Tag: jio

  • ಏಪ್ರಿಲ್ 1ರಿಂದ ಜಿಯೋ ಉಚಿತವಲ್ಲ: ಏನಿದು ಜಿಯೋ ಪ್ರೈಮ್? ಇಲ್ಲಿದೆ ಪೂರ್ಣ ಮಾಹಿತಿ

    ಏಪ್ರಿಲ್ 1ರಿಂದ ಜಿಯೋ ಉಚಿತವಲ್ಲ: ಏನಿದು ಜಿಯೋ ಪ್ರೈಮ್? ಇಲ್ಲಿದೆ ಪೂರ್ಣ ಮಾಹಿತಿ

    ಮುಂಬೈ: ಇಲ್ಲಿಯವರೆಗೆ ಪ್ರತಿ ದಿನ 1 ಜಿಬಿ ಉಚಿತ ಡೇಟಾವನ್ನು ಪಡೆಯುತ್ತಿದ್ದ ಜಿಯೋ ಗ್ರಾಹಕರು ಏಪ್ರಿಲ್ 1ರಿಂದ ದುಡ್ಡನ್ನು ಪಾವತಿಸಿ ಡೇಟಾವನ್ನು ಪಡೆದುಕೊಳ್ಳಬೇಕು.

    ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಮುಂಬೈಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಹೊಸ ಜಿಯೋ ಪ್ರೈಮ್ ಯೋಜನೆಯನ್ನು ಪ್ರಕಟಿಸಿದರು. ಜಿಯೋ ಪ್ರೈಮ್‍ಗೆ ನೋಂದಣಿಯಾದ ಗ್ರಾಹಕರು 2018ರ ಮಾರ್ಚ್ 31ರ ತನಕ ಈಗ ಇರುವ ಹ್ಯಾಪಿ ನ್ಯೂ ಇಯರ್ ಪ್ಲಾನ್‍ನಲ್ಲಿ ಸಿಗುವ ಎಲ್ಲ ಸೇವೆಗಳನ್ನು ಉಚಿತವಾಗಿ ಬಳಸಬಹುದು. ಆದರೆ ಈ ಸೇವೆ ಬಳಸಬೇಕಾದರೆ ಡೇಟಾಗೆ ಮಾತ್ರ ದುಡ್ಡನ್ನು ನೀಡಬೇಕಾಗುತ್ತದೆ.

    ದುಡ್ಡನ್ನು ನೀವು ಪಾವತಿಸಿದರೂ ಉಳಿದ ಟೆಲಿಕಾಂ ಕಂಪೆನಿಗಳಿಗೆ ಹೋಲಿಸಿದರೆ ನೀವು ಪಾವತಿಸುವ ದುಡ್ಡಿಗೆ ಹೆಚ್ಚಿನ ಪ್ರಮಾಣದ ಡೇಟಾವನ್ನು ಪಡೆದುಕೊಳ್ಳುವಿರಿ. ಇದರ ಜೊತೆ ಮುಂದಿನ ದಿನದಲ್ಲಿ ಹೆಚ್ಚಿನ ವೇಗದಲ್ಲಿ ಡೇಟಾವನ್ನು ಪಡೆದುಕೊಳ್ಳಬಹುದಾಗಿದೆ. ಹೀಗಾಗಿ ಇಲ್ಲಿ ಜಿಯೋ ಪ್ರೈಮ್‍ಗೆ ಸಂಬಂಧಿಸಿದಂತೆ ಎಲ್ಲ ಮಾಹಿತಿಗಳನ್ನು ನೀಡಲಾಗಿದೆ.

    ಏನಿದು ಜಿಯೋ ಪ್ರೈಮ್?
    ಜಿಯೋದ ಹೊಸ ಯೋಜನೆ ಇದಾಗಿದ್ದು, ಮಾರ್ಚ್ 31ರ ನಂತರ ಗ್ರಾಹಕರಿಗೆ ಲಭ್ಯವಾಗಲಿದೆ.

