Tag: Jigani

  • ಬರ್ತ್‌ಡೇ ಆಚರಿಸಲು ಬಂದ ಸ್ನೇಹಿತರಿಂದ್ಲೇ ಡೆತ್ ಡೇ – ಪಾರ್ಟಿಯ ಬಿಲ್ ಕಟ್ಟೋ ವಿಚಾರಕ್ಕೆ ಗಲಾಟೆ, ಕೊಲೆಯಲ್ಲಿ ಅಂತ್ಯ

    ಬರ್ತ್‌ಡೇ ಆಚರಿಸಲು ಬಂದ ಸ್ನೇಹಿತರಿಂದ್ಲೇ ಡೆತ್ ಡೇ – ಪಾರ್ಟಿಯ ಬಿಲ್ ಕಟ್ಟೋ ವಿಚಾರಕ್ಕೆ ಗಲಾಟೆ, ಕೊಲೆಯಲ್ಲಿ ಅಂತ್ಯ

    ಆನೇಕಲ್: ಬರ್ತ್‌ಡೇ ಆಚರಿಸೋಕೆ ಬಂದ ದಿನವೇ ಪಾರ್ಟಿಯ ಬಿಲ್ ಕಟ್ಟುವ ವಿಚಾರಕ್ಕೆ ಗಲಾಟೆ ನಡೆದು, ಅದೇ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಬೆಂಗಳೂರು (Bengaluru) ಹೊರವಲಯ ಜಿಗಣಿ (Jigani) ಪೊಲೀಸ್ ಠಾಣಾ ವ್ಯಾಪ್ತಿಯ ವಡ್ಡರಪಾಳ್ಯದಲ್ಲಿ ನಡೆದಿದೆ.

    ಅ.16ರಂದು ಸಂದೀಪ್‌ನ ಬರ್ತಡೇ ಇತ್ತು. ಆ ದಿನ ಸ್ನೇಹಿತರ ಜೊತೆ ಪಾರ್ಟಿ ಮಾಡಲು ಕುಂಬಾರನಹಳ್ಳಿ ಸಮೀಪದ ಬಾರ್ ಅಂಡ್ ರೆಸ್ಟೋರೆಂಟ್‌ಗೆ ಹೋಗಿದ್ದರು. ಅಲ್ಲಿ ಕೇಕ್ ಕಟ್ ಮಾಡಿ, ಬಳಿಕ ಸ್ನೇಹಿತರೆಲ್ಲ ಸೇರಿಕೊಂಡು ಎಣ್ಣೆ ಪಾರ್ಟಿ ಮಾಡಿ ಕಂಠಪೂರ್ತಿ ಕುಡಿದಿದ್ದರು. ಕೊನೆಯಲ್ಲಿ ಬಿಲ್ ಕಟ್ಟುವಾಗ ಸಂದೀಪ್ ನನ್ನ ಬಳಿ ಅಷ್ಟೊಂದು ಹಣ ಇಲ್ಲ ಎಂದಿದ್ದ. ಆಗ ಸಂದೀಪ್ ಮತ್ತು ಸಂತೋಷ್ ನಡುವೆ ಗಲಾಟೆ ಆಗಿದೆ. ಇದನ್ನೂ ಓದಿ: ಟೋಲ್ ಸಿಬ್ಬಂದಿ ಮೇಲೆ ಪುತ್ರನಿಂದ ಹಲ್ಲೆ – ನನ್ನ ಮಗನ ತಪ್ಪಿದ್ದರೆ ಕ್ಷಮೆ ಕೇಳಿಸ್ತೀನಿ: ವಿಜೂಗೌಡ ಪಾಟೀಲ್‌

    ಅಲ್ಲಿದ್ದ ಉಳಿದ ಸ್ನೇಹಿತರು ಜಗಳ ಬಿಡಿಸಿ ಇಬ್ಬರನ್ನು ಕಳುಹಿಸಿದ್ದರು. ಆದರೆ ಮನೆಗೆ ಹೋಗದ ಸಂದೀಪ್ ಅಲ್ಲಿಂದ ಊರಿನ ಬಳಿಯಿರುವ ವಾಲಿಬಾಲ್ ಕೋರ್ಟ್‌ಗೆ ಎಣ್ಣೆ ಹಾಕೋಕೆ ಹೋಗಿದ್ದ. ವಿಚಾರ ತಿಳಿದ ಸಂತೋಷ್ ಮತ್ತು ಸಾಗರ್ ಅಲ್ಲಿಗೆ ಎಂಟ್ರಿ ಕೊಟ್ಟು ಏಕಾಏಕಿ ಸಂದೀಪ್ ಮೇಲೆ ಹಲ್ಲೆ ನಡೆಸಿದ್ದರು. ಆಗ ಸಂದೀಪ್ ಅಲ್ಲಿಂದ ಜಿಗಣಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿ, ಮನೆಗೆ ಬಂದಿದ್ದ.

    ಗಲಾಟೆಯ ಬಳಿಕ ಮನೆಯಲ್ಲಿದ್ದ ಸಂದೀಪ್‌ಗೆ ವಾಂತಿ, ತಲೆನೋವು ಶುರುವಾಗಿದೆ. ತಲೆಯೊಳಗೆ ರಕ್ತ ಹೆಪ್ಪುಗಟ್ಟಿ ಮೆದುಳಿಗೆ ಪೆಟ್ಟು ಬಿದ್ದಿತ್ತು. ಹತ್ತಿರದ ಕ್ಲಿನಿಕ್‌ಗೆ ಹೋಗಿ ಇಂಜೆಕ್ಷನ್ ತೆಗೆದುಕೊಂಡು ಬಂದು ಮನೆಯಲ್ಲಿ ಮಲಗಿದ್ದ. ಮತ್ತೆ ಒಂದು ದಿನದ ಬಳಿಕ ಅದೇ ರೀತಿ ತಲೆನೋವು, ವಾಂತಿ ಶುರುವಾಯ್ತು. ಬಳಿಕ ಖಾಸಗಿ ಆಸ್ಪತ್ರೆಗೆ ಬಂದಿದ್ದ ಸಂದೀಪ್‌ಗೆ ಚಿಕಿತ್ಸೆ ನೀಡಿದ ವೈದ್ಯರು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಸೆಂಟ್ ಜಾನ್ ಆಸ್ಪತ್ರೆಗೆ ಕಳುಹಿಸಿದ್ದರು.

