Tag: jio

  • ಜಿಯೋಭಾರತ್ ಫೋನ್‌ಗಳಲ್ಲಿ ಇನ್ಮುಂದೆ ಸ್ಮಾರ್ಟ್ ಕನೆಕ್ಟಿವಿಟಿ ‍‍& ಡಿಜಿಟಲ್ ಕೇರ್; 799 ರೂ.ನಿಂದ ಆರಂಭ

    ಜಿಯೋಭಾರತ್ ಫೋನ್‌ಗಳಲ್ಲಿ ಇನ್ಮುಂದೆ ಸ್ಮಾರ್ಟ್ ಕನೆಕ್ಟಿವಿಟಿ ‍‍& ಡಿಜಿಟಲ್ ಕೇರ್; 799 ರೂ.ನಿಂದ ಆರಂಭ

    ನವದೆಹಲಿ: ಇಂಡಿಯಾ ಮೊಬೈಲ್ ಕಾಂಗ್ರೆಸ್ (IMC) 2025 ರಲ್ಲಿ ರಿಲಯನ್ಸ್ ಜಿಯೋ ತನ್ನ ಜಿಯೋಭಾರತ್ (JioBharat) ಫೋನ್‌ಗಳಿಗೆ ಹೊಸ ʼಸುರಕ್ಷತೆ-ಮೊದಲುʼ (Safety-First) ಫೀಚರ್‌ ಅನ್ನು ಪರಿಚಯಿಸಿದೆ. ಈ ಕ್ರಮವು ಡಿಜಿಟಲ್ ಸುರಕ್ಷತೆಯನ್ನು ಬಲಪಡಿಸುವ ಮತ್ತು ಕಂಪನಿಯ ಆರಂಭಿಕ ಹಂತದ ಮೊಬೈಲ್ ಪ್ಲಾಟ್‌ಫಾರ್ಮ್ ಬಳಸುವ ಭಾರತೀಯ ಕುಟುಂಬಗಳಿಗೆ ವಿಶ್ವಾಸಾರ್ಹ ಸಂಪರ್ಕವನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ.

    ಪ್ರಮುಖವಾದ ಬೆಳವಣಿಗೆ ಇದಾಗಿದೆ. ಪ್ರತಿ ಭಾರತೀಯ ಕುಟುಂಬ ಇದರಿಂದಾಗಿ ಬೆಸೆದುಕೊಂಡು ಸುರಕ್ಷಿತವಾಗಿ ಇರುತ್ತದೆ ಮತ್ತು ಚಿಂತೆ ಮುಕ್ತವಾಗುತ್ತದೆ. ಈ ನಾವೀನ್ಯತೆ ಮೂಲಕ ಜಿಯೋ ಸ್ಮಾರ್ಟ್ ಕನೆಕ್ಟಿವಿಟಿ ಹಾಗೂ ಡಿಜಿಟಲ್ ಕೇರ್ ಅನ್ನು ದೇಶದ ಬಹಳ ವಿಶ್ವಾಸಾರ್ಹ, ಕೈಗೆಟುಕುವ ಬೆಲೆಯ ಫೋನ್‌ಗೆ ತಂದಿದೆ.
    ‘ಸುರಕ್ಷತೆ ಮೊದಲು’ ಎಂಬ ಕ್ರಮದಿಂದ ಕುಟುಂಬಗಳು ಮನೆಯಲ್ಲಿನ ಮಕ್ಕಳು, ಹಿರಿಯ ಪೋಷಕರಿಗೆ ಮತ್ತು ಅವಲಂಬಿತರ ಜೊತೆಗೆ ನಿಕಟವಾಗಿ ಇರಲು ಸಾಧ್ಯವಾಗುತ್ತದೆ. ಅವರು ಎಲ್ಲೇ ಇದ್ದರೂ ಸರಳ, ಸುರಕ್ಷಿತವಾಗಿ ಮತ್ತು ಸದಾ ಜೊತೆಯಲ್ಲಿ ಇರುವ ಅನುಭವದೊಂದಿಗೆ ಇರಬಹುದು. ಇದನ್ನೂ ಓದಿ: ಎಐ ಕ್ಲಾಸ್‌ರೂಮ್ ಫೌಂಡೇಷನ್ ಕೋರ್ಸ್ ಆರಂಭಿಸಿದ ಜಿಯೋ – ಉಚಿತ ಕೊಡುಗೆ

    ಅದರ ಮುಖ್ಯ ಸಾಮರ್ಥ್ಯ ಏನೆಂದರೆ, ‘ಸ್ಥಳದ ನಿಗಾ’. ಪ್ರೀತಿಪಾತ್ರರು-ಆಪ್ತರು ದೂರದ ಸ್ಥಳಗಳಿಗೆ ತೆರಳಿದಾಗ, ಅವರು ಎಲ್ಲಿದ್ದಾರೆ ಎಂಬ ಮಾಹಿತಿ ಸಿಗುತ್ತಾ ಇರುತ್ತದೆ. ಅವರಿಗೆ ಯಾರು ಕರೆ ಮಾಡಬಹುದು, ಮೆಸೇಜ್ ಮಾಡಬಹುದು ಅಂತ ನಿರ್ವಹಣೆ ಮಾಡಬಹುದು. ಇನ್ನು ಅಪರಿಚಿತ ಕರೆಗಳನ್ನು ಬ್ಲಾಕ್ ಮಾಡಬಹುದು. ಅನಗತ್ಯ ಕಿರಿಕಿರಿಗಳನ್ನು ನಿರ್ಬಂಧಿಸಬಹುದು. ಬಳಕೆ ಮಾಡುವ ಸಾಧನದ ಬ್ಯಾಟರಿ ಮತ್ತು ನೆಟ್‌ವರ್ಕ್‌ಗಳ ರಿಯಲ್ ಟೈಮ್ ಒಳನೋಟಗಳನ್ನು ಪಡೆಯಬಹುದು. ಹಾಗೇ ನೆಟ್‌ವರ್ಕ್ ಪ್ರಬಲವಾಗಿದೆಯೇ ಎಂಬುದು ತಿಳಿದುಕೊಳ್ಳಬಹುದು. ಇದರಿಂದಾಗಿ ಅಡೆತಡೆಯಿಲ್ಲದ ಕನೆಕ್ಟಿವಿಟಿ ಖಾತ್ರಿಯಾಗುತ್ತದೆ. ಇದು ಫೋನ್ ಮತ್ತು ಸೇವಾ ವಿಚಾರಕ್ಕೆ ಸಂಬಂಧಿಸಿದ್ದಾಗಿದೆ. ಏಳು ದಿನಗಳ ಬ್ಯಾಟರಿ ಬ್ಯಾಕಪ್ ದೊರೆಯುವುದರಿಂದಾಗಿ ಜಿಯೋಭಾರತ್ ಬಳಕೆದಾರರು ಎಲ್ಲೇ ಇದ್ದರೂ ಹಾಗೂ ಯಾವುದೇ ಸಮಯದಲ್ಲೂ ತಮ್ಮ ಪ್ರೀತಿಪಾತ್ರರ ಸಂಪರ್ಕಕ್ಕೆ ಸಿಗುತ್ತಾರೆ.

    ಯಾವುದೇ ಸಾಮಾಜಿಕ ಮಾಧ್ಯಮದ ಸಹಕಾರ ಇಲ್ಲದೇ ಮಕ್ಕಳು ಸಂಪರ್ಕದಲ್ಲಿ ಇರುತ್ತಾರೆ. ಇದರ ಜೊತೆಗೆ ಸ್ವಾರ್ಟ್ ಲೊಕೇಷನ್ ಹಾಗೂ ಕರೆ ನಿರ್ವಹಣೆ ಸಹ ಇದೆ. ಇದರಿಂದ ಮಕ್ಕಳಿಗೆ ದೊಡ್ಡಮಟ್ಟದ ಪ್ರಯೋಜನ ಇದೆ. ಇನ್ನು ಹಿರಿಯ ಪೋಷಕರಿಗೆ ಬಳಸಲು ಸುಲಭವಾದ ಫೋನ್‌ಗಳು ಜೊತೆಗೆ ಆರೋಗ್ಯ ಮತ್ತು ಲೊಕೇಷನ್ ಬಗೆಗಿನ ಅಪ್‌ಡೇಟ್ ಸಹ ಕುಟುಂಬ ಸದಸ್ಯರಿಗೆ ದೊರೆಯುತ್ತದೆ. ಮಹಿಳೆಯರಿಗೆ ತುಂಬ ನಂಬಿಕಸ್ಥ ಸಹಚರ್ಯ ಸಿಕ್ಕಂತೆ ಆಗುತ್ತದೆ. ಸುರಕ್ಷತೆ ಮತ್ತು ಕನೆಕ್ಟಿವಿಟಿ ಎಂಬ ಬಹಳ ಮುಖ್ಯವಾದದ್ದನ್ನು ಒದಗಿಸುತ್ತದೆ. ಇಂಡಿಯಾ ಮೊಬೈಲ್ ಕಾಂಗ್ರೆಸ್‌ನಲ್ಲಿ ಈ ಎಲ್ಲ ಸಾಮರ್ಥ್ಯದಿಂದ ಹೇಗೆಲ್ಲ ಅನುಕೂಲ ಇದೆ, ಭಾರತೀಯ ಕುಟುಂಬಗಳ ಆರಾಮ, ಸುರಕ್ಷತೆ ಹಾಗೂ ಸಬಲೀಕರಣಕ್ಕೆ ಹೇಗೆ ನೆರವಾಗುತ್ತದೆ ಎಂಬುದನ್ನು ಉದಾಹರಣೆ ಸಹಿತ ವಿವರಿಸಲಾಯಿತು. ಪ್ರತಿ ಭಾರತೀಯರಿಗೆ ತಂತ್ರಜ್ಞಾನ ದೊರಕಿಸಬೇಕು ಎಂಬ ಜಿಯೋದ ಧ್ಯೇಯಕ್ಕೆ ಇದು ಪೂರಕವಾಗಿದೆ. ಇದನ್ನೂ ಓದಿ: 2026 ರ ಮೊದಲ ಆರು ತಿಂಗಳಲ್ಲಿ ಜಿಯೋ ಐಪಿಒ ಬಿಡುಗಡೆ: ಮುಕೇಶ್ ಅಂಬಾನಿ

    ರಿಲಯನ್ ಜಿಯೋ ಅಧ್ಯಕ್ಷ ಸುನೀಲ್ ದತ್ ಮಾತನಾಡಿ, ‘ಜಿಯೋದಲ್ಲಿ ನಾವು ತಂತ್ರಜ್ಞಾನ ಎಂಬುದು ಗಹನವಾದ ಉದ್ದೇಶವಾದ ಕನೆಕ್ಟ್, ಸುರಕ್ಷತೆ ಮತ್ತು ಪ್ರತಿ ಭಾರತೀಯರ ಸಬಲೀಕರಣ ಮಾಡಬೇಕು ಎಂಬುದನ್ನು ನಂಬುತ್ತೇವೆ. ಜಿಯೋಭಾರತ್ ಸುರಕ್ಷತೆ ಮೊದಲು ಸಲ್ಯೂಷನ್ ಎಂಬುದು ನಿಚ್ಚಳವಾದ ಉದ್ದೇಶದೊಂದಿಗೆ ರೂಪಿಸಲಾಗಿದೆ. ಇದು ಕೇವಲ ಫೋನ್ ಫೀಚರ್ ಆಗಷ್ಟೇ ಇರದೆ, ಜೀವನ ಸಬಲಗೊಳಿಸುವ ನಾವೀನ್ಯತೆ ಆಗಿದೆ. ಇದು ಕುಟುಂಬಗಳಿಗೆ ಮಾನಸಿಕ ನೆಮ್ಮದಿ, ನಂಬಿಕೆ ಹಾಗೂ ಕಾಳಜಿಯನ್ನು ಒದಗಿಸುತ್ತದೆ. ಅದು ಕೂಡ ಸುಲಭ ಹಾಗೂ ಕೈಗೆಟುಕುವ ದಾರಿಯಲ್ಲಿ ಆಗುತ್ತದೆ. ಇದರೊಂದಿಗೆ ಹೇಗೆ ತಂತ್ರಜ್ಞಾನವು ಪ್ರತಿ ದಿನದ ಬದುಕನ್ನು ಸರಳ ಮತ್ತು ಸುರಕ್ಷಿತವನ್ನಾಗಿ ಮಾಡುತ್ತದೆ ಎಂಬುದನ್ನು ಮರು ವ್ಯಾಖ್ಯಾನಿಸುವುದನ್ನು ಜಿಯೋ ಮುಂದುವರಿಸಿದೆ’ ಎಂದರು.

