Tag: Jim

  • ವ್ಯಾಯಾಮ ಮಾಡುತ್ತಿದ್ದಾಗ ಜಿಮ್‌ನಲ್ಲಿ ಕುಸಿದು ಬಿದ್ದು ನಟ ಸಿದ್ಧಾಂತ್ ನಿಧನ

    ವ್ಯಾಯಾಮ ಮಾಡುತ್ತಿದ್ದಾಗ ಜಿಮ್‌ನಲ್ಲಿ ಕುಸಿದು ಬಿದ್ದು ನಟ ಸಿದ್ಧಾಂತ್ ನಿಧನ

    ಹಿಂದಿ ಕಿರುತೆರೆಯ ನಟ ಸಿದ್ಧಾಂತ್ ವೀರ ಸೂರ್ಯವಂಶಿ ಜಿಮ್ ಮಾಡುವಾಗ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಜಿಮ್ ನಲ್ಲಿ ವರ್ಕೌಟ್ ಮಾಡುವಾಗ ಏಕಾಏಕಿ ಕುಸಿದು ಬಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೂ, ಯಾವುದೇ ಪ್ರಯೋಜನವಾಗಿಲ್ಲ. ಆಸ್ಪತ್ರೆಗೆ ಬರುವ ದಾರಿಯಲ್ಲೇ ಸಿದ್ಧಾಂತ್ ಪ್ರಾಣ ಹೋಗಿದೆ ಎಂದು ಹೇಳಲಾಗುತ್ತಿದೆ. ಕೇವಲ 46 ವರ್ಷದ ಮಗನನ್ನು ಕಳೆದುಕೊಂಡ ಕುಟುಂಬ ಕಣ್ಣೀರಿಡುತ್ತಿದೆ.

    ಹಿಂದಿ ಕಿರುತೆರೆ ಲೋಕದಲ್ಲಿ ಸಿದ್ಧಾಂತ್ ಸಾಕಷ್ಟು ಹೆಸರು ಮಾಡಿದ್ದಾರೆ. ಹಿಟ್ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇವ ಪತ್ನಿ ಅಲೇಸಿಯಾ ಕೂಡ ಮಾಡೆಲಿಂಗ್ ಕ್ಷೇತ್ರದಲ್ಲಿ ದೊಡ್ಡ ಹೆಸರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. 2017ರಲ್ಲಿ ಅಲೇಸಿಯಾ ಮತ್ತು ಸಿದ್ದಾಂತ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಕಸೌಟಿ ಜಿಂದಗಿ ಕೇ, ಮಮತಾ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಸಿದ್ಧಾಂತ್ ನಟಿಸಿದ್ದಾರೆ. ಇದನ್ನೂ ಓದಿ:ಭಾರತಕ್ಕೆ ಬೈ ಹೇಳಿದ ಬೆನ್ನಲ್ಲೇ ಕ್ರಿಸ್‌ಮಸ್‌ಗೆ ಪ್ರಿಯಾಂಕಾ ಚೋಪ್ರಾ ತಯಾರಿ

    ಸಿದ್ಧಾಂತ್ ಸಾವಿನ ವಿಷಯವನ್ನು ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ತಮ್ಮ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಹಂಚಿಕೊಂಡಿದ್ದು, ಮೃತರಿಗೆ ಶಾಂತಿ ಕೋರಿದ್ದಾರೆ. ಸಿದ್ಧಾಂತನನ್ನು ಕಳೆದುಕೊಂಡ ಕಲಾ ಪ್ರಪಂಚ ಬಡವಾಗಿದೆ ಎಂದು ಬರೆದುಕೊಂಡಿದ್ದಾರೆ. ಜೀಮ್ ನಲ್ಲಿ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿರುವುದು ಜಿಮ್ ಪ್ರಿಯರಿಗೆ ಕಳವಳವನ್ನುಂಟು ಮಾಡಿದೆ.

    Live Tv
    [brid partner=56869869 player=32851 video=960834 autoplay=true]

  • ಜಿಮ್ ಮಾಡುವ ವೇಳೆ ನಟ ಶ್ರೀಮುರಳಿಗೆ ಬೆನ್ನುನೋವು : ಫ್ಯಾನ್ಸ್ ಗಾಬರಿ ಪಡಬೇಡಿ ಎಂದ ರೋರಿಂಗ್ ಸ್ಟಾರ್

    ಜಿಮ್ ಮಾಡುವ ವೇಳೆ ನಟ ಶ್ರೀಮುರಳಿಗೆ ಬೆನ್ನುನೋವು : ಫ್ಯಾನ್ಸ್ ಗಾಬರಿ ಪಡಬೇಡಿ ಎಂದ ರೋರಿಂಗ್ ಸ್ಟಾರ್

