Tag: Jindal company

  • ಸಿಎಂ ಸಿದ್ದರಾಮಯ್ಯಗೆ ಕ್ಷಮೆ ಕೋರಿದ ಅರವಿಂದ್ ಬೆಲ್ಲದ್

    ಸಿಎಂ ಸಿದ್ದರಾಮಯ್ಯಗೆ ಕ್ಷಮೆ ಕೋರಿದ ಅರವಿಂದ್ ಬೆಲ್ಲದ್

    ಬೆಂಗಳೂರು: ಕೆಲವು ದಿನಗಳ ಹಿಂದೆ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದ ವಿರೋಧ ಪಕ್ಷದ ಉಪ ನಾಯಕ ಅರವಿಂದ್ ಬೆಲ್ಲದ್ (Arvind Bellad), ಈಗ ಸಿದ್ದರಾಮಯ್ಯರಿಗೆ (CM Siddaramaiah) ಪತ್ರ ಬರೆದು ಕ್ಷಮೆಯಾಚಿಸಿದ್ದಾರೆ.

    ಕೆಲವು ದಿನಗಳ ಹಿಂದೆ ಸುದ್ದಿಗೋಷ್ಠಿಯಲ್ಲಿ ಸಿಎಂ ಅವರಿಗೆ ಸಂಬಂಧಿಸಿದಂತೆ ಹೇಳಿಕೆ ನೀಡಿದ ವಿಚಾರವಾಗಿ ವಿರೋಧ ಪಕ್ಷದ ಉಪನಾಯಕ ಅರವಿಂದ್ ಬೆಲ್ಲದ ಕ್ಷಮೆ ಕೇಳಿದ್ದಾರೆ.ಇದನ್ನೂ ಓದಿ: ಬಾಲಿವುಡ್ ಸಿನಿಮಾ ಶೂಟಿಂಗ್‌ಗಾಗಿ ಹಂಪಿಗೆ ಬರಲಿದ್ದಾರೆ ರಶ್ಮಿಕಾ ಮಂದಣ್ಣ

    ಧಾರವಾಡದಲ್ಲಿ ಮಾತನಾಡಿದ್ದ ಅವರು, ‘ಸಿದ್ದರಾಮಯ್ಯನವರದ್ದು ಏನು ಅಪ್ಪನ ಮನೆಯ ಆಸ್ತಿನಾ’ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯನವರಿಗೆ ಅರವಿಂದ್ ಬೆಲ್ಲದ್ ಅವರು ಪತ್ರ ಬರೆದು ಕ್ಷಮೆ ಕೇಳಿದ್ದಾರೆ.

    ತಾವು ಬಳಸಿದ ಪದ ನನಗೆ ಶೋಭೆ ತರುವುದಿಲ್ಲ ಎಂದು ಹೇಳಿದ್ದಕ್ಕೆ, ಈ ಹಿನ್ನಲೆಯಲ್ಲಿ ನಾನು ಕ್ಷಮೆ ಕೇಳುತ್ತೇನೆ ಎಂದು ಕ್ಷಮಾಪಣೆ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.ಇದನ್ನೂ ಓದಿ: 9.99 ಲಕ್ಷಕ್ಕೆ ಟಾಟಾ ಕರ್ವ್ ಬಿಡುಗಡೆ

    ಜಿಂದಾಲ್‌ಗೆ (Jindal) ಭೂಮಿ ಕೊಟ್ಟಿದ್ದಾರೆ. ಮಾರುಕಟ್ಟೆ ಮೌಲ್ಯದ ಒಂದು ಭಾಗಕ್ಕೆ ಬೆಲೆಬಾಳುವ ಸರ್ಕಾರಿ ಭೂಮಿಯನ್ನು ಮಾರಾಟ ಮಾಡಿದ್ದಾರೆ. ಈ ಮೂಲಕ ಇನ್ನೊಂದು ಹಗರಣವನ್ನು ಮಾಡುತ್ತಿದ್ದಾರೆ ಎಂದು ಸಿಎಂ ವಿರುದ್ಧ ಬೆಲ್ಲದ್ ಹರಿಹಾಯ್ದಿದ್ದರು.

    ಸರ್ಕಾರವು ಕಡಿಮೆ ಬೆಲೆಗೆ ಮಾರಾಟ ಮಾಡುವ ಮೂಲಕ ಆಂತರಿಕ ಒಪ್ಪಂದವನ್ನು ಮಾಡಿಕೊಂಡು ಭೂಮಿಯನ್ನು ಲೂಟಿ ಮಾಡುತ್ತಿದೆ ಎಂದು ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು.

  • ಜಿಂದಾಲ್ ಕಂಪನಿಗೆ ಎಚ್ಚರಿಕೆ ನೀಡಿದ ಬಳ್ಳಾರಿ ಜಿಲ್ಲಾಡಳಿತ

    ಜಿಂದಾಲ್ ಕಂಪನಿಗೆ ಎಚ್ಚರಿಕೆ ನೀಡಿದ ಬಳ್ಳಾರಿ ಜಿಲ್ಲಾಡಳಿತ

    ಬಳ್ಳಾರಿ: ಜಿಂದಾಲ್ ಕಂಪನಿಗೆ ನೋಟಿಸ್ ನೀಡುವ ಮೂಲಕ ಹೊರರಾಜ್ಯದ ಕಾರ್ಮಿಕರನ್ನು ಸದ್ಯಕ್ಕೆ ನಿಷೇಧಿಸಿ ಎಂದು ಬಳ್ಳಾರಿ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

    ನಗರದ 3ನೇ ಅಲೆಯಲ್ಲಿ ಕೊರೊನಾ ಪ್ರಕರಣ ಹೆಚ್ಚಾಗಲು ವಲಸೆ ಕಾರ್ಮಿಕರೇ ಕಾರಣರಾದ ಹಿನ್ನೆಲೆ ಬೆಳ್ಳಂಬೆಳಿಗ್ಗೆ ಜಿಂದಾಲ್ ಕಂಪನಿಗೆ ನೋಟಿಸ್ ನೀಡುವ ಮೂಲಕ ಶಾಕ್ ನೀಡಿದ್ದಾರೆ. ಕೊರೊನಾ 3ನೇ ಅಲೆಯ ಈ ವೇಳೆ ಕಳೆದ ಐದು ದಿನಗಳಲ್ಲಿ ಪ್ರಕರಣಗಳ ಸಂಖ್ಯೆ 500ಕ್ಕೇರಿದೆ. ಇದನ್ನೂ ಓದಿ: ಯುಪಿ ಬಿಜೆಪಿ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆ

    100ರ ಅಸುಪಾಸು ಇದ್ದ ಕೊರೊನಾ ಪ್ರಕರಣಗಳು ಕಳೆದ ಐದು ದಿನಗಳಲ್ಲಿ 500ರ ಗಡಿ ತಲುಪಿದೆ.ಇದರಲ್ಲಿ ಜಿಂದಾಲ್ ಕಂಪನಿಯ ಆಸುಪಾಸಿನಲ್ಲಿ ಮತ್ತು ಸಂಡೂರು ತಾಲೂಕಿನಲ್ಲಿ ಹೆಚ್ಚು ಪ್ರಕರಣ ಕಂಡುಬಂದ ಹಿನ್ನೆಲೆ ನೋಟಿಸ್ ನೀಡಲಾಗಿದೆ. ಇದನ್ನೂ ಓದಿ:  ಫಸ್ಟ್ ಟೈಂ ಮನುಷ್ಯನಿಗೆ ಹಂದಿ ಹೃದಯ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿ

    ನಗರದ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪತಿಯವರು ನಿಯಮ ಉಲ್ಲಂಘನೆ ಮಾಡಿದರೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.

