Tag: jio

  • ಈ ನಗರಗಳಲ್ಲಿ ಆಗ್ತಿದೆ ಜಿಯೋ ಫೈಬರ್ ಬ್ರಾಂಡ್‍ಬ್ಯಾಂಡ್ ಟೆಸ್ಟಿಂಗ್: ನಿಮ್ಮ ನಗರ ಇದ್ಯಾ?

    ಈ ನಗರಗಳಲ್ಲಿ ಆಗ್ತಿದೆ ಜಿಯೋ ಫೈಬರ್ ಬ್ರಾಂಡ್‍ಬ್ಯಾಂಡ್ ಟೆಸ್ಟಿಂಗ್: ನಿಮ್ಮ ನಗರ ಇದ್ಯಾ?

    ಮುಂಬೈ: ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ಡೇಟಾ ನೀಡಿ ಕಮಾಲ್ ಮಾಡಿದ್ದ ಜಿಯೋ ಈಗ ಫೈಬರ್ ಬ್ರಾಡ್‍ಬ್ಯಾಂಡ್ ಸೇವೆಯನ್ನು ಆರಂಭಿಸಲು ಮುಂದಾಗುತ್ತಿದ್ದು ಕೆಲ ನಗರಗಳಲ್ಲಿ ಪರೀಕ್ಷಾರ್ಥ ಪ್ರಯೋಗಗಳನ್ನು ನಡೆಸುತ್ತಿದೆ.

    ವ್ಯಕ್ತಿಯೊಬ್ಬರು ಜಿಯೋ ಫೈಬರ್ ಸೇವೆಯ ಬಗ್ಗೆ ಟ್ವಿಟ್ಟರ್ ನಲ್ಲಿ ಕೇಳಿದ್ದಕ್ಕೆ ಜಿಯೋ ಕೇರ್ ಮುಂಬೈ, ದೆಹಲಿ ಎನ್‍ಸಿಆರ್, ಅಹಮದಾಬಾದ್, ಜಾಮ್‍ನಗರ, ಸೂರತ್ ಮತ್ತು ವಡೋದರಾದಲ್ಲಿ ಪರೀಕ್ಷೆ ನಡೆಯುತ್ತಿದೆ ಎಂದು ಉತ್ತರಿಸಿದೆ.

    ಈ ವೇಳೆ ದೇಶದ ಮತ್ತಷ್ಟು ನಗರಗಳಲ್ಲಿ ಈ ಸೇವೆಯನ್ನು ಪರಿಚಯಿಸಲಾಗುತ್ತದೆ ಎಂದು ತಿಳಿಸಿದ್ದು, ಪಟ್ಟಿಯಲ್ಲಿ ಯಾವೆಲ್ಲ ನಗರಗಳಿವೆ ಎನ್ನುವ ಮಾಹಿತಿಯನ್ನು ತಿಳಿಸಿಲ್ಲ.

    ಈಗಾಗಲೇ ಜಿಯೋ ಫೈಬರ್ ಬ್ರಾಡ್‍ಬ್ಯಾಂಡ್ ಸೇವೆ ಪಡೆಯುವ ಕೆಲ ಗ್ರಾಹಕರು ಈ ಹಿಂದೆ ಟ್ವೀಟ್ ಮಾಡಿದ್ದು, 1 ಜಿಬಿಪಿಎಸ್ ಸಂಪರ್ಕದಲ್ಲಿ 70 ಎಂಬಿಪಿಎಸ್ 100 ಎಂಬಿಪಿಎಸ್ ಡೇಟಾ ಸ್ಪೀಡ್ ಸಿಕ್ಕಿದೆ ಎಂದು ಹೇಳಿದ್ದರು. ಪುಣೆಯಲ್ಲಿ 743.28 ಎಂಬಿಪಿಎಸ್ ಡೇಟಾ ಸ್ಪೀಡ್ ದಾಖಲಾಗಿತ್ತು.

    ಈ ಫೈಬರ್ ಸೇವೆಯನ್ನು ಯಾವಾಗ ಆರಂಭವಾಗಲಿದೆ ಎನ್ನುವುದನ್ನು ಜಿಯೋ ಇನ್ನು ಅಧಿಕೃತವಾಗಿ ತಿಳಿಸಿಲ್ಲ. ಜಿಯೋ ಫೈಬರ್ ರೂಟರ್ ಬೆಲೆ 4 ಸಾವಿರ- 4,500 ರೂ. ಇರಲಿದೆ ಎಂದು ಹೇಳಲಾಗುತ್ತಿದ್ದು, ಖರೀದಿಸಿದ ಮೊದಲ 90 ದಿನ ಈ ಸೇವೆ ಜಿಯೋದಂತೆ ಉಚಿತವಾಗಿ ಸಿಗಲಿದೆ

    2016ರ ಸೆಪ್ಟೆಂಬರ್ ನಲ್ಲಿ ನಡೆದ ರಿಲಯನ್ಸ್ ವಾರ್ಷಿಕ ಸಭೆಯಲ್ಲಿ ಮುಕೇಶ್ ಅಂಬಾನಿ ಮಲ್ಟಿ ಗಿಗಾಬೈಟ್ ಸೇವೆಯನ್ನು ದೇಶದ 100 ನಗರಗಳಲ್ಲಿ ಆರಂಭಿಸಲಾಗುವುದು ಎಂದು ತಿಳಿಸಿದ್ದರು.

    ಇದನ್ನೂ ಓದಿ: ಗ್ರಾಹಕರಿಗೆ ಉಚಿತ ಡೇಟಾ ನೀಡಿದ್ದ ಜಿಯೋಗೆ ಆಗಿರುವ ನಷ್ಟ ಎಷ್ಟು ಗೊತ್ತೆ?

    ಇದನ್ನೂ ಓದಿ:ಸಿಮ್ ಆಯ್ತು ಜಿಯೋ ಸೆಟ್‍ಟಾಪ್ ಬಾಕ್ಸ್: ವಿಶೇಷತೆ ಏನು? ಬೆಲೆ ಎಷ್ಟು? ಆರಂಭ ಯಾವಾಗ?

  • ಗ್ರಾಹಕರಿಗೆ ಉಚಿತ ಡೇಟಾ ನೀಡಿದ್ದ ಜಿಯೋಗೆ ಆಗಿರುವ ನಷ್ಟ ಎಷ್ಟು ಗೊತ್ತೆ?

    ಗ್ರಾಹಕರಿಗೆ ಉಚಿತ ಡೇಟಾ ನೀಡಿದ್ದ ಜಿಯೋಗೆ ಆಗಿರುವ ನಷ್ಟ ಎಷ್ಟು ಗೊತ್ತೆ?

    ನವದೆಹಲಿ: ಗ್ರಾಹಕರಿಗೆ ಉಚಿತ ಡೇಟಾ ನೀಡಿರುವ ರಿಲಯನ್ಸ್ ಜಿಯೋ ಕಳೆದ ಆರು ತಿಂಗಳಿನಲ್ಲಿ 22.5 ಕೋಟಿ ರೂ. ನಿವ್ವಳ ನಷ್ಟವನ್ನು ಅನುಭವಿಸಿದೆ.

    ಮುಂಬೈ ಷೇರು ವಿನಿಮಯ ಕೇಂದ್ರಕ್ಕೆ (ಬಿಎಸ್‍ಇ) ಸೋಮವಾರ ಸಲ್ಲಿಸಿದ್ದ ಲೆಕ್ಕ ಪತ್ರದಲ್ಲಿ ಈ ವಿವರವನ್ನು ಜಿಯೋ ನೀಡಿದೆ.

    ಮಾರ್ಚ್ 31ಕ್ಕೆ ಅಂತ್ಯಗೊಂಡ ಹಣಕಾಸು ವರ್ಷದಲ್ಲಿ 22.5 ಕೋಟಿ ರೂ. ನಷ್ಟವನ್ನು ಅನುಭವಿಸಿದ್ದರೆ, ಈ ಹಿಂದಿನ ಹಣಕಾಸು ವರ್ಷದಲ್ಲಿ 7.46 ಕೋಟಿ ರೂ. ನಿವ್ವಳ ನಷ್ಟವನ್ನು ಅನುಭವಿಸಿತ್ತು. ಜಿಯೋದ ಒಟ್ಟು ಆದಾಯ ಕಳೆದ 6 ತಿಂಗಳಿನಲ್ಲಿ 2.25 ಕೋಟಿ ರೂ.ಗಳಿಂದ 54 ಲಕ್ಷ ರೂ. ಇಳಿಕೆಯಾಗಿದೆ.

    ಸೆಪ್ಟೆಂಬರ್ ತಿಂಗಳಿನಲ್ಲಿ ಆರಂಭಗೊಂಡಿದ್ದ ಜಿಯೋ ಮಾರ್ಚ್ 31ರ ವರೆಗೆ ಉಚಿತ ಸೇವೆಯನ್ನು ನೀಡಿತ್ತು. ಏಪ್ರಿಲ್ ಬಳಿಕ ಗ್ರಾಹಕರಿಂದ ತನ್ನ ಸೇವೆಗಳಿಗೆ ಶುಲ್ಕ ಪಡೆಯಲು ಆರಂಭಿಸಿತ್ತು.

    ಜಿಯೋ ಪ್ರೈಮ್ ನೋಂದಣಿಗೆ 99 ರೂ., ಸಮ್ಮರ್ ಸರ್‍ಪ್ರೈಸ್ ಆಫರ್ ಗೆ 303 ರೂ. ಬಳಿಕ ಧನ್ ಧನಾ ಧನ್ ಆಫರ್‍ಗೆ 309 ರೂ. ಶುಲ್ಕ ವಿಧಿಸಿತ್ತು.