    ಸ್ಯಾಂಡಲ್ ವುಡ್ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರಿಗೆ ಜಿಮ್ ಮಾಡುವ ವೇಳೆ ಬೆನ್ನು ನೋವು ಕಾಣಿಸಿಕೊಂಡಿದ್ದು, ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆಯಲೇಬೇಕು ಎಂದು ವೈದ್ಯರು ಸೂಚಿಸಿದ್ದಾರೆ. ಫ್ಯಾಮಿಲಿ ಡಾಕ್ಟರ್ ಸಲಹೆ ಮೇರೆಗೆ ಶ್ರೀಮುರಳಿ ಈಗ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಇದನ್ನೂ ಓದಿ : ಕೆಜಿಎಫ್ 2 ಟ್ರೈಲರ್ ಬಿಡುಗಡೆಗೆ ಹೋಸ್ಟ್ ಮಾಡಲಿದ್ದಾರೆ ಕರಣ್ ಜೋಹಾರ್

    ಪ್ರತಿನಿತ್ಯ ಜೀಮ್ ಮಾಡುವ ಸ್ಯಾಂಡಲ್ ವುಡ್ ಕಲಾವಿದರಲ್ಲಿ ಶ್ರೀಮುರಳಿ  ಕೂಡ ಒಬ್ಬರು. ನಿತ್ಯವೂ ಅವರು ಜಿಮ್ ನಲ್ಲಿ ಕಸರತ್ತು ಮಾಡುತ್ತಾರೆ. ಅದರಲ್ಲೂ ಹೊಂಬಾಳೆ ಪ್ರೊಡಕ್ಷನ್ ನಲ್ಲಿ ಮೂಡಿ ಬರುತ್ತಿರುವ ‘ಬಘೀರ’ ಚಿತ್ರಕ್ಕಾಗಿ ದೇಹ ದಂಡಿಸಲೇಬೇಕಿದೆ. ಈ ಸಿನಿಮಾದ ತಯಾರಿಗಾಗಿ ಜಿಮ್ ನಲ್ಲಿ ಮತ್ತಷ್ಟು ಹೊತ್ತು ಕಳೆಯುತ್ತಿದ್ದಾರೆ. ಈ ಸಂದರ್ಭದಲ್ಲೇ ಅವರಿಗೆ ಬೆನ್ನು ನೋವು ಕಾಣಿಸಿಕೊಂಡಿದೆ. ಇದನ್ನೂ ಓದಿ : RRR- ಸ್ಟಾರ್ ವಾರ್ ಬೆಂಕಿಗೆ ತಣ್ಣನೆಯ ನೀರು ಸುರಿದ ನಿರ್ದೇಶಕ ರಾಜಮೌಳಿ

    ನೆನ್ನೆಯಷ್ಟೇ ‘ನಟ ಭಯಂಕರ’ ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಶ್ರೀಮುರಳಿ ಬಂದಿದ್ದರೂ, ನಡೆದಾಡೋಕೆ ಕಷ್ಟ ಪಡುತ್ತಿದ್ದರು. ಆಗಲೇ ಅವರಿಗೆ ಬ್ಯಾಕ್ ಪೇನ್ ಆಗಿರುವ ವಿಚಾರ ಬೆಳಕಿಗೆ ಬಂತು. “ಜಿಮ್ ಮಾಡುವ ವೇಳೆ ಬೆನ್ನು ನೋವು ಕಾಣಿಸಿಕೊಂಡಿತು. ಅದಾದ ಎರಡು ದಿನಗಳ ಬಳಿಕವೂ ಬ್ಯಾಕ್ ಪೇನ್ ಕಡಿಮೆಯಾಗಿಲ್ಲ. ನೋವು ತೀವ್ರಗೊಂಡ ಹಿನ್ನೆಲೆಯಲ್ಲಿ ಕುಟುಂಬದ ವೈದ್ಯರನ್ನು ಸಂಪರ್ಕಿಸಿದೆ. ಓಡಾಡಲು ಸ್ವಲ್ಪ ತೊಂದರೆ ಆಗುತ್ತಿದೆ. ಹಾಗಾಗಿ ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿ ಪಡೆಯುತ್ತಿದ್ದೇನೆ. ಫ್ಯಾನ್ಸ್ ಗಾಬರಿ ಪಡುವ ಅಗತ್ಯವಿಲ್ಲ” ಎಂದರು ಶ್ರೀಮುರಳಿ. ಇದನ್ನೂ ಓದಿ : RRR ಸಿನೆಮಾ ನೋಡಲು ಬಾಗಿಲು ಮುರಿದು ಚಿತ್ರಮಂದಿರಕ್ಕೆ ನುಗ್ಗಿದ ಪ್ರೇಕ್ಷಕರು