  • ಕದ್ದು ಮುಚ್ಚಿ ಮಾರೋದು ಬಿಜೆಪಿಯ ಸಂಸ್ಕೃತಿ: ಹೆಚ್.ಡಿ.ಕುಮಾರಸ್ವಾಮಿ

    ಕದ್ದು ಮುಚ್ಚಿ ಮಾರೋದು ಬಿಜೆಪಿಯ ಸಂಸ್ಕೃತಿ: ಹೆಚ್.ಡಿ.ಕುಮಾರಸ್ವಾಮಿ

    – ಜಿಂದಾಲ್‍ಗೆ 3,667 ಎಕರೆ ಭೂಮಿ ಮಾರಾಟ ಮಾಡಲು ನಿರ್ಧಾರ
    – ಬಿಜೆಪಿ ಜಿಂದಾಲ್ ಮುಂದೆ ಮಂಡಿಯೂರಲು ಒಂದು ಕಾರಣವಿದೆ

    ಬೆಂಗಳೂರು: ಜಿಂದಾಲ್ ಕಂಪನಿಗೆ ಸರ್ಕಾರ 3,667 ಎಕರೆ ಭೂಮಿ ಮಾರಾಟಕ್ಕೆ ಬಿಎಸ್‍ವೈ ಸರ್ಕಾರಕ್ಕೆ ಮುಂದಾಗಿರುವ ನಡೆಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಈ ನಿರ್ಧಾರವನ್ನ ವಿರೋಧಿಸಿದ್ದ ಬಿಜೆಪಿ, ಕಾಂಗ್ರೆಸ್ ಹಿರಿಯ ಮುಖಂಡ ಹೆಚ್.ಕೆ.ಪಾಟೀಲ್ ಅವರ ಮುಂದೆ ಸಾಲು ಸಾಲು ಪ್ರಶ್ನೆಗಳನ್ನಿರಿಸಿದ್ದಾರೆ.

    ‘ಬಿಎಸ್‍ವೈ ಅಹೋರಾತ್ರಿ ಧರಣಿ, ಬಿಜೆಪಿ ಯುವ ಮೋರ್ಚಾದಿಂದ ವಿಧಾನಸೌಧ ಮುತ್ತಿಗೆ, ಮೈತ್ರಿ ಸರ್ಕಾರದ ಮೇಲೆ ಕಿಕ್ ಬ್ಯಾಕ್ ಆರೋಪ…’ ಜಿಂದಾಲ್‍ಗೆ 3,677 ಎಕರೆ ಭೂಮಿ ಮಾರಾಟ ಮಾಡಲು ನಿರ್ಧರಿಸಿದ್ದ ಮೈತ್ರಿ ಸರ್ಕಾರದ ವಿರುದ್ಧ ಬಿಜೆಪಿ ನಡೆಸಿದ್ದ ಹೋರಾಟಗಳಿವು. ಆದರೆ ಇಂದು ಬಿಜೆಪಿ ಅದೇ ಜಿಂದಾಲ್‍ಗೆ ಅದೇ ಭೂಮಿಯನ್ನು ಸದ್ದಿಲ್ಲದೇ ಮಾರಿದೆ.

    ವಿರೋಧಕ್ಕಾಗಿಯೇ ವಿರೋಧ ಮಾಡುವುದು, ವಿರೋಧ ಪಕ್ಷದಲ್ಲಿದ್ದಾಗ ವಿರೋಧಿಸಿದ್ದನ್ನೇ ಆಡಳಿತಕ್ಕೆ ಬಂದಾಗ ಕದ್ದು ಮುಚ್ಚಿ ಮಾಡುವುದು ಬಿಜೆಪಿಯ ‘ಸಂಸ್ಕೃತಿ’. ಜಿಂದಾಲ್‍ಗೆ ಭೂಮಿ ನೀಡುವ ವಿಚಾರದಲ್ಲಿ ಅಂದು ನನ್ನ ಸರ್ಕಾರದ ವಿರುದ್ಧ, ನನ್ನ ವಿರುದ್ಧ ಸಲ್ಲದ ಆರೋಪ ಮಾಡಿದ್ದ ಬಿಎಸ್‍ವೈ ಇಂದು ಅದೇ ಆರೋಪಗಳನ್ನು ತಮ್ಮ ಮೇಲೆ ಹೊತ್ತುಕೊಳ್ಳುವರೇ?

    ಆಗ ಕಾಂಗ್ರೆಸ್ ಶಾಸಕರಾಗಿದ್ದ, ಈಗ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿರುವ ಆನಂದ್ ಸಿಂಗ್ ಜಿಂದಾಲ್‍ಅನ್ನು ‘ಈಸ್ಟ್ ಇಂಡಿಯಾ ಕಂಪನಿ’ ಎಂದಿದ್ದರು. ಜಿಂದಾಲ್ ವಿರುದ್ಧ ಅಂದಿನ ಗೃಹ ಸಚಿವರಿಗೆ ಪತ್ರ ಬರೆದಿದ್ದರು. ಅವರೇ ಇರುವ ಈಗಿನ ಸಂಪುಟ ಸಭೆ ಜಿಂದಾಲ್‍ಗೆ ಭೂಮಿ ನೀಡಿದೆ. ಆನಂದ್ ಸಿಂಗ್ ಈಗ ಈಸ್ಟ್ ಇಂಡಿಯಾ ಕಂಪನಿ ಪರವಾಗಿದ್ದಾರಾ?