    ಜಾಗತಿಕ ಹಣಕಾಸು ಸಂಸ್ಥೆ ಮೊರ್ಗಾನ್ ಸ್ಟಾನ್ಲಿ ಈ ಹಿಂದೆ ಜಿಯೋ 2020ರ ನಂತರ ಲಾಭ ಗಳಿಸಲಿದೆ ಎಂದು ಹೇಳಿತ್ತು. 2018ರಲ್ಲಿ 218 ಕೋಟಿ ರೂ., 2019 ರಲ್ಲಿ 209 ಕೋಟಿ ರೂ., 2020ರಲ್ಲಿ 233 ಕೋಟಿ ರೂ. ಆದಾಯಗಳಿಸಲಿದೆ ಎಂದು ಅದು ಅಂದಾಜಿಸಿದೆ.

    12 ಕೋಟಿ  ಬಳಕೆದಾರರಲ್ಲಿ ಈಗ 7.2 ಕೋಟಿ ಜನ ಪ್ರೈಮ್ ಸದಸ್ಯರಾಗಿದ್ದಾರೆ ಎಂದು ಜಿಯೋ ಹೇಳಿದೆ.

    2010ರಲ್ಲಿ ಆರಂಭಗೊಂಡಿದ್ದ ಜಿಯೋ 6 ವರ್ಷಗಳ ಎಲ್‍ಟಿಇ ನೆಟ್‍ವರ್ಕ್ ವಿಸ್ತರಣೆ ಮಾಡಿ, 2016ರ ಸೆಪ್ಟೆಂಬರ್‍ನಲ್ಲಿ ಆರಂಭಗೊಂಡಿತ್ತು. ಈಗ ಕೇವಲ ಆಫರ್‍ಗಳಿಗೆ ಮಾತ್ರ ಜಿಯೋ ಶುಲ್ಕ ವಿಧಿಸಿದ್ದರೂ ಮಾರ್ಚ್ 31, 2018ರ ನಂತರ ಜಿಯೋ ಆಪ್ ಗುಚ್ಚಗಳಿಗೆ ಶುಲ್ಕ ವಿಧಿಸಲಿದೆ.

    ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಜಿಯೋಗೆ ಒಟ್ಟು 2.5 ಲಕ್ಷ ಕೋಟಿ ರೂ.ಗಳನ್ನು  ಹೂಡಿಕೆ ಮಾಡಲಾಗಿದೆ ಎಂದು ಈ ಹಿಂದೆ ತಿಳಿಸಿದ್ದರು.

     ಇದನ್ನೂ ಓದಿ: ಈಗ ಬಿಎಸ್‍ಎನ್‍ಎಲ್‍ನಿಂದ ಗ್ರಾಹಕರಿಗೆ ಬಂಪರ್ ಆಫರ್

    ಇದನ್ನೂ ಓದಿ: ಜಿಯೋಗೆ ಫೈಟ್ ನೀಡಲು ಏರ್‍ಟೆಲ್‍ನಿಂದ ಪ್ರತಿದಿನ 1ಜಿಬಿ ಡೇಟಾದ ಹೊಸ ಆಫರ್ ರಿಲೀಸ್

    ಇದನ್ನೂ ಓದಿ: ಜಿಯೋ ಬಳಕೆದಾರರಿಗೆ ಮತ್ತೊಂದು ಗುಡ್‍ನ್ಯೂಸ್

    ಇದನ್ನೂ ಓದಿ: ಜಿಯೋ ಎಫೆಕ್ಟ್: 7 ವರ್ಷದಲ್ಲಿ ಮೊದಲ ಬಾರಿಗೆ ಟೆಲಿಕಾಂ ಕಂಪೆನಿಗಳ ಆದಾಯ ಭಾರೀ ಇಳಿಕೆ

    ಇದನ್ನೂ ಓದಿ:ಸಿಮ್ ಆಯ್ತು ಜಿಯೋ ಸೆಟ್‍ಟಾಪ್ ಬಾಕ್ಸ್: ವಿಶೇಷತೆ ಏನು? ಬೆಲೆ ಎಷ್ಟು? ಆರಂಭ ಯಾವಾಗ?

     


  • ಈಗ ಬಿಎಸ್‍ಎನ್‍ಎಲ್‍ನಿಂದ ಗ್ರಾಹಕರಿಗೆ ಬಂಪರ್ ಆಫರ್

    ಈಗ ಬಿಎಸ್‍ಎನ್‍ಎಲ್‍ನಿಂದ ಗ್ರಾಹಕರಿಗೆ ಬಂಪರ್ ಆಫರ್

    ನವದೆಹಲಿ: ರಿಲಯನ್ಸ್ ಜಿಯೋಗೆ ಸ್ಪರ್ಧೆ ನೀಡಲು ಈಗ ಬಿಎಸ್‍ಎನ್‍ಎಲ್ ಕಡಿಮೆ ಬೆಲೆಗೆ 3ಜಿ ಡೇಟಾ ನೀಡುವ ಮೂರು ಪ್ಲಾನ್ ಬಿಡುಗಡೆ ಮಾಡಿದೆ.

    333 ರೂ. ಪ್ಲಾನ್:
    90 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಪ್ಲಾನ್‍ನಲ್ಲಿ ಗ್ರಾಹಕರು ಪ್ರತಿದಿನ 3ಜಿಬಿ 3ಜಿ ಡೇಟಾವನ್ನು ಪಡೆದುಕೊಳ್ಳಬಹುದು. ಗ್ರಾಹಕರಿಗೆ ಒಟ್ಟು 270 ಜಿಬಿ ಡೇಟಾ ಸಿಗಲಿದೆ. ಈ ಪ್ಲಾನ್ ಪ್ರಕಾರ ಲೆಕ್ಕ ಹಾಕಿದ್ರೆ 1.23 ರೂ.ಗೆ 1 ಜಿಬಿ ಡೇಟಾ ಸಿಗಲಿದೆ.

    349 ರೂ. ಪ್ಲಾನ್:
    ಇದು 28 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಪ್ರತಿ ದಿನ 2ಜಿಬಿ 3ಜಿ ಡೇಟಾ ಸಿಗುತ್ತದೆ. ಈ 2ಜಿಬಿ ಬಳಕೆ ಪೂರ್ಣಗೊಂಡ ಬಳಿಕ ಈ ವೇಗ 80ಕೆಬಿಪಿಎಸ್‍ಗೆ ಇಳಿಯುತ್ತದೆ. ಈ ಪ್ಲಾನ್‍ನಲ್ಲಿ ಸ್ಥಳೀಯ ಮತ್ತು ಎಲ್ಲ ಎಸ್‍ಟಿಡಿ ಕರೆಗಳು ಉಚಿತವಾಗಿ ಸಿಗಲಿದೆ.

    395 ರೂ.
    71 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಪ್ಲಾನ್ ನಲ್ಲಿ ಗ್ರಾಹಕರಿಗೆ ಪ್ರತಿದಿನ 2ಜಿಬಿ 3ಜಿ ಡೇಟಾ ಸಿಗುತ್ತದೆ. ಇದರ ಜೊತೆ ಬಿಎಸ್‍ಎನ್‍ಎಲ್‍ನಿಂದ ಬಿಎಸ್‍ಎನ್‍ಎಲ್‍ಗೆ ಹೋಗುವ 3000 ನಿಮಿಷದ ಕರೆ ಮತ್ತು ಇತರೇ ನೆಟ್‍ವರ್ಕಿಗೆ ಹೋಗುವ 1800 ನಿಮಿಷದ ಕರೆ ಉಚಿತವಾಗಿ ಸಿಗಲಿದೆ.

    ಜಿಯೋ ಧನ್ ಧನಾ ಧನ್ ಪ್ಲಾನ್ ಹೇಗಿದೆ?
    ಜಿಯೋ ಪ್ರೈಮ್ ಗ್ರಾಹಕರು 309 ರೂ. ರಿಚಾರ್ಜ್ ಮಾಡಿದ್ರೆ 84 ದಿನಗಳ ಕಾಲ ಪ್ರತಿದಿನ 1 ಜಿಬಿ ಡೇಟಾವನ್ನು ಪಡೆಯಬಹುದು. ಅಷ್ಟೇ ಅಲ್ಲದೇ ಉಚಿತವಾಗಿ ಎಲ್ಲ ಸ್ಥಳೀಯ ಮತ್ತು ಎಸ್ ಟಿಡಿ  ಕರೆಗಳನ್ನು ಮಾಡಬಹುದಾಗಿದೆ.