    ದರ ಎಷ್ಟು?
    ಹೊಸ ಜಿಯೋಭಾರತ್ ‘ಸೇಫ್ಟಿ- ಫಸ್ಟ್’ ಫೋನ್‌ಗಳು ಜಿಯೋ ಸ್ಟೋರ್‌ಗಳು, ಮೊಬೈಲ್ ಮಾರಾಟ ಮಳಿಗೆಗಳು, ಜಿಯೋ ಮಾರ್ಟ್, ಅಮೆಜಾನ್, ಸ್ವಿಗ್ಗಿ ಇನ್ ಸ್ಟಾಮಾರ್ಟ್ ಎಲ್ಲಾ ದೊರೆಯುತ್ತದೆ. ಇದರ ಆರಂಭಿಕ ಬೆಲೆ 799 ರೂ.ನಿಂದ ಆಗುತ್ತದೆ. ಭಾರತದ ಪ್ರತಿ ಮನೆಯಲ್ಲಿ ಮಾನಸಿಕ ನೆಮ್ಮದಿ ದೊರೆಯುವಂತೆ ಮಾಡುತ್ತದೆ. ಇದನ್ನೂ ಓದಿ: ಭಾರತಕ್ಕೆ ಶೀಘ್ರವೇ ಸ್ಟಾರ್‌ಲಿಂಕ್‌ ಸ್ಯಾಟಲೈಟ್‌ ಇಂಟರ್ನೆಟ್‌ – ಮಸ್ಕ್‌ ಕಂಪನಿ ಜೊತೆ ಜಿಯೋ, ಏರ್‌ಟೆಲ್‌ ಒಪ್ಪಂದ

  • ಎಐ ಕ್ಲಾಸ್‌ರೂಮ್ ಫೌಂಡೇಷನ್ ಕೋರ್ಸ್ ಆರಂಭಿಸಿದ ಜಿಯೋ – ಉಚಿತ ಕೊಡುಗೆ

    ಎಐ ಕ್ಲಾಸ್‌ರೂಮ್ ಫೌಂಡೇಷನ್ ಕೋರ್ಸ್ ಆರಂಭಿಸಿದ ಜಿಯೋ – ಉಚಿತ ಕೊಡುಗೆ

    ನವದೆಹಲಿ: ಇಂಡಿಯಾ ಮೊಬೈಲ್ ಕಾಂಗ್ರೆಸ್ 2025 ಉದ್ಘಾಟನೆಯಂದು ಎಐ ಕ್ಲಾಸ್‌ರೂಮ್ (AI Classroom) ಫೌಂಡೇಷನ್ ಕೋರ್ಸ್ ಆರಂಭಿಸಿರುವುದಾಗಿ ಜಿಯೋ (Jio) ಘೋಷಿಸಿದೆ.

    ಇದನ್ನು ಜಿಯೋಪಿಸಿ ರೂಪಿಸಿದೆ. ಇದು ಉಚಿತ ಹಾಗೂ ಆರಂಭಿಕ ಸ್ನೇಹಿ ಪ್ರೋಗ್ರಾಂ ಆಗಿದ್ದು, ಪ್ರತಿ ಕಲಿಕಾರ್ಥಿಯೂ ಎಐ- ಸಿದ್ಧವಾಗಿರುವಂತೆ ಈ ಪ್ರೋಗ್ರಾಂ ರೂಪಿಸಲಾಗಿದೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ಧಿಮತ್ತೆ) ಮಕ್ಕಳು ಹೇಗೆ ಕಲಿಯುತ್ತಾರೆ? ಕೆಲಸ ಮಾಡುತ್ತಾರೆ ಎಂಬುದರಲ್ಲಿ ಪರಿವರ್ತನೆ ತರುತ್ತಿದೆ. ಸರಿಯಾದ ಜ್ಞಾನ, ಕೌಶಲ ಮತ್ತು ಸಲಕರಣೆ ಮೂಲಕ ಸಬಲಗೊಳಿಸುತ್ತದೆ. ಅವಕಾಶಗಳ ಬಾಗಿಲು ತೆರೆದು, ಭವಿಷ್ಯವನ್ನು ರೂಪಿಸುತ್ತಿದೆ. ಜಿಯೋ ಇನ್‌ಸ್ಟಿಟ್ಯೂಟ್ ಸಹಭಾಗಿತ್ವದಲ್ಲಿ ಜಿಯೋಪಿಸಿ ಎಐ ಕ್ಲಾಸ್‌ರೂಮ್ ಪರಿಚಯಿಸುತ್ತಿದೆ. ಇದು ಒಂದು ಬಗೆಯ, ರಚನಾತ್ಮಕ, ಪ್ರಮಾಣೀಕೃತ ಮತ್ತು ಉಚಿತ ಎಐ ಫೌಂಡೇಷನ್ ಕೋರ್ಸ್ ಆಗಿದ್ದು, ಅದರಲ್ಲೂ ವಿಶೇಷವಾಗಿ ಆರಂಭಿಕ ಹಂತದ ಕಲಿಕೆಗೆ ರೂಪಿಸಲಾಗಿದೆ. ಇದನ್ನೂ ಓದಿ: 2026 ರ ಮೊದಲ ಆರು ತಿಂಗಳಲ್ಲಿ ಜಿಯೋ ಐಪಿಒ ಬಿಡುಗಡೆ: ಮುಕೇಶ್ ಅಂಬಾನಿ

    ಪಿಸಿ (ಪರ್ಸನಲ್ ಕಂಪ್ಯೂಟರ್), ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್ ಬಳಸಿಕೊಂಡು ಯಾರು ಬೇಕಾದರೂ ಇದರ ಪ್ರವೇಶ ಪಡೆಯಬಹುದು. ಕಲಿಯುವವರು ಈ ಕೋರ್ಸ್ ಅನ್ನು ತಮ್ಮ ಜಿಯೋ ಸೆಟ್‌ಟಾಪ್ ಬಾಕ್ಸ್‌ನಲ್ಲಿ ಇರುವ ಜಿಯೋಪಿಸಿಯಲ್ಲಿ ತಮ್ಮ ಟಿವಿಗಳ ಮೂಲಕ ಕಲಿತುಕೊಳ್ಳಬಹುದು. ಜಿಯೋಪಿಸಿ ಎಂಬುದು ಮುಂದಿನ ತಲೆಮಾರಿನ ಎಐ ಸಿದ್ಧವಾದ ಕಂಪ್ಯೂಟರ್ ಮತ್ತು ಜೊತೆಗೆ ಚಂದಾದಾರಿಕೆ ವಿಧಾನವನ್ನು ಆರಿಸಿಕೊಂಡರೆ ವಿಶಿಷ್ಟ ಪಾವತಿ ವಿಧಾನ ಸಹ ಇದೆ. ಇದು ಯಾವುದೇ ಸ್ಕ್ರೀನ್ ಅನ್ನು ಸದಾ ಉತ್ಕೃಷ್ಟ ಮಟ್ಟದ, ಸುರಕ್ಷಿತ ಕಂಪ್ಯೂಟರ್ ಮಾಡುತ್ತದೆ. ಅದಕ್ಕೆ ಯಾವುದೇ ರಿಪೇರಿ ಮತ್ತು ನಿರ್ವಹಣೆ ಅಗತ್ಯ ಇರುವುದಿಲ್ಲ. ಪ್ರೊಡಕ್ಟಿವಿಟಿ, ಕಲಿಕೆ, ಶಿಕ್ಷಣ, ಸೃಜನಾತ್ಮಕತೆ, ಡಿಸೈನ್ ಎಲ್ಲದಕ್ಕೂ ಅಪ್ಲಿಕೇಷನ್‌ಗಳು ಇರುತ್ತವೆ.

    ಜಿಯೋಪಿಸಿ ಬಳಕೆದಾರರಿಗೆ ವಿಶಿಷ್ಟವಾದ ಅನುಕೂಲಗಳಿವೆ. ಉನ್ನತ ಮಟ್ಟದ ಎಐ ಸಲಕರಣೆಗಳ ಬಳಕೆ ಮಾಡುವುದಕ್ಕೆ ಹೆಚ್ಚುವರಿಯಾಗಿ ಅವಕಾಶ ಇರುತ್ತದೆ. ಇದು ವಿಸ್ತೃತವಾದ ಕಲಿಕಾ ರೋಡ್ ಮ್ಯಾಪ್ ಆಗಿದ್ದು, ಜಿಯೋ ಇನ್‌ಸ್ಟಿಟ್ಯೂಟ್‌ನಿಂದ ಪ್ರಮಾಣಪತ್ರ ದೊರೆಯುತ್ತದೆ. ಇತರ ಬಳಕೆದಾರರಿಗೆ ಕೋರ್ಸ್ ಪೂರ್ಣಗೊಳಿಸಿದ ನಂತರ ಪೂರ್ಣ ಮಾಡಿರುವಂಥ ಬ್ಯಾಡ್ಜ್ ದೊರೆಯುತ್ತದೆ. ಇದನ್ನೂ ಓದಿ: ಭಾರತಕ್ಕೆ ಶೀಘ್ರವೇ ಸ್ಟಾರ್‌ಲಿಂಕ್‌ ಸ್ಯಾಟಲೈಟ್‌ ಇಂಟರ್ನೆಟ್‌ – ಮಸ್ಕ್‌ ಕಂಪನಿ ಜೊತೆ ಜಿಯೋ, ಏರ್‌ಟೆಲ್‌ ಒಪ್ಪಂದ

    ಈ ಕೋರ್ಸ್ ಎಐ ಬಗ್ಗೆ ಪ್ರಾಥಮಿಕ ಜ್ಞಾನವನ್ನು ನೀಡುತ್ತದೆ. ಮಾಹಿತಿಯನ್ನು ಸಂಕ್ಷಿಪ್ತಗೊಳಿಸುತ್ತದೆ. ತಮ್ಮ ಕಲಿಕಾ ಯೋಜನೆ ಉತ್ತಮವಾಗಿ ಸಂಯೋಜಿಸಲು ಸಹಾಯ ಮಾಡುತ್ತದೆ. ಸ್ಟೋರಿ, ಪ್ರೆಸೆಂಟೇಷನ್‌ಗಳು ಹಾಗೂ ಡಿಸೂನ್ ಸೃಷ್ಟಿಸಲು ಕಲಿತುಕೊಳ್ಳಬಹುದು. ನೈಜ ಸಮಸ್ಯೆಗಳನ್ನು ಎಐ ಬಳಸಿ ಹೇಗೆ ಪರಿಹರಿಸಬಹುದು ಎಂಬುದು ತಿಳಿಯುತ್ತದೆ. ಇದು ಒಟ್ಟು ನಾಲ್ಕು ವಾರದ ಕಲಿಕೆ ಹಾದಿಯಾಗಿದೆ.