    ಜಿಂದಾಲ್‍ಗೆ ಭೂಮಿ ನೀಡುವ ವಿಚಾರವಾಗಿ ಅಂದು ಮೈತ್ರಿ ಸರ್ಕಾರದ ಭಾಗವಾಗಿದ್ದುಕೊಂಡೇ ಟೀಕೆ ಮಾಡಿದ್ದ, ದಾಖಲೆ, ಪತ್ರಗಳನ್ನು ಬಿಡುಗಡೆ ಮಾಡಿದ್ದ ಎಚ್.ಕೆ ಪಾಟೀಲ್ ಅವರು ಈಗ ಏನು ಮಾಡುತ್ತಿದ್ದಾರೆ. ಅವರ ದಾಖಲೆ ಪತ್ರಗಳೆಲ್ಲವೂ ಎಲ್ಲಿ ಅಡಗಿಕೊಂಡಿವೆ? ಈಗ ಅವುಗಳನ್ನು ಮತ್ತೊಮ್ಮೆ ಬಿಡುಗಡೆ ಮಾಡಲು ಯಾರು ಅಡ್ಡ ಇದ್ದಾರೆ?

    ಜಿಂದಾಲ್ ಕಂಪನಿಗೆ 3,667 ಎಕರೆ ಭೂಮಿ ಮಾರಾಟ ಮಾಡಲು ಬಿಜೆಪಿ ಸರ್ಕಾರದ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಆದರೆ ಎಕರೆವಾರು ಶುದ್ಧ ಕ್ರಯಕ್ಕೆ ನಿಗದಿ ಮಾಡಿದ ಮೊತ್ತವೆಷ್ಟು ಎಂಬ ಪ್ರಶ್ನೆಗೆ ಗೃಹ ಸಚಿವರೇ ‘ಗೊತ್ತಿಲ್ಲ’ ಎಂಬ ಉತ್ತರ ನೀಡಿದ್ದಾರೆ. ಸ್ವತಃ ಗೃಹ ಸಚಿವರಿಗೇ ಮಾಹಿತಿ ಇಲ್ಲ ಎಂದರೆ ಏನು ಅರ್ಥ? ಇದನ್ನು ನಂಬಲು ಸಾಧ್ಯವೇ.

    ಲೀಸ್ ಕಂ ಸೇಲ್ ಆಧಾರದ ಭೂಮಿಯನ್ನು ಶುದ್ಧ ಕ್ರಯ ಮಾಡಿಕೊಡಬೇಕಾದ್ದು ಕಾನೂನು. ಅದನ್ನೇ ನನ್ನ ಸರ್ಕಾರ ಮಾಡಲು ಹೊರಟಿತ್ತು. ಆದರೆ ಬಿಜೆಪಿ ಕಿತಾಪತಿ ಮಾಡಿತ್ತು. ಜನರಲ್ಲಿ ಮೂಡಬಹುದಾದ ಸಂಶಯ ನಿವಾರಣೆ ಮಾಡಿ ನಂತರ ಭೂಮಿ ನೀಡುವ ನಿರ್ಧಾರಕ್ಕೆ ಬಂದ ನನ್ನ ಸರ್ಕಾರ ಮಾರಾಟ ಪ್ರಕ್ರಿಯೆಯನ್ನು ನಿಲ್ಲಿಸಿತ್ತು. ಬಿಜೆಪಿಗೆ ಈಗ ಜ್ಞಾನೋದಯವಾಗಿದೆ.

    ಬಿಜೆಪಿ ಸರ್ಕಾರ ಜಿಂದಾಲ್ ಮುಂದೆ ಏಕಾಏಕಿ ಮಂಡಿಯೂರಲೂ ಒಂದು ಕಾರಣವಿದೆ. ಅದೇನೆಂದು ಯಡಿಯೂರಪ್ಪರಿಗೆ ಚನ್ನಾಗಿ ಗೊತ್ತಿದೆ. ಅದನ್ನು ಅವರೇ ಬಹಿರಂಗಪಡಿಸಲಿ. ಲೀಸ್ ಕಂ ಸೇಲ್ ಆಧಾರದ ಭೂಮಿಯನ್ನು ಅಂತಿಮವಾಗಿ ಕ್ರಯ ಮಾಡಿಕೊಡಲೇಬೇಕಾದ ಕಾನೂನು ಬಿಜೆಪಿಗೆ ಈಗಲಾದರೂ ಅರಿವಿಗೆ ಬಂದಿದ್ದರೆ ಸಾಕು. ಇನ್ನಾದರೂ ಬಿಜೆಪಿ ಸಲ್ಲದ ಕಿತಾಪತಿ ಮಾಡದಿರಲಿ.

  • ಜಿಂದಾಲ್ ಸ್ಟೀಲ್‍ನಿಂದ ದಿನಕ್ಕೆ 400 ಟನ್ ಆಕ್ಸಿಜನ್ ಪೂರೈಕೆ

    ಜಿಂದಾಲ್ ಸ್ಟೀಲ್‍ನಿಂದ ದಿನಕ್ಕೆ 400 ಟನ್ ಆಕ್ಸಿಜನ್ ಪೂರೈಕೆ

    – ಉಕ್ಕಿನ ಕಂಪನಿಗಳ ಪ್ರತಿನಿಧಿಗಳೊಂದಿಗೆ ನಿರಾಣಿ ಸಭೆ

    ಬೆಂಗಳೂರು: ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ರಾಜ್ಯಕ್ಕೆ ದಿನಕ್ಕೆ 400 ಟನ್ ದ್ರವೀಕೃತ ಆಮ್ಲಜನಕವನ್ನು ಪೂರೈಕೆ ಮಾಡಲು ಜೆಎಸ್‍ಡಬ್ಲ್ಯೂ ಸ್ಟೀಲ್ ಕಂಪನಿ (ಜಿಂದಾಲ್) ಒಪ್ಪಿಕೊಂಡಿದೆ.

    ಮಂಗಳವಾರ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಅವರು, ಜೆಎಸ್‍ಡಬ್ಲ್ಯೂ ಸ್ಟೀಲ್ ಉಪ ವ್ಯವಸ್ಥಾಪಕ ನಿರ್ದೇಶಕ ಡಾ.ವಿನೋದ್ ನೋವಲ್ ನೇತೃತ್ವದ ಪ್ರತಿನಿಧಿಗಳ ಸಭೆಯ ಬಳಿಕ ಈ ಮಹತ್ವದ ತೀರ್ಮಾನವನ್ನು ಕೈಗೊಳ್ಳಲಾಯಿತು.

    ಕೋವಿಡ್-19 ಪ್ರಕರಣಗಳ ಸಂಖ್ಯೆಯು ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ಪರಿಣಾಮವಾಗಿ ಅಪಾರ ಸಂಖ್ಯೆಯ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಿಂದಾಗಿ ತೀವ್ರ ನಿಗಾ ಘಟಕಗಳಲ್ಲಿ (ಐಸಿಯು) ದಾಖಲಾದ ರೋಗಿಗಳಿಗೆ ಆಮ್ಲಜನಕದ ಪೂರೈಕೆಯ ಕೊರತೆಯು ಗಂಭೀರ ಸ್ಥಿತಿಯಲ್ಲಿದೆ ಎಂದು ಸಭೆಯಲ್ಲಿ ತೀವ್ರ ಕಳವಳ ವ್ಯಕ್ತಪಡಿಸಲಾಯಿತು.