    ಇದನ್ನೂ ಓದಿ: ಜಿಯೋಗೆ ಫೈಟ್ ನೀಡಲು ಏರ್‍ಟೆಲ್‍ನಿಂದ ಪ್ರತಿದಿನ 1ಜಿಬಿ ಡೇಟಾದ ಹೊಸ ಆಫರ್ ರಿಲೀಸ್

    ಇದನ್ನೂ ಓದಿ: ಜಿಯೋ ಬಳಕೆದಾರರಿಗೆ ಮತ್ತೊಂದು ಗುಡ್‍ನ್ಯೂಸ್

    ಇದನ್ನೂ ಓದಿ: ಜಿಯೋ ಎಫೆಕ್ಟ್: 7 ವರ್ಷದಲ್ಲಿ ಮೊದಲ ಬಾರಿಗೆ ಟೆಲಿಕಾಂ ಕಂಪೆನಿಗಳ ಆದಾಯ ಭಾರೀ ಇಳಿಕೆ

    ಇದನ್ನೂ ಓದಿ:ಸಿಮ್ ಆಯ್ತು ಜಿಯೋ ಸೆಟ್‍ಟಾಪ್ ಬಾಕ್ಸ್: ವಿಶೇಷತೆ ಏನು? ಬೆಲೆ ಎಷ್ಟು? ಆರಂಭ ಯಾವಾಗ?

    bsnl

  • ಜಿಯೋಗೆ ಫೈಟ್ ನೀಡಲು ಏರ್‍ಟೆಲ್‍ನಿಂದ ಪ್ರತಿದಿನ 1ಜಿಬಿ ಡೇಟಾದ ಹೊಸ ಆಫರ್ ರಿಲೀಸ್

    ಜಿಯೋಗೆ ಫೈಟ್ ನೀಡಲು ಏರ್‍ಟೆಲ್‍ನಿಂದ ಪ್ರತಿದಿನ 1ಜಿಬಿ ಡೇಟಾದ ಹೊಸ ಆಫರ್ ರಿಲೀಸ್

    ಮುಂಬೈ: ಜಿಯೋ ಧನ್ ಧನಾ ಧನ್ ಯೋಜನೆಗೆ ಪ್ರತಿಯಾಗಿ ಏರ್‍ಟೆಲ್ ಈಗ ಕಡಿಮೆ ಬೆಲೆಯಲ್ಲಿ ಡೇಟಾ ನೀಡುವ ಆಫರ್‍ಗಳನ್ನು ಪರಿಚಯಿಸಿದೆ.

    399ರೂ. ರಿಚಾರ್ಜ್:
    70 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಪ್ಯಾಕ್‍ನಲ್ಲಿ ಗ್ರಾಹಕರಿಗೆ ಪ್ರತಿದಿನ ಗರಿಷ್ಠ 1 ಜಿಬಿ 4ಜಿ ಡೇಟಾ ಮತ್ತು ಉಚಿತ ಕರೆಗಳು ಸಿಗುತ್ತದೆ. ಆದರೆ ಇಲ್ಲಿ ಕೆಲ ನಿಬಂಧನೆ ಇದ್ದು ಒಂದು ದಿನದಲ್ಲಿ ಗರಿಷ್ಠ 300 ನಿಮಿಷಗಳ ಕಾಲ ಹೊರ ಹೋಗುವ ಕರೆಗಳಿಗೆ ಯಾವುದೇ ಶುಲ್ಕ ಇಲ್ಲ. ಒಟ್ಟು 70 ದಿನಗಳಲ್ಲಿ 3 ಸಾವಿರ ನಿಮಿಷ ಸ್ಥಳೀಯ ಮತ್ತು ಎಸ್‍ಟಿಡಿ ಕರೆಗಳು ಉಚಿತವಾಗಿದ್ದು, ಈ ಮಿತಿಯನ್ನು ದಾಟಿದ ಬಳಿಕ ಪ್ರತಿ ಕರೆಯ 1 ನಿಮಿಷಕ್ಕೆ 10 ಪೈಸೆ ಶುಲ್ಕ ವಿಧಿಸುತ್ತದೆ.

    345 ರೂ. ರಿಚಾರ್ಜ್:
    28 ದಿನಗಳ ಕಾಲ ವ್ಯಾಲಿಡಿಟಿ ಹೊಂದಿರುವ ಈ ಆಫರ್‍ನಲ್ಲಿ ಪ್ರತಿ ದಿನ 2ಜಿಬಿ 4ಜಿ ಡೇಟಾ ಸಿಗುತ್ತದೆ ಅಷ್ಟೇ ಅಲ್ಲದೇ ಡೇಟಾ ಬಳಕೆಗೆ ಯಾವುದೇ ನಿಬಂಧನೆ ಇಲ್ಲ. ಈ ಹಿಂದೆ 500 ಎಂಬಿ ಡೇಟಾ ಬೆಳಗ್ಗೆ 6 ಗಂಟೆ ರಾತ್ರಿ 12 ಗಂಟೆಯವರೆಗೆ, ನಂತರ 500 ಎಂಬಿ ಡೇಟಾ ಮಧ್ಯರಾತ್ರಿ 12 ಗಂಟೆಯಿಂದ ಬಳಗ್ಗೆ 6 ಗಂಟೆಯವರೆಗೆ ಬಳಸಬೇಕಿತ್ತು.

    244 ರಿಚಾರ್ಜ್:
    70 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಆಫರ್‍ನಲ್ಲಿ ಗ್ರಾಹಕರಿಗೆ ಪ್ರತಿದಿನ 1 ಜಿಬಿ 4ಜಿ ಡೇಟಾ ಸಿಗುತ್ತದೆ. ಡೇಟಾ ಬಳಕೆಗೆ ಯಾವುದೇ ನಿಬಂಧನೆ ಇಲ್ಲ. ಆದರೆ ಈ ಆಫರ್‍ನಲ್ಲಿ ಏರ್‍ಟೆಲ್‍ನಿಂದ ಏರ್‍ಟೆಲ್‍ಗೆ ಹೋಗುವ ಕರೆಗಳು ಮಾತ್ರ ಉಚಿತವಾಗಿದೆ. ಪ್ರತಿದಿನ 300 ನಿಮಿಷದ ಕರೆಗಳು ಉಚಿತ ಎಂದು ಏರ್‍ಟೆಲ್ ತಿಳಿಸಿದೆ.

    ಆದರೆ ಈ ಆಫರ್ ಲಾಭವನ್ನು ಪಡೆಯಬೇಕಾದರೆ ಪ್ರಿ ಪೇಯ್ಡ್ ಗ್ರಾಹಕರು ಆನ್‍ಲೈನ್ ಮೂಲಕ ಹಣವನ್ನು ಪಾವತಿ ಮಾಡಿ ರಿಚಾರ್ಜ್ ಮಾಡಬೇಕಾಗುತ್ತದೆ.

    ಇದನ್ನೂ ಓದಿ: ಜಿಯೋ ಬಳಕೆದಾರರಿಗೆ ಮತ್ತೊಂದು ಗುಡ್‍ನ್ಯೂಸ್

    ಇದನ್ನೂ ಓದಿ: ಜಿಯೋ ಎಫೆಕ್ಟ್: 7 ವರ್ಷದಲ್ಲಿ ಮೊದಲ ಬಾರಿಗೆ ಟೆಲಿಕಾಂ ಕಂಪೆನಿಗಳ ಆದಾಯ ಭಾರೀ ಇಳಿಕೆ

    ಇದನ್ನೂ ಓದಿ:ಸಿಮ್ ಆಯ್ತು ಜಿಯೋ ಸೆಟ್‍ಟಾಪ್ ಬಾಕ್ಸ್: ವಿಶೇಷತೆ ಏನು? ಬೆಲೆ ಎಷ್ಟು? ಆರಂಭ ಯಾವಾಗ?

  • ಜಿಯೋ ಬಳಕೆದಾರರಿಗೆ ಮತ್ತೊಂದು ಗುಡ್‍ನ್ಯೂಸ್

    ಜಿಯೋ ಬಳಕೆದಾರರಿಗೆ ಮತ್ತೊಂದು ಗುಡ್‍ನ್ಯೂಸ್

    ಮುಂಬೈ: ಈಗಾಗಲೇ ಡೇಟಾದಲ್ಲಿ ದರ ಸಮರ ಆರಂಭಿಸಿರುವ ಜಿಯೋ ಇದೀಗ ಅಂತಾರಾಷ್ಟ್ರೀಯ ಕರೆಯಲ್ಲೂ ದರ ಸಮರ ಆರಂಭಿಸಿದೆ.

    1 ನಿಮಿಷಕ್ಕೆ ಕೇವಲ ಮೂರು ರೂ. ಕರೆ ಶುಲ್ಕ ವಿಧಿಸುವುದಾಗಿ ಜಿಯೋ ಹೇಳಿದೆ. ರೇಟ್ ಕಟ್ಟರ್ ಪ್ಲಾನ್ ಜಿಯೋ ಗ್ರಾಹಕರಿಗೆ ಸಿಗಬೇಕಾದರೆ 501 ರೂ. ರಿಚಾರ್ಜ್ ಮಾಡಬೇಕಾಗುತ್ತದೆ.

    ಯಾವ ದೇಶಗಳಿಗೆ ಎಷ್ಟು ರೂ.?
    ಅಮೆರಿಕ, ಇಂಗ್ಲೆಂಡ್, ಹಾಂಕಾಂಗ್, ಸಿಂಗಾಪುರ, ಆಸ್ಟ್ರಿಯಾ, ಬೆಲ್ಜಿಯಂ, ಬ್ರೆಜಿಲ್, ಇಟಲಿ, ಲುಕ್ಸಂಬರ್ಗ್, ಪೋಲಂಡ್, ಪೂರ್ಚ್‍ಗಲ್, ಸ್ವೀಡನ್, ತೈವಾನ್‍ಗಳಿಗೆ 3 ರೂ.ನಲ್ಲಿ ಕರೆ ಮಾಡಬಹುದು.

    ಫ್ರಾನ್ಸ್, ಪಾಕಿಸ್ತಾನ, ಇಸ್ರೇಲ್, ಜಪಾನ್, ಡೆನ್ಮಾರ್ಕ್, ದಕ್ಷಿಣ ಕೊರಿಯಾಗಳಿಗೆ ಪ್ರತಿ ನಿಮಿಷಕ್ಕೆ 4.8 ರೂ. ಕರೆ ಮಾಡಬಹುದು.