    ಕೋರ್ಸ್ ಪಠ್ಯಕ್ರಮ
    ವಾರ 1: ಎಐ ಬೇಸಿಕ್ಸ್ ಹಾಗೂ ಪ್ರಾಂಪ್ಟ್ ಎಂಜಿನಿಯರಿಂಗ್
    ವಾರ 2: ಎಐ ಫಾರ್ ಲರ್ನಿಂಗ್ ಹಾಗೂ ಕ್ರಿಯೇಟಿವಿಟಿ
    ವಾರ 3: ಎಐ ಫಾರ್ ಬಿಲ್ಡಿಂಗ್ ಮತ್ತು ಕಮ್ಯುನಿಕೇಷನ್
    ವಾರ 4: ಎಐ ಕ್ಯಾಪ್ ಸ್ಟೋನ್ ಪ್ರಾಜೆಕ್ಟ್

    ಈ ಪ್ರೋಗ್ರಾಂ ಮೂಲಕ ಎಐ ಅರ್ಥವಾಗುವುದು ಮಾತ್ರವಲ್ಲ, ಅದನ್ನು ವಿಶ್ವಾಸದಿಂದ ಹೇಗೆ ಅನುಷ್ಠಾನಕ್ಕೆ ತರುವುದು ಎಂಬುದು ಸಹ ತಿಳಿದುಕೊಳ್ಳುತ್ತಾರೆ. ಸ್ಮಾರ್ಟ್ ಆಗಿ ವ್ಯಾಸಂಗ ಮಾಡುವುದು ಹಾಗೂ ಪ್ರಾಬ್ಲಮ್ಸ್ ಸಾಲ್ವಿಂಗ್‌ನಿಂದ ಪರಿಣಾಮಕಾರಿ ಡಿಜಿಟಲ್ ಪ್ರಾಜೆಕ್ಟ್‌ಗಳ ಸೃಷ್ಟಿಯ ತನಕ ಎಲ್ಲೆಡೆ ಎಐ ಅನುಷ್ಠಾನದ ಬಗ್ಗೆ ಕಲಿಯುವುದು ಸಾಧ್ಯವಾಗುತ್ತದೆ. ಇದನ್ನೂ ಓದಿ: ಜಿಯೋ ಹಾಟ್‌ಸ್ಟಾರ್‌ ವಿಲೀನ | ಇನ್ಮುಂದೆ ಐಪಿಎಲ್‌ ಉಚಿತ ವೀಕ್ಷಣೆ ಇಲ್ಲ- ಎರಡನ್ನೂ ಸಬ್‌ಸ್ಕ್ರೈಬ್‌ ಮಾಡಿದವರ ಕಥೆ ಏನು?

  • ಮೊಬೈಲ್ ಬಳಕೆದಾರರ ಸೇರ್ಪಡೆ: ಏಪ್ರಿಲ್ ತಿಂಗಳಲ್ಲಿ ಕರ್ನಾಟಕದಲ್ಲಿ ರಿಲಯನ್ಸ್ Jio ನಂ.1

    ಮೊಬೈಲ್ ಬಳಕೆದಾರರ ಸೇರ್ಪಡೆ: ಏಪ್ರಿಲ್ ತಿಂಗಳಲ್ಲಿ ಕರ್ನಾಟಕದಲ್ಲಿ ರಿಲಯನ್ಸ್ Jio ನಂ.1

    – ಕರ್ನಾಟಕದಲ್ಲಿ Jioಗೆ ಏಪ್ರಿಲ್‌ನಲ್ಲಿ 1.2 ಲಕ್ಷ ಹೊಸ ಚಂದಾದಾರರು ಸೇರ್ಪಡೆ
    – ರಾಜ್ಯದಲ್ಲಿ ಸಕ್ರಿಯ ಜಿಯೋ ಏರ್‌ಫೈಬರ್ ಬಳಕೆದಾರರ ಸಂಖ್ಯೆ 3,61,122ಕ್ಕೆ ಹೆಚ್ಚಳ; ಜಿಯೋ ನಂ.1
    – ಭಾರತದಲ್ಲಿ ರಿಲಯನ್ಸ್ ಜಿಯೋ ಮೊಬೈಲ್ ಬಳಕೆದಾರರ ಒಟ್ಟು ಸಂಖ್ಯೆ 47.24 ಕೋಟಿ

    ಬೆಂಗಳೂರು: ರಿಲಯನ್ಸ್ ಜಿಯೋ (Reliance Jio) ಕರ್ನಾಟಕದಲ್ಲಿ ತನ್ನ ಬಲವಾದ ಪ್ರಾಬಲ್ಯವನ್ನ ಮುಂದುವರಿಸಿದೆ. 2025ರ ಏಪ್ರಿಲ್ ನಲ್ಲಿ 1.2 ಲಕ್ಷ ಹೊಸ ಮೊಬೈಲ್ ಚಂದಾದಾರರನ್ನ ಜಿಯೋ ಸೇರ್ಪಡೆ ಮಾಡಿಕೊಂಡಿದೆ. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (TRAI) ಇತ್ತೀಚಿನ ಮಾಹಿತಿಯ ಪ್ರಕಾರ, ರಾಜ್ಯದ ಎಲ್ಲ ಟೆಲಿಕಾಂ ಆಪರೇಟರ್‌ಗಳ ಪೈಕಿ ಈ ಸಂಖ್ಯೆ ಅತ್ಯಧಿಕ ಎನಿಸಿಕೊಂಡಿದೆ.

    ಕರ್ನಾಟಕದಲ್ಲಿ ಜಿಯೋ ಸ್ಥಿರ ವೈರ್‌ಲೆಸ್ ಸಂಪರ್ಕದಲ್ಲಿ (FWA) ತನ್ನ ನಾಯಕತ್ವ ಸ್ಥಾನವನ್ನು ಬಲಪಡಿಸುತ್ತಿದ್ದು, ಜಿಯೋ ಏರ್‌ಫೈಬರ್ ಸೇವೆಯು ಸ್ಪಷ್ಟವಾಗಿ ಮಾರುಕಟ್ಟೆ ನಾಯಕನಾಗಿ ಹೊರಹೊಮ್ಮುತ್ತಿದೆ. ಕರ್ನಾಟಕದಲ್ಲಿ ಸಕ್ರಿಯ ಜಿಯೋ ಏರ್‌ಫೈಬರ್ (Jio Airfiber) ಬಳಕೆದಾರರ ಸಂಖ್ಯೆ ಏಪ್ರಿಲ್‌ ತಿಂಗಳಿನಲ್ಲಿ 3,61,122 (3.61 ಲಕ್ಷ)ಕ್ಕೆ ಏರಿಕೆಯಾಗಿದೆ. ಇದು 2025ರ ಮಾರ್ಚ್ ತಿಂಗಳಿನಲ್ಲಿ 3,38,177 (3.38 ಲಕ್ಷ) ರಷ್ಟಿತ್ತು. ಇನ್ನು ಜಿಯೋದ ಸಂಖ್ಯೆಗೆ ಹೋಲಿಸಿದರೆ ಏರ್‌ಟೆಲ್ 1,23,393 ಸ್ಥಿರ ವೈರ್‌ಲೆಸ್ ಸಂಪರ್ಕದ ಚಂದಾದಾರರನ್ನ ಹೊಂದಿದೆ.

    ಏಪ್ರಿಲ್ ತಿಂಗಳಿನಲ್ಲಿ ದೇಶಾದ್ಯಂತ ಸಕಾರಾತ್ಮಕವಾದ ಸಕ್ರಿಯ ಚಂದಾದಾರರ ಸೇರ್ಪಡೆ ಹೊಂದಿದ ಏಕೈಕ ಟೆಲಿಕಾಂ ಆಪರೇಟರ್ ಕೂಡ ಜಿಯೋ ಆಗಿದೆ. 55 ಲಕ್ಷಕ್ಕಿಂತ ಹೆಚ್ಚು ಸಕ್ರಿಯ ಬಳಕೆದಾರರ ಸೇರ್ಪಡೆಗಳನ್ನ ಹೊಂದಿದ್ದು, ಇದು ಸತತ 2ನೇ ತಿಂಗಳು 50 ಲಕ್ಷಕ್ಕಿಂತಲೂ ಹೆಚ್ಚು ವಿಎಲ್ಆರ್ (ವಿಸಿಟರ್ ಲೊಕೇಶನ್ ರಿಜಿಸ್ಟರ್) ಸೇರಿಸಿದೆ. ಇದೇ ವೇಳೆ ವಿಐ (Vi) ಮತ್ತು ಬಿಎಸ್ಎನ್ಎಲ್ (BSNL) ಸೇರಿ ಇತರ ಟೆಲಿಕಾಂ ಆಪರೇಟರ್‌ಗಳು ನಿವ್ವಳ ಚಂದಾದಾರರ ಸಂಖ್ಯೆಯಲ್ಲಿ ಕುಸಿತವನ್ನು ಕಂಡಿವೆ.

    ರಾಷ್ಟ್ರೀಯ ಮಟ್ಟದಲ್ಲಿ, ಜಿಯೋ ಶೇ 82ರಷ್ಟು ಪಾಲು ಮತ್ತು 61.4 ಲಕ್ಷ ಚಂದಾದಾರರೊಂದಿಗೆ ಸ್ಥಿರ ವೈರ್‌ಲೆಸ್ ಸಂಪರ್ಕದಲ್ಲಿ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸುತ್ತಿದೆ.

    2025ರ ಏಪ್ರಿಲ್ ತಿಂಗಳಲ್ಲಿ ಒಟ್ಟಾರೆ ಸ್ಥಿರ ಬ್ರಾಡ್‌ಬ್ಯಾಂಡ್ ಬೆಳವಣಿಗೆಗೆ ದಾಖಲೆಯ ತಿಂಗಳಾಗಿದ್ದು, ಜಿಯೋದ ವೈರ್‌ಲೈನ್ ಮತ್ತು ಸ್ಥಿರ ವೈರ್‌ಲೆಸ್ ಸಂಪರ್ಕ ಸೇವೆಗಳಲ್ಲಿ ಸುಮಾರು 9.10 ಲಕ್ಷ ಹೊಸ ಗ್ರಾಹಕರನ್ನು ಸೇರಿಸಲಾಗಿದೆ. ಕೇವಲ 2.30 ಲಕ್ಷ ಹೊಸ ಗ್ರಾಹಕರನ್ನು ಸೇರ್ಪಡೆ ಮಾಡಿಕೊಂಡಿರುವ ಏರ್‌ಟೆಲ್‌ಗಿಂತ ಜಿಯೋದ ಈ ಅಂಕಿ- ಅಂಶವು ಸುಮಾರು 4 ಪಟ್ಟು ಹೆಚ್ಚಾಗಿದೆ.