    ಆಮ್ಲಜನಕದ ಪೂರೈಕೆಯ ಕೊರತೆಯಿಂದ ರಾಜ್ಯದ ಆರೋಗ್ಯ ವ್ಯವಸ್ಥೆಯಲ್ಲಿ ಏರುಪೇರು ಉಂಟಾಗಿದೆ. ರಾಜ್ಯದಲ್ಲಿ ಹದಗೆಟ್ಟ ಪರಿಸ್ಥಿತಿಯ ಮಧ್ಯೆ ಸಚಿವ ಮುರುಗೇಶ್ ನಿರಾಣಿ ಅವರು ಆಸ್ಪತ್ರೆಗಳಿಗೆ ಆಮ್ಲಜನಕದ ಪೂರೈಕೆಯನ್ನು ಹೆಚ್ಚಿಸಬೇಕೆಂಬ ಬೇಡಿಕೆಯನ್ನು ಸಭೆಯಲ್ಲಿ ಮುಂದಿಟ್ಟರು.

    ಉಕ್ಕಿನ ಉತ್ಪಾದನೆಯಲ್ಲಿ ಅವುಗಳ ಬಳಕೆಗಾಗಿ ತಮ್ಮ ಸಂಸ್ಥೆಗಳಲ್ಲಿ ದ್ರವೀಕೃತ ಆಮ್ಲಜನಕವನ್ನು ಉತ್ಪಾದಿಸುವ ಹಲವಾರು ಉಕ್ಕಿನ ಕಂಪನಿಗಳ ಪ್ರತಿನಿಧಿಗಳೊಂದಿಗೆ ಅವರು ಸಭೆ ನಡೆಸಿ ರಾಜ್ಯದ ವಸ್ತು ಸ್ಥಿತಿಯನ್ನು ಸಭೆಯ ಮುಂದಿಟ್ಟರು. ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಉಂಟಾಗುವ ಸಾರ್ವಜನಿಕ ಆರೋಗ್ಯ ಪರಿಸ್ಥಿತಿಯನ್ನು ಪರಿಹರಿಸಲು ಬೃಹತ್ ಪ್ರಮಾಣದಲ್ಲಿ ಆಮ್ಲಜನಕವನ್ನು ಉತ್ಪಾದಿಸುವ ಅಗತ್ಯವನ್ನು ಸಚಿವರು ಒತ್ತಿ ಹೇಳಿದರು.

    ಸಭೆಯಲ್ಲಿ ಹಾಜರಿದ್ದ ಜೆಎಸ್‍ಡಬ್ಲ್ಯು ಸ್ಟೀಲ್‍ನ ಉಪ ವ್ಯವಸ್ಥಾಪಕ ನಿರ್ದೇಶಕ ಡಾ.ವಿನೋದ್ ನೋವಲ್ ಅವರು ದಿನಕ್ಕೆ 400 ಟನ್ ದ್ರವೀಕೃತ ಆಮ್ಲಜನಕವನ್ನು ಪೂರೈಸಲು ಸಮ್ಮತಿಸಿದರು. ಈ ಬಿಕ್ಕಟ್ಟನ್ನು ನಿಭಾಯಿಸಲು ಕರ್ನಾಟಕ ಸರ್ಕಾರಕ್ಕೆ ಎಲ್ಲ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರು. ನಮ್ಮ ಕಂಪನಿಗಳ ಬದ್ಧತೆ ಕರ್ನಾಟಕದ ಕಡೆಗೆ. ಬೇಡಿಕೆ ಎದುರಾದರೆ ನಾವು ಹೆಚ್ಚು ಆಮ್ಲಜನಕವನ್ನು ಪೂರೈಸಲು ಸಿದ್ಧರಾಗಿದ್ದೇವೆ ಎಂದು ನೋವಲ್ ಸಭೆಯ ನಂತರ ಹೇಳಿದರು.

    ನಿರ್ಣಾಯಕ ಹಂತದಲ್ಲಿ ಆಸ್ಪತ್ರೆಗಳಿಗೆ ಆಮ್ಲಜನಕವನ್ನು ತಯಾರಿಸಲು ಮತ್ತು ಪೂರೈಸಲು ಉಕ್ಕಿನ ಕಂಪನಿಗಳು ಮುಂದಾಗಿವೆ ಎಂದು ಸಚಿವ ನಿರಣಿ ಹೇಳಿದರು. ಸಾಂಕ್ರಾಮಿಕ ರೋಗವು ನಮ್ಮ ವ್ಯವಸ್ಥೆಗೆ ದೊಡ್ಡ ಸವಾಲುಗಳನ್ನು ಸೃಷ್ಟಿಸಿದೆ. ಇದು ಅನೇಕ ಕುಟುಂಬಗಳಿಗೆ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಿದೆ. ಮಾರಣಾಂತಿಕ ವೈರಸನ್ನು ಹಿಮ್ಮೆಟ್ಟಿಸಲು ಎಲ್ಲರೂ ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.

  • ಜಿಂದಾಲ್ ನಂಜು ಕಡಿಮೆಯಾಗದಿದ್ರೆ ಕಂಪನಿ ಸಂಪೂರ್ಣ ಬಂದ್: ಆನಂದ್ ಸಿಂಗ್

    ಜಿಂದಾಲ್ ನಂಜು ಕಡಿಮೆಯಾಗದಿದ್ರೆ ಕಂಪನಿ ಸಂಪೂರ್ಣ ಬಂದ್: ಆನಂದ್ ಸಿಂಗ್

    ಬಳ್ಳಾರಿ: ಜಿಲ್ಲೆಯ ಜಿಂದಾಲ್ ನಂಜು ಇದೇ ರೀತಿ ಮುಂದುವರಿದರೆ ಇಡೀ ಕಂಪನಿ ಸಂಪೂರ್ಣ ಬಂದ್ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ ಇಲಾಖೆ ಖಾತೆ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.

