Tag: jiah khan

  • ನಟಿ ಜಿಯಾ ಖಾನ್ ಆತ್ಮಹತ್ಯೆ ಪ್ರಕರಣ: ಸತ್ಯಕ್ಕೆ ಜಯ ಎಂದ ಸೂರಜ್ ಪಂಚೋಲಿ

    ನಟಿ ಜಿಯಾ ಖಾನ್ ಆತ್ಮಹತ್ಯೆ ಪ್ರಕರಣ: ಸತ್ಯಕ್ಕೆ ಜಯ ಎಂದ ಸೂರಜ್ ಪಂಚೋಲಿ

    ಬಾಲಿವುಡ್ ನಟಿ ಜಿಯಾ ಖಾನ್ (Jiah Khan) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆಯಷ್ಟೇ ತೀರ್ಪು ಬಂದಿದ್ದು, ಈ ಪ್ರಕರಣದಿಂದ ಜಿಯಾ ಬಾಯ್ ಫ್ರೆಂಡ್ ಸೂರಜ್ ಪಂಚೋಲಿಗೆ (Suraj Pancholi) ದೊಡ್ಡ ರಿಲೀಫ್ ಸಿಕ್ಕಿದೆ. ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಸೂರಜ್ ಪಂಚೋಲಿಯನ್ನು ನಿರ್ದೋಷಿ ಎಂದು ಸಿಬಿಐ ವಿಶೇಷ ಕೋರ್ಟ್ ತೀರ್ಪು ನೀಡಿದೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಸೂರಜ್, ‘ಸತ್ಯಕ್ಕೆ ಜಯ’ ಎಂದಿದ್ದಾರೆ. ಆದರೆ, ಈ ತೀರ್ಪಿನ ವಿರುದ್ಧ ಮತ್ತೆ ಕೋರ್ಟ್ ಮೆಟ್ಟಿಲು ಏರುವುದಾಗಿ ಜಿಯಾ ಖಾನ್ ತಾಯಿ ರಬಿಯಾ ತಿಳಿಸಿದ್ದಾರೆ.

    ಏನಿದು ಜಿಯಾ ಖಾನ್ ಸಾವಿನ ಪ್ರಕರಣ?

    ಬಾಲಿವುಡ್ ನಟಿ ಜಿಯಾ ಖಾನ್ ಸಾವಿನ ಪ್ರಕರಣ ಬಾಲಿವುಡ್ ಸಿನಿಮಾ ರಂಗದಲ್ಲಿ ಭಾರೀ ಆಘಾತ ಮೂಡಿಸಿತ್ತು. ಚಿತ್ರರಂಗದಲ್ಲಿ ಆಗ ತಾನೆ ಮಿಂಚುತ್ತಿದ್ದ ಜಿಯಾ ಏಕಾಏಕಿ 2013ರ ಜೂನ್ 3ರಂದು ಮುಂಬೈನ ಜುಹೂ ಅಪಾರ್ಟ್‍ ಮೆಂಟ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿತ್ತು. ಈ ಸಾವಿಗೆ ಅವರ ಬಾಯ್ ಫ್ರೆಂಡ್ ಸೂರಜ್ ಪಾಂಚೋಲಿ ಕಾರಣ ಎಂದು ಹೇಳಲಾಗಿತ್ತು.

    ಜಿಯಾ ಖಾನ್ ಬರೆದ ಡೆತ್ ನೋಟ್ ಆಧರಿಸಿ ಪ್ರಿಯಕರ ಸೂರಜ್ ಪಾಂಚೋಲಿ ಮೇಲೆ ಕೇಸ್ ದಾಖಲಿಸಿ ಜೈಲಿಗೆ ಕಳುಹಿಸಲಾಗಿತ್ತು. ಆನಂತರ ಜುಲೈನಲ್ಲಿ ಸೂರಜ್ ಜಾಮೀನು ಪಡೆದರು. ಜಿಯಾ ಖಾನ್ ಅವರ ತಾಯಿ ರಬಿಯಾ ನಂತರ ವಿಶೇಷ ಮನವಿ ಸಲ್ಲಿಸಿದ ಮೇರೆಗೆ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲಾಗಿತ್ತು. ಇದನ್ನೂ ಓದಿ:ಸಂಪತ್ ಪತ್ನಿ 5 ತಿಂಗಳ ಗರ್ಭಿಣಿ- ಸಹನಟನ ನೆನೆದು ಕಣ್ಣೀರಿಟ್ಟ ವೈಷ್ಣವಿ

