Tag: Jihad

  • BJP ನಾಯಕರ ಹೆಣ್ಮಕ್ಕಳು ಮುಸ್ಲಿಮರನ್ನು ಮದ್ವೆ ಆದ್ರೆ ಪ್ರೀತಿ ಅಂತಾರೆ, ಬೇರೆಯವರಾದ್ರೆ ಜಿಹಾದ್: ಛತ್ತೀಸ್‍ಗಢ ಸಿಎಂ

    BJP ನಾಯಕರ ಹೆಣ್ಮಕ್ಕಳು ಮುಸ್ಲಿಮರನ್ನು ಮದ್ವೆ ಆದ್ರೆ ಪ್ರೀತಿ ಅಂತಾರೆ, ಬೇರೆಯವರಾದ್ರೆ ಜಿಹಾದ್: ಛತ್ತೀಸ್‍ಗಢ ಸಿಎಂ

    ರಾಯ್ಪುರ: ಬಿಜೆಪಿ (BJP) ನಾಯಕರ ಹೆಣ್ಣು ಮಕ್ಕಳು ಮುಸ್ಲಿಮರನ್ನು ಮದುವೆಯಾದಾಗ ಅದನ್ನು ಅವರು ಪ್ರೀತಿ ಎಂದು ಕರೆಯುತ್ತಾರೆ, ಆದರೆ ಬೇರೆ ಯಾರಾದರೂ ಹಾಗೆ ಮಾಡಿದರೇ ಅದನ್ನು ಜಿಹಾದ್ (Jihad) ಎಂದು ಕರೆಯುತ್ತಾರೆ ಎಂದು ಛತ್ತೀಸ್‍ಗಢದ (Chhattisgarh) ಮುಖ್ಯಮಂತ್ರಿ ಭೂಪೇಶ್ ಬಾಘೇಲ್ (Bhupesh Baghel) ಕಿಡಿಕಾರಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಲವ್ ಜಿಹಾದ್ ಬಗ್ಗೆ ಮಾತನಾಡುತ್ತಾರೆ. ಬಿಜೆಪಿಯ ಹಿರಿಯ ನಾಯಕರ ಬಗ್ಗೆ ಮಾತನಾಡುವುದಾದರೆ ಅವರ ಹೆಣ್ಣುಮಕ್ಕಳು ಮುಸ್ಲಿಮರನ್ನು ಮದುವೆಯಾಗಿದ್ದಾರೆ. ಇದು ಲವ್ ಜಿಹಾದ್ ವರ್ಗಕ್ಕೆ ಸೇರುವುದಿಲ್ಲವೇ? ಛತ್ತೀಸ್‍ಗಢದ ಬಿಜೆಪಿಯ ದೊಡ್ಡ ನಾಯಕನ ಮಗಳು ಎಲ್ಲಿ ಹೋದಳು ಎಂದು ಕೇಳುತ್ತೀರಿ. ಅದು ಲವ್ ಜಿಹಾದ್ ಅಲ್ಲವೇ? ಅವರ ಮಗಳು ಅದನ್ನು ಮಾಡಿದರೆ ಅದು ಪ್ರೀತಿ ಆದರೆ ಬೇರೆಯವರು ಅದನ್ನು ಮಾಡಿದಾಗ ಲವ್ ಜಿಹಾದ್ ಆಗುತ್ತದೆಯೇ ಎಂದು ಕಿಡಿಕಾರಿದರು.

    ಬಿಜೆಪಿ ದ್ವಿಗುಣ ನೀತಿಯನ್ನು ಹೊಂದಿದೆ. ಬೆಮೆತಾರಾ ಜಿಲ್ಲೆಯ ಬಿರಾನ್‍ಪುರ ಗ್ರಾಮದಲ್ಲಿ ಕಳೆದ ವಾರ ನಡೆದ ಕೋಮು ಹಿಂಸಾಚಾರದ ರಾಜಕೀಯ ಲಾಭ ಪಡೆಯಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಚುನಾವಣೆ ವೇಳೆ ಶಾಂತಿ ಕದಡಲು VHP ಅಧ್ಯಕ್ಷನ ಮೇಲೆ ಫೈರಿಂಗ್: ಬೋಪಯ್ಯ