    ಬಳ್ಳಾರಿಯ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜಿಂದಾಲ್‍ನಲ್ಲಿ ಮಹಾಮಾರಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು, ನಿಯಂತ್ರಣಕ್ಕೆ ಬರದಿದ್ದರೆ ಜಿಂದಾಲ್ ಕಂಪನಿಯನ್ನು ಸಂಪೂರ್ಣ ಬಂದ್ ಮಾಡಲಾಗುವುದು. ಈ ಕುರಿತು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ತುರ್ತು ಸಭೆ ಕರೆದಿದ್ದು, ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

    ಸಭೆಯಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗವಹಿಸುತ್ತಿದ್ದು, ಎಲ್ಲರ ಅಭಿಪ್ರಾಯ ಸಂಗ್ರಹಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು. ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಈಗಾಗಲೇ ಹಲವು ಕ್ರಮಗಳನ್ನ ಕೈಗೊಂಡಿದೆ. ಆದರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಈ ಹಿನ್ನೆಲೆ ಸೋಮವಾರ ತುರ್ತು ಸಭೆ ಕರೆಯಲಾಗಿದೆ. ಜಿಂದಾಲ್ ಮುಖ್ಯಸ್ಥ ವಿನೋದ್ ನಾವೆಲ್ ಸಭೆಗೆ ಆಗಮಿಸಲಿದ್ದಾರೆ ಎಂದು ಆನಂದ್ ಸಿಂಗ್ ತಿಳಿಸಿದರು.

    ದೇಶ ಲಾಕ್‍ಡೌನ್ ಮಾಡಿದಾಗಲೂ ಜಿಂದಾಲ್‍ಗೆ ಅವಕಾಶ ಕೊಟ್ಟಿದ್ದೇವೆ. ಹೀಗಾಗಿ ಜನ ನಮ್ಮ ಮೇಲೆ ಅನುಮಾನ ವ್ಯಕ್ತಪಡಿಸುತ್ತಾರೆ. ಆದರೆ ಸರ್ಕಾರ ಅಗತ್ಯ ಬಿದ್ದರೆ ಜಿಂದಾಲ್ ಸಂಪೂರ್ಣ ಬಂದ್ ಮಾಡಲು ಸಿದ್ಧವಾಗಿದೆ ಎಂದಿದ್ದಾರೆ.

  • ಲಾಕ್‍ಡೌನ್ ಇದ್ರೂ ಕಾರ್ಯನಿರ್ವಹಿಸುತ್ತಿದೆ ಜಿಂದಾಲ್ ಕಂಪನಿ

    ಲಾಕ್‍ಡೌನ್ ಇದ್ರೂ ಕಾರ್ಯನಿರ್ವಹಿಸುತ್ತಿದೆ ಜಿಂದಾಲ್ ಕಂಪನಿ

    – ಕಾರ್ಮಿಕರಿದ್ದ 12 ಬಸ್ ತಡೆದು ಸ್ಥಳೀಯರ ಪ್ರತಿಭಟನೆ

    ಬಳ್ಳಾರಿ: ಮಹಾಮಾರಿ ಕೊರೊನಾ ವೈರಸ್‍ನಿಂದಾಗಿ ಪ್ರಧಾನಿ ನರೇಂದ್ರ ಮೋದಿ ನಿನ್ನೆಯಷ್ಟೇ ಮುಂದಿನ 21 ದಿನಗಳ ಕಾಲ ಭಾರತ ಲಾಕ್‍ಡೌನ್ ಆಗಲಿದೆ ಎಂದು ಹೇಳಿದ್ದರು. ಆದರೆ ಕೆಲವರು ಇದನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ.

    ಬಳ್ಳಾರಿಯ ಜಿಂದಾಲ್ ಕಂಪನಿ ಕೂಡ ನಡೆಯುತ್ತಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿರುವ ಕಾರ್ಮಿಕರನ್ನು ಬಸ್ಸಿನಲ್ಲಿ ಕರೆದುಕೊಂಡು ಬರಲಾಗುತ್ತಿದೆ. ಈ ಮೂಲಕ ಎಂದಿನಂತೆ ಕಾರ್ಯ ನಿರ್ವಹಿಸುತ್ತಿದೆ. ಇದರಿಂದಾಗಿ ಸ್ಥಳೀಯರು ಜಿಂದಾಲ್ ಅಧಿಕಾರಿಗಳ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಸುಮಾರು 20 ಸಾವಿರಕ್ಕೂ ಹೆಚ್ಚು ಕಾರ್ಮಿಕರಿಂದ ಕೆಲಸ ನಡೆಯುತ್ತಿದೆ ಎಂಬ ಮಾಹಿತಿ ಸ್ಥಳೀಯರಿಗೆ ಸಿಕ್ಕಿತ್ತು. ಹೀಗಾಗಿ ಇಂದು ಬೆಳಗಿನ ಜಾವ ಕಾರ್ಮಿಕರನ್ನು ಕಂಪನಿಗೆ ಕರೆದುಕೊಂಡು ಹೋಗುತ್ತಿದ್ದ ಸುಮಾರು 12 ಬಸ್‍ಗಳನ್ನು ತಡೆದು ಪ್ರತಿಭಟನೆ ನಡೆಸಿದರು. ಆದರೆ ಇದಕ್ಕೆಲ್ಲ ಕ್ಯಾರೆ ಎನ್ನದೇ ಕಾರ್ಮಿಕರನ್ನು ಕಂಪನಿಗೆ ಕರೆದೊಯ್ಯಲಾಯಿತು.

    ಜಿಂದಾಲ್ ಕಂಪನಿಗೆ ಅಮೆರಿಕ, ಚೀನಾ ಸೇರಿದಂತೆ ವಿವಿಧ ಭಾಗದಿಂದ ಎಂಜಿನೀಯರ್ ಗಳು ಬರುತ್ತಾರೆ. ಅಷ್ಟೇ ಅಲ್ಲದೆ ಸ್ಥಳೀಯರು ಕಂಪನಿಯಲ್ಲಿ ಕೆಲಸ ಮಾಡಿ ತಮ್ಮ ಗ್ರಾಮಗಳಿಗೆ ಮರಳುತ್ತಾರೆ. ಈ ಪೈಕಿ ಯಾರಿಗಾದರು ಕೊರೊನಾ ಸೋಂಕು ತಗುಲಿದರೆ ಜಿಲ್ಲೆಯ ಪರಿಸ್ಥಿತಿ ತುಂಬಾ ಗಂಭೀರವಾಗಿರುತ್ತದೆ. ಇದರಿಂದಾಗಿ ಏಪ್ರಿಲ್ 14ರವರೆಗೂ ಕಂಪನಿಯನ್ನು ಮುಚ್ಚಿಸಬೇಕು ಎಂದು ಸ್ಥಳೀಯರ ಒತ್ತಾಯಿಸಿದ್ದಾರೆ.

  • ಜಿಂದಾಲ್ ಲ್ಯಾಂಡ್ ಸೇಲ್‍ಗೆ ತಾತ್ಕಾಲಿಕ ಬ್ರೇಕ್?

    ಜಿಂದಾಲ್ ಲ್ಯಾಂಡ್ ಸೇಲ್‍ಗೆ ತಾತ್ಕಾಲಿಕ ಬ್ರೇಕ್?