    ಶ್ರೀಮುರಳಿ ಅವರು, ಸದ್ಯ ಬಘೀರ ಸಿನಿಮಾ ತಯಾರಿಯಲ್ಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇಷ್ಟೊತ್ತಿಗೆ ಬಘೀರ ಸಿನಿಮಾಗೆ ಚಾಲನೆ ಸಿಗಬೇಕಿತ್ತು. ಈಗ ನೋಡಿದರೆ ಶ್ರೀಮುರಳಿ ಅವರು ನೋವು ಮಾಡಿಕೊಂಡಿದ್ದಾರೆ. ಅವರು ವಿಶ್ರಾಂತಿ ಪಡೆದು,ಎಲ್ಲವೂ ಓಕೆ ಅಂದ ಬಳಿಕ ಸಿನಿಮಾ ಚಿತ್ರೀಕರಣ ಶುರುವಾಗಲಿದೆ. ಬಘೀರ ತುಂಬಾ ನಿರೀಕ್ಷೆ ಹುಟ್ಟಿಸಿದೆ. ಕಾರಣ,ಹೊಂಬಾಳೆ ಪ್ರೊಡಕ್ಷನ್ಸ್ ನಿರ್ಮಾಣದ ಸಿನಿಮಾ. ಡಾ.ಸೂರಿ ನಿರ್ದೇಶಿಸುತ್ತಿದ್ದಾರೆ.

  • ನಮಗೆ ನಷ್ಟ ಮಾಡಿಕೊಂಡು, ಇನ್ನೊಬ್ಬರ ಮೇಲೆ ಪ್ರತಿಭಟನೆ ಮಾಡಬಾರದು: ಯಶ್

    ನಮಗೆ ನಷ್ಟ ಮಾಡಿಕೊಂಡು, ಇನ್ನೊಬ್ಬರ ಮೇಲೆ ಪ್ರತಿಭಟನೆ ಮಾಡಬಾರದು: ಯಶ್

    – ಪಾನಿಪುರಿ ಕಿಟ್ಟಿ ಹೊಸ ಪ್ರಯತ್ನಕ್ಕೆ ಶುಭ ಹಾರೈಸಿದ ರಾಕಿಂಗ್ ಸ್ಟಾರ್
    – ‘ರಾಕಿ’ ಸಿನಿಮಾ ಆದಾಗಿನಿಂದ ಜೊತೆಲಿದ್ದಾರೆ

    ಬೆಂಗಳೂರು: ನಮಗೆ ನಷ್ಟ ಮಾಡಿಕೊಂಡು, ಇನ್ನೊಬ್ಬರ ಮೇಲೆ ಪ್ರತಿಭಟನೆ ಮಾಡಬಾರದು ಎಂಬುದು ನನ್ನ ಅಭಿಪ್ರಾಯ ಎಂದು ರಾಕಿಂಗ್ ಸ್ಟಾರ್ ಯಶ್ ಹೇಳಿದರು.

    ಯಶ್ ಸಿನಿಜರ್ನಿಯ ಆರಂಭದಿಂದ ಜೊತೆ ಇರೋ ಸ್ನೇಹಿತ ಮತ್ತು ಜಿಮ್‍ಟ್ರೈನರ್ ಪಾನಿಪುರಿ ಅವರು ಇಂದು ಮಹಾಲಕ್ಷ್ಮಿ ಲೇಔಟ್ ನಲ್ಲಿ ‘ರಿಚ್ಚಿ ಗ್ರಿಲ್ಸ್ ರೆಸ್ಟೋರೆಂಟ್’ ಪ್ರಾರಂಭಿಸಿದ್ದು, ಈ ಪ್ರಯತ್ನಕ್ಕೆ ಯಶ್ ಆಗಮಿಸಿ ಶುಭ ಹಾರೈಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಡಿ.31 ಬಂದ್ ಕುರಿತು ಮಾತನಾಡಿದರು. ಇದನ್ನೂ ಓದಿ: ನಮ್ಮ ಭೂಮಿ ಹೋದರೂ ಪರವಾಗಿಲ್ಲ, ಮೇಕೆದಾಟು ಯೋಜನೆ ಬೇಗ ಆರಂಭವಾಗಬೇಕು: ಡಿಕೆಶಿ