    ಕೆಲವು ಅಂತರ್‌ಧರ್ಮೀಯ ವಿವಾಹಗಳ ನಂತರ ಬಿರಾನ್‍ಪುರದಲ್ಲಿ ಉದ್ವಿಗ್ನತೆ ಉಂಟಾಗಿದೆ ಎಂಬ ಬಿಜೆಪಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯು ಈ ಘರ್ಷಣೆಯನ್ನು ಪರೀಶಿಲಿಸಿಲ್ಲ. ಜೊತೆಗೆ ಬಂದ್‍ಗೆ ಕರೆ ನೀಡುವ ಮೊದಲು ಯಾವುದೇ ವರದಿಯನ್ನು ನೀಡಲಿಲ್ಲ. ಇಬ್ಬರು ಮಕ್ಕಳ ನಡುವಿನ ಜಗಳ ಘರ್ಷಣೆಗೆ ಕಾರಣವಾಯಿತು. ಇದು ದುಃಖಕರವಾದ ಸಂಗತಿಯಾಗಿದೆ. ಆದರೆ ಬಿಜೆಪಿ ತನ್ನ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಹೆಲಿಪ್ಯಾಡ್ ಬಳಿ ಬೆಂಕಿ – ಸಿಎಂ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ತಪ್ಪಿದ ಅನಾಹುತ

  • ಕುರಾನ್ ಮಾತ್ರವಲ್ಲ, ಭಗವದ್ಗೀತೆ ಕೂಡಾ ಜಿಹಾದ್ ಕಲಿಸುತ್ತದೆ: ಶಿವರಾಜ್ ಪಾಟೀಲ್

    ಕುರಾನ್ ಮಾತ್ರವಲ್ಲ, ಭಗವದ್ಗೀತೆ ಕೂಡಾ ಜಿಹಾದ್ ಕಲಿಸುತ್ತದೆ: ಶಿವರಾಜ್ ಪಾಟೀಲ್

    ನವದೆಹಲಿ: ಜಿಹಾದ್ (Jihad) ಪರಿಕಲ್ಪನೆ ಕೇವಲ ಇಸ್ಲಾಂ (Islam) ಧರ್ಮದಲ್ಲಿ ಮಾತ್ರವಲ್ಲ, ಭಗವದ್ಗೀತೆ (Bhagavad Gita) ಹಾಗೂ ಕ್ರಿಶ್ಚಿಯನ್ ಧರ್ಮದಲ್ಲೂ (Christianity) ಇದೆ. ಶ್ರೀಕೃಷ್ಣನೂ (Lord Krishna) ಅರ್ಜುನನಿಗೆ (Arjun) ಜಿಹಾದ್ ಬೋಧಿಸಿದ್ದಾನೆ ಎಂದು ಕಾಂಗ್ರೆಸ್‌ನ (Congress) ಹಿರಿಯ ನಾಯಕ ಶಿವರಾಜ್ ಪಾಟೀಲ್ (Shivraj Patil) ವಿವಾದಾತ್ಮಕವಾಗಿ ಹೇಳಿಕೆ ನೀಡಿದ್ದಾರೆ.

    ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಮೊಹ್ಸಿನಾ ಕಿದ್ವಾಯಿ ಅವರ ಜೀವನಚರಿತ್ರೆ ಬಿಡುಗಡೆ ಸಮಾರಂಭದ ವೇಳೆ ಮಾತನಾಡಿದ ಶಿವರಾಜ್ ಪಾಟೀಲ್, ಸರಿಯಾದ ಉದ್ದೇಶ ಹೊಂದಿದ್ದರೂ, ಸರಿಯಾದ ಕೆಲಸ ಮಾಡುತ್ತಿದ್ದರೂ ಜನರು ಅದನ್ನು ಅರ್ಥಮಾಡಿಕೊಳ್ಳುವುದಿಲ್ಲ. ಈ ವೇಳೆ ಜಿಹಾದ್ ಪರಿಕಲ್ಪನೆ ಹುಟ್ಟಿಕೊಳ್ಳುತ್ತದೆ. ಜಿಹಾದ್ ಇಸ್ಲಾಂ ಧರ್ಮದಲ್ಲಿ ಇದೆ ಎಂಬುದಾಗಿ ಭಾರೀ ಚರ್ಚೆಯಾಗುತ್ತಿದೆ. ಆದರೆ ಕುರಾನ್‌ನಲ್ಲಿ ಮಾತ್ರವಲ್ಲ, ಮಹಾಭಾರತದ ಗೀತೆಯಲ್ಲೂ ಇದೆ, ಕ್ರಿಶ್ಚಿಯನ್ ಧರ್ಮದಲ್ಲೂ ಇದೆ ಎಂದು ಹೇಳಿದ್ದಾರೆ.

    ಜನರಿಗೆ ಎಲ್ಲವನ್ನೂ ವಿವರಿಸಿದ ಬಳಿಕವೂ ಅರ್ಥವಾಗುವುದಿಲ್ಲ. ಬದಲಿಗೆ ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ಬರುತ್ತಾರೆ. ಈ ವೇಳೆ ನಿಮ್ಮಿಂದ ಓಡಿ ಹೋಗಲು ಸಾಧ್ಯವಿಲ್ಲ. ಇದನ್ನು ಜಿಹಾದ್ ಎಂದು ಕರೆಯಲು ಸಾಧ್ಯವಿಲ್ಲ. ಇದನ್ನು ತಪ್ಪು ಎಂದೂ ಹೇಳಲೂ ಸಾಧ್ಯವಿಲ್ಲ. ಇದನ್ನೇ ನಾವು ಅರ್ಥ ಮಾಡಿಕೊಳ್ಳಬೇಕು. ಕೈಯಲ್ಲಿ ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ಜನರಿಗೆ ಅರ್ಥ ಮಾಡಿಸುವಂತಹ ಪರಿಕಲ್ಪನೆ ಇರಬಾರದು ಎಂದಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಭಾರೀ ಮಳೆ – 4 ತಿಂಗಳು ಹಿಂದೆ ಬಿದ್ದ ನಮ್ಮ ಮೆಟ್ರೋ ಕಾಮಗಾರಿ

    ಪಾಟೀಲ್ ಹೇಳಿಕೆಗೆ ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿ ಕಾರಿದೆ. ಈ ಬಗ್ಗೆ ಟ್ವೀಟ್ ಮಾಡಿದ ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ, ಎಎಪಿಯಲ್ಲಿ ಗೋಪಾಲ್ ಇಟಾಲಿಯಾ, ಹಾಗೂ ರಾಜೇಂದ್ರ ಪಾಲ್ ಬಳಿಕ ಇದೀಗ ಕಾಂಗ್ರೆಸ್‌ನ ಶಿವರಾಜ್ ಪಾಟೀಲ್ ಶ್ರೀಕೃಷ್ಣ ಅರ್ಜುನನಿಗೆ ಜಿಹಾದ್ ಪ್ರವಚನ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಅವರು ಈ ಹೇಳಿಕೆ ನೀಡುವ ಮೂಲಕ ಹಿಂದೂ ದ್ವೇಷ ಹಾಗೂ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ‘ಪುನೀತ್ ಪರ್ವ’ ಕಾರ್ಯಕ್ರಮಕ್ಕೆ ಪೊಲೀಸ್ ಸರ್ಪವಾಗಲು

    Live Tv
    [brid partner=56869869 player=32851 video=960834 autoplay=true]

  • ಮೌಲ್ವಿಗಳಿಂದ ಹಿಂದೂ ಯುವಕ ಮುಸ್ಲಿಂ ಧರ್ಮಕ್ಕೆ ಮತಾಂತರ!

    ಮೌಲ್ವಿಗಳಿಂದ ಹಿಂದೂ ಯುವಕ ಮುಸ್ಲಿಂ ಧರ್ಮಕ್ಕೆ ಮತಾಂತರ!

