿಭಾಗಗಳು ದೃಢವಾದ ಹಣಕಾಸು ಮತ್ತು ಕಾರ್ಯನಿರ್ವಹಣೆಯ ಕಾರ್ಯಕ್ಷಮತೆ ದಾಖಲಿಸಿದ್ದು ಹರ್ಷದಾಯಕವಾಗಿದೆ ಎಂದಿದ್ದಾರೆ.

    5ಜಿ ಸೇವೆಗಳ ಪ್ರಾರಂಭದ ನಂತರ, ರಿಲಯನ್ಸ್ ಜಿಯೊದ ಡೇಟಾ ಬಳಕೆ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 35.2ರಷ್ಟು ಜಿಗಿತವನ್ನು ಕಂಡಿದೆ.

  • ಪೇಟಿಎಂ ವ್ಯಾಲೆಟ್‌ ಸೇವೆ ಖರೀದಿ ಮಾತುಕತೆ ನಡೆದಿಲ್ಲ – ಜಿಯೋ ಫೈನಾನ್ಸ್‌ ಅಧಿಕೃತ ಹೇಳಿಕೆ

    ಪೇಟಿಎಂ ವ್ಯಾಲೆಟ್‌ ಸೇವೆ ಖರೀದಿ ಮಾತುಕತೆ ನಡೆದಿಲ್ಲ – ಜಿಯೋ ಫೈನಾನ್ಸ್‌ ಅಧಿಕೃತ ಹೇಳಿಕೆ

    ನವದೆಹಲಿ: ಪೇಟಿಯಂ ವ್ಯಾಲೆಟ್ (Paytm Wallet) ಸೇವೆಯನ್ನು ತಾನು ಖರೀದಿ ಸಂಬಂಧ ಯಾವುದೇ ಮಾತುಕತೆ ನಡೆದಿಲ್ಲ ಎಂದು  ಜಿಯೋ ಫೈನಾನ್ಸ್‌ (Jio Finance) ಅಧಿಕೃತವಾಗಿ ತಿಳಿಸಿದೆ.

    ಪೇಮೆಂಟ್ಸ್ ಬ್ಯಾಂಕ್‌ಗೆ ಆರ್‌ಬಿಐ (RBI) ಹಲವು ನಿರ್ಬಂಧ ವಿಧಿಸಿದ ಬಳಿಕ ಪೇಟಿಎಂ ಸಾಕಷ್ಟು ನಷ್ಟಕ್ಕೆ ಸಿಲುಕಿಕೊಂಡಿದೆ. ಈ ಬೆನ್ನಲ್ಲೇ ಮುಕೇಶ್‌ ಅಂಬಾನಿ (Mukesh Ambani) ನೇತೃತ್ವದ ಜಿಯೋ ಫೈನಾನ್ಸ್‌ ಪೇಟಿಯಂ ವ್ಯಾಲೆಟ್ ಸೇವೆಯನ್ನು ಖರೀದಿಸಲಿದೆ ಎಂದು ವರದಿಯಾಗಿತ್ತು.

    ಈ ವರದಿಯ ಬೆನ್ನಲ್ಲೇ ಬಾಂಬೆ ಷೇರು ಮಾರುಕಟ್ಟೆಗೆ (BSE) ಜಿಯೋ ಫೈನಾನ್ಸಿಯಲ್‌ ಸರ್ವಿಸ್‌ ಲಿಮಿಟೆಡ್‌(JFSL) ತಾನು ಪೇಟಿಎಂ ವ್ಯಾಲೆಟ್‌ ಖರೀದಿಸುವುದಿಲ್ಲ ಎಂದು ತಿಳಿಸಿದೆ. ಖರೀದಿ ವಿಚಾರ ಕೇವಲ ಊಹಾತ್ಮಕ ಸುದ್ದಿಯಾಗಿದೆ. ಈ ವಿಷಯದಲ್ಲಿ ಯಾವುದೇ ಮಾತುಕತೆ ನಡೆಸಿಲ್ಲ ಎಂಬುದನ್ನು ನಾವು ಸ್ಪಷ್ಟಪಡಿಸುತ್ತೇವೆ ಎಂದು ತಡರಾತ್ರಿ ಜಿಯೋ ಫೈನಾನ್ಸ್‌ ಫೈಲಿಂಗ್‌ನಲ್ಲಿ ತಿಳಿಸಿದೆ. ಇದನ್ನೂ ಓದಿ: ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ 400 ಸ್ಥಾನಗಳ ಗಡಿ ದಾಟುತ್ತೆ.. ಬಿಜೆಪಿಗೆ 370 ಸೀಟು ಬರುತ್ತೆ: ಮೋದಿ ಭವಿಷ್ಯ

    ಮಾಧ್ಯಮಗಳಲ್ಲಿ ಖರೀದಿ ವರದಿ ಪ್ರಕಟವಾಗುತ್ತಿದ್ದಂತೆ ಸೋಮವಾರ ಜಿಯೋ ಫೈನಾನ್ಸ್‌ ಷೇರಿನ ಬೆಲೆ 35.30 ರೂ. (13.91%) ಏರಿಕೆಯಾಗಿ 289.05 ರೂ. ತಲುಪಿತ್ತು.

    ವ್ಯಾಲೆಟ್ ಖರೀದಿಗೆ ಸಂಬಂಧಿಸಿದಂತೆ ಪೇಟಿಯಂ ಮಾತೃ ಸಂಸ್ಥೆಯಾದ 97 ಕಮ್ಯುನಿಕೇಶನ್ ಸಂಸ್ಥೆ ಹಾಗೂ ರಿಲಯನ್ಸ್‌ ಮತ್ತು ಖಾಸಗಿ ಬ್ಯಾಂಕ್ ಹೆಚ್‌ಡಿಎಫ್‌ಸಿ ಜೊತೆ ಮಾತುಕತೆ ನಡೆಸಿದೆ ಎಂದು ವರದಿಯಾಗಿದೆ.

    ವ್ಯಾಲೆಟ್ ಸೇವೆಯನ್ನು ಖರೀದಿ ಮಾಡಲು ಜಿಯೋ ಫೈನಾನ್ಸ್ ಮತ್ತು ಹೆಚ್‌ಡಿಎಫ್‌ಸಿ ಬ್ಯಾಂಕ್‌ಗಳು ಕಳೆದ ನವೆಂಬರ್‌ನಲ್ಲೇ ಮಾತುಕತೆಗಳು ನಡೆದಿತ್ತು. ಈಗ ಆರ್‌ಬಿಐ ನಿರ್ಬಂಧ ಹೇಳಿದ ನಂತರ ಮಾತುಕತೆ ಮತ್ತೆ ಚುರುಕುಗೊಂಡಿದೆ ಎನ್ನಲಾಗಿದೆ. ಇದನ್ನೂ ಓದಿ: ನಮ್ಮ 3ನೇ ಅವಧಿಯಲ್ಲಿ ಭಾರತ ವಿಶ್ವದ ಮೂರನೇ ದೊಡ್ಡ ಆರ್ಥಿಕತೆಯ ದೇಶವಾಗಲಿದೆ: ಮೋದಿ ಭರವಸೆ

    ಕಳೆದ 3 ದಿನಗಳಲ್ಲಿ ಪೇಟಿಯಂನ ಮೌಲ್ಯ 42%ರಷ್ಟು ಕುಸಿತ ಕಂಡಿದ್ದು, 20 ಸಾವಿರ ಕೋಟಿ ನಷ್ಟ ಉಂಟುಮಾಡಿದೆ. ಕಳೆದ ಅಕ್ಟೋಬರ್‌ನಲ್ಲಿ ಪೇಟಿಎಂ ಒಂದು ಷೇರಿನ ಬೆಲೆ 998 ರೂ. ಏರಿತ್ತು. ಆದರೆ ಫೆ.5ರ ವೇಳೆ ಒಂದು ಷೇರಿನ ಮೌಲ್ಯ 438.50 ರೂ.ಗೆ ಕುಸಿದಿದೆ.

     

  • ಡಿಸೆಂಬರ್ ತ್ರೈಮಾಸಿಕ ಅಂತ್ಯಕ್ಕೆ ಜಿಯೋ ನಿವ್ವಳ ಲಾಭ 12.3%ರಷ್ಟು ಏರಿಕೆ

    ಡಿಸೆಂಬರ್ ತ್ರೈಮಾಸಿಕ ಅಂತ್ಯಕ್ಕೆ ಜಿಯೋ ನಿವ್ವಳ ಲಾಭ 12.3%ರಷ್ಟು ಏರಿಕೆ

    ಮುಂಬೈ: ಭಾರತದ ಅತ್ಯಂತ ಮೌಲ್ಯಯುತ ಕಂಪನಿ ಎನಿಸಿಕೊಂಡಿರುವ ರಿಲಯನ್ಸ್ ಇಂಡಸ್ಟ್ರೀಸ್ ನ ಟೆಲಿಕಾಂ (Reliance Industries Telecom) ಮತ್ತು ಡಿಜಿಟಲ್ ಸೇವೆಗಳ ಅಂಗವಾದ ಜಿಯೋ ಇನ್ಫೊಕಾಮ್ ಲಿಮಿಟೆಡ್ ಮೂರನೇ ತ್ರೈ ಮಾಸಿಕದ ಫಲಿತಾಂಶ ಶುಕ್ರವಾರ ಬಂದಿದೆ.

    ಈ ಹಣಕಾಸು ಫಲಿತಾಂಶವು 2023ನೇ ಇಸವಿಯ ಅಕ್ಟೋಬರ್ ನಿಂದ ಡಿಸೆಂಬರ್ ತಿಂಗಳ ಅವಧಿಯದ್ದಾಗಿದೆ. ಕಳೆದ ಹಣಕಾಸು ವರ್ಷದ ಇದೇ ಅವಧಿಗೆ ಹೋಲಿಸಿದರೆ ಜಿಯೋ ಇನ್ಫೋಕಾಮ್ ನಿವ್ವಳ ಲಾಭವು 12.3%ರಷ್ಟು ಏರಿಕೆಯಾಗಿ, 5,208 ಕೋಟಿ ರೂಪಾಯಿ ಆಗಿದೆ. ಜಿಯೋದ ಚಂದಾದಾರರ ಸಂಖ್ಯೆಯಲ್ಲಿ ಭಾರೀ ಏರಿಕೆ ಆಗಿರುವುದನ್ನು ನಿಚ್ಛಳವಾಗಿ ಗಮನಿಸಬಹುದಾಗಿದೆ.