    ಎಂಇಎಸ್ ಪುಂಡಾಟ ವಿಚಾರ ಕುರಿತು ಮಾತನಾಡಿದ ಅವರು, ಕನ್ನಡಿಗರಾಗಿ ಎಲ್ಲರ ಅಭಿಪ್ರಾಯ ಒಂದೇ ರೀತಿ ಇರುತ್ತೆ. ನೋವಾಗುತ್ತೆ, ಕೋಪ ಬರುತ್ತೆ. ಇನ್ನೊಂದು ಸಾಂಸ್ಕøತಿಗೆ ನೋವು ಮಾಡಬಾರದು. ಇಂತಹ ಘಟನೆ ನಡೆಯಬಾರದು. ತಪ್ಪು, ಇದು ಖಂಡನೀಯ. ನಮ್ಮ ವೃತ್ತಿಯಲ್ಲಿ ನಾಡು, ನುಡಿ ರಕ್ಷಣೆ ಮಾಡುತ್ತೇವೆ. ಬಂದ್ ವಿಚಾರವಾಗಿ ದೊಡ್ಡವರು ಏನ್ ನಿರ್ಧಾರ ಮಾಡ್ತಾರೆ ಮಾಡಲಿ. ನಮಗೆ ನಷ್ಟ ಮಾಡಿಕೊಂಡು, ಇನ್ನೊಬ್ಬರ ಮೇಲೆ ಪ್ರತಿಭಟನೆ ಮಾಡಬಾರದು ಅನ್ನೋದು ನನ್ನ ಅಭಿಪ್ರಾಯ ಎಂದರು.

    ಗೆಳೆಯನ ಬಗ್ಗೆ ಮಾತನಾಡಿದ ಅವರು, ನಮ್ಮ ಈ ಲುಕ್‍ಗೆಲ್ಲಾ ಪಾನಿಪುರಿ ಕಿಟ್ಟಿನೇ ಕಾರಣ. ಪಾನಿಪುರಿ ಬ್ಯುಸಿನೆಸ್ ನಿಂದ ಕಿಟ್ಟಿ ಅವರ ಕೆರಿಯರ್ ಶುರುವಾಗಿತ್ತು. ಇವತ್ತು ಸಾಧನೆ ಮಾಡಿ ಒಂದು ರೆಸ್ಟೋರೆಂಟ್ ಮಾಡಿದ್ದಾರೆ. ಕಿಟ್ಟಿ ‘ರಾಕಿ’ ಸಿನಿಮಾ ಆದಾಗಿನಿಂದ ಜೊತೆಯಲ್ಲಿದ್ದಾರೆ ಎಂದು ಹಿಂದಿನ ದಿನಗಳನ್ನು ಮೆಲುಕು ಹಾಕಿದರು.

    ಈ ವರ್ಷನೂ ಕೊರೊನಾದಿಂದ ಗ್ರ್ಯಾಂಡ್ ಬರ್ತ್ ಡೇ ಬೇಡ ಎಂದ ಯಶ್, ಕೆಜಿಎಫ್ 2 ಟ್ರೇಲರ್ ನನ್ನ ಹುಟ್ಟುಹಬ್ಬಕ್ಕೆ ಬರಲ್ಲ. ಇನ್ನೂ ತಡವಾಗಿ ಬರುತ್ತೆ ಎಂದು ತಿಳಿಸಿದರು. ಇದನ್ನೂ ಓದಿ: ನಾಮಫಲಕದಲ್ಲಿ ಪುನೀತ್ ರಾಜ್‍ಕುಮಾರ್ ಹೆಸರು ಅಳಿಸಿ ವಿಕೃತಿ ಮೆರೆದ ಕಿಡಿಗೇಡಿಗಳು

    ಕಿಟ್ಟಿ ಅವರು ಸ್ಯಾಂಡಲ್‍ವುಡ್ ಹಲವು ಸೆಲೆಬ್ರೆಟಿಗಳಿಗೆ ಜಿಮ್ ಟ್ರೈನರ್ ಆಗಿದ್ದು, ಈ ಕಾರ್ಯಕ್ರಮಕ್ಕೆ ಅಜಯ್ ರಾವ್ ಹಾಗು ನೆನಪಿರಲಿ ಪ್ರೇಮ್ ಸಹ ಭಾಗವಹಿಸಿದ್ದರು.

  • ಬ್ಯಾಂಡೇಜ್ ಹಾಕ್ಕೊಂಡೆ ವಿನೋದ್ ಪ್ರಭಾಕರ್ ವರ್ಕೌಟ್

    ಬ್ಯಾಂಡೇಜ್ ಹಾಕ್ಕೊಂಡೆ ವಿನೋದ್ ಪ್ರಭಾಕರ್ ವರ್ಕೌಟ್

    ಬೆಂಗಳೂರು: ನಟ ವಿನೋದ್ ಪ್ರಭಾಕರ್ ಅವರು ಶೂಟಿಂಗ್ ವೇಳೆ ಬಿದ್ದು, ಕಾಲಿಗೆ ಪೆಟ್ಟು ಮಾಡಿಕೊಂಡಿದ್ದರು. ಆದರೂ ಕಾಲಿಗೆ ಬ್ಯಾಂಡೇಜ್ ಕಟ್ಟಿಕೊಂಡು ವರ್ಕೌಟ್ ಮಾಡುತ್ತಿದ್ದಾರೆ.