    ವಿಜಯಪುರ: ಇತ್ತೀಚೆಗೆ ಮತಾಂತರ ಮಾಡಿಸಿಕೊಂಡು ಜಿಹಾದ್ ಕೆಲಸಗಳನ್ನು ಮಾಡಿಸುತ್ತಿರುವ ಆರೋಪಗಳು ಒಂದಲ್ಲ ಒಂದುಕಡೆ ಕೇಳಿ ಬರುತ್ತಲೇ ಇವೆ. ಇದೀಗ ಇದಕ್ಕೆ ಪುಷ್ಠಿ ನೀಡುವಂತೆ ವಿಜಯಪುರದಲ್ಲೊಂದು ಪ್ರಕರಣ ಬೆಳಕಿಗೆ ಬಂದಿದೆ.

    ವಿಜಯಪುರ ಜಿಲ್ಲೆ ಇಂಡಿ ಪಟ್ಟಣದ ನಿವಾಸಿ ಲಕ್ಷ್ಮಿಕಾಂತನನ್ನು ಮುಸ್ಲಿಂ ಮೌಲ್ವಿಗಳು ಮತಾಂತರ ಮಾಡಿದ್ದಾರೆ ಎಂದು ಆತನ ತಂದೆ ಲಕ್ಕಪ್ಪ ಸಿಂಧೆ ಆರೋಪಿಸಿದ್ದಾರೆ. ಮೊದಲಿನಿಂದಲೂ ಲಕ್ಷ್ಮಿಕಾಂತ ಮುಸ್ಲಿಂ ಹುಡುಗರೊಂದಿಗೆ ಓಡಾಡುತ್ತಿದ್ದ. ಆದರೆ ಇದೀಗ ಕಳೆದ ಒಂದು ವಾರದ ಹಿಂದೆ ಆತನನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿಕೊಳ್ಳಲಾಗಿದೆ ಎಂದು ಲಕ್ಕಪ್ಪ ಸಿಂಧೆ ಆತಂಕ ವ್ಯಕ್ತಪಡಿಸಿದ್ದಾರೆ.

    ಆರು ದಿನಗಳಿಂದ ಮಗ ಮನೆಗೆ ಬಂದಿಲ್ಲ, ಆತನಿಗೆ ಮುಸ್ಲಿಂ ಧರ್ಮದ ಬಗ್ಗೆ ಹೇಳಿ, ವಶೀಕರಣ ಮಾಡಿಕೊಂಡಿದ್ದಾರೆ. ಆತನಿಗೆ ತಮ್ಮ ಧರ್ಮದ ಬಗ್ಗೆ ತಲೆಯಲ್ಲಿ ತುಂಬಿ ಆತನ ತಲೆ ಕೆಡಿಸಿ ತಮ್ಮ ಧರ್ಮಕ್ಕೆ ಮತಾಂತರ ಮಾಡಿಕೊಂಡಿದ್ದಾರೆ ಎಂದು ಲಕ್ಕಪ್ಪ ಕುಟುಂಬ ಆರೋಪಿಸಿದೆ.

    ಇದರಲ್ಲಿ ಮುಖ್ಯವಾಗಿ ಇಂಡಿ ಪಟ್ಟಣದ ಮೌಲ್ವಿ ಸಾಜೀರ್ ಮುಲ್ಲಾ ಅವರದ್ದೆ ಕೈವಾಡ ಇದೆ ಎಂದು ಆರೋಪಿಸಲಾಗಿದೆ. ತಮ್ಮ ಮಗನನ್ನು ಮತಾಂತರ ಮಾಡಿಕೊಂಡಿದ್ದಲ್ಲದೆ ತಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಹಾಕಲಾಗಿದೆ ಎಂದು ಎಸ್.ಪಿ ಅವರಿಗೆ ಲಕ್ಕಪ್ಪ ಸಿಂಧೆ ಕುಟುಂಬಸ್ಥರು ದೂರು ಸಲ್ಲಿಸಿದ್ದಾರೆ.