    ರಾಷ್ಟ್ರೀಯ ಮಟ್ಟದಲ್ಲಿ, ಜಿಯೋ ಏಪ್ರಿಲ್ ನಲ್ಲಿ 26.44 ಲಕ್ಷ ಒಟ್ಟು ಚಂದಾದಾರರನ್ನು ಸೇರ್ಪಡೆ ಮಾಡಿಕೊಂಡಿದ್ದು, ಒಟ್ಟು ಬಳಕೆದಾರರ ಸಂಖ್ಯೆಯನ್ನು 47.24 ಕೋಟಿಗೆ ಹೆಚ್ಚಿಸಿದೆ ಮತ್ತು ಮೊಬೈಲ್ ವಿಭಾಗದಲ್ಲಿ ಶೇ 40.76ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ನಂತರದ ಸ್ಥಾನದಲ್ಲಿ ಏರ್‌ಟೆಲ್ ಶೇ 33.65ರಷ್ಟು (ಸುಮಾರು 39 ಕೋಟಿ ಬಳಕೆದಾರರು) ಇದ್ದರೆ, ವೊಡಾಫೋನ್ ಐಡಿಯಾ ಶೇ 17.66ರಷ್ಟು (20.47 ಕೋಟಿ ಬಳಕೆದಾರರು) ಹೊಂದಿದೆ. ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್ ಒಟ್ಟಾಗಿ ಶೇ 7.84ರಷ್ಟು ಪಾಲನ್ನು ಹೊಂದಿವೆ.

    ಜಿಯೋದ ಬಹಳ ವೇಗವಾದ ನೆಟ್‌ವರ್ಕ್ ವಿಸ್ತರಣೆ, ಕೈಗೆಟುಕುವ ಬೆಲೆಯ ಪ್ಲಾನ್ ಗಳು ಮತ್ತು ಸಂಯೋಜಿತ ಡಿಜಿಟಲ್ ಸೇವೆಗಳು ಕರ್ನಾಟಕ ಮತ್ತು ಭಾರತದ ಉಳಿದ ಭಾಗಗಳಲ್ಲಿ ಮನೆ ಮತ್ತು ಬಿಜಿನೆಸ್ ಸಂಪರ್ಕವನ್ನು ಮರುರೂಪಿಸುತ್ತಾ ಇವೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವೇಗದ ಇಂಟರ್ ನೆಟ್ ಬೇಡಿಕೆ ಹೆಚ್ಚುತ್ತಿರುವುದರಿಂದ ಡಿಜಿಟಲ್ ವಿಭಜನೆಯನ್ನು ನಿವಾರಣೆ ಮಾಡುವಲ್ಲಿ ಜಿಯೋ ಪ್ರಮುಖ ಪಾತ್ರ ವಹಿಸುತ್ತಿದೆ.

  • IPL 2025 – ಜಿಯೋದಿಂದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಉಚಿತ ಇಂಟರ್ನೆಟ್

    IPL 2025 – ಜಿಯೋದಿಂದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಉಚಿತ ಇಂಟರ್ನೆಟ್

    ಬೆಂಗಳೂರು: ಐಪಿಎಲ್ (IPL 2025) ಪಂದ್ಯಗಳು ನಡೆಯುತ್ತಿರುವ ಮೈದಾನಗಳಲ್ಲಿ ಜಿಯೋದಿಂದ (Jio) ಉಚಿತ ಮೊಬೈಲ್ ಇಂಟರ್ನೆಟ್ ದೊರೆಯಲಿದೆ. ಬೆಂಗಳೂರಿನ ಚಿನ್ನಸ್ವಾಮಿ (M.Chinnaswamy Stadium) ಮೈದಾನದಲ್ಲೂ ಉಚಿತ ಸೇವೆ ಲಭ್ಯವಿದ್ದು, ಅದಕ್ಕಾಗಿಯೇ ಜಿಯೋ 2000 ಬೂಸ್ಟರ್‌ ಸೆಲ್‌ಗಳನ್ನು ಅಳವಡಿಸಿದೆ. ಪ್ರೇಕ್ಷಕರು ವೈಫೈ ಆನ್ ಮಾಡಿ, ಮೊಬೈಲ್ ಸಂಖ್ಯೆ ನಮೂದಿಸಿ, ಬರುವ ಒಟಿಪಿಯನ್ನು ಹಾಕಿದರೆ, ಉಚಿತ ಇಂಟರ್ನೆಟ್‌ ಪಡೆಯಬಹುದಾಗಿದೆ.

    ಇಂದು (ಏ.10) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ- ಡೆಲ್ಲಿ ಕ್ಯಾಪಿಟಲ್ಸ್ ನಡುವೆ 24ನೇ ಪಂದ್ಯ ನಡೆಯಲಿದೆ. ​ಸದ್ಯ ಈ ಐಪಿಎಲ್​ನಲ್ಲಿ 3 ಪಂದ್ಯಗಳನ್ನು ಆಡಿರುವ ಡೆಲ್ಲಿ ಕ್ಯಾಪಿಟಲ್ಸ್​ ಮೂರರಲ್ಲೂ ವಿಜಯ ಸಾಧಿಸಿ ಟಾಪ್​ನಲ್ಲಿದೆ. ಆರ್​ಸಿಬಿ 4 ಪಂದ್ಯಗಳನ್ನ ಆಡಿ ಒಂದರಲ್ಲಿ ಮಾತ್ರ ಸೋಲು ಕಂಡಿದೆ. ಇದನ್ನೂ ಓದಿ: 159ಕ್ಕೆ ರಾಜಸ್ಥಾನ್‌ ಆಲೌಟ್‌; ಗುಜರಾತ್‌ಗೆ 58 ರನ್‌ಗಳ ಭರ್ಜರಿ ಜಯ

    ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಜೊತೆ ಮ್ಯಾಚ್ ಆಡಿದಾಗೆಲ್ಲಾ ಹೆಚ್ಚು ಬಾರಿ ಬೆಂಗಳೂರು ತಂಡವೇ ಜಯಗಳಿಸಿದೆ. ಆರ್​ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್​ ತಂಡಗಳು ಇದುವರೆಗೆ 31 ಐಪಿಎಲ್​ ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಆರ್​ಸಿಬಿ 19 ಪಂದ್ಯಗಳಲ್ಲಿ ಜಯಗಳಿಸಿದ್ದರೆ, ಡೆಲ್ಲಿ ತಂಡ ಕೇವಲ 11 ರಲ್ಲಿ ಜಯಗಳಿಸಿದೆ. ಇದರಲ್ಲಿ 12 ಪಂದ್ಯಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ನಡೆದಿವೆ. ಈ 12 ರಲ್ಲಿ 7 ಪಂದ್ಯಗಳಲ್ಲಿ ಆರ್​ಸಿಬಿ ಜಯ ಸಾಧಿಸಿದೆ. ಇದನ್ನೂ ಓದಿ: ಐಪಿಎಲ್ 2025: ಪಂಜಾಬ್ ಆಲ್‌ರೌಂಡರ್ ಮ್ಯಾಕ್ಸ್‌ವೆಲ್‌ಗೆ ಪಂದ್ಯದ 25% ದಂಡ

  • ಜಿಯೋ ಹಾಟ್‌ಸ್ಟಾರ್‌ ವಿಲೀನ | ಇನ್ಮುಂದೆ ಐಪಿಎಲ್‌ ಉಚಿತ ವೀಕ್ಷಣೆ ಇಲ್ಲ- ಎರಡನ್ನೂ ಸಬ್‌ಸ್ಕ್ರೈಬ್‌ ಮಾಡಿದವರ ಕಥೆ ಏನು?

    ಜಿಯೋ ಹಾಟ್‌ಸ್ಟಾರ್‌ ವಿಲೀನ | ಇನ್ಮುಂದೆ ಐಪಿಎಲ್‌ ಉಚಿತ ವೀಕ್ಷಣೆ ಇಲ್ಲ- ಎರಡನ್ನೂ ಸಬ್‌ಸ್ಕ್ರೈಬ್‌ ಮಾಡಿದವರ ಕಥೆ ಏನು?

    ಮುಂಬೈ: ಇನ್ನು ಮುಂದೆ ಐಪಿಎಲ್‌ ಕ್ರಿಕೆಟ್‌ (IPL Cricket) ಪಂದ್ಯಗಳನ್ನು ಜಿಯೋ ಸಿನಿಮಾದಲ್ಲಿ (Jio Cinema) ಉಚಿತವಾಗಿ ವೀಕ್ಷಣೆ ಮಾಡಲು ಸಾಧ್ಯವಿಲ್ಲ.

    ಕಳೆದ ಎರಡು ವರ್ಷಗಳಿಂದ ಜಿಯೋ ಸಿನಿಮಾದಲ್ಲಿ ಐಪಿಎಲ್‌ ಪಂದ್ಯಗಳನ್ನು ವೀಕ್ಷಣೆ ಮಾಡಬಹುದಾಗಿತ್ತು. ಆದರೆ ಇನ್ನು ಮುಂದೆ ಜಿಯೋ ಹಾಟ್‌ಸ್ಟಾರ್‌ (Jio Hotstar) ಆಪ್‌ನಲ್ಲಿ ಹಣ ಪಾವತಿಸಿ ಎಲ್ಲಾ ಲೈವ್‌ ಸ್ಟ್ರೀಮ್‌ಗಳನ್ನು ನೋಡಬಹುದು.

    ಡಿಸ್ನಿ-ರಿಲಯನ್ಸ್ (Disney Reliance Joint Venture) ವಿಲೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಜಿಯೋ ಸಿನಿಮಾ ಮತ್ತು ಡಿಸ್ನಿ+ ಹಾಟ್‌ಸ್ಟಾರ್ ವಿಲೀನಗೊಂಡು ಜಿಯೋಸ್ಟಾರ್ ಆಗಿ ಬದಲಾಗಿದ್ದು ಶುಕ್ರವಾರ ಹೊಸ ಸ್ಟ್ರೀಮಿಂಗ್ ಅಪ್ಲಿಕೇಶನನ್ನು ಬಿಡುಗಡೆ ಮಾಡಲಾಗಿದೆ.

    ಮಾಧ್ಯಮಗಳಲ್ಲಿ ಬಂದಿರುವ ವರದಿ ಪ್ರಕಾರ ಲೈವ್‌ಸ್ಟ್ರೀಮ್‌ ಆರಂಭಗೊಂಡ ಕೆಲ ನಿಮಿಷ ಉಚಿತವಾಗಿ ವೀಕ್ಷಿಸಲು ಸಾಧ್ಯವಾಗುತ್ತದೆ. ಈ ಉಚಿತ ನಿಮಿಷಗಳು ಕೊನೆಗೊಂಡ ನಂತರ ಚಂದಾದಾರಿಕೆಯ ಆರಂಭಿಕ ಬೆಲೆ 149 ರೂ. ಆಗಿರುವ ಪುಟ ಕಾಣಿಸಲಿದೆ. ಈ ಹಿಂದೆಯೂ ಹಾಟ್‌ಸ್ಟಾರ್‌ ಬಳಕೆದಾರರಿಗೆ ಇದೇ ರೀತಿಯ ಆಫರ್‌ ನೀಡಿತ್ತು.  ಇದನ್ನೂ ಓದಿ: Champions Trophy | ವಿಜೇತ ತಂಡಕ್ಕೆ ಸಿಗಲಿದೆ 19.45 ಕೋಟಿ – ಗೆದ್ದ ಪ್ರತಿ ಪಂದ್ಯಕ್ಕೂ ಸಿಗುತ್ತೆ ಹಣ