    ಕಾರ್ಯಾಚರಣೆ ಮೂಲಕವಾಗಿ ಬರುವಂಥ ಆದಾಯವು 10.3%ರಷ್ಟು ಹೆಚ್ಚಾಗಿ, 25,368 ಕೋಟಿ ರೂಪಾಯಿಗೆ ಮುಟ್ಟಿದೆ. ಅಂದ ಹಾಗೆ ಜಿಯೋಗೆ ಪ್ರಸಕ್ತ ತ್ರೈಮಾಸಿಕದಲ್ಲಿ 1.12 ಕೋಟಿ ಚಂದಾದಾರರು ಸೇರ್ಪಡೆ ಆಗಿದ್ದು, ಒಟ್ಟು ಬಳಕೆದಾರರ ಸಂಖ್ಯೆಯು 47.09 ಕೋಟಿಗೆ ತಲುಪಿದೆ. ಇದನ್ನೂ ಓದಿ: ನಮ್ಮೂರ ಹುಡುಗ ಲೋಕಸಭೆಗೆ ಸ್ಪರ್ಧಿಸಿ ಮತ್ತೆ ಸೋಲೋದು ಇಷ್ಟವಿಲ್ಲ: ಸುಧಾಕರ್‌ಗೆ ಪ್ರದೀಪ್ ಈಶ್ವರ್ ಟಾಂಗ್

    ಜಿಯೋ ನೆಟ್ ವರ್ಕ್ ಡೇಟಾ ದಟ್ಟಣೆಯು ಡಿಸೆಂಬರ್ ತ್ರೈಮಾಸಿಕದಲ್ಲಿ 32%ರಷ್ಟು ಹೆಚ್ಚಾಗಿ, 38.1 ಎಕ್ಸಾಬೈಟ್ಸ್ ಆಗಿದೆ. ರಿಲಯನ್ಸ್ ಇಂಡಸ್ಟ್ರೀಸ್ ತೈಲದಿಂದ ರಾಸಾಯನಿಕದ ತನಕ ವಿವಿಧ ವ್ಯವಹಾರಗಳಲ್ಲಿ ತೊಡಗಿಕೊಂಡಿದ್ದು, ಉಳಿದ ವ್ಯವಹಾರಗಳಿಗೆ ಸಂಬಂಧಿಸಿದಂತೆ ಫಲಿತಾಂಶ ಘೋಷಣೆ ಆಗಬೇಕಾಗಿದೆ.

  • ಜಿಯೋ ಪ್ರೀಪೇಯ್ಡ್ ಗ್ರಾಹಕರಿಗೆ  JioTV ಪ್ರೀಮಿಯಂ ಪ್ಲ್ಯಾನ್‌ ಪರಿಚಯಿಸಿದ ರಿಲಯನ್ಸ್

    ಜಿಯೋ ಪ್ರೀಪೇಯ್ಡ್ ಗ್ರಾಹಕರಿಗೆ JioTV ಪ್ರೀಮಿಯಂ ಪ್ಲ್ಯಾನ್‌ ಪರಿಚಯಿಸಿದ ರಿಲಯನ್ಸ್

    ಬೆಂಗಳೂರು: ರಿಲಯನ್ಸ್ ಜಿಯೋದಿಂದ (Reliance Jio) ಈಗ ಜಿಯೋಟಿವಿ ಪ್ರೀಮಿಯಂ ಪ್ಲ್ಯಾನ್‌ಗಳನ್ನು (JioTV Premium Plans) ಪರಿಚಯಿಸಲಾಗುತ್ತಿದೆ. ಜಿಯೋ ಪ್ರೀಪೇಯ್ಡ್ ಬಳಕೆದಾರರು ಈಗ ಜಿಯೋಟಿವಿ ಪ್ರೀಮಿಯಂ ಪ್ಲ್ಯಾನ್‌ಗಳ ಜೊತೆಗೆ ನಿರಂತರ ಮನರಂಜನೆ ಆನಂದಿಸಬಹುದು. ಮಾಸಿಕ, ತ್ರೈಮಾಸಿಕ ಹಾಗೂ ವಾರ್ಷಿಕ ಪ್ಲ್ಯಾನ್‌ಗಳು ಇರಲಿದ್ದು, ಇದರ ಮೂಲಕ ಅನಿಯಮಿತ ಡೇಟಾ, ಧ್ವನಿ, ಎಸ್‌ಎಂಎಸ್‌ ಹಾಗೂ 14 ಪ್ರಮುಖ OTT (ಓವರ್ ದಿ ಟಾಪ್)ಗಳಿಗೆ ಚಂದಾದಾರಿಕೆ ಪಡೆಯಬಹುದು. 1,000 ರೂ. ಮೌಲ್ಯದ ಒಟಿಟಿ ಚಂದಾದಾರಿಕೆ ಯಾವುದೇ ಹೆಚ್ಚುವರಿ ಶುಲ್ಕ ಇಲ್ಲದೇ ಇದು ಲಭ್ಯವಾಗಲಿದೆ.

    ಪ್ಲ್ಯಾನ್‌ಗಳು ತಿಂಗಳಿಗೆ 398 ರೂ.ನೊಂದಿಗೆ ಆರಂಭವಾಗುತ್ತದೆ. ಅಂದ ಹಾಗೆ ಈ 14 OTT ಗಳಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಹಾಗೂ ಪ್ರಾದೇಶಿಕ ಕಂಟೆಂಟ್ ಲಭ್ಯವಾಗುತ್ತದೆ. ಡಿಜಿಟಲ್ ಟಿವಿ, ಕ್ರೀಡಾ, ಒರಿಜಿನಲ್ಸ್, ಟೀವಿ ಶೋಗಳು ಮುಂತಾದವು ದೊರೆಯುತ್ತವೆ. ಪ್ರೀಪೇಯ್ಡ್ ಸೆಗ್ಮೆಂಟ್‌ನಲ್ಲಿ ವಾರ್ಷಿಕ ಪ್ಲ್ಯಾನ್‌ ಖರೀದಿ ಮಾಡುವಂಥ ಗ್ರಾಹಕರಿಗಾಗಿಯೇ ಒನ್ ಕ್ಲಿಕ್ ಕಾಲ್ ಸೆಂಟರ್ ಬೆಂಬಲ ಸಹ ದೊರೆಯುತ್ತದೆ.

    ಯಾವ್ಯಾವ ಆ್ಯಪ್‌ಗಳು ದೊರೆಯುತ್ತವೆ?

    • ರಾಷ್ಟ್ರೀಯ ಆ್ಯಪ್‌ಗಳು: ಜಿಯೋಸಿನಿಮಾ (JioCinema) ಪ್ರೀಮಿಯಂ, ಡಿಸ್ನಿ+ ಹಾಟ್ ಸ್ಟಾರ್, ಝೀ5, ಸೋನಿಲಿವ್
    • ಅಂತಾರಾಷ್ಟ್ರೀಯ ಆ್ಯಪ್‌ಗಳು: ಪ್ರೈಮ್ ವಿಡಿಯೋ (ಮೊಬೈಲ್), ಲಯನ್ಸ್ ಗೇಟ್ ಪ್ಲೇ, ಡಿಸ್ಕವರಿ+, ಡಾಕ್ಯುಬೇ
    • ಪ್ರಾದೇಶಿಕ ಆ್ಯಪ್‌ಗಳು: ಸನ್ ನೆಕ್ಸ್ಟ್, ಹೊಯ್ ಚೊಯ್, ಪ್ಲಾನೆಟ್ ಮರಾಠಿ, ಚೌಪಾಲ್, ಎಪಿಕ್ ಆನ್, ಕಂಚಾ ಲಂಕಾ

    ಇದೊಂದು‌ ಪ್ಲ್ಯಾನ್‌ ಖರೀದಿಸಿದವರಿಗೆ ವಿವಿಧ ಒಟಿಟಿಗಳಿಗೆ ಸಬ್‌ಸ್ಕ್ರೈಬ್ ಆಗಬೇಕು ಎಂಬ ಅಗತ್ಯ ಇರುವುದಿಲ್ಲ. ಹಲವು ಲಾಗಿನ್ ಐಡಿ ಬೇಕು, ಪ್ರತಿ ಆ್ಯಪ್‌ ಗೂ ಪ್ರತ್ಯೇಕವಾಗಿ ಪಾಸ್‌ವರ್ಡ್‌ಬೇಕು ಅಂತಿಲ್ಲ. ಒಂದೇ ಕಡೆಗೆ ಎಲ್ಲ ವಿವಿಧ ಕಂಟೆಂಟ್‌ಗಳು ದೊರೆಯುತ್ತದೆ. ಇನ್ನೂ ಗ್ರಾಹಕರು ತಮಗೆ ಬೇಕಾದ ಕಂಟೆಂಟ್ ಹುಡುಕುವುದು ಸಹ ಸುಲಭವಾಗಿದ್ದು, ಶಿಫಾರಸಿಗಾಗಿಯೇ ಉತ್ತಮವಾದ ಹುಡುಕಾಟದ ಎಂಜಿನ್ ವ್ಯವಸ್ಥೆ ಇದೆ. ಅದೇ ರೀತಿ ಗ್ರಾಹಕರು ತಮ್ಮ ಆದ್ಯತೆಯಂತೆ ಮಾಸಿಕ, ತ್ರೈಮಾಸಿಕ ಹಾಗೂ ವಾರ್ಷಿಕ ಪ್ಲ್ಯಾನ್‌ಗಳ ಮಿತಿಯನ್ನು ಆರಿಸಿಕೊಳ್ಳಬಹುದು. ಒಂದೇ ಕ್ಲಿಕ್ ನಲ್ಲಿ ಕಸ್ಟಮರ್ ಕೇರ್ ಕಾಲ್ ಬ್ಯಾಕ್ ಸೇವೆ ಲಭ್ಯ ಇದ್ದು, ವಾರ್ಷಿಕ ಪ್ಲ್ಯಾನ್‌ ರೀಚಾರ್ಜ್‌ಗೆ ಇಎಂಐ ಸೌಲಭ್ಯ ಸಹ ದೊರೆಯಲಿದೆ.

    ಪ್ರೀಮಿಯಂ OTT ಕಂಟೆಂಟ್ ಬಳಸುವುದು ಹೇಗೆ?

    • ಮೊದಲಿಗೆ ಜಿಯೋಟಿವಿ ಪ್ರೀಮಿಯಂನ ಮಾಸಿಕ, ತ್ರೈಮಾಸಿಕ ಅಥವಾ ವಾರ್ಷಿಕ ಪ್ಲ್ಯಾನ್‌ನೊಂದಿಗೆ ರೀಚಾರ್ಜ್ ಮಾಡಬೇಕು
    • ಅದೇ ಜಿಯೋ ಮೊಬೈಲ್ ಫೋನ್ ಸಂಖ್ಯೆಯೊಂದಿಗೆ ಜಿಯೋ ಟಿವಿ ಆ್ಯಪ್‌ಗೆ ಸೈನ್ ಇನ್ ಆಗಬೇಕು
    • ಜಿಯೋಟಿವಿ ಪ್ರೀಮಿಯಂ ಟ್ಯಾಬ್ ಮೂಲಕವಾಗಿ ಪ್ರೀಮಿಯಂ ಒಟಿಟಿ ಆ್ಯಪ್‌ ಕಂಟೆಂಟ್ ಅನ್ನು ಆನಂದಿಸಬಹುದು
    • ಪ್ರತ್ಯೇಕವಾದ ಲಾಗಿನ್ ಅಥವಾ ಪಾಸ್‌ವರ್ಡ್ ಅಗತ್ಯ ಇಲ್ಲ.