    ಅಲ್ಲಿನ ವೈದ್ಯರು ಪರೀಕ್ಷೆ ನಡೆಸಿದಾಗ ಸಂದೀಪ್ ತಲೆಗೆ ಗಂಭೀರ ಗಾಯವಾಗಿರೋದು ತಿಳಿದಿದೆ. ಅಲ್ಲಿಂದ ಮಡಿವಾಳದ ಕಾವೇರಿ ಆಸ್ಪತ್ರೆಗೆ ಶಿಫ್ಟ್ ಮಾಡಿ, ಚಿಕಿತ್ಸೆ ನೀಡಲಾಗುತ್ತಿತ್ತು. ಸಂಪೂರ್ಣ ಪ್ರಜ್ಞೆ ಕಳೆದುಕೊಂಡು ಕೋಮಾಗೆ ತಲುಪಿದ ಸಂದೀಪ್ ಚಿಕಿತ್ಸೆ ಫಲಕಾರಿಯಾಗದೇ ಅ.28ರಂದು ಸಾವನ್ನಪ್ಪಿದ್ದಾನೆ.

    ಮಗನ ಸಾವಿನ ವಿಷಯ ತಿಳಿದು ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಸೂಕ್ತ ತನಿಖೆ ನಡೆಸಿ ಸಾವಿಗೆ ಕಾರಣರಾದವರ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ. ಈ ಕುರಿತು ಮೃತ ಸಂದೀಪ್ ತಂದೆ ಜಿಗಣಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಾದ ಸಂತೋಷ್ ಮತ್ತು ಸಾಗರ್ ಇಬ್ಬರನ್ನು ಬಂಧಿಸಿ, ಪರಪ್ಪನ ಅಗ್ರಹಾರ ಜೈಲಿಗಟ್ಟಿದ್ದಾರೆ.ಇದನ್ನೂ ಓದಿ: Mumbai Hostage | 17 ಮಕ್ಕಳನ್ನ ಒತ್ತೆಯಾಳಾಗಿ ಇರಿಸಿಕೊಂಡಿದ್ದ ಆರೋಪಿ ಪೊಲೀಸರ ಗುಂಡಿಗೆ ಬಲಿ

  • ಬ್ರೇಕ್ ಫೇಲ್ ಆಗಿ ರಸ್ತೆಬದಿ ಕಂದಕಕ್ಕೆ ನುಗ್ಗಿದ ಬಿಎಂಟಿಸಿ ಬಸ್

    ಬ್ರೇಕ್ ಫೇಲ್ ಆಗಿ ರಸ್ತೆಬದಿ ಕಂದಕಕ್ಕೆ ನುಗ್ಗಿದ ಬಿಎಂಟಿಸಿ ಬಸ್

    ಆನೇಕಲ್: ಬ್ರೇಕ್ ಫೇಲ್ (Brake Failure) ಆಗಿ ರಸೆಲ್ಬದಿಯ ಕಂದಕಕ್ಕೆ ಬಿಎಂಟಿಸಿ (BMTC) ಬಸ್ ನುಗ್ಗಿದ ಘಟನೆ ಬೆಂಗಳೂರು ಹೊರವಲಯ ಜಿಗಣಿ (Jigani) ಸಮೀಪದ ಹರಪ್ಪನಹಳ್ಳಿ ಬಳಿ ನಡೆದಿದೆ.

    ಪ್ರಯಾಣಿಕರಿದ್ದ ಬಸ್ ಚಲಿಸುತ್ತಿರುವಾಗಲೇ ಏಕಾಏಕಿ ಬ್ರೇಕ್ ಫೇಲ್ ಆಗಿದೆ. ಬ್ರೇಕ್ ಫೇಲ್ ಆದ ಪರಿಣಾಮ ಬಸ್ ನಿಯಂತ್ರಣಕ್ಕೆ ಸಿಗದೆ ರಸ್ತೆ ಬದಿಯ ಕಂದಕಕ್ಕೆ ನುಗ್ಗಿದೆ. ಘಟನೆಯಲ್ಲಿ ಪ್ರಯಾಣಿಕರು ಸೇಫ್ ಆಗಿದ್ದು, ಯಾವುದೇ ಸಾವು-ನೋವು ಸಂಭವಿಸಿಲ್ಲ. ಇದನ್ನೂ ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ಪತ್ನಿ ಶವ ಪತ್ತೆ – ಪತಿ ವಿರುದ್ಧ ಕೊಲೆ ಆರೋಪ

    ಜಿಗಣಿ ಡಿಪೋಗೆ ಸೇರಿದ ಬಿಎಂಟಿಸಿ ಬಸ್ ಇದಾಗಿದ್ದು, ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: 7 ದಿನಗಳಲ್ಲಿ ಅಫಿಡವಿಟ್‌ ಸಲ್ಲಿಸಿ ಇಲ್ಲವೇ ದೇಶದ ಕ್ಷಮೆ ಕೇಳಿ: ರಾಹುಲ್‌ಗೆ ಚುನಾವಣಾ ಆಯೋಗ ಡೆಡ್‌ಲೈನ್‌

  • ಶಾಲಾ ವಾಹನ ಏರಲು ರಸ್ತೆಗೆ ಓಡಿದ ಬಾಲಕನಿಗೆ ಬಿಎಂಟಿಸಿ ಬಸ್ ಡಿಕ್ಕಿ – ವಿದ್ಯಾರ್ಥಿ ಸ್ಥಿತಿ ಗಂಭೀರ

    ಶಾಲಾ ವಾಹನ ಏರಲು ರಸ್ತೆಗೆ ಓಡಿದ ಬಾಲಕನಿಗೆ ಬಿಎಂಟಿಸಿ ಬಸ್ ಡಿಕ್ಕಿ – ವಿದ್ಯಾರ್ಥಿ ಸ್ಥಿತಿ ಗಂಭೀರ

    ಬೆಂಗಳೂರು: ಶಾಲಾ ವಾಹನ ಏರಲು ರಸ್ತೆಗೆ ಓಡಿದ ಬಾಲಕನಿಗೆ ಬಿಎಂಟಿಸಿ ಬಸ್ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡ ಘಟನೆ ಜಿಗಣಿಯಲ್ಲಿ ನಡೆದಿದೆ.