    ಹೌದು..ನಟ ವಿನೋದ್ ಪ್ರಭಾಕರ್ ಅವರು ತಮ್ಮ ಕಾಲು ನೋವನ್ನು ಲೆಕ್ಕಿಸದೆ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದಾರೆ. ವಿನೋದ್ ಅವರು ತಮ್ಮ ಸ್ನೇಹಿತರ ಸಹಾಯದಿಂದ ಜಿಮ್‍ನಲ್ಲಿ ಡಂಬಲ್ಸ್ ಹಾಗೂ ವೇಯ್ಟ್ ಲಿಫ್ಟಿಂಗ್ ಎತ್ತು ಮೂಲಕ ಕಸರತ್ತು ಮಾಡುತ್ತಿದ್ದಾರೆ. ಇದನ್ನೂ ಓದಿ: ಪ್ರಚಾರಕ್ಕೆ ಬ್ರೇಕ್- ಗಾಯಾಳು ಸ್ನೇಹಿತನನ್ನು ಭೇಟಿ ಮಾಡಿದ್ರು ದರ್ಶನ್

    ವಿನೋದ್ ಪ್ರಭಾಕರ್ ಅವರು ‘ವರದ’ ಸಿನಿಮಾದಲ್ಲಿ ಸಾಹಸ ದೃಶ್ಯದ ಚಿತ್ರೀಕರಣ ಮಾಡುತ್ತಿದ್ದರು. ಆಗ ಕೆಳಗೆ ಬಿದ್ದು, ಎಡಗಾಲಿಗೆ ಬಲವಾದ ಪೆಟ್ಟಾಗಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಸತತ 5 ವಾರಗಳು ವಿಶ್ರಾಂತಿ ಪಡೆಯಬೇಕು ಎಂದು ಸೂಚಿಸಿದ್ದರು. ಆದರೂ ತಮ್ಮಿಂದ ಸಿನಿಮಾ ಕೆಲಸ ನಿಲ್ಲಬಾರದು ಎಂದು ಕಾಲಿಗೆ ಪೆಟ್ಟಾಗಿದ್ದರೂ ಸಹ ಚಿತ್ರದ ಟಾಕಿ ಪೋಷನ್ ನಲ್ಲಿ ಭಾಗಿಯಾಗಿ ತಮ್ಮ ಕೆಲಸ ಮಾಡಿ ಮುಗಿಸಿಕೊಟ್ಟಿದ್ದರು.

    ಇತ್ತೀಚಿಗಷ್ಟೆ ವಿನೋದ್ ಪ್ರಭಾಕರ್ ಅವರನ್ನು ನಟ ದರ್ಶನ್ ಕೂಡ ಭೇಟಿಯಾಗಿ ಆರೋಗ್ಯ ವಿಚಾರಿಸಿಕೊಂಡು ಹೋಗಿದ್ದರು. ಸದ್ಯಕ್ಕೆ ವಿನೋದ್ ಪ್ರಭಾಕರ್ ಅಭಿನಯದ ‘ರಗಡ್’ ಸಿನಿಮಾ ಬಿಡುಗಡೆಯಾಗಿದ್ದು, ‘ವರದ’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

  • `ಪೈಲ್ವಾನ್’ ಆಗಲು ಮೊದಲ ಬಾರಿಗೆ ಜಿಮ್ ಗೆ ಎಂಟ್ರಿ ಕೊಟ್ಟ ಕಿಚ್ಚ ಸುದೀಪ್

    `ಪೈಲ್ವಾನ್’ ಆಗಲು ಮೊದಲ ಬಾರಿಗೆ ಜಿಮ್ ಗೆ ಎಂಟ್ರಿ ಕೊಟ್ಟ ಕಿಚ್ಚ ಸುದೀಪ್

    ಬೆಂಗಳೂರು: ಬಿಗ್ ಬಾಸ್ ಕಾರ್ಯಕ್ರವನ್ನು ಮುಗಿಸಿದ  ಕಿಚ್ಚ ಸುದೀಪ್  ಸದ್ಯಕ್ಕೆ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