    ಗಮನಿಸಬೇಕಾದ ಅಂಶಗಳು:

    • ಬಳಕೆದಾರರ ಮೈಜಿಯೋ ಕೂಪನ್ ವಿಭಾಗದಲ್ಲಿ ದೊರೆಯುವ ಕೂಪನ್ ಮೂಲಕವಾಗಿ ಜಿಯೋಸಿನಿಮಾ ಪ್ರೀಮಿಯಂ ಸಬ್ ಸ್ಕ್ರಿಪ್ಷನ್ ದೊರೆಯುತ್ತದೆ. ಪ್ರೀಮಿಯಂ ಕಂಟೆಂಟ್ ಬೇಕು ಅಂತಾದಲ್ಲಿ ಜಿಯೋಸಿನಿಮಾ ಆ್ಯಪ್‌ನಲ್ಲಿ ಕೂಪನ್ ರಿಡೀಮ್ ಮಾಡಬೇಕು.
    • ತಮ್ಮ ಬಳಿ ಇರುವಂಥ ಆಯಾ ಆ್ಯಪ್‌ ಮೂಲಕವಾಗಿಯೇ ಪ್ರೈಮ್ ವಿಡಿಯೋ (ಮೊಬೈಲ್) ಮತ್ತು ಡಿಸ್ನಿ+ ಹಾಟ್ ಸ್ಟಾರ್ ಕಂಟೆಂಟ್ ಗಳನ್ನು ನೋಡಬಹುದು.
    • ಮೈಜಿಯೋ ಮೂಲಕ ಬಳಕೆದಾರರು ಅಮೆಜಾನ್ ಪ್ರೈಮ್ ಸಬ್ ಸ್ಕ್ರಿಪ್ಷನ್ ಸಕ್ರಿಯಗೊಳಿಸಬೇಕಾಗುತ್ತದೆ. ಆಪ್‌ಗೆ ಲಾಗಿನ್ ಆಗುವಾಗ ಡಿಸ್ನಿ+ ಹಾಟ್ ಸ್ಟಾರ್ ಆಕ್ಟಿವೇಟ್ ಆಗುತ್ತದೆ.
    • ಈಗಾಗಲೇ ಇರುವಂಥ ಬಳಕೆದಾರರು ಹಾಗೂ ಹೊಸ ಬಳಕೆದಾರರಿಗೆ ಈ ಪ್ಲಾನ್ ದೊರೆಯಲಿದೆ. ಡಿಸೆಂಬರ್ 15ರಿಂದ ಈ ಪ್ಲ್ಯಾನ್‌ ದೊರೆಯಲಿದೆ.

  • ವಿಶ್ವದಲ್ಲೇ ಮೊದಲ ಬಾರಿಗೆ ಮೊಬೈಲ್ ಪ್ರೀಪೇಯ್ಡ್ ಪ್ಲ್ಯಾನ್‌ ಜೊತೆಗೆ ನೆಟ್‌ಫ್ಲಿಕ್ಸ್‌ ಸಬ್‌ಸ್ಕ್ರಿಪ್ಷನ್ ಪರಿಚಯಿಸುತ್ತಿದೆ Reliance Jio

    ವಿಶ್ವದಲ್ಲೇ ಮೊದಲ ಬಾರಿಗೆ ಮೊಬೈಲ್ ಪ್ರೀಪೇಯ್ಡ್ ಪ್ಲ್ಯಾನ್‌ ಜೊತೆಗೆ ನೆಟ್‌ಫ್ಲಿಕ್ಸ್‌ ಸಬ್‌ಸ್ಕ್ರಿಪ್ಷನ್ ಪರಿಚಯಿಸುತ್ತಿದೆ Reliance Jio

    ನವದೆಹಲಿ: ಇದೀಗ ನೆಟ್‌ಫ್ಲಿಕ್ಸ್‌ ಸಬ್‌ಸ್ಕ್ರಿಪ್ಷನ್ (Netflix Subscriptions) ಜೊತೆಗೆ ಬರುವಂತಹ ಎರಡು ಹೊಸ ʻಜಿಯೋ-ನೆಟ್‌ಫ್ಲಿಕ್ಸ್ ಪ್ರಿಪೇಯ್ಡ್ʼ ಯೋಜನೆಗಳನ್ನು ರಿಲಯನ್ಸ್ ಜಿಯೋ ಬಿಡುಗಡೆ ಮಾಡಿದೆ. 1,099 ರೂ. ಬೆಲೆಯ ಯೋಜನೆಯೊಂದಿಗೆ ಗ್ರಾಹಕರು ದಿನಕ್ಕೆ 2 GB ಡೇಟಾ ಪಡೆಯುತ್ತಾರೆ. ಇದೇ ರೀತಿ 1,499 ರೂ.ಳ ಯೋಜನೆಯೊಂದಿಗೆ, ಕಂಪನಿಯು ದಿನಕ್ಕೆ 3 ಜಿಬಿ ಡೇಟಾ ನೀಡುತ್ತಿದೆ. ಎರಡೂ ಯೋಜನೆಗಳ ಮಾನ್ಯತೆ 84 ದಿನಗಳು ಆಗಿರುತ್ತದೆ. ಆಯ್ದ ಜಿಯೋ ಪೋಸ್ಟ್‌ಪೇಯ್ಡ್ (Jio Postpaid) ಮತ್ತು ಜಿಯೋ ಫೈಬರ್ ಯೋಜನೆಗಳಲ್ಲಿ ನೆಟ್‌ಫ್ಲಿಕ್ಸ್ ಸಬ್‌ಸ್ಕ್ರಿಪ್ಷನ್ ಈಗಾಗಲೇ ಲಭ್ಯವಿದ್ದರೂ ಪ್ರಿಪೇಯ್ಡ್ ಯೋಜನೆಗಳಲ್ಲಿ ನೆಟ್‌ಫ್ಲಿಕ್ಸ್ ಸಬ್ ಸ್ಕ್ರಿಪ್ಷನ್ ಲಭ್ಯ ಇರುವುದು ಇದೇ ಮೊದಲಾಗಿದೆ.

    ವಿಶ್ವದಲ್ಲೇ ಮೊದಲ ಬಾರಿಗೆ ಎಂಬಂತೆ ನೆಟ್‌ಫ್ಲಿಕ್ಸ್ ಅನ್ನು ಪ್ರೀಪೇಯ್ಡ್ ಪ್ಲ್ಯಾನ್‌ ಜೊತೆಗೆ ನೀಡುತ್ತಿರುವ ಮೊದಲ ಟೆಲಿಕಾಂ ಆಪರೇಟರ್ ಜಿಯೋ ಆಗಿದೆ. ಇದರೊಂದಿಗೆ ಜಿಯೋದ 400 ಮಿಲಿಯನ್, ಅಂದರೆ 40 ಕೋಟಿ ಪ್ರಿಪೇಯ್ಡ್ ಗ್ರಾಹಕರು ನೆಟ್‌ಫ್ಲಿಕ್ಸ್ ಸಬ್‌ಸ್ಕ್ರಿಪ್ಷನ್ ಜೊತೆಗೆ ಯೋಜನೆಗಳನ್ನ ಆಯ್ಕೆ ಮಾಡುವ ಅವಕಾಶ ಪಡೆಯುತ್ತಾರೆ. ನೆಟ್‌ಫ್ಲಿಕ್ಸ್‌ನೊಂದಿಗೆ ಗ್ರಾಹಕರು ಹಾಲಿವುಡ್‌ನಿಂದ ಬಾಲಿವುಡ್ ತನಕ ಜನಪ್ರಿಯ ಟಿವಿ ಶೋಗಳು, ಭಾರತೀಯ ಪ್ರಾದೇಶಿಕ ಚಲನಚಿತ್ರಗಳು ಮತ್ತು ಇನ್ನೂ ಹೆಚ್ಚಿನದ್ದನ್ನು ತಮ್ಮ ಮೊಬೈಲ್ ಸಾಧನದಲ್ಲಿ ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ವೀಕ್ಷಿಸಲು ಸಾಧ್ಯವಾಗುತ್ತದೆ. ಜಿಯೋದ ಇತರ ಯೋಜನೆಗಳಂತೆ ಗ್ರಾಹಕರು ಆನ್‌ಲೈನ್ ಅಥವಾ ಆಫ್‌ಲೈನ್ ರೀಚಾರ್ಜ್ ಸೌಲಭ್ಯವನ್ನು ಎರಡೂ ಯೋಜನೆಗಳಲ್ಲಿ ಪಡೆಯುತ್ತಾರೆ.

    ಈ ಯೋಜನೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್‌ನ ಸಿಇಒ ಕಿರಣ್ ಥಾಮಸ್, ನಮ್ಮ ಗ್ರಾಹಕರಿಗೆ ವಿಶ್ವ ದರ್ಜೆಯ ಸೇವೆಗಳನ್ನು ತರಲು ನಾವು ಬದ್ಧರಾಗಿದ್ದೇವೆ. ನಮ್ಮ ಪ್ರಿಪೇಯ್ಡ್ ಯೋಜನೆಗಳೊಂದಿಗೆ ನೆಟ್‌ಫ್ಲಿಕ್ಸ್‌ನ ಪ್ರಾರಂಭವು ನಮ್ಮ ಸಂಕಲ್ಪ ತೋರಿಸುವಂಥ ಮತ್ತೊಂದು ಹಂತವಾಗಿದೆ. ನೆಟ್‌ಫ್ಲಿಕ್ಸ್‌ನಂತಹ ಜಾಗತಿಕ ಪಾಲುದಾರರೊಂದಿಗೆ ನಮ್ಮ ಸಹಭಾಗಿತ್ವವು ಬಲವಾಗಿ ಬೆಳೆದಿದೆ ಮತ್ತು ಪ್ರಪಂಚದ ಉಳಿದ ಭಾಗಗಳಲ್ಲಿ ಇದನ್ನ ಅನುಸರಿಸಲು ನಾವು ಬಳಕೆಯ ಮೊದಲ ಪ್ರಕರಣವನ್ನ ರೂಪಿಸುತ್ತಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: Aditya-L1: ಚಂದ್ರಯಾನ ಆಯ್ತು – ಈಗ ಸೂರ್ಯ ಸವಾರಿಯತ್ತ ಇಸ್ರೋ ಚಿತ್ತ

    ನೆಟ್‌ಫ್ಲಿಕ್ಸ್‌ನ ಏಷ್ಯಾ ಪೆಸಿಫಿಕ್ (ಎಪಿಎಸಿ) ಪಾಲುದಾರಿಕೆಗಳ ಉಪಾಧ್ಯಕ್ಷ ಟೋನಿ ಜೆಮ್‌ಕೋವ್ ಸ್ಕಿ, ʻಜಿಯೋ ಜೊತೆಗಿನ ನಮ್ಮ ಸಂಬಂಧವನ್ನ ವಿಸ್ತರಿಸಲು ನಾವು ರೋಮಾಂಚಿತರಾಗಿದ್ದೇವೆ. ವರ್ಷಗಳಲ್ಲಿ, ನಮ್ಮ ಹಲವಾರು ಯಶಸ್ವಿ ಸ್ಥಳೀಯ ಶೋಗಳು, ಸಾಕ್ಷ್ಯಚಿತ್ರಗಳು ಮತ್ತು ಚಲನಚಿತ್ರಗಳನ್ನ ಭಾರತದಾದ್ಯಂತ ಪ್ರೇಕ್ಷಕರು ಇಷ್ಟಪಡುತ್ತಿದ್ದಾರೆ. ಜಿಯೋ ಜೊತೆಗಿನ ನಮ್ಮ ಹೊಸ ಪ್ರಿಪೇಯ್ಡ್ ಜೊತೆಗೆ ನೀಡುವಂತಹ ಈ ಯೋಜನೆ ಪಾಲುದಾರಿಕೆಯು ಗ್ರಾಹಕರಿಗೆ ಭಾರತೀಯ ಕಂಟೆಂಟ್ ಮತ್ತು ಪ್ರಪಂಚದಾದ್ಯಂತದ ಕಂಟೆಂಟ್‌ಗಳಿಗೆ ಸಂಪರ್ಕವನ್ನು ನೀಡುತ್ತದೆ ಎಂದರು. ಇದನ್ನೂ ಓದಿ: Chandrayaan-3; ರಾಜ್ಯದ ಎಲ್ಲಾ ಶಾಲೆಗಳಲ್ಲೂ ಲ್ಯಾಂಡಿಂಗ್‌ ನೇರ ಪ್ರಸಾರ: ಯೋಗಿ ಆದಿತ್ಯನಾಥ್‌

