Tag: Jhunjhunu

  • 16.8 ಕೆಜಿ ತೂಕದ ಗೆಡ್ಡೆಯನ್ನ ಹೊರತೆಗೆದ ವೈದ್ಯರು

    16.8 ಕೆಜಿ ತೂಕದ ಗೆಡ್ಡೆಯನ್ನ ಹೊರತೆಗೆದ ವೈದ್ಯರು

    ಜೈಪುರ: ಸುಮಾರು ನಾಲ್ಕು ಗಂಟೆಗಳ ಕಾಲ ನಡೆದ ಮ್ಯಾರಥಾನ್ ಶಸ್ತ್ರಚಿಕಿತ್ಸೆಯಲ್ಲಿ 16.8 ಕೆಜಿ ತೂಕದ ಗೆಡ್ಡೆಯನ್ನು ವೈದ್ಯರ ತಂಡ ಹೊರತೆಗೆದಿರುವ ಘಟನೆ ಜೈಪುರದಲ್ಲಿ ನಡೆದಿದೆ.

    ಜುಂಜುನು ಜಿಲ್ಲೆಯ ನಿವಾಸಿಯಾಗಿರುವ 55 ವರ್ಷದ ಮಹಿಳೆ ಕಳೆದ ಮೂರು ವರ್ಷಗಳಿಂದ ಅಂಡಾಶಯದ ಗೆಡ್ಡೆಯಿಂದ ಬಳಲುತ್ತಿದ್ದರು. ಈ ಹಿನ್ನೆಲೆ ಗಡ್ಡೆಯು ಕ್ರಮೇಣ ಬೆಳೆಯುತ್ತಲೇ ಇದ್ದು, ಅವರ ದೈನಂದಿನ ಜೀವನದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿತು. ಅಂತಿಮವಾಗಿ ಐದು ತಿಂಗಳ ಹಿಂದೆ ಮಹಿಳೆ ಆಸ್ಪತ್ರೆಗೆ ಭೇಟಿ ನೀಡಿದ್ದು, ಸಮಸ್ಯೆ ಬಗ್ಗೆ ತಿಳಿದುಬಂದಿದೆ. ಇದನ್ನೂ ಓದಿ: ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ಪುಟ ಸೇರಿದ 5 ವರ್ಷದ ಪೋರಿ

    ಮಹಿಳೆಯ ಸಮಸ್ಯೆ ತಿಳಿದ ತಕ್ಷಣ ವೈದ್ಯರ ತಂಡ ಆಕೆಗೆ ಮ್ಯಾರಥಾನ್ ಶಸ್ತ್ರಚಿಕಿತ್ಸೆಯ ಮಾಡಿಸುವಂತೆ ತಿಳಿಸಲಾಗಿದೆ. ನಂತರ ಮಹಿಳೆ ಚಿಕಿತ್ಸೆ ಪಡೆದುಕೊಂಡಿದ್ದು, ಚಿಕಿತ್ಸೆ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಪೊಲೀಸ್ ಬಸ್ ಮೇಲೆ ಭಯೋತ್ಪಾದಕರ ದಾಳಿ – ಮೂವರು ಹುತಾತ್ಮ, 14 ಜನರಿಗೆ ಗಾಯ 

    ಈ ಕುರಿತು ಭಗವಾನ್ ಮಹಾವೀರ್ ಕ್ಯಾನ್ಸರ್ ಆಸ್ಪತ್ರೆಯ ಆಂಕೊಲಾಜಿಸ್ಟ್ ಡಾ.ಪ್ರಶಾಂತ್ ಶರ್ಮಾ ಮಾಧ್ಯಮಗಳಿಗೆ ಮಾಹಿತಿಯನ್ನು ನೀಡಿದ್ದು, ನಾಲ್ಕು ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆಯಲ್ಲಿ ಮಹಿಳೆಯ ಹೊಟ್ಟೆಯಿಂದ 23 ಸೆಂ.ಮೀ ಗಾತ್ರದ ಗಡ್ಡೆಯನ್ನು ಹೊರತೆಗೆಯಲಾಗಿದೆ ಎಂದು ಹೇಳಿದರು.

