Tag: jignesh mevani

  • ಮೋದಿ ದೊಡ್ಡ ಕಲಾವಿದ ಅವರ ಮುಂದೆ ಪ್ರಕಾಶ ರೈ ಏನೂ ಅಲ್ಲ: ಜಿಗ್ನೇಶ್ ಮೇವಾನಿ

    ಮೋದಿ ದೊಡ್ಡ ಕಲಾವಿದ ಅವರ ಮುಂದೆ ಪ್ರಕಾಶ ರೈ ಏನೂ ಅಲ್ಲ: ಜಿಗ್ನೇಶ್ ಮೇವಾನಿ

    ರಾಯಚೂರು: ಪ್ರಧಾ ಮೋದಿ ದೊಡ್ಡ ಕಲಾವಿದ ಅವರ ಮುಂದೆ ಪ್ರಕಾಶ ರೈ ಏನೂ ಅಲ್ಲಾ ಅಂತ ಗುಜರಾತನ ಶಾಸಕ ಜಿಗ್ನೇಶ್ ಮೇವಾನಿ ವ್ಯಂಗ್ಯದ ಮಾತುಗಳನ್ನಾಡಿದ್ದಾರೆ.

    ರಾಯಚೂರಿನಲ್ಲಿ ಸಂವಿಧಾನ ಉಳಿವಿಗಾಗಿ ಕರ್ನಾಟಕ ಸಂಘಟನೆಯ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಗ್ನೇಶ್, ನಾಟಕ ಬಂದ್ ಮಾಡಿ ಬಡವರಿಗೆ ಹಾಗು ದಲಿತರಿಗೆ ಊಟ ನೀಡಿ ಅಂತ ಪ್ರಧಾನಿ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡರು. ಪ್ರಧಾನಿಗಳಿಗೆ ಈಗ ದಲಿತರ ಬಗ್ಗೆ ಪ್ರೇಮವಾಗಿದೆ. ಗುಜರಾತ್ ದಲಿತರ ಮೇಲೆ ದೌರ್ಜನ್ಯ ನಡೆದಾಗ ಮೋದಿ ಹಾಗು ಬಿಜೆಪಿ ಮುಖಂಡರು ಎಲ್ಲಿಗೆ ಹೋಗಿದ್ದರು ಅಂತ ಪ್ರಶ್ನಿಸಿದರು. ಇದನ್ನೂ ಓದಿ: ಪ್ರಧಾನಿ ವಿರುದ್ಧ ಮಾತನಾಡಲು ಆರಂಭಿಸಿದ್ದ ದಿನದಿಂದ ಬಾಲಿವುಡ್ ಆಫರ್ ಗಳೇ ಬಂದಿಲ್ಲ: ಪ್ರಕಾಶ್ ರೈ

    ಕರ್ನಾಟಕ ಚುನಾವಣೆ ಬಂದಾಗ ದಲಿತರ ಮನೆಯಲ್ಲಿ ಊಟ ಮಾಡುತ್ತಿದ್ದಾರೆ. ಸಫಾಯಿ ಕರ್ಮಚಾರಿ ಕೆಲಸ ಮಾಡುವುದನ್ನು ಬಿಡಿಸಲು ಟೆಕ್ನಾಲಾಜಿ ತೆಗೆದುಕೊಂಡು ಬನ್ನಿ. ರೋಹಿತ್ ವೇಮಲು ಹತ್ಯೆ ಮಾಡಿ ಈಗ ನಾಟಕ ಮಾಡುತ್ತೀರಿ, ನೀವು ಮನುವಾದಿ. ಪ್ರಧಾನ ಮಂತ್ರಿ ಮೋದಿ ನಾಲ್ಕು ವರ್ಷ ಬ್ಯಾಂಕುಗಳ ಕೊಳ್ಳೆ ಹೊಡೆದಿದ್ದಾರೆ. ಇವರು ಚೌಕಿದಾರರಲ್ಲ ದೇಶದ ನಂಬರ್ ಕಳ್ಳ ಅಂತಾ ಕಟು ಪದಗಳಿಂದ ಟೀಕಿಸಿದ್ರು.