    ಗ್ರಾಹಕರು ಬಯಸಿದರೆ ನೆಟ್‌ಫ್ಲಿಕ್ಸ್ ಅಪ್ಲಿಕೇಷನ್ ಅನ್ನು ಬಹು ಸಾಧನಗಳಲ್ಲಿ ಡೌನ್‌ಲೋಡ್ ಮಾಡಬಹುದು ಮತ್ತು ಅದೇ ಲಾಗಿನ್ ಕ್ರೆಡೆನ್ಷಿಯಲ್ಸ್‌ಗಳೊಂದಿಗೆ ಬಳಸಬಹುದು. ಆದ್ರೆ ಇದನನ್‌ ಒಂದು ಸಮಯದಲ್ಲಿ, ಒಂದು ಸಾಧನದಲ್ಲಿ ಮಾತ್ರ ವೀಕ್ಷಿಸಬಹುದು. 1,499 ರೂ.ನ ಯೋಜನೆಯಲ್ಲಿ ಟಿವಿ ಅಥವಾ ಲ್ಯಾಪ್‌ಟಾಪ್‌ನಂತಹ ಯಾವುದೇ ದೊಡ್ಡ ಪರದೆಯ ಮೇಲೆ ನೆಟ್‌ಫ್ಲಿಕ್ಸ್ ಅನ್ನು ಸ್ಟ್ರೀಮ್ ಮಾಡಬಹುದು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • JioBook: 16,499 ರೂ.ಗೆ ಸಿಗಲಿದೆ ಭಾರತದ ಪ್ರಥಮ ಡಿಜಿಟಲ್ ಕಲಿಕಾ ಬುಕ್..!

    JioBook: 16,499 ರೂ.ಗೆ ಸಿಗಲಿದೆ ಭಾರತದ ಪ್ರಥಮ ಡಿಜಿಟಲ್ ಕಲಿಕಾ ಬುಕ್..!

    – ಆಗಸ್ಟ್ 5 ರಿಂದ ಜಿಯೋಬುಕ್ ಲಭ್ಯ
    – ರಿಲಯನ್ಸ್ ಡಿಜಿಟಲ್‍ನ ಆನ್‍ಲೈನ್, ಆಫ್‍ಲೈನ್ ಮಳಿಗೆಗಳು, ಅಮೆಜಾನ್ ತಾಣದಲ್ಲಿ ಖರೀದಿಸಿ

    ಲ್ಲ ವಯೋಮಾನದವರ ಅಗತ್ಯಗಳನ್ನು ಪೂರೈಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿರುವ, ಕ್ರಾಂತಿಕಾರಕ ಡಿಜಿಟಲ್ ಕಲಿಕಾ ಬುಕ್ ‘ಜಿಯೋಬುಕ್’ ಅನ್ನು ರಿಲಯನ್ಸ್ ರೀಟೇಲ್ ಹೊರತಂದಿದೆ. ಅತ್ಯಾಧುನಿಕ ‘ಜಿಯೋಒಎಸ್’ (JioOS) ಕಾರ್ಯಾಚರಣಾ ವ್ಯವಸ್ಥೆ, ಆಕರ್ಷಕ ವಿನ್ಯಾಸ ಮತ್ತು ಸದಾ-ಸಂಪರ್ಕಿತವಾಗಿರುವ ವೈಶಿಷ್ಟ್ಯಗಳೊಂದಿಗೆ, ಪ್ರತಿಯೊಬ್ಬರ ಕಲಿಕೆಯ ಅನುಭವವನ್ನೇ ಬದಲಾಯಿಸುವ ಭರವಸೆಯನ್ನು ಜಿಯೋಬುಕ್ (JioBook) ನೀಡುತ್ತದೆ.

    ಆನ್‍ಲೈನ್ ತರಗತಿಗಳಿಗೆ ಹಾಜರಾಗುವುದು, ಕೋಡ್ ಕಲಿಕೆ ಅಥವಾ ಯೋಗ ಸ್ಟುಡಿಯೋ ಆರಂಭಿಸುವುದು ಇಲ್ಲವೇ ಆನ್‍ಲೈನ್ ವ್ಯಾಪಾರ ಶುರು ಮಾಡುವುದು- ಎಲ್ಲ ಸಾಧ್ಯತೆಗಳಿಗೂ ಜಿಯೋಬುಕ್ ಸೂಕ್ತ ವೇದಿಕೆಯನ್ನು ಒದಗಿಸುತ್ತದೆ. ”ಕಲಿಕೆಯ ಹಾದಿಯಲ್ಲಿರುವ ಎಲ್ಲ ವಯೋಮಾನದವರಿಗೆ ಬಲ ನೀಡುವ ಮತ್ತು ಪೂರಕವಾಗುವ ನವೀನ ಉತ್ಪನ್ನಗಳನ್ನು ಪರಿಚಯಿಸಲು ನಾವು ಬದ್ಧರಾಗಿದ್ದೇವೆ. ಜಿಯೋಬುಕ್ ನಮ್ಮ ಹೊಚ್ಚ ಹೊಸ ಉತ್ಪನ್ನವಾಗಿದ್ದು, ಅತ್ಯಾಧುನಿಕ ಗುಣವೈಶಿಷ್ಟ್ಯಗಳು ಮತ್ತು ಸೀಮಾತೀತವಾದ ಸಂಪರ್ಕ ಸಂವಹನದ ಆಯ್ಕೆಗಳೊಂದಿಗೆ ಎಲ್ಲ ವಯೋಮಾನದ ಕಲಿಕಾರ್ಥಿಗಳ ಬೇಡಿಕೆಗೆ ಇದು ಸ್ಪಂದಿಸುತ್ತದೆ. ಜನರು ಕಲಿಯುವ ವಿಧಾನವನ್ನೇ ಜಿಯೋಬುಕ್ ಬದಲಾಯಿಸುತ್ತದೆ ಮತ್ತು ವೈಯಕ್ತಿಕ ಬೆಳವಣಿಗೆ ಹಾಗೂ ಕೌಶಲ್ಯಾಭಿವೃದ್ಧಿಗೆ ಹೊಸ ಅವಕಾಶಗಳನ್ನು ಒದಗಿಸುತ್ತದೆ ಎಂಬ ವಿಶ್ವಾಸ ನಮ್ಮದು” ಎಂದು ರಿಲಯನ್ಸ್ ರೀಟೇಲ್ ವಕ್ತಾರರು ತಿಳಿಸಿದ್ದಾರೆ.

    ಬಳಕೆದಾರರ ಸೌಕರ್ಯ ಮತ್ತು ಅನುಕೂಲಕ್ಕೆ ಅನುಗುಣವಾಗಿ ವಿನ್ಯಾಸಗೊಂಡಿರುವ ಜಿಯೋ ಒಎಸ್ (ಕಾರ್ಯಾಚರಣಾ ವ್ಯವಸ್ಥೆ)ಯ ಪ್ರಮುಖ ವೈಶಿಷ್ಟ್ಯಗಳು ಈ ಕೆಳಗಿನಂತಿವೆ:
    1. 4G-LTE ಹಾಗೂ ಡ್ಯುಯಲ್ ಬ್ಯಾಂಡ್ WiFi ಸಾಮರ್ಥ್ಯ – ಸೀಮಾತೀತ ಅಂತರಜಾಲ ಸಂಪರ್ಕದೊಂದಿಗೆ, ದೇಶದ ಮೂಲೆಮೂಲೆಯಲ್ಲೂ ಕಲಿಕೆಗೆ ಅಡ್ಡಿಯಿಲ್ಲದಂತೆ ಸದಾ ಸಂಪರ್ಕಿತರಾಗಿರಲು ಅನುಕೂಲ
    2. ಕಲ್ಪನೆಗೆ ಅನುಗುಣವಾಗಿ ವರ್ತಿಸುವ ಇಂಟರ್‌ಫೇಸ್
    3. 75+ ಕೀಬೋರ್ಡ್ ಶಾರ್ಟ್‌ಕಟ್‌ಗಳು
    4. ಟ್ರ್ಯಾಕ್‌ಪ್ಯಾಡ್ ಸನ್ನೆಗಳು
    5. ಸ್ಕ್ರೀನ್ ವಿಸ್ತರಣೆ
    6. ವೈರ್‌ಲೆಸ್ ಪ್ರಿಂಟಿಂಗ್
    7. ಮಲ್ಟಿ-ಟಾಸ್ಕಿಂಗ್ ಸ್ಕ್ರೀನ್‌ಗಳು
    8. ಏಕೀಕೃತ ಚಾಟ್‌ಬಾಟ್
    9. ಜಿಯೋ ಟಿವಿ ಆ್ಯಪ್ ಮೂಲಕ ಶೈಕ್ಷಣಿಕ ವಿಷಯಗಳಿಗೆ ಪ್ರವೇಶಾವಕಾಶ
    10. ಜಿಯೋ ಕ್ಲೌಡ್ ಗೇಮ್ಸ್ ಮೂಲಕ ಪ್ರಮುಖ ಗೇಮ್‌ಗಳು
    11. JioBIAN ಎಂಬ ಸಿದ್ಧ ಕೋಡಿಂಗ್ ವಲಯದೊಂದಿಗೆ, C/C++, ಜಾವಾ, ಪೈಥಾನ್, ಮತ್ತು ಪರ್ಲ್ ಮುಂತಾದ ವಿಭಿನ್ನ ಭಾಷೆಗಳಲ್ಲಿ ವಿದ್ಯಾರ್ಥಿಗಳು ಸುಲಭವಾಗಿ ಕೋಡಿಂಗ್ ಕಲಿಯಬಹುದು.

    ಸರಿಸಾಟಿಯಿಲ್ಲದ ವಿನ್ಯಾಸ ಮತ್ತು ಕಾರ್ಯಕ್ಷಮತೆ: ಜಿಯೋ ಬುಕ್‌ನ ಪ್ರಮುಖ ವೈಶಿಷ್ಟ್ಯಗಳಲ್ಲೊಂದು ಎಂದರೆ ಮ್ಯಾಟ್ ಫಿನಿಶ್, ಅಲ್ಟ್ರಾ ಸ್ಲಿಮ್ ಬಿಲ್ಟ್ ಇರುವ ಆಕರ್ಷಕ ವಿನ್ಯಾಸ, ಜೊತೆಗೆ ತೀರಾ ಹಗುರ (990 ಗ್ರಾಂ.). ಸ್ಲಿಮ್ ಆಗಿದ್ದರೂ, 2.0 GHz ಒಕ್ಟಾ ಕೋರ್ ಪ್ರೊಸೆಸರ್, 4 GB LPDDR4 RAM, 64GB (ಎಸ್‌ಡಿ ಕಾರ್ಡ್ ಮೂಲಕ 256GB ವರೆಗೂ ವಿಸ್ತರಿಸಬಹುದು) ಸ್ಟೋರೇಜ್, ಇನ್ಫಿನಿಟಿ ಕೀಬೋರ್ಡ್, ದೊಡ್ಡದಾದ, ಹಲವು ಸನ್ನೆಗಳಿಗೆ ಅನುಕೂಲವಿರುವ ಟ್ರ್ಯಾಕ್‌ಪ್ಯಾಡ್ ಮತ್ತು ಅಂತರ್-ನಿರ್ಮಿತ USB/HDMI ಪೋರ್ಟ್‌ಗಳ ಮೂಲಕ ಅದ್ಭುತ ಕಾರ್ಯನಿರ್ವಹಣೆಯನ್ನು ನೀಡುತ್ತದೆ.