    ಹೆಬ್ಬುಲಿಯ ಸಕ್ಸಸ್ ನಂತರ ಕಿಚ್ಚ ಸುದೀಪ್ ಅದೇ ತಂಡದ ಜೊತೆಯಲ್ಲಿ ಸಿನಿಮಾ ಮಾಡುವುದಾಗಿ ತಿಳಿಸಿ ಅನೇಕ ದಿನಗಳು ಕಳೆದಿವೆ. `ಪೈಲ್ವಾನ್’ ಸಿನಿಮಾ ಮೂಲಕ ಕಿಚ್ಚ ಮತ್ತು ಗಜಕೇಸರಿ ಕೃಷ್ಣ ಒಂದಾಗುತ್ತಿದ್ದಾರೆ. ಆದ್ದರಿಂದ ಸುದೀಪ್ ತಮ್ಮ ಮುಂದಿನ ಸಿನಿಮಾದ ಪಾತ್ರಕ್ಕಾಗಿ ವರ್ಕ್ ಔಟ್ ಶುರು ಮಾಡಿದ್ದಾರೆ.

    ಸುದೀಪ್ ಚುನಾವಣೆಗೆ ಮುಂಚೆ ಯುವಕರಿಗೆ ಸಂದೇಶ ನೀಡಿದ್ದಾರೆ. ಅವರೆ ತಿಳಿಸಿರುವಂತೆ ಈ ವರ್ಷ ಮೂರು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದು, ಅದರಲ್ಲಿ ಮೊದಲಿಗೆ ಪೈಲ್ವಾನ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈಗಾಗಲೇ ಸಿನಿಮಾಗೆ ಸಖತ್ ತಯಾರಿ ಶುರು ಮಾಡಿದ್ದು, ಇದೇ ಮೊದಲ ಬಾರಿಗೆ ಜಿಮ್ ಗೆ ಹೋಗಿ ಪ್ರತಿ ನಿತ್ಯ ದೇಹವನ್ನ ದಂಡಿಸುತ್ತಿದ್ದಾರೆ.

    ಸುದೀಪ್ ಈ ಬಾರಿ ಪ್ರೇಕ್ಷಕರ ಮುಂದೆ ಬೇರೆಯದ್ದೇ ಸ್ಟೈಲ್ ನಲ್ಲಿ ಬರಲಿದ್ದಾರೆ. ಪೈಲ್ವಾನ್ ಹೆಸರಿಗೆ ತಕ್ಕಂತೆ ಬಾಡಿ ಬಿಲ್ಡ್ ಮಾಡುತ್ತಿದ್ದಾರೆ. ಜೆಪಿ ನಗರದ ಖಾಸಗಿ ಜಿಮ್ ನಲ್ಲಿ ಕಿಚ್ಚ ವರ್ಕ್ ಮಾಡುತ್ತಿದ್ದು, ವಿಕ್ರಂ ಎನ್ನುವವರು ಟ್ರೈನಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ನಟ ಅರುಣ್ ಗೌಡ ಕೂಡ ಸುದೀಪ್ ಹೋಗುವ ಜಿಮ್ ನಲ್ಲಿ ಪ್ರತಿ ನಿತ್ಯ ವರ್ಕ್ ಔಟ್ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಸುದೀಪ್ ಅವರನ್ನ ಭೇಟಿ ಮಾಡಿರುವ ಅರುಣ್  ಸುದೀಪ್ ಜೊತೆಯಲ್ಲಿ ಫೋಟೋ ತೆಗೆಸಿಕೊಂಡಿದ್ದಾರೆ.

    ಬಿಗ್ ಬಾಸ್ ಶೋ ಮುಗಿಸಿಕೊಂಡು ಬಂದಿರುವ ಸುದೀಪ್ `ಅಂಬಿ ನಿಂಗ್ ವಯಸ್ಸಾಯ್ತೋ’ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ನಂತರ `ಪೈಲ್ವಾನ್’ ಸಿನಿಮಾದ ಚಿತ್ರೀಕರಣವನ್ನು ಶರು ಮಾಡುತ್ತಾರೆ.

