Tag: jio prime

  • ಜಿಯೋ ಪ್ರೈಂ ಸಬ್‍ಸ್ಕ್ರೈಬ್ ಡೆಡ್‍ಲೈನ್ ಅವಧಿ 1 ತಿಂಗಳು ವಿಸ್ತರಣೆ?

    ಜಿಯೋ ಪ್ರೈಂ ಸಬ್‍ಸ್ಕ್ರೈಬ್ ಡೆಡ್‍ಲೈನ್ ಅವಧಿ 1 ತಿಂಗಳು ವಿಸ್ತರಣೆ?

    ಮುಂಬೈ: ಪ್ರೈಂ ಸದಸ್ಯರಾಗಲು ಮಾರ್ಚ್ 31ರ ಒಳಗಡೆ ಸಬ್ ಸ್ಕ್ರೈಬ್ ಮಾಡಬೇಕೆಂದು ಜಿಯೋ ಹೇಳಿತ್ತು. ಆದರೆ ಈಗ ಬಂದಿರುವ ಹೊಸ ಸುದ್ದಿ ಪ್ರಕಾರ ಇನ್ನು ಒಂದು ತಿಂಗಳು ಈ ಡೆಡ್‍ಲೈನ್ ಅವಧಿ ವಿಸ್ತರಣೆಯಾಗುವ ಸಾಧ್ಯತೆಯಿದೆ.

    ಹೌದು. ಜಿಯೋ ಕಂಪೆನಿಯ ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ಪ್ರೈಂ ಸದಸ್ಯರಾಗಲು ಇದ್ದ ಶೇ.50 ರಷ್ಟು ಗುರಿಯನ್ನು ಜಿಯೋ ಈಗಾಗಲೇ ತಲುಪಿದೆ. ಹೀಗಾಗಿ ಏಪ್ರಿಲ್ 30ರ ವರೆಗೆ ಈ ಡೆಡ್‍ಲೈನ್ ಅವಧಿ ವಿಸ್ತರಣೆಯಾಗುವ ಸಾಧ್ಯತೆಯಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.

    ಡೆಡ್‍ಲೈನ್ ಅವಧಿ ವಿಸ್ತರಣೆ ಮಾಡಬೇಕೋ ಬೇಡವೋ ಎನ್ನುವುದನ್ನು ಜಿಯೋ ಇನ್ನೂ ನಿರ್ಧರಿಸಿಲ್ಲ. ಈ ಮಾತುಕತೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.

    ಕಳೆದ ತಿಂಗಳು ರಿಲಯನ್ಸ್ ಇಂಡಸ್ಟ್ರಿಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಜಿಯೋ 10 ಕೋಟಿ ಗ್ರಾಹಕರನ್ನು ತಲುಪಿದೆ. ಇನ್ನು ಮುಂದೆ ಉಚಿತ ಡೇಟಾ ಸೇವೆ ನೀಡಲು ಸಾಧ್ಯವಿಲ್ಲ. ಕಡಿಮೆ ಹಣದಲ್ಲಿ ಹೆಚ್ಚು ಡೇಟಾ ಪಡೆಯಬೇಕಾದರೆ ಗ್ರಾಹಕರು ಜಿಯೋ ಪ್ರೈಂ ಸದಸ್ಯರಾಗಬೇಕು. 99 ರೂ. ನೀಡಿ ಮಾರ್ಚ್ 31ರ ಒಳಗಡೆ ಪ್ರೈಂ ಸದಸ್ಯರಾದವರಿಗೆ ಕಡಿಮೆ ಬೆಲೆಯಲ್ಲಿ ಡೇಟಾ ನೀಡಲಾಗುವುದು ಎಂದು ತಿಳಿಸಿದ್ದರು.

    ಇದನ್ನೂ ಓದಿ: ಗೂಗಲ್ ಜೊತೆಗೂಡಿ ಕಡಿಮೆ ಬೆಲೆಯಲ್ಲಿ ಜಿಯೋದಿಂದ ಆಂಡ್ರಾಯ್ಡ್ ಫೋನ್!

    ಪ್ರೈಂ ಸದಸ್ಯರಾದವರು 28 ದಿನಗಳ ಕಾಲ 1 ಜಿಬಿ ಡೇಟಾ ಪಡೆಯಬೇಕಾದರೆ 303 ರೂ. ರಿಚಾರ್ಜ್ ಮಾಡಬೇಕಾಗುತ್ತದೆ. ಅಷ್ಟೇ ಅಲ್ಲದೇ ಬೈ ಒನ್ ಗೆಟ್ ಒನ್ ಆಫರ್ ಬಿಡುಗಡೆ ಮಾಡಿದ್ದು, 303 ರೂ. ರಿಚಾರ್ಜ್ ಮಾಡಿದವರಿಗೆ 5 ಜಿಬಿ ಡೇಟಾ ಮತ್ತು 499 ರೂ. ಗಿಂದ ಹೆಚ್ಚಿನ ರಿಚಾರ್ಜ್ ಮಾಡಿದವರಿಗೆ 10 ಜಿಬಿ ಡೇಟಾವನ್ನು ಹೆಚ್ಚುವರಿಯಾಗಿ ನೀಡುವುದಾಗಿ ಜಿಯೋ ಪ್ರಕಟಿಸಿದೆ.

    ಇದನ್ನೂ ಓದಿ: ಜಿಯೋ 4ಜಿ ಇಂಟರ್‍ನೆಟ್ ಅಪ್‍ಗ್ರೇಡ್ ಮೆಸೇಜ್ ಶೇರ್ ಮಾಡೋ ಮುನ್ನ ಈ ಸುದ್ದಿ ಓದಿ

    ಜಿಯೋ ಡೆಡ್‍ಲೈನ್ ವಿಸ್ತರಿಸುವುದು ಹೊಸದೆನಲ್ಲ. ಈ ಹಿಂದೆ ಡಿಸೆಂಬರ್ 31ರ ವರೆಗೆ ಉಚಿತ ಡೇಟಾ ನೀಡುವುದಾಗಿ ಹೇಳಿತ್ತು. ಇದಾದ ಬಳಿಕ ಮಾರ್ಚ್ 31ರವರೆಗೆ ಹ್ಯಾಪಿ ನ್ಯೂ ಇಯರ್ ಆಫರ್ ಪ್ರಕಟಿಸಿ 1 ಜಿಬಿ ಉಚಿತ ಡೇಟಾ ನೀಡುವುದಾಗಿ ಪ್ರಕಟಿಸಿತ್ತು. ಹೀಗಾಗಿ ಜಿಯೋ ಪ್ರೈಂ ಸಬ್‍ಸ್ಕ್ರಬ್ ಡೆಡ್‍ಲೈನ್ ಅವಧಿಯನ್ನು ಮಾರ್ಚ್ 31ರ ನಂತರವೂ ವಿಸ್ತರಿಸಬಹುದು ಎನ್ನುವ ಮಾತುಗಳು ಈಗ ಕೇಳಿ ಬರುತ್ತಿವೆ.

    ಇದನ್ನೂ ಓದಿ: ಡೇಟಾ ಸ್ಪೀಡ್ ಟೆಸ್ಟ್ ವಾರ್: ಏರ್‍ಟೆಲ್ ವಿರುದ್ಧ ಜಿಯೋ ದೂರು, ದೂರು ನೀಡಿದ್ದು ಯಾಕೆ? ಇಲ್ಲಿದೆ ಪೂರ್ಣ ಮಾಹಿತಿ

  • ಜಿಯೋ ಪ್ರೈಮ್ ಆಫರ್: ಎಷ್ಟು ರೂ. ರಿಚಾರ್ಜ್ ಮಾಡಿದ್ರೆ ಎಷ್ಟು ಡೇಟಾ ಸಿಗುತ್ತೆ? ಇಲ್ಲಿದೆ ಮಾಹಿತಿ

    ಜಿಯೋ ಪ್ರೈಮ್ ಆಫರ್: ಎಷ್ಟು ರೂ. ರಿಚಾರ್ಜ್ ಮಾಡಿದ್ರೆ ಎಷ್ಟು ಡೇಟಾ ಸಿಗುತ್ತೆ? ಇಲ್ಲಿದೆ ಮಾಹಿತಿ

    ಮುಂಬೈ: ರಿಲಯನ್ಸ್ ಜಿಯೋ ಪ್ರೈಮ್ ಆಫರ್ ಬಿಡುಗಡೆಯಾಗಿದೆ. 19 ರೂ. ನಿಂದ ಆರಂಭವಾಗಿ 9999 ರೂ. ವರೆಗಿನ ಡೇಟಾ ಪ್ಯಾಕ್ ಬಿಡುಗಡೆ ಮಾಡಿದೆ. ಈ ಎಲ್ಲ ಪ್ಲಾನ್‍ಗಳಲ್ಲಿ ಎಸ್‍ಎಂಎಸ್ ಮತ್ತು ಕರೆಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಜಿಯೋ ತಿಳಿಸಿದೆ. ಹೀಗಾಗಿ ಇಲ್ಲಿ ಜಿಯೋ ಪ್ರೈಮ್ ಸದಸ್ಯರಿಗೆ ಮತ್ತು ಜಿಯೋ ಪ್ರೈಮ್‍ಗೆ ಸೇರ್ಪಡೆಯಾಗದ ಸದಸ್ಯರಿಗೆ ಬಿಡುಗಡೆಯಾಗಿರುವ ಟ್ಯಾರಿಫ್ ಪ್ಲಾನ್‍ಗಳ ಪಟ್ಟಿಯನ್ನು ನೀಡಲಾಗಿದೆ.

    19 ರೂ. 1ದಿನ ವ್ಯಾಲಿಡಿಟಿ
    ಈ ಪ್ಲಾನ್‍ನಲ್ಲಿ ಗ್ರಾಹಕರು ಒಂದು ದಿನ 4ಜಿ ಸ್ಪೀಡ್‍ನಲ್ಲಿ 200 ಎಂಬಿ ಡೇಟಾವನ್ನು ಪಡೆದುಕೊಳ್ಳಬಹುದು. ಜಿಯೋ ಪ್ರೈಮ್ ಸೇರ್ಪಡೆಯಾಗದ ಗ್ರಾಹಕರು 4 ಜಿ ವೇಗದಲ್ಲಿ 100 ಎಂಬಿ ಡೇಟಾವನ್ನು ಪಡೆದುಕೊಳ್ಳಬಹುದು.

    ಇದನ್ನೂ ಓದಿ: ಏರ್‍ಟೆಲ್‍ನಿಂದ 100 ರೂಪಾಯಿಗೆ 10 ಜಿಬಿ ಡೇಟಾ!

    49 ರೂ. 3 ದಿನ ವ್ಯಾಲಿಡಿಟಿ:
    ಈ ಪ್ಲಾನ್‍ನಲ್ಲಿ ಜಿಯೋ ಪ್ರೈಮ್ ಗ್ರಾಹಕರು ಪ್ರತಿದಿನ ಗರಿಷ್ಠ 600 ಎಂಬಿ ಡೇಟಾವನ್ನು ಪಡೆದುಕೊಳ್ಳಬಹುದು. ಈ ಪ್ಲಾನ್‍ನಲ್ಲಿ ಜಿಯೋ ಪ್ರೈಮ್‍ಗೆ ಸೇರ್ಪಡೆಯಾದ ಗ್ರಾಹಕರಿಗೆ ಪ್ರತಿದಿನ ಗರಿಷ್ಠ 300 ಎಂಬಿ ಡೇಟಾ ಸಿಗುತ್ತದೆ.

    96 ರೂ. 7ದಿನ ವ್ಯಾಲಿಡಿಟಿ:
    ಈ ಪ್ಲಾನ್‍ನಲ್ಲಿ ಪ್ರೈಮ್ ಗ್ರಾಹಕರು ಪ್ರತಿದಿನ 1 ಜಿಬಿ ಡೇಟಾ ಪಡೆಯಬಹುದು. 1 ಜಿಬಿ ಮಿತಿ ಮುಗಿದ ಬಳಿಕ 128 ಕೆಬಿಪಿಎಎಸ್ ವೇಗದಲ್ಲಿ ಡೇಟಾ ಪಡೆದುಕೊಳ್ಳಬಹುದು. ಪ್ರೈಮ್ ಸದಸ್ಯರಲ್ಲದವರಿಗೆ ಪ್ರತಿದಿನ 0.6ಜಿಬಿ ಡೇಟಾ ಸಿಗುತ್ತದೆ.

    ಇದನ್ನೂ ಓದಿ: ಜಿಯೋದಲ್ಲಿ 303 ರೂ.ಗೆ ಫ್ರೀ ಕಾಲ್ 28 ಜಿಬಿ ಡೇಟಾ: ಬೇರೆ ಕಂಪೆನಿಗಳಲ್ಲಿ 10 ಜಿಬಿ ಡೇಟಾಗೆ ಎಷ್ಟು ರೂ. ರಿಚಾರ್ಜ್

    149 ರೂ. 28 ದಿನ ವ್ಯಾಲಿಡಿಟಿ
    ಪ್ರೈಮ್ ಗ್ರಾಹಕರು 2 ಜಿಬಿ ಡೇಡಾವನ್ನು ಪಡೆದುಕೊಂಡರೆ, ಪ್ರೈಮ್ ಸದಸ್ಯರಲ್ಲದ ಗ್ರಾಹಕರು 1 ಜಿಬಿ ಡೇಟಾವನ್ನು ಪಡೆದುಕೊಳ್ಳಬಹುದು.

    303 ರೂ. 28 ದಿನ ವ್ಯಾಲಿಡಿಟಿ
    ಪ್ರೈಮ್ ಗ್ರಾಹಕರಿಗೆ 28 ಜಿಬಿ ಡೇಟಾ ಸಿಗುತ್ತದೆ. ದಿನವೊಂದಕ್ಕೆ ಗರಿಷ್ಠ 1 ಜಿಬಿ ಡೇಟಾ 4ಜಿ ವೇಗದಲ್ಲಿ ಸಿಗುತ್ತದೆ. ಈ ಮಿತಿ ದಾಟಿದ ಬಳಿಕ ವೇಗ 128 ಕೆಬಿಪಿಎಸ್‍ಗೆ ಇಳಿಯುತ್ತದೆ. ಪ್ರೈಮ್ ಸದಸ್ಯರಲ್ಲದವರು 2.5 ಜಿಬಿ ಡೇಟಾವನ್ನು ಪಡೆದುಕೊಳ್ಳಬಹುದು.

    ಇದನ್ನೂ ಓದಿ: ಮತ್ತೊಂದು ಇತಿಹಾಸ ಸೃಷ್ಟಿಸಿದ ಜಿಯೋ

    499 ರೂ. 28 ದಿನಗಳ ವ್ಯಾಲಿಡಿಟಿ:
    ಪ್ರೈಮ್ ಗ್ರಾಹಕರಿಗೆ ಒಟ್ಟು 58 ಜಿಬಿ ಡೇಟಾ ಸಿಗುತ್ತದೆ. ಪ್ರತಿದಿನ ಗರಿಷ್ಠ 2ಜಿಬಿ ಡೇಟಾ 4ಜಿ ವೇಗದಲ್ಲಿ ಸಿಗುತ್ತದೆ. ಈ ಮಿತಿ ಮುಗಿದ ಬಳಿಕ ವೇಗ 128 ಕೆಬಿಪಿಎಸ್ ಇಳಿಯುತ್ತದೆ. ಪ್ರೈಮ್ ಸದಸ್ಯರಲ್ಲದವರು 5 ಜಿಬಿ ಡೇಟಾವನ್ನು ಪಡೆದುಕೊಳ್ಳಬಹುದು.

    4999 ರೂ.
    180 ದಿನಗಳ ವ್ಯಾಲಿಡಿಟಿ ಇರುವ ಈ ಪ್ಲಾನ್‍ನಲ್ಲಿ ಪ್ರೈಮ್ ಗ್ರಾಹಕರು ಒಟ್ಟು 350 ಜಿಬಿ ಡೇಟಾವನ್ನು ಪಡೆದುಕೊಳ್ಳಬಹುದು. ಈ ಪ್ಲಾನ್‍ನಲ್ಲಿ ದಿನದ ಮಿತಿ ಇಲ್ಲ. 30 ದಿನಗಳ ವ್ಯಾಲಿಡಿಟಿ ಇರುವ ಈ ಪ್ಲಾನ್‍ನಲ್ಲಿ ಪ್ರೈಮ್ ಸದಸ್ಯರಲ್ಲದವರು 100 ಜಿಬಿ ಡೇಟಾವನ್ನು ಪಡೆದುಕೊಳ್ಳಬಹುದು.

    9999 ರೂ.
    360 ದಿನಗಳ ಕಾಲ ಪ್ರೈಮ್ ಗ್ರಾಹಕರು ಒಟ್ಟು 750 ಜಿಬಿ ಡೇಟಾವನ್ನು ಪಡೆದುಕೊಳ್ಳಬಹುದು. ಪೈಮ್ ಸದಸ್ಯರಲ್ಲದವರು 30 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಪ್ಲಾನ್‍ನಲ್ಲಿ 200 ಜಿಬಿ ಡೇಟಾವನ್ನು ಪಡೆದುಕೊಳ್ಳಬಹುದು.

    ಇದನ್ನೂ ಓದಿ: ಏಪ್ರಿಲ್ 1ರಿಂದ ಜಿಯೋ ಉಚಿತವಲ್ಲ: ಏನಿದು ಜಿಯೋ ಪ್ರೈಮ್? ಇಲ್ಲಿದೆ ಪೂರ್ಣ ಮಾಹಿತಿ

  • ಏಪ್ರಿಲ್ 1ರಿಂದ ಜಿಯೋ ಉಚಿತವಲ್ಲ: ಏನಿದು ಜಿಯೋ ಪ್ರೈಮ್? ಇಲ್ಲಿದೆ ಪೂರ್ಣ ಮಾಹಿತಿ

    ಏಪ್ರಿಲ್ 1ರಿಂದ ಜಿಯೋ ಉಚಿತವಲ್ಲ: ಏನಿದು ಜಿಯೋ ಪ್ರೈಮ್? ಇಲ್ಲಿದೆ ಪೂರ್ಣ ಮಾಹಿತಿ

    ಮುಂಬೈ: ಇಲ್ಲಿಯವರೆಗೆ ಪ್ರತಿ ದಿನ 1 ಜಿಬಿ ಉಚಿತ ಡೇಟಾವನ್ನು ಪಡೆಯುತ್ತಿದ್ದ ಜಿಯೋ ಗ್ರಾಹಕರು ಏಪ್ರಿಲ್ 1ರಿಂದ ದುಡ್ಡನ್ನು ಪಾವತಿಸಿ ಡೇಟಾವನ್ನು ಪಡೆದುಕೊಳ್ಳಬೇಕು.

    ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಮುಂಬೈಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಹೊಸ ಜಿಯೋ ಪ್ರೈಮ್ ಯೋಜನೆಯನ್ನು ಪ್ರಕಟಿಸಿದರು. ಜಿಯೋ ಪ್ರೈಮ್‍ಗೆ ನೋಂದಣಿಯಾದ ಗ್ರಾಹಕರು 2018ರ ಮಾರ್ಚ್ 31ರ ತನಕ ಈಗ ಇರುವ ಹ್ಯಾಪಿ ನ್ಯೂ ಇಯರ್ ಪ್ಲಾನ್‍ನಲ್ಲಿ ಸಿಗುವ ಎಲ್ಲ ಸೇವೆಗಳನ್ನು ಉಚಿತವಾಗಿ ಬಳಸಬಹುದು. ಆದರೆ ಈ ಸೇವೆ ಬಳಸಬೇಕಾದರೆ ಡೇಟಾಗೆ ಮಾತ್ರ ದುಡ್ಡನ್ನು ನೀಡಬೇಕಾಗುತ್ತದೆ.

    ದುಡ್ಡನ್ನು ನೀವು ಪಾವತಿಸಿದರೂ ಉಳಿದ ಟೆಲಿಕಾಂ ಕಂಪೆನಿಗಳಿಗೆ ಹೋಲಿಸಿದರೆ ನೀವು ಪಾವತಿಸುವ ದುಡ್ಡಿಗೆ ಹೆಚ್ಚಿನ ಪ್ರಮಾಣದ ಡೇಟಾವನ್ನು ಪಡೆದುಕೊಳ್ಳುವಿರಿ. ಇದರ ಜೊತೆ ಮುಂದಿನ ದಿನದಲ್ಲಿ ಹೆಚ್ಚಿನ ವೇಗದಲ್ಲಿ ಡೇಟಾವನ್ನು ಪಡೆದುಕೊಳ್ಳಬಹುದಾಗಿದೆ. ಹೀಗಾಗಿ ಇಲ್ಲಿ ಜಿಯೋ ಪ್ರೈಮ್‍ಗೆ ಸಂಬಂಧಿಸಿದಂತೆ ಎಲ್ಲ ಮಾಹಿತಿಗಳನ್ನು ನೀಡಲಾಗಿದೆ.

    ಏನಿದು ಜಿಯೋ ಪ್ರೈಮ್?
    ಜಿಯೋದ ಹೊಸ ಯೋಜನೆ ಇದಾಗಿದ್ದು, ಮಾರ್ಚ್ 31ರ ನಂತರ ಗ್ರಾಹಕರಿಗೆ ಲಭ್ಯವಾಗಲಿದೆ.

    ಪ್ರೈಮ್ ಯೋಜನೆ ತಂದಿದ್ದು ಯಾಕೆ? ಬೆಲೆ ಎಷ್ಟು?
    ಬಹುತೇಕ ಗ್ರಾಹಕರು ಜಿಯೋ ಸಿಮನ್ನು ಎರಡನೇ ಸಿಮ್ ಆಗಿ ಬಳಸುತ್ತಿದ್ದು ಜಿಯೋ ಸೇವೆಗಳನ್ನು ಬಳಕೆ ಮಾಡುತ್ತಿದ್ದಾರೆ. ಈ ಗ್ರಾಹಕರು ಮಾರ್ಚ್ 31ರ ನಂತರ ಜಿಯೋ ಸೇವೆಯಿಂದ ಹೊರ ಹೋಗದೇ ಇರಲು  ಈ ಆಫರನ್ನು ತರಲಾಗಿದೆ. ಮಾರ್ಚ್ 31ರ ನಂತರ ಈ ಸೇವೆ ಆರಂಭವಾಗಲಿದ್ದು, ಪ್ರೈಮ್ ಆಫರ್ ಅನ್ನು ನೀವು ಪಡೆಯಬೇಕಾದರೆ ನೀವು 12 ತಿಂಗಳಿಗೆ 99 ರೂ. ನೀಡಿ ನೋಂದಣಿಯಾಗಬೇಕು.

    ಇದನ್ನೂ ಓದಿ:ಜಿಯೋ 4ಜಿ ಇಂಟರ್‍ನೆಟ್ ಅಪ್‍ಗ್ರೇಡ್ ಮೆಸೇಜ್ ಶೇರ್ ಮಾಡೋ ಮುನ್ನ ಈ ಸುದ್ದಿ ಓದಿ

    ನೋಂದಣಿ ಮಾಡಿಸಿಕೊಂಡರೆ ಏನು ಲಾಭ?
    ಇಲ್ಲಿಯವರೆಗೆ ನೀವು ಹ್ಯಾಪಿ ನ್ಯೂ ಇಯರ್ ಪ್ಲಾನ್‍ನಲ್ಲಿ ನೀವು ಒಂದು ದಿನ 1 ಜಿಬಿ ಉಚಿತ ಡೇಟಾ ಪೂರ್ಣವಾಗಿ ಬಳಕೆ ಮಾಡಿದ ಬಳಿಕ ಸ್ಪೀಡ್ 128 ಕೆಬಿಪಿಎಸ್‍ಗೆ ಇಳಿಯುತ್ತದೆ. ಆದರೆ ಜಿಯೋ ಪ್ರೈಮ್‍ನಲ್ಲಿ ಉಚಿತ ಡೇಟಾ ಸಿಗುವುದಿಲ್ಲ. ನೀವು ಪ್ರತಿ ತಿಂಗಳು 303 ರೂ. ಹಣವನ್ನು(ದಿನವೊಂದಕ್ಕೆ 10 ರೂ.) ಪಾವತಿಸಿದರೆ 30 ಜಿಬಿ ಡೇಟಾವನ್ನು ಪಡೆಯಬಹುದು.

    ಸಬ್ ಸ್ಕ್ರೈಬ್ ಮಾಡುವುದು ಹೇಗೆ?
    ಮಾರ್ಚ್ 1ರಿಂದ ಮಾರ್ಚ್ 31ರವರೆಗೆ ಜಿಯೋ ಗ್ರಾಹಕರು ಮೈ ಜಿಯೋ ಆಪ್‍ನಿಂದ ಸಬ್ ಸ್ಕ್ರೈಬ್ ಮಾಡಿಕೊಳ್ಳಬಹುದು. ಆಥವಾ ಹತ್ತಿರದಲ್ಲಿ ಇರುವ ಜಿಯೋ ಟೆಲಿಕಾಂ ಶಾಪ್/ ಜಿಯೋ ಸ್ಟೋರ್‍ಗೆ ಹೋಗಿ ಸಬ್‍ಸ್ಕ್ರೆಬ್ ಮಾಡಿಕೊಳ್ಳಬಹುದು.

    ಡೇಟಾಗೆ ಮಾತ್ರ ದುಡ್ಡು:
    ಏಪ್ರಿಲ್ ಒಂದರಿಂದ ಉಚಿತವಾಗಿ ಡೇಟಾ ನೀಡಲು ಸಾಧ್ಯವಿಲ್ಲ. ಆದರೆ ಯಾವುದೇ ಟೆಲಿಕಾಂ ನೆಟ್‍ವರ್ಕಿಗೆ ಹೋಗುವ ಎಲ್ಲ ಕರೆಗಳು ಉಚಿತ ಮತ್ತು ಯಾವುದೇ ರೋಮಿಂಗ್ ಚಾರ್ಜ್ ಇರುವುದಿಲ್ಲ ಎಂದು ಮುಕೇಶ್ ಅಂಬಾನಿ ತಿಳಿಸಿದ್ದಾರೆ.

    ಇದನ್ನೂ ಓದಿ: ಮತ್ತೊಂದು ಇತಿಹಾಸ ಸೃಷ್ಟಿಸಿದ ಜಿಯೋ

    ಉಚಿತ ಏನು?
    ಮೈ ಜಿಯೋ ಅಪ್ಲಿಕೇಶನ್‍ನಲ್ಲಿರುವ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಮ್ಯೂಸಿಕ್ ಸೇರಿದಂತೆ 10 ಸಾವಿರ ರೂ. ಮೌಲ್ಯದ ಮೀಡಿಯಾ ಸೇವೆಗಳನ್ನು ಜಿಯೋ ಪ್ರೈಮ್ ಗ್ರಾಹಕರು 2018ರ ಮಾರ್ಚ್ 31ರವರೆಗೆ ಬಳಸಬಹುದು.