    ಜಿಯೋಬುಕ್ ಹಾರ್ಡ್‍ವೇರ್ ವೈಶಿಷ್ಟ್ಯಗಳು:
    1. ನವೀನತಮ ಕಾರ್ಯಾಚರಣಾ ವ್ಯವಸ್ಥೆ – JioOS
    2. 4G ಮತ್ತು ಡ್ಯುಯಲ್ ಬ್ಯಾಂಡ್ WiFi ಸಂಪರ್ಕತೆ
    3. ಅಲ್ಟ್ರಾ ಸ್ಲಿಮ್, ಅತ್ಯಂತ ಹಗುರ (990 ಗ್ರಾಂ) ಮತ್ತು ಅತ್ಯಾಧುನಿಕ ವಿನ್ಯಾಸ
    4. ಸುಲಲಿತ ಮಲ್ಟಿಟಾಸ್ಕಿಂಗ್‌ಗಾಗಿ ಶಕ್ತಿಶಾಲಿ ಒಕ್ಟಾ ಕೋರ್ ಚಿಪ್‌ಸೆಟ್
    5. 11.6” (29.46CM) ಆ್ಯಂಟಿ-ಗ್ಲೇರ್ HD ಡಿಸ್‌ಪ್ಲೇ
    6. ಇನ್ಫಿನಿಟಿ ಕೀಬೋರ್ಡ್ ಮತ್ತು ಅಗಲವಾದ, ಬಹು ಸನ್ನೆಗಳಿಗೆ ಅನುಕೂಲವಿರುವ ಟ್ರ್ಯಾಕ್‌ಪ್ಯಾಡ್
    7. USB, HDMI ಮತ್ತು ಆಡಿಯೋ ಪೋರ್ಟ್‌ಗಳು

    ಲಭ್ಯತೆ:
    1. ಜಿಯೋಬುಕ್ ರೂ.16,499 ಬೆಲೆಯಲ್ಲಿ 2023 ಆಗಸ್ಟ್ 5ರಿಂದ ಲಭ್ಯವಿದೆ.
    2. ಗ್ರಾಹಕರು ರಿಲಯನ್ಸ್ ಡಿಜಿಟಲ್‌ನ ಆನ್‌ಲೈನ್ ಹಾಗೂ ಆಫ್‌ಲೈನ್ ಮಳಿಗೆಗಳಿಂದ ಮತ್ತು Amazon.in ತಾಣದಿಂದ ಜಿಯೋಬುಕ್ ಖರೀದಿಸಬಹುದು.
    3. ಹೆಚ್ಚಿನ ಮಾಹಿತಿಗಾಗಿ www.jiobook.com ಸಂಪರ್ಕಿಸಿ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜಸ್ಟ್‌ 999 ರೂ.ಗೆ ಜಿಯೋ ಭಾರತ್‌ 4ಜಿ ಫೋನ್‌ ಬಿಡುಗಡೆ – ಗುಣ ವೈಶಿಷ್ಟ್ಯಗಳೇನು?

    ಜಸ್ಟ್‌ 999 ರೂ.ಗೆ ಜಿಯೋ ಭಾರತ್‌ 4ಜಿ ಫೋನ್‌ ಬಿಡುಗಡೆ – ಗುಣ ವೈಶಿಷ್ಟ್ಯಗಳೇನು?

    ಮುಂಬೈ: 2ಜಿ ಮುಕ್ತ ಭಾರತ ನಿರ್ಮಾಣಕ್ಕೆ ಜಿಯೋ (Jio) ಕಂಪನಿ 999 ರೂ.ಗಳಿಗೆ ಎರಡು 4ಜಿ ಫೀಚರ್‌ (4G Feature Phone) ಫೋನ್‌ ಬಿಡುಗಡೆ ಮಾಡಿದೆ.

    ಸ್ಮಾರ್ಟ್‌ಫೋನ್‌ ತಯಾರಕ ಕಂಪನಿ ಕಾರ್ಬನ್‌ (Karbonn) ಜೊತೆಗೂಡಿ ಜಿಯೋ ಭಾರತ್‌ ವಿ2 (JioBharat V2) ಮತ್ತು ಜಿಯೋ ಭಾರತ್‌ ಕೆ1 ಕಾರ್ಬನ್‌ (JioBharat K1 Karbonn) ಹೆಸರಿನಲ್ಲಿ ಫೋನ್‌ ಬಿಡುಗಡೆ ಮಾಡಿದೆ. ಮೊದಲ 10 ಲಕ್ಷ ಫೋನ್‌ಗಳ ಮಾರಾಟ ಜುಲೈ 7 ರಿಂದ ಆರಂಭವಾಗಲಿದ್ದು ರಿಟೇಲ್‌ ಸ್ಟೋರ್‌ಗಳಲ್ಲಿ ಲಭ್ಯವಿರಲಿದೆ.

    ಜೆಯೋ ಭಾರತ್‌ ಕೆ1 ಬೂದು ಮತ್ತು ಕೆಂಪು ಬಣ್ಣದಲ್ಲಿ ಲಭ್ಯವಿದ್ದು ಹಿಂದುಗಡೆ ಕಾರ್ಬನ್‌ ಲೋಗೋ ಇದೆ. ಜಿಯೋ ಭಾರತ್‌ ವಿ2 ನೀಲಿ ಮತ್ತು ಕಪ್ಪು ಬಣ್ಣದಲ್ಲಿ ಲಭ್ಯವಿದ್ದು ಹಿಂದುಗಡೆ ಜಿಯೋ ಲೋಗೋವಿದೆ. ಇದನ್ನೂ ಓದಿ: 65 ಸಾವಿರ ಗಡಿ ದಾಟಿ ದಾಖಲೆ ಬರೆದ ಸೆನ್ಸೆಕ್ಸ್‌ – ಒಂದೇ ದಿನ ಹೂಡಿಕೆದಾರರ ಸಂಪತ್ತು 2 ಲಕ್ಷ ಕೋಟಿ ಹೆಚ್ಚಳ

    ಈ ಫೋನ್‌ಗಳು ಫೀಚರ್‌ ಫೋನಿನಂತೆ ಕಂಡರೂ 4ಜಿ ನೆಟ್‌ವರ್ಕ್‌ ಅನ್ನು ಬೆಂಬಲಿಸುತ್ತದೆ. 22 ಭಾಷೆಗಳನ್ನು ಬೆಂಬಲಿಸುವ ಜಿಯೋ ಭಾರತ್‌ ವಿ2 ಫೋನ್‌ 4.5 ಸೆ.ಮೀ ಸ್ಕ್ರೀನ್‌, ಎಚ್‌ಡಿ ವಾಯ್ಸ್‌ ಕಾಲಿಂಗ್‌, ಪವರ್‌ಫುಲ್‌ ಲೌಡ್‌ ಸ್ಪೀಕರ್‌ ಮತ್ತು ಟಾರ್ಚ್‌, 71 ಗ್ರಾಂ ತೂಕ, 1,000 ಎಂಎಎಚ್‌ ಬ್ಯಾಟರಿ, 3.5 ಎಂಎಂ ಹೆಡ್‌ಫೋನ್‌ ಜ್ಯಾಕ್‌, 0.3 ಮೆಗಾ ಪಿಕ್ಸೆಲ್‌ ಕ್ಯಾಮೆರಾ, 128 ಜಿಬಿವರೆಗೆ ವಿಸ್ತರಣೆ ಮಾಡಬಹುದಾದ ಶೇಖರಣಾ ಸಾಮರ್ಥ್ಯ ಹೊಂದಿದೆ.

    ಜಿಯೋ ಸಿನಿಮಾ ಆಪ್‌ ಮೂಲಕ ಸಿನಿಮಾ ವೀಕ್ಷಿಸಬಹುದು. ಜಿಯೋ ಸಾವನ್‌ ಆಪ್‌ ಮೂಲಕ 8 ಕೋಟಿ ಹಾಡು ಕೇಳಬಹುದು. ಜಿಯೋ ಪೇ ಮೂಲಕ ಯುಪಿಐ ಪಾವತಿ ಮಾಡಬಹುದು.

     

    ಜಿಯೋ ಭಾರತ್‌ ಫೋನಿಗೆ ಜಿಯೋ 123 ರೂ. ಮತ್ತು 1,234 ರೂಪಾಯಿಯ ಎರಡು ಪ್ಲ್ಯಾನ್‌ ಬಿಡುಗಡೆ ಮಾಡಿದೆ. 123 ರೂ ರಿಚಾರ್ಜ್‌ ಮಾಡಿದರೆ 28 ದಿನಗಳ ಅನ್‌ಲಿಮಿಟೆಡ್‌ ಕರೆ, 14 ಜಿಬಿ ಡೇಟಾ (ಒಂದು ದಿನಕ್ಕೆ 0.5 ಜಿಬಿ ಡೇಟಾ) ಸಿಗಲಿದೆ. ವಾರ್ಷಿಕ 1234 ರೂ. ರಿಚಾರ್ಜ್‌ ಮಾಡಿದರೆ ಅನ್‌ಲಿಮಿಟೆಡ್‌ ಕರೆ, 168 ಜಿಬಿ ಡೇಟಾ (ಒಂದು ದಿನಕ್ಕೆ 0.5 ಜಿಬಿ ಡೇಟಾ) ಸಿಗಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Exclusive- ಜಿಯೋ ಸ್ಟುಡಿಯೋಸ್ ಕನ್ನಡದ ಮುಖ್ಯಸ್ಥರಾದ ಪರಮೇಶ್ವರ್ ಗುಂಡ್ಕಲ್

    Exclusive- ಜಿಯೋ ಸ್ಟುಡಿಯೋಸ್ ಕನ್ನಡದ ಮುಖ್ಯಸ್ಥರಾದ ಪರಮೇಶ್ವರ್ ಗುಂಡ್ಕಲ್

    ಹೊಸ ಹೊಸ ಯೋಜನೆಗಳನ್ನು ಮಾಡುವ ಮೂಲಕ ಕನ್ನಡ ಕಿರುತೆರೆ ಜಗತ್ತಿನಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದ್ದ ಪರಮ್ ಗುಂಡ್ಕಲ್ (Parameshwar Gundkal) ಕಲರ್ಸ್ ಕನ್ನಡ ವಾಹಿನಿಗೆ ರಾಜೀನಾಮೆ ನೀಡಿದ್ದಾರೆ. ಹಾಗಂತ ಭಾವುಕರಾಗಿ ಪರಮ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ವಾಹಿನಿಯ ಉನ್ನತಸ್ಥಾನದಲ್ಲಿ ಇದ್ದವರು ರಾಜೀನಾಮೆ ನೀಡಿ ಏನು ಮಾಡುತ್ತಾರೆ ಎನ್ನುವ ಪ್ರಶ್ನೆ ಹಲವರಲ್ಲಿತ್ತು. ಅದಕ್ಕೂ ಉತ್ತರ ಸಿಕ್ಕಿದೆ.