    ಈಗಾಗಲೇ ಉಚಿತ ಕರೆಯನ್ನು ನೀಡಿ ಡೇಟಾಗೆ ಮಾತ್ರ ಶುಲ್ಕ ವಿಧಿಸಿರುವುದು ಟೆಲಿಕಾಂ ಕಂಪೆನಿಗಳ ಆದಾಯ ಕುತ್ತು ಬಂದಿದೆ. ಈಗ ಐಎಸ್‍ಡಿ ಕರೆಯಲ್ಲೂ ದರ ಸಮರ ಆರಂಭಿಸಿದ್ದು ಉಳಿದ ಟೆಲಿಕಾಂ ಕಂಪೆನಿಗಳ ಆದಾಯದ ಮೇಲೆ ಪರಿಣಾಮ ಬೀರಲಿದೆ.

    ಯಾವ ದೇಶಗಳಿಗೆ ಕರೆ ಶುಲ್ಕ ಎಷ್ಟು ಎನ್ನುವುದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ. ರೇಟ್ ಕಟ್ಟರ್

    ಇದನ್ನೂ ಓದಿ: ಜಿಯೋ ಸರ್‍ಪ್ರೈಸ್ ಆಫರನ್ನು ಟ್ರಾಯ್ ಕ್ಯಾನ್ಸಲ್ ಮಾಡಿದ್ದು ಯಾಕೆ?

    ಟ್ರಾಯ್‍ಗೆ ಸಲ್ಲಿಕೆ:
    ಹೊಸ ಧನ್ ಧನಾ ಧನ್ ಟ್ಯಾರಿಫ್ ಪ್ಲಾನ್‍ನ ಸಂಪೂರ್ಣ ಮಾಹಿತಿಯನ್ನು ಜಿಯೋ ಟ್ರಾಯ್‍ಗೆ ಸಲ್ಲಿಸಿದೆ. ಸೋಮವಾರ ಜಿಯೋ ಧನ್ ಧನಾ ಧನ್ ಪ್ಲಾನ್‍ಗೆ ಸಂಬಂಧಿಸಿದ  ಸಂಪೂರ್ಣ ವಿವರವನ್ನು ಸೋಮವಾರ ಮಧ್ಯಾಹ್ನ ಸಲ್ಲಿಸಿರುವ ಬಗ್ಗೆ ಮೂಲಗಳು ಮಾಹಿತಿ ನೀಡಿವೆ.

    ಸಮ್ಮರ್ ಸರ್ ಪ್ರೈಸ್ ಆಫರಿಗೆ ಸಂಬಂಧಿಸಿದ ಮಾಹಿತಿಯನ್ನು ಜಿಯೋ ಟ್ರಾಯ್‍ಗೆ ಸಲ್ಲಿಸದೇ ಇದ್ದ ಕಾರಣ ಈ ಪ್ಲಾನನ್ನು ಹಿಂದಕ್ಕೆ ಪಡೆದುಕೊಂಡಿತ್ತು. ಇದಾದ ಬಳಿಕ ಜಿಯೋ ಧನ್ ಧನಾ ಧನ್ ಆಫರನ್ನು ಪರಿಚಯಿಸಿತ್ತು.

    ಇದನ್ನೂ ಓದಿ: ಜಿಯೋ ಎಫೆಕ್ಟ್: 7 ವರ್ಷದಲ್ಲಿ ಮೊದಲ ಬಾರಿಗೆ ಟೆಲಿಕಾಂ ಕಂಪೆನಿಗಳ ಆದಾಯ ಭಾರೀ ಇಳಿಕೆ

    ಇದನ್ನೂ ಓದಿ:ಸಿಮ್ ಆಯ್ತು ಜಿಯೋ ಸೆಟ್‍ಟಾಪ್ ಬಾಕ್ಸ್: ವಿಶೇಷತೆ ಏನು? ಬೆಲೆ ಎಷ್ಟು? ಆರಂಭ ಯಾವಾಗ?

     

  • ಜಿಯೋ ಎಫೆಕ್ಟ್: 7 ವರ್ಷದಲ್ಲಿ ಮೊದಲ ಬಾರಿಗೆ ಟೆಲಿಕಾಂ ಕಂಪೆನಿಗಳ ಆದಾಯ ಭಾರೀ ಇಳಿಕೆ

    ಜಿಯೋ ಎಫೆಕ್ಟ್: 7 ವರ್ಷದಲ್ಲಿ ಮೊದಲ ಬಾರಿಗೆ ಟೆಲಿಕಾಂ ಕಂಪೆನಿಗಳ ಆದಾಯ ಭಾರೀ ಇಳಿಕೆ

    ನವದೆಹಲಿ: ರಿಲಯನ್ಸ್ ಜಿಯೋ ಆಫರ್‍ಗಳಿಂದಾಗಿ 7 ವರ್ಷದಲ್ಲಿ ಮೊದಲ ಬಾರಿಗೆ 9 ಟೆಲಿಕಾಂ ಕಂಪೆನಿಗಳ ಆದಾಯ 2016-17ರಲ್ಲಿ 18.8 ಲಕ್ಷ ಕೋಟಿ ರೂ.ಗೆ ಕುಸಿತವಾಗಿದೆ ಎಂದು ಹೂಡಿಕೆ ಮಧ್ಯಸ್ಥಿಕೆ ಸಂಸ್ಥೆ ಸಿಎಲ್‍ಎಸ್‍ಎ ಅಂಕಿಅಂಶಗಳನ್ನು ಆಧಾರಿಸಿ ಲೈವ್‍ಮಿಂಟ್ ವರದಿ ಮಾಡಿದೆ.

    ಟೆಲಿಕಾಂ ಕಂಪೆನಿಗಳು 2015- 16ನೇ ಸಾಲಿನಲ್ಲಿ 19.3 ಲಕ್ಷ ಕೋಟಿ ರೂ. ಆದಾಯಗಳಿಸಿದ್ದರೆ, ಮುಂದಿನ ವರ್ಷಗಳಲ್ಲಿ ಈ ಆದಾಯ ಮತ್ತಷ್ಟು ಕಡಿಮೆಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

    2017-18ನೇ ಸಾಲಿನಲ್ಲಿ 1.84 ಲಕ್ಷ ಕೋಟಿ ರೂ. 2018-19ನೇ ಸಾಲಿನಲ್ಲಿ 18.7 ಲಕ್ಷ ಕೋಟಿ ರೂ. ಆದಾಯ ಬರಬಹುದೆಂದು ಈ ಹಿಂದೆ ಲೆಕ್ಕಾಚಾರ ಹಾಕಲಾಗಿತ್ತಾದರೂ ಅದೂ ಸಹ ಕಡಿಮೆಯಾಗಲಿದೆ ಎಂದು ವರದಿ ತಿಳಿಸಿದೆ.

    ಡಿಸೆಂಬರ್‍ನಲ್ಲಿ ಮುಕ್ತಾಯವಾದ ತ್ರೈಮಾಸಿಕ ಅವಧಿಯಲ್ಲಿ 9 ದೂರಸಂಪರ್ಕ ಕಂಪೆನಿಗಳ ಆದಾಯ ಶೇ. 1.1ರಷ್ಟು ಕುಸಿತವಾಗಿತ್ತು. ಇದು ಕಳೆದ 6 ತ್ರೈಮಾಸಿಕಗಳಲ್ಲೇ ದಾಖಲಾಗಿರುವ ಕಡಿಮೆ ಲಾಭದ ಪ್ರಮಾಣ ಎಂದು ಕೇರ್ ರೇಟಿಂಗ್ ಏಜೆನ್ಸಿ ತಿಳಿಸಿದೆ.

    ಡಿಸೆಂಬರ್‍ನಲ್ಲಿ ಕೊನೆಗೊಂಡ ತ್ರೈಮಾಸಿಕ ಅವಧಿಯಲ್ಲಿ ಏರ್‍ಟೆಲ್ ಆದಾಯದಲ್ಲಿ ಶೇ. 10.4ರ ಕುಸಿತವಾಗಿದ್ದರೆ, ಐಡಿಯಾದ ಆದಾಯದಲ್ಲಿ ಶೇ. 10.8ರಷ್ಟು ಇಳಿಕೆಯಾಗಿತ್ತು ಎಂದು ಕೇರ್ ರೇಟಿಂಗ್ ಏಜೆನ್ಸಿ ತಿಳಿಸಿದೆ.

    ಮೆಸೇಜ್, ಕರೆ, ಆಪ್ ಗಳನ್ನು ಉಚಿತವಾಗಿ ನೀಡಿ, ಡೇಟಾಗೆ ಮಾತ್ರ ಜಿಯೋ ದರ ನಿಗದಿ ಪಡಿಸಿದ ಕಾರಣ ಟೆಲಿಕಾಂ ಕಂಪೆನಿಗಳ ಆದಾಯದಲ್ಲಿ ಭಾರೀ ಇಳಿಕೆಯಾಗಿದೆ.