    ಜಿಯಾ ಖಾನ್ ತಾಯಿ ರಬಿಯಾ ತಮ್ಮ ವಿರುದ್ಧ ಮಾನಹಾನಿ ಮಾಡುವಂತಹ ಕೆಲಸಗಳಿಗೆ ಕೈ ಹಾಕಿದ್ದಾರೆ ಎಂದು ಸೂರಜ್ ಪಾಂಚೋಲಿ, ಜಿಯಾ ತಾಯಿಯ ವಿರುದ್ಧ 100 ಕೋಟಿ ಮಾನನಷ್ಟ ಮೊಕದ್ದಮೆ ಕೂಡ ದಾಖಲಿಸಿದ್ದರು. ರಬಿಯಾ ನೀಡಿದ ದೂರಿನ ಮೇಲೆ ಸಿಬಿಐ ಅಧಿಕಾರಿಗಳು ಸೂರಜ್ ಮನೆಯ ಮೇಲೆ ದಾಳಿ ಮಾಡಿದರು. ನಂತರ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಆರೋಪದಲ್ಲಿ ಮತ್ತೆ ಸಪ್ಲಿಮೆಂಟರಿ ಚಾರ್ಜ್ ಶೀಟ್ ದಾಖಲಿಸಿದ್ದರು.

    ತನ್ನ ಮಗಳಿಗೆ ನ್ಯಾಯ ಸಿಗಬೇಕು ಎಂದು ಹಲವಾರು ಪ್ರಯತ್ನಗಳನ್ನು ಮಾಡಿದ್ದರು ರುಬಿಯಾ. ವಿಶೇಷ ತನಿಖಾ ದಳ ರಚಿಸುವಂತೆ ಕೋರ್ಟಿಗೆ ಮೊರೆ ಹೋದರು. ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದರು. ಕೇಸ್ ವಿಚಾರಣೆ ಬೇಗ ಮುಗಿಸುವಂತೆ ಮುಂಬೈ ಕೋರ್ಟಿಗೂ ಮನವಿ ಮಾಡಿಕೊಂಡಿದ್ದರು.

    ಸೂರಜ್ ಪಾಂಚೋಲಿ ಕೂಡ ಈ ಪ್ರಕರಣದಲ್ಲಿ ಅಷ್ಟೇ ಹೋರಾಟ ಮಾಡಿದ್ದರು. ಆ ಸಾವಿಗೂ ನನಗೂ ಸಂಬಂಧವಿಲ್ಲ ಎಂದು ವಾದಿಸುತ್ತಲೇ ಬಂದರು. ಸುದೀರ್ಘ ಹತ್ತು ವರ್ಷಗಳ ನಂತರ 2023 ಏಪ್ರಿಲ್ 20 ರಂದು ಅಂತಿವ ವಾದ- ಪ್ರತಿವಾದ ಆಲಿಸಿದ್ದ ವಿಶೇಷ ನ್ಯಾಯಮೂರ್ತಿಗಳಾದ ಎ.ಎಸ್. ಸಯ್ಯದ್ ಅವರು ತೀರ್ಪು ಕಾಯ್ದಿರಿಸಿದ್ದರು. ಇಂದು ತೀರ್ಪು ಪ್ರಕಟವಾಗಿದೆ. ಸೂರಜ್ ಪಾಂಚೋಲಿ ಪರವಾಗಿ ಮಾನ್ಯ ನ್ಯಾಯಾಲಯ ತೀರ್ಪು ನೀಡಿದೆ.

  • ಜಿಯಾ ಖಾನ್ ಸಾವು: ಎಫ್‌ಬಿಐ ಸಹಕಾರದಿಂದ ತನಿಖೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ

    ಜಿಯಾ ಖಾನ್ ಸಾವು: ಎಫ್‌ಬಿಐ ಸಹಕಾರದಿಂದ ತನಿಖೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ

    ಬಾಲಿವುಡ್ ನಟಿ ಜಿಯಾ ಖಾನ್ (Jiah Khan) ಅಗಲಿ ಇಂದಿಗೆ 9 ವರ್ಷಗಳಾಗಿದೆ. ಇಂದಿಗೂ ಅವರ ಸಾವಿಗೆ ಅಸಲಿ ಕಾರಣ ಏನು ಎಂಬುದು ಅಷ್ಟೇ ನಿಗೂಢವಾಗಿ ಉಳಿದಿದೆ. ಮಗಳು ಜಿಯಾ ಖಾನ್ ಪ್ರಕರಣ ಮರುತನಿಖೆ ನಡೆಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ವಜಾಗೊಳಿಸಿದೆ.