    ಕಲರ್ಸ್ ಕನ್ನಡ ವಾಹಿನಿಯ ಮುಖ್ಯಸ್ಥರಾಗಿದ್ದ ಪರಮ್, ವಾಹಿನಿಯ ಕೆಲಸಕ್ಕೆ ರಾಜೀನಾಮೆ ನೀಡಿದ್ದರೂ ಅದೇ ಮಾತೃಸಂಸ್ಥೆಯ ಮತ್ತೊಂದು ವಿಭಾಗಕ್ಕೆ ಮುಖ್ಯಸ್ಥರಾಗಿ ನೇಮಕವಾಗಿದ್ದಾರೆ. ಇಂದಿನಿಂದ ಜಿಯೋ ಸ್ಟುಡಿಯೋಸ್ (Jio Studios)ಕನ್ನಡ ಬ್ಯುಸಿನೆಸ್ ಹೆಡ್ ಆಗಿ ಕೆಲಸ ಆರಂಭಿಸಿದ್ದು, ಹತ್ತಾರ ಕನಸುಗಳೊಂದಿಗೆ ಈ ಜವಾಬ್ದಾರಿಯನ್ನು ಅವರು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ವಾಹಿನಿಯಲ್ಲಿ ಇರುವಾಗಲೇ ಸಿನಿಮಾ ನಿರ್ಮಾಣ ಮತ್ತು ನಿರ್ದೇಶನ ಮಾಡುವ ಕನಸು ಕಂಡಿದ್ದವರು ಪರಮ್. ಹಾಗಾಗಿ ಈ ನೂತನ ಜವಾಬ್ದಾರಿಯನ್ನು ವಯಾಕಾಮ್ 18 ಮುಖ್ಯಸ್ಥರು ಪರಮ್ ಅವರಿಗೆ ನೀಡಿದ್ದಾರೆ ಎನ್ನುವುದು ಸಿಕ್ಕಿರುವ ಮಾಹಿತಿ.

    ಹೊಸ ಹೊಸ ಪ್ರಯೋಗಗಳ ಮೂಲಕ ಗೆಲುವು ಕಂಡಿರುವ ಪರಮ್,  ಸದಾ ಹೊಸತನಕ್ಕೆ ತುಡಿಯುವಂಥವರು. ಬೇರುಮಟ್ಟದಿಂದಲೇ ವಾಹಿನಿ ಕಟ್ಟಿದ ಅನುಭವ ಅವರಿಗಿದೆ. ಅತ್ಯುತ್ತಮ ಬರಹಗಾರ ಮತ್ತು ಕನಸುಗಾರ. ಈ ಕಾರಣದಿಂದಾಗಿಯೇ ಪರಮ್ ಹೊಸ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಈ ಜಿಯೋ ಸ್ಟುಡಿಯೋಸ್ ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ಮತ್ತೊಂದು ಹೊಸ ದಿಕ್ಕು ತೋರುವ ಯೋಜನೆಯನ್ನೂ ಅವರು ಸಿದ್ಧ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಇದೇ ಮೊದಲ ಬಾರಿಗೆ ಜಿಯೋ ಸ್ಟುಡಿಯೋಸ್‍  ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡುತ್ತಿದ್ದು ಸಿನಿಮಾ ನಿರ್ಮಾಣ, ವೆಬ್ ಸಿರೀಸ್ ತಯಾರಿಕೆ ಸೇರಿದಂತೆ ಮನರಂಜನೆಯ ನಾನಾ ಮಜಲುಗಳಲ್ಲಿ ಅದು ಕೆಲಸ ಮಾಡಲಿದೆಯಂತೆ. ಈಗಾಗಲೇ ಕನ್ನಡದ ಅನೇಕ ನಟರ, ನಿರ್ದೇಶಕರ ಜೊತೆ ಮಾತುಕತೆ ಕೂಡ ನಡೆದಿದೆ ಎನ್ನುವ ಸುದ್ದಿಯಿದೆ. ಈ ವರ್ಷದಿಂದಲೇ ಸಿನಿಮಾ ನಿರ್ಮಾಣಕ್ಕೂ ಅದು ಕೈ ಹಾಕಲಿದೆ. ಇದನ್ನೂ ಓದಿ: ‘ಅಭಿರಾಮಚಂದ್ರ’ನಿಗೆ ಕರುನಾಡ ಚಕ್ರವರ್ತಿ ಶಿವಣ್ಣ ಸಾಥ್

    ಕಲರ್ಸ್ ಕನ್ನಡದಲ್ಲಿ ಬ್ಯುಸಿನೆಸ್ ಹೆಡ್ ಆಗಿದ್ದರೂ ಪರಮ್ ಹಲವು ಕಾರ್ಯಕ್ರಮಗಳಿಗೆ ನಿರ್ದೇಶನ ಮಾಡುತ್ತಿದ್ದರು. ಕನ್ನಡ ಕೋಟ್ಯಧಿಪತಿ, ಬಿಗ್ ಬಾಸ್ ಸೇರಿದಂತೆ ಹಲವು ಕಾರ್ಯಕ್ರಮಗಳ ಹಿಂದೆ ಇವರೇ ಕೆಲಸ ಮಾಡಿದ್ದರು. ಅಲ್ಲದೇ, ಚಿತ್ರ ನಿರ್ದೇಶನದ ಬಗ್ಗೆಯೂ ಅವರು ಮಾತನಾಡಿದ್ದರು. ಬಹುಶಃ ಜಿಯೋ ಸ್ಟುಡಿಯೋಸ್ ಮೂಲಕ ಆ ಕನಸನ್ನು ನನಸು ಮಾಡಿಕೊಳ್ಳಬಹುದು.

     

    ಫೇಸ್ ಬುಕ್ ನಲ್ಲಿ ಪರಮ್ ಬರೆದದ್ದೇನು?

    ನಮ್ಮ ಕಡೆ ಮನೆಗಳಿಗೆ ಹೊಸದಾಗಿ ಒಂದೊಂದೇ ಟೆಲಿವಿಷನ್ ಬರುತ್ತಿರುವಾಗ ನಮ್ಮನೆಗೆ ಕರೆಂಟೂ ಬಂದಿರಲಿಲ್ಲ. ಮೊದಲನೇ ಸಲ ಕರೆಂಟ್ ಬಂದ ಒಂದು ಮಳೆಗಾಲದ ಸಂಜೆ ಅಕ್ಕನ ಜೊತೆ ಸೇರಿ ಬರೀ ಸ್ವಿಚ್ ಒತ್ತಿ ಲೈಟ್ ಆನ್ ಮಾಡುವುದು ಮತ್ತು ಆಫ್ ಮಾಡುವುದನ್ನೇ ಮಾಡುತ್ತಾ ಗಂಟೆಗಟ್ಟಲೇ ಕುಣಿದಾಡಿದ್ದು ನಿನ್ನೆ ಮೊನ್ನೆ ಆದ ಹಾಗೆ ನೆನಪಿದೆ. ಕಾರಣವಿಲ್ಲದೇ ಲೈಟ್ ಆನ್ ಮತ್ತು ಆಫ್ ಮಾಡುವುದೇ ನಮಗೆ ಸುಮಾರು ದಿನಗಳ ಕಾಲ ಎಂಟರಟೇನ್ಮೆಂಟ್ ಆಗಿತ್ತು.

    ಈ ಟೀವಿಯಂಥ ಎಂಟರ್‍ ಟೇನ್ಮೆಂಟ್ ವಾಹಿನಿಗಳು ಕನ್ನಡದಲ್ಲಿ ಕತೆಗಳನ್ನು ಹೇಳತೊಡಗಿದಾಗ ನಮ್ಮನೆಗೆ ಕಲರ್‍ ಟೀವಿ ಬಿಡಿ, ಇನ್ನೂ ಟೀವಿಯೇ ಬಂದಿರಲಿಲ್ಲ. ಗದ್ದೆ, ತೋಟಗಳಲ್ಲಿ ಕೆಲಸ ಮಾಡುತ್ತ, ದನ, ಕರು ಮೇಯಿಸುತ್ತಾ ಅಲೆದಾಡುತ್ತಿರುವಾಗ ನಾಲ್ಕು ಬ್ಯಾಂಡಿನ ರೇಡಿಯೋದಲ್ಲಿ ಧ್ವನಿ ಕೇಳಿಸಿಕೊಳ್ಳುತ್ತಾ ಕಲರ್‍ ಕಲರ್‍ ಚಿತ್ರಗಳನ್ನು ಕಣ್ಮುಂದೆ ತಂದುಕೊಳ್ಳುತ್ತಾ ಯಾವತ್ತಾದರೂ ಒಂದು ದಿನ ಕತೆ ಹೇಳಬೇಕೆಂದು ಕಾತರಿಸುತ್ತಿದ್ದ ಟೈಮ್ ಅದು. ಆ ಅವಕಾಶ ಮೊದಲು ಸಿಕ್ಕಿದ್ದು ಕನ್ನಡ ಪತ್ರಿಕೆಗಳಲ್ಲಿ. ನಂತರ ಸಿಕ್ಕಿದ್ದು ಟೀವಿಯಲ್ಲಿ. ಟೆಲಿವಿಷನ್ ಸೇರಿಕೊಂಡ ಮೊದಮೊದಲು ತುಂಬಾ ಬೆರಗು ಹುಟ್ಟಿಸಿದ್ದ ಕಂಪನಿ ವಯಾಕಾಮ್೧೮. ಸರಿಯಾದ ಟೈಮಲ್ಲಿ ಸರಿಯಾದ ಜಾಗದಲ್ಲಿ ಇದ್ದಿದ್ದರಿಂದಲೋ ಏನೋ. ಒಂದು ದಿನ ಅದೇ ಕಂಪನಿಯ ಕಲರ್ಸ್ ಚಾನೆಲ್ಲನ್ನು ಕನ್ನಡದಲ್ಲಿ ರೂಪಿಸುವ ಅವಕಾಶ ಸಿಕ್ಕಿಬಿಟ್ಟದ್ದು ಮಾತ್ರ ಬಹುಶಃ ಅದೃಷ್ಟ. ಅಷ್ಟೇ ಅನಿರೀಕ್ಷಿತ.

    ಒಟ್ಟಾರೆ ಹತ್ತೂವರೆ ವರ್ಷ! ಅಗ್ನಿಸಾಕ್ಷಿ, ಲಕ್ಷ್ಮೀ ಬಾರಮ್ಮ, ರಾಧಾರಮಣ, ಕನ್ನಡತಿ ಥರದ ಕತೆಗಳು, ಬಿಗ್ ಬಾಸ್, ಡಾನ್ಸಿಂಗ್ ಸ್ಟಾರ್‍, ಸೂಪರ್‍ ಮಿನಿಟ್, ಕನ್ನಡದ ಕೋಟ್ಯಧಿಪತಿ, ಅನುಬಂಧ ಥರದ ಒಂದಿಷ್ಟು ಶೋಗಳು. ರಿಬ್ರಾಂಡಿಂಗ್, ಎಚ್ ಡಿ ಚಾನೆಲ್, ಎರಡನೇ ಚಾನೆಲ್, ಸಿನಿಮಾ ಚಾನೆಲ್, ವೂಟ್ ಹೀಗೆ ಒಂದೊಂದೂ ಕಲರ್‍ ಕಲರ್‍ ಅನುಭವ. ಗೆದ್ದ ಖುಷಿ, ಸೋತ ನೋವು, ತಪ್ಪು ಮಾಡಿ ಕಲಿತ ಪಾಠ, ಅಕಾರಣವಾಗಿ ಸಿಕ್ಕಿದ ಮೆಚ್ಚುಗೆ, ಸಕಾರಣವಾಗಿ ಆದ ಟೀಕೆ ಮತ್ತು ಅವಮಾನ, ಕತೆ ಹುಟ್ಟಿ ಸಂಭ್ರಮಿಸಿದ ದಿನಗಳು, ಕತೆ ಹುಟ್ಟದೇ ಗೊಂದಲಗೊಂಡ ಕ್ಷಣಗಳು, ದಾರಿಯಲ್ಲಿ ಸಿಕ್ಕಿದ ನಕ್ಷತ್ರಗಳು, ಹೆಕ್ಕಿಕೊಂಡ ಭಾವನೆಗಳೆಲ್ಲ ಸೇರಿ ತಿರುಗಿ ನೋಡಿದಾಗ ಸಿಕ್ಕಾಪಟ್ಟೆ ಸಮಾಧಾನ. ಸಂತೃಪ್ತಿ. ಹತ್ತೂವರೆ ವರ್ಷಗಳಲ್ಲಿ ಏನೇನೋ ಆಯಿತು. ಆಗಿದ್ದೆಲ್ಲಾ ಒಳ್ಳೆಯದಕ್ಕೇ ಆಯಿತು!