    ಇದನ್ನೂ ಓದಿ: ಜಿಯೋ ಎಫೆಕ್ಟ್: ಏರ್‍ಟೆಲ್‍ನಿಂದ ಟೆಲಿನಾರ್ ಕಂಪೆನಿ ಖರೀದಿ

    ಜಿಯೋಗೆ ಸ್ಪರ್ಧೆ ನೀಡಲು ಫೆಬ್ರವರಿಯಲ್ಲಿ ಏರ್‍ಟೆಲ್ ನಾರ್ವೆಯ ಟೆಲಿನಾರ್ ಕಂಪೆನಿಯ ಭಾರತದ ಘಟಕವನ್ನು ಖರೀದಿಸಿತ್ತು. ಮಾರ್ಚ್‍ನಲ್ಲಿ ದೇಶದ ಅತೀ ದೊಡ್ಡ ಟೆಲಿಕಾಂ ಸಂಸ್ಥೆಯನ್ನು ಸ್ಥಾಪಿಸುವ ಸಲುವಾಗಿ ಐಡಿಯಾ ಸೆಲ್ಯುಲರ್ ಮತ್ತು ಬ್ರಿಟಿಷ್ ಟೆಲಿಕಾಂ ಸಂಸ್ಥೆ ವೊಡಾಫೋನ್ ಭಾರತದ ಘಟಕ ವಿಲೀನಗೊಳ್ಳುತ್ತಿರುವ ಬಗ್ಗೆ ಘೋಷಿಸಿತ್ತು. ಐಡಿಯಾ ಹಾಗೂ ವೊಡಾಫೋನ್  ಇಂಡಿಯಾ ವಿಲೀನದಿಂದ 40 ಕೋಟಿಗೂ ಅಧಿಕ ಗ್ರಾಹಕರನ್ನೊಳಗೊಂಡ ಭಾರತದ ಅತೀ ದೊಡ್ಡ ಟೆಲಿಕಾಮ್ ಸಂಸ್ಥೆಯಾಗಿ ಹೊರಹೊಮ್ಮಲಿದೆ.

    ಸೆಪ್ಟೆಂಬರ್‍ನಲ್ಲಿ ಆರಂಭಗೊಂಡಿದ್ದ ಜಿಯೋ ಆರಂಭದಲ್ಲಿ ಡಿಸೆಂಬರ್ ವರೆಗೆ ಗ್ರಾಹಕರಿಗೆ ವೆಲಕಂ ಆಫರ್ ನೀಡಿತ್ತು. ಇದಾದ ಬಳಿಕ ಮಾರ್ಚ್ 31ರವರೆಗೆ ಹ್ಯಾಪಿ ನ್ಯೂ ಇಯರ್ ಪ್ಲಾನ್ ಬಿಡುಗಡೆ ಮಾಡಿತ್ತು. ಇದಾದ ಬಳಿಕ 99 ರೂ. ನೀಡಿ ಪ್ರೈಮ್ ಸದಸ್ಯರಾದವರಿಗೆ ಸಮ್ಮರ್ ಸರ್‍ಪ್ರೈಸ್ ಆಫರನ್ನು ಪ್ರಕಟಿಸಿ ಬಳಿಕ ಟ್ರಾಯ್ ನಿರ್ದೇಶನ ಮೇಲೆ ಈ ಆಫರ್‍ಗಳನ್ನು ಜಿಯೋ ಹಿಂದಕ್ಕೆ ಪಡೆದುಕೊಂಡಿದೆ. ಇದಾದ ಬಳಿಕ ಏಪ್ರಿಲ್ 11 ರಂದು ಧನ್ ಧನ ಧನ್ ಹೆಸರಿನಲ್ಲಿ ಮೂರು ತಿಂಗಳು ವ್ಯಾಲಿಡಿಟಿ ಹೊಂದಿರುವ ಹೊಸ ಆಫರ್‍ಗಳನ್ನು ಪರಿಚಯಿಸಿದೆ.

    ಇದನ್ನೂ ಓದಿ: ಜಿಯೋ ಎಫೆಕ್ಟ್: ಐಡಿಯಾ, ವೊಡಾಫೋನ್ ಇಂಡಿಯಾ ವಿಲೀನ

    ಪ್ರಸ್ತುತ ಜಿಯೋಗೆ 10 ಕೋಟಿ ಗ್ರಾಹಕರಿದ್ದಾರೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಹೇಳಿದ್ದಾರೆ. ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಸಂಖ್ಯೆಯ ಗ್ರಾಹಕರನ್ನು ಸಂಪಾದಿಸುವ ಮೂಲಕ ಜಿಯೋ ವಿಶ್ವದಾಖಲೆ ನಿರ್ಮಿಸಿದೆ.

    ಇದನ್ನೂ ಓದಿ:ಸಿಮ್ ಆಯ್ತು ಜಿಯೋ ಸೆಟ್‍ಟಾಪ್ ಬಾಕ್ಸ್: ವಿಶೇಷತೆ ಏನು? ಬೆಲೆ ಎಷ್ಟು? ಆರಂಭ ಯಾವಾಗ?

    ಇದನ್ನೂ ಓದಿ: ಜಿಯೋದಿಂದ ಈಗ ಧನ್ ಧನಾ ಧನ್ ಹೊಸ ಆಫರ್

  • ಜಿಯೋದಿಂದ ಈಗ ಧನ್ ಧನಾ ಧನ್ ಹೊಸ ಆಫರ್

    ಜಿಯೋದಿಂದ ಈಗ ಧನ್ ಧನಾ ಧನ್ ಹೊಸ ಆಫರ್

    ಮುಂಬೈ: ಸಮ್ಮರ್ ಸರ್‍ಪ್ರೈಸ್ ಆಫರನ್ನು ಹಿಂದಕ್ಕೆ ಪಡೆದಿದ್ದ ಜಿಯೋ ಈಗ ಧನ್ ಧನಾ ಧನ್  ಹೆಸರಿನಲ್ಲಿ ಎರಡು ರಿಚಾರ್ಜ್ ಪ್ಯಾಕ್ ಬಿಡುಗಡೆ ಮಾಡಿದೆ.

    ಪ್ರೈಮ್ ಗ್ರಾಹಕರಿಗೆ 3 ತಿಂಗಳು ವ್ಯಾಲಿಟಿಡಿ ಹೊಂದಿರುವ 309 ರೂ. ಮತ್ತು 509 ರೂ. ಎರಡು ಹೊಸ ಆಫರ್ ರಿಲೀಸ್ ಮಾಡಿದೆ. ಈ ಆಫರ್‍ನಲ್ಲಿ ಎಲ್ಲ ಕರೆಗಳು, ಎಸ್‍ಎಂಎಸ್ ಮತ್ತು ಜಿಯೋ ಆಪ್ ಉಚಿತವಾಗಿರಲಿದೆ.

    309 ರೂ. ರಿಚಾರ್ಜ್ ಮಾಡಿದ್ರೆ ಪ್ರತಿ ದಿನ 1 ಜಿಬಿ ಡೇಟಾವನ್ನು ಪಡೆಯಬಹುದಾಗಿದೆ. ಈ ಆಫರ್ ನಾನ್ ಪ್ರೈಮ್ ಸದಸ್ಯರು ಪಡೆಯಬೇಕಾದರೆ 408 ರೂ.(ಜಿಯೋ ಪ್ರೈಮ್ 99 ರೂ. + 309 ರೂ.) ರಿಚಾರ್ಜ್ ಮಾಡಬೇಕಾಗುತ್ತದೆ.

    509 ರೂ. ರಿಚಾರ್ಜ್ ಮಾಡಿದ್ರೆ ಪ್ರೈಮ್ ಸದಸ್ಯರು ಪ್ರತಿ ದಿನ 2 ಜಿಬಿ ಡೇಟಾವನ್ನು ಪಡೆಯಬಹುದಾಗಿದೆ. ನಾನ್ ಪ್ರೈಮ್ ಸದಸ್ಯರು ಈ ಆಫರನ್ನು ಪಡೆಯಬೇಕಾದರೆ 608 ರೂ.( ಜಿಯೋ ಪ್ರೈಮ್ 99 ರೂ+ 509 ರೂ.) ರಿಚಾರ್ಜ್ ಮಾಡಬೇಕಾಗುತ್ತದೆ.

    ಇದನ್ನೂ ಓದಿ:ಜಿಯೋ ಸರ್‍ಪ್ರೈಸ್ ಆಫರನ್ನು ಟ್ರಾಯ್ ಕ್ಯಾನ್ಸಲ್ ಮಾಡಿದ್ದು ಯಾಕೆ?

    ಟ್ರಾಯ್ ನಿರ್ದೇಶನದ ಹಿನ್ನೆಲೆಯಲ್ಲಿ ಜಿಯೋ ಸಮ್ಮರ್ ಸರ್‍ಪ್ರೈಸ್ ಆಫರನ್ನು ಹಿಂದಕ್ಕೆ ಪಡೆದುಕೊಂಡಿತ್ತು. ಹಿಂದಕ್ಕೆ ಪಡೆದುಕೊಂಡ ಬಳಿಕ ಶೀಘ್ರವೇ ಹೊಸ ಆಫರ್‍ಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಜಿಯೋ ಹೇಳಿತ್ತು.

     

  • ಜಿಯೋ ಸರ್‍ಪ್ರೈಸ್ ಆಫರನ್ನು ಟ್ರಾಯ್ ಕ್ಯಾನ್ಸಲ್ ಮಾಡಿದ್ದು ಯಾಕೆ?

    ಜಿಯೋ ಸರ್‍ಪ್ರೈಸ್ ಆಫರನ್ನು ಟ್ರಾಯ್ ಕ್ಯಾನ್ಸಲ್ ಮಾಡಿದ್ದು ಯಾಕೆ?

    ಮುಂಬೈ: ಜಿಯೋದ ಸಮ್ಮರ್ ಸರ್‍ಪ್ರೈಸ್ ಆಫರ್ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಚೌಕಟ್ಟಿನಲ್ಲಿ ಇರದ ಕಾರಣ ಆ ಆಫರ್‍ನ್ನು ಹಿಂದಕ್ಕೆ ಪಡೆಯಲು ನಾವು ನಿರ್ದೇಶನ ನೀಡಿದ್ದೇವೆ ಎಂದು ಟ್ರಾಯ್ ಕಾರ್ಯದರ್ಶಿ ಸುಧೀರ್ ಗುಪ್ತಾ ಹೇಳಿದ್ದಾರೆ.

    ಈ ವಿಚಾರವಾಗಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಏಪ್ರಿಲ್ 5ರಂದು ನಾವು ಜಿಯೋ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೆವು. ಈ ವೇಳೆ ಸಮ್ಮರ್ ಸರ್‍ಪ್ರೈಸ್ ಆಫರ್ ಹೇಗೆ ಟ್ರಾಯ್ ನಿಯಮದ ಅಡಿಯಲ್ಲಿ ಬರುತ್ತದೆ ಎನ್ನುವ ಪ್ರಶ್ನೆ ಕೇಳಿದ್ದೆವು. ಈ ಪ್ರಶ್ನೆಗೆ ಅವರು ಸಮರ್ಪಕ ಉತ್ತರ ನೀಡುವುಲ್ಲಿ ವಿಫಲರಾದರು. ಈ ಕಾರಣಕ್ಕಾಗಿ ನಾವು ಆಫರ್‍ನ್ನು ಹಿಂದಕ್ಕೆ ಪಡೆಯುವಂತೆ ಸೂಚಿಸಿದೆವು ಎಂದು ತಿಳಿಸಿದ್ದಾರೆ.

    ಇದೇ ವೇಳೆ ಗುಪ್ತಾ ಅವರು ಹ್ಯಾಪಿ ನ್ಯೂ ಇಯರ್ ಪ್ಲಾನ್‍ನಲ್ಲಿ ಜಿಯೋ ಟ್ರಾಯ್ ನಿಯಮವನ್ನು ಉಲ್ಲಂಘನೆ ಮಾಡಿಲ್ಲ ಎಂದು ತಿಳಿಸಿದರು.

    ಇದೇ ವೇಳೆ ಯಾರೆಲ್ಲ ಈಗಾಗಲೇ ಜಿಯೋ ಪ್ರೈಮ್ ಮೆಂಬರ್ ಆಗಿದ್ದಾರೋ ಅವರೆಲ್ಲರೂ ಜೂನ್‍ವರೆಗೆ ಡೇಟಾ ಮತ್ತು ಉಚಿತ ಕರೆಗಳನ್ನು ಪಡೆಯಲು ಅರ್ಹರಾಗಿದ್ದಾರೆ ಎಂದು ಹೇಳಿದರು.

    ಸಮ್ಮರ್ ಸರ್‍ಪ್ರೈಸ್ ಆಫರ್ ಅನ್ನು ಹಿಂದಕ್ಕೆ ಪಡೆಯುವ ಮೊದಲೇ ಜಿಯೋ ಟಿವಿಯಲ್ಲಿ ಮತ್ತು ಪತ್ರಿಕೆಗಳಲ್ಲಿ ಜಾಹಿರಾತು ನೀಡಿದೆ ಅಲ್ಲವೇ ಎಂದು ಪ್ರಶ್ನಿಸಿದ್ದಕ್ಕೆ, ಈ ರೀತಿಯ ಜಾಹಿರಾತು ನೀಡುವುದನ್ನು ಜಿಯೋ ನಿಲ್ಲಿಸುತ್ತದೆ ಎಂದು ನಾವು ನಂಬಿದ್ದೇವೆ ಎಂದು ಉತ್ತರಿಸಿದರು.

    ಯಾವುದೇ ಟೆಲಿಕಾಂ ಕಂಪೆನಿ ಹೊಸ ಪ್ಲಾನ್ ಪ್ರಕಟಿಸಿದರೆ ಅದರ ವಿವರವನ್ನು ಒಂದು ವಾರದ ಒಳಗಡೆ ಟ್ರಾಯ್‍ಗೆ ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ. ಆದರೆ ಜಿಯೋ ಏಪ್ರಿಲ್ 7ರವರೆಗೂ ಸಮ್ಮರ್ ಸರ್‍ಪ್ರೈಸ್ ಆಫರ್ ಬಗ್ಗೆ ಯಾವುದೇ ವಿವರವನ್ನು ಸಲ್ಲಿಸಿಲ್ಲ ಎಂದು ಟ್ರಾಯ್ ತಿಳಿಸಿದೆ.

    ಈ ಸಂಬಂಧ ಗುರುವಾರ ರಾತ್ರಿ ಹೇಳಿಕೆ ಬಿಡುಗಡೆ ಮಾಡಿರುವ ಜಿಯೋ, ಟ್ರಾಯ್ ಸಲಹೆಯ ಮೇರೆಗೆ ನಾವು 3 ತಿಂಗಳ ಸಮ್ಮರ್ ಸರ್‍ಪ್ರೈಸ್ ಆಫರ್ ಹಿಂದಕ್ಕೆ ಪಡೆಯುತ್ತಿದ್ದೇವೆ. ಟ್ರಾಯ್ ಸಲಹೆಗೆ ನಾವು ಬದ್ಧರಾಗಿದ್ದೇವೆ. ಆದರೆ ಯಾರೆಲ್ಲ ಸಮ್ಮರ್ ಸರ್ ಪ್ರೈಸ್ ಆಫರ್ ರಿಚಾರ್ಜ್ ಮಾಡಿದ್ದಾರೋ ಅವರು ಈ ಆಫರ್‍ನಲ್ಲೇ ಮುಂದುವರೆಯಲಿದ್ದಾರೆ ಎಂದು ತಿಳಿಸಿದೆ.

     ಆರಂಭದಲ್ಲಿ ವೆಲಕಂ ಆಫರ್ ಪ್ರಕಟಿಸಿದಾಗಲೇ ಜಿಯೋದ ಮೇಲೆ ಟ್ರಾಯ್ ನಿಮಯ ಉಲ್ಲಂಘನೆ ಆರೋಪ ಕೇಳಿ ಬಂದಿತ್ತು. ಏರ್‍ಟೆಲ್, ಐಡಿಯಾ, ವೊಡಾಫೋನ್ ಕಂಪೆನಿಗಳು ಟ್ರಾಯ್‍ಗೆ ದೂರು ನೀಡಿದ್ದವು. ಆದರೆ 90 ದಿನಗಳ ಉಚಿತ ಸೇವೆ ತನ್ನ ನಿಮಯದ ಅಡಿಯಲ್ಲೇ ಇದೆ. ಕಂಪೆನಿ ತನ್ನ ಪ್ರಚಾರಕ್ಕಾಗಿ ಈ ರೀತಿಯ ಉಚಿತ ಸೇವೆಯನ್ನು ನೀಡಲು ಅವಕಾಶವಿದೆ ಎಂದು ಹೇಳಿ ಟ್ರಾಯ್ ಟೆಲಿಕಾಂ ಕಂಪೆನಿಗಳ ಆರೋಪವನ್ನು ತಿರಸ್ಕರಿಸಿತ್ತು. ಆದರೆ ಇದಾದ ಬಳಿಕ ಜಿಯೋ ಹ್ಯಾಪಿ ನ್ಯೂ ಇಯರ್ ಪ್ಲಾನ್ ನೀಡಿತ್ತು. ಇದರಲ್ಲಿ ಒಂದು ದಿನ ಗರಿಷ್ಟ 1 ಜಿಬಿ ಡೇಟಾ ಬಳಕೆ ಮಾಡಬಹುದಾಗಿತ್ತು. ಮಾರ್ಚ್ 31ಕ್ಕೆ ಈ ಅವಧಿ ಮುಕ್ತಾಯವಾದ ಬಳಿಕ ಜಿಯೋ ಸಮ್ಮರ್ ಸರ್‍ಪ್ರೈಸ್ ಆಫರ್ ಪ್ರಕಟಿಸಿತ್ತು.

    ಏನಿದು ಸಮ್ಮರ್ ಸರ್‍ಪ್ರೈಸ್ ಆಫರ್?
    ಜಿಯೋ ಸಮ್ಮರ್ ಆಫರ್ ನಿಮಗೆ ಬೇಕಾದ್ರೆ ಮೊದಲು ನೀವು ಜಿಯೋದ ಯಾವ ಗ್ರಾಹಕರ ವಿಭಾಗದಲ್ಲಿ ಇದ್ದೀರಿ ಎನ್ನುವುದನ್ನು ತಿಳಿದುಕೊಳ್ಳಬೇಕು. ಜಿಯೋದಲ್ಲಿ ಸದ್ಯಕ್ಕೆ ಎರಡು ವರ್ಗದ ಗ್ರಾಹಕರಿದ್ದಾರೆ. ಒಂದನೇಯ ಗ್ರಾಹಕರು 99 ರೂ. ನೀಡಿ ಪ್ರೈಮ್ ಸದಸ್ಯರಾದವರು. 99 ರೂ. ನೀಡದೇ ಈಗಲೂ ಜಿಯೋ ಸೇವೆಯನ್ನು ಬಳಸುತ್ತಿರುವವರು ಎರಡನೇ ವರ್ಗದ ಗ್ರಾಹಕರು. ಹೀಗಾಗಿ ಜಿಯೋ ಸಮ್ಮರ್ ಆಫರ್ ಲಾಭ ನಿಮಗೆ ಬೇಕಿದ್ದಲ್ಲಿ ಮೊದಲು ನೀವು 99 ರೂ. ನೀಡಿ ಜಿಯೋ ಪ್ರೈಮ್ ಸದಸ್ಯರಾಗಬೇಕಾಗುತ್ತದೆ.