    ಬೆಂಗಳೂರು: ಜಿಂದಾಲ್ ಸ್ಟೀಲ್ ಕಂಪನಿಗೆ ಬಳ್ಳಾರಿಯ ತೋರಣಗಲ್ಲು, ಕುರೆಕುಪ್ಪದಲ್ಲಿ 2 ಸಾವಿರ ಎಕರೆ ಹಾಗೂ ಮುಸೇನಾಯಕನಹಳ್ಳಿ, ಯರಬನಹಳ್ಳಿ ಬಳಿ 1,666.73 ಎಕರೆ ಸೇರಿದಂತೆ ಒಟು 3,666.73 ಎಕರೆ ಭೂಮಿ ನೀಡಿಕೆ ನಿರ್ಧಾರದಿಂದ ರಾಜ್ಯ ಸರ್ಕಾರ ತಾತ್ಕಾಲಿಕವಾಗಿ ಹಿಂದೆ ಸರಿಯಲಿದೆ ಎನ್ನಲಾಗಿದೆ.

    ಬೃಹತ್ ಕೈಗಾರಿಕಾ ಸಚಿವ ಕೆ.ಜೆ ಜಾರ್ಜ್ ಅವರ ಒತ್ತಡಕ್ಕೆ ಮಣಿದು ಮೈತ್ರಿ ಸರ್ಕಾರ ಮೇ 27ರ ಸಂಪುಟದ ಸಮ್ಮತಿ ನೀಡಿತ್ತು. ಆದರೆ ಕ್ಯಾಬಿನೆಟ್ ನಿರ್ಣಯವನ್ನು ಮಾಜಿ ಸಚಿವ ಎಚ್.ಕೆ ಪಾಟೀಲ್ ತೀವ್ರವಾಗಿ ವಿರೋಧಿಸಿದ್ದರು. ಕ್ಯಾಬಿನೆಟ್ ಸಭೆಗೆ ಗೈರಾಗಿದ್ದ ಜಾರ್ಜ್, ಅಂದು ದೆಹಲಿಗೆ ತೆರಳಿದ್ದ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್‍ಗೆ ವಿಷಯ ತಿಳಿಸಿದ್ದರು ಎನ್ನಲಾಗಿದೆ.

    ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿಗಳ ಜೊತೆ ವೇಣುಗೋಪಾಲ್ ಚರ್ಚೆ ನಡೆಸಿ, ಪರಭಾರ ಮಾಡಿದರೆ ಕಾಂಗ್ರೆಸ್‍ಗೆ ಕೆಟ್ಟ ಹೆಸರು ಬರಲಿದೆ. ಸದ್ಯಕ್ಕೆ ಯೋಜನೆ ಕೈಬಿಡೋಣ ಎಂದು ಹೇಳಿದ್ದಾರೆ ಎನ್ನಲಾಗಿದೆ.

    ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಇದೇ 14, 15 ಮತ್ತು 16 ರಂದು ಅಹೋರಾತ್ರಿ ಧರಣಿ ನಡೆಸಿ, ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದೆ. ಹೀಗಾಗಿ ಇಷ್ಟು ದಿನ ಮೌನವಹಿಸಿದ್ದ ಮುಖ್ಯಮಂತ್ರಿಗಳು ಸೇಲ್ ಡೀಲ್ ಒಪ್ಪಂದದಲ್ಲಿ ಗೊಂದಲಗಳಿವೆ ಎಂದು ಭೂಮಿ ನೀಡಿಕೆ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಮುಂದೂಡುತ್ತಾರೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಹಿಂಪಡೆಯಲಿದ್ದಾರೆ ಎಂದು ತಿಳಿದುಬಂದಿದೆ.

    ಬಳ್ಳಾರಿಯ ತೋರಣಗಲ್‍ನಲ್ಲಿರುವ ಜಿಂದಾಲ್ ಕಾರ್ಖಾನೆ ದೇಶದಲ್ಲೇ ಅತಿ ದೊಡ್ಡದಾದ ಸ್ಟೀಲ್ ಕಾರ್ಖಾನೆ. ಈ ಕಾರ್ಖಾನೆ ಶುರು ಮಾಡಲು ಸರ್ಕಾರ 3 ಸಾವಿರ ಎಕರೆ ಭೂಮಿ ನೀಡಿತ್ತು. ಜೊತೆಗೆ ವಿದ್ಯುತ್, ನೀರು, ರೋಡ್ ವ್ಯವಸ್ಥೆ ಕೂಡಾ ಮಾಡಿಸಿತ್ತು. ತೋರಣಗಲ್ ಹಾಗೂ ವಡ್ಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಫ್ಯಾಕ್ಟರಿ ಕಟ್ಟಲಾಗಿದೆ. ಆದರೆ ಪಂಚಾಯತ್ ರಾಜ್ ಕಾಯ್ದೆ ಪ್ರಕಾರ ಪ್ರತಿ ವರ್ಷ ತೆರಿಗೆ ಕಟ್ಟುತ್ತಿಲ್ಲ. ಎರಡು ಗ್ರಾಮ ಪಂಚಾಯತ್‍ಗಳಿಗೆ ಪ್ರತಿ ವರ್ಷ 5 ಕೋಟಿ ರೂಪಾಯಿ ವಂಚನೆ ಮಾಡುತ್ತಿದೆ. ಆ ದಾಖಲೆ ಪಬ್ಲಿಕ್ ಟಿವಿಗೆ ಲಭ್ಯವಾಗಿತ್ತು.

  • ಎಚ್.ಕೆ.ಪಾಟೀಲ್ Vs ಕೆ.ಜೆ.ಜಾರ್ಜ್: ಕೈ ನಾಯಕರ ನಡುವೆ ಜಿಂದಾಲ್ ಜಟಾಪಟಿ

    ಎಚ್.ಕೆ.ಪಾಟೀಲ್ Vs ಕೆ.ಜೆ.ಜಾರ್ಜ್: ಕೈ ನಾಯಕರ ನಡುವೆ ಜಿಂದಾಲ್ ಜಟಾಪಟಿ

    ಬೆಂಗಳೂರು: ಜಿಂದಾಲ್ ಕಂಪನಿಗೆ ಭೂಮಿಯನ್ನು ಲೀಸ್ ನೀಡುವ ವಿಚಾರದಲ್ಲಿ ಕಾಂಗ್ರೆಸ್‍ನ ಶಾಸಕ ಎಚ್.ಕೆ.ಪಾಟೀಲ್ ಹಾಗೂ ಬೃಹತ್ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್ ಮಧ್ಯೆ ಬಹಿರಂಗ ಜಟಾಪಟಿ ಶುರುವಾಗಿದೆ.