  • ಜಿಗ್ನೇಶ್ ಕಾರ್ಯಕ್ರಮದ ಬಳಿಕ ಕಂತೆ-ಕಂತೆ ಹಣ ಹಂಚಿದ ಕಾರ್ಯಕರ್ತರು- ವಿಡಿಯೋ ವೈರಲ್

    ಜಿಗ್ನೇಶ್ ಕಾರ್ಯಕ್ರಮದ ಬಳಿಕ ಕಂತೆ-ಕಂತೆ ಹಣ ಹಂಚಿದ ಕಾರ್ಯಕರ್ತರು- ವಿಡಿಯೋ ವೈರಲ್

    ಕೊಪ್ಪಳ: ಸಂವಿಧಾನ ಉಳಿವಿಗಾಗಿ- ಕರ್ನಾಟಕ ಕಾರ್ಯಕ್ರಮದಲ್ಲಿ ಕುರುಡು ಕಾಂಚಾಣ ಕುಣಿದಿದೆ. ಕೊಪ್ಪಳದ ಗಂಗಾವತಿಯಲ್ಲಿ ನಡೆದ ಚುನಾವಣಾ ಪ್ರಚಾರ ಕಾರ್ಯಕ್ರಮದ ನಂತರ ಲಕ್ಷಾಂತರ ರೂಪಾಯಿ ಕಾರ್ಯಕರ್ತರ ಕೈಯಿಂದ ಕೈಗೆ ಬದಲಾಗಿದೆ ಅನ್ನೋ ಆರೋಪವೊಂದು ಕೇಳಿಬಂದಿದೆ.

    ನಗರಸಭೆ ಸದಸ್ಯ ಹುಸೇನಪ್ಪ ಹಂಚಿನಾಳ ನೇತೃತ್ವದಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮ ನಡೆದಿತ್ತು. ಕಾರ್ಯಕ್ರಮ ನಡೆದ ಬಳಿಕ ಆವರಣದಲ್ಲೇ ಲಕ್ಷಾಂತರ ರೂಪಾಯಿ ಕೈಯಿಂದ ಕೈಗೆ ಬದಲಾಗುವ ದೃಶ್ಯಗಳು ಸೆರೆಯಾಗಿದೆ. ಕಾರ್ಯಕರ್ತರು ಹಣ ಎಣಿಕೆ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಕಾರ್ಯಕ್ರಮದಲ್ಲಿ ಗುಜರಾತಿನ ವಾಡ್ಗಮ್ ಶಾಸಕ ಜಿಗ್ನೇಶ್ ಮೆವಾನಿ ಭಾಗವಹಿಸಿದ್ದರು. ತಮ್ಮ ಭಾಷಣದಲ್ಲಿ ಬಿಜೆಪಿ, ಕೇಂದ್ರ ಸರ್ಕಾರದ ನೀತಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.

    ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಕಾರ್ಯಕ್ರಮದ ಆವರಣದಲ್ಲೇ ಲಕ್ಷಾಂತರ ರೂಪಾಯಿ ಕೈಯಿಂದ ಕೈಗೆ ಬದಲಾಗಿದ್ದು ಏಕೆ ಅನ್ನುವ ಪ್ರಶ್ನೆ ಈಗ ಉದ್ಭವವಾಗಿದೆ. ಅಲ್ಲದೇ ಜನರನ್ನು ಹಣ ಕೊಟ್ಟು ಕರೆತಂದಿದ್ದಾರೆಯೇ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಬಿಜೆಪಿ ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಜಿಗ್ನೇಶ್‍ಗೆ ಇದು ಗೊತ್ತಾಯ್ತಾ ಎಂಬ ಟೀಕೆ ವ್ಯಕ್ತವಾಗುತ್ತಿದೆ.

    ಹುಸೇನಪ್ಪ ಹಂಚಿನಾಳ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಆಪ್ತರು ಎಂದು ತಿಳಿದು ಬಂದಿದೆ.

  • ಗುಜರಾತ್ ಪೊಲೀಸರಿಂದ ಜಿಗ್ನೇಶ್ ಮೇವಾನಿ ಎನ್‍ಕೌಂಟರ್ ಸಂಚು? ವಿಡಿಯೋ ವೈರಲ್

    ಗುಜರಾತ್ ಪೊಲೀಸರಿಂದ ಜಿಗ್ನೇಶ್ ಮೇವಾನಿ ಎನ್‍ಕೌಂಟರ್ ಸಂಚು? ವಿಡಿಯೋ ವೈರಲ್

    ಅಹಮದಾಬಾದ್: ಗುಜರಾತ್ ಪೊಲೀಸರು ದಲಿತ ನಾಯಕ, ವಾಡಗಾಂವ್ ಕ್ಷೇತ್ರದ ಶಾಸಕ ಜಿಗ್ನೇಶ್ ಮೇವಾನಿ ಅವರನ್ನು ಎನ್‍ಕೌಂಟರ್ ಮಾಡಲು ಸಂಚು ರೂಪಿಸಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.