    ಈ ಆಫರ್ ಲಾಭ ಸಿಗಬೇಕಿದ್ದರೆ 303 ರೂ. ಮತ್ತು ಅದಕ್ಕಿಂತ ಹೆಚ್ಚಿನ ರಿಚಾರ್ಜ್ ಮಾಡಬೇಕಾಗಿತ್ತು. ಈ ರಿಚಾರ್ಜ್ ಮಾಡಿದ್ದರೆ ಯಾವ ಪ್ಯಾಕ್ ಹಾಕಿದ್ದೀರೋ ಆ ಪ್ಯಾಕ್‍ನ ಆಫರ್ ಮತ್ತೆ ಮೂರು ತಿಂಗಳು ವಿಸ್ತರಣೆಯಾಗುತಿತ್ತು. ಇದರ ಅರ್ಥ ನೀವು 303 ರೂಪಾಯಿ ಪ್ಯಾಕ್ ಹಾಕಿದ್ರೆ ಅದರಲ್ಲಿ ಪ್ರತಿ ದಿನ ನಿಮಗೆ ಗರಿಷ್ಠ ಒಂದು ಜಿಬಿ ಡೇಟಾದ ಜೊತೆ ಹೊರ ಹೋಗುವ ಎಲ್ಲ ಕರೆಗಳು ಮತ್ತು ಮೆಸೇಜ್ ಉಚಿತವಾಗಿ ಸಿಗುತಿತ್ತು. ಆದರೆ ಈ ಆಫರ್ ವ್ಯಾಲಿಡಿಟಿ 28 ದಿನಗಳು ಮಾತ್ರ ಇತ್ತು. ಆದರೆ ಈ ಸಮ್ಮರ್ ಸರ್‍ಪೈಸ್ ಆಫರ್‍ನಲ್ಲಿ ಈ ವ್ಯಾಲಿಡಿಟಿ ಅವಧಿ ಜೂನ್ 30ರವರೆಗೆ ವಿಸ್ತರಣೆಯಾಗಿತ್ತು.

    ಇದನ್ನೂ ಓದಿ: ಸಿಮ್ ಆಯ್ತು ಜಿಯೋ ಸೆಟ್‍ಟಾಪ್ ಬಾಕ್ಸ್: ವಿಶೇಷತೆ ಏನು? ಬೆಲೆ ಎಷ್ಟು? ಆರಂಭ ಯಾವಾಗ?

  • ಜಿಯೋ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್: ಸಮ್ಮರ್ ಸರ್‍ಪ್ರೈಸ್ ಆಫರ್ ಇರಲ್ಲ

    ಜಿಯೋ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್: ಸಮ್ಮರ್ ಸರ್‍ಪ್ರೈಸ್ ಆಫರ್ ಇರಲ್ಲ

    ಮುಂಬೈ: ಜಿಯೋ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್. ಸಮ್ಮರ್ ಸರ್ ಪ್ರೈಸ್ ಆಫರ್‍ನಲ್ಲಿ ಉಚಿತ ಡೇಟಾವನ್ನು ಪಡೆಯುತ್ತಿದ್ದ ನೀವು ಇನ್ನು ಮುಂದೆ ಜಿಯೋ ಸೇವೆ ಬಳಸಬೇಕಾದರೆ ಹಣವನ್ನು ಪಾವತಿ ಮಾಡಲೇಬೇಕು.

    ಸಮ್ಮರ್ ಸರ್‍ಪ್ರೈಸ್ ಆಫರ್ ಹೆಸರಿನಲ್ಲಿ ಗ್ರಾಹಕರಿಗೆ ಸರ್‍ಪ್ರೈಸ್ ನೀಡುತ್ತಿದ್ದ ಜಿಯೋ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಸಲಹೆಯ ಹಿನ್ನೆಲೆಯಲ್ಲಿ ಈ ಆಫರ್ ಅನ್ನು ಹಿಂದಕ್ಕೆ ಪಡೆದುಕೊಂಡಿದೆ.

    ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಜಿಯೋ, ಟ್ರಾಯ್ ಸಲಹೆಯ ಮೇರೆಗೆ ನಾವು 3 ತಿಂಗಳ ಸಮ್ಮರ್ ಸರ್‍ಪ್ರೈಸ್ ಆಫರ್ ಹಿಂದಕ್ಕೆ ಪಡೆಯುತ್ತಿದ್ದೇವೆ. ಟ್ರಾಯ್ ಸಲಹೆಗೆ ನಾವು ಬದ್ಧರಾಗಿದ್ದೇವೆ. ಆದರೆ ಯಾರೆಲ್ಲ ಸಮ್ಮರ್ ಸರ್ ಪ್ರೈಸ್ ಆಫರ್ ರಿಚಾರ್ಜ್ ಮಾಡಿದ್ದಾರೋ ಅವರು ಸದ್ಯಕ್ಕೆ ಈ ಆಫರ್‍ನಲ್ಲೇ ಮುಂದುವರೆಯಲಿದ್ದಾರೆ ಎಂದು ತಿಳಿಸಿದೆ.

    ಇದನ್ನೂ ಓದಿ: ಜಿಯೋ ಸರ್‍ಪ್ರೈಸ್ ಆಫರನ್ನು ಟ್ರಾಯ್ ಕ್ಯಾನ್ಸಲ್ ಮಾಡಿದ್ದು ಯಾಕೆ?

    ಜಿಯೋದ ಮೇಲೆ ಟ್ರಾಯ್ ನಿಮಯ ಉಲ್ಲಂಘನೆ ಆರೋಪ ಬರುವುದು ಇದೆ ಮೊದಲೆನಲ್ಲ. ಆರಂಭದಲ್ಲಿ ವೆಲಕಂ ಆಫರ್ ಪ್ರಕಟಿಸಿದಾಗಲೇ ಏರ್‍ಟೆಲ್, ಐಡಿಯಾ, ವೊಡಾಫೋನ್ ಕಂಪೆನಿಗಳು ಟ್ರಾಯ್‍ಗೆ ದೂರು ನೀಡಿದ್ದವು. ಆದರೆ 90 ದಿನಗಳ ಉಚಿತ ಸೇವೆ ತನ್ನ ನಿಯಮದ ಅಡಿಯಲ್ಲೇ ಇದೆ. ಕಂಪೆನಿ ತನ್ನ ಪ್ರಚಾರಕ್ಕಾಗಿ ಈ ರೀತಿಯ ಉಚಿತ ಸೇವೆಯನ್ನು ನೀಡಲು ಅವಕಾಶವಿದೆ ಎಂದು ಹೇಳಿ ಟ್ರಾಯ್ ಟೆಲಿಕಾಂ ಕಂಪೆನಿಗಳ ಆರೋಪವನ್ನು ತಿರಸ್ಕರಿಸಿತ್ತು. ಆದರೆ ಇದಾದ ಬಳಿಕ ಜಿಯೋ ಹ್ಯಾಪಿ ನ್ಯೂ ಇಯರ್ ಪ್ಲಾನ್ ನೀಡಿತ್ತು. ಇದರಲ್ಲಿ ಒಂದು ದಿನ ಗರಿಷ್ಟ 1 ಜಿಬಿ ಡೇಟಾ ಬಳಕೆ ಮಾಡಬಹುದಾಗಿತ್ತು. ಮಾರ್ಚ್ 31ಕ್ಕೆ ಈ ಅವಧಿ ಮುಕ್ತಾಯವಾದ ಬಳಿಕ ಜಿಯೋ ಸಮ್ಮರ್ ಸರ್‍ಪ್ರೈಸ್ ಆಫರ್ ಪ್ರಕಟಿಸಿತ್ತು.

    ಉತ್ತರ ಸಿಕ್ಕಿಲ್ಲ
    303 ರೂ. ಮತ್ತು ಅದಕ್ಕಿಂತ ಹೆಚ್ಚಿನ ರಿಚಾರ್ಜ್ ಮಾಡಿದ ಗ್ರಾಹಕರಿಗೆ ಮಾತ್ರ ಈ ಸಮ್ಮರ್ ಸರ್‍ಪ್ರೈಸ್ ಆಫರ್ ನೀಡುವುದಾಗಿ ಜಿಯೋ ಹೇಳಿತ್ತು. ಆದರೆ ಈ ಆಫರ್ ತನ್ನ ನಿಯಮವನ್ನು ಉಲ್ಲಂಘಿಸಿದೆ ಎಂದು ಹೇಳಿದೆ. ಉಚಿತವಾಗಿ ನೀಡಿದರೆ ಟ್ರಾಯ್ ನಿಮಯ ಉಲ್ಲಂಘನೆ ಆಗುತ್ತಿರುವುದನ್ನು ಒಪ್ಪಿಕೊಳ್ಳಬಹುದು. ಆದರೆ ಇಲ್ಲಿ 303 ರೂ. ಮತ್ತು ಅದಕ್ಕಿಂತ ಹೆಚ್ಚಿನ ರಿಚಾರ್ಜ್ ಮಾಡಿದವರಿಗೆ ಮಾತ್ರ ಈ ಆಫರ್ ಸಿಗಲಿದೆ ಎಂದು ಜಿಯೋ ಸ್ಪಷ್ಟವಾಗಿ ತಿಳಿಸಿದೆ. ಹೀಗಾಗಿ ಈ ಆಫರ್ ಟ್ರಾಯ್‍ಯ ಉಚಿತ ಸೇವೆಯ ನಿಯಮವನ್ನು ಹೇಗೆ ಉಲ್ಲಂಘಿಸುತ್ತದೆ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ. ಮುಂದೆ ಈ ಪ್ರಶ್ನೆಗೆ ಉತ್ತರ ಸಿಗಲಿದೆ.