    ರಸ್ತೆಯ ಇನ್ನೊಂದು ಬದಿ ಇದ್ದ ಶಾಲಾ ವಾಹನ ಏರಲು ಬಾಲಕ ರಸ್ತೆ ದಾಟಲು ಮುಂದಾಗಿದ್ದಾನೆ. ಈ ವೇಳೆ ವೇಗವಾಗಿ ಬಂದ ಬಿಎಂಟಿಸಿ ಬಸ್ ಆತನಿಗೆ ಡಿಕ್ಕಿಯಾಗಿದೆ. ಇದರಿಂದ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಇದನ್ನೂ ಓದಿ: ದೆಹಲಿಯಲ್ಲಿ ಡಬಲ್ ಮರ್ಡರ್ – ಮನೆ ಕೆಲಸದವನಿಂದಲೇ ಕೃತ್ಯ

    ಸ್ಕೂಲ್ ಬಸ್ ಚಾಲಕ, ಬಾಲಕ ಓಡಿ ಬರುತ್ತಿರುವುದನ್ನು ನೋಡಿದರೂ ಬಸ್ ನಿಲ್ಲಿಸದೇ ಮುಂದೆ ತೆರಳಿದ್ದಾನೆ. ಇದರಿಂದ ಬಾಲಕ ಆತುರದಿಂದ ರಸ್ತೆ ದಾಟಲು ಮುಂದಾಗಿದ್ದಾನೆ ಎನ್ನಲಾಗುತ್ತಿದೆ.

    ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ. ಇದನ್ನೂ ಓದಿ: ಕಾರವಾರ| ಕೊಡಸಳ್ಳಿ ವಿದ್ಯುತ್‌ಗಾರದ ಬಳಿ ಗುಡ್ಡ ಕುಸಿತ; ರಸ್ತೆ ಸಂಚಾರ ಬಂದ್

  • ಆನೇಕಲ್ | ನಿಯಂತ್ರಣ ತಪ್ಪಿ ಬೇಕರಿಗೆ ನುಗ್ಗಿದ ಬಿಎಂಟಿಸಿ ಬಸ್

    ಆನೇಕಲ್ | ನಿಯಂತ್ರಣ ತಪ್ಪಿ ಬೇಕರಿಗೆ ನುಗ್ಗಿದ ಬಿಎಂಟಿಸಿ ಬಸ್

    ಆನೇಕಲ್: ಚಾಲಕನ ನಿಯಂತ್ರಣ ತಪ್ಪಿ ಬಿಎಂಟಿಸಿ ಬಸ್‌ವೊಂದು (BMTC) ಬೇಕರಿಗೆ ನುಗ್ಗಿದ ಘಟನೆ ಬೆಂಗಳೂರು (Bengaluru) ಹೊರವಲಯದ ಆನೇಕಲ್ ತಾಲೂಕಿನ ಜಿಗಿಣಿಯಲ್ಲಿ  ನಡೆದಿದೆ.

    ಬಿಎಂಟಿಸಿ ಬಸ್ ಮುಂಜಾನೆ ಬನ್ನೇರಘಟ್ಟದಿಂದ ಜಿಗಣಿ ಕಡೆಗೆ ಬರುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬಸ್ ರಸ್ತೆ ಬದಿ ಬೇಕರಿಗೆ ನುಗ್ಗಿದೆ. ಬೆಳಗ್ಗೆ ಯಾರೂ ಗ್ರಾಹಕರಿಲ್ಲದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ. ಜೊತೆಗೆ ಬೇಕರಿ ಇನ್ನೂ ಓಪನ್ ಮಾಡದ ಹಿನ್ನೆಲೆ ಗ್ರಾಹಕರು ಇಲ್ಲದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ. ಇದನ್ನೂ ಓದಿ: ಪತ್ನಿ ಕಿರುಕುಳಕ್ಕೆ ಬೇಸತ್ತು, ವೀಡಿಯೋ ಮಾಡಿಟ್ಟು ಟೆಕ್ಕಿ ಆತ್ಮಹತ್ಯೆ

    ಇನ್ನು ಚಾಲಕ ಬಹುಶಃ ನಿದ್ದೆ ಮಂಪರಿನಲ್ಲಿ ಅಪಘಾತ ಸಂಭವಿಸಿರುವ ಸಾಧ್ಯತೆಯಿದೆ. ಸದ್ಯ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕೂಡಲೇ ಸ್ಥಳೀಯರು ಚಾಲಕನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಿದ್ದಾರೆ. ಈ ಸಂಬಂಧ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: `ಕೈ’ ಸರ್ಕಾರ ಬಂದ್ಮೇಲೆ ಜನಿವಾರ, ಶಿವದಾರ, ಉಡುದಾರಕ್ಕೂ ಕತ್ತರಿ ಬೀಳ್ತಿದೆ, ಹಿಜಬ್‌ಗೆ ಬಹುಪರಾಕ್ ನಡೀತಿದೆ: ಆರ್.ಅಶೋಕ್

  • ಕಳ್ಳತನ ಮಾಡುತ್ತಿದ್ದ ವ್ಯಕ್ತಿಯ ಕಾಲಿಗೆ ಸೆಕ್ಯೂರಿಟಿಯಿಂದ ಗುಂಡೇಟು

    ಕಳ್ಳತನ ಮಾಡುತ್ತಿದ್ದ ವ್ಯಕ್ತಿಯ ಕಾಲಿಗೆ ಸೆಕ್ಯೂರಿಟಿಯಿಂದ ಗುಂಡೇಟು

    ಆನೇಕಲ್: ಕೈಗಾರಿಕಾ ಪ್ರದೇಶದಲ್ಲಿರುವ ಕಂಪನಿಯೊಂದಕ್ಕೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಖದೀಮನ ಕಾಲಿಗೆ ಭದ್ರತಾ ಸಿಬ್ಬಂದಿ (Security) ಗುಂಡು ಹಾರಿಸಿದ (Shootout) ಘಟನೆ ಆನೇಕಲ್ ಜಿಗಣಿಯಲ್ಲಿ (Jigani) ನಡೆದಿದೆ.