    ಈಗಲೂ ಪ್ರವೇಶಿಸಬಹುದು:
    ಡಿಸ್ನಿ+ ಹಾಟ್‌ಸ್ಟಾರ್ ಮತ್ತು ಜಿಯೋಸಿನಿಮಾ ಎರಡನ್ನೂ ಸಬ್‌ಸ್ಕ್ರೈಬ್‌ ಮಾಡಿದ ಚಂದಾದಾರರು ತಮ್ಮ ಯೋಜನೆಗಳು ಮತ್ತು ಪ್ರಯೋಜನಗಳನ್ನು ಈಗಲೂ ಪಡೆದುಕೊಳ್ಳಬಹುದು. ಜಿಯೋ ಸಿನಿಮಾ ಸಬ್‌ಸ್ಕ್ರೈಬ್‌ ಮಾಡಿದ ಚಂದದಾರರು ಈಗಲೂ ಆಪ್‌ ಪ್ರವೇಶಿಸಬಹುದು. ಆದರೆ ಕಂಟೆಂಟ್‌ ಜಿಯೋಹಾಟ್‌ಸ್ಟಾರ್‌ನಲ್ಲಿ ಪ್ಲೇ ಆಗುತ್ತದೆ. ಸಕ್ರಿಯ ಜಿಯೋಸಿನಿಮಾ ಚಂದಾದಾರಿಕೆಗಳನ್ನು ಹೊಂದಿರುವವರು ತಮ್ಮ ಯೋಜನೆಯ ಅವಧಿ ಮುಗಿಯುವವರೆಗೆ ಕಾಯಬೇಕು ಅಥವಾ ಹೊಸ ಪ್ಲಾಟ್‌ಫಾರ್ಮ್‌ಗೆ ಬದಲಾಯಿಸಬೇಕು. ಹೀಗಾಗಿ ಈಗಾಗಲೇ ಚಂದಾದಾರರಾಗಿರುವ ಬಳಕೆದಾರರು ತಮ್ಮ ಚಂದಾದಾರಿಕೆಗಳನ್ನು ಕಳೆದುಕೊಳ್ಳುವುದಿಲ್ಲ ಮತ್ತು ಅವರ ಆಯಾ ಪ್ಲ್ಯಾನ್‌ ಮುಗಿಯವರೆಗೂ ಜಿಯೋಹಾಟ್‌ಸ್ಟಾರ್ ಅನ್ನು ಉಚಿತವಾಗಿ ಪ್ರವೇಶಿಸಲು ಸಾಧ್ಯವಾಗುತ್ತದೆ. ಇದನ್ನೂ ಓದಿ:  UnSold ಪ್ಲೇಯರ್‌, ಟೂರ್ನಿ ಅರ್ಧದಲ್ಲೇ ಆರ್‌ಸಿಬಿ ಸೇರ್ಪಡೆ, ಸ್ಫೋಟಕ ಶತಕ ಸಿಡಿಸಿ ದಾಖಲೆ – ಪಾಟಿದಾರ್‌ಗೆ ನಾಯಕ ಪಟ್ಟ ಸಿಕ್ಕಿದ್ದು ಹೇಗೆ?

    ಭಾರೀ ಮೊತ್ತಕ್ಕೆ ಖರೀದಿ:
    2017-22ರ ಅವಧಿಯ ಐಪಿಎಲ್‌ ಟಿವಿ ಮತ್ತು ಡಿಜಿಟಲ್‌ ರೈಟ್ಸ್‌ ಅನ್ನು ಡಿಸ್ನಿ ಹಾಟ್‌ಸ್ಟಾರ್‌ 16,347 ಕೋಟಿ ರೂ. ನೀಡಿ ಪಡೆದುಕೊಂಡಿತ್ತು. 2023ರಲ್ಲಿ ಟಿವಿ ಮತ್ತು ಡಿಜಿಟಲ್‌ ರೈಟ್ಸ್‌ ವಿಂಗಡನೆ ಮಾಡಲಾಗಿತ್ತು. 2023-27ರ 410 ಪಂದ್ಯಗಳಿಗೆ ಡಿಜಿಟಲ್‌ ಹಕ್ಕುಗಳನ್ನು 23,758 ಕೋಟಿ ರೂ.ಗೆ ವಯಾಕಾಮ್ 18 ಪಡೆದುಕೊಂಡಿದ್ದರೆ, ಟಿವಿ ಹಕ್ಕುಗಳನ್ನು ವಾಲ್ಟ್ ಡಿಸ್ನಿ ಕಂಪನಿ 23,575 ಕೋಟಿ ರೂ. ನೀಡಿ ಖರೀದಿಸಿತ್ತು.

    ಯಾರ ಬಳಿ ಯಾವ ಹಕ್ಕು?
    ರಿಲಯನ್ಸ್‌ ಜಿಯೋ ಸಿನಿಮಾ ಐಪಿಎಲ್‌ ಕ್ರಿಕೆಟ್‌, ಚಳಿಗಾಲದ ಒಲಿಂಪಿಕ್ಸ್‌, ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್‌ ಹಕ್ಕು ಹೊಂದಿದೆ. ಡಿಸ್ನಿ ಹಾಟ್‌ಸ್ಟಾರ್‌ ಐಸಿಸಿ ಆಯೋಜಿಸುವ ಕ್ರಿಕೆಟ್‌ ಪಂದ್ಯಗಳು, ಇಂಗ್ಲಿಷ್ ಪ್ರೀಮಿಯರ್ ಲೀಗ್, ದೇಶೀಯ ಪ್ರೊ ಕಬಡ್ಡಿ ಲೀಗ್‌ನ ಹಕ್ಕುಗಳನ್ನು ಹೊಂದಿದೆ. ವಿಲೀನಗೊಂಡ ಬಳಿಕ ಎಲ್ಲಾ ಕ್ರೀಡೆಗಳನ್ನು ಜಿಯೋ ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದು.

    ಹಾಟ್‌ಸ್ಟಾರ್‌ನಲ್ಲಿ ಐಪಿಎಲ್‌ ಕ್ರಿಕೆಟ್‌ ವೀಕ್ಷಿಸಬೇಕಾದರೆ ಸಬ್‌ಸ್ಕ್ರೈಬ್‌ ಆಗಬೇಕಿತ್ತು. ಆದರೆ 2023 ರಲ್ಲಿ ಜಿಯೋ ರೈಟ್ಸ್‌ ಪಡೆದ ನಂತರ ಐಪಿಎಲ್‌ ಲೈವ್‌ ಸ್ಟ್ರೀಮಿಂಗ್‌ ಉಚಿತವಾಗಿ ನೀಡಿತ್ತು. ಇದರಿಂದಾಗಿ ಐಪಿಎಲ್‌ ವೀಕ್ಷಕರ ಸಂಖ್ಯೆ ದಾಖಲೆಯ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಇದನ್ನೂ ಓದಿ: ಡ್ಯಾಂಡ್ರಫ್ ಜಾಹೀರಾತಿನಿಂದ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿರುಷ್ಕಾ! – ಇಬ್ಬರ ಲವ್‌ ಸ್ಟೋರಿಯನ್ನು ನೀವು ಓದಲೇಬೇಕು

     

    ಜಂಟಿ ಉದ್ಯಮಕ್ಕೆ ಸಹಿ:
    2024ರ ಫೆಬ್ರವರಿಯಲ್ಲಿ ವಯಾಕಾಮ್ 18 ಮೀಡಿಯಾ ಪ್ರೈವೆಟ್‌ ಲಿಮಿಟೆಡ್ ಮತ್ತು ವಾಲ್ಟ್ ಡಿಸ್ನಿ ಕಂಪನಿ 70 ಸಾವಿರ ಕೋಟಿ ರೂ. ಮೊತ್ತದ ಜಂಟಿ ಉದ್ಯಮಕ್ಕೆ ಸಹಿ ಹಾಕಿದ್ದವು. ಈ ವಹಿವಾಟಿನ ಭಾಗವಾಗಿ ವಯಾಕಾಮ್ 18ಕ್ಕೆ ಸೇರಿದ ಮಾಧ್ಯಮ ಸಂಸ್ಥೆಗಳನ್ನು ಕೋರ್ಟ್ ಅನುಮೋದಿತ ವ್ಯವಸ್ಥೆ ಮೂಲಕ ಸ್ಟಾರ್ ಇಂಡಿಯಾ ಪ್ರೈವೆಟ್ ಲಿಮಿಟೆಡ್‌ನಲ್ಲಿ ವಿಲೀನಗೊಳಿಸಲು ಅನುಮತಿ ಸಿಕ್ಕಿತ್ತು.

    ರಿಲಯನ್ಸ್ ಇಂಡಸ್ಟ್ರೀಸ್‌, ವಯಾಕಾಮ್ 18 ಮೀಡಿಯಾ ಪ್ರೈವೆಟ್‌ ಲಿಮಿಟೆಡ್ ಮತ್ತು ವಾಲ್ಟ್ ಡಿಸ್ನಿ ಕಂಪನಿಯ ವಿಲೀನದ ಭಾಗವಾಗಿ ಪರವಾನಗಿಯನ್ನು ಸ್ಟಾರ್ ಇಂಡಿಯಾಗೆ ವರ್ಗಾಯಿಸಲು ಕೇಂದ್ರ ಸರ್ಕಾರ ಸೆಪ್ಟೆಂಬರ್‌ 27 ರಂದು ಅನುಮೋದನೆ ನೀಡಿತ್ತು. ಪರವಾನಗಿ ಹಸ್ತಾಂತರಕ್ಕೆ ಅನುಮೋದನೆ ನೀಡಿದ್ದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಇದು ಭಾರತೀಯ ಸ್ಪರ್ಧಾತ್ಮಕ ಆಯೋಗವು (CCI) ವಿಧಿಸಿದ ಷರತ್ತುಗಳಿಗೆ ಒಳಪಟ್ಟಿರುತ್ತದೆ ಎಂದು ಆದೇಶದಲ್ಲಿ ತಿಳಿಸಿತ್ತು.

    ಡಿಸ್ನಿ ಮತ್ತು ರಿಲಯನ್ಸ್ ನಡುವಿನ ವಿಲೀನ ಒಪ್ಪಂದದಿಂದಾಗಿ 120 ಟಿವಿ ಚಾನೆಲ್‌ಗಳು ಮತ್ತು ಎರಡು ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳೊಂದಿಗೆ ಭಾರತದ ಅತಿದೊಡ್ಡ ಮನರಂಜನಾ ಕಂಪನಿಯಾಗಿ ಹೊರಹೊಮ್ಮಿದೆ.

  • ಮಸ್ಕ್‌ನ ಸ್ಟಾರ್‌ಲಿಂಕ್‌ಗೆ ಅನುಮತಿ ನೀಡುವ ಮುನ್ನ ನಿರ್ಧಾರ ಪರಿಶೀಲಿಸಿ: ಕೇಂದ್ರಕ್ಕೆ ಜಿಯೋ ಪತ್ರ

    ಮಸ್ಕ್‌ನ ಸ್ಟಾರ್‌ಲಿಂಕ್‌ಗೆ ಅನುಮತಿ ನೀಡುವ ಮುನ್ನ ನಿರ್ಧಾರ ಪರಿಶೀಲಿಸಿ: ಕೇಂದ್ರಕ್ಕೆ ಜಿಯೋ ಪತ್ರ

    ನವದೆಹಲಿ: ವಿಶ್ವದ ನಂಬರ್‌ ಒನ್‌ ಶ್ರೀಮಂತ ಎಲಾನ್‌ ಮಸ್ಕ್‌ (Elon Musk) ಒಡೆತನದ ಸ್ಟಾರ್‌ಲಿಂಕ್‌ಗೆ (Starlink) ಅನುಮತಿ ನೀಡುವ ಮುನ್ನ ಸಂಭಾವ್ಯ ವ್ಯಾಪ್ತಿಯನ್ನು ಪರಿಶೀಲಿಸುವಂತೆ ಮುಕೇಶ್‌ ಅಂಬಾನಿ (Mukesh Ambani) ಒಡೆತನದ ರಿಲಯನ್ಸ್‌ ಜಿಯೋ (Reliance Jio) ಸರ್ಕಾರವನ್ನು ಕೇಳಿಕೊಂಡಿದೆ.