    ತೀವ್ರವಾಗಿ ಮತ್ತು ಪ್ರಾಮಾಣಿಕವಾಗಿ ಕನಸು ಕಂಡರೆ ಸಾಕು. ಸ್ವಲ್ಪ ಮನಸ್ಸಿಟ್ಟು ಚೂರು ಪಾರು ಇಷ್ಟಪಟ್ಟು ಕೆಲಸ ಮಾಡಿದರೆ ಸಾಕು. ಯಾವ ನಕ್ಷತ್ರವಾದರೂ ಸಿಕ್ಕುತ್ತದೆ!ಮಿಲ್ಲರ್ಸ್ ರೋಡಿನ ಐದನೇ ಫ್ಲೋರಿನ ಆಫೀಸಿನಲ್ಲಿ ಕುಡಿದ ಚಹಾ ಕಪ್ಪುಗಳ ಲೆಕ್ಕ ಗೊತ್ತಿಲ್ಲ. ಅಷ್ಟೆಲ್ಲಾ ಚಹಾ ಕುಡಿದರೂ ಇನ್ನಷ್ಟು ಕುಡಿಯುವ ಆಸೆ ಇದ್ದೇ ಇದೆ. ಸಿಕ್ಕಿದ ಒಬ್ಬಬ್ಬ ವ್ಯಕ್ತಿಯನ್ನೂ ಇನ್ನೊಂದು ಸಲ ಮಾತಾಡಿಸುವ ಮನಸ್ಸಾಗುತ್ತದೆ. ಹೇಳಿದ ಕತೆಗಳನ್ನು ಇನ್ನೊಂದು ಸಲ ಚೂರು ಸರಿಮಾಡಿಕೊಂಡು ಹೇಳಿಬಿಡೋಣ ಎಂಬ ಕನಸು ಬೀಳುತ್ತದೆ.

    ಇವತ್ತು ಬೆಳಿಗ್ಗೆಯಿಂದ ಟೀವಿ ಕೆಲಸ ಇಲ್ಲ ಎಂದು ಯೋಚಿಸಿ ಮನಸ್ಸು ಒದ್ದೆಯಾಗಿದೆ. ಒಳ್ಳೇದು ಮಾತ್ರ ಆಗಲಿ ಅಂತ ಹಾರೈಸಬೇಡಿ. ಒಳ್ಳೆಯದು, ಕೆಟ್ಟದ್ದು, ಖುಷಿ, ದುಃಖ, ಗೆಲುವು, ಸೋಲು, ಅಸೂಯೆ, ಸಂಕಟ, ಪ್ರೀತಿ, ಆಘಾತ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಕಲಿಕೆ ಹೀಗೆ ಎಲ್ಲವೂ ಆಗಲಿ ಎಂದು ಹೇಳಿ. ಜೀವನವೇ ಆಗಲಿ ಎಂದು ಹಾರೈಸಿ. ಥ್ಯಾಂಕ್ಯೂ ವಯಾಕಾಮ್೧೮. ಥ್ಯಾಂಕ್ಯೂ ಕಲರ್ಸ್ ಕನ್ನಡ. ಹೋಗಿ ಬರುವೆ. ನಮಸ್ಕಾರ!

     

  • ಬೆಂಗಳೂರು, ಹೈದರಾಬಾದ್‌ನಲ್ಲೂ ಇಂದಿನಿಂದ ಜಿಯೋ ಟ್ರೂ 5G ಲಭ್ಯ

    ಬೆಂಗಳೂರು, ಹೈದರಾಬಾದ್‌ನಲ್ಲೂ ಇಂದಿನಿಂದ ಜಿಯೋ ಟ್ರೂ 5G ಲಭ್ಯ

    ಬೆಂಗಳೂರು: 1 ಜಿಬಿಪಿಎಸ್+ ವೇಗದಲ್ಲಿ ಜಿಯೋ ಟ್ರೂ 5ಜಿ (Jio True 5G) ಸೇವೆ ಬೆಂಗಳೂರು (Bengaluru) ಹಾಗೂ ಹೈದರಾಬಾದ್‌ನಲ್ಲಿ (Hyderabad) ನವೆಂಬರ್ 10ರಿಂದ ಆರಂಭವಾಗಿದೆ.

    ಮುಂಬೈ, ದೆಹಲಿ, ಕೋಲ್ಕತ್ತಾ, ಚೆನ್ನೈ, ವಾರಾಣಸಿ ಮತ್ತು ನಾಥದ್ವಾರ ಹೀಗೆ 6 ನಗರಗಳಲ್ಲಿ ಜಿಯೋ ಟ್ರೂ 5ಜಿ ಸೇವೆಗಳ ಯಶಸ್ವಿ ಬೀಟಾ ಅನಾವರಣದ ನಂತರದಲ್ಲಿ ಇದೀಗ ಜಿಯೋ (Jio) ಹೆಚ್ಚಿನ ನಗರಗಳಲ್ಲಿ ಜಿಯೋ ಟ್ರೂ 5ಜಿ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ. ಬೆಂಗಳೂರು ಮತ್ತು ಹೈದರಾಬಾದ್‌ನಲ್ಲೂ ಈಗ ಜಿಯೋ ಟ್ರೂ 5ಜಿ ದೊರೆಯುತ್ತಿದೆ. ಜಿಯೋ ಟ್ರೂ 5ಜಿಯು ಈ ಎರಡೂ ತಂತ್ರಜ್ಞಾನ ಕೇಂದ್ರಿತ ನಗರಗಳಲ್ಲಿ ಮಾನವೀಯತೆಗೆ ಸೇವೆ ಸಲ್ಲಿಸುವ ಮತ್ತು ಭಾರತೀಯರ ಜೀವನದ ಗುಣಮಟ್ಟ ಸುಧಾರಿಸುವ ಕೆಲವು ಇತ್ತೀಚಿನ ತಂತ್ರಜ್ಞಾನಗಳ ನಿಜವಾದ ಸಾಮರ್ಥ್ಯವನ್ನು ಅರಿಯುವುದಕ್ಕೆ ಸಹಾಯ ಮಾಡುತ್ತದೆ.

    ಅತ್ಯುತ್ತಮ ಗ್ರಾಹಕ ಅನುಭವ ಖಚಿತ ಮಾಡಿಕೊಳ್ಳಲು ಜಿಯೋದಿಂದ ಸುಧಾರಿತ ಟ್ರೂ 5ಜಿ ಸೇವೆಗಳನ್ನು ಹಂತ ಹಂತವಾಗಿ ಹೊರತರುತ್ತಿದೆ. ಜಿಯೋ ಟ್ರೂ 5ಜಿ ಅನುಭವವನ್ನು ಈಗಾಗಲೇ 6 ನಗರಗಳಲ್ಲಿ ಲಕ್ಷಗಟ್ಟಲೆ ಬಳಕೆದಾರರು ಪಡೆಯುತ್ತಿದ್ದಾರೆ. ಇದಕ್ಕೆ ದೊರೆಯುತ್ತಿರುವ ಪ್ರತಿಕ್ರಿಯೆ ಅತ್ಯಂತ ಧನಾತ್ಮಕವಾಗಿದೆ ಮತ್ತು ಭರವಸೆ ನೀಡುತ್ತದೆ. ಜಿಯೋ ಜಾಗತಿಕವಾಗಿ ಅತ್ಯಾಧುನಿಕ 5ಜಿ ನೆಟ್‌ವರ್ಕ್ ಅನ್ನು ರೂಪಿಸುವುದಕ್ಕೆ ಗ್ರಾಹಕರ ಒಳನೋಟಗಳು ಮತ್ತು ಪ್ರತಿಕ್ರಿಯೆಯು ಸಹಾಯ ಮಾಡುತ್ತಿದೆ.

     

    ಜಿಯೋ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ 500 ಎಂಬಿಪಿಎಸ್ ನಿಂದ 1 ಜಿಬಿಪಿಎಸ್ ವರೆಗೆ ಎಲ್ಲಿಯಾದರೂ ವೇಗದ ಅನುಭವವನ್ನು ಪಡೆಯುತ್ತಿದ್ದಾರೆ ಹಾಗೂ ಅತಿ ಹೆಚ್ಚು ಪ್ರಮಾಣದಲ್ಲಿ ಡೇಟಾ ಬಳಸುತ್ತಿದ್ದಾರೆ. ಇದಕ್ಕೆ ಕಾರಣ ಆಗಿರುವುದು ಜಿಯೋ ಟ್ರೂ 5ಜಿಯ 3 ಪಟ್ಟು ಅನುಕೂಲಗಳು. ಆದ್ದರಿಂದಲೇ ಇದು ಭಾರತದಲ್ಲಿನ ಏಕೈಕ ನಿಜವಾದ 5ಜಿ ನೆಟ್‌ವರ್ಕ್ ಆಗಿದೆ.

    1. 4ಜಿ ನೆಟ್‌ವರ್ಕ್‌ನ ಮೇಲೆ ಯಾವುದೇ ಅವಲಂಬನೆ ಇಲ್ಲದೆ ಸುಧಾರಿತ 5ಜಿ ನೆಟ್‌ವರ್ಕ್‌ನೊಂದಿಗೆ ಅದ್ವಿತೀಯ 5ಜಿ ಆರ್ಕಿಟೆಕ್ಚರ್.
    2. 700 MHz, 3500 MHz, ಮತ್ತು 26 GHz ಬ್ಯಾಂಡ್‌ಗಳಾದ್ಯಂತ 5ಜಿ ಸ್ಪೆಕ್ಟ್ರಮ್‌ನ ದೊಡ್ಡ ಮತ್ತು ಉತ್ತಮ ಮಿಶ್ರಣ.
    3. ಕ್ಯಾರಿಯರ್ ಅಗ್ರಿಗೇಷನ್ ಎಂಬ ಸುಧಾರಿತ ತಂತ್ರಜ್ಞಾನ ಬಳಸಿಕೊಂಡು ಈ 5ಜಿ ಫ್ರೀಕ್ವೆನ್ಸಿಗಳನ್ನು ಏಕರೂಪದ ‘ಡೇಟಾ ಹೈವೇ’ ಆಗಿ ಯಾವುದೇ ಅಡೆತಡೆ ಇಲ್ಲದೆ ಸಂಯೋಜಿಸುತ್ತದೆ.