    ಜಿಂದಾಲ್ ಕಂಪನಿಗೆ 3,667 ಎಕರೆ ಜಮೀನನ್ನು ಲೀಸ್ ನೀಡುವ ಸಚಿವ ಸಂಪುಟದ ನಿರ್ಣಯದ ಕುರಿತು ನೀವು ಪ್ರತಿಕ್ರಿಯಿಸುತ್ತಾ, ಜಿಂದಾಲ್ ಕಂಪನಿಯವರು ರಾಜ್ಯ ಸರ್ಕಾರಕ್ಕೆ ಬಾಕಿ ಇಲ್ಲ ಎಂದು ತಿಳಿಸಿದ್ದೀರಿ. ನಿಮ್ಮ ಹೇಳಿಕೆಗೆ ಸಂಬಂಧಿಸಿದಂತೆ ದಾಖಲೆಗಳನ್ನು ಲಗತ್ತಿಸಿರುವೆ ಪರಿಶೀಲಿಸಿ ಎಂದು ಶಾಸಕರ ಎಚ್.ಕೆ.ಪಾಟೀಲ್ ಅವರು, ಕೆ.ಜೆ.ಜಾರ್ಜ್ ಅವರಿಗೆ ಚಾಟಿ ಬೀಸಿದ್ದಾರೆ.

    https://twitter.com/HKPatil1953/status/1136085728058695680

    ಈ ಎಲ್ಲಾ ದಾಖಲೆಗಳನ್ನು ತಾವು ಒಮ್ಮೆ ಪರಿಶೀಲಿಸಿ. ಈ ದಾಖಲೆಗಳು ವಾಸ್ತವಿಕವಾಗಿ ನಾನು ಕಳುಹಿಸಬೇಕಾದ ಅಗತ್ಯವಿಲ್ಲ. ಇವು ಸರ್ಕಾರದ ಕಡತಗಳಲ್ಲಿ ಲಭ್ಯವಾಗುತ್ತವೆ. ಆದರೂ ತಮ್ಮ ಗಮನಕ್ಕಾಗಿ ಕಳುಹಿಸುತ್ತಿದ್ದೇನೆ ಎಂದು ಎಚ್.ಕೆ.ಪಾಟೀಲ್ ಶಾಸಕರು ಸರಣಿ ಟ್ವೀಟ್ ಮೂಲಕ ಪ್ರಮುಖ ದಾಖಲೆಗಳನ್ನು ಪ್ರಕಟಿಸಿದ್ದಾರೆ.

    ಜಾರ್ಜ್ ಹೇಳಿದ್ದೇನು?:
    ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಸಚಿವ ಕೆ.ಜೆ.ಜಾರ್ಜ್ ಅವರು, ಹಣ ಪಡೆದು ಮೈತ್ರಿ ಸರ್ಕಾರ ಜಿಂದಾಲ್ ಕಂಪನಿಗೆ ಅಕ್ರಮವಾಗಿ ಭೂಮಿ ಮಂಜೂರು ಮಾಡಿದೆ ಎಂಬ ಆರೋಪವನ್ನು ತಳ್ಳಿಹಾಕಿದ್ದರು.

    https://twitter.com/HKPatil1953/status/1136085989867237379

    ಜಿಂದಾಲ್ ಉತ್ತಮ ಕಂಪನಿಯಾಗಿದ್ದು ಸರ್ಕಾರಕ್ಕೆ ಯಾವುದೇ ರೀತಿಯ ಬಾಕಿ ಉಳಿಸಿಕೊಂಡಿಲ್ಲ. 1971ರಲ್ಲಿ 7 ಸಾವಿರ ಎಕರೆ ಭೂಮಿಯನ್ನು ಕೇಂದ್ರ ಸರ್ಕಾರ ವಶ ಪಡಿಸಿಕೊಂಡಿತ್ತು. ಆಗ ದೇವೇಗೌಡರು ನೇತೃತ್ವದ ಸರ್ಕಾರ 1995 ರಲ್ಲಿ 3 ಸಾವಿರ ಎಕ್ರೆಯನ್ನು ವಿಜಯನಗರ ಘಟಕಕ್ಕೆ ನೀಡಿದ್ದರು. ನಂತರ ಈ ಭೂಮಿಯನ್ನು 2005 ರಲ್ಲಿ ಧರ್ಮಸಿಂಗ್ ಸಿಎಂ ಆಗಿದ್ದಾಗ ಲೀಸ್ ಕೊಡಲಾಗಿತ್ತು. 2006ರಲ್ಲಿ ಸಿಎಂ ಆದ ಕುಮಾರಸ್ವಾಮಿ ಅವರು ಎಕ್ರೆಗೆ 90 ಸಾವಿರ ನಿಗದಿ ಮಾಡಿ 2007ರಲ್ಲಿ ಸುಮಾರು 1,200 ಎಕ್ರೆರೆ ಜಾಗವನ್ನು ಹೆಚ್ಚುವರಿಯಾಗಿ ನೀಡಿದ್ದರು ಎಂದು ತಿಳಿಸಿದ್ದರು.

    https://twitter.com/HKPatil1953/status/1136086042635673600

    ಈಗ 90 ಸಾವಿರ ಬದಲಾಗಿ 1.26 ಲಕ್ಷ ಪ್ರತಿ ಎಕರಗೆ ಬೆಲೆ ನಿಗದಿ ಮಾಡಲಾಗಿದೆ. ಹೊಸ ದರದ ಅನ್ವಯ ಸರ್ಕಾರ ಭೂಮಿಯನ್ನು ನೀಡಿದೆ. ಜೆಎಸ್‍ಡಬ್ಲೂ ಈಗ ಎಲ್ಲಾ ಷರತ್ತುಗಳನ್ನ ಒಪ್ಪಿಕೊಂಡಿದೆ ಮತ್ತು ಯಾವುದೇ ಹಣವನ್ನು ಬಾಕಿ ಉಳಿಸಿಕೊಂಡಿಲ್ಲ. ಹೀಗಾಗಿ ಕ್ಯಾಬಿನೆಟ್‍ನಲ್ಲಿ ಒಪ್ಪಿಗೆ ನೀಡಲಾಗಿದೆ. ಲೋಕಸಭಾ ಚುನಾವಣೆ ನೀತಿ ಸಂಹಿತೆ ಬಂದ ಹಿನ್ನಲೆಯಲ್ಲಿ ಅದನ್ನು ಆಗ ಮಾಡಲು ಸಾಧ್ಯವಾಗಿರಲಿಲ್ಲ. ರಾಜ್ಯಕ್ಕೆ ಕೈಗಾರಿಕೆ ಬರುವ ಹಿನ್ನಲೆಯಲ್ಲಿ ನಾವು ಜಿಂದಾಲ್‍ಗೆ ಭೂಮಿ ನೀಡಲಾಗಿದೆ. ಈ ವಿಚಾರದಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಕೆ.ಜೆ ಜಾರ್ಜ್ ಸಮರ್ಥಿಸಿಕೊಂಡಿದ್ದರು.