    ಸ್ಟಾರ್‌ಲಿಂಕ್‌ಗೆ ಅನುಮತಿ ನೀಡಿದರೆ ದೇಶೀಯ ಕಂಪನಿಗಳಿಗೆ ಸಮಸ್ಯೆಯಾಗುವ ಸಾಧ್ಯತೆ ಇರುವ ಕಾರಣ ನಿರ್ಧಾರವನ್ನು ಪರಿಶೀಲಿಸುವಂತೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರಕ್ಕೆ (TRAI) ಜಿಯೋ ಪತ್ರ ಬರೆದಿದೆ.

    ಮಸ್ಕ್‌ ಉಪಗ್ರಹ ಆಧಾರಿತ ಇಂಟರ್‌ನೆಟ್‌ ಕಂಪನಿ ಸ್ಟಾರ್‌ಲಿಂಕ್‌ ಸ್ಥಾಪಿಸಿದ್ದು ಈ ಕಂಪನಿ ಭಾರತದಲ್ಲಿ ಸೇವೆ ನೀಡಲು ಕೇಂದ್ರ ಸರ್ಕಾರವನ್ನು ಕೇಳಿದೆ. ಹಿಂದೆ ಕೇಂದ್ರ ಸರ್ಕಾರ ಸ್ಟಾರ್‌ಲಿಂಕ್‌ ಪ್ರವೇಶಕ್ಕೆ ಅನುಮತಿ ನೀಡಿರಲಿಲ್ಲ. ಆದರೆ ಈಗ ಅನುಮತಿ ನೀಡಲು ಮುಂದಾಗಿದೆ. ಈ ಹಿಂದೆ ಪ್ರತಿಕ್ರಿಯಿ ನೀಡಿದ್ದ ಕೇಂದ್ರ ಸಂವಹನ ಮತ್ತು ಅಭಿವೃದ್ಧಿ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ (Jyotiraditya Scindia), ಸ್ಟಾರ್‌ಲಿಂಕ್ ಸರ್ಕಾರದ ಎಲ್ಲಾ ಷರತ್ತುಗಳನ್ನು ಅನುಸರಿಸಿದರೆ ನಾವು ಪರವಾನಗಿ ನೀಡುತ್ತೇವೆ ಎಂದು ಹೇಳಿದ್ದರು.

     

    ಬಿಕ್ಕಟ್ಟು ಸೃಷ್ಟಿಯಾಗಿದ್ದು ಯಾಕೆ?
    ವಿಶ್ವದಲ್ಲಿ ಉಪಗ್ರಹ ಆಧಾರಿತ ಸಂಪನ್ಮೂಲಗಳನ್ನು ಇಂಟರ್‌ನ್ಯಾಷನಲ್‌ ಟೆಲಿಕಾಂ ಯೂನಿಯನ್‌(ITU) ನೋಡಿಕೊಳ್ಳುತ್ತದೆ. ಭಾರತದಲ್ಲಿ ಉಪಗ್ರಹಗಳ (Satellite) ಬಳಕೆ ಮತ್ತು ಬಳಕೆದಾರರ ಲಿಂಕ್‌ಗಳನ್ನು ಸ್ಪೆಕ್ಟ್ರಂ ಹರಾಜು ಮೂಲಕವೇ ಹಂಚಿಕೆ ಮಾಡುತ್ತಿದೆ. ಈ ವಿಚಾರವನ್ನು ಮುಂದಿಟ್ಟುಕೊಂಡು ಜಿಯೋ ಹರಾಜು ಪ್ರಕ್ರಿಯೆ ಮೂಲಕವೇ ಪರವಾನಗಿ ಹಂಚಿಕೆಗೆ ಪಟ್ಟು ಹಿಡಿದಿರುವುದರಿಂದ ಬಿಕ್ಕಟ್ಟು ಸೃಷ್ಟಿಯಾಗಿದೆ.

    2ಜಿ ಹಗರಣ ಆರೋಪಗಳು ಕೇಳಿ ಬಂದ ನಂತ ಭಾರತದಲ್ಲಿ 2010ರ ನಂತರ ದೂರಸಂಪರ್ಕ ಕ್ಷೇತ್ರದಲ್ಲಿನ ಸೇವಾ ಅನುಮತಿಯನ್ನು ಹರಾಜು ಪ್ರಕ್ರಿಯೆ ಮೂಲಕವೇ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಹಂಚಿಕೆ ಮಾಡುತ್ತಿದೆ. ಜಿಯೋ ಈಗ ಹರಾಜು ಮೂಲಕವೇ ಹಂಚಿಕೆ ಹಂಚಿಕೆ ಮಾಡಬೇಕೆಂದು ಬೇಡಿಕೆ ಇರಿಸಿದ್ದರಿಂದ ಈ ಬಿಕ್ಕಟ್ಟು ಸೃಷ್ಟಿಯಾಗಿದೆ. ಇದನ್ನೂ ಓದಿ: ಫೇಸ್‌ಬುಕ್‌ ಮಾತೃಸಂಸ್ಥೆ ಮೆಟಾಗೆ 7,100 ಕೋಟಿ ದಂಡ ವಿಧಿಸಿದ ಯುರೋಪ್‌

    ಜಿಯೋದ ಆತಂಕ ಏನು?
    ಈಗಾಗಲೇ ಜಿಯೋ ಸ್ಪೆಕ್ಟ್ರಂ ಖರೀದಿಗಾಗಿ ಭಾರೀ ಪ್ರಮಾಣದ ಬಂಡವಾಳವನ್ನು ಹೂಡಿದೆ. ಒಂದು ವೇಳೆ ಸ್ಯಾಟ್‌ಲೈಟ್‌ ಆಧಾರಿತ ಕಂಪನಿಗಳು ಭಾರತವನ್ನು ಪ್ರವೇಶಿಸಿದರೆ ದೇಶೀಯ ಟೆಲಿಕಾಂ ಕಂಪನಿಗಳಿಗೆ ಸಮಸ್ಯೆಯಾಗಬಹುದು ಎಂಬ ಆತಂಕವನ್ನು ಜಿಯೋ ಹೊರ ಹಾಕಿದೆ.

    ಮಸ್ಕ್‌ ವಾದ ಏನು?
    ವಿಶ್ವದಲ್ಲಿ ಸರ್ಕಾರಗಳು ಆಡಳಿತಾತ್ಮಕ ಹಂಚಿಕೆಯ ಮೂಲಕ ಸರ್ಕಾರ ಉಪಗ್ರಹ ಆಧಾರಿತ ಇಂಟರ್‌ನೆಟ್‌ಗೆ ಸೇವೆಗೆ ಅನುಮತಿ ನೀಡುತ್ತದೆ. ಆದರೆ ಭಾರತದಲ್ಲಿ ಹರಾಜು ಮೂಲಕ ಹಂಚಿಕೆ ಮಾಡುವುದು ಸರಿಯಲ್ಲ.  ಹರಾಜು ಪ್ರಕ್ರಿಗೆ ಗೆದ್ದು ಇಂಟರ್‌ನೆಟ್‌ ಸೇವೆ ನೀಡಿದರೆ ಬೆಲೆ ಬಹಳ ದುಬಾರಿಯಾಗುತ್ತದೆ. ಕಡಿಮೆ ಬೆಲೆಗೆ ದೂರದ ಪ್ರದೇಶಗಳಿಗೆ ಗುಣಮಟ್ಟದ ಇಂಟರ್‌ನೆಟ್‌ ಸೇವೆ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.

    ಮತ್ತೆ ದರ ಸಮರ ಆಗುತ್ತಾ?
    ಒಂದು ವೇಳೆ ಸ್ಟಾರ್‌ಲಿಂಕ್‌ ಸೇರಿದಂತೆ ಬೇರೆ ಉಪಗ್ರಹ ಆಧಾರಿತ ಕಂಪನಿಗಳಿಗೆ ಭಾರತದಲ್ಲಿ ಅನುಮತಿ ನೀಡಿದರೆ ಮತ್ತೊಮ್ಮೆ ಡೇಟಾ ಸಮರ ಆರಂಭವಾಗುವ ಸಾಧ್ಯತೆಯಿದೆ. ಮಸ್ಕ್‌ ಒಡೆತನದ ಸ್ಟಾರ್‌ಲಿಂಕ್‌ ಜನರನ್ನು ಸೆಳೆಯಲು ಒಂದೊಂದು ದೇಶದಲ್ಲಿ ಒಂದೊಂದು ಡೇಟಾ ಪ್ಲ್ಯಾನ್‌ ರಿಲೀಸ್‌ ಮಾಡಿದೆ. ಅಮೆರಿಕದಲ್ಲಿ ಪ್ರತಿ ತಿಂಗಳಿಗೆ 120 ಡಾಲರ್‌ (ಅಂದಾಜು 10,000 ರೂ) ವಿಧಿಸಿದ್ದರೆ ಕೀನ್ಯಾದಲ್ಲಿ ಪ್ರತಿ ತಿಂಗಳಿಗೆ 10 ಡಾಲರ್‌ (ಅಂದಾಜು 844 ರೂ.) ದರವನ್ನು ವಿಧಿಸಿದೆ. ಸ್ಟಾರ್‌ಲಿಂಕ್‌ ಒಟ್ಟು 6,400 ಉಪಗ್ರಹವನ್ನು ಹಾರಿಸಿದ್ದು ವಿಶ್ವದಲ್ಲಿ 40 ಲಕ್ಷ ಗ್ರಾಹಕರಿದ್ದಾರೆ.

     

  • JioHotstar ಡೊಮೈನ್‌ ಒಡೆತನ ನಮ್ಮದು ಎಂದ ದುಬೈನ ಮಕ್ಕಳು

    JioHotstar ಡೊಮೈನ್‌ ಒಡೆತನ ನಮ್ಮದು ಎಂದ ದುಬೈನ ಮಕ್ಕಳು

    ಮುಂಬೈ: JioHotstar ಡೊಮೈನ್‌ ಒಡೆತನ ನಮ್ಮದು ಎಂದು ದುಬೈನ (Dubai) ಇಬ್ಬರು ಮಕ್ಕಳು ಹೇಳಿಕೊಂಡಿದ್ದಾರೆ.

    ಹೌದು, ಈ ಮೊದಲು ಈ ಡೊಬೈನ್‌ (Domain) ಮಾಲೀಕತ್ವವನ್ನು ನಾನು ಹೊಂದಿದ್ದೇನೆ ಎಂದು ದೆಹಲಿಯ ಟೆಕ್ಕಿಯೊಬ್ಬರು ಹೇಳಿದ್ದರು. ಈಗ ದುಬೈನಲ್ಲಿ ನೆಲೆಸಿರುವ ಭಾರತ ಮೂಲದ ಜೈನಮ್ ಮತ್ತು ಜೀವಿಕಾ ಜೈನ್‌ ಈ ಡೊಮೈನ್‌ ನಮ್ಮದು ಎಂದಿದ್ದಾರೆ.

    ವೆಬ್‌ಸೈಟ್‌ನ ಲ್ಯಾಂಡಿಂಗ್ ಪುಟದಲ್ಲಿ ಮಕ್ಕಳ ಕಿರು ಪರಿಚಯವನ್ನು ಬರೆಯಲಾಗಿದ್ದು ಕೊನೆಗೆ ದೆಹಲಿಯಿಂದ ಯುವ ಸಾಫ್ಟ್‌ವೇರ್ ಡೆವಲಪರ್ ಅನ್ನು ಬೆಂಬಲಿಸಲು ಈ ಡೊಮೈನ್‌  ಖರೀದಿಸಿ ಮಾರಾಟಕ್ಕೆ ಇಟ್ಟಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ದೀಪಾವಳಿ ಕೊಡುಗೆ – 699 ರೂ.ಗೆ ಸಿಗಲಿದೆ ಜಿಯೋಭಾರತ್‌ 4ಜಿ ಫೋನ್

    ತಂತ್ರಜ್ಞಾನ ಕಲಿಕೆಯಲ್ಲಿ ನಾವು ಆಸಕ್ತಿ ಹೊಂದಿದ್ದು, ನ್ಯಾಯಯುತವಾಗಿ ಈ ಡೊಮೈನ್‌ ಮಾರಾಟ ಮಾಡಲು ನಮಗೆ ಯಾವುದೇ ಹಿಂಜರಿಕೆ ಇಲ್ಲ ಎಂದು ತಮ್ಮ ಯೂಟ್ಯೂಬ್‌ ವಿಡಿಯೋದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಜಿಯೋದಲ್ಲಿ ಐಪಿಎಲ್‌ ಬರಲ್ಲ, ಇನ್ನು ಮುಂದೆ ಹಾಟ್‌ಸ್ಟಾರ್‌ನಲ್ಲಿ ನೇರಪ್ರಸಾರ!

    ಡೊಮೈನ್‌ ಹೆಸರು ಸುದ್ದಿಯಾಗುತ್ತಿರೋದು ಯಾಕೆ?
    ಡಿಸ್ನಿ-ರಿಲಯನ್ಸ್ (Disney Reliance Joint Venture) ವಿಲೀನ ಪ್ರಕ್ರಿಯೆ ಸುದ್ದಿ ಬರುತ್ತಿದ್ದಂತೆ JioHotstar ಡೊಮೈನ್‌ ಸುದ್ದಿಯಾಗತೊಡಗಿತ್ತು. ಈ ಸಂದರ್ಭದಲ್ಲಿ ದೆಹಲಿಯ ಟೆಕ್ಕಿಯೊಬ್ಬರು ನಾನು 2023 ರಲ್ಲಿ ಈ ಡೊಮೈನ್‌ ಖರೀದಿಸಿದ್ದೇನೆ. ಕೇಂಬ್ರಿಡ್ಜ್‌ ವಿಶ್ವವಿದ್ಯಾಲಯದಲ್ಲಿ ಎಂಬಿಎ ಪದವಿ ಓದಲು ನನಗೆ 1 ಕೋಟಿ ರೂ. ನೀಡಿದರೆ ನಾನು ಕೊಡುತ್ತೇನೆ ಎಂದಿದ್ದರು. ಆದರೆ ಜಿಯೋ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದರಿಂದ ಅವರು ಸುಮ್ಮನಾಗಿದ್ದರು. ಆದರೆ ಈಗ ಈ ಡೊಮೈನ್‌ ಅನ್ನು ಇಬ್ಬರು ಮಕ್ಕಳು ಖರೀದಿಸಿದ್ದು ಮತ್ತೆ ಟ್ವಿಸ್ಟ್‌ ಪಡೆದುಕೊಂಡಿದೆ.

     

  • ಕರ್ನಾಟಕದ ಹಳ್ಳಿಹಳ್ಳಿಗಳಲ್ಲೂ ಜಿಯೋ – ಗಾಜನೂರು, ಪೆದ್ದನಪಾಳ್ಯ, ಹುಗ್ಯಂನಂಥ ಗ್ರಾಮಗಳಲ್ಲೂ ಟವರ್‌

    ಕರ್ನಾಟಕದ ಹಳ್ಳಿಹಳ್ಳಿಗಳಲ್ಲೂ ಜಿಯೋ – ಗಾಜನೂರು, ಪೆದ್ದನಪಾಳ್ಯ, ಹುಗ್ಯಂನಂಥ ಗ್ರಾಮಗಳಲ್ಲೂ ಟವರ್‌

    ಬೆಂಗಳೂರು: ಈಗ ಕರ್ನಾಟಕದ (Karnataka) ದೂರ ದೂರದ ಪ್ರದೇಶಗಳಲ್ಲಿಯೂ ರಿಲಯನ್ಸ್ ಜಿಯೋದ (Reliance Jio) ನೆಟ್‌ವರ್ಕ್‌ ಸಿಗುತ್ತಿದೆ.

    ಶಿವಮೊಗ್ಗದ ಗಾಜನೂರು, ಚಾಮರಾಜನಗರದ ಕೊಳ್ಳೇಗಾಲ, ಹುಗ್ಯಂನಲ್ಲಿ ಸಂಪರ್ಕ ದೊರೆಯುವಂತೆ ಮಾಡುವಲ್ಲಿ ಜಿಯೋ ಯಶಸ್ಸು ಕಂಡಿದೆ. ಇದಕ್ಕೂ ಮುನ್ನ ಈ ಪ್ರದೇಶಗಳಲ್ಲಿ ಸಂವಹನ ಮೂಲಸೌಕರ್ಯಕ್ಕೆ ಕೊರತೆ ಇತ್ತು.  ಇದನ್ನೂ ಓದಿ: ಗೂಗಲ್‌, ಆಪಲ್‌ಗೆ ಜಿಯೋ ಠಕ್ಕರ್‌ – ಕ್ಲೌಡ್‌ ಸ್ಟೋರೇಜ್‌ನಲ್ಲೂ ದರ ಸಮರ ಆರಂಭ?

    ಪರಿಸರ ಮತ್ತು ಭೌಗೋಳಿಕ ಸವಾಲುಗಳನ್ನು ದಾಟುವ ಮೂಲಕವಾಗಿ ಜಿಯೋ ತನ್ನ ದೃಢವಾದ 4ಜಿ ಮತ್ತು 5ಜಿ ನೆಟ್‌ವರ್ಕ್ ಅನ್ನು ರಾಜ್ಯದ್ಯಂತ ಹಳ್ಳಿ ಹಳ್ಳಿಗಳಿಗೆ ವಿಸ್ತರಿಸುತ್ತಿದೆ. ಈ ತಾಲೂಕುಗಳಲ್ಲಿ ಇರುವ ಅನೇಕ ಹಳ್ಳಿಗಳು (Village) ಈಗ ಜಿಯೋ ನೆಟ್‌ವರ್ಕ್‌ನಿಂದಾಗಿ (Jio Network) ಮಾತ್ರ ಪ್ರಯೋಜನ ಪಡೆಯುತ್ತಿವೆ.

     

    ಜಿಯೋ ಟವರ್‌ನಿಂದಾಗಿ ಮಕ್ಕಳು ನೆಟ್‌ವರ್ಕ್ ಸಂಪರ್ಕಕ್ಕಾಗಿ ದೂರದ ಸ್ಥಳಗಳಿಗೆ ಪ್ರಯಾಣ ಮಾಡುವ ಅಗತ್ಯವಿಲ್ಲ. ಯುವಜನರಿಗೆ ವರ್ಕ್ ಫ್ರಮ್ ಹೋಮ್ ಮಾಡುವುದಕ್ಕೆ ಅನುಕೂಲವಾಗಿದ್ದು, ಇದರಿಂದ ಅವಕಾಶಗಳು ತೆರೆದುಕೊಂಡಿವೆ.

    ಈ ಗ್ರಾಮದ ಜನರು ಜಿಯೋದ ಪ್ರೀಮಿಯಂ ಅಪ್ಲಿಕೇಷನ್‌ಗಳಾದ ಜಿಯೋಟಿವಿ ಮತ್ತು ಜಿಯೋ ಸಿನಿಮಾ  ಮೂಲಕ ಮನರಂಜನೆಯನ್ನು ಪಡೆಯಬಹುದಾಗಿದೆ.

     

  • ಗೂಗಲ್‌, ಆಪಲ್‌ಗೆ ಜಿಯೋ ಠಕ್ಕರ್‌ – ಕ್ಲೌಡ್‌ ಸ್ಟೋರೇಜ್‌ನಲ್ಲೂ ದರ ಸಮರ ಆರಂಭ?

    ಗೂಗಲ್‌, ಆಪಲ್‌ಗೆ ಜಿಯೋ ಠಕ್ಕರ್‌ – ಕ್ಲೌಡ್‌ ಸ್ಟೋರೇಜ್‌ನಲ್ಲೂ ದರ ಸಮರ ಆರಂಭ?

    ಮುಂಬೈ: ಉಚಿತ ಡೇಟಾ (Free Data Pack) ನೀಡಿ ಭಾರತದಲ್ಲಿ ಡೇಟಾ ಕ್ರಾಂತಿ ಮಾಡಿದ್ದ ಜಿಯೋ ಈಗ ಕ್ಲೌಡ್‌ ಸ್ಟೋರೇಜ್‌ನಲ್ಲೂ (Cloud Storage) ಕ್ರಾಂತಿ ಮಾಡುತ್ತಾ ಎಂಬ ಪ್ರಶ್ನೆ ಎದ್ದಿದೆ.

    ರಿಲಯನ್ಸ್‌ ಇಂಡಸ್ಟ್ರೀಸ್‌ 47ನೇ ವಾರ್ಷಿಕ ಸಭೆಯಲ್ಲಿ ಮುಖ್ಯಸ್ಥ ಮುಖೇಶ್‌ ಅಂಬಾನಿ ಜಿಯೋ ಬಳಕೆದಾರರಿಗೆ ಉಚಿತವಾಗಿ 100 ಜಿಬಿ ಕ್ಲೌಡ್‌ ಸ್ಟೋರೇಜ್‌ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

    ಜಿಯೋ ಎಐ ಕ್ಲೌಡ್‌ ವೆಲಕಂ ಆಫರ್‌ ಈ ವರ್ಷದ ದೀಪಾವಳಿಗೆ ಬಿಡುಗಡೆ ಮಾಡುತ್ತೇವೆ. ಜಿಯೋ ಬಳಕೆದಾರರು 100 ಜಿಬಿವರೆಗೆ ಡೇಟಾವನ್ನು ಸ್ಟೋರ್‌ ಮಾಡಬಹುದು. ಎಲ್ಲಾ ಫೋಟೋ, ವಿಡಿಯೋ, ಡಾಕ್ಯುಮೆಂಟ್‌, ಡಿಜಿಟಲ್‌ ಕಂಟೆಟ್‌ಗಳನ್ನು ಸುರಕ್ಷಿತವಾಗಿ ಸ್ಟೋರ್‌ ಮಾಡಬಹುದು ಎಂದು ಮುಖೇಶ್‌ ಅಂಬಾನಿ ಹೇಳಿದ್ದಾರೆ. ಇದನ್ನೂ ಓದಿ: ಪ್ರಿಯಕರನೊಂದಿಗೆ ಪತ್ನಿಯ ಖಾಸಗಿ ಕ್ಷಣ ವೀಡಿಯೋ ಮಾಡಿ ಹಂಚಿಕೊಂಡ ಪತಿ!

    ಕ್ಲೌಡ್‌ನಲ್ಲಿ ದರ ಸಮರ:
    ಸದ್ಯ ಗೂಗಲ್‌ ಒನ್‌ನಲ್ಲಿ (Google One) ಉಚಿತವಾಗಿ 15 ಜಿಬಿ ಡೇಟಾವನ್ನು ಸ್ಟೋರ್‌ ಮಾಡಬಹುದು. ಇನ್ನು ಹೆಚ್ಚಿನ ಡೇಟಾವನ್ನು ಸಂಗ್ರಹ ಮಾಡಬೇಕಾದರೆ ಹೆಚ್ಚಿನ ಹಣವನ್ನು ಪಾವತಿಸಬೇಕು. 100 ಜಿಬಿ ಡೇಟಾಗೆ ತಿಂಗಳಿಗೆ 130 ರೂ. ಇದ್ದರೆ 200 ಜಿಬಿ ಡೇಟಾಗೆ ತಿಂಗಳಿಗೆ 210 ರೂ. ದರ ನಿಗದಿಯಾಗಿದೆ.

    ಆಪಲ್‌ ಐಕ್ಲೌಡ್‌ನಲ್ಲಿ (Apple iCloud) 50 ಜಿಬಿ ಡೇಟಾಗೆ ತಿಂಗಳಿಗೆ 75 ರೂ. ಇದ್ದರೆ 200 ಜಿಬಿ ಡೇಡಾಗೆ 219 ರೂ. ದರ ನಿಗದಿ ಮಾಡಿದೆ. ತನ್ನ ಎಲ್ಲಾ ಬಳಕೆದಾರಿಗೆ ಜಿಯೋ 100 ಜಿಬಿ ವರೆಗೆ ಉಚಿತವಾಗಿ ಫ್ರೀ ಸ್ಟೋರೇಜ್‌ ನೀಡಿದ್ದರಿಂದ ಮುಂದಿನ ದಿನಗಳಲ್ಲಿ ಕ್ಲೌಡ್‌ನಲ್ಲೂ ದರ ಸಮರ ಆರಂಭವಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಬಿಜೆಪಿಗೆ ಕೋವಿಡ್‌ ಉರುಳು | ಔಷಧ, ವೈದ್ಯಕೀಯ ಉಪಕರಣ ಹಗರಣ – ಇಂದು ಸಿಎಂಗೆ ವರದಿ ಸಲ್ಲಿಕೆ

    ಜಿಯೋ ಸೇವೆ ಆರಂಭವಾಗುವ ಮೊದಲು ಭಾರತದಲ್ಲಿ 1 ಜಿಬಿ ಮೊಬೈಲ್‌ ಇಂಟರ್‌ನೆಟ್‌ ಡೇಟಾಗೆ 250 ರೂ. ದರ ನಿಗದಿಯಾಗಿತ್ತು. ಆದರೆ ಜಿಯೋ ಉಚಿತವಾಗಿ ಡೇಟಾ ನೀಡಿದ್ದರಿಂದ ಡೇಟಾ ಸಮರ ಆರಂಭವಾಗಿತ್ತು. ಪರಿಣಾಮ ಎಲ್ಲಾ ಟೆಲಿಕಾಂ ಕಂಪನಿಗಳು ಡೇಟಾ ದರವನ್ನು ಇಳಿಕೆ ಮಾಡಿದ್ದವು. ಪರಿಣಾಮ ವಿಶ್ವದಲ್ಲೇ ಭಾರತದಲ್ಲಿ ಕಡಿಮೆ ದರದಲ್ಲಿ (1 ಜಿಬಿಗೆ 14 ರೂ.) ಇಂಟರ್‌ನೆಟ್‌ ಸೇವೆ ಲಭ್ಯವಿದೆ.

     

  • ಜುಲೈ 3 ರಿಂದ ಜಿಯೋದಿಂದ ಹೊಸ ಅನ್‌ಲಿಮಿಟೆಡ್ ಪ್ಲಾನ್‌

    ಜುಲೈ 3 ರಿಂದ ಜಿಯೋದಿಂದ ಹೊಸ ಅನ್‌ಲಿಮಿಟೆಡ್ ಪ್ಲಾನ್‌

    ಮುಂಬೈ : ದೂರಸಂಪರ್ಕ ಕ್ಷೇತ್ರದ ಅತಿದೊಡ್ಡ ಕಂಪನಿ ರಿಲಯನ್ಸ್ ಜಿಯೋ (Reliance Jio) ಇನ್ಫೊಕಾಮ್ ಲಿಮಿಟೆಡ್, ಜುಲೈ 3 ರಿಂದ ಜಾರಿಗೆ ಬರುವಂತೆ ಹಲವು ಹೊಸ ಅನಿಯಮಿತ ಯೋಜನೆ (Unlimited Tariff) ಪ್ರಕಟಿಸಿದೆ.

    ಹೊಸ ಯೋಜನೆಗಳ ಮೂಲಕ ಕಡಿಮೆ ದರಕ್ಕೆ ಇಂಟರ್ನೆಟ್ ಸೇವೆ (Internet Service) ಒದಗಿಸುವ ತನ್ನ ಬದ್ಧತೆಯನ್ನು ಕಂಪನಿ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಭಾರತದಲ್ಲಿ (India) ತನ್ನ 5ಜಿ ಸಂಪರ್ಕವು ಬಹಳ ವೇಗವಾಗಿ ಬೆಳೆಯುತ್ತಿದ್ದು 85% ಪ್ರದೇಶಗಳಿಗೆ ತಲುಪಿದೆ ಎಂದು ತಿಳಿಸಿದೆ.

    ತಿಂಗಳ ಯೋಜನೆ 189 ರೂ.ಗೆ 2ಜಿಬಿ ಇದ್ದು ವಾರ್ಷಿಕ ಯೋಜನೆ 3,599 ರೂ. ದಿನಕ್ಕೆ 2.5 ಜಿಬಿ ಡೇಟಾ ಸಿಗಲಿದೆ. ದಿನಕ್ಕೆ 2 ಜಿಬಿ ಮತ್ತು ಅದಕ್ಕಿಂತ ಹೆಚ್ಚಿನ 5ಜಿ ಡೇಟಾದ ಎಲ್ಲಾ ಯೋಜನೆಗಳನ್ನೂ ಇದು ಒಳಗೊಂಡಿದೆ.

    ಅನಿಯಮಿತ 5ಜಿ ಡೇಟಾ ಸೇವೆಯು ದಿನಕ್ಕೆ 2 ಜಿಬಿ ಅಥವಾ ಅದಕ್ಕಿಂತ ಹೆಚ್ಚಿನದ್ದಕ್ಕೆ ಅನ್ವಯಿಸುತ್ತದೆ ಎಂದು ಕಂಪನಿ ತಿಳಿಸಿದೆ. ಇದನ್ನೂ ಓದಿ: ಡೇಟಾ ಟ್ರಾಫಿಕ್‌- ಚೀನಾ ಕಂಪನಿ ಹಿಂದಿಕ್ಕಿದ ರಿಲಯನ್ಸ್‌

    ಗರಿಷ್ಠ ಗುಣಮಟ್ಟದ, ಕೈಗೆಟಕುವ ಇಂಟರ್ನೆಟ್ ಸೌಲಭ್ಯವು ಡಿಜಿಟಲ್ ಇಂಡಿಯಾದ ಬೆನ್ನೆಲುಬಾಗಿದೆ. ಇದಕ್ಕೆ ಹೆಚ್ಚಿನ ಕೊಡುಗೆ ನೀಡುತ್ತಿರುವುದಕ್ಕೆ ಜಿಯೋ ಹೆಮ್ಮೆಪಡುತ್ತದೆ. ನಮ್ಮ ದೇಶ ಮತ್ತು ಗ್ರಾಹಕರು ಕಂಪನಿಯ ಆದ್ಯತೆಯಾಗಿದೆ. ಭಾರತಕ್ಕಾಗಿ ಹೂಡಿಕೆ ಮಾಡುವುದನ್ನು ಕಂಪನಿ ಮುಂದುವರಿಸಲಿದೆ ಎಂದು ರಿಲಯನ್ಸ್ ಜಿಯೋ ಅಧ್ಯಕ್ಷ ಆಕಾಶ್ ಎಂ. ಅಂಬಾನಿ (Akash Ambani) ಹೇಳಿದರು.

    ದೇಶದಲ್ಲಿ ಡೇಟಾ ಬಳಕೆ ಮತ್ತು ಸ್ಮಾರ್ಟ್‌ಫೋನ್ ಬಳಕೆ ಹೆಚ್ಚಿಸಲು ಜಿಯೋ ಕಂಪನಿಯು ಮಹತ್ವದ ಕೊಡುಗೆ ನೀಡುತ್ತಿದೆ. ಕಂಪನಿಯು ದೂರಸಂಪರ್ಕ ಕ್ಷೇತ್ರಕ್ಕೆ ಕಾಲಿಟ್ಟಿದ್ದರಿಂದ ಪ್ರತಿಸ್ಪರ್ಧಿ ಕಂಪನಿಗಳು ರಿಚಾರ್ಜ್ ದರ ತಗ್ಗಿಸುವಂತೆ ಮತ್ತು ಡೇಟಾ ಕೊಡುಗೆಯಲ್ಲಿ ಸುಧಾರಣೆ ತರುವಂತೆ ಆಗಿದೆ.

    ಎರಡು ಹೊಸ ಆ್ಯಪ್: ಜಿಯೋ ಕಂಪನಿಯು ತನ್ನ ಡಿಜಿಟಲ್ ಸೌಲಭ್ಯದ ವ್ಯಾಪ್ತಿಯನ್ನೂ ವಿಸ್ತರಿಸಿದೆ. ಜಿಯೋ ಸೇಫ್ (Jio Safe) ಮತ್ತು ಜಿಯೋ ಟ್ರಾನ್ಸ್‌ಲೇಟ್ (Jio Translate) ಎಂಬ ಎರಡು ಅಪ್ಲಿಕೇಷನ್‌ಗಳನ್ನು ಬಿಡುಗಡೆ ಮಾಡಿದೆ. ಜಿಯೋ ಸೇಫ್ ತಿಂಗಳ ದರ 199 ರೂ. ಇದ್ದು, ಸುರಕ್ಷಿತ ಕರೆ, ಮೆಸೇಜಿಂಗ್ ಮತ್ತು ಫೈಲ್ ಟ್ರಾನ್ಸ್‌ಫರ್ ಸೇವೆಯನ್ನು ಒದಗಿಸುತ್ತದೆ. ‌ಜಿಯೋ ಟ್ರಾನ್ಸ್‌ಲೇಟ್ ಆ್ಯಪ್‌ನಲ್ಲಿ ತಿಂಗಳಿಗೆ 99 ರೂ. ನೀಡಿದರೆ, ಕೃತಕ ಬಿದ್ದಿಮತ್ತೆಯಿಂದ ಚಾಲಿತ ಆ್ಯಪ್ ವಾಯ್ಸ್, ಕಾಲ್, ಮೆಸೇಜ್, ಟೆಕ್ಸ್ಟ್ ಮತ್ತು ಇಮೇಜ್‌ಗಳನ್ನು ಟ್ರಾನ್ಸ್‌ಲೇಟ್ ಮಾಡಬಲ್ಲದು. ಜಿಯೋ ಬಳಕೆದಾರರಿಗೆ ಒಂದು ವರ್ಷದವೆರೆಗೆ ಈ ಎರಡೂ ಆ್ಯಪ್‌ಗಳು ಉಚಿತವಾಗಿರಲಿವೆ.