  • ಹೆಲ್ಮೆಟ್ ಧರಿಸಿಲ್ಲ ಯಾಕೆ ಎಂದು ಪ್ರಶ್ನಿಸಿದ್ದಕ್ಕೆ ಮಹಿಳಾ ಪೇದೆಯನ್ನೇ ಥಳಿಸಿದ ಬೈಕ್ ಸವಾರರು- ವಿಡಿಯೋ

    ಹೆಲ್ಮೆಟ್ ಧರಿಸಿಲ್ಲ ಯಾಕೆ ಎಂದು ಪ್ರಶ್ನಿಸಿದ್ದಕ್ಕೆ ಮಹಿಳಾ ಪೇದೆಯನ್ನೇ ಥಳಿಸಿದ ಬೈಕ್ ಸವಾರರು- ವಿಡಿಯೋ

    ಜೈಪುರ: ಮಹಿಳಾ ಸಂಚಾರಿ ಪೊಲೀಸ್ ಪೇದೆಯನ್ನು ಇಬ್ಬರು ಬೈಕ್ ಸವಾರರು ರಾಜಸ್ಥಾನದ ನಡು ರಸ್ತೆಯಲ್ಲೇ ಥಳಿಸಿದ್ದಾರೆ.

    ಹೆಲ್ಮೆಟ್ ಧರಿಸದ ಕಾರಣ ಸವಾರರನ್ನು ಮಹಿಳಾ ಪೇದೆ ತಡೆದು ನಿಲ್ಲಿಸಿದ್ದಾರೆ. ಇದರಿಂದ ಕೆರಳಿದ ಬೈಕ್ ಸವಾರರು ನಡು ರಸ್ತೆಯಲ್ಲೇ ಸಾರ್ವಜನಿಕರ ಎದುರೇ ಪೇದೆಯನ್ನು ಥಳಿಸಿದ್ದಾರೆ.

    ರಾಜಸ್ಥಾನದ ಜುಂಜುನು ಜಿಲ್ಲೆಯಲ್ಲಿ ನಡೆದಿರುವ ಕೃತ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಯುವಕರು ಮಹಿಳಾ ಪೇದೆಗೆ ಥಳಿಸುತ್ತಿರುವುದನ್ನು ಅಲ್ಲಿದ್ದ ಮಂದಿ ನೋಡುತ್ತಿದ್ದರೆ ವಿನಾಃ ಯಾರೂ ಕೂಡ ಪೇದೆಯ ರಕ್ಷಣೆಗೆ ಬರಲಿಲ್ಲ.

    ಜುಂಜುನು ನಗರದ ಜನನಿಬಿಡ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಮಹಿಳಾ ಪೇದೆಯ ಹೆಸರನ್ನು ಬಹಿರಂಗ ಪಡಿಸಿಲ್ಲ. ದೂರು ದಾಖಲಾಗಿದ್ದು ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಆರಂಭಗೊಂಡಿದ್ದು, ಥಳಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಗಸ್ತಿನಲ್ಲಿರುವ ಮಹಿಳಾ ತಂಡಗಳ ಗಳ ಜೊತೆ ಬೈಕ್, ಜಿಪ್ಸಿ ವ್ಯಾನ್ ಇರುತ್ತದೆ. ತಂಡವನ್ನು ನಡೆಸಲಿಕ್ಕೆ ಮಹಿಳಾ ಪೊಲೀಸ್ ಅಧಿಕಾರಿಯನ್ನು ನಿಯೋಜಿಸಲಾಗಿರುತ್ತದೆ. ನಗರದ ಎಲ್ಲಾ ಭಾಗಗಳಲ್ಲೂ ಎಲ್ಲಾ ಸಮಯದಲ್ಲೂ ಸಂಚರಿಸುವ ಮಹಿಳೆಯರ ಸುರಕ್ಷತೆಗೆ ಹೆಚ್ಚು ಮಹಿಳಾ ಅಧಿಕಾರಿಗಳನ್ನು ಗಸ್ತಿನಲ್ಲಿ ನಿಯೋಜಿಸಬೇಕು. ಇದರಿಂದಾಗಿ ಮಹಿಳೆಯರಲ್ಲಿ ಭರವಸೆ ಮೂಡುತ್ತದೆ ಎಂದು ಪೊಲೀಸ್ ಉಪ ಆಯುಕ್ತರು ತಿಳಿಸಿದ್ದಾರೆ.