    ನವೆಂಬರ್ 10ರಿಂದ ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿರುವ ಜಿಯೋ ಬಳಕೆದಾರರನ್ನು ಜಿಯೋ ವೆಲ್‌ಕಮ್ ಆಫರ್‌ಗೆ ಆಹ್ವಾನಿಸಲಾಗುತ್ತಿದೆ. ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 1 ಜಿಬಿಪಿಎಸ್+ ವೇಗದಲ್ಲಿ ಅನಿಯಮಿತ ಡೇಟಾವನ್ನು ಈ ಮೂಲಕ ಪಡೆಯಬಹುದಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಹಬ್ಬಕ್ಕೆ ಗಿಫ್ಟ್‌ – ಜಿಯೋಫೈಬರ್ ಡಬಲ್ ಫೆಸ್ಟಿವಲ್ ಆಫರ್

    ಹಬ್ಬಕ್ಕೆ ಗಿಫ್ಟ್‌ – ಜಿಯೋಫೈಬರ್ ಡಬಲ್ ಫೆಸ್ಟಿವಲ್ ಆಫರ್

    ಮುಂಬೈ: ಭಾರತದ ಅತಿದೊಡ್ಡ ಟೆಲಿಕಾಂ ಮತ್ತು ಬ್ರಾಡ್‌ಬ್ಯಾಂಡ್ ಪೂರೈಕೆದಾರರಾದ ರಿಲಯನ್ಸ್ ಜಿಯೋ, ತನ್ನ ಗ್ರಾಹಕರಿಗೆ ಹೊಸ ಆಫರ್ ಗಳನ್ನು ನೀಡುತ್ತಿದೆ. ಅಕ್ಟೋಬರ್ 18 ಮತ್ತು ಅಕ್ಟೋಬರ್ 28 ನಡುವೆ ಜಿಯೋಫೈಬರ್ ಡಬಲ್ ಫೆಸ್ಟಿವಲ್ ಬೋನಾಂಜಾ ಆಫರ್ (JioFiber Double Festival Bonanza) ಅನ್ನು ಬಿಡುಗಡೆ ಮಾಡಿದೆ.

    ಈ ಆಫರ್ ಸೀಮಿತ ಅವಧಿಗೆ ಮಾತ್ರ ಲಭ್ಯವಿರುತ್ತದೆ. ಕೊಡುಗೆಯ ಪ್ರಯೋಜನಗಳನ್ನು ಪಡೆಯಲು ಬಳಕೆದಾರರು ಹೊಸ ಸಂಪರ್ಕವನ್ನು ಖರೀದಿಸಬೇಕು ಮತ್ತು ಈಗ ಲಾಂಚ್ ಆಗಿರುವ ಯೋಜನೆಗಳಲ್ಲಿ ಒಂದಕ್ಕೆ ಚಂದಾದಾರರಾಗಬೇಕು.

    ಜಿಯೋ(Jio) ಡಬಲ್ ಫೆಸ್ಟಿವಲ್ ಬೊನಾಂಜಾ ಆಫರ್‌ ನಲ್ಲಿ ಎರಡು ಯೋಜನೆಗಳನ್ನು ಪರಿಚಯ ಮಾಡಿದೆ. 599 ರೂ ಪ್ಲಾನ್‌ನ 6 ತಿಂಗಳ ರೀಚಾರ್ಜ್ ಮತ್ತು 899 ರೂ. ಪ್ಲಾನ್‌ನ 6 ತಿಂಗಳ ರೀಚಾರ್ಜ್. ಈ ಎರಡು ಯೋಜನೆಗಳ ಜೊತೆಗೆ 899 ರೂ. 3 ತಿಂಗಳ ಯೋಜನೆಯು 100% ಮೌಲ್ಯದ ಬ್ಯಾಕ್ ಆಫರ್‌ಗೆ ಅರ್ಹವಾಗಿದೆ ಆದರೆ 15 ದಿನಗಳ ಹೆಚ್ಚುವರಿ ಮಾನ್ಯತೆ ಇದರಲ್ಲಿ ದೊರೆಯುವುದಿಲ್ಲ. ಇದನ್ನೂ ಓದಿ: ಶೀಘ್ರವೇ 5G ಸೇವೆ ಆರಂಭ – ನಿಮ್ಮ ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

    ಹೊಸ ಸಂಪರ್ಕಗಳನ್ನು ಬುಕ್ ಮಾಡಿದಾಗ ಬಳಕೆದಾರರಿಗೆ 6,500 ರೂ. ಮೌಲ್ಯದ ಪ್ರಯೋಜನಗಳನ್ನು ನೀಡುತ್ತಿದೆ. ಈ ಕೊಡುಗೆಯು ಆಯ್ದ ಯೋಜನೆಗಳ ಖರೀದಿಗೆ ಅನ್ವಯಿಸುತ್ತದೆ.

    599 ರೂ. 899 ರೂ. ಯೋಜನೆಗಳು
    ಈ ಎರಡು ಯೋಜನೆಗಳು, ಡಬಲ್ ಫೆಸ್ಟಿವಲ್ ಬೊನಾಂಜಾ ಆಫರ್‌ನೊಂದಿಗೆ ಬರಲಿದೆ. ತಿಂಗಳಿಗೆ 599 ಮತ್ತು 899 ರೂ. ಈ ಎರಡೂ ಯೋಜನೆಗಳು ಹೊಸದಾಗಿದ್ದು ಅಕ್ಟೋಬರ್ 18 ರಿಂದ ಅಕ್ಟೋಬರ್ 28 ರವರೆಗೆ ಮಾತ್ರ ಇರುತ್ತವೆ. ಈ ಯೋಜನೆಗಳನ್ನು ಖರೀದಿಸುವ ಗ್ರಾಹಕರು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ 6,000 ರೂ. ಮೌಲ್ಯದ 4K JioFiber ಸೆಟ್ ಟಾಪ್ ಬಾಕ್ಸ್ ಅನ್ನು ಸಹ ಪಡೆಯುತ್ತಾರೆ.

    599 ರೂ. 6 ತಿಂಗಳ ಪ್ಲ್ಯಾನ್‌
    6 ತಿಂಗಳ ಯೋಜನೆಯಲ್ಲಿ 30 Mbps, 14+ OTT ಅಪ್ಲಿಕೇಶನ್‌ಗಳು ಮತ್ತು 550+ ಬೇಡಿಕೆಯ ಚಾನೆಲ್‌ಗಳು ದೊರೆಯಲಿದೆ. ಒಟ್ಟು 4,241 ರೂ. ಆಗಲಿದೆ. (3,594 ರೂ. + ರೂ. 647 ಜಿಎಸ್‌ಟಿ), ಈ ಯೋಜನೆಯಲ್ಲಿ ಹೊಸ ಗ್ರಾಹಕರು 4,500 ರೂ. ಮೌಲ್ಯದ ವೋಚರ್‌ಗಳನ್ನು ಪಡೆಯುತ್ತಾರೆ. ವೋಚರ್‌ಗಳು 4 ವಿಭಿನ್ನ ಬ್ರಾಂಡ್‌ಗಳಾಗಿದ್ದು, AJIO 1,000 ರೂ. ವೋಚರ್, ರಿಲಯನ್ಸ್ ಡಿಜಿಟಲ್‌ನ 1,000 ರೂ. ವೋಚರ್, ನೆಟ್‌ಮೆಡ್ಸ್‌ನ 1,000 ರೂ. ವೋಚರ್ ಮತ್ತು IXIGO 1,500 ರೂ. ವೋಚರ್ ದೊರೆಯಲಿದೆ. ಹೆಚ್ಚುವರಿಯಾಗಿ, ಈ ಎಲ್ಲಾ ಗ್ರಾಹಕರು ಯೋಜನೆಯ ಭಾಗವಾಗಿರುವ 6 ತಿಂಗಳ ಮಾನ್ಯತೆಯ ಜೊತೆಗೆ 15 ದಿನಗಳ ಹೆಚ್ಚುವರಿ ಮಾನ್ಯತೆಯನ್ನು ಪಡೆಯುತ್ತಾರೆ.

    899 ರೂ. 6 ತಿಂಗಳ ಪ್ಲ್ಯಾನ್‌:
    6 ತಿಂಗಳ ಯೋಜನೆಯಲ್ಲಿ 100 Mbps, 14+ OTT ಅಪ್ಲಿಕೇಶನ್‌ಗಳು ಮತ್ತು 550+ ಬೇಡಿಕೆಯ ಚಾನೆಲ್‌ಗಳು ದೊರೆಯಲಿದೆ. ಒಟ್ಟು 6,365 ರೂ. ಆಗಲಿದೆ. (5,394 ರೂ. + 971 ರೂ. ಜಿಎಸ್‌ಟಿ). ಈ ಯೋಜನೆಯಲ್ಲಿ ಹೊಸ ಗ್ರಾಹಕರು 6,500 ರೂ. ಮೌಲ್ಯದ ವೋಚರ್‌ಗಳನ್ನು ಪಡೆಯುತ್ತಾರೆ. ವೋಚರ್‌ಗಳು 4 ವಿಭಿನ್ನ ಬ್ರಾಂಡ್‌ಗಳಾಗಿದ್ದು AJIO ನ 2,000 ರೂ. ವೋಚರ್, ರಿಲಯನ್ಸ್ ಡಿಜಿಟಲ್‌ನ 1,000 ರೂ. ವೋಚರ್, NetMeds 500 ರೂ. ವೋಚರ್ ಮತ್ತು IXIGO 3,000 ರೂ. ವೋಚರ್. ಹೆಚ್ಚುವರಿಯಾಗಿ ಈ ಎಲ್ಲಾ ಗ್ರಾಹಕರು ಯೋಜನೆಯ ಭಾಗವಾಗಿರುವ 6 ತಿಂಗಳ ಮಾನ್ಯತೆಯ ಜೊತೆಗೆ 15 ದಿನಗಳ ಹೆಚ್ಚುವರಿ ಮಾನ್ಯತೆಯನ್ನು ಪಡೆಯುತ್ತಾರೆ.

    899 ರೂ., 3 ತಿಂಗಳ ಪ್ಲ್ಯಾನ್‌:
    3 ತಿಂಗಳ ಯೋಜನೆಯಲ್ಲಿ 100 Mbps, 14+ OTT ಅಪ್ಲಿಕೇಶನ್‌ಗಳು ಮತ್ತು 550+ ಬೇಡಿಕೆಯ ಚಾನೆಲ್‌ಗಳು ಒಟ್ಟು 2,697 ರೂ. ಈ ಯೋಜನೆಯಲ್ಲಿ ಹೊಸ ಗ್ರಾಹಕರು 3,500 ರೂ. ಮೌಲ್ಯದ ವೋಚರ್‌ಗಳನ್ನು ಪಡೆಯುತ್ತಾರೆ. ವೋಚರ್‌ಗಳು 4 ವಿಭಿನ್ನ ಬ್ರಾಂಡ್‌ಗಳಾಗಿದ್ದು AJIO 1,000 ರೂ. ವೋಚರ್, ರಿಲಯನ್ಸ್ ಡಿಜಿಟಲ್‌ನ 500 ರೂ. ವೋಚರ್, NetMeds ನ 500 ರೂ. ವೋಚರ್ ಮತ್ತು IXIGO 1,500 ರೂ. ವೋಚರ್. ಆದರೆ ಈ ಯೋಜನೆಯಲ್ಲಿ ಹೆಚ್ಚುವರಿ ವ್ಯಾಲಿಡಿಟಿ ದೊರೆಯುವುದಿಲ್ಲ.

    Live Tv
    [brid partner=56869869 player=32851 video=960834 autoplay=true]