  • 6 ವಾರಗಳಲ್ಲಿ ಹಾಟ್ ಲುಕ್ ಪಡೆದ ರಣ್‍ವೀರ್ ಸಿಂಗ್- ಹೇಗೆಂತೀರಾ ಹಾಗಾದ್ರೆ ಈ ಸ್ಟೋರಿ ಓದಿ

    6 ವಾರಗಳಲ್ಲಿ ಹಾಟ್ ಲುಕ್ ಪಡೆದ ರಣ್‍ವೀರ್ ಸಿಂಗ್- ಹೇಗೆಂತೀರಾ ಹಾಗಾದ್ರೆ ಈ ಸ್ಟೋರಿ ಓದಿ

    ಮುಂಬೈ: ಬಾಲಿವುಡ್‍ನ ಹಾಟ್ ಆ್ಯಂಡ್ ಸೆಕ್ಸಿ ರಣ್‍ವೀರ್ ಸಿಂಗ್ ಕೇವಲ ಆರು ವಾರಗಳಲ್ಲಿ ತಮ್ಮ ದೇಹದ ಸೌಂದರ್ಯವನ್ನು ಹೆಚ್ಚಿಸಿಕೊಂಡಿದ್ದಾರೆ. ತಮ್ಮ ಶಾರ್ಪ್ ಲುಕ್ ಮೂಲಕವೇ ಅತಿ ಹೆಚ್ಚು ಮಹಿಳಾ ಅಭಿಮಾನಿಗಳನ್ನು ಹೊಂದಿರೋ ರಣ್‍ವೀರ್ ಮತ್ತಷ್ಟು ಹ್ಯಾಂಡ್‍ಸಮ್ ಆಗಿದ್ದಾರೆ.

    ರಣ್‍ವೀರ್ ಸಿಂಗ್ ಬಾಡಿ ಬಿಲ್ಡರ್ ಟ್ರೇನರ್ ಲಾಯಿಡ್ ಸ್ಟೀವನ್ಸ್ ಅವರು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ರಣ್‍ವೀರ್ ಅವರ ಎರಡು ವಿಭಿನ್ನ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ. ಒಂದು ಫೋಟೋದಲ್ಲಿ ರಣ್‍ವೀರ್ ತೆಳ್ಳನೆಯ ಬಾಡಿ ಹೊಂದಿದ್ದರೆ, ಮತ್ತೊಂದು ಫೋಟೊದಲ್ಲಿ ಸಿಕ್ಸ್ ಪ್ಯಾಕ್ ಮತ್ತು ಬಲಿಷ್ಠ ಬಾಹುಗಳಳ್ಳ ಹಾಟ್ ರಣ್‍ವೀರ್ ಆಗಿರುವುದನ್ನು ತೋರಿಸಿದ್ದಾರೆ.

    ಇದೆಲ್ಲಾ ಆಗಿದ್ದು 6 ವಾರದಲ್ಲಿ: ಎರಡು ಫೋಟೋಗಳಲ್ಲಿ ಕಾಣುವ ರಣ್‍ವೀರ್ ಕೇವಲ 6 ವಾರಗಳಲ್ಲಿ ಕಟ್ಟುಮಸ್ತಾದ ದೇಹವನ್ನು ಬೆಳಸಿಕೊಂಡಿದ್ದಾರೆ. ಸಮಯದ ಅಭಾವದ ನಡುವೆಯೂ ಅದ್ಭುತವಾಗಿ, ಕಷ್ಟಪಟ್ಟು ತರಬೇತಿ ಪಡೆದಿರುವ ರಣವೀರ್ ಸಾಧನೆಗೆ ಅಭಿನಂದನೆಗಳು. ಅವರು ಕೆಲ ಸಮಯ ತಡರಾತ್ರಿವರೆಗೂ ಮತ್ತು ಕೆಲ ಸಮಯ ಮುಂಜಾನೆ ವೇಳೆಯಲ್ಲಿ ಅಭ್ಯಾಸ ನಡೆಸುತ್ತಿದ್ದರು ಎಂದು ಲಾಯಿಡ್ ಸ್ಟೀವನ್ಸ್ ಇನ್ ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.

    ಸದ್ಯ ಸಂಜಯ ಲೀಲಾ ಬನ್ಸಾಲಿ ನಿರ್ಮಾಣದ ಐತಿಹಾಸಿಕ ಕಥೆಯುಳ್ಳ `ಪದ್ಮಾವತಿ’ ಚಿತ್ರದಲ್ಲಿ ರಣವೀರ್ ಅಲ್ಲಾವುದ್ದೀನ್ ಖಿಲ್ಜಿಯಾಗಿ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಅರ್ಧಭಾಗದ ಚಿತ್ರೀಕರಣ ಪೂರ್ಣವಾಗಿದೆ. ಸದ್ಯ ಸಿನಿಮಾದಲ್ಲಿ ರಣ್‍ವೀರ್ ಯುವಕನಾಗಿರುವ ಸನ್ನಿವೇಶಗಳ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇತ್ತೀಚಿಗಷ್ಟೆ ರಣ್‍ವೀರ್ ಸಿನಿಮಾಗಾಗಿ ತಮ್ಮ ಸುಂದರ ಗಡ್ಡವನ್ನು ಬಲು ಬೇಸರದಿಂದ ಟ್ರಿಮ್ ಮಾಡಿಸಿಕೊಂಡಿದ್ರು.