    ಇದೇ ವೇಳೆ ಎಚ್.ಕೆ ಪಾಟೀಲ್ ಅವರ ಪತ್ರದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದ ಸಚಿವರು, ಶಾಸಕರಿಗೆ ಏನಾದರೂ ಸಂಶಯ ಇದ್ದರೆ ಅವರು ನನ್ನ ಕೇಳಿದರೆ ಹೇಳುತ್ತೇನೆ. ಆ ರೀತಿಯ ಅಕ್ರಮ ನಡೆದಿರುವ ಬಗ್ಗೆ ದಾಖಲಾತಿ ಇದ್ದರೆ ನೀಡಲಿ ನಾನು ಪರಿಶೀಲನೆ ಮಾಡಿಸುತ್ತೇನೆ. ಅವರು ನನ್ನ ಸಹೋದ್ಯೋಗಿ ಅವರ ಜೊತೆ ನಾನು ಮಾತನಾಡುತ್ತೇನೆ. ನಮಗೆ ರಾಜ್ಯದ ಹಿತ ಮುಖ್ಯ ಜೆಎಸ್‍ಡಬ್ಲೂ ಉತ್ತಮ ಸಂಸ್ಥೆ ರಾಜ್ಯಕ್ಕೆ ಕೈಗಾರಿಕೆ ಬಂದರೆ ನಮ್ಮ ಅನುಕೂಲವಾಗುತ್ತದೆ. ಅನಾವಶ್ಯಕವಾಗಿ ಸುದ್ದಿ ಮಾಡಿದರೆ ನಮ್ಮ ರಾಜ್ಯಕ್ಕೆ ಅನ್ಯಾಯ ಆಗುತ್ತದೆ ಎಂದು ಹೇಳಿದ್ದರು.

    ಜಿಂದಾಲ್ ಅಕ್ರಮ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪ್ರತಿಭಟನೆ ಮಾಡುವ ವಿಚಾರದ ಬಗ್ಗೆ ಪ್ರತಿಕ್ರಿಯಿದ ಜಾರ್ಜ್, ಈಗ ನಾನು ಹೇಳಿದ ಅಂಶಗಳ ಬಗ್ಗೆ ಯಡಿಯೂರಪ್ಪ ಗಮನಹರಿಸಲಿ. ಇದರಲ್ಲಿ ಏನಾದರೂ ತಪ್ಪು ಇದ್ದರೆ ನನ್ನನ್ನು ಕೇಳಲಿ ಅಮೇಲೆ ನಾನು ಉತ್ತರ ಕೊಡುತ್ತೇನೆ ಎಂದು ಹೇಳಿದ್ದರು.

  • ಜಿಂದಾಲ್ ಕಾರ್ಖಾನೆಯಿಂದ ಮಹಾ ಮೋಸ- ಸರ್ಕಾರದ ಬೊಕ್ಕಸಕ್ಕೆ ಪ್ರತಿ ವರ್ಷ 5 ಕೋಟಿ ವಂಚನೆ

    ಜಿಂದಾಲ್ ಕಾರ್ಖಾನೆಯಿಂದ ಮಹಾ ಮೋಸ- ಸರ್ಕಾರದ ಬೊಕ್ಕಸಕ್ಕೆ ಪ್ರತಿ ವರ್ಷ 5 ಕೋಟಿ ವಂಚನೆ

    ಬಳ್ಳಾರಿ: ಜನರಿಗೆ ಕೆಲಸ ಕೊಡಿಸುತ್ತೀವಿ ಭೂಮಿ ಕೊಡಿ, ಕರೆಂಟ್ ಕೊಡಿ, ನೀರು ಕೊಡಿ ಎಂದು ಆ ಕಂಪನಿ ಸಿಕ್ಕಾಪಟ್ಟೆ ಪುಂಗಿ ಊದಿತ್ತು. ಆದರೆ ಎಲ್ಲಾ ಪಡೆದ ಮೇಲೆ ಈಗ ಕೈ ಎತ್ತಿದ್ದಾರೆ.

    ಬಳ್ಳಾರಿಯ ತೋರಣಗಲ್‍ನಲ್ಲಿರೋ ಜಿಂದಾಲ್ ಕಾರ್ಖಾನೆ ದೇಶದಲ್ಲೇ ಅತಿ ದೊಡ್ಡದಾದ ಸ್ಟೀಲ್ ಕಾರ್ಖಾನೆ. ಈ ಕಾರ್ಖಾನೆ ಶುರು ಮಾಡಲು ಸರ್ಕಾರ 3 ಸಾವಿರ ಎಕರೆ ಭೂಮಿ ನೀಡಿತ್ತು. ಜೊತೆಗೆ ಕರೆಂಟ್, ನೀರು, ರೋಡ್ ವ್ಯವಸ್ಥೆ ಕೂಡಾ ಮಾಡಿಸಿದ್ದರು. ತೋರಣಗಲ್ ಹಾಗೂ ವಡ್ಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಫ್ಯಾಕ್ಟರಿ ಕಟ್ಟಲಾಗಿದೆ. ಆದರೆ ಪಂಚಾಯತ್ ರಾಜ್ ಕಾಯ್ದೆ ಪ್ರಕಾರ ಪ್ರತಿ ವರ್ಷ ತೆರಿಗೆ ಕಟ್ಟುತ್ತಿಲ್ಲ. ಎರಡು ಗ್ರಾಮ ಪಂಚಾಯತ್‍ಗಳಿಗೆ ಪ್ರತಿ ವರ್ಷ 5 ಕೋಟಿ ರೂಪಾಯಿ ವಂಚನೆ ಮಾಡುತ್ತಿದೆ. ಆ ದಾಖಲೆ ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.

    ಜಿಂದಾಲ್ ಕಾರ್ಖಾನೆ ವಂಚನೆ ಮಾಡೋಕೆ ತೋರಣಗಲ್ ಹಾಗೂ ವಡ್ಡು ಗ್ರಾಮ ಪಂಚಾಯತ್ ಪಿಡಿಒ ಹಾಗೂ ಅಧ್ಯಕ್ಷರು ಸಾಥ್ ನೀಡಿದ್ದಾರೆ. ವರ್ಷಕ್ಕೆ ಕೇವಲ 36 ಲಕ್ಷ ರೂಪಾಯಿ ಮಾತ್ರ ತೆರಿಗೆ ಪಾವತಿ ಮಾಡಬೇಕು ಎಂದು ಒಪ್ಪಂದ ಮಾಡಿಕೊಂಡಿದ್ದಾರೆ. ಈ ಅಕ್ರಮ ಹಂಗಾಮಿ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಗಮನಕ್ಕೆ ಬಂದಿದ್ದು, ತನಿಖೆ ನಡೆಸೋದಾಗಿ ಹೇಳಿದ್ದಾರೆ.