    ಇದನ್ನೂ ಓದಿ: ಡೇಟಾ ಸ್ಪೀಡ್ ಟೆಸ್ಟ್ ವಾರ್: ಏರ್‍ಟೆಲ್ ವಿರುದ್ಧ ಜಿಯೋ ದೂರು, ದೂರು ನೀಡಿದ್ದು ಯಾಕೆ? ಇಲ್ಲಿದೆ ಪೂರ್ಣ ಮಾಹಿತಿ

    ಏನಿದು ಸಮ್ಮರ್ ಸರ್‍ಪ್ರೈಸ್ ಆಫರ್?
    ಜಿಯೋ ಸಮ್ಮರ್ ಆಫರ್ ನಿಮಗೆ ಬೇಕಾದ್ರೆ ಮೊದಲು ನೀವು ಜಿಯೋದ ಯಾವ ಗ್ರಾಹಕರ ವಿಭಾಗದಲ್ಲಿ ಇದ್ದೀರಿ ಎನ್ನುವುದನ್ನು ತಿಳಿದುಕೊಳ್ಳಬೇಕು. ಜಿಯೋದಲ್ಲಿ ಸದ್ಯಕ್ಕೆ ಎರಡು ವರ್ಗದ ಗ್ರಾಹಕರಿದ್ದಾರೆ. ಒಂದನೇಯ ಗ್ರಾಹಕರು 99 ರೂ. ನೀಡಿ ಪ್ರೈಮ್ ಸದಸ್ಯರಾದವರು. 99 ರೂ. ನೀಡದೇ ಈಗಲೂ ಜಿಯೋ ಸೇವೆಯನ್ನು ಬಳಸುತ್ತಿರುವವರು ಎರಡನೇ ವರ್ಗದ ಗ್ರಾಹಕರು. ಹೀಗಾಗಿ ಜಿಯೋ ಸಮ್ಮರ್ ಆಫರ್ ಲಾಭ ನಿಮಗೆ ಬೇಕಿದ್ದಲ್ಲಿ ಮೊದಲು ನೀವು 99 ರೂ. ನೀಡಿ ಜಿಯೋ ಪ್ರೈಮ್ ಸದಸ್ಯರಾಗಬೇಕಾಗುತ್ತದೆ.

    ಈ ಆಫರ್ ಲಾಭ ಸಿಗಬೇಕಿದ್ದರೆ 303 ರೂ. ಮತ್ತು ಅದಕ್ಕಿಂತ ಹೆಚ್ಚಿನ ರಿಚಾರ್ಜ್ ಮಾಡಬೇಕಾಗಿತ್ತು. ಈ ರಿಚಾರ್ಜ್ ಮಾಡಿದ್ದರೆ ಯಾವ ಪ್ಯಾಕ್ ಹಾಕಿದ್ದೀರೋ ಆ ಪ್ಯಾಕ್‍ನ ಆಫರ್ ಮತ್ತೆ ಮೂರು ತಿಂಗಳು ವಿಸ್ತರಣೆಯಾಗುತಿತ್ತು. ಇದರ ಅರ್ಥ ನೀವು 303 ರೂಪಾಯಿ ಪ್ಯಾಕ್ ಹಾಕಿದ್ರೆ ಅದರಲ್ಲಿ ಪ್ರತಿ ದಿನ ನಿಮಗೆ ಗರಿಷ್ಠ ಒಂದು ಜಿಬಿ ಡೇಟಾದ ಜೊತೆ ಹೊರ ಹೋಗುವ ಎಲ್ಲ ಕರೆಗಳು ಮತ್ತು ಮೆಸೇಜ್ ಉಚಿತವಾಗಿ ಸಿಗುತಿತ್ತು. ಆದರೆ ಈ ಆಫರ್ ವ್ಯಾಲಿಡಿಟಿ 28 ದಿನಗಳು ಮಾತ್ರ ಇತ್ತು. ಆದರೆ ಈ ಸಮ್ಮರ್ ಸರ್‍ಪೈಸ್ ಆಫರ್‍ನಲ್ಲಿ ಈ ವ್ಯಾಲಿಡಿಟಿ ಅವಧಿ ಜೂನ್ 30ರವರೆಗೆ ವಿಸ್ತರಣೆಯಾಗಿತ್ತು.

    ಇದನ್ನೂ ಓದಿ: ಸಿಮ್ ಆಯ್ತು ಜಿಯೋ ಸೆಟ್‍ಟಾಪ್ ಬಾಕ್ಸ್: ವಿಶೇಷತೆ ಏನು? ಬೆಲೆ ಎಷ್ಟು? ಆರಂಭ ಯಾವಾಗ?

  • ಈ ಜಿಯೋ ಪ್ಯಾಕ್ ಹಾಕಿದ್ರೆ ನಿಮಗೆ 100 ಜಿಬಿ ಡೇಟಾ ಫ್ರೀ!

    ಈ ಜಿಯೋ ಪ್ಯಾಕ್ ಹಾಕಿದ್ರೆ ನಿಮಗೆ 100 ಜಿಬಿ ಡೇಟಾ ಫ್ರೀ!

    ಮುಂಬೈ: ಈಗಾಗಲೇ 303 ರೂ.  ರಿಚಾರ್ಜ್ ಮಾಡಿದ ಗ್ರಾಹಕರಿಗೆ ಮೂರು ತಿಂಗಳು 84 ಜಿಬಿ ಉಚಿತ ಡೇಟಾ ನೀಡಿದ್ದ ಜಿಯೋ ಈಗ 999 ರೂ. ಮತ್ತು ಅದಕ್ಕಿಂತಲೂ ಹೆಚ್ಚಿನ ರಿಚಾರ್ಜ್ ಮಾಡಿದ ಗ್ರಾಹಕರಿಗೆ 100 ಜಿಬಿ ಡೇಟಾ ನೀಡುವುದಾಗಿ ಹೇಳಿದೆ.

    ಈ ಸಮ್ಮರ್ ಸರ್‍ಪ್ರೈಸ್ ಆಫರ್‍ನಲ್ಲಿ ಗ್ರಾಹಕರು ಪ್ರತಿದಿನ ಉಚಿತವಾಗಿ ಎಷ್ಟು ಬೇಕಾದರೂ ಡೇಟಾವನ್ನು ಬಳಕೆ ಮಾಡಬಹುದು ಎಂದು ಜಿಯೋ ತಿಳಿಸಿದೆ.

    999 ರಿಚಾರ್ಜ್ ಭಿನ್ನ ಹೇಗೆ?
    ಈಗ ನೀವು ಜಿಯೋ ಪ್ರೈಮ್ ಗ್ರಾಹಕರಾಗಿದ್ದು 303 ರೂ. ರಿಚಾರ್ಜ್ ಮಾಡಿದ್ರೆ ಪ್ರತಿ ದಿನ ಗರಿಷ್ಟ 1ಜಿಬಿ ಡೇಟಾವನ್ನು ಬಳಕೆ ಮಾಡಬಹುದು. 1 ಜಿಬಿ ಮುಗಿದ  ಡೇಟಾ ವೇಗ 128 ಕೆಬಿಪಿಎಸ್‍ಗೆ ಇಳಿಯುತ್ತದೆ. ಆದರೆ 999 ರೂ. ಮತ್ತು ಅಧಿಕ  ಮೊತ್ತದ ರಿಚಾರ್ಜ್ ಮಾಡಿದ್ರೆ ಗ್ರಾಹಕರಿಗೆ ದಿನದಲ್ಲಿ ಇಂತಿಷ್ಟೇ ಡೇಟಾವನ್ನು ಬಳಸಬೇಕೆಂಬ ಮಿತಿಯಿಲ್ಲ. ಈ ಸಮ್ಮರ್ ಸರ್‍ಪ್ರೈಸ್ ಆಫರ್ ಜಿಯೋದ ಎಲ್ಲ ಗ್ರಾಹಕರಿಗೆ ಸಿಗಲಿದೆ.

    ಇದನ್ನೂ ಓದಿ: ಸಿಮ್ ಆಯ್ತು ಜಿಯೋ ಸೆಟ್‍ಟಾಪ್ ಬಾಕ್ಸ್: ವಿಶೇಷತೆ ಏನು? ಬೆಲೆ ಎಷ್ಟು? ಆರಂಭ ಯಾವಾಗ?

    ಜಿಯೋದ ಎರಡನೇ ಸಮ್ಮರ್ ಸರ್‍ಪ್ರೈಸ್ ಆಫರ್ ಇದಾಗಿದೆ. ಈ ಹಿಂದೆ ಪ್ರೈಮ್ ಸದಸ್ಯರಾಗಿದ್ದವರು 303 ರೂ. ರಿಚಾರ್ಜ್ ಮಾಡಿದ್ರೆ ಅವರಿಗೆ ಮೂರು ತಿಂಗಳ ಕಾಲ ಪ್ರತಿ ದಿನ 1 ಜಿಬಿ ಡೇಟಾವನ್ನು ಉಚಿತವಾಗಿ ನೀಡುವುದಾಗಿ ಹೇಳಿತ್ತು.

    ಇದನ್ನೂ ಓದಿ: ಪ್ರೈಮ್ ಮೆಂಬರ್‍ಶಿಪ್ ಡೆಡ್‍ಲೈನ್ ಅವಧಿ ವಿಸ್ತರಣೆ: ಏನಿದು ಜಿಯೋ ಸಮ್ಮರ್ ಸರ್‍ಪ್ರೈಸ್ ಆಫರ್? ಗ್ರಾಹಕರಿಗೆ ಲಾಭವೇ?

    ಎಷ್ಟು ರೂ. ಪ್ಲಾನ್ ಮಾಡಿದ್ರೆ ಎಷ್ಟು ಜಿಬಿ ಡೇಟಾ ಸಿಗಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.