    ಪದ್ಮಾವತಿಯಾಗಿ ಗುಳಿ ಕೆನ್ನೆ ಬೆಡಗಿ ದೀಪಿಕಾ ಪಡುಕೋಣೆ ಬಣ್ಣಹಚ್ಚಿದ್ದಾರೆ. ಪದ್ಮಾವತಿ ಪತಿ ರಾವಲ್ ರತನ್ ಸಿಂಗ್ ಪಾತ್ರದಲ್ಲಿ ಸ್ಮಾರ್ಟ್ ಹುಡುಗ ಶಾಹೀದ್ ಕಪೂರ್ ನಟಿಸಿದ್ದಾರೆ.

    https://www.instagram.com/p/BXho_sRh0IL/?taken-by=stevenslloyd

    https://www.instagram.com/p/BTGQTKzBB6P/?taken-by=stevenslloyd

    https://www.instagram.com/p/BIRvDhGhz53/?taken-by=ranveersingh

    https://www.instagram.com/p/BWMizCoh81t/?taken-by=stevenslloyd

    https://www.instagram.com/p/BTzFs9AhPLC/?taken-by=stevenslloyd

    https://www.instagram.com/p/BT5bH9ahrkc/?taken-by=stevenslloyd

    https://www.instagram.com/p/BW9ak4pBX_z/?taken-by=stevenslloyd

    https://www.instagram.com/p/BQKN0A7Ak8g/?taken-by=ranveersingh

    https://www.instagram.com/p/BLX5GyBA08M/?taken-by=ranveersingh

    https://www.instagram.com/p/BLGiMcsgUrK/?taken-by=ranveersingh

  • 7 ವರ್ಷದಲ್ಲೇ 8 ಪ್ಯಾಕ್ ಬಾಡಿ ಬೆಳೆಸಿದ ಬಾಲಕ!

    7 ವರ್ಷದಲ್ಲೇ 8 ಪ್ಯಾಕ್ ಬಾಡಿ ಬೆಳೆಸಿದ ಬಾಲಕ!

    ಬೀಜಿಂಗ್: ಯುವ ಜನತೆ ಜಿಮ್‍ಗೆ ಹೋಗಿ ಬಾಡಿ ಬಿಲ್ಡಿಂಗ್ ಮಾಡುವುದನ್ನು ನೀವು ನೋಡಿರಬಹುದು. ಆದರೆ ಚೀನಾದ 7 ವರ್ಷದ ಬಾಲಕ 8 ಪ್ಯಾಕ್ ಬಾಡಿ ಬೆಳೆಸಿ ಎಲ್ಲರನ್ನೂ ನಾಚಿಸುವ ಮೂಲಕ ಸುದ್ದಿಯಾಗಿದ್ದಾನೆ.

    ಹೌದು, ಚೀನಾದ ಏಳು ವರ್ಷದ ಬಾಲಕ ಚೆನ್ ಯಿ 8 ಪ್ಯಾಕ್‍ಗಳನ್ನು ಮಾಡಿ ಎಲ್ಲರ ತಲೆ ತಿರುಗುವ ಹಾಗೆ ಮಾಡಿದ್ದಾನೆ. ಜಿಮ್ ಸಾಧನೆಯ ಜೊತೆ ಜಿಮ್ನಾಸ್ಟಿಕ್‍ನಲ್ಲಿ ಆರು ಜಿನ್ನದ ಪದಕಗಳನ್ನು ಗೆದ್ದಿದ್ದಾನೆ. ಅಷ್ಟೇ ಅಲ್ಲದೇ ಅಥ್ಲೆಟಿಕ್ಸ್ ನಲ್ಲಿ ಭಾಗವಹಿಸಿ ಬಹುಮಾನವನ್ನು ಗೆದ್ದಿದ್ದಾನೆ.

    ಚಿಕ್ಕ ವಯಸ್ಸಿನಲ್ಲಿ ತುಂಬಾ ಗಟ್ಟಿಮುಟ್ಟಾಗಿದ್ದೆ. ಈ ರೀತಿಯ ದೇಹವನ್ನು ಹೊಂದಿ ದೊಡ್ಡ ದೊಡ್ಡ ಪ್ರಶಸ್ತಿಗಳನ್ನು ಗೆಲ್ಲಬೇಕು ಎನ್ನುವ ಕನಸನ್ನು ಕಂಡಿದ್ದೆ. ಈಗ ನನಗೆ ಸಂತೋಷವಾಗಿದೆ ಎಂದು ಚೆನ್ ಯಿ ತನ್ನ ಸಾಧನೆಯ ಬಗ್ಗೆ ಹೇಳಿಕೊಂಡಿದ್ದಾನೆ.