    ಪ್ರೈಮ್ ಯೋಜನೆ ತಂದಿದ್ದು ಯಾಕೆ? ಬೆಲೆ ಎಷ್ಟು?
    ಬಹುತೇಕ ಗ್ರಾಹಕರು ಜಿಯೋ ಸಿಮನ್ನು ಎರಡನೇ ಸಿಮ್ ಆಗಿ ಬಳಸುತ್ತಿದ್ದು ಜಿಯೋ ಸೇವೆಗಳನ್ನು ಬಳಕೆ ಮಾಡುತ್ತಿದ್ದಾರೆ. ಈ ಗ್ರಾಹಕರು ಮಾರ್ಚ್ 31ರ ನಂತರ ಜಿಯೋ ಸೇವೆಯಿಂದ ಹೊರ ಹೋಗದೇ ಇರಲು  ಈ ಆಫರನ್ನು ತರಲಾಗಿದೆ. ಮಾರ್ಚ್ 31ರ ನಂತರ ಈ ಸೇವೆ ಆರಂಭವಾಗಲಿದ್ದು, ಪ್ರೈಮ್ ಆಫರ್ ಅನ್ನು ನೀವು ಪಡೆಯಬೇಕಾದರೆ ನೀವು 12 ತಿಂಗಳಿಗೆ 99 ರೂ. ನೀಡಿ ನೋಂದಣಿಯಾಗಬೇಕು.

    ಇದನ್ನೂ ಓದಿ:ಜಿಯೋ 4ಜಿ ಇಂಟರ್‍ನೆಟ್ ಅಪ್‍ಗ್ರೇಡ್ ಮೆಸೇಜ್ ಶೇರ್ ಮಾಡೋ ಮುನ್ನ ಈ ಸುದ್ದಿ ಓದಿ

    ನೋಂದಣಿ ಮಾಡಿಸಿಕೊಂಡರೆ ಏನು ಲಾಭ?
    ಇಲ್ಲಿಯವರೆಗೆ ನೀವು ಹ್ಯಾಪಿ ನ್ಯೂ ಇಯರ್ ಪ್ಲಾನ್‍ನಲ್ಲಿ ನೀವು ಒಂದು ದಿನ 1 ಜಿಬಿ ಉಚಿತ ಡೇಟಾ ಪೂರ್ಣವಾಗಿ ಬಳಕೆ ಮಾಡಿದ ಬಳಿಕ ಸ್ಪೀಡ್ 128 ಕೆಬಿಪಿಎಸ್‍ಗೆ ಇಳಿಯುತ್ತದೆ. ಆದರೆ ಜಿಯೋ ಪ್ರೈಮ್‍ನಲ್ಲಿ ಉಚಿತ ಡೇಟಾ ಸಿಗುವುದಿಲ್ಲ. ನೀವು ಪ್ರತಿ ತಿಂಗಳು 303 ರೂ. ಹಣವನ್ನು(ದಿನವೊಂದಕ್ಕೆ 10 ರೂ.) ಪಾವತಿಸಿದರೆ 30 ಜಿಬಿ ಡೇಟಾವನ್ನು ಪಡೆಯಬಹುದು.

    ಸಬ್ ಸ್ಕ್ರೈಬ್ ಮಾಡುವುದು ಹೇಗೆ?
    ಮಾರ್ಚ್ 1ರಿಂದ ಮಾರ್ಚ್ 31ರವರೆಗೆ ಜಿಯೋ ಗ್ರಾಹಕರು ಮೈ ಜಿಯೋ ಆಪ್‍ನಿಂದ ಸಬ್ ಸ್ಕ್ರೈಬ್ ಮಾಡಿಕೊಳ್ಳಬಹುದು. ಆಥವಾ ಹತ್ತಿರದಲ್ಲಿ ಇರುವ ಜಿಯೋ ಟೆಲಿಕಾಂ ಶಾಪ್/ ಜಿಯೋ ಸ್ಟೋರ್‍ಗೆ ಹೋಗಿ ಸಬ್‍ಸ್ಕ್ರೆಬ್ ಮಾಡಿಕೊಳ್ಳಬಹುದು.