    ಗಂಗಾಧರ್ ಗುಂಡೇಟು ತಿಂದ ಕಳ್ಳನಾಗಿದ್ದು ಸದ್ಯ ಆಸ್ಪತ್ರೆಯಲ್ಲಿ (Hospital) ಚಿಕಿತ್ಸೆ ಪಡೆಯುತ್ತಿದ್ದಾನೆ. ಕೈಗಾರಿಕಾ ಪ್ರದೇಶದಲ್ಲಿರುವ ಸದರನ್ ಬ್ಯಾಟರಿ ಕಂಪನಿ ಸದ್ಯ ಯಾವುದೇ ಚಟುವಟಿಕೆಗಳು ಇಲ್ಲದ ಕಾರಣ ತನ್ನ ಘಟಕವನ್ನು ಬಂದ್‌ ಮಾಡಿತ್ತು. ಇದನ್ನೇ ಬಂಡವಾಳವಾಗಿ ಮಾಡಿಕೊಂಡಿದ್ದ ಖದೀಮರು ಸಣ್ಣ ಪುಟ್ಟ ವಸ್ತುಗಳನ್ನು ಕದಿಯುತ್ತಲೇ ಇದ್ದರು. ವಸ್ತುಗಳು ನಾಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಂಪನಿ ಓರ್ವ ಭದ್ರತಾ ಸಿಬ್ಬಂದಿ ಮತ್ತು ಓರ್ವ ಗನ್ ಮ್ಯಾನ್‌ ನಿಯೋಜಿಸಿತ್ತು.

     

    ಬುಧವಾರ ನಸುಕಿನ ಜಾವ 2:30ರ ವೇಳೆಗೆ ತಾಮ್ರದ ವಸ್ತುಗಳನ್ನು ಗಂಗಾಧರ್‌ ಕಳ್ಳತನ ಮಾಡುತ್ತಿದ್ದ. ಈ ವಿಚಾರ ಗೊತ್ತಾಗುತ್ತಿದ್ದಂತೆ ಸಿಬ್ಬಂದಿ ಆತನನ್ನು ಹಿಡಿಯಲು ಮುಂದಾಗಿದ್ದಾರೆ. ಈ ವೇಳೆ ಸಿಬ್ಬಂದಿ ಮೇಲೆ ದಾಳಿ ನಡೆಸಿ ಪರಾರಿಯಾಗಲು ಮುಂದಾಗಿದ್ದಾನೆ. ಈ ಸಂದರ್ಭದಲ್ಲಿ ಆತ್ಮರಕ್ಷಣೆಗಾಗಿ ಗಂಗಾಧರ್‌ ಮೇಲೆ ಗನ್‌ನಿಂದ ಶೂಟ್ ಮಾಡಿದ್ದಾರೆ. ಇದನ್ನೂ ಓದಿ: MUDA Case | ಸಿದ್ದರಾಮಯ್ಯ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ – ಹೆಚ್‌ಡಿಕೆ

    ಸ್ಥಳಕ್ಕೆ ಜಿಗಣಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

  • ಜಿಗಣಿಯಲ್ಲಿ ನಾಲ್ವರು ವಿದೇಶಿ ಪ್ರಜೆಗಳು ಸೇರಿದಂತೆ ಓರ್ವ ಪಾಕ್ ಪ್ರಜೆ ಬಂಧನ

    ಜಿಗಣಿಯಲ್ಲಿ ನಾಲ್ವರು ವಿದೇಶಿ ಪ್ರಜೆಗಳು ಸೇರಿದಂತೆ ಓರ್ವ ಪಾಕ್ ಪ್ರಜೆ ಬಂಧನ

    – ಶಂಕರ್ ಶರ್ಮಾ ಎಂದು ಹೆಸರು ಬದಲಿಸಿದ್ದ

    ಆನೇಕಲ್: ನಗರದ ಹೊರವಲಯದ ಜಿಗಣಿಯಲ್ಲಿ (Jigani) ವಾಸವಿದ್ದ ನಾಲ್ವರು ವಿದೇಶಿ ಪ್ರಜೆಗಳು ಸೇರಿದಂತೆ ಓರ್ವ ಪಾಕಿಸ್ತಾನದ ಪ್ರಜೆಯನ್ನು (Pakistan Citizen) ಪೊಲೀಸರು ಬಂಧಿಸಿದ್ದಾರೆ.

    ಶಂಕರ್ ಶರ್ಮಾ ಎಂದು ಹೆಸರು ಬದಲಿಸಿಕೊಂಡಿದ್ದ ರಶೀದ್ ಅಲಿ ಸಿದ್ಧಿಕಿ ಎಂಬ ಪಾಕಿಸ್ತಾನದ ಪ್ರಜೆಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಇದನ್ನೂ ಓದಿ: ನಮ್ಮ ಪಕ್ಷದಲ್ಲೂ ಷಡ್ಯಂತ್ರಗಳು ನಡೆಯುತ್ತವೆ ಎಂಬುದನ್ನು ತಳ್ಳಿ ಹಾಕುವಂತಿಲ್ಲ: ಕೆಎನ್ ರಾಜಣ್ಣ

    ಪಾಕಿಸ್ತಾನದಲ್ಲಿ ಭಿನ್ನಾಭಿಪ್ರಾಯ ಉಂಟಾದ ಪರಿಣಾಮ ಪಾಕಿಸ್ತಾನ ಬಿಟ್ಟು, ಬಾಂಗ್ಲಾದೇಶಕ್ಕೆ (Bangladesh) ಪರಾರಿಯಾಗಿ ಢಾಕಾದ ಯುವತಿಯನ್ನು ವಿವಾಹವಾಗಿದ್ದನು. ಬಳಿಕ ಅಲ್ಲಿಯೂ ಇರಲು ಸಾಧ್ಯವಾಗದೇ 2014ರಲ್ಲಿ ಪತ್ನಿ ಜೊತೆ ಅಕ್ರಮವಾಗಿ ದೆಹಲಿಗೆ ಬಂದಿದ್ದ. ಸ್ಥಳೀಯ ವ್ಯಕ್ತಿಯ ನೆರವಿನಿಂದ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್ ಮಾಡಿಸಿಕೊಂಡಿದ್ದ. ಅಲ್ಲಿಂದ ನೇಪಾಳಕ್ಕೆ ತೆರಳಿದ್ದ. ಅಲ್ಲಿ ಮೆಹದಿ ಎಂಬ ಫೌಂಡೇಷನ್ ಸೇರಿಕೊಂಡಿದ್ದ. ಅಲ್ಲಿ ಎಮ್.ಎಫ್.ಐ ಧರ್ಮಗುರುಗಳ ಜೊತೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ. ಆ ವೇಳೆ ನೇಪಾಳದಿಂದ ಬೆಂಗಳೂರಿಗೆ ಹೋಗುವಂತೆ ಯೂನಸ್ ಅಲ್ಗೋರ್ ಎಂಬ ಧರ್ಮಗುರುಗಳು ಸೂಚನೆ ನೀಡಿದ್ದ.

    ಸೂಚನೆಯಂತೆ ರಶೀದ್ ಅಲಿ ಸಿದ್ಧಿಕಿ 2018ರಲ್ಲಿ ಬೆಂಗಳೂರಿಗೆ ಬಂದಿದ್ದ ಬಳಿಕ ವಾಸಿಮ್ ಮತ್ತು ಅಲ್ತಾಫ್ ಪರಿಚಯವಾಗಿತ್ತು. ಅಲ್ತಾಫ್ ಫಂಡ್ ಸೇರಿ ಎಲ್ಲಾ ವ್ಯವಸ್ಥೆಯನ್ನು ನೋಡಿಕೊಂಡಿದ್ದನು. ಅದಾದ ಬಳಿಕ ವಾಸಿಮ್ ಮತ್ತು ಅಲ್ತಾಫ್ ಇಬ್ಬರು ರಶೀದ್ ಅಲಿ ಸಿದ್ಧಿಕಿ ಜೊತೆ ಸೇರಿ ಸಂಘಟನೆಗೆ ಸೇರಿಕೊಂಡಿದ್ದರು. ಇವರ ಸಹಕಾರ ಪಡೆದು ಜಿಗಣಿಗೆ ಶಿಫ್ಟ್ ಆಗಿದ್ದ. ಜಿಗಣಿಯಲ್ಲಿ ಮನೆಮಾಡಿಕೊಂಡು ಬಿರಿಯಾನಿ ತಯಾರು ಮಾಡಿ ಆನ್ಲೈನ್ ಪುಡ್ ಡೆಲಿವರಿ ವ್ಯಾಪಾರ ಮಾಡುತ್ತಿದ್ದ.ಇದನ್ನೂ ಓದಿ: Kolara | ತಾಂತ್ರಿಕ ದೋಷದಿಂದ ತುರ್ತು ಭೂಸ್ಪರ್ಶ ಮಾಡಿದ್ದ ವಾಯುಪಡೆ ಹೆಲಿಕಾಪ್ಟರ್ ಸುರಕ್ಷಿತವಾಗಿ ಟೇಕಾಫ್

    ಜಿಗಣಿಯಲ್ಲಿ ಅಪಾರ್ಟ್ಮೆಂಟ್‌ನಲ್ಲಿ (Jigani Apartment) ಬಾಂಗ್ಲಾ ಪತ್ನಿ ಸೇರಿದಂತೆ ಇಬ್ಬರು ಮಕ್ಕಳ ಜೊತೆ ಕುಟುಂಬ ಸಮೇತ ವಾಸವಿದ್ದ. ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಖಚಿತ ಮಾಹಿತಿ ಸಂಗ್ರಹಿಸಿ, ರಾತ್ರಿ ಕಾರ್ಯಾಚರಣೆ ನಡೆಸಿ 4 ಆರೋಪಿಗಳನ್ನು ಬಂಧಿಸಿದ್ದಾರೆ. ಜೊತೆಗೆ ಪೊಲೀಸರು ಆತನ ಮನೆಯಲ್ಲಿದ್ದ ಲ್ಯಾಪ್ ಟಾಪ್, ಟಿವಿ, ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಲ್ಯಾಪ್‌ಟಾಪ್‌ನಲ್ಲಿನ ಡೇಟಾ ಪರಿಶೀಲನೆ ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಉಳಿದಂತೆ ಮನೆಯಲ್ಲಿ ಇನ್ನುಳಿದ ವಸ್ತುಗಳನ್ನು ಪರಿಶೀಲಿಸುತ್ತಿದ್ದಾರೆ.

    ಶಂಕರ್ ಶರ್ಮಾ ಹೆಸರಿನಲ್ಲಿ ರಶೀದ್ ಅಲಿ ಸಿದ್ಧಿಕಿಯ ದಾಖಲೆಗಳು ಪತ್ತೆಯಾಗಿದ್ದು, ಭಾರತೀಯ ಪಾಸ್‌ಪೋರ್ಟ್, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಪಾಕ್ ಪ್ರಜೆ ಅರೆಸ್ಟ್ ಹಿನ್ನೆಲೆ ಬೆಂಗಳೂರು ಕೇಂದ್ರ ವಲಯ ಐಜಿಪಿ ಲಾಬೂರಾಮ್ (IGP Labhu Ram) ಹಾಗೂ ಬೆಂಗಳೂರು ಗ್ರಾಮಾಂತರ ಅಡಿಷನಲ್ ಎಸ್ಪಿ ಕೆಎಸ್ ನಾಗರಾಜ್ ಭೇಟಿ ನೀಡಿದ್ದಾರೆ. ಎಸ್ಪಿ ನಾಗರಾಜ್ ಜಿಗಣಿ ಇನ್ಸ್ಪೆಕ್ಟರ್ ಮಂಜುನಾಥ್ ಬಳಿ ಮಾಹಿತಿ ಸಂಗ್ರಹಿಸುತ್ತಿದ್ದು, ಡಿವೈಎಸ್ಪಿ ಮೋಹನ್ ಕುಮಾರ್ ಠಾಣೆಯಲ್ಲಿ ಮೊಕ್ಕಾಂ ಹೂಡಿದ್ದಾರೆ.ಇದನ್ನೂ ಓದಿ: ಕುಂಟು ನೆಪ ಹೇಳಿ ಕರ್ನಾಟಕ ಐಪಿಎಸ್ ಕೇಡರ್‌ನಲ್ಲಿ ವಿಲೀನ: ಚಂದ್ರಶೇಖರ್‌ ಅಮಾನತಿಗೆ ಜೆಡಿಎಸ್‌ ದೂರು

    ಸದ್ಯ ಈ ಪ್ರಕರಣ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಡೆಂಗ್ಯೂ ಬಳಿಕ ಬೆಂಗಳೂರಲ್ಲಿ ಝಿಕಾ ವೈರಸ್ ಕಾಟ – ಜಿಗಣಿಯಲ್ಲಿ 5 ಪ್ರಕರಣ ಪತ್ತೆ

    ಡೆಂಗ್ಯೂ ಬಳಿಕ ಬೆಂಗಳೂರಲ್ಲಿ ಝಿಕಾ ವೈರಸ್ ಕಾಟ – ಜಿಗಣಿಯಲ್ಲಿ 5 ಪ್ರಕರಣ ಪತ್ತೆ

    – ಸೋಂಕಿತರಿದ್ದ ಪ್ರದೇಶವನ್ನು ಕಂಟೋನ್ಮೆಂಟ್ ಝೋನ್ ಎಂದು ಪರಿಗಣನೆ

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಡೆಂಗ್ಯೂ ಬೆನ್ನಲ್ಲೇ ಝಿಕಾ ವೈರಸ್ (Zika Virus) ಕೂಡ ನಗರಕ್ಕೆ ಕಾಲಿಟ್ಟಿದೆ. ಆನೇಕಲ್ ತಾಲೂಕು, ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಜಿಗಣಿಯಲ್ಲಿ (Jigani) ಎರಡು ವಾರಗಳಲ್ಲಿ ಒಟ್ಟು 5 ಝಿಕಾ ಪ್ರಕರಣಗಳು ಪತ್ತೆಯಾಗಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ.

    ಸೋಂಕು ಕಾಣಿಸಿಕೊಂಡ  ಹಿನ್ನೆಲೆ ರೋಗಿಗಳು ಹಾಗೂ ಕುಟುಂಬಸ್ಥರ ರಕ್ತದ ಸ್ಯಾಂಪಲ್‌ಗಳನ್ನು ಪಡದುಕೊಂಡು ಆರೋಗ್ಯ ಇಲಾಖೆ ಸೋಂಕಿತರ ಮೇಲೆ ನಿಗಾ ವಹಿಸಿದೆ. ರಾಜ್ಯದಲ್ಲಿ ಈವರೆಗೆ ಒಟ್ಟು 7 ಝಿಕಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ಸೋಂಕಿತರು ಪತ್ತೆಯಾದ ಪ್ರದೇಶಗಳನ್ನು ಕಂಟೋನ್ಮೆಂಟ್ ಝೋನ್ ಎಂದು ಪರಿಗಣಿಸಿ ಆರೋಗ್ಯ ಇಲಾಖೆ (Health Department) ನಿಗಾ ವಹಿಸುತ್ತಿದೆ. ಇದನ್ನೂ ಓದಿ: ಪಾಕ್‌, ಬಾಂಗ್ಲಾ, ಅಫ್ಘಾನಿಸ್ತಾನದ 188 ಹಿಂದೂ ನಿರಾಶ್ರಿತರಿಗೆ ಪೌರತ್ವ ಪ್ರಮಾಣಪತ್ರ ನೀಡಿದ ಅಮಿತ್‌ ಶಾ

    ಈಡಿಸ್ ಸೊಳ್ಳೆಯಿಂದ ಝಿಕಾ ವೈರಸ್ ಹರಡುತ್ತದೆ. ಅತಿಯಾದ ತಲೆನೋವು, ಕೆಂಪಾದ ಕಣ್ಣು, ಜ್ವರ, ಮೈಯಲ್ಲಿ ಗುಳ್ಳೆ ದದ್ದುಗಳು ಕಾಣಿಸಿಕೊಳ್ಳುವುದು ಝಿಕಾ ವೈರಸ್‌ನ ಗುಣಲಕ್ಷಣ. ಇಂತಹ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಸಮೀಪದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಸೂಚಿಸಿದೆ. ಇದನ್ನೂ ಓದಿ: Maharashtra: ಶಾಲೆಯಲ್ಲಿ ಬಿಸ್ಕೆಟ್ ತಿಂದು 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

    ಝಿಕಾ ವೈರಸ್ ದೃಢಪಟ್ಟರೆ, ಕುಟುಂಬದ ಸದಸ್ಯರ ರಕ್ತದ ಮಾದರಿಯನ್ನು ಲ್ಯಾಬ್ ಟೆಸ್ಟ್‌ಗೆ ಒಳಪಡಿಸಬೇಕು. ಮನೆಯ ಸುತ್ತಮುತ್ತಲಿನ ಮೂರು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಜನರನ್ನು ಪರೀಕ್ಷೆಗೊಳಪಡಿಸುವುದು ಕಡ್ಡಾಯ. ಆ ಪ್ರದೇಶದ ಒಂದು ಕಿಲೋ ಮೀಟರ್ ವ್ಯಾಪ್ತಿಯನ್ನು ಕಂಟೋನ್ಮೆಂಟ್ ಝೋನ್ ಎಂದು ಪರಿಗಣಿಸಲಾಗುವುದು. ಝಿಕಾ ವೈರಸ್‌ ನಿಂದ ಸಾರ್ವಜನಿಕರು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ವೈರಸ್ ತಗುಲದಂತೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ. ಇದನ್ನೂ ಓದಿ: ರಾಜ್ಯಪಾಲರಿಂದ ಪ್ರಾಸಿಕ್ಯೂಷನ್ ಅನುಮತಿ; ಸರ್ಕಾರ ಸ್ವಲ್ಪಮಟ್ಟಿಗೆ ಶೇಕ್ ಆಗಿರೋದು ನಿಜ – ಪರಮೇಶ್ವರ್ 

  • ಬೆಂಗಳೂರು ಇತಿಹಾಸದಲ್ಲೇ ಮೊದಲ ಬಾರಿ ಕೆರೆ ಸೀಜ್

    ಬೆಂಗಳೂರು ಇತಿಹಾಸದಲ್ಲೇ ಮೊದಲ ಬಾರಿ ಕೆರೆ ಸೀಜ್

    ಬೆಂಗಳೂರು: ನಗರದ ಇತಿಹಾಸದಲ್ಲೇ ಮೊದಲ ಬಾರಿಗೆ ಕೆರೆಯೊಂದನ್ನು (Lake) ಸೀಜ್ ಮಾಡಲಾಗಿದೆ. ಕೆರೆಯ ಒಳಗೆ ಪ್ರವೇಶಿಸುವ ಮಾರ್ಗಗಳನ್ನು ಜಿಲ್ಲಾಡಳಿತ ಬಂದ್ ಮಾಡಿದೆ.

    ಖಾಸಗಿ ಕಂಪನಿಯೊಂದರಿಂದ ಜಿಗಣಿಯ (Jigani) ಹೆನ್ನಾಗರ ಕೆರೆ (Hennagar Lake) ಒತ್ತುವರಿ ಕಾರ್ಯ ನಡೆಯುತ್ತಿತ್ತು. ಕೆರೆ ಒಳಗಡೆ ಮಣ್ಣು ಹಾಕಿ ಮುಚ್ಚಲು ಯತ್ನಿಸಲಾಗುತ್ತಿತ್ತು. ಹೆನ್ನಾಗರ ಕೆರೆ ಒತ್ತುವರಿ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಆನೇಕಲ್ ತಹಶೀಲ್ದಾರ್ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.

    ದೂರು ನೀಡಿದ ಬಳಿಕ ಕೆರೆ ಒತ್ತುವರಿ ಬಗ್ಗೆ ಅಧಿಕಾರಿಗಳು ಪರಿಶೀಲನೆ ಮಾಡಿ ಖಾಸಗಿ ಕಂಪನಿ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಲಾರಿಗಳಲ್ಲಿ ಮಣ್ಣನ್ನು ಕೊಂಡೊಯ್ದು ಮುಚ್ಚಲು ಯತ್ನಿಸುತ್ತಿದ್ದವರನ್ನು ತಡೆಯಲಾಗಿದೆ. ಈಗ ಒಳಗಡೆ ಯಾವುದೇ ವಾಹನ ಪ್ರವೇಶ ಮಾಡದಂತೆ ಕೆರೆಯ ಪ್ರವೇಶ ದ್ವಾರಗಳನ್ನು ಬ್ಯಾರಿಕೇಡ್ ಹಾಗೂ ಕಬ್ಬಿಣದ ಸರಳುಗಳನ್ನು ಹಾಕಿ ಬಂದ್ ಮಾಡಲಾಗಿದೆ. ಇದನ್ನೂ ಓದಿ: ಕೆರೆಯ ಮಣ್ಣು ಅಕ್ರಮ ಸಾಗಾಟ – ಗ್ರಾಮಸ್ಥರಿಂದ 50ಕ್ಕೂ ಹೆಚ್ಚು ಲಾರಿಗಳನ್ನು ತಡೆದು ಆಕ್ರೋಶ

    ತಹಶೀಲ್ದಾರ್ ದೂರಿನ ಅನ್ವಯ ಜಿಗಣಿ ಪೊಲೀಸ್ ಠಾಣೆ ಪೊಲೀಸರು ಕೆರೆಯ ಪ್ರವೇಶದ್ವಾರಗಳನ್ನು ಮುಚ್ಚಿದ್ದಾರೆ. ಒತ್ತುವರಿ ಮಾಡುತ್ತಿದ್ದ ವೀಡಿಯೋ ಆಧರಿಸಿ ತಹಶೀಲ್ದಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಇದೀಗ ಖಾಸಗಿ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಇದನ್ನೂ ಓದಿ: ಬಿಟ್ ಕಾಯಿನ್ ಪ್ರಕರಣ – ತನಿಖೆಗೆ ಹಾಜರಾಗದೇ ಶ್ರೀಕಿ ಕಳ್ಳಾಟ

  • ತಂದೆ ಪ್ರತಿಷ್ಠಿತ ಕಂಪನಿ ಎಂಡಿ.. ದೊಡ್ಡ ಕುಟುಂಬದವರಾದ್ರೂ ಸೇನೆ ಸೇರಿದ್ರು ಪ್ರಾಂಜಲ್: ತರಬೇತುದಾರರ ಮನದಾಳ

    ತಂದೆ ಪ್ರತಿಷ್ಠಿತ ಕಂಪನಿ ಎಂಡಿ.. ದೊಡ್ಡ ಕುಟುಂಬದವರಾದ್ರೂ ಸೇನೆ ಸೇರಿದ್ರು ಪ್ರಾಂಜಲ್: ತರಬೇತುದಾರರ ಮನದಾಳ

    ಬೆಂಗಳೂರು: ಜಮ್ಮು ಕಾಶ್ಮೀರದಲ್ಲಿ (Jammu Kashmir) ಉಗ್ರರ ಗುಂಡಿನ ದಾಳಿಗೆ ಹುತಾತ್ಮರಾದ ಕ್ಯಾಪ್ಟನ್ ಪ್ರಾಂಜಲ್ (Captain Pranjal) ದೊಡ್ಡ ಕುಟುಂಬದಿಂದ ಬಂದು ಸೈನ್ಯ ಸೇರಿದ್ದರು ಎಂದು ಪ್ರಾಂಜಲ್ ಅವರ ತರಬೇತುದಾರ ಹಾಗೂ ಮಾರ್ಗದರ್ಶಕರಾದ ನಾಯಕ್ ಭಾಸ್ಕರ್ ರೈ (Nayak Bhaskar Rai) ತಿಳಿಸಿದ್ದಾರೆ.

    ಮೃತ ಪ್ರಾಂಜಲ್ ಅಂತಿಮ ದರ್ಶನದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಾಂಜಲ್ ಅವರಿಗೆ ಹುಟ್ಟುವಾಗಲೇ ಸೈನಿಕರ ರಕ್ತ ಇತ್ತೇನೋ. ಅಂತಹ ದೇಶಭಕ್ತಿ ಹಾಗೂ ಸೈನ್ಯಕ್ಕೆ ಸೇರುವ ಒಂದು ಅಚಲ ನಿರ್ಧಾರವನ್ನು ಅವರು ಇಟ್ಟುಕೊಂಡಿದ್ದರು. ಪ್ರಾಂಜಲ್ ತಮ್ಮ ಪಿಯುಸಿ ಶಿಕ್ಷಣ ಮುಗಿಸಿದ ಬಳಿಕ ನನಗೆ ಅವರ ಸಂಪರ್ಕವಾಯಿತು. ಅದರ ಬಳಿಕ ಅವರು ಎಸ್‌ಎಸ್‌ಬಿಗೆ ತಯಾರಿ ನಡೆಸಿ, ಅದರಲ್ಲಿ ಪಾಸಾಗುತ್ತಾರೆ. ಈ ಸಂದರ್ಭದಲ್ಲಿ ಸಾಕಷ್ಟು ಮಾಹಿತಿಗಳನ್ನು ಪಡೆದುಕೊಂಡು ಪರೀಕ್ಷಾ ತಯಾರಿಯನ್ನು ನಡೆಸುತ್ತಿದ್ದರು. ದೈಹಿಕ ಪರೀಕ್ಷೆ ಹಾಗೂ ಸುಧಾರಣೆಗೆ ನನ್ನ ಬಳಿ ಬರುತ್ತಿದ್ದರು. ಆ ಬಗ್ಗೆ ನಾನು ಅನೇಕ ಟಿಪ್ಸ್‌ಗಳನ್ನು ಕೊಡುತ್ತಿದ್ದೆ ಎಂದು ನೆನಪಿಸಿಕೊಂಡರು. ಇದನ್ನೂ ಓದಿ: 41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಮತ್ತೆ ಸ್ಥಗಿತ

    ಪ್ರಾಂಜಲ್ ಒಬ್ಬ ಒಳ್ಳೆಯ ಕ್ರೀಡಾಪಟು ಆಗಿದ್ದರಿಂದ ಒಳ್ಳೆ ಮೈಕಟ್ಟು ಹೊಂದಿದ್ದರು. ಸೇನೆಗೆ ಸೇರುವಂತಹ ಎಲ್ಲಾ ಅರ್ಹತೆಗಳು ಅವರಲ್ಲಿತ್ತು. ಅವರಂತಹ ದೊಡ್ಡ ಕುಟುಂಬದಿಂದ ಬಂದವರು ಸೇನೆಗೆ ಸೇರುವುದು ಬಹಳ ಕಡಿಮೆ. ಯಾಕೆಂದರೆ ಅವರ ತಂದೆ ಒಂದು ಪ್ರತಿಷ್ಠಿತ ಕಂಪನಿಯ ಎಂಡಿಯಾಗಿದ್ದರು. ಅವರ ಮಕ್ಕಳಿಗೆ ವಿದೇಶದಲ್ಲಿ ಶಿಕ್ಷಣ ಕೊಡಿಸಬಹುದಾಗಿತ್ತು. ಅದೇ ರೀತಿ ಬೇರೆ ಬೇರೆ ಕೆಲಸಗಳಿಗೂ ಹೋಗಬಹುದಿತ್ತು. ಆದರೂ ಅವರು ತಮ್ಮ ಮಗನನ್ನು ಸೇನೆಗೆ ಕಳುಹಿಸಿದರು. ಪ್ರಾಂಜಲ್ ಅವರು ಕೂಡ ಅದನ್ನೇ ಒಪ್ಪಿಕೊಂಡು ದೇಶಕ್ಕೋಸ್ಕರ ಸೇವೆ ಮಾಡಿದ್ದು, ಇಂದು ವೀರಮರಣವನ್ನಪ್ಪಿದ್ದಾರೆ ಎಂದು ಸಂತಾಪ ಸೂಚಿಸಿದರು. ಇದನ್ನೂ ಓದಿ: ಸಿದ್ದಗಂಗಾ ಶ್ರೀಗಳ ಮುಂದೆ ಚುನಾವಣಾ ಸೋಲಿನ ನೋವು ತೋಡಿಕೊಂಡ ವಿ.ಸೋಮಣ್ಣ

    ಪ್ರಾಂಜಲ್ ಕಮಿಷನ್ಡ್ ಆಗಿ ವಾಪಸ್ ಬಂದು ನನ್ನನ್ನು ಭೇಟಿಯಾದ ಸಂದರ್ಭದಲ್ಲಿ ನಾನು ಅವರಿಗೆ ಒಂದು ಮಾತು ಹೇಳಿದ್ದೆ. ನಿಮ್ಮ ತಂದೆ ಇಷ್ಟು ದೊಡ್ಡ ಕಂಪನಿಯಲ್ಲಿ ಎಂಡಿ ಆಗಿದ್ದಾರೆ. ನೀವೊಬ್ಬ ಜನರಲ್ ಆಗುತ್ತೀರಿ ಎಂದು ಹೇಳಿದ್ದೆ. ದೇವರ ಇಚ್ಛೆ ಇಂದು ಈ ಸ್ಥಿತಿಯಲ್ಲಿ ನಾವು ಅವರನ್ನು ಕಾಣಬೇಕಾಗಿದೆ. ಅವರ ಕಲಿಕೆಯ ವಿಷಯಕ್ಕೆ ಸಂಬಂಧಪಟ್ಟಂತೆ ಹೇಳುವಂತಹ ಜ್ಞಾನ ನನ್ನಲ್ಲಿ ಇರಲಿಲ್ಲ. ಈ ಬಗ್ಗೆ ಅವರೇ ಪೂರಕ ಮಾಹಿತಿಗಳನ್ನು ಪಡೆದುಕೊಂಡು ತಯಾರಿ ನಡೆಸಿದ್ದರು ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: Kambala: ಇಂದಿನಿಂದ 2 ದಿನ ಬೆಂಗ್ಳೂರಿನಲ್ಲಿ ಕಂಬಳದ ರಂಗು – ಸಾರ್ವಜನಿಕರಿಗೆ ಪ್ರವೇಶ ಉಚಿತ