    ಹಿರಿಯ ಪೊಲೀಸ್ ಅಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳನ್ನೊಳಗೊಂಡ ವಾಟ್ಸಪ್ ಗ್ರೂಪ್ ನಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. ಆ ವಿಡಿಯೋಗಳಲ್ಲಿ ರಾಜಕಾರಣಿಯಂತೆ ಕಾಣಿಸುವ ವ್ಯಕ್ತಿಯೊಬ್ಬನನ್ನು ಪೊಲೀಸರು ಹೊಡೆಯುತ್ತಿರುವ ದೃಶ್ಯ ಮೊದಲ ವಿಡಿಯೋದಲ್ಲಿದೆ. ಮತ್ತೊಂದರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ವಿಷಯಕ್ಕೆ ಸಂಬಂಧಿಸಿ ಕೇಳುವ ಪ್ರಶ್ನೆಗಳಿಗೆ ಉತ್ತರಿಸುವ ದೃಶ್ಯವಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಗುಜರಾತ್ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

    ವಿಡಿಯೋದಲ್ಲಿ ಏನಿದೆ?: ಪೊಲೀಸರು ತಂದೆಯಾಗಲು ಬಯಸುವರು, ಪೊಲೀಸರು ‘ಲಖೋಟ’ ಎಂದು ಕರೆಯುವರನ್ನು ಮತ್ತು ಪೊಲೀಸರ ವಿಡಿಯೋ ಮಾಡುವರ ಜೊತೆ ಪೊಲೀಸರು ಹೀಗೆ ವರ್ತಿಸಲಿದ್ದಾರೆ. ಲೆಕ್ಕ ಚುಕ್ತಾ ಮಾಡಲಾಗುವುದು ಎಂದು ಗುಜರಾತ್ ಪೊಲೀಸರು ಹೇಳಿರುವ ವಿಡಿಯೋವನ್ನು ವಾಟ್ಸ್‍ಆಪ್ ಗ್ರೂಪ್ ನಲ್ಲಿ ಅಹಮದಾಬಾದ್ ಗ್ರಾಮೀಣ ಡಿವೈಎಸ್‍ಪಿ ಆರ್.ಬಿ. ದೇವ್ ಧಾ ಹಂಚಿಕೊಂಡಿದ್ದ ವಿಡಿಯೋಗಳು ಶುಕ್ರವಾರ ವೈರಲ್ ಆಗಿದೆ.

    ಬೇರೆ ಗ್ರೂಪ್ ನಲ್ಲಿ ಬಂದ ಆ ವಿಡಿಯೋಗಳನ್ನು ಕಾಪಿ ಪೇಸ್ಟ್ ಮಾಡಿದ್ದೆನಷ್ಟೆ. ಅದು ನಾನೇ ಸ್ವತಃ ಕಳುಹಿಸಿದ ವಿಡಿಯೋಗಳಲ್ಲ. ಈಗ ಅದೇ ವಿಡಿಯೋಗಳು ಇತರೇ ಗ್ರೂಪ್ ನಲ್ಲಿ ಹರಿದಾಡುತ್ತಿದೆ.” ಎಂದು ಡಿವೈಎಸ್ ಪಿ ಆರ್.ಬಿ.ದೇವದ್ ಸ್ಪಷ್ಟನೆ ನೀಡಿದ್ದಾರೆ.

    ಈ ಕುರಿತು ಜಿಗ್ನೇಶ್‍ರವರು ಖಾಸಗಿ ವಾಹಿನಿಯೊಂದಕ್ಕೆ “ಇದು ಗಂಭೀರ ವಿಷಯವಾಗಿದೆ. ಎನ್‍ಕೌಂಟರ್‍ನಲ್ಲಿ ನನನ್ನು ಕೊಲ್ಲಬಹುದೆಂದು ಇಬ್ಬರು ಉನ್ನತ ಪೊಲೀಸ್ ಅಧಿಕಾರಿಗಳು ಮಾತನಾಡುತ್ತಿರುವುದರ ಬಗ್ಗೆ ನಾನು ಡಿಜಿಪಿ, ಗೃಹ ಸಚಿವರಿಗೆ ದೂರು ನೀಡುವುದಾಗಿ ತಿಳಿಸಿದ್ದಾರೆ.

    ಫೆಬ್ರವರಿ 18 ರಂದು ಈ ವಿಡಿಯೋ ವೈರಲ್ ಆಗಿತ್ತು. ಜಿಗ್ನೇಶ್‍ರವರು ಅಹ್ಮದಾಬಾದ್ ಬಾಂಧವನ್ನು ಪ್ರಾರಂಭಿಸುವ ಮೊದಲು ಇವರು ಬಂಧನಕ್ಕೊಳಗಾದ ಕಾರಣ ಮೇವಾನಿ ಪೊಲೀಸರು ಇಗೇ ಮಾತನಾಡಿದ್ದಾರೆಂದು ಶಂಕಿಸಲಾಗಿದೆ.

     

  • ಮೋದಿಗೆ ಯಾರಾದ್ರೂ ‘ಐ ಲವ್ ಯು’ ಅಂತಾ ಹೇಳಿದ್ರಾ?: ಜಿಗ್ನೇಶ್ ಮೇವಾನಿ ಪ್ರಶ್ನೆ

    ಮೋದಿಗೆ ಯಾರಾದ್ರೂ ‘ಐ ಲವ್ ಯು’ ಅಂತಾ ಹೇಳಿದ್ರಾ?: ಜಿಗ್ನೇಶ್ ಮೇವಾನಿ ಪ್ರಶ್ನೆ

    ನವದೆಹಲಿ: ಫೆಬ್ರವರಿ 14 ಪ್ರೇಮಿಗಳ ದಿನದಂದು ಪ್ರಧಾನಿ ಮೋದಿಗೆ ಯಾರಾದ್ರೂ ‘ಐ ಲವ್ ಯು’ ಅಂತಾ ಹೇಳಿದ್ರಾ ಎಂದು ಗುಜರಾತ್ ಶಾಸಕ, ದಲಿತ ಮುಖಂಡ ಜಗ್ನೇಶ್ ಮೇವಾನಿ ಪ್ರಶ್ನೆ ಮಾಡಿ ಟ್ವೀಟ್ ಮಾಡಿದ್ದಾರೆ.

    ನಮಗೆ ತುಂಬಾ ಜನ ‘ಐ ಲವ್ ಯು’ ಅಂತಾ ಹೇಳಿದ್ದಾರೆ. ಆದ್ರೆ ಮೋದಿ ಅವರಿಗೆ ಇದೂವರೆಗೂ ಯಾರಾದ್ರೂ ‘ಐ ಲವ್ ಯು’ ಎಂದು ಹೇಳಿದ್ದಾರಾ? ನನಗೇನೋ ಅನುಮಾನ. ಈ ಬಗ್ಗೆ ಏನು ಹೇಳ್ತೀರಾ? ಪ್ರೇಮಿಗಳ ದಿನದ ಶುಭಾಶಯ ಅಂತಾ ಜಗ್ನೇಶ್ ಮೇವಾನಿ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಪ್ರೇಮಿಗಳ ದಿನಕ್ಕೆ ವಿರೋಧ ವ್ಯಕ್ತಪಡಿಸುವ ಆರ್‍ಎಸ್‍ಎಸ್ ಬಗ್ಗೆ ಜಿಗ್ನೇಶ್ ಮೇವಾನಿ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

    ಇನ್ನೊಂದು ಟ್ವೀಟ್ ನಲ್ಲಿ ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಕಣ್ ಸನ್ನೆಯ ವಿಡಿಯೋ ಹಾಕಿ ಪ್ರೇಮಿಗಳ ದಿನಕ್ಕೆ ಶುಭ ಕೋರಿದ್ದಾರೆ. ಪ್ರೇಮಿಗಳ ದಿನವನ್ನು ವಿರೋಧಿಸುವ ಸಂಘ ಪರಿವಾರಕ್ಕೆ ಮಾಣಿಕ್ಯ ಮಲರಾಯ ಪೂವಿ ಹಾಡು ತಕ್ಕ ಉತ್ತರ. ಹಾಗೂ ಭಾರತೀಯರು ಪ್ರೀತಿಯನ್ನು ಎಷ್ಟು ಇಷ್ಟಪಡುತ್ತಾರೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಈ ಸುಂದರ ವಿಡಿಯೋವನ್ನು ನೋಡಿ ಆನಂದಿಸಿ ಅಂತಾ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಪ್ರಿಯಾ ಕಣ್ ಸನ್ನೆಗೆ ಸೋತ ರೋಶನ್ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ

    ಪ್ರೇಮಿಗಳ ದಿನದಂದು ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳುವ ಜೋಡಿಗಳಿಗೆ ಸಂಘ ಪರಿವಾರದ ಸದಸ್ಯರು ಸ್ಥಳದಲ್ಲಿಯೇ ಮದುವೆ ಮಾಡಿಸಲಾಗುವುದು ಎಂದು ಬೆದರಿಕೆ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಜಿಗ್ನೇಶ್ ಮೇವಾನಿ ಮಲಯಾಳಂನ ‘ಒರು ಆಡಾರ್ ಲವ್’ ಚಿತ್ರದ ವೈರಲ್ ವಿಡಿಯೋ ಹಾಕಿಕೊಂಡು ಟ್ವೀಟ್ ಮಾಡುವ ಮೂಲಕ ಆರ್‍ಎಸ್‍ಎಸ್‍ಗೆ ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಕಣ್ಸನ್ನೆ ಚೆಲುವೆಗೆ ಪ್ರೇಮಿಗಳ ದಿನದಂದೇ ಸಂಕಷ್ಟ – ಪ್ರಿಯಾ ವಾರಿಯರ್ ಹಾಡಿನ ವಿರುದ್ಧ ಕೇಸ್

    ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ತಮ್ಮ ಎಕ್ಸ್ ಪ್ರೆಷನ್‍ನಿಂದಲೇ ಇಂಟರ್ ನ್ಯಾಷನಲ್ ಸೆನ್ಸೇಷನ್ ಸೃಷ್ಟಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೇ ಇಡೀ ವಿಶ್ವಾದ್ಯಂತ ಪ್ರಸಿದ್ಧರಾಗಿದ್ದಾರೆ. ಇದನ್ನೂ ಓದಿ: ಜಸ್ಟ್ 1 ವಿಡಿಯೋದಲ್ಲೇ ಇಂಟರ್ ನ್ಯಾಷನಲ್ ಸೆನ್ಸೇಷನ್! – ಕಣ್ಣೋಟದಿಂದಲೇ ಹುಡುಗರ ಮನಗೆದ್ದ ನಟಿ!

  • ಬಿಜೆಪಿ ವಿರುದ್ಧದ ನನ್ನ ಹೋರಾಟ ನಿರಂತರ: ಜಿಗ್ನೇಶ್ ಮೇವಾನಿ

    ಬಿಜೆಪಿ ವಿರುದ್ಧದ ನನ್ನ ಹೋರಾಟ ನಿರಂತರ: ಜಿಗ್ನೇಶ್ ಮೇವಾನಿ

    ಚಿಕ್ಕಮಗಳೂರು: 2018ರ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ವಿರುದ್ಧ ನನ್ನ ಹೋರಾಟವನ್ನು ಮುಂದುವರೆಸುತ್ತೇನೆಂದು ದಲಿತರ ಪರ ಹೋರಾಟಗಾರ, ಗುಜರಾತ್ ಈ ಬಾರಿ ಆಯ್ಕೆಯಾದ ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ ತಿಳಿಸಿದ್ದಾರೆ.

    ಚಿಕ್ಕಮಗಳೂರಿನ ಕೋಮು ಸೌಹಾರ್ದ ವೇದಿಕೆಯ 15ನೇ ವರ್ಷದ ನೆನಪಿನ ಕಾರ್ಯಕ್ರಮಕ್ಕೆ ಆಗಮಿಸಿ ಮಾತನಾಡಿದ ಅವರು, ನಾನು ಯಾವುದೇ ಪಕ್ಷದ ಪರವಾಗಿ ಕೆಲಸ ಮಾಡುವುದಿಲ್ಲ, ನನ್ನ ಹೋರಾಟ ದಲಿತ ಹಾಗೂ ಕೆಳಹಂತದ ಜನರ ಪರವಾಗಿರುತ್ತದೆ. ಕರ್ನಾಟಕದಲ್ಲಿ ನನಗೆ ಗೌರಿಲಂಕೇಶ್ ಸೇರಿದಂತೆ ಬಹಳಷ್ಟು ಹೋರಾಟಗಾರರ ಪರಿಚಯವಿತ್ತು, ನಮ್ಮ ಹೋರಾಟ ದಬ್ಬಾಳಿಕೆ ಹಾಗೂ ಕೋಮುವಾದ ಮಾಡುತ್ತಿರುವವರ ವಿರುದ್ಧವಾಗಿ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಕರ್ನಾಟಕಕ್ಕೆ ಹಲವು ಬಾರಿ ಭೇಟಿ ನೀಡಿದ್ದೇನೆ. ಕರ್ನಾಟಕ ಹಾಗೂ ಕೇರಳಲ್ಲಿರುವವರು ನನಗೆ ಹಲವು ಜವಾಬ್ದಾರಿಗಳನ್ನು ನೀಡಿದ್ದಾರೆ. ಇಂದು ನಾವು ಇಲ್ಲಿ ಕೋಮು ಸೌಹಾರ್ದ ಕುರಿತು ಜಾಗೃತಿ ಮೂಡಿಸಲು ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಹಾಗೆಯೇ 2018ರ ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲೂ ಚರ್ಚೆ ನಡೆಸಲಾಗಿದೆ. ಗುಜರಾತ್ ನಲ್ಲಿರುವ ನನ್ನ ಸ್ವಕ್ಷೇತ್ರದಲ್ಲೂ ಹಲವು ಹಿಂದುಳಿದ ಹಾಗೂ ಮುಸ್ಲಿಂ ಸಮುದಾಯಗಳು ನಮಗೆ ಬೆಂಬಲ ನೀಡಿದ್ದವು. ಅದೇ ರೀತಿ ಕರ್ನಾಟಕದಲ್ಲೂ ಬಿಜೆಪಿ ವಿರುದ್ಧ ಪ್ರಚಾರ ನಡೆಸುತ್ತೇನೆ. ಆದರೆ ಯಾವ ಪಕ್ಷ ಪರ ಸಹ ಚುನಾವಣಾ ಪ್ರಚಾರ ಕೈಗೊಳ್ಳುವುದಿಲ್ಲ. ಕೋಮುವಾದಿ ಶಕ್ತಿಗಳ ವಿರುದ್ಧ ಸ್ವತಂತ್ರವಾಗಿ ಸ್ಪರ್ಧೆ ನಡೆಸುವವರ ಪರ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.

    ಇದೇ ವೇಳೆ ಕೇಂದ್ರ ಸಚಿವ ಅನಂತಕುಮಾರ್ ಸಂವಿಧಾನ ವಿರೋಧಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಸಂಘ ಪರಿವಾರ ಹಾಗೂ ಬಿಜೆಪಿಯವರಿಗೆ ಮಧ್ಯವರ್ತಿ ರೀತಿಯಲ್ಲಿ ಕೋಮುವಾದ ಸೃಷ್ಟಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಬಿಜೆಪಿಯವರೂ ಕೂಡಾ ಇದೇ ಕೆಲಸದಲ್ಲಿ ತೊಡಗಿದ್ದಾರೆ. ನಾವು ಕರ್ನಾಟಕದಲ್ಲಿ ಸಮಾನತೆ, ಸಹಬಾಳ್ವೆಗಾಗಿ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.

  • ಚಿಕ್ಕಮಗಳೂರಿಗೆ ಇಂದು ಜಿಗ್ನೇಶ್ ಮೇವಾನಿ ಆಗಮನ- ಮೋದಿ ಕರ್ನಾಟಕ ಕನಸಿಗೆ ಆಗುತ್ತಾ ಅಡ್ಡಿ?

    ಚಿಕ್ಕಮಗಳೂರಿಗೆ ಇಂದು ಜಿಗ್ನೇಶ್ ಮೇವಾನಿ ಆಗಮನ- ಮೋದಿ ಕರ್ನಾಟಕ ಕನಸಿಗೆ ಆಗುತ್ತಾ ಅಡ್ಡಿ?

    ಚಿಕ್ಕಮಗಳೂರು: ಕಾಂಗ್ರೆಸ್ ಮುಕ್ತ ದೇಶ ನಿರ್ಮಿಸೋ ಬಿಜೆಪಿ ನಾಯಕರಿಗೆ ಗುಜರಾತ್ ದಲಿತ ನಾಯಕ ಜಿಗ್ನೇಶ್ ಮೇವಾನಿ ಅಡ್ಡಿಯಾಗ್ತಿದ್ದಾರಾ ಅನ್ನೋ ಪ್ರಶ್ನೆ ಬಿಜೆಪಿ ವಲಯದಲ್ಲಿ ಎದ್ದಿದೆ. ಯಾಕಂದ್ರೆ ಮೋದಿಯ ನಾಗಾಲೋಟಕ್ಕೆ ಗುಜರಾತ್‍ನಲ್ಲಿ ಕೊಂಚ ಮಟ್ಟಿಗೆ ತಡೆಯೊಡ್ಡಿರೋ ಜಿಗ್ನೇಶ್ ಮೇವಾನಿ ಇದೀಗ ಕರ್ನಾಟಕಕ್ಕೆ ಬರ್ತಿದ್ದಾರೆ.

    ಗುಜರಾತ್ ಬಳಿಕ ಕರ್ನಾಟಕದ ಮೇಲೆ ಕಣ್ಣು ನೆಟ್ಟಿರೋ ಬಿಜೆಪಿ ನಾಯಕರಿಗೆ ಮೇವಾನಿ ಕೊಂಚ ತಲೆ ಬಿಸಿ ಮಾಡಿದ್ದಾರೆ ಎನ್ನಲಾಗ್ತಿದೆ. ಇದೀಗ ಕೋಮು ಸೌಹಾರ್ದ ವೇದಿಕೆಗೆ 15 ವರ್ಷ ತುಂಬಿರೋ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿಗೆ ಜಿಗ್ನೇಶ್ ಇವತ್ತು ಬರ್ತಿದ್ದಾರೆ.

    ಈ ವೇಳೆ, ಬಡವರು, ದಲಿತರು, ಹಿಂದುಳಿದ ವರ್ಗಗಳ ಪರ ಜಿಗ್ನೇಶ್ ವೀರಾವೇಶದ ಭಾಷಣ ಮಾಡಲಿದ್ದಾರೆ. ಈ ಮೂಲಕ ಪ್ರಧಾನಿ ರಾಜ್ಯದಲ್ಲೇ ಗೆದ್ದ ಮೇವಾನಿಯ ಭಾಷಣದಿಂದ ಮತ್ತೊಮ್ಮೆ ಕರ್ನಾಟಕದಲ್ಲೂ ಮೋದಿಯ ನಿಲುವಿಗೆ ಮುಖಭಂಗವಾಗುತ್ತಾ ಅನ್ನೋದು ರಾಜಕೀಯ ಪಂಡಿತರ ಲೆಕ್ಕಾಚಾರವಾಗಿದೆ.

  • ಕರ್ನಾಟಕದಲ್ಲೂ ಜಿಗ್ನೇಶ್ ಮೆವಾನಿ ಪ್ರಚಾರ – ದಲಿತ ಮತಗಳ ಕ್ರೂಢೀಕರಣಕ್ಕೆ `ಕೈ’ ಅಸ್ತ್ರ

    ಕರ್ನಾಟಕದಲ್ಲೂ ಜಿಗ್ನೇಶ್ ಮೆವಾನಿ ಪ್ರಚಾರ – ದಲಿತ ಮತಗಳ ಕ್ರೂಢೀಕರಣಕ್ಕೆ `ಕೈ’ ಅಸ್ತ್ರ

    ಬೆಂಗಳೂರು: ಗುಜರಾತ್ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಗೆಲುವಿನ ನಗೆ ಬೀರಿದ ವಡಗಾಂವ್ ಕ್ಷೇತ್ರದ ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ ಶೀಘ್ರದಲ್ಲೇ ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ.

    ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಾ, ರಾಜ್ಯಕ್ಕೂ ಬರುತ್ತೇನೆ. ಕರ್ನಾಟಕದಲ್ಲೇ ಕ್ಯಾಂಪೈನ್ ಮಾಡ್ತೇನೆ ಅಂತ ರಣಕಹಳೆ ಊದಿದ್ದಾರೆ.

    ಕರ್ನಾಟಕದಲ್ಲಿ ಬಿಜೆಪಿಯನ್ನು ಸೋಲಿಸಲೇಬೇಕು. ಶೀಘ್ರ ಕರ್ನಾಟಕಕ್ಕೆ ಬರುತ್ತೇನೆ. ಅಲ್ಲೇ ಹೋರಾಟ ಮಾಡ್ತೀನಿ. ಈಗ ಹಿರಿಯ ಪತ್ರಕರ್ತೆ ಗೌರಿ ಇದ್ದಿದ್ದರೆ ಅವರು ಹೆಚ್ಚು ಖುಷಿ ಪಡ್ತಿದ್ರು. ಅಲ್ಲದೇ ನನಗೆ ವಿಮಾನ ಟಿಕೆಟ್ ಬುಕ್ ಮಾಡಿ ಕರ್ನಾಟಕಕ್ಕೆ ಕರೆಸಿಕೊಳ್ಳುತ್ತಿದ್ದರು. ಅವರು ಬೆಂಗಳೂರಿನಲ್ಲಿ ಒಂದು ಕಾರ್ಯಕ್ರಮ ಕೂಡ ಮಾಡ್ತಿದ್ರು ಅಂತ ಹೇಳಿದ್ರು. ಇದನ್ನೂ ಓದಿ: ಮೊದಲ ಪ್ರಯತ್ನದಲ್ಲಿ ಬಿಜೆಪಿಗೆ ಸೋಲುಣಿಸಿದ ಅಲ್ಪೇಶ್ ಠಾಕೂರ್, ಜಿಗ್ನೇಶ್ ಮೇವಾನಿ

    ಫೆಬ್ರವರಿಯಿಂದ ರಾಜ್ಯದ ದಲಿತ ಬಾಹುಳ್ಯ ಕ್ಷೇತ್ರಗಳಲ್ಲಿ ಮೇವಾನಿ ಸಂಚಾರ ಮಾಡಲಿದ್ದು, ಸಿಎಂ ಸಿದ್ದರಾಮಯ್ಯ ಅವರ ಜೊತೆ ರಾಜ್ಯ ಪ್ರವಾಸವನ್ನು ಮಾಡಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಗುಜರಾತ್‍ನಲ್ಲಿ ಕಾಂಗ್ರೆಸ್ ಗೆದ್ದಿದ್ದೆಲ್ಲಿ? ಬಿಜೆಪಿ ಸೋತಿದ್ದೆಲ್ಲಿ?

    ವಡಂಗಾವ್ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲದೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿದ್ದ ಜಿಗ್ನೇಶ್ ಮೇವಾನಿ, ಬಿಜೆಪಿ ಅಭ್ಯರ್ಥಿ ವಿರುದ್ಧ 19,696 ಮತಗಳ ಅಂತರದಿಂದ ಜಯ ಗಳಿಸಿದ್ದರು. ಫಲಿತಾಂಶದಲ್ಲಿ ಜಿಗ್ನೇಶ್ 95,497 ಮತಗಳನ್ನು ಪಡೆದ್ರೆ, ಬಿಜೆಪಿಯ ಚಕ್ರವರ್ತಿ ವಿಜಯ್ ಕುಮಾರ್ ಹರ್ಖಾಭಾಯ್ ಅವರು 75,801 ಮತಗಳನ್ನು ಪಡೆದಿದ್ದರು. ಇದನ್ನೂ ಓದಿ: ಗುಜರಾತ್‍ನಲ್ಲಿ ಬಿಜೆಪಿ ಗೆದ್ದಿದ್ದೆಲ್ಲಿ? ಕಾಂಗ್ರೆಸ್ ಸೋತಿದ್ದೆಲ್ಲಿ?

  • ಮೊದಲ ಪ್ರಯತ್ನದಲ್ಲಿ ಬಿಜೆಪಿಗೆ ಸೋಲುಣಿಸಿದ ಅಲ್ಪೇಶ್ ಠಾಕೂರ್, ಜಿಗ್ನೇಶ್ ಮೇವಾನಿ

    ಮೊದಲ ಪ್ರಯತ್ನದಲ್ಲಿ ಬಿಜೆಪಿಗೆ ಸೋಲುಣಿಸಿದ ಅಲ್ಪೇಶ್ ಠಾಕೂರ್, ಜಿಗ್ನೇಶ್ ಮೇವಾನಿ

    ಗಾಂಧಿನಗರ: ಗುಜರಾತ್ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಸ್ಪರ್ಧಿಸಿದ್ದ ಯುವ ನಾಯಕರಾದ ಅಲ್ಪೇಶ್ ಠಾಕೂರ್ ಮತ್ತು ಜಿಗ್ನೇಶ್ ಮೇವಾನಿ ಜಯಗಳಿಸಿದ್ದಾರೆ.

    ರಾಧನ್ ಪುರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್‍ನ ಅಲ್ಪೇಶ್ ಠಾಕೂರ್ ಮತ್ತು ವಡಗಾಮ್ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲದೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜಿಗ್ನೇಶ್ ಮೇವಾನಿ ಅವರು ನಿರೀಕ್ಷೆಗೂ ಮೀರಿ ಅಭೂತಪೂರ್ವ ಜಯವನ್ನು ತಮ್ಮದಾಗಿಸಿಕೊಂಡಿದ್ದಾರೆ.

    ಜಿಗ್ನೇಶ್ ಮೇವಾನಿ ಅವರು ಬಿಜೆಪಿ ಅಭ್ಯರ್ಥಿ ವಿರುದ್ಧ 19,696 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಜಿಗ್ನೇಶ್ ಮೇವಾನಿ 95,497 ಮತಗಳನ್ನು ಪಡೆದರೆ, ಬಿಜೆಪಿಯ ಚಕ್ರವರ್ತಿ ವಿಜಯ್ ಕುಮಾರ್ ಹರ್ಖಾಭಾಯ್ ಅವರು 75,801 ಮತಗಳನ್ನು ಪಡೆದಿದ್ದಾರೆ.

    ಮೋದಿ ತೈವಾನ್ ಹಣಬೆ ತಿಂದು ಬೆಳ್ಳಗಾಗಿದ್ದಾರೆ ಅಂತ ಹೇಳಿಕೆ ಕೋಡೋ ಮೂಲಕ ಸುದ್ದಿಯಾಗಿದ್ದ ಅಲ್ಪೇಶ್ ಅವರು ರಾಧನ್ ಪುರ್ ಕ್ಷೇತ್ರದಲ್ಲಿ 14,857 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಅಲ್ಪೇಶ್ ಠಾಕೂರ್ 85,777 ಮತ ಹಾಗೂ ಬಿಜೆಪಿಯ ಸೋಲಂಕಿ ಲಾವಿಂಗ್ಜಿ ಮುಲ್ವಿಜಿ ಠಾಕೂರ್ ಅವರು ಅವರನ್ನು 70,920 ಮತಗಳನ್ನು ಪಡೆದಿದ್ದಾರೆ.