    ಡೇಟಾಗೆ ಮಾತ್ರ ದುಡ್ಡು:
    ಏಪ್ರಿಲ್ ಒಂದರಿಂದ ಉಚಿತವಾಗಿ ಡೇಟಾ ನೀಡಲು ಸಾಧ್ಯವಿಲ್ಲ. ಆದರೆ ಯಾವುದೇ ಟೆಲಿಕಾಂ ನೆಟ್‍ವರ್ಕಿಗೆ ಹೋಗುವ ಎಲ್ಲ ಕರೆಗಳು ಉಚಿತ ಮತ್ತು ಯಾವುದೇ ರೋಮಿಂಗ್ ಚಾರ್ಜ್ ಇರುವುದಿಲ್ಲ ಎಂದು ಮುಕೇಶ್ ಅಂಬಾನಿ ತಿಳಿಸಿದ್ದಾರೆ.

    ಇದನ್ನೂ ಓದಿ: ಮತ್ತೊಂದು ಇತಿಹಾಸ ಸೃಷ್ಟಿಸಿದ ಜಿಯೋ

    ಉಚಿತ ಏನು?
    ಮೈ ಜಿಯೋ ಅಪ್ಲಿಕೇಶನ್‍ನಲ್ಲಿರುವ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಮ್ಯೂಸಿಕ್ ಸೇರಿದಂತೆ 10 ಸಾವಿರ ರೂ. ಮೌಲ್ಯದ ಮೀಡಿಯಾ ಸೇವೆಗಳನ್ನು ಜಿಯೋ ಪ್ರೈಮ್ ಗ್ರಾಹಕರು 2018ರ ಮಾರ್ಚ್ 31ರವರೆಗೆ ಬಳಸಬಹುದು.

     

     

     

  • ಮತ್ತೊಂದು ಇತಿಹಾಸ ಸೃಷ್ಟಿಸಿದ ಜಿಯೋ

    ಮತ್ತೊಂದು ಇತಿಹಾಸ ಸೃಷ್ಟಿಸಿದ ಜಿಯೋ

    ಮುಂಬೈ: ರಿಲಯನ್ಸ್ ಜಿಯೋ ಮತ್ತೊಂದು ಮೈಲಿಗಲ್ಲನ್ನು ಬರೆದಿದೆ. ಬಿಡುಗಡೆಯಾದ 170 ದಿನದಲ್ಲಿ 10 ಕೋಟಿ ಗ್ರಾಹಕರನ್ನು ಜಿಯೋ ಸಂಪಾದಿಸಿದೆ. ಈ ಮೂಲಕ ಕಡಿಮೆ ಅವಧಿಯಲ್ಲಿ 10 ಕೋಟಿ ಗ್ರಾಹಕರನ್ನು ಸಂಪಾದಿಸಿದ ಮೊದಲ ಟೆಲಿಕಾಂ ಕಂಪೆನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಮಾಧ್ಯಮಗಳ ಜೊತೆ ನಡೆಸಿ ಈ ಸಾಧನೆಗೆ ಕಾರಣರಾದ ಎಲ್ಲ ಗ್ರಾಹಕರಿಗೆ ಧನ್ಯವಾದ ಹೇಳಿದರು.

    ಜಿಯೋ ಸೇವೆ ಅಧಿಕೃತವಾಗಿ ಲೋಕಾರ್ಪಣೆಯಾದ ಒಂದು ತಿಂಗಳಿನಲ್ಲೇ 1.60 ಕೋಟಿ ಗ್ರಾಹಕರನ್ನು ಸಂಪಾದಿಸುವ ಮೂಲಕ ಹೊಸ ದಾಖಲೆ ಸೃಷ್ಟಿಸಿತ್ತು. ಇದಾದ ಬಳಿಕ 83 ದಿನದಲ್ಲಿ 5 ಕೋಟಿ ಗ್ರಾಹಕರನ್ನು ಜಿಯೋ ಸಂಪಾದಿಸಿತ್ತು.