    ಸಾಕಷ್ಟು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿದ ನಟಿ ಜಿಯಾ, ಜೀವನದಲ್ಲಿ ಸಾಕಷ್ಟು ಏಳು ಬೀಳುಗಳನ್ನ ಕಂಡಿದ್ದರು. 2013ರಲ್ಲಿ ಜೂನ್ 3ರಂದು ಮುಂಬೈನ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಜಿಯಾ ಮತ್ತು ಸೂರಜ್ ಪಾಂಚೋಲಿ (Sooraj Pancholi) ಪರಸ್ಪರ ಪ್ರೀತಿಸುತ್ತಿದ್ದ ಕಾರಣ ರುಬಿಯಾ ಅವರಿಗೆ ಜಿಯಾ ಬಾಯ್‌ಫ್ರೆಂಡ್ ಸೂರಜ್ ಮೇಲೆ ಅನುಮಾನವಿತ್ತು. ಗಂಭೀರವಾಗಿ ಆರೋಪ ಕೂಡ ಮಾಡಿದ್ದರು. ಆದರೆ ಸಿಬಿಐ ಜಿಯಾ ಕೇಸ್ ಅನ್ನು ಆತ್ಮಹತ್ಯೆ ಎಂದು ಪರಿಗಣಿಸಿ ಚಾರ್ಜ್‌ಶೀಟ್ ಸಲ್ಲಿಸಿತ್ತು. ಇದನ್ನೂ ಓದಿ:ಪ್ರಶಾಂತ್ ರಾಜ್ ನಿರ್ದೇಶನದ ತಮಿಳಿನ ‘ಕಿಕ್’ ಸಿನಿಮಾದಲ್ಲಿ ಬ್ರಹ್ಮಾನಂದಂ ನಟನೆ

    ಜಿಯಾ ಖಾನ್ ಆತ್ಮಹತ್ಯೆ ಮಾಡಿಕೊಂಡಿಲ್ಲ. ಇದು ಕೊಲೆ ಎಂದು ರುಬಿಯಾ ಖಾನ್ ಕೋರ್ಟ್ ಮೆಟ್ಟಿಲೇರಿದ್ದರು. ಜಿಯಾ ಸಾವಾಗಿ 9 ವರ್ಷಗಳು ಕಳೆದರೂ ಸೂಕ್ತ ತನಿಖೆ ನಡೆದಿಲ್ಲ. ಸಿಬಿಐ ತನಿಖೆಯಲ್ಲಿ ದೋಷಗಳಿವೆ. ಹೀಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಿ ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್(ಎಫ್‌ಬಿಐ) ಸಹಕಾರದಿಂದ ತನಿಖೆ ನಡೆಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು.

    ಈ ಅರ್ಜಿಯ ವಿಚಾರಣೆ ನಡಸಿದ ನ್ಯಾ. ಎ ಎಸ್ ಗಡ್ಕರಿ ಹಾಗೂ ಎಂ ಎನ್ ಜಾಧವ್ ಅವರಿದ್ದ ದ್ವಿಸದಸ್ಯ ಪೀಠ, ನಮಗೆ ಸಿಬಿಐ ತನಿಖೆ ಮೇಲೆ ಸಂಪೂರ್ಣ ನಂಬಿಕೆ ಇದೆ. ಈ ರೀತಿಯ ಅರ್ಜಿಯನ್ನು ಸಲ್ಲಿಸುವ ಮೂಲಕ ರುಬಿಯಾ ಅವರು ಪ್ರಕರಣವನ್ನು ಮತ್ತಷ್ಟು ದುರ್ಬಲ ಮಾಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟು ಅರ್ಜಿಯನ್ನು ವಜಾಗೊಳಿಸಿದೆ.

    Live Tv
    [brid partner=56869869 player=32851 video